ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ನೆಟ್‌ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ತಂಡದ ನಾಯಕ ಗಣೇಶ್ ಆರ್., ಸದ್ಯಸರಾದ ನಿರೂಪ, ರೋಹಿತ್, ಯಶಸ್, ದಿಗಂತ, ಸುಬ್ರಮಣ್ಯ, ಸಚಿನ್, ಕಾರ್ತಿಕ ಈ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ ವಿಜೇತರನ್ನು ಅಭಿನಂದಿಸಿ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ನೆಟ್ ಬಾಲ್ ನಲ್ಲಿ ಪಾಲ್ಗೊಂಡು ವಿಜಯ ಸಾಧಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಪಠ್ಯದ ಜೊತೆಗೆ ಕ್ರೀಡೆಯಲ್ಲೂ ಪ್ರಗತಿ ಸಾಧಿಸಿರುವುದು ನಿಜಕ್ಕೂ ಸಂತಸ ತಂದಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢತೆಯಿಂದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿ ಕ್ಲಬ್ ಬೈಂದೂರು, ರೋಟರ್ಯಕ್ಟ್ ಕ್ಲಬ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು, ಕರ್ನಾಟಕ ಲೋಕಾಯುಕ್ತ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಅರಿವು ಕಾರ್ಯಕ್ರಮವು ಗುರುವಾರ ನೆರವೇರಿಸಿಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರುವ ಎಸ್. ರಾಜು ಪೂಜಾರಿ ಅವರು ನೆರವೇರಿಸಿ ಮಾತನಾಡಿ, ಮುಂದಿನ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿ ದೆಸೆಯಲ್ಲಿ ಭ್ರಷ್ಟಾಚಾರ ವಿರೋಧಿ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ ಆ ನಿಟ್ಟಿನಲ್ಲಿ ಇಂಥಹ ಕಾರ್ಯಕ್ರಮ ಅರ್ಥಪೂರ್ಣ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಇನ್ಸ್ಪೆಕ್ಟರ್ ಲೋಕಾಯಕ್ತರಾದ ರಾಜೇಂದ್ರ ನಾಯಕ್ ಅವರು ಭ್ರಷ್ಟಾಚಾರ ನಿರ್ಮೂಲನೆಯ ಜಾಗೃತಿ ಕಾರ್ಯಕ್ರಮದ ಬಗ್ಗೆ ಸುದೀರ್ಘವಾದ ಮಾಹಿತಿ ನೀಡಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಸಭಾ ಅಧ್ಯಕ್ಷತೆಯನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಐ. ನಾರಾಯಣ ಅವರು ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾರಿನಲ್ಲಿ ಇರಿಸಿದ್ದ ಹಣವನ್ನು ಹಾಡುಹಗಲೇ ಲಪಟಾಯಿಸಿದ ಘಟನೆ ತಾಲೂಕಿನ ತಲ್ಲೂರು ಪೇಟೆಯಲ್ಲಿ ನಡೆದಿದೆ. ಕೆಂಚನೂರು ಗ್ರಾಮದ ಕೆ. ಗುಂಡು ಶೆಟ್ಟಿ ಎಂಬುವವರು ತಲ್ಲೂರಿನ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ಗೆ ತೆರಳಿ 2.5 ಲಕ್ಷ ರೂ. ನಗದನ್ನು ಡ್ರಾ ಮಾಡಿಕೊಂಡಿದ್ದರು. ಅದರಲ್ಲಿ 2 ಲಕ್ಷ ರೂ.ಗಳನ್ನು ಕಾರಿನ ಡ್ಯಾಶ್ ಬೋರ್ಡ್ ನಲ್ಲಿಟ್ಟಿದ್ದರು. ಕಾರನ್ನು ತಲ್ಲೂರಿನ ಎಂಡಿ ಫ್ಲ್ಯಾಟಿನ ಎದುರು ಮುಖ್ಯರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿ ಅದೇ ಫ್ಲಾಟ್‌ನಲ್ಲಿರುವ ಮನೆಗೆ ಹೋಗಿದ್ದರು. ಸಂಜೆ ಕಾರಿನ ಬಳಿ ಬಂದಾಗ ಎಡಬದಿಯ ಬಾಗಿಲ ಗಾಜು ಒಡೆದಿರುವುದು ಕಂಡುಬಂದಿದೆ. ಬಾಗಿಲು ತೆರೆದು ನೋಡಿದಾಗ ಡ್ಯಾಶ್ ಬೋರ್ಡ್‌ನಲ್ಲಿಟ್ಟಿದ್ದ ನಗದು ಕಳವಾಗಿತ್ತು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ವಿದ್ಯಾರಣ್ಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪ್ರಕೃತಿ .ಪಿ. ಶೆಟ್ಟಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ (SGFI) ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಯಾದಗಿರಿ ಜಿಲ್ಲೆ ಶಹಾಪುರದ ದಿಗ್ಗಿ ರೋಡ್ ಸರಕಾರಿ ಮಾದರಿ ಪದವಿ ಪೂರ್ವ ಕಾಲೇಜು ದಿಗ್ಗಿ ರೋಡ್ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ (ನ.4 ಮತ್ತು ನ.5) ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿನಿಯು ಶ್ರೀಯುತ ಪ್ರಕಾಶ್ ಶೆಟ್ಟಿ ಮತ್ತು ಶ್ರೀಮತಿ ಸಂಗೀತಾ . ಪಿ. ಶೆಟ್ಟಿ ದಂಪತಿಯ ಪುತ್ರಿ. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಮುಖ್ಯೋಪಾಧ್ಯಾಯ ಪ್ರದೀಪ್. ಕೆ ವಿಜೇತ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕುಮಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ತಾಲೂಕಿನ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಯೋಗೀಶ್ (ನೆಟ್ ಬಾಲ್ ) ಆದಿತ್ಯ (ವಾಲಿಬಾಲ್ ), ಸಾಹಿಮ್ (ಕಬಡ್ಡಿ ), ಪ್ರಣೀತ (ಕುಸ್ತಿ )ಭಾಗವಹಿಸಿ ಉತ್ತಮ ಸಾಧನೆಗೈದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೀರೇಶ್ವರ ಮತ್ತು ಉಮಾಮಹೇಶ್ವರ ದೇವಸ್ಥಾನ ಗಂಗೊಳ್ಳಿ ಇದರ ಶಿವರಾತ್ರಿ ಸೇವಾ ಸಮಿತಿಯ 7ನೇ ವರ್ಷದ ಹಾಗೂ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ 108 ದಿನಗಳ ಅಖಂಡ ಭಜನಾ ಮಹೋತ್ಸವ ಕಾರ್ಯಕ್ರಮ ದೀಪ ಸ್ಥಾಪನೆಯೊಂದಿಗೆ ಶನಿವಾರ ಪ್ರಾರಂಭವಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಜಿ. ರವೀಶ್ ಭಟ್ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿ ಅಖಂಡ ಭಜನಾ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿಗಳಾದ ಉಮೇಶ್ ಎಲ್. ಮೇಸ್ತ ಗುಜ್ಜಾಡಿ, ಜಿ.ಡಿ.ಕೇಶವ ಶೇರುಗಾರ್, ಕಾರ್ತಿಕ್ ಶೇಟ್, ಮತ್ಸ್ಯೋದ್ಯಮಿ ಸುರೇಶ ಖಾರ್ವಿ ಕಂಚುಗೋಡು, ಪ್ರಮೋದ ಗಾಣಿಗ, ದುರ್ಗರಾಜ್ ಪೂಜಾರಿ, ತುಂಗಾ ರಾಮ ಪೂಜಾರಿ, ಜಯಕರ ಪೂಜಾರಿ, ನಾಗೇಶ ಖಾರ್ವಿ, ಸುಂದರ ಜಿ., ಸಮಿತಿಯ ಅಧ್ಯಕ್ಷ ನಾಗರಾಜ ಖಾರ್ವಿ, ಸಮಿತಿಯ ಗೌರವಾಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಭಜನಾ ಮಂಡಳಿಗಳ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಫೆ.16ರಂದು ದೀಪ ವಿಸರ್ಜನೆಯೊಂದಿಗೆ 108 ದಿನಗಳ ಅಖಂಡ ಭಜನಾ ಮಹೋತ್ಸವ ಮಂಗಲಾಚರಣೆ ನಡೆಯಲಿದೆ. ಫೆ.15ರಂದು ಮಹಾಶಿವರಾತ್ರಿಯಂದು ನಗರ ಭಜನೆ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ, ಬೈಂದೂರು, ಬ್ರಹ್ಮಾವರವನ್ನು ಒಳಗೊಂಡು ನೂತನವಾಗಿ ರಚನೆಯಾದ ದೇವಾಡಿಗ ಒಕ್ಕೂಟ ರಿ. ಇದರ ಅಧ್ಯಕ್ಷರಾಗಿ ರಘುರಾಮ್ ದೇವಾಡಿಗ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ರಾಯಪ್ಪನಮಠ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರು -ನಾಗರಾಜ್ ಡಿ. ಪಡುಕೋಣೆ, ದಿನೇಶ್ ಚಂದ್ರಶೇಖರ ದೇವಾಡಿಗ, ದುಬೈ, ಅಣ್ಣಯ್ಯ ಶೇರಿಗಾರ್, ಬಾರ್ಕೂರು. ಅಧ್ಯಕ್ಷರಾಗಿ ರಘುರಾಮ್ ದೇವಾಡಿಗ. ಕಾರ್ಯಾಧ್ಯಕ್ಷರು – ರಮೇಶ್ ದೇವಾಡಿಗ, ವಂಡ್ಸೆ, ಸಂಚಾಲಕರು – ಶಂಕರ್ ಅಂಕದಕಟ್ಟೆ. ಪ್ರಧಾನ ಕಾರ್ಯದರ್ಶಿ – ನಾಗರಾಜ್ ರಾಯಪ್ಪನಮಠ. ಖಜಾಂಚಿ – ರಾಮ ದೇವಾಡಿಗ. ಉಪಾಧ್ಯಕ್ಷರು – ಪುರುಷೋತ್ತಮದಾಸ್, ಶ್ರೀ ಬಾಬು ದೇವಾಡಿಗ, ಮುದೋಳ್, ಶ್ರೀ ತಮ್ಮಯ್ಯ ದೇವಾಡಿಗ, ಎಸ್. ಎಂ. ಚಂದ್ರ ದೇವಾಡಿಗ, ಚಂದ್ರಶೇಖರ ದೇವಾಡಿಗ, ಕುಂದಾಪುರ, ಈಶ್ವರ ದೇವಾಡಿಗ, ಕಿರಿಮಂಜೇಶ್ವರ, ಸುರೇಶ್ ದೇವಾಡಿಗ, ಬಾರ್ಕೂರು, ಶೇಖರ್ ದೇವಾಡಿಗ, ಬ್ರಹ್ಮಾವರ, ಗಿರೀಶ್ ದೇವಾಡಿಗ, ಕುಂದಾಪುರ, ಮಿಥುನ ದೇವಾಡಿಗ, ತ್ರಾಸಿ, ರಾಘವೆಂದ್ರ ದೇವಾಡಿಗ, ಹೆಮ್ಮಾಡಿ. ಜೊತೆ ಕಾರ್ಯದರ್ಶಿಗಳು – ರವಿ ದೇವಾಡಿಗ, ತಲ್ಲೂರು, ರಾಜೇಶ್ ದೇವಾಡಿಗ, ಖಂಬದಕೋಣೆ, ರಾಮಕೃಷ್ಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಸಮ್ಮುಖದಲ್ಲಿ ಕುಂಭಾಶಿಯಿಂದ ಹೊರಟ ಕುಕ್ಕೆ ದೇಗುಲದ ಬೆಳ್ಳಿ ರಥವನ್ನು ಸಾಸ್ತಾನದ ನಾಗರಿಕರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಸಾಸ್ತಾನದ ಭಾಗದ ನಾಗರಿಕರು ಬೆಳ್ಳಿ ರಥಕ್ಕೆ ಪುಷ್ಭಾರ್ಚನೆ ಗೈದರು. ಈ ಸಂದರ್ಭದಲ್ಲಿ ಕುಕ್ಕೆ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಹರೀಷ್ ಇಂಜಾಡಿ, ಸಾಸ್ತಾನ ಭಾಗದ ನಾಗರಿಕರಾದ ಐರೋಡಿ ವಿಠ್ಠಲ್ ಪೂಜಾರಿ, ಸುರೇಶ್ ಕುಂದರ್, ಶಂಕರ್ ಕುಲಾಲ್, ಸಂಜೀವ ಪೂಜಾರಿ, ರಾಘವೇಂದ್ರ ಮಡಿವಾಳ, ಸುರೇಶ್ ಶೆಟ್ಟಿ, ಉಲ್ಲಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಅಖಿಲ ಭಾರತೀಯ ಸುಸಂಘಟಿತ ಭತ್ತ ಅಭಿವೃದ್ಧಿ ಯೋಜನೆ, ಕೃಷಿ ವಿಜ್ಞಾನ ಕೇಂದ್ರ ಗ್ರಾಮೀಣ ಕೃಷಿ ಹವಾಮಾನ ವಿಭಾಗ, ಬ್ರಹ್ಮಾವರ ಕೃಷಿ ಇಲಾಖೆ, ಉಡುಪಿ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ಜಿಲ್ಲಾ ಪಂಚಾಯತ್, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸಹ್ಯಾದ್ರಿ ಬ್ರಹ್ಮ ಕೆಂಪು ಅಕ್ಕಿ ಹತ್ತದ ತಳಿ ಕ್ಷೇತ್ರೋತ್ಸವ ಹವಾಮಾನ ಆಧಾರಿತ ಕೃಷಿ ರೈತ ತರಬೇತಿ ಕಾರ್ಯಕ್ರಮ ರಮೇಶ್ ಹೇರ್ಳೆ ಪಾರಂಪಳ್ಳಿ, ಸಾಲಿಗ್ರಾಮ ಇವರ ಕೃಷಿ ಕ್ಷೇತ್ರದಲ್ಲಿ ಮಂಗಳವಾರ ಜರಗಿತು. ಕಾರ್ಯಕ್ರಮವನ್ನು ಬ್ರಹ್ಮಾವರ ತಾಲೂಕು ಕೃಷಿಕರ ಸಮಾಜ ಇದರ ಅಧ್ಯಕ್ಷ ಪಿ. ವೈಕುಂಠ ಹೇರ್ಳೆ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಸಂಶೋಧ ಸಹನಿರ್ದೇಶಕ ಡಾ. ಧನಂಜಯ ಬಿ. ವಹಿಸಿದ್ದರು. ತಾಂತ್ರಿಕ ಕೈಪಿಡಿಯನ್ನು ಉಡುಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೈಸೂರಿನಲ್ಲಿ ನಡೆದ ವಿಭಾಗವಾರು ಮಟ್ಟದ ಗ್ರಾಮೀಣ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಆದಿತ್ಯ ಎಸ್. ಪೂಜಾರಿ ಪ್ರಥಮ ಸ್ಥಾನವನ್ನು ಗಳಿಸಿ ಧಾರವಾಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ವಿದ್ಯಾರ್ಥಿಯ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಭೋದಕ ಮತ್ತು ಬೋಧಕೇತರ ಬಳಗದವರು ಅಭಿನಂದಿಸಿದ್ದಾರೆ.
