ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಮಾಜದ ಬಗ್ಗೆ ಅಪಾರವಾದ ಗೌರವ ಮನ್ನಡೆ ಪಡೆದ ರಮಾನಾಥ ಜೋಗಿ ಹಾಗೂ ಕೂಸ ಪೂಜಾರಿ ಅವರ ಕೊಡುಗೆ ಅನನ್ಯವಾದದ್ದು ಎಂದು ಕೋಟದ ಸಾಂಸ್ಕೃತಿಕ ಚಿಂತಕ ಕೋಟ ಚಂದ್ರಶೇಖರ ಆಚಾರ್ ಹೇಳಿದರು. ಅವರು ಶುಕ್ರವಾರ ಕೋಟದ ಪಂಚವರ್ಣದ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇತ್ತೀಚಿಗೆ ಅಗಲಿದ ಕೋಟದ ಇರ್ವರು ಗಣ್ಯರಾದ ಗಾಡಿ ಕೂಸ ಪೂಜಾರಿ ಹಾಗೂ ರಮಾನಾಥ ಜೋಗಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದೊಂದಿಗೆ ಸಮಾಜಕ್ಕಾಗಿ ಶ್ರಮಿಸಿ ಅಪಾರ ಜನ್ನಮನ್ನಣೆ ಪಡೆದವರು ಇರ್ವರು ಮಹಾನ್ ಚೇತನರು,ಅವರ ಇರುವಿಕೆಯ ಕಾಲಘಟ್ಟದಲ್ಲಿ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಗಾಡಿ ಕೂಸ ಪೂಜಾರಿಯವರ ಕುರಿತಾಗಿ ನ್ಯಾಯವಾದಿ ಕೆ. ಅನಂತಪದ್ಮನಾಭ ಐತಾಳ್ ನುಡಿನಮನ ಸಲ್ಲಿಸಿದರು. ರಮಾನಾಥ ಜೋಗಿ ಅವರ ಪುತ್ರ ಶಶಿಧರ ಜೋಗಿ, ಕೋಟ ಅಮೃತೇಶ್ವರೀ ದೇಗುಲದ ಅರ್ಚಕ ಅಶ್ಚಥ್ ಜೋಗಿ, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಕೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರಾಜ್ಯ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಅವರಿಗೆ ಹುಟ್ಟೂರ ಸಾಹಿತ್ಯ ಸಾಧಕ ಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಇತ್ತೀಚಿಗೆ ಕೋಟ ಶಾಲೆಯ ಪೂರ್ವ ಕಟ್ಟದ ಸಭಾಂಗಣದಲ್ಲಿ ಕೋಟದ ಮಿತ್ರ ಮಂಡಳಿ ಆಶ್ರಯದಲ್ಲಿನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ರಿಷಿಕಾ ದೇವಾಡಿಗ ಹಾಗೂ ಪ್ರಥ್ವಿ ಪೂಜಾರಿ ಅವರಿಗೆ ಅಣ್ಣಾಜಿ ಬಲ್ಲಾಳ್ ಬಾಲ ಪುರಸ್ಕಾರ ಪ್ರದಾನಿಸಲಾಯಿತು. ಅಂಬಲಪಾಡಿ ಕ್ಷೇತ್ರದ ಧರ್ಮದರ್ಶಿ ಡಾ. ವಿಜಯ ಬಲ್ಲಾಳ್ ಅವರು ಸಮ್ಮಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ್ ಸಿ. ಕುಂದರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ನಿವೃತ್ತ ಶಿಕ್ಷಕ ನರಸಿಂಹ ಐತಾಳ, ಕೋಟ ವಿವೇಕ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ, ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ಒಡಗಿನ ನಂದಿಕೇಶ್ವರ ದೈವಸ್ಥಾನದ ಕೆರೆ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುಕ್ರವಾರ ಚಾಲನೆ ನೀಡಲಾಗಿದೆ. ಸುಮಾರು 200 ಎಕ್ಕರೆ ಅಧಿಕ ವಿಸ್ತೀರ್ಣದ ಕೃಷಿ ಭೂಭಾಗ ಹೊಂದಿದ ಈ ಪ್ರದೇಶದಲ್ಲಿ ಬಹುದೊಡ್ಡ ಕೆರೆಯಾಗಿ ಗುರುತಿಸಿಕೊಂಡ ನಂದಿಕೇಶ್ವರ ದೈವಸ್ಥಾನದ ಕೆರೆ ಮಾತ್ರ ಹೂಳು ಮತ್ತು ಗಿಡಗಂಟಿಗಳಿಂದ ಹಾಸುಹೋಗಿದೆ. ಈ ಬಗ್ಗೆ ಇಲ್ಲಿನ ಗ್ರಾಮಸ್ಥರು ಕೆಲವರ್ಷಗಳ ಹಿಂದೆ ಮರುಜೀವ ನೀಡುವ ಸಲವಾಗಿ ಹೂಳು ಮತ್ತು ಗಿಡ ಗಂಟೆಗಳನ್ನು ತೆರವುಗೊಳಿಸಿದ್ದರು ಆದರೆ ಇದೀಗ ಪುನಃ ಹೂಳು ತುಂಬಿಕೊಂಡಿದ್ದು ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ. ಸುಮಾರು ೮೨ವರೆ ಸೆಂಟ್ಸ್ ವಿಸ್ತೀರ್ಣದ ಈ ಕೆರೆ ಗ್ರಾಮದ ಅಂತರ್ಜಲ ವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿದ್ದು ಕೆರೆ ಪುನರ್ ನವೀಕರಣದ ಶೆಕೆ ಗ್ರಾಮದ ಕೃಷಿಕರಲ್ಲಿ ಮಂದಹಾಸ ಮನೆ ಮಾಡಿದೆ. ಕೆರೆ ಸಮಿತಿ ಮೂಲಕ ಶ್ರೀ ಕ್ಷೇತ್ರ ಅಣಿ:ಕೆರೆ ಅಭಿವೃದ್ಧಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಳೆದ ಹನ್ನೊಂದು ವರ್ಷಗಳಿಂದ ಮಂಗಳೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಚಟುವಟಿಕೆಯಲ್ಲಿರುವ ಅರೆಹೊಳೆ ಪ್ರತಿಷ್ಠಾನ, ಪ್ರಸ್ತುತ ಬೈಂದೂರು ತಾಲೂಕಿನ ಅರೆಹೊಳೆಯಲ್ಲಿ, ಅರೆಹೊಳೆ ರೆಪರ್ಟರಿ ಮತ್ತು ಥಿಯೇಟರ್ ಸ್ಕೂಲ್ ಎನ್ನುವ ಹೆಸರಲ್ಲಿ ರಂಗತಂಡ ಹಾಗೂ ರಂಗಶಾಲೆಯನ್ನು ಆರಂಭಿಸಿದೆ. ಅರೆಹೊಳೆಯಂತಹ ಗ್ರಾಮೀಣ ಪ್ರದೇಶದಲ್ಲಿ ರಂಗಚಟುವಟಿಕೆ, ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಇದೇ ಎ.16 ರಿಂದ 20ರ ತನಕ ಅರೆಹೊಳೆ ದಿಬ್ಬಣ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಮ್ಮ ಬಹು ಮಹತ್ವಕಾಂಕ್ಷೆಯ ಅರೆಹೊಳೆ ರಂಗಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಆಡುಂಬೊಲ ನಡೆಯಲಿದೆ ಎಂದು ಅರೆಹೊಳೆ ಪ್ರತಿಷ್ಠಾನದ ಮುಖ್ಯಸ್ಥ ಅರೆಹೊಳೆ ಸದಾಶಿವ ರಾವ್ ತಿಳಿಸಿದರು. ಅರೆಹೊಳೆ ರೆಪರ್ಟರಿ ಮತ್ತು ಥಿಯೇಟರ್ ಸ್ಕೂಲ್‌ನಲ್ಲಿ ಎ.16 ಗುರುವಾರ ಬೆಳಿಗ್ಗೆ 8 ಗಂಟೆಗೆ ಎ.ಎಸ್.ಕೆ ಫೌಂಡೇಶನ್ ಪ್ರಾಯೋಜಿತ ಐದು ದಿನಗಳ ರಂಗ ಶಿಬಿರ ರಂಗಿನಾಟವನ್ನು ಯಕ್ಷಗುರು ಸುಜಯೀಂದ್ರ ಹಂದೆ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಮಹಾಗಣಪತಿ ವಾದ್ಯವೃಂದ ಆಕಳಬೈಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಒನ್ ಟ್ಯಾಕ್, ಮಣಿಪಾಲ್ ಸ್ಕೂಲ್ ಆಫ್ ಕಮ್ಯುನಿಕೇಷನ್ ಮತ್ತು ಉಡುಪಿ ಟೂರಿಸಂ ಸಹಭಾಗಿತ್ವದಲ್ಲಿ ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಇವರ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಿಲ್ಲಾಡಳಿತವು ಹಮ್ಮಿಕೊಂಡಿದೆ. ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಎಲ್ಲ ಸಕ್ರಿಯ ಪಾಲುದಾರರ ಜೊತೆಯಲ್ಲಿ ವಿಶೇಷ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಉಡುಪಿಯ ಸಂಸ್ಕೃತಿ, ಪರಂಪರೆ, ಆಹಾರ ಶೈಲಿ ಮತ್ತು ಧಾರ್ಮಿಕತೆ ಬಗ್ಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಚಾರ ನೀಡಲು ಉದ್ದೇಶಿಸಲಾಗಿದ್ದು ಇದಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗುವುದು ಎಂದರು. ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಡಿಜಿಟಲ್ ಕಂಟೆಂಟ್‌ಗಳನ್ನು ತಯಾರಿಸುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು, ಕಂಟೆಂಟ್ ಕ್ರಿಯೇಟರ್ಸ್ ಭಾಗವಹಿಸಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಫೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುವ ಅವಕಾಶ ಇದೆ. ವಿಶೇಷವಾಗಿ ಕಾಲೇಜು ಮಟ್ಟದಲ್ಲಿ ಲ್ಯಾಬ್‌ಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2025-2026ನೇ ಸಾಲಿನ ಪದವಿಪೂರ್ವ ಕಾಲೇಜಿನ ಫಲಿತಾಂಶ ಏಪ್ರಿಲ್ 09,2026ರಂದು ಪ್ರಕಟವಾಗಿದ್ದು, ಈ ಫಲಿತಾಂಶದಲ್ಲಿ ಕುಂದಾಪುರ ಸುಜ್ಞಾನ ಪಿಯು ಕಾಲೇಜಿನ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳು ಅಮೋಘ ಸಾಧನೆ ಗೈದಿದ್ದಾರೆ. ಕೇವಲ 11 ವಿದ್ಯಾರ್ಥಿಗಳಿಂದ 2024-2025ರಲ್ಲಿ ಆರಂಭವಾದ ಸುಜ್ಞಾನ ಪಿಯು ಕಾಲೇಜು ದ್ವಿತೀಯ ಪಿಯುಸಿಗೆ ಬೇರೆ ಕಾಲೇಜುಗಳಿಂದ ಸುಮಾರು 100 ವಿದ್ಯಾರ್ಥಿಗಳು ದಾಖಲಾತಿ ಪಡೆದು ಒಟ್ಟು 125 ವಿದ್ಯಾರ್ಥಿಗಳು ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿ ಕಾಲೇಜಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಸಂಸ್ಥೆಯ ಸ್ಪಂದನಾ ಆರ್. ಶೆಟ್ಟಿ 600 ಅಂಕಕ್ಕೆ 592 ಅಂಕಗಳನ್ನು ಪಡೆದು ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿದ್ದಾರೆ. ವಿಶೇಷವೆಂದರೆ ಸ್ಪಂದನಾ ಎಸ್.ಎಸ್.ಎಲ್.ಸಿಯಲ್ಲಿ 84% ಅಂಕ ಪಡೆದರೂ ಕೂಡ ದ್ವಿತೀಯ ಪಿಯುಸಿಯಲ್ಲಿ 98.7% ಅಂಕ ಗಳಿಸುವುದರ ಮೂಲಕ ಶ್ರೇಷ್ಠ ಸಾಧನೆಯನ್ನು ಮೆರೆದಿದ್ದಾರೆ. SSLCಯಲ್ಲಿ 95ಕ್ಕಿಂತ ಅಧಿಕ ಅಂಕ ಗಳಿಸಿದ ಕೇವಲ 9 ವಿದ್ಯಾರ್ಥಿಗಳನ್ನು ಒಳಗೊಂಡು ಒಟ್ಟು 125 ವಿದ್ಯಾರ್ಥಿಗಳು ಸುಜ್ಞಾನ ಪಿಯು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಕಡೆ ಇಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿಯೊಂದು ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಬೀಜಾಡಿ ಡಿವೈಡರ್ ಬಳಿ ನಡೆದಿದೆ. ಮೃತರನ್ನು ವಡ್ಡರ್ಸೆ ನೀರುಕೊಡ್ಲು ನಿವಾಸಿ ದಿ. ಮಂಜುನಾಥ್ ಆಚಾರಿ ಅವರ ಪತ್ನಿ ಶಾರದಾ (55) ಎಂದು ಗುರುತಿಸಲಾಗಿದೆ. ಶಾರದಾ ಅವರು ಮಗನ ಜೊತೆ ಕೋಟೇಶ್ವರ ಅಂಕದಕಟ್ಟೆಯಲ್ಲಿರುವ ತಮ್ಮ ತಂಗಿಯ ಮನೆಗೆ ತೆರಳುತ್ತಿದ್ದರೆಂದು ತಿಳಿದು ಬಂದಿದೆ. ಈ ಅಪಘಾತದ ತೀವ್ರತೆಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟಿ ಓಡಿಸುತ್ತಿದ್ದ ಮಗ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಕುಂದಾಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪ್ರ ಡಾಂ ಕಾಂ ಸುದ್ದಿ.ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕಿನ ಇಡೂರು ಕುಂಜ್ಞಾಡಿ ಗ್ರಾಮದ ಹೊಸಿಮನೆ ನಿವಾಸಿ ಕಾರ್ತಿಕ್ ಆಚಾರ್ ಎಂಬುವನ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಗಡಿಪಾರು ಆದೇಶ ಹೊರಡಿಸಿರುತ್ತಾರೆ. ಈತನ ವಿರುದ್ಧ 4 ಪ್ರಕರಣ ದಾಖಲಾಗಿದ್ದು, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿರುತ್ತದೆ. ಈತನನ್ನು ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್‌ಕಾರ್ಸ್ ಪದವಿ ಪೂರ್ವ ಕಾಲೇಜಿಗೆ 2025-2026ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವು ಶೇಕಡಾ 92% ದೊರೆತಿದೆ ಎಂದು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ – ಅನಿಲ್ ಜೀವನ್ ಲೋಬೋ (578/600), ದ್ವಿತೀಯ- ಅಶ್ವಿನಿ ಪ್ರಭು (575/600), ತೃತೀಯ-ಭೂಮಿಕಾ ಎಂ.ಡಿ (574/600), ನಾಲ್ಕನೇ ಸ್ಥಾನವನ್ನು ರವೀಂದ್ರ ಮಾಸ್ತಿ ಗೊಂಡ 573/600 ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪ್ರಥಮ – ಸಬಾ (586/600), ದ್ವಿತೀಯ- ನವ್ಯ (581/600), ತೃತೀಯ- ಪ್ರಿಯಾ (574/600), ನಾಲ್ಕನೇ- ರೇಣುಕಾ (573/600), ಪಂಚಮ ಸ್ಥಾನವನ್ನು ಭೂಮಿಕಾ (571/600) ಪಡೆದುಕೊಂಡಿದ್ದಾರೆ. ಕಾಲೇಜಿನ 63 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 102 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ ಮತ್ತು ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಅಧ್ಯಾಪಕೇತರರು, ವಿದ್ಯಾರ್ಥಿಗಳು ಅಭಿನಂದನೆ ತಿಳಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಪ್ರತಿಷ್ಠಿತ ಐ.ಎಂ.ಜೆ (IMJ) ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶುಕ್ರವಾರದಂದು ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ದಿವಂಗತ ಐ. ಎಂ. ಜಯರಾಮ ಶೆಟ್ಟಿ ಅವರ ದೂರದೃಷ್ಟಿಯ ಫಲವಾಗಿ 2004ರಲ್ಲಿ ‘ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (MITK) ಉದಯಿಸಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ಸಿಗಬೇಕೆಂಬ ಅವರ ಕನಸು ಇಂದು ಐ.ಎಂ.ಜೆ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, “ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭದ ಮಾತಲ್ಲ. ಜಯರಾಮ ಶೆಟ್ಟಿ ಅವರು ಈ ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಅತ್ಯುನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಈ ಭಾಗದ ಶೈಕ್ಷಣಿಕ ಚಿತ್ರಣವನ್ನೇ…
