Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಉಡುಪಿ ನಗರಸಭೆಯ 2024-25 ನೇ ಸಾಲಿನ ವಿವಿಧ ಕಾರ್ಯಕ್ರಮದಡಿ ಮೀಸಲಿರಿಸಿದ ಅನುದಾನದ ಉಳಿಕೆ ಮೊತ್ತವಾದ ಎಸ್.ಎಫ್.ಸಿ ಅನುದಾನದ ಶೇ. 5ರ ವಿಕಲಚೇತನ ಕಾರ್ಯಕ್ರಮದಡಿ ಸಣ್ಣ ಉದ್ದಿಮೆ, ಮನೆ ದುರಸ್ಥಿ, ಕೃತಕ ಅಂಗ ಜೋಡಣೆ / ಶಸ್ತ್ರಚಿಕಿತ್ಸೆಗೆ ಧನಸಹಾಯ, ರಾಜ್ಯ, ರಾಷ್ಟೀಯ ಮಟ್ಟದ ಕ್ರೀಡೆ / ಸಾಂಸ್ಕೃತಿಕ ಹಾಗೂ ಇತರೆ ವ್ಯಾಸಾಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಎಸ್.ಎಸ್.ಎಲ್.ಸಿ ಯಿಂದ ಮಾಸ್ಟರ್ ಡಿಗ್ರಿವರೆಗಿನ ವಿದ್ಯಾರ್ಥಿಗಳಿಗೆ ಸಹಾಯಧನಕ್ಕೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅದೇ ರೀತಿ ಎಸ್.ಎಫ್.ಸಿ / ಮುಕ್ತನಿಧಿ ಮತ್ತು ಪುರಸಭಾ ನಿಧಿಯ ಶೇ. 7.25 ರ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮ, ಪ.ಜಾತಿ/ಪಂಗಡದ ಕಲ್ಯಾಣ ಕಾರ್ಯಕ್ರಮ ಹಾಗೂ ಟಿ.ಎಸ್.ಪಿ (ಪ.ಪಂಗಡದ ಅನುದಾನ) ಕಾರ್ಯಕ್ರಮದಡಿ ಪಿ.ಯು.ಸಿ ಯಿಂದ ಉತ್ತೀರ್ಣರಾದ ಪದವಿ, ಬಿ.ಎ, ಬಿಎಸ್‌ಸಿ, ಬಿಕಾಂ, ಬಿಬಿಎ, ಬಿಬಿಎಂ, ಬಿಸಿಎ ಇತರೆ ಪದವಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಎಸ್.ಎಸ್.ಎಲ್.ಸಿ ಯಿಂದ ಉತ್ತೀರ್ಣರಾದ ಪಿ.ಯು.ಸಿ, ಐ.ಟಿ.ಐ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಯ್ಯಪ್ಪ ವ್ರತಧಾರಿಗಳು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವೇಳೆ ಹಿಂದಿನಿಂದ ಬಂದ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಅಯ್ಯಪ್ಪ ಮಾಲಾಧಾರಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಹಾಡಿಮನೆ ಸುರೇಂದ್ರ ಮೊಗವೀರ (35) ಎಂದು ಗುರುತಿಸಲಾಗಿದೆ. ಕೋಟೇಶ್ವರದಿಂದ ಹೆದ್ದಾರಿ ಮೂಲಕ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇಗುಲದೆಡೆಗೆ ಸುಮಾರು 15 ಮಂದಿ ಅಯ್ಯಪ್ಪ ಮಾಲಾಧಾರಿಗಳು ಕಾಲ್ನಡಿಗೆ ಮೂಲಕ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಸ್ಥಳೀಯರು ತತ್ ಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಮತ್ತೋರ್ವ ಅಯ್ಯಪ್ಪ ವ್ರತಧಾರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ. ಅವರು ತಂದೆ, ತಾಯಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕನ್ನಡ ಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಕೊಡುಗೆ ಬಹುದೊಡ್ಡದು ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆಯ 50ನೇ ವರ್ಷಾಚರಣೆಯ ಅಂಗವಾಗಿ “ಸುವರ್ಣಾಕ್ಷ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಕಲೆ ಯಕ್ಷಗಾನ. ಏಕೆಂದರೆ ಈ ಕಲೆಯಲ್ಲಿ ಹಾಡು, ಕುಣಿತ, ತಾಳ , ಮೇಳ, ಭಾವ, ಕಥೆ, ಜ್ಞಾನ, ಸಂಸ್ಕಾರ ಹೀಗೆ ಕಲಾತ್ಮಕವಾದ ಎಲ್ಲಾ ಸಂಗತಿಗಳು ಒಟ್ಟುಗೂಡಿ ಪ್ರದರ್ಶನಗೊಳ್ಳುತ್ತದೆ ಯು. ಅಲ್ಲದೆ ಶುದ್ಧವಾದ ಕನ್ನಡವನ್ನು ಮಾತ್ರ ಬಳಸುವ ಏಕೈಕ ಕಲೆ. ಇಂತಹ ಸಮೃದ್ಧ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಆ ಮೂಲಕ ಶಾಶ್ವತವಾಗಿಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಉಡುಪಿ ಜಿಲ್ಲೆ ಯಕ್ಷಗಾನ ಕಲೆಯನ್ನು ಉಳಿಸಿವ ಉತ್ಸಾಹದಲ್ಲಿದ್ದೇವೆ. ಶಾಲೆಗಳಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸರ್ದಾರ್ ವಲ್ಲಬಾಯಿ ಪಟೇಲ್ ರ 150 ನೇ ಜನ್ಮ ದಿನದ ಅಂಗವಾಗಿ ನವೆಂಬರ್ 11 ರಂದು ಏಕತಾ ನಡಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಶಿಸ್ತುಬದ್ಧವಾಗಿ ಕಾರ್ಯಕ್ರಮ ಆಯೋಜಿಸುವಂತೆ ಅಧಿಕಾರಿಗಳಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕತಾ ನಡಿಗೆ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಕತಾ ನಡಿಗೆ ಕಾರ್ಯಕ್ರಮವು ನವೆಂಬರ್ 11 ರಂದು ನಗರದ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಭುಜಂಗ ಪಾರ್ಕಿನ ಹುತಾತ್ಮರ ಯುದ್ಧ ಸ್ಮಾರಕದವರೆಗ ನಡೆಯಲಿದ್ದು, ಅಂದು ಬೆಳಗ್ಗೆ 7.30 ಕ್ಕೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಏಕತಾ ನಡಿಗೆ ಜಾಥಾಗೆ ಚಾಲನೆ ನೀಡಲಾಗುವುದು. ಜಾಥಾ ಸಮಾರೋಪಗೊಳ್ಳುವ ಭುಜಂಗ ಪಾರ್ಕಿನ ಗಾಂಧಿಕಟ್ಟೆಯಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಜೀವನ ಸಾಧನೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಹಾಗೂ ಸರಕಾರಿ ಪ್ರೌಢಶಾಲೆ ವಕ್ವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ, ಕುಂದಾಪುರ ತಾಲೂಕು ಮಟ್ಟದ 14  ರಿಂದ 17 ವರ್ಷ ವಯೋಮಾನದ ಬಾಲಕ- ಬಾಲಕಿಯರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಮದರ್ ತೆರೇಸಾ ವಿದ್ಯಾ ಸಂಸ್ಥೆಯ 7ನೇ ತರಗತಿಯ ಕ್ರೀಡಾಪಟು ಸೃಜನ್‌ಗೆ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಡೆದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕ ಪಡೆದು, ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾನೆ. ಮದರ್ ತೆರೇಸಾ ಶಿಕ್ಷಣ ಸಂಸ್ಥೆಗೆ ಹೆಸರು ತಂದಿರುವ ಈ ಅತ್ಯುತ್ತಮ ಆಟಗಾರನಿಗೆ ಹಾಗೂ ಅವನಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕರಿಗೆ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಶಾಲಾ ಆಡಳಿತ ಮಂಡಳಿ, ಪಿಯು ವಿಭಾಗದ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯಿನಿ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಎಲ್ಲಾ ಸಿಬ್ಬಂದಿಗಳು ಅಭಿನಂದಿಸಿ, ಮುಂದಿನ ಹಂತಕ್ಕೆ ಶುಭಕೋರಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್ ಅವರಿಗೆ ಪ್ಲಸ್ ನೈನ್ ಒನ್ ಮೀಡಿಯಾ ಬೆಂಗಳೂರು ಅವರು ಆಯೋಜಿಸಿದ್ದ ಒಂಬತ್ತನೇ ಉನ್ನತ ಶಿಕ್ಷಣ ನಾವೀನ್ಯತೆ ಮತ್ತು ತಂತ್ರಜ್ಞಾನ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಂಸ್ಥಿಕ ಶ್ರೇಷ್ಠತೆಗಾಗಿ ವರ್ಷದ ಪ್ರಾಂಶುಪಾಲರು ಎಂದು ಗುರುತಿಸಲ್ಪಟ್ಟು ಗೌರವಿಸಲ್ಪಟ್ಟಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಯಳಜಿತ ಗ್ರಾಮದ ರಾ.ಹೆ. 766Cರ ಗೋಳಿಮರ ಕ್ರಾಸ್ ಬಳಿ ಕಿಯಾ ಸಲೂನ್‌ ಕಾರಿಗೆ, ಸುಜುಕಿ ಸ್ಕೂಟರ್‌ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರನಿಗೆ ಗಂಭೀರ ಗಾಯಗಳಾಗಿದ್ದರೇ, ಸಹಸವಾರೆ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಬ್ರಹ್ಮಾವರದಿಂದ ಕೊಲ್ಲೂರು ಮಾರ್ಗವಾಗಿ ಗೋಳಿಹೊಳೆಯಲ್ಲಿರುವ ಅವರ ಸಂಭಂದಿಕರ ಮನೆಗೆ ಕುಟುಂಬಿಕರು ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಸುಜುಕಿ ಸ್ಕೂಟರ್‌ ಸವಾರ ಸುಭಾನ್‌ ಗೋಳಿಮರ ಕ್ರಾಸ್ ಬಳಿ ತನ್ನ ಸ್ಕೂಟರನ್ನು ತೀರ ಬಲ ಬದಿಗೆ ಚಲಾಯಿಸಿ ಫಿರ್ಯಾಧಿದಾರರ ಕಾರಿಗೆ ಎದುರಿನಿಂದ ಗುದ್ದಿದ್ದ ಪರಿಣಾಮ ಸ್ಕೂಟರ್‌ ಸವಾರ ಮತ್ತು ಸಹಸವಾರ ಇಬ್ಬರು ರಸ್ತೆಗೆ ಬಿದ್ದಿದ್ದರು. ಸವಾರ ಹೆಲ್‌ ಮೇಟ್‌ ಧರಿಸಿದ್ದು ಆತನ ಕಾಲು ಮತ್ತು ಭುಜಕ್ಕೆ ಪೆಟ್ಟಾಗಿದ್ದು ಹಾಗೂ ಸಹ ಸವಾರಳಿಗೆ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿರುತ್ತದೆ. ಇಬ್ಬರನ್ನೂ ಸ್ಥಳೀಯರು ಉಪಚರಿಸಿ 108 ಅಂಬುಲೆನ್ಸ್ ಮೂಲಕ ಕುಂದಾಪುರ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ನಂತರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಉಪ್ಪುಂದ ಶ್ರೀ ದುರ್ಗಾ ಫ್ರೆಂಡ್ಸ್ ರಥಬೀದಿ ಅಧ್ಯಕ್ಷರಾಗಿ ಕೇಶವ ದೇವಾಡಿಗ ಬಾಕಿಮನೆ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸ್ವಚ್ಛತಾ ಅಭಿಯಾನ ಸಂಘ ಸಂಸ್ಥೆಗಳಿಗೆ ಸೀಮಿತಗೊಳ್ಳದೆ ಪ್ರತಿ ಮನೆಯಲ್ಲೂ ಇದರ ಬಗ್ಗೆ ಜಾಗೃತಿ ಮೊಳಗಬೇಕು. ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ನಿರ್ದೇಶಕ ಜಿ. ತಿಮ್ಮ ಪೂಜಾರಿ ಕರೆ ನೀಡಿದರು. ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ,ಗೀತಾನಂದ ಟ್ರಸ್ಟ್ ಪಡುಕರೆ, ಸಮುದ್ಯತಾ ಗ್ರೂಪ್ಸ್ ಕೋಟ, ಜೆಸಿಐ ಸಿನಿಯರ್ ಕೋಟ ಲಿಜನ್ ಸಹಯೋಗದೊಂದಿಗೆ ಕೋಟ ಗ್ರಾ.ಪಂ ಸಂಯೋಜನೆಯೊಂದಿಗೆ 278ನೇ ಭಾನುವಾರದ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದರು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರು ಅರಿತು ಅದರ ಬಗ್ಗೆ ಜಾಗೃತರಾಗುವುದು ಒಳಿತು ಎಂದು ಪಂಚವರ್ಣ ನಿರಂತರ ಸಾಮಾಜಿಕ ಹಾಗೂ ಸ್ವಚ್ಛತಾ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಕೋಟದ ಮೂಡುಗಿಳಿಯಾರು ರಸ್ತೆ, ಗಿಳಿಯಾರು ಶಾಲಾ ವಠಾರ ಭಾಗದಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ನೀಡಿದಾಗ ಮಕ್ಕಳು ಬೌದ್ಧಿಕವಾಗಿ ಬೆಳೆಯಲು ಸಾಧ್ಯ. ಹೀಗಾಗಿ ಮಕ್ಕಳಿಗೆ ನೀಡಿದ ಈ ಅವಕಾಶ ಪ್ರಶಂಸನೀಯ ಎಂದು ಗುತ್ತಿಗೆದಾರರಾದ ಯಡಾಡಿ-ಮತ್ಯಾಡಿಯ ಲಯನ್ ಅರುಣ್ ಕುಮಾರ್ ಹೆಗ್ಡೆ ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ಉಗಮ-2025’ರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರೇಷ್ಮಾ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಕಾರ್ಯದರ್ಶಿ ಆಕಾಶ್ ಬಿ. ಶೆಟ್ಟಿ, ಎಸ್ಕ್ಯೂಎಸಿ ಪ್ರತಿನಿಧಿ ನಿರೀಕ್ಷಾ ಉಪಸ್ಥಿತರಿದ್ದರು. ಕಾಲೇಜಿನ ಐಕ್ಯೂಎಸಿ ಸಂಯೋಜಕಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ದೀಪಿಕಾ ಜಿ. ಅತಿಥಿಗಳನ್ನು ಪರಿಯಿಸಿದರು. ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಜಿ. ರಾವ್ ಸ್ವಾಗತಿಸಿ, ನಿರೂಪಿಸಿದರು. ಆಡಳಿತ ನಿಕಾಯಕರಾದ ರಕ್ಷಿತ್ ರಾವ್ ಗುಜ್ಜಾಡಿ…

Read More