ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಜಲಮಾಲಿನ್ಯ ಇತ್ತೀಚನ ದಿನಗಳಲ್ಲಿ ಹೆಚ್ಚುತ್ತಿದೆ. ನದಿಗಳಲ್ಲಿ, ಕೆರೆಗಳಲ್ಲಿ ವಾಸಿಸುವ ಜಲಚರ ಜೀವಪ್ರಬೇಧಗಳ ಜೀವಕ್ಕೆ ಧಕ್ಕೆ ಒದಗುತ್ತಿದೆ. ಈ ಜಲಮಾಲಿನ್ಯ ತಡೆದು ಜಲಚರಜೀವಿಗಳ ಉಳಿವಿಗಾಗಿ ಉಜಿರೆಯ ಎಸ್.ಡಿ.ಎಂ ಸೆಕೆಂಡರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ?ರಿವರ್ ಕ್ಲೀನಿಂಗ್ ಮಷಿನ್’ ಎಂಬ ತಾಂತ್ರಿಕ ಪರಿಕರ ಕಂಡುಹಿಡಿದಿದ್ದಾರೆ. ಮೂಡಬಿದರೆ ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರಿಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ನದಿಯನ್ನು ಶುದ್ಧೀಕರಿಸು ಈ ತಾಂತ್ರಿಕ ಪರಿಕರದ ವಿನ್ಯಾಸವನ್ನು ಪ್ರದರ್ಶಿಸುತ್ತಿದ್ದಾರೆ. ಅನೇಕ ಜನರು ದೇವಾಸ್ಥಾನಗಳಿಗೆ ಬಂದಾಗ ತಾವು ಬಳಸಿದ ಪ್ಲಾಸ್ಟಿಕ್ ವಸ್ತುಗಳು, ಬಟ್ಟೆ, ಹೀಗೆ ಹಲವು ವಸ್ತುಗಳನ್ನು ನದಿಗಳಿಗೆ,ಕೆರೆಗಳಿಗೆ ಬಿಸಾಡುವುದರಿಂದ ಆ ನೀರು ಕಲುಷಿತಗೊಳ್ಳುತ್ತದೆ. ಅಲ್ಲಿ ವಾಸ ಮಾಡುವ ಜಲಚರ ಪ್ರಾಣಿಗಳು ಅವುಗಳನ್ನು ಸೇವಿಸಿ ಅಸುನೀಗುತ್ತಿವೆ. ಈ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ‘ರೀವರ್ ಕ್ಲೀನಿಂಗ್ ಮಷಿನ್? ವಿನ್ಯಾಸ ರೂಪಿಸುವ ಯೋಜನೆ ರೂಪುಗೊಂಡಿತು. ಈ ಮಷಿನ್ ಪೇಪರ್ ಮತ್ತು ಪ್ಲಾಸ್ಟಿಕ್ಗಳಂತಹ ನೀರಿನ ಮೇಲೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಉಪಯೋಗಕ್ಕೆ ಬಾರದ ಕಾಗದಗಳು ಈ ಕಲಾವಿದೆ ಕೈಚಳಕದಿಂದ ಮೂರ್ತರೂಪ ಪಡೆದಿದೆ. ಅನುಪಯುಕ್ತ ಕಾಗದವನ್ನು ಬಳಸಿ ವಿಶಿಷ್ಟ್ಯ ರೀತಿಯಲ್ಲಿ ಬೊಂಬೆಗಳನ್ನು ತಯಾರಿಸಿ ಸ್ವ ಉದ್ಯೋಗಿಗಳಿಗೆ ಮಾದರಿಯಾಗಿದ್ದಾರೆ ವಿಕಲಚೇತನೆ ರಾಧಿಕಾ ಎ.ಜೆ ತ್ಯಾಜ್ಯ ಕಾಗದವನ್ನು ಸಂಗ್ರಹಿಸಿ ಅದರಿಂದ ವಿಧ ವಿಧದ ಆಕಾರದ ಬೊಂಬೆಗಳನ್ನು ತಯಾರಿಸುವ ರಾಧಿಕಾ ತಮಿಳುನಾಡಿನ ಕೊಯಂಬೂತ್ತಿರಿನವರು. ಮೂಡಬಿದಿರೆಯ ಆಳ್ವಾಸ್ ಕಾಲೇಜು ಆಯೋಜಿಸಿದ್ದ ೨೦೨೨ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ವಸ್ತು ಪ್ರದರ್ಶನ ಮಳಿಗೆಯಲ್ಲಿ ರಾಧಿಕಾಗೆ ನೆರವಾಗಲು ತಮ್ಮ ಟ್ರಸ್ಟ್ ನ ಮೂಲಕ ವಕೀಲೆ ಜಯಶ್ರೀ ಬೊಂಬೆಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಸಣ್ಣ ಮಕ್ಕಳಿಗೆ ಯಾವುದೇ ಹಾನಿಯಾಗದಂತೆ ಕಾಗದದ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ. ವಿಭಿನ್ನ ಭಂಗಿಯಲ್ಲಿ ನಿಂತ ಬೊಂಬೆಗಳು ವಿವಿಧ ಬಣ್ಣಗಳನ್ನು ಹೊಂದಿವೆ. ಕಾಗದದ ಬೊಂಬೆಗಳು ಕೈಗೆಟಕುವ ದರದಲ್ಲಿ ಲಭಿಸುತ್ತಿವೆ. ವಿವಿಧ ಉಡುಗೆಗಳೊಂದಿಗಿನ ಪರಿಸರ ಸ್ನೇಹಿ ಗೊಂಬೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ವರದಿ: ಕ್ರೀಷ್ಮಾ ಆರ್ನೋಜಿ, ದ್ವಿತೀಯ ವರ್ಷದ ಪತ್ರಿಕೋದ್ಯಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಮನೆ ಕಟ್ಟುವ ಕನಸಿನ ಜೊತೆಗೆ ಪರಿಸರದ ಕಾಳಜಿ ಸೇರಿಕೊಂಡರೆ ಪರಿಸರ ಸ್ನೇಹಿ ಮನೆಯನ್ನೇ ನಿರ್ಮಿಸಬಹುದಾಗಿದೆ. ಇಂಥದ್ದೇ ಮಾದರಿಯ ವಿನ್ಯಾಸವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ಗಮನ ಸೆಳೆಯುತ್ತಿದೆ. ಕಾರ್ಕಳದ ಕಲ್ಕಿ ಇಂಗ್ಲಿಷ್ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಇರ್ಬಿಸ್ ಸುಂದರವಾದ ಹಸಿರು ಮನೆಯ ಮಾದರಿಯನ್ನು ನಿರ್ಮಿಸಿದ್ದು, ಇದರೆಡೆಗೆ ಕುತೂಹಲ ತಳೆದು ಹಲವರು ಮಾಹಿತಿ ಪಡೆಯುತ್ತಿದ್ದಾರೆ. ಮನೆಯ ಕಟ್ಟಡ ಒಳಗೊಳ್ಳುವ ಎಲ್ಲಾ ಪರಿಕರಗಳನ್ನೂ ಪರಿಸರಸ್ನೇಹಿಯಾಗಿಸಬಹುದು ಎಂಬ ಆತ್ಮವಿಶ್ವಾಸವನ್ನು ಈ ಮಾದರಿ ಮೂಡಿಸುತ್ತಿದೆ. ಎಲೆಕ್ಟ್ರಿಸಿಟಿ, ಗೋಡೆಯ ಬಣ್ಣ, ಸಿಮೆಂಟ್, ಸ್ಟೀಲ್ ಬಳಕೆಯ ಸಂದರ್ಭದಲ್ಲಿ ಪರಿಸರಸ್ನೇಹಿ ವಸ್ತುಗಳಿಗೇ ಆದ್ಯತೆ ನೀಡಬಹುದಾದ ಮಾದರಿ ಇದು. ಗೋಡೆಗೆ ಬಳಸಲಾಗುವ ಬಣ್ಣಕ್ಕೆ ರಸಾಯನಿಕ ಅಂಶವಿಲ್ಲದ ಉತ್ಪನ್ನಕ್ಕೇ ಆದ್ಯತೆ ನೀಡುವುದು ಹೇಗೆ ಎಂಬುದನ್ನು ಈ ಮಾದರಿ ತಿಳಿಸಿಕೊಡುತ್ತಿದೆ. ಪರಿಸರಸ್ನೇಹಿ ಸೋಲಾರ್ ತಂತ್ರಜ್ಞಾನವನ್ನು ಬಳಸಿಕೊಂಡು ಇಡೀ ಮನೆಯ ಎಲೆಕ್ಟ್ರಿಸಿಟಿ ಅವಶ್ಯಕತೆಯನ್ನು ಪೂರೈಸಿಕೊಳ್ಳುವ ಪರ್ಯಾಯ ಮಾರ್ಗವನ್ನೂ ಈ ಮಾದರಿ ತೂರಿಸುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಮೂಡುಬಿದಿರೆ ಈ ಹೈಸ್ಕೂಲು ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ ಬೆಂಕಿ ನಂದಿಸುವ ರೋಬೋಟ್ ಆಳ್ವಾಸ್ ಕ್ಯಾಂಪಸ್ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ಸದ್ದು ಮಾಡುತ್ತಿದೆ. ಮೂಡಬಿದರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಜೇಷ್ಠ ಮತ್ತು ಮನಿಶ್ ರೂಪಿಸಿರುವ ಬೆಂಕಿ ನಂದಿಸುವ ರೋಬೋಟ್ ವಿನ್ಯಾಸ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ಬಹಳ ಪ್ರಶಂಸೆಗೆ ಪಾತ್ರವಾಗಿದೆ. ಈ ರೋಬೋಟ್ನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದಾಗಿದ್ದು, ಯಾವ ಸ್ಥಳದಲ್ಲಿ ಬೆಂಕಿ ಬಿದ್ದಿದೆ ಆ ಸ್ಥಳಕ್ಕೆ ಈ ರೋಬೋಟ್ ತತ್ಕ್ಷಣದಲ್ಲೇ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡುತ್ತದೆ. ಈ ರೋಬೋಟ್ ಬೆಂಕಿ ಬಿದ್ದ ಸ್ಥಳವನ್ನು ಇದಕ್ಕೆ ಅಳವಡಿಸಿರುವ ಫ್ಲೇಮ್ ಸೆನ್ಸಾರ್ ಕಂಡುಹಿಡಿದು, ಆರ್ಡಿಯೋನೋ ಯು.ಎನ್.ಒ ಬೋರ್ಡ್ಗೆ ಸಂದೇಶ ಕಳುಹಿಸುತ್ತದೆ. ಈ ಬೋರ್ಡ್ ಎಲ್ಟೋನೈಂಟಿ ಮೋಟಾರ್ಗೆ ಸಂದೇಶ ಕಳುಹಿಸಿ, ಅದಾಗಲೇ ಅಳವಡಿಸಿರುವ ನೀರಿನ ಕಂಟೈನರ್ನಲ್ಲಿರುವ ನೀರನ್ನು ಹೊತ್ತು ಮುಂದೆ ಸ್ವಯಂಚಾಲಿತವಾಗಿ ಮುಂದೆ ಸಾಗಿ ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಯಕ್ಷಗಾನ ಹಿಮ್ಮೇಳವೆಂಬುದು ಕೇವಲ ಚಂಡೆ, ಮೃದಂಗ ಭಾಗವತರ ನಟ್ವಾಂಗ ಮತ್ತು ಜಾಗಟೆಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ‘ಕೃಷಿಸಿರಿ ವೇದಿಕೆ’ಯಲ್ಲಿ ಶುಕ್ರವಾರ ನಡೆದ ‘ಯಕ್ಷಗಾನ ರಸಮಂಜರಿ’ ಕಾರ್ಯಕ್ರಮ ನಿರೂಪಿಸಿತು. ಸಾಂಪ್ರದಾಯಿಕ ಯಕ್ಷಗಾನಕ್ಕೆ ಆದ್ಯತೆ ನೀಡುವುದರೊಂದಿಗೆ ನವಮಾದರಿಯಲ್ಲಿ ವೈವಿಧ್ಯಮಯವಾಗಿ ಯಕ್ಷಗಾನದ ಪದಗಳನ್ನು ಪ್ರಸ್ತುತಪಡಿಸಲಾಯಿತು. ಮೊದಲಿಗೆ ಚಂಡೆ ಮತ್ತು ತಬಲದ ಜುಗಲ್ಬಂದಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಸಭಾಂಗಣದಲ್ಲಿ ನೆರೆದಿರುವ ಯಕ್ಷಗಾನ ಪ್ರಿಯರಿಗೆ ಮುದ ನೀಡಿತು. ಅಲ್ಲದೇ ಸಾಂಪ್ರದಾಯಿಕ ಶೈಲಿ ಮತ್ತು ನವೀನ ಶೈಲಿಯ ಸಮ್ಮಿಶ್ರಣ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು. ಭಾಗವತರ ಕಂಠದಲ್ಲಿ ಸೊಗಸಾಗಿ ಮೂಡಿಬಂದ ರಾಮ ರಾಮ ಶ್ರೀ ರಾಮ’ಬಂದನು ದೇವರ ದೇವ’ ಇನ್ನಿತರ ಪದ್ಯಗಳು ಪ್ರೇಕ್ಷಕರನ್ನ ರೋಮಾಂಚನಗೊಳಿಸಿತು. ಯಕ್ಷಗಾನದ ಮೂಲ ವಾದ್ಯಗಳಾದ ಚಂಡೆ, ಮೃದಂಗ, ವನ್ನು ಬಳಸುವುದರ ಜೊತೆಗೆ ವಿನೂತನವಾಗಿ ವಯೊಲಿನ್, ಗಿಟಾರ್, ಕೊಳಲು, ನುಡಿಸಿ ಯಕ್ಷಗಾನಕ್ಕೆ ವಿಶೇಷ ಮೆರಗು ನೀಡಿದರು. ದೇವಾನಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ನ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ಕೃಷಿಸಿರಿ ವೇದಿಕೆಯು ಕರಾವಳಿ ಸಾಂಸ್ಕೃತಿಕ ಸೊಗಡಿನ ಸ್ಪರ್ಶದೊಂದಿಗಿನ ತುಳು ಹಾಸ್ಯ ಲಹರಿಗೆ ಸಾಕ್ಷಿಯಾಯಿತು. ದೇಶದ ವಿವಿಧ ಪ್ರದೇಶಗಳ ಸಾಂಸ್ಕೃತಿಕ ಭಿನ್ನತೆಗಳ ಮೇಲೆ ಬೆಳಕು ಚೆಲ್ಲುವುದರೊಂದಿಗೆ ತುಳುನಾಡಿನ ವೈಶಿಷ್ಟ್ಯತೆಯನ್ನೂ ಕಾಣಿಸುವಲ್ಲಿ ಯಶಸ್ವಿಯಾಯಿತು. ಭಾರತದ ಕೃಷಿ ಪರಂಪರೆಯ ಮೂಲವಾದ ಗೋ ಸಂಪತ್ತಿನ ಪ್ರಾಮುಖ್ಯತೆ, ಗ್ರಾಮೀಣ ಪ್ರದೇಶದ ಕೊಡುಗೆಯ ಮಹತ್ವ, ಗ್ರಾಮೀಣ ಪರಂಪರೆಯ ವೈಶಿಷ್ಟ್ಯತೆಯನ್ನು ಈ ಹಾಸ್ಯ ಕಾರ್ಯಕ್ರಮ ಚಿತ್ರಿಸಿತು. ಜೊತೆಗೆ ಮೌಲಿಕ ಬದುಕಿನ ಕುರಿತ ಸಂದೇಶವನ್ನೂ ಅಭಿವ್ಯಕ್ತಿಸಿತು. ಕೇವಲ ಜ್ಯೋತಿಷ್ಯವನ್ನು ಮಾತ್ರ ನಂಬಿ ಕೂತರೆ ಸಾಲದು. ಜೊತೆಗೆ ಸ್ವ-ಪ್ರಯತ್ನವೂ ಬೇಕು ಎಂಬ ಉತ್ತಮ ಸಂದೇಶವನ್ನೊಳಗೊಂಡ ಹಾಸ್ಯವು ನೆರೆದಿದ್ದ ಜನರನ್ನು ನಗೆಕಡಲಲ್ಲಿ ತೇಲುವಂತೆ ಮಾಡಿತು. ರಂಗ್ದ ರಾಜೆ ಎಂದೇ ಪ್ರಸಿದ್ದರಾದ ಸುಂದರ್ ರೈ ಮಂದಾರ, ಕುಸಲ್ದ ಮುತ್ತು, ಅರುಣ್ ಚಂದ್ರ ಬಿ.ಸಿ.ರೋಡು ಮತ್ತು ತಂಡ ಹಾಗೂ ಕುಡ್ಲ ಕುಸಲ್ ತಂಡದ ಕಲಾವಿದರು ‘ತುಳು ಹಾಸ್ಯ ಲಹರಿ’…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಹೊಸಪೀಳಿಗೆಗೆ ಇಷ್ಟವಾಗುವ ಟ್ಯಾಟೋ ದೀರ್ಘಾವಧಿಯವರೆಗೆ ಇರುತ್ತದೆ. ಒಂದೇ ದಿನಕ್ಕೆ ಕಾಣಿಸಿಕೊಂಡು ಅಳಿಸಬಹುದಾದಂತಹ, ಟ್ಯಾಟೋವನ್ನೇ ಹೋಲುವಂಥ ಕಲಾಕೌಶಲ್ಯದ ಸ್ಪಾಟ್ ‘ಆರ್ಟ್’ನ ಪ್ರಯೋಜನದ ಅವಕಾಶ ಮೂಡಬಿದಿರೆಯ ಆಳ್ವಾಸ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಲಾಮೇಳದಲ್ಲಿ ಲಭಿಸುತ್ತಿದೆ. ಉಡುಪಿಯ ದೃಶ್ಯಕಲಾ ಮಂದಿರದ ವಿದ್ಯಾರ್ಥಿಗಳು ಮೂಡಿಸುತ್ತಿರುವ ಈ ಆರ್ಟ್ ಒಂದೇ ದಿನದಲ್ಲಿ ಅಳಿಸಿಹೋಗುತ್ತದೆ. ಇವರು ತಮ್ಮ ಕೈಚಳಕದಿಂದ ವಿಶೇಷ ಗಮನ ಸೆಳೆಯುತ್ತಿದ್ದಾರೆ. ಸ್ಥಳದಲ್ಲೇ ವಿಭಿನ್ನ ರೀತಿಯ ಆರ್ಟ್ಗಳನ್ನು ಕೈಮೇಲೆ ಬಿಡಿಸುತಿದ್ದಾರೆ. ಕೇವಲ ೨೦ ರುಪಾಯಿಗೆ ಕೈ ಮೇಲೆ ಇಷ್ಟದ ಚಿತ್ರಗಳನ್ನು ರೇಖಿಸುತ್ತಿದ್ದಾರೆ. ವಿದ್ಯಾರ್ಥಿಗಳು ಚಿತ್ರಕಲೆಗಳನ್ನು ಪ್ರದರ್ಶಿಸಲು ಮೇಳಕ್ಕೆ ಬಂದಿದ್ದು, ಇದೇ ಸಮಯದಲ್ಲಿ ತಮಗೆ ಗೊತ್ತಿರುವ ಕಲೆಯನ್ನು ಬಳಸಿಕೊಳ್ಳೋ ಉದ್ದೇಶದಿಂದ ಸ್ಪಾಟ್ ಆರ್ಟ್ ಬಿಡಿಸುತ್ತಿದ್ದಾರೆ. ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಹಲವಾರು ವಿದ್ಯಾರ್ಥಿಗಳು ಇದಕ್ಕೆ ಮಾರುಹೋಗಿ ತಮ್ಮ ಕೈಮೇಲೆ ವಿವಿಧ ಆರ್ಟ್ಗಳ ಚಿತ್ರಗಳನ್ನು ಬಿಡಿಸಿಕೊಳ್ಳುತ್ತಿದ್ದಾರೆ. ವಿವಿಧ ರೀತಿಯ ಚಿತ್ರಗಳು ಸಹ ಎಲ್ಲರ ಮನಸ್ಸನ್ನು ಗೆಲ್ಲುತ್ತಿವೆ. ಯಕ್ಷಗಾನ. ಪ್ರಕೃತಿಯ…
ಕಾರ್ತಿಕ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಸಾಂಸ್ಕೃತಿಕ ಜಾಂಬೂರಿಯಲ್ಲಿ ಮಳಿಗೆಯೊಂದರಲ್ಲಿ ಪ್ರಾಚ್ಯ ವಸ್ತುಸಂಗ್ರಾಹಕರಾದ ಹಳ್ಳಿಮನೆ ಹೈದರಾಲಿಯ ಈ ಪ್ರಾಚ್ಯ ವಸ್ತು ಸಂಗ್ರಹಾಲಯ ಗಮನಸೆಳೆಯುತ್ತಿದೆ. ಬ್ರಿಟಿಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ವಸ್ತುಗಳು ಇಲ್ಲಿವೆ. ರಾಜರುಗಳ ಆಡಳಿತದಲ್ಲಿ ಪ್ರಾಮುಖ್ಯ ಪಡೆದಿದ್ದ ಆಡಳಿತಾತ್ಮಕ ಚಿಹ್ನೆಗಳು ಗಮನ ಸೆಳೆಯುತ್ತಿವೆ. ಜನರು ಬಳಸುತ್ತಿದ್ದ ನಾಣ್ಯಗಳಿವೆ. ಟಿಪ್ಪು ಸುಲ್ತಾನ ಕಾಲದ ನಾಣ್ಯಗಳು, ದೇಶೀಯ ಮತ್ತು ವಿದೇಶಿ ನೋಟ್ಗಳಿವೆ. ಈ ನಾಣ್ಯಗಳು ಆಯಾ ಕಾಲದ ಬದುಕಿನ ಚಿತ್ರಣವನ್ನೂ ಕಟ್ಟಿಕೊಡುತ್ತಿವೆ. ಅಲ್ಲದೆ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ತಾಮ್ರ, ಹಿತ್ತಾಳೆ, ಮರದಿಂದ ಸಿದ್ಧಪಡಿಸಲಾದ ಉಪಕರಣಗಳು ಮತ್ತು ಅವುಗಳು ಬಳಕೆಯಾಗುತ್ತಿದ್ದ ರೀತಿಯ ಪ್ರಾತ್ಯಕ್ಷಿಕೆ ಇಲ್ಲಿದೆ. ವಿದ್ಯುತ್ ಬಳಸದೆಯೇ ಕಾರ್ಯನಿರ್ವಹಿಸುವಂಥ ಉಪಕರಣಗಳು ಕೈ ಮೂಲಕ ತಿರುಗಿಸುವ ಜೆರಾಕ್ಸ್ ಯಂತ್ರೋಪಕರಣಗಳನ್ನು ಕಾಣಬಹುದಾಗಿದೆ. ಬಂಗಾರ ತೂಗುವ ತಕ್ಕಡಿ, ಅಕ್ಕಿ ಅಳೆಯುವ ಶೇರು, ರಾಜರ ಕಾಲದಲ್ಲಿನ ಕತ್ತಿ, ಉಪ್ಪು ಹಾಕಿಡುವ ಮರಾಯಿ, ಚನ್ನೆಮಣೆ, ಶಾವಿಗೆ ಮಣಿ, ೧೦೦ ವರ್ಷಕ್ಕಿಂತ ಹಳೆಯ ಸೆಂಟ್ ಬಾಟಲ್ಗಳನ್ನ ಕಾಣಬಹುದು. ಟೆಲಿಫೋನ್ ಬಂದಾಗಿನಿಂದಲೂ ಇಲ್ಲಿನವರೆಗಿನ ಎಲ್ಲರೀತಿಯ…
ಭಾರತಿ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ಕಲಾಮೇಳದ ಭಾಗವಹಿಸಿರುವ ವಿವಿಧ ಮಳಿಗೆಗಳು ಜನರ ಪ್ರಮುಖ ಆಕರ್ಷಣೆಯಾಗಿವೆ. ಅವುಗಳಲ್ಲಿ ಮಣ್ಣಿನಿಂದ ಸಿದ್ಧಪಡಿಸಿದ ವಿವಿಧ ಬಗೆಯ ಮಡಿಕೆಗಳು, ದೇವರ ಮೂರ್ತಿಗಳು, ವಿಶೇಷ ಶೈಲಿಯ ಪೂಜಾ ಸಾಮಗ್ರಿಗಳು ಗಮನಸೆಳೆಯುತ್ತಿದೆ. ಈ ಎಲ್ಲಾ ಮಣ್ಣಿನ ಸಾಮಗ್ರಿಗಳು ಕಾಣುವ ಕಣ್ಣಿಗೆ ಎಷ್ಟು ಅಂದವೋ ಜೊತೆಗೆ ಪರಿಸರ ಸ್ನೇಹಿ ಮೌಲ್ಯವನ್ನು ಎತ್ತಿ ಹಿಡಿಯುವ ಕಲಾಕುಸುರಿಯಾಗಿದೆ. ಫೈಬರ್, ಸ್ಟೀಲ್ ಪಿಂಗಾಣಿ ಹೀಗೇ ಅದೆಷ್ಟೋ ಟ್ರೆಂಡ್ಗೆ ತಕ್ಕಂತಹ ಪಾತ್ರೆಗಳು ಬಂದರೂ ಇವತ್ತಿಗೂ ಅನೇಕರು ಮಣ್ಣಿನಿಂದ ಸಿದ್ಧವಾದ ಪಾತ್ರೆಗಳನ್ನೇ ಇಷ್ಟಪಡುತ್ತಾರೆ.ಇಂತಹದ್ದೇ ಪುಟ್ಟ ಪುಟ್ಟ ಟೆರ್ರಕೋಟ ಸಾಮಗ್ರಿಗಳು ಜಾಂಬೂರಿ ಅಂಗಳದಲ್ಲಿ ಕಣ್ಮನಸೆಳೆಯುತ್ತಿವೆ. ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸಣ್ಣ ಹಳ್ಳಿಯವರಾದ ರೇಣುಕಾ ಕುಂಬಾರ್ ಅವರು ಸ್ವತಃ ತಾವೇ ಸುಮಾರು ಹದಿನೈದು ವರ್ಷಗಳಿಂದ ಕುಂಬಾರಿಕೆ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ವಿವಿಧ ಆಕಾರದ ಮಣ್ಣಿನ ವಸ್ತುಗಳನ್ನು ತಯಾರಿಸುವುದೇ ಇವರ ಮುಖ್ಯ ಉದ್ಯೋಗವಾಗಿದೆ. ಭಾರತದಲ್ಲಿಯೇ ಮಣ್ಣಿನ ವಸ್ತುಗಳನ್ನು ಸಿದ್ಧಪಡಿಸಲು ದೊರಕುವ ಶ್ರೇಷ್ಠ…
ಸಿಂಧು ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಅಲ್ಲಿ ವಿದ್ಯಾರ್ಥಿಗಳು ಆಕಾಶಕ್ಕೆ ಏಣಿಹಾಕಿ ಮೇಲೇರುತ್ತಿದ್ದರು. ಹಗ್ಗದ ಮೇಲೆ ಸೈಕಲ್ ಓಡಿಸಿ ಹುಬ್ಬೇರಿಸುವಂತೆ ಸವಾಲುಗಳನ್ನು ಎದುರಿಸುತ್ತಿದ್ದರು. ಎದೆ ಝಲ್ ಎನ್ನಿಸುವ ಸರ್ಕಸ್ಗಳನ್ನು ಸಲೀಸಾಗಿ ಸಂಪೂರ್ಣಗೊಳಿಸಿ ವಿಶೇಷ ಬ್ಯಾಡ್ಜ್ ಪಡೆಯುವುದಕ್ಕಾಗಿ ಸಾಲುಗಟ್ಟಿದ್ದರು. ವಿದ್ಯಾರ್ಥಿಗಳಿಗೆ ಇಂಥದ್ದೊಂದು ಅವಕಾಶ ಒದಗಿಸಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಚಾಲೆಂಜ್ ವ್ಯಾಲಿ. ನಾನಾ ಬಗೆಯ ಸಾಹಸ ಕ್ರೀಡೆಗಳಿಗೆ ಚಾಲೆಂಜ್ ಹಾಕಿ ಕೈಬೀಸಿ ಕರೆಯುತ್ತಿದೆ ಜಾಂಬೂರಿಯ ಈ ಚಾಲೆಂಜ್ ವ್ಯಾಲಿ. ಒಟ್ಟು 35 ವಿಧದ ಕಸರತ್ತುಗಳಿರುವ ಈ ಕ್ರೀಡಾ ಲೋಕದಲ್ಲಿ ಪ್ರತಿನಿತ್ಯ 8ರಿಂದ ಇಂದ 10 ಸಾವಿರ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು ಡಿಸೆಂಬರ್ 26ರಿಂದ ಸಾರ್ವಜನಿಕರಿಗೂ ಮುಕ್ತ ಅವಕಾಶ ಒದಗಿಸಲಾಗುತ್ತದೆ. ಪ್ರತಿಯಂದು ಸಾಹಸಗಳು ನುರಿತರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಅಂತರಾಷ್ಟ್ರೀಯ ಸ್ಕೌಟ್ಸ್ ಸಹಾಯಕ ಆಯುಕ್ತ ಮಧುಸೂದನ, ರಾಷ್ಟ್ರೀಯ ನಿರ್ದೇಶಕ ಕೃಷ್ಣ ಸ್ವಾಮಿ, ಜಿಮ್ಮಿ ಸಿಕ್ವೇರ್ ಸೇರಿದಂತೆ ಹಲವರು ಸಾಹಸ ಕ್ರೀಡೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಟೈರ್…
