Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ನವದೆಹಲಿ: ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ನಿತ್ಯ ಆಗಮಿಸುವ ಲಕ್ಷಾಂತರ ಭಕ್ತರ ಪ್ರಯಾಣವನ್ನು ಮತ್ತಷ್ಟು ಸುಗಮ ಹಾಗೂ ಅನುಕೂಲಕರಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣನವರನ್ನು ಭೇಟಿ ಮಾಡಿ, ಮೂಕಾಂಬಿಕಾ ರಸ್ತೆ (ಬೈಂದೂರು) ರೈಲು ನಿಲ್ದಾಣವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ರೈಲು ನಿಲ್ದಾಣವಾಗಿ ಅಧಿಕೃತವಾಗಿ ಗುರುತಿಸುವಂತೆ ಮನವಿ ಸಲ್ಲಿಸಿದರು. ಮೂಕಾಂಬಿಕಾ ರಸ್ತೆ (ಬೈಂದೂರು) ರೈಲು ನಿಲ್ದಾಣ ದೇವಾಲಯದಿಂದ ಕೇವಲ 27 ಕಿ.ಮೀ. ದೂರದಲ್ಲಿದ್ದು, ಬೈಂದೂರಿನಿಂದ ಕೊಲ್ಲೂರಿಗೆ NH-766C ಮೂಲಕ ನೇರ ರಸ್ತೆ ಸಂಪರ್ಕ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸುಲಭ ಸೇವೆಯೂ ಲಭ್ಯವಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾ ಮತ್ತಿತರ ರಾಜ್ಯಗಳಿಂದ ರೈಲಿನ ಮೂಲಕ ಆಗಮಿಸುವ ಭಕ್ತರಿಗೆ ಬೈಂದೂರು ಹೆಚ್ಚು ಅನುಕೂಲಕರ ಮತ್ತು ಹತ್ತಿರದ ನಿಲ್ದಾಣವಾಗಿದೆ. ಬೈಂದೂರನ್ನು ಆದ್ಯತೆಯ ರೈಲು ನಿಲ್ದಾಣವಾಗಿ ಗುರುತಿಸುವುದರಿಂದ ಭಕ್ತರಿಗೆ ಕಡಿಮೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳಿಗೆ  ಕಲಿಯುವ ಛಲ ಇರಬೇಕು, ತಂದೆ- ತಾಯಿ ಅವರಿಗೆ ಸಪೋರ್ಟ್ ಮಾಡಬೇಕು. ಮಕ್ಕಳ ಒಳ್ಳೆಯ ಹವ್ಯಾಸಗಳಿಗೆ ಸಕರಾತ್ಮಕವಾದ ಅವಕಾಶ ಕಲ್ಪಿಸಿಕೊಡಬೇಕು ಆಗ ಮಾತ್ರ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಳುತ್ತಾರೆ ಎಂದು ಕನ್ನಡದ ಜನಪ್ರಿಯ ಪ್ರೇರಕ ಭಾಷಣಕಾರರಾದ ಡಾ. ರಾಹುಲ್ ದೇವರಾಜ್ ಹೇಳಿದರು. ಅವರು ಶುಕ್ರವಾರ ಜನತಾ ಪದವಿ ಪೂರ್ವ ಕಾಲೇಜ್ ಹೆಮ್ಮಾಡಿಯ ಪ್ರಥಮ ಪಿಯು ಮತ್ತು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಪೋಷಕರ ಸಭೆ ಜನತಾ ದಿಕ್ಸೂಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು. ಮಕ್ಕಳ ಜೀವನ ರಥ ಮುನ್ನೆಡೆಯಲು ಪೋಷಕರು ಶಿಕ್ಷಕರು ಇಬ್ಬರ ಪಾತ್ರ ಮುಖ್ಯವಾದುದು.ಪೋಷಕರು ಮನೆಯಲ್ಲಿ ತಮ್ಮ ಮಕ್ಕಳಿಗೆ ಓದುವ ವಾತಾವರಣ ಕಲ್ಪಿಸಿಕೊಡಬೇಕು, ಇಂದು ಮಕ್ಕಳು ಮತ್ತು ಹೆತ್ತವರ ಸಂಬಂಧದ ಮೌಲ್ಯ ಕಡಿಮೆಯಾಗುತ್ತಿದೆ . ಪೋಷಕರು ಮತ್ತು ಮಕ್ಕಳ ಸಂಬಂಧದ ಮೌಲ್ಯ ಜಾಸ್ತಿಯಾದಾಗ ಕಲಿಕೆ ಇನ್ನಷ್ಟು ಗಟ್ಟಿಯಾಗುತ್ತದೆ.ಮಕ್ಕಳು ನಾವು ಹೇಳಿದನ್ನು ಕೇಳುವುದಿಲ್ಲ ನಾವು ಮಾಡುದನ್ನು ಮಾಡುತ್ತಾರೆ ಎಂದು ಅವರು ಪ್ರೇರಣದಾಯಕ ಕಥೆಗಳ ಮೂಲಕ ತಿಳಿ ಹೇಳಿದರು. ಜನತಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ರಾಜಧಾನಿ ಬೆಂಗಳೂರಿನ ʼಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)ʼ ಪ್ರತಿ ವರ್ಷ ಆಚರಿಸುತ್ತಿರುವ ʼವಿಶ್ವ ಕುಂದಾಪ್ರ ಕನ್ನಡ ದಿನʼ ಬೆಂಗಳೂರಿನಲ್ಲಿ ಈ ಸಲ ಆಗಸ್ಟ್ 15ರ ಶನಿವಾರ ನಡೆಯಲಿದೆ. ʼವಿಶ್ವ ಕುಂದಾಪ್ರ ಕನ್ನಡ ದಿನ’ದ ಪ್ರಯುಕ್ತ ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದ್ದಾರೆ. ಕಾರ್ಯಕ್ರಮಗಳು: ಸಮಾರಂಭದಲ್ಲಿ ಕೆ.ಜಯಪ್ರಕಾಶ್ ಹೆಗ್ಡೆ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ, ಕೋಟ ಶ್ರೀನಿವಾಸ ಪೂಜಾರಿ, ಉಡುಪಿ-ಚಿಕ್ಕಮಗಳೂರು ಸಂಸದ, ಪ್ರಮೋದ್ ಶೆಟ್ಟಿ: ಖ್ಯಾತ ಚಿತ್ರನಟ ಭಾಗವಹಿಸಲಿದ್ದಾರೆ. ವಿಶ್ವ ಕುಂದಾಪ್ರ ಕನ್ನಡ ದಿನ:ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಏಳು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ʼವಿಶ್ವ ಕುಂದಾಪ್ರ ಕನ್ನಡ ದಿನʼ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 12ರಂದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗಳಿಗೆ ಸೇರಿದ ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಿ, ಶಿಷ್ಯವೇತನ ಮಂಜೂರು ಮಾಡಲು ಅರ್ಹ ಮತ್ತು ಆಸಕ್ತ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 10 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2574881, 2573881 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಭಾರತೀಯ ಅಂಚೆ ಇಲಾಖೆಯಲ್ಲಿ ಕಳೆದ 44 ವರ್ಷಗಳಿಂದ ಡಾಕ್ ಸೇವಕ್ ಆಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಗಂಗೊಳ್ಳಿ ಅಂಚೆ ಕಚೇರಿಯ ಇಮ್ತಿಯಾಜ್ ಅಹಮ್ಮದ್ ಅವರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು. ಕುಂದಾಪುರ ಅಂಚೆ ಉಪವಿಭಾಗದ ಎಎಸ್ಪಿ ಮಹೇಶ್ ಮತ್ತು ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಬ್ರೇಜ್ ಅವರು ಇಮ್ತಿಯಾಜ್ ಅಹಮ್ಮದ್ ಸಮ್ಮಾನಿಸಿ ಬೀಳ್ಕೊಟ್ಟರು. ಗಂಗೊಳ್ಳಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವೀಣಾ, ತ್ರಾಸಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಚೆನ್ನಯ್ಯ ಪೂಜಾರಿ, ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ಗಣೇಶ ನಾಯಕ್, ಅಂಜುಮಾನ್ ಉರ್ದು ಘೋಷಾ ಶಾಲೆಯ ಕಾರ್ಯದರ್ಶಿ ಉಮ್ಮರ್ ಬಾಷಾ ಸಾಹೇಬ್, ನಿವೃತ್ತ ಪೋಸ್ಟ್ ಮಾಸ್ಟರ್‌ಗಳಾದ ದೇವರಾಯ ಶೇರುಗಾರ್, ಉದಯ ಕುಮಾರ್ ಶೆಟ್ಟಿ, ಅಂಚೆ ಕಚೇರಿಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಅಂಚೆಪೇದೆ ಶ್ವೇತಾ ಸ್ವಾಗತಿಸಿದರು. ನಿವೃತ್ತ ಪೋಸ್ಟ್ ಮಾಸ್ಟರ್ ಸೀತಾರಾಮ ಗಾಣಿಗ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಈ ಸಮಾಜದಲ್ಲಿ ಯಾವುದೇ ವಸ್ತು ಕಳೆದುಕೊಂಡಾಗ ವೇಗವಾಗಿ ಮರೆತು ಬಿಡುವ ಕಾಲದಲ್ಲಿ ಸಂತೋಷ್ ಮೇಷ್ಟ್ರ್ ಹೆಸರನ್ನು ಸದಾಕಾಲ ನೆನಪುಳಿಯುವಂತೆ ಮಾಡುವ ಪಂಚವರ್ಣ ಕಾರ್ಯವೈಕರಿಗೆ ಮೆಚ್ಚುಗೆ ಸೂಚಿಸುತ್ತೇನೆ ಎಂದು ಸಾಹಿತಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಹೇಳಿದರು. ಅವರು ಬುಧವಾರ ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇಂಡಿಕಾ ಕಲಾಬಳಗ ಪಡುಕರೆ, ಜೈ ಹಿಂದ್ ಕ್ರಿಕೆಟಸ್೯ ಪಡುಕರೆ ಇವರ ಸಹಯೋಗದೊಂದಿಗೆ ನೆನಪಿನಂಗಳದಿ ಸಂತೋಷ್ ಮೇಷ್ಟ್ರು ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರ ಸಾಹಿತ್ಯಿಕ ಬದುಕು ಸೇರಿದಂತೆ ಅವರ ವಿವಿಧ ಕ್ಷೇತ್ರಗಳ ಆಯಾಮಗಳ ಕಾರ್ಯವೈಕರಿಯನ್ನು ನೆನಪಿಸುವ ಅಥವಾ ಅದರ ಬಗ್ಗೆ ಅಧ್ಯಯನದ ಮೂಲಕ ಒಂದೆಡೆ ರೂಪುಗೊಳಿಸಿ ಅವರ ಹೆಸರಿನಲ್ಲಿ ಉದಯೋನ್ಮುಖ ಸಾಹಿತಿಗಳ ಗುರುತಿಸುವ ಯೋಚನೆಗೆ ಬಣ್ಣ ಬಡಿಯುವ ಕಾರ್ಯ ಮಾಡೋಣ ಎಂದರಲ್ಲದೆ ಸಾಹಿತ್ಯಿಕ ಕ್ಷೇತ್ರದ ದಿನಗಳಲ್ಲಿ ನನ್ನ ಅವರ ಒಡನಾಟವನ್ನು ಸಂಸ್ಮರಣೆಯಲ್ಲಿ ತಿಳಿಯ ಪಡಿಸಿದರು. ಸಭೆಯಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಈ ಜೀವಜಗತ್ತಿಗೆ ಚೈತನ್ಯ ತುಂಬುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯವು ಸಮುದಾಯದ ಸಂವೇದನೆಯನ್ನು ಅರ್ಥ ಮಾಡಿಕೊಂಡು ಸ್ಪಂದಿಸುತ್ತಾ ಬಂದಿದೆ ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಡೀನ್ ಆಗಿರುವ ವಿಕ್ರಮ ವಿಸಾಜಿ  ಹೇಳಿದರು. ಅವರು ಗುರುವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಯ್ಕೆದಾರರ ಅನಿಸಿಕೆ ನೆಲೆಯಲ್ಲಿ ಮಾತನಾಡಿದರು. ಸಾಹಿತ್ಯವು ಸಾಮಾಜಿಕ ಮತ್ತು ಸಾಂಸ್ಕೃತಿಕ ಜನಜೀವನ, ಸ್ಥಿತಿ -ಗತಿ, ನಿಸರ್ಗ, ಜೀವನವನ್ನು ಕುರಿತು ಆಳವಾಗಿ ಸಂಯಮದಿಂದ ಗಮನಿಸುತ್ತದೆ. ಸಾಹಿತ್ಯವು ವ್ಯವಸ್ಥೆಯ ಆಂತರ್ಯವನ್ನು ಅರ್ಥ ಮಾಡಿಕೊಳ್ಳುತ್ತದೆ. ಅಂತಹ ಸೃಜನಾತ್ಮಕ ಅರ್ಥೈಸುವಿಕೆಯನ್ನು ಶ್ರೀಧರ ಬಳಗಾರ ಅವರ ‘ಮಾರ ಮಿಂದನು’ ಕಥಾ ಸಂಕಲನದ ಕಥಾವಸ್ತುವಿನಲ್ಲಿ ಕಾಣಬಹುದು. ಕಥಾಸಂಕಲನದಲ್ಲಿರುವ ಹಲವು ಕಥೆಗಳು ಈ ಸಾಮಾಜಿಕ ಬದುಕಿನ ಸ್ಥಿತ್ಯಂತರಗಳನ್ನು ಬಹಳ ಪ್ರಬುದ್ಧವಾಗಿ ಮನಸ್ಸಿಗೆ ತಟ್ಟುತ್ತದೆ. ಕಥೆಯ ಸೃಷ್ಟಿಯಲ್ಲಿ ಅಂತರಂಗವು ಸಮುದಾಯಕ್ಕೆ ಮತ್ತು ಅದರ ಬದಲಾವಣೆಗೆ ತೆರೆದುಕೊಳ್ಳುವ ಪರಿ ನಿಜಕ್ಕೂ ಬರಹಗಾರನ ಸಂವೇದನೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಾಳಾವರ ವರದರಾಜ ಎಂ. ಶೆಟ್ಟಿ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ ಮತ್ತು ಮಾದಕ ದ್ರವ್ಯ ವಿರೋಧಿ ಘಟಕದ ಆಶ್ರಯದಲ್ಲಿ ಮಾದಕ ಪದಾರ್ಥಗಳ ಬಳಕೆಯಿಂದ ಆರೋಗ್ಯ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಸಿ ಜಾಗೃತಿಯನ್ನು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಕುಂದಾಪುರ ಆರಕ್ಷಕ ಠಾಣೆಯ ಎ.ಎಸ್.ಐ ಶಾಂತರಾಜ ಬಿ.ಕೆ. ಯವರು ಮಾದಕ ಪದಾರ್ಥಗಳ ಬಳಕೆಯಿಂದ ತಾನು ಕೆಡುವುದಲ್ಲದೆ ತನ್ನ ಕುಟುಂಬ ಮತ್ತು ಸಮಾಜದ ಮೇಲೆ ಅನೇಕ ಕೆಟ್ಟ ಪರಿಣಾಮಗಳಾಗಿ ಬದುಕು ದುರ್ಲಭವಾಗುತ್ತದೆ. ಅದರಿಂದ ದೂರವಿರುವುದಲ್ಲದೆ ನಮಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಾಗರಾಜ ವೈದ್ಯ ಎಂ. ವಹಿಸಿದ್ಧರು. ಮಾದಕ ದ್ರವ್ಯ ವಿರೋಧಿ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಸಹಾಯಕ ಪ್ರಾದ್ಯಾಪಕರಾದ ತಂಗಮ್ಮ ಎ.ಎ. ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಎ. ಸ್ವಾಗತಿಸಿ, ಶೃತಿ ಆಚಾರ್ಯ ಎನ್. ಕೊನೆಯಲ್ಲಿ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ವಿವಿಧ ಸಾರ್ವಜನಿಕ ಸಂಸ್ಥೆಗಳಲ್ಲಿ ದುಡಿಯುವ ಬಡ ಕಾರ್ಮಿಕರಿಗೆ ಸಿಗುವ ಇಎಸ್‌ಐ ಸೌಲಭ್ಯಕ್ಕೆ ವೇತನದ ಮಿತಿಯನ್ನು 35,000 ರೂ.ಗಳಿಗೆ ಹೆಚ್ಚಿಸುವಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆಯಲ್ಲಿ ಆಗ್ರಹಿಸಿದರು. ನಿಯಮ 377ರಡಿ ಲೋಕಸಭೆಯಲ್ಲಿ ವಿಷಯ ಮಂಡಿಸಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಇಎಸ್‌ಐಗೆ ವೇತನ ಮಿತಿಯನ್ನು ಕನಿಷ್ಠ 35,000ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿದರು. ಸಾರ್ವಜನಿಕ ಸಂಸ್ಥೆಗಳಲ್ಲಿ ದುಡಿಯುವ ಬಡ ಕಾರ್ಮಿಕರಿಗೆ ಇಎಸ್‌ಐ ಉತ್ತಮವಾದ ಆರೋಗ್ಯ ವಿಮೆಯಾಗಿದ್ದು, ಇಎಸ್‌ಐನಿಂದ ಅನೇಕ ಕುಟುಂಬಗಳು ಆರೋಗ್ಯ ಸೇವೆ ಪಡೆದು ನೆಮ್ಮದಿಯಿಂದಿವೆ. ಆದರೆ ಇಎಸ್‌ಐ ಯೋಜನೆಯ ಆದಾಯ ಮಿತಿ ಮಾಸಿಕ 21,000ಕ್ಕೆ ಸೀಮಿತವಾಗಿದೆ ಎಂದು ಹೇಳಿದರು. ಇತ್ತೀಚಿಗೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಕನಿಷ್ಠ ವೇತನ ಹೆಚ್ಚಾದ ಹಿನ್ನೆಲೆಯಲ್ಲಿ 21,000ಕ್ಕಿಂತ ಹೆಚ್ಚು ವೇತನ ಪಡೆಯುವ ಕಾರ್ಮಿಕರು ಇಎಸ್‌ಐಯಿಂದ ವಂಚಿತರಾಗುತ್ತಿದ್ದಾರೆ. ಈ ಆರೋಗ್ಯ ವಿಮೆ ಯೋಜನೆ ನೌಕರರು ಮತ್ತು ಉದ್ಯೋಗ ನೀಡುವ ಸಂಸ್ಥೆಗಳು ಒಟ್ಟಾಗಿ ಪ್ರೀಮಿಯಂ ಪಾವತಿಸುವ ಮೂಲಕ ಒದಗುವ ಯೋಜನೆಯಾದ್ದರಿಂದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ “ ವಸ್ತ್ರಭಾರತಿ 2026 – ಅಂತರ್ ತರಗತಿ ದೇಶಭಕ್ತಿ ಫ್ಯಾಷನ್ ಪೆರೇಡ್” ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ, ತಂಡ ಭಾವನೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ತರಗತಿಗಳ 23 ತಂಡಗಳು ಉತ್ಸಾಹದಿಂದ ಭಾಗವಹಿಸಿದವು. ವಿದ್ಯಾರ್ಥಿಗಳ ಉತ್ಸಾಹಭರಿತ ಪ್ರದರ್ಶನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಉಡುಪುಗಳ ಮೂಲಕ ಕೇವಲ ಫ್ಯಾಷನ್ ಪ್ರದರ್ಶನವನ್ನಷ್ಟೇ ಮಾಡದೆ, ಭಾರತದ ವೈವಿಧ್ಯತೆ, ಸಂಸ್ಕೃತಿ, ಪರಂಪರೆ ಮತ್ತು ದೇಶಭಕ್ತಿಯ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಿದರು. ಅಲ್ಲದೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳು, ಸ್ವಾತಂತ್ರ್ಯ ಹೋರಾಟಗಾರರ ಪ್ರತಿರೂಪಗಳು, ತ್ರಿವರ್ಣ ಧ್ವಜದ ಸ್ಫೂರ್ತಿಯ ವಿನ್ಯಾಸಗಳು ಹಾಗೂ ಪರಿಸರ ಸ್ನೇಹಿ ದೇಶಭಕ್ತಿ ಸಂದೇಶ ಸಾರುವ ಉಡುಪುಗಳ ಮೂಲಕ ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ…

Read More