Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಟೀಮ್ ಕುಂದಾಪುರದ ಪ್ರಸ್ತುತಿಯಲ್ಲಿ ಫೆಬ್ರವರಿ 12ರಿಂದ ಫೆಬ್ರವರಿ 16ರ ತನಕ ಕೋಡಿಯಲ್ಲಿ ಕುಂದ ಉತ್ಸವ-2025 ಐದು ದಿನಗಳ ಅದ್ದೂರಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಉದ್ಯಮಿ, ಕುಂದ ಉತ್ಸವದ ಸಾರಥ್ಯ ವಹಿಸಿರುವ ದಿನೇಶ ಹೆಗ್ಡೆ ಮೊಳಹಳ್ಳಿ ಹೇಳಿದರು. ಅವರು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ.12 ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಯೋಗ, ಬೀಚ್ ಸ್ವಚ್ಛತಾ ಕಾರ್ಯಕ್ರಮ, ಸಂಜೆ 7 ಗಂಟೆಯಿಂದ ಸಾಂಸ್ಕಂತಿಕ ಕಾರ್ಯಕ್ರಮ, 8 ಗಂಟೆಗೆ ಕುಂದ ಉತ್ಸವ ಉದ್ಘಾಟನೆ ನಡೆಯಲಿದೆ. ಬಳಿಕ ಶಿವಾನಿ ಮ್ಯೂಸಿಕಲ್ಸ್ ಇವರ ಸಂಯೋಜನೆಯಲ್ಲಿ ಝಿ ಕನ್ನಡ ಸರಿಗಮಪ ಖ್ಯಾತಿಯ ಕಲಾವಿದರಿಂದ ಸಂಗೀತ ಸಂಜೆ ನಡೆಯಲಿದೆ. ಫೆ.13ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ, ರಾಜ್ಯ ಮಟ್ಟದ ಡಾನ್ಸ್ ಸ್ಪರ್ಧೆ ನಡೆಯಲಿದೆ. ಫೆ.14ರಂದು ಸಂಜೆ 7 ಗಂಟೆಗೆ ಝಿ ಕನ್ನಡ ಡಿ.ಕೆ.ಡಿ ಖ್ಯಾತಿಯ ಶಿಪಾಲಿ ಪೂಜಾರಿ ಹಾಗೂ ಶಿವಾನಿ ಪೂಜಾರಿ ಇವರ ಭಾಗವಹಿಸುವಿಕೆಯಲ್ಲಿ ಸುಧೀರ್ ಉಳ್ಳಾಲ ನೇತೃತ್ವದ ರಾಜ್ಯದ ಹೆಸರಾಂತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಚಿವರ್ಸ್ ಕುಂದಾಪುರ ನೇತೃತ್ವದಲ್ಲಿ ಕರ್ಣಾಟಕ ಬ್ಕಾಂಕ್ ಉದ್ಯೋಗಿಗಳು ಹಾಗೂ ಕುಟುಂಬಿಕರಿಗೆ ಆಯೋಜಿಸಲಾದ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾಕೂಟ – ಅಚಿವರ್ಸ್ ಟ್ರೋಫಿ 2025 ಎರಡು ದಿನಗಳ ಕಾಲ ಕೋಟೇಶ್ವರದಲ್ಲಿ ಯಶಸ್ವಿಯಾಗಿ ಜರುಗಿತು. ಬೆಂಗಳೂರು ಲಯನ್ ತಂಡ ಪ್ರಥಮ ಸ್ಥಾನ ಹಾಗೂ ಅಚೀವರ್ಸ್ ಕುಂದಾಪುರ ತಂಡ ದ್ವಿತೀಯ ಸ್ಥಾನ ಪಡೆಯಿತು. ಬ್ಯಾಂಕಿನ ಬೆಂಗಳೂರು, ಮಂಗಳೂರು, ಮೈಸೂರು, ತುಮಕೂರು, ದಾವಣಗೆರೆ ಉಡುಪಿ ಕುಂದಾಪುರದ 12 ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ಮಹಿಳಾ ಸಿಬ್ಬಂದಿಗಳು & ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಉಪಾಧ್ಯಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಆಫೀಸರ್ ಆರ್ಗನೈಸಷನ್’ನ ಜನರಲ್ ಸೆಕ್ರೆಟರಿ ಸುರೇಶ ಹೆಗ್ಡೆ, ಪಿ.ಎನ್.ಬಿ ಮೆಟ್ ಲೈಫ್ ಇನ್ಶೂರೆನ್ಸ್ ರಿಜಿನಲ್ ಹೆಡ್ ಹಾರುಷ ಶೆಣೈ ಭಾರತಿ ಎ.ಎಕ್ಸ್.ಎ ಇನ್ಶೂರೆನ್ಸ್ ರಿಜಿನಲ್ ಮ್ಯಾನೇಜರ್ ಪ್ರದೀಪ್ ಶೆಟ್ಟಿ, ಬ್ಯಾಂಕ್ ನ ಅಧಿಕಾರಿಗಳಾದ ಅನಂತ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಸುರ್ಗೆಡಿ ದೈವಸ್ಥಾನ ಗೆಂಡದ ಪ್ರಯುಕ್ತ ಶ್ರೀ ಕ್ಷೇತ್ರ ಹಾಲಾಡಿಯ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮೇಳದ ಸ್ತ್ರೀ ವೇಷದಾರಿ ಬೀಜಮಕ್ಕಿ ವಿಜಯ ಗಾಣಿಗ ಅವರನ್ನು ಯಕ್ಷಗಾನದ ಕಲಾಭಿಮಾನಿಗಳ ಪರವಾಗಿ ಆಡಳಿತ ಮೋಕ್ತೆಸರರಾದ ಸತ್ಯನಾರಾಯಣ ಶೆಟ್ಟಿ ವಂಡ್ಸೆ ದೊಡ್ಡಮನೆ & ಮೇಳದ ಯಜಮಾನರಾದ ವೈ ಕರುಣಾಕರ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುಧೀರ್ ಶೆಟ್ಟಿ ಹಂತಡಿ (ಮುಂಬೈ),ಕುಶಾಲ್ ಶೆಟ್ಟಿ ಕೊರ್ಗಿಮನೆ, ಪಾತ್ರಿ ಮಂಜಯ್ಯ ಶೆಟ್ಟಿ, ವಿ.ಕೆ. ಶಿವರಾಮ ಶೆಟ್ಟಿ, ಶಶಿಧರ್ ಶೆಟ್ಟಿ ಕೊರಾಡಿಮನೆ, ಸುಧಾಕರ ಶೆಟ್ಟಿ, ಗಿರೀಶ ಎನ್. ನಾಯ್ಕ್, ಗಣೇಶ್ ಭಂಡಾರಿ, ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಸಂತ ರಾಜ್ ಶೆಟ್ಟಿ ನಿರೂಪಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಗ್ರಾಮ ಜಟ್ಟಿಗೇಶ್ವರ ಸೇವಾ ಸಮಿತಿ ಮಲ್ಯರಬೆಟ್ಟು ಗಂಗೊಳ್ಳಿ ಹಾಗೂ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಮಲ್ಯರಬೆಟ್ಟು ಗಂಗೊಳ್ಳಿ ಇದರ ಸುವರ್ಣ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಆಹ್ವಾನಿತ ಅಂತರ್ ಶಾಲಾ ಮಕ್ಕಳ ರಸಪ್ರಶ್ನೆ ಸ್ಪರ್ಧೆ ಮತ್ತು ಭಕ್ತಿಗೀತೆ ಸ್ಪರ್ಧೆ ಗಂಗೊಳ್ಳಿ ಮಲ್ಯರಬೆಟ್ಟು ಶ್ರೀ ಜಟ್ಟಿಗೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು. ಸೇವಾ ಸಮಿತಿ ಅಧ್ಯಕ್ಷ ರಾಮಪ್ಪ ಖಾರ್ವಿ, ಭಜನಾ ಮಂಡಳಿ ಅಧ್ಯಕ್ಷ ಜನಾರ್ದನ ಖಾರ್ವಿ, ಸೇವಾ ಸಮಿತಿ, ಭಜನಾ ಮಂಡಳಿ ಹಾಗೂ ಸುವರ್ಣ ಮಹೋತ್ಸವ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ (ಪ್ರಥಮ), ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆ ಗಂಗೊಳ್ಳಿ (ದ್ವಿತೀಯ) ಮತ್ತು ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ (ತೃತೀಯ) ಬಹುಮಾನ ಪಡೆದುಕೊಂಡಿತು.

Read More

ಕುಂದಾಪ್ರ ಡಾಟ್‌ ಕಾಂ.ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳೇ ಆಗಬೇಕಾದ ಸಮಯದಲ್ಲಿ ನವನೀತ್ ನಿರ್ದೇಶನದ ‘ಛೂ ಮಂತರ್’ ಒಂದು ಹೊಸ ಪ್ರಯೋಗ. ಈ ಚಿತ್ರ ಹಾರರ್ ಮತ್ತು ಕಾಮಿಡಿ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಂಡು, ಪ್ರೇಕ್ಷಕರನ್ನು ಬೆಚ್ಚಿಬೀಳಿಸುವಂತಾದ ಅನುಭವ ನೀಡುತ್ತದೆ. ಕಥೆ ಮತ್ತು ನಿರೂಪಣೆಚಿತ್ರದ ಕತೆ ಮೂರು ಬೇರೆಯಾಗಿರುವ ಕಾಲಘಟ್ಟಗಳಲ್ಲಿ ಸಾಗುತ್ತವೆ, ಆದರೆ ಎಲ್ಲವೂ ಒಂದೇ ಹೌಸ್ – “ಮಾರ್ಗನ್ ಹೌಸ್” ಅನ್ನು ಕೇಂದ್ರದಲ್ಲಿಟ್ಟು ಜೋಡಿಸಲಾದ ಕಥೆ. 1945ರ ಇತಿಹಾಸ, 2004ರ ಅಪಾಯಕಾರಿ ಹಂತ, ಮತ್ತು 2024ರ ಪತ್ತೇದಾರಿ ವಿಚಾರ – ಈ ಮೂರು ಕಾಲಘಟ್ಟಗಳು ಕುತೂಹಲಕಾರಿ ತಿರುವುಗಳನ್ನು ನೀಡುತ್ತವೆ. ಸಿನಿಮಾದ ಮೊದಲ ಭಾಗದಲ್ಲಿ ಹಾಸ್ಯ ಮತ್ತು ಭಯಾನಕ ಸನ್ನಿವೇಶಗಳ ಸಮನ್ವಯ ಸಿಕ್ಕಿ ಹಿಡಿಯುತ್ತದೆ. ಎರಡನೇ ಅರ್ಧದಲ್ಲಿ ಕಥೆಯ ನಿರೂಪಣೆಯಲ್ಲಿ ಕೆಲವು ಜಿಗಿತಗಳು ಇದ್ದರೂ, ಅಂತಿಮವಾಗಿ ಒಂದು ಉತ್ತಮ ಅನುಭವ ನೀಡುತ್ತದೆ. ನಟನೆ – ಶರಣ್ & ತಂಡದ ಅದ್ಭುತ ಪ್ರದರ್ಶನ!ಶರಣ್ ಹಾರರ್ ಕಾಮಿಡಿ ಶೈಲಿಯು ಮುಂಚಿನ ಸಿನಿಮಾ ‘ವಿಕ್ಟರಿ’ ತರುವ ಮಾದರಿಯದಲ್ಲೇ ಇರಬಹುದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಆಳುಪ, ಹೊಯ್ಸಳ, ವಿಜಯನಗರ  ಹಾಗೂ ಕೆಳದಿಯ ಅರಸರ ಆಳ್ವಿಕೆಗೆ ಒಳಪಟ್ಟ ಪ್ರದೇಶ ವಡ್ಡರ್ಸೆ.  ಈ ಪ್ರದೇಶವನ್ನು  ರಾಜರು ಆಳ್ವಿಕೆ ಮಾಡಿದ ಬಗ್ಗೆ ಐತಿಹಾಸಿಕ ಪುರಾವೆಗಳು ದೊರಕುತ್ತವೆ. ವಡ್ಡರ್ಸೆಯಲ್ಲಿ ದೊರಕಿದ ಪ್ರಾಚೀನ ಶಾಸನದಲ್ಲಿ ಬನ್ನಾಡಿ, ಅಚ್ಲಾಡಿ, ಕಾವಡಿ, ಕೊತ್ತಾಡಿ  ಮುಂತಾದ ಪ್ರದೇಶಗಳಲ್ಲಿ ಉಲ್ಲೇಖವಿದೆ. ಶತಮಾನಗಳ ಇತಿಹಾಸ ಇರುವ ವಡ್ಡರ್ಸೆ ಐತಿಹಾಸಿಕ ಪ್ರಸಿದ್ಧ ಸ್ಥಳ ಎಂದು  ಮಾಹೆಯ ಸಾಂಸ್ಕೃತಿಕ ಕೇಂದ್ರಗಳ ಆಡಳಿತ ಅಧಿಕಾರಿಗಳಾದ  ಡಾ| ಬಿ. ಜಗದೀಶ್ ಶೆಟ್ಟಿ ಹೇಳಿದರು. ಅವರು ವಡ್ಡರ್ಸೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ವಡ್ಡರ್ಸೆ ಇತಿಹಾಸ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ನಿವೃತ್ತ ಇತಿಹಾಸ ಪ್ರಾಧ್ಯಾಪಕ ಕೆ. ಚಂದ್ರಶೇಖರ್ ಶೆಟ್ಟಿ ಕೆರೆಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಶುಭ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಬಳ್ಳಾರಿ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಶ್ರವಣ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಶ್ರವಣ ಕಪ್ ಅಖಿಲ ಭಾರತ ಆಹ್ವಾನಿತ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡವು ಪ್ರಶಸ್ತಿಯನ್ನು ಪಡೆದುಕೊಂಡಿತು.  ರಾಷ್ಟ್ರದ 10 ಆಹ್ವಾನಿತ ತಂಡಗಳು ಭಾಗವಹಿಸಿದ್ದಈ ಟೂರ್ನಿಯ ಫೈನಲ್‌ನಲ್ಲಿ ಆಳ್ವಾಸ್ ತಂಡವು ತಮಿಳುನಾಡಿನ ಪಿಎಸ್‌ಎನ್‌ಎ ದಿಂಡಿಗಲ್ ತಂಡವನ್ನು 35-31, 35-18 ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸೆಮಿಫೈನಲ್ಸ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ಶ್ರವಣ ಬಳ್ಳಾರಿ ತಂಡವನ್ನ ನೇರ ಸೆಟ್ಟುಗಳಿಂದ ಸೋಲಿಸಿ ಫೈನಲ್ಸಿಗೆ ಅರ್ಹತೆಯನ್ನು ಪಡೆದಿತ್ತು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶ್ರೀ ಮೈಲಾರೇಶ್ವರ ಯುವಕ ಮಂಡಲ ರಿ. ಕುಂದಾಪುರ ಇವರ 48ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಆರಾಧ್ಯ ಕೆ.ಬಿ. ಪ್ರಥಮ ಸ್ಥಾನ ಪಡೆದಿದ್ದಾಳೆ ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: 12ನೇ ಶತಮಾನದಲ್ಲಿದ್ದ ವಚನಕಾರರು ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ತಿದ್ದುವಲ್ಲಿ ನಿರತರಾಗಿದ್ದರು. ವಚನಕಾರರ ವಚನಗಳನ್ನು ಹಾಗೂ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ವಚನಕಾರರು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ವಚನಗಳನ್ನು ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಚನಕಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸಮಾನತೆ, ಭ್ರಾತತ್ವ ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳುವುದರ ಜೊತೆಗೆ ತಾವು ಮಾಡುವ ಕಾಯಕದಲ್ಲಿ ದೇವರನ್ನೇ ಕಂಡುಕೊಂಡು ತಮ್ಮ ವಚನಗಳ ಮೂಲಕ ಜನರಲ್ಲಿ ಅರಿವು ಮತ್ತು ಜ್ಞಾನವನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದರು. ಒಳಗೊಂದು ಹೊರಗೊಂದು ಭಾವನೆಗಳನ್ನು ಹೊಂದಿರುವ ಪ್ರಸಕ್ತ ಸಮಾಜದಲ್ಲಿ, ವಚನಕಾರರು 800 ವರ್ಷಗಳ ಹಿಂದೆಯೇ ತಮ್ಮ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಮ್ಮಿಕೊಂಡಿರುವ ಗ್ರಾಮ ಆಡಳಿತ ಅಧಿಕಾರಿಗಳ 2ನೇ ಹಂತದ ಅನಿರ್ದಿಷ್ಠಾವಧಿ ಮುಷ್ಕರವು ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಗಣೇಶ ಮೇಸ್ತರವರ ನೇತೃತ್ವದಲ್ಲಿ ಬೆಂಗಳೂರಿನ ಕಚೇರಿ ಕಂದಾಯ ಭವನದಲ್ಲಿ ಸೋಮವಾರದಂದು ಶಾಂತಿಯುತವಾಗಿ ನಡೆಯಿತು. ಉಪಾಧ್ಯಕ್ಷರಾದ ಸಂದೀಪ್ ಭಂಡಾರ್ಕಾರ್, ಕಾರ್ಯದರ್ಶಿ ವಿರೇಶ್ ಹಾಗೂ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು. ಬೈಂದೂರು ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶೇಖರ ಪೂಜಾರಿ ಹಾಗೂ ರಾಜ್ಯ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ಜಿ. ಉಪ್ಪುಂದ ಮತ್ತು ಪದಾಧಿಕಾರಿಗಳು ಹಾಜರಾಗಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

Read More