ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ದೇಶ ಪ್ರೇಮದ ಸ್ಫೂರ್ತಿ ಕಡಿಮೆಯಾಗುತ್ತಾ ಬರುತ್ತಿದೆಯೋ ಎಂಬ ಕಾಳಜಿ ಸಹಜವಾದರೂ ಆಸಕ್ತ ಪ್ರಜೆಗಳು ತಮ್ಮ ವೃತ್ತಿ ಪ್ರವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ತೋರಿ ಇತರರಿಗೆ ಮಾದರಿಯಾದರೆ ಸಹಜವಾಗಿ ಅವರಿಂದ ಪ್ರೇರಣೆ ಪಡೆದವರು ದೇಶ ಪ್ರೇಮಿಗಳಾಗುತ್ತಾರೆ. ನಮ್ಮ ದೇಶದ ಸಂಸ್ಕೃತಿ, ಕೌಶಲ್ಯಗಳನ್ನು ನಾಶ ಮಾಡಲು ತುಂಬ ಆಕ್ರಮಣಕಾರರು ಪ್ರಯತ್ನ ಪಟ್ಟರೂ ಆಗಲಿಲ್ಲ. ಅಲೆಕ್ಸಾಂಡರ್ ಕಥೆ ಅದಕ್ಕೆ ತಕ್ಕ ಉದಾಹರಣೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಆಕ್ರಮಣಗಾರರನ್ನು ಪರಿಚಯಿಸಿದಷ್ಟು ನಮ್ಮ ದೇಶಕ್ಕಾಗಿ ಹೋರಾಡಿದವರನ್ನು ಮಕ್ಕಳಿಗೆ ಪರಿಚಯಿಸಲಿಲ್ಲ. ನಮ್ಮದೇ ಪರಿಸರದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆ ತಿಳಿದಿಲ್ಲ. ದೇಶ ಪ್ರೇಮ ನಮ್ಮ ಹೃದಯದಿಂದಲೇ ಸ್ಪುರಿಸಬೇಕೇ ಹೊರತು ಯಾರ ಒತ್ತಡದಿಂದಲ್ಲ. ಎಂದು ಸ್ವರಾಜ್ಯ 75ಸಂಘಟನೆಯ ಸ್ಥಾಪಕ ಪ್ರದೀಪ್ ಬಸ್ರೂರು ಹೇಳಿದರು. ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ ದೇಶ ಪ್ರೇಮ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡುತ್ತಿದ್ದರು. ನಮ್ಮ ಜಿಲ್ಲೆಯಲ್ಲಿ ನೂರಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರಿದ್ದು ೫೬ ಸ್ವಾತಂತ್ರ್ಯ ಹೋರಾಟಗಾರರ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ.17: ವಾರಾಹಿ ನೀರಾವರಿ ಯೋಜನೆಯನ್ನು ಆರಂಭಿಸಿರುವುದೇ ಕುಂದಾಪುರ ವಿಧಾನಸಭಾ ಕ್ಷೇತ್ರ, ಬೈಂದೂರು ಹಾಗೂ ಹಿಂದಿನ ಬಹ್ಮಾವರ ಕ್ಷೇತ್ರಗಳ ಕೃಷಿ ಭೂಮಿಗೆ ನೀರಾವರಿ ಒದಗಿಸುವುದಕ್ಕಾಗಿ. ಆದರೆ ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಬೇರೆ ಕಡೆಗಳಿಗೆ ವಾರಾಹಿ ಯೋಜನೆಯ ನೀರನ್ನೇ ಕೊಂಡೊಯ್ಯಲಾಗುತ್ತಿದೆ. ಕುಡಿಯುವ ನೀರು ಒದಗಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಇದರ ಹೆಸರಿನಲ್ಲಿ ವಾರಾಹಿ ಅಚ್ಚುಕಟ್ಟು ಪ್ರದೇಶದವರನ್ನು ನಿರ್ಲಕ್ಷಿಸಿದ್ದಲ್ಲದೇ, ವಾರಾಹಿ ನೀರಾವರಿ ಯೋಜನೆಯನ್ನೇ ಮುಗಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪ್ಚಂದ್ರ ಶೆಟ್ಟಿ ಆರೋಪಿಸಿದರು. ಅವರು ಇಲ್ಲಿನ ಆರ್.ಎನ್. ಶೆಟ್ಟಿ ಮಿನಿ ಹಾಲ್ನಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಉಡುಪಿ, ಕಾರ್ಕಳ ಹಾಗೂ ಶಿವಪುರಕ್ಕೆ ಕುಡಿಯುವ ನೀರು ಪೂರೈಸುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ವಾರಾಹಿ ಅಚ್ಚುಕಟ್ಟು ಪ್ರದೇಶದವರನ್ನು ನಿರ್ಲಕ್ಷಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಮೂಲ ಯೋಜನೆಯಲ್ಲಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ನಡೆಯುವ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆ ಕೆ-ಸಿಇಟಿ ಫಲಿತಾಂಶದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಐಶ್ವರ್ಯ ಖಾರ್ವಿ B.sc Agri-450,BNYS-1050,ಇಂಜಿನಿಯರಿಂಗ್-1189 ರ್ಯಾಂಕ್ ಗಳನ್ನು,ನೇಶಲ್ -ಇಂಜಿನಿಯರಿಂಗ್ 1966ನೇ ರ್ಯಾಂಕ್, ಆಯುಷ್ ಜೆ.ಸಿ- ಇಂಜಿನಿಯರಿಂಗ್ -2060ನೇ ರ್ಯಾಂಕ್, ತಿಲಕ್ ಇಂಜಿನಿಯರಿಂಗ್-2500ನೇ ರ್ಯಾಂಕ್, ಧನುಷ್ಯ-ಇಂಜಿನಿಯರಿಂಗ್-3958ನೇ ರ್ಯಾಂಕ್, ಸುಮಂತ್- ಇಂಜಿನಿಯರಿಂಗ್-4062ನೇ ರ್ಯಾಂಕ್, ಓಂಕಾರ್ ಪ್ರಭು-ಇಂಜಿನಿಯರಿಂಗ್-4203ನೇ ರ್ಯಾಂಕ್,ಸಂಪದ-ಇಂಜಿನಿಯರಿಂಗ್-5620ನೇ ರ್ಯಾಂಕ್, ತನಿಷಾ-ಇಂಜಿನಿಯರಿಂಗ್-5923ನೇ ರ್ಯಾಂಕ್ ಶ್ರೀಶ್ ಶೆಟ್ಟಿ-6560ನೇ ರ್ಯಾಂಕ್ಗಳನ್ನು ಪಡೆದು ಅರ್ಹತೆಯನ್ನು ಪಡೆದಿರುತ್ತಾರೆ. 100ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,40ಕ್ಕೂ ಹೆಚ್ಚು ವಿದ್ಯಾರ್ಥಿಗಳು 10,000 ಒಳಗಿನ ರ್ಯಾಂಕ್ಗಳನ್ನು ಪಡೆದಿರುತ್ತಾರೆ. ಕಾಲೇಜು ಪ್ರಾರಂಭದ ಪ್ರಥಮ ವರ್ಷದಲ್ಲಿಯೇ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ‘ಯುವ ಮೆರಿಡಿಯನ್’ ಮಾಲೀಕರಾದ ಉದಯ್ ಕುಮಾರ್ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದ ಸುಮಾರು 21,000 ರೂಪಾಯಿ ಮೌಲ್ಯದ ಬ್ಯಾಗುಗಳನ್ನು ಶನಿವಾರ ವಿತರಿಸಲಾಯಿತು. ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ ಗಾಣಿಗ ಹಾಗೂ ಮಾಜಿ ಎಸ್ಡಿಎಂಸಿ ಅಧ್ಯಕ್ಷರಾದ ವೀರಭದ್ರ ಗಾಣಿಗ ಬ್ಯಾಗುಗಳನ್ನು ವಿತರಿಸಿದರು. ಈ ಕೊಡುಗೆ ಶಾಲೆಗೆ ತರುವಲ್ಲಿ ಶ್ರಮಿಸಿದ ಮಾಧ್ಯಮ ಪ್ರತಿನಿಧಿ ಮಂಜುನಾಥ ಗಾಣಿಗ, ತಿರುಮಲ ಎಫ್.ಸಿ ಫ್ರೆಂಡ್ಸ್ ತಗ್ಗರ್ಸೆ ಸದಸ್ಯರಾದ ಹರ್ಷೇಂದ್ರ , ದಿಲೀಪ್ ಕುಮಾರ್, ಅಣ್ಣಪ್ಪ ಎಸ್. ಉಪಸ್ಥಿತರಿದ್ದರು. ಈ ವೇಳೆ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸಂತ ಮೇರಿ ಪ ಪೂ ಕಾಲೇಜಿನಲ್ಲಿ ಶನಿವಾರ ಪ್ರಸಕ್ತ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಸಂತ ಮೇರಿ ಪ.ಪೂ ವಿದ್ಯಾಸಂಸ್ಥೆಗಳ ಸಂಚಾಲಕರಾದ ಫಾದರ್ ಸ್ಟ್ಯಾನಿ ತಾವರೊ ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ,ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮುಖ್ಯ. ಪರಸ್ಪರ ತಮ್ಮನ್ನು ವಿಮರ್ಶಿಸಿಕೊಳ್ಳಬೇಕು. ಶಿಸ್ತು ಜೀವನದ ಅತಿ ಮುಖ್ಯ ಅಂಗ ಎನ್ನುತ್ತಾ ಸಂಸ್ಥೆಯಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಸಂತ ಜೋಸೆಫ ಕಾನ್ವೆಂಟಿನ ಸುಪಿರಿಯರ್ ಸಿಸ್ಟರ್ ಸುಪ್ರಿಯ ಎ. ಸಿ ಅವರು ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅನೇಕ ಮೌಲ್ಯಯುತ ಪ್ರಶ್ನೆಗಳನ್ನು ಕೇಳಿ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಪೆನ್ನನ್ನು ನೀಡಿ ಹುರಿದುಂಬಿಸಿದರು. ಅವರು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರು ಉತ್ತಮವಾಗಿ ಕಲಿಯಬೇಕು. ಒಬ್ಬರನೊಬ್ಬರು ಗೌರವಿಸಬೇಕು.ತಾವೆಲ್ಲರೂ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಬೇಕು ಎಂದರು. ಇದೆ ವೇಳೆ ಕಛೇರಿ ಸಹಾಯಕ ಗುಮಾಸ್ತರಾಗಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮೇಬಲ್ ಡಿಸೋಜಾರವರನ್ನು ಅವರನ್ನು ಸನ್ಮಾನಿಸಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ 2023) ಫಲಿತಾಂಶವು ಬಿಡುಗಡೆಯಾಗಿದ್ದು, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು ಸಿ.ಇ.ಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಸಿ.ಇ.ಟಿ 2023 ರ ಪರೀಕ್ಷೆಗೆ ಕುಳಿತ 123 ವಿದ್ಯಾರ್ಥಿಗಳ ಪೈಕಿ, ಲತೀಫಾ ರಫಾ 897 ರ್ಯಾಂಕ್ನೊಂದಿಗೆ ಅತ್ಯುತ್ತಮ ಸಾಧನೆಯನ್ನು ತೋರಿದ್ದಾರೆ. ಅನ್ವಿತ್ ಶೆಟ್ಟಿ 1042 ರ್ಯಾಂಕ್ ಪಡೆಯುವುದರ ಮೂಲಕ ನಮ್ಮ ಸಂಸ್ಥೆಗೂ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ. ನಮ್ಮ ಸಂಸ್ಥೆಯ ಅನುಶ್ರೀ ಶೆಟ್ಟಿ 1420 ನೇ ರ್ಯಾಂಕ್, ಪುರುಷೋತ್ತಮ್ 1763 ನೇ ರ್ಯಾಂಕ್ , ಶ್ರೀನಿಧಿ ಶೆಟ್ಟಿ 1977 ನೇ ರ್ಯಾಂಕ್, ನಿಹಾಲ್ ಎನ್ ಶೆಟ್ಟಿ 2235 ನೇ ರ್ಯಾಂಕ್ , ಸಿಂಚುಶ್ರೀ ಎನ್ 2284 ನೇ ರ್ಯಾಂಕ್, ಸಂಚಿತಾ ವೈ ಎಮ್. 2499 ನೇ ರ್ಯಾಂಕ್ , ಪ್ರಣೀತಾ 2502 ನೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ.16: ಪಶ್ಚಿಮ ವಲಯದ 32 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಗಳನ್ನು ವರ್ಗಾವಣೆ ಮಾಡಿ ಐಜಿಪಿ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಕುಂದಾಪುರ ನಗರ ಪೊಲೀಸ್ ಠಾಣೆಗೆ ವಿನಯ್ ಕೊರ್ಲಹಳ್ಳಿ, ಗಂಗೊಳ್ಳಿ ಪೊಲೀಸ್ ಠಾಣೆಗೆ ಹರೀಶ್ ನಾಯ್ಕ್, ಶಂಕರನಾರಾಯಣ ಪೊಲೀಸ್ ಠಾಣೆಗೆ ನಾಸೀರ್ ಹುಸೇನ್, ಕೊಲ್ಲೂರು ಪೊಲೀಸ್ ಠಾಣೆಗೆ ಜಯಶ್ರೀ ಅವರನ್ನು ವರ್ಗಾಯಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ: ತಾಲೂಕಿನ ಬೇಳೂರು ಗ್ರಾಮದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಮೂರು ಗೋವುಗಳನ್ನು ಸಾಗಿಸುತ್ತಿರುವ ವೇಳೆ ಪತ್ತೆ ಹಚ್ಚಿ ಗೋವುಗಳನ್ನು ರಕ್ಷಿಸಲಾಗಿದೆ. ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಕೋಟ ಪೊಲೀಸರು ಮೂರು ಗೋವುಗಳನ್ನು ರಕ್ಷಿಸಿದ್ದಾರೆ. ಹಸುಗಳನ್ನು ಏಸ್ ಗಾಡಿಯಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಮಧುವನ ಮಾರ್ಗವಾಗಿ ಸಾಗಿಸುತ್ತಿರುವ ವೇಳೆಯಲ್ಲಿ ಸ್ಥಳೀಯರ ಮಾಹಿತಿಯಂತೆ ಗಸ್ತಿನಲ್ಲಿದ್ದ ಎಎಸ್ಐ ಗಣೇಶ್ ಪೈ ಹಾಗೂ ಸಿಬ್ಬಂದಿಗಳು ವಾಹನವನ್ನು ಬೆನ್ನಟ್ಟಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಹಸುಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ವತಿಯಿಂದ ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಇಲ್ಲಿ ಹಮ್ಮಿಕೊಂಡ ರಕ್ತದಾನ ಕ್ಷೇತ್ರದ ಸಾಧಕರಿಗೆ ಸನ್ಮಾನ, ಈ ವೇದಿಕೆಯಲ್ಲಿ ಉಡುಪಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಸದಸ್ಯರು ಹಾಗೂ ರಕ್ತದಾನಿಗಳಾದ ಅರವಿಂದ ಉಪ್ಪಿನಕುದ್ರು, ಮಹೇಂದ್ರ ಉಪ್ಪಿನಕುದ್ರು, ದಿನೇಶ್ ಕಾಂಚನ್ ಬಾರಿಕೇರೆ, ರೇಷ್ಮಾ ಮಾರ್ಟಿಸ್ ಶಂಕರಪುರ, ಆದರ್ಶ್ ಉಪ್ಪಿನಕುದ್ರು, ಗೌರೀಶ್ ಹಳ್ಳಿಹೊಳೆ ಅವರನ್ನು ಸನ್ಮಾನಿಸಲಾಯಿತು. ಅಭಯಹಸ್ತ ಟ್ರಸ್ಟ್ ಕಳೆದ ಮೂರು ವರ್ಷಗಳಲ್ಲಿ ರಕ್ತದಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಇದುವರೆಗೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಉಡುಪಿ ,ದ.ಕ, ಉ.ಕ,ಬೆಂಗಳೂರು ಹಾಗೂ ವಿದೇಶದಲ್ಲಿ( ದುಬೈ) ದಾಖಲೆಯ 147 ರಕ್ತದಾನ ಶಿಬಿರ ಹಾಗೂ ನಿತ್ಯ ತುರ್ತು ಕರೆಗೆ ರಕ್ತದಾನಿಗಳ ಪೂರೈಕೆ ಒಟ್ಟಾರೆಯಾಗಿ ಇದುವರೆಗೆ ದಾಖಲೆಯ 17000 ಯೂನಿಟ್ ರಕ್ತ ಸಂಗ್ರಹಿಸಿದ (2020 – 21 ಸಾಲಿನಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಂಘಟನೆ) ರಾಜ್ಯದ ಪ್ರತಿಷ್ಠಿತ ಸಂಘಟನೆಯಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯದ ಕರಾವಳಿಯಲ್ಲಿ ಕಾಣಿಸಿಕೊಂಡ ಬಿಪರ್ಜಾಯ್ ಚಂಡಮಾರುತದಿಂದಾಗಿ ಮರವಂತೆಯಲ್ಲಿ ಕಡಲ್ಕೊರೆತ ಉಂಟಾಗಿದ್ದು, ಪರಿಣಾಮವಾಗಿ ಫಿಷರೀಸ್ ರಸ್ತೆ ಬಿರುಕು ಕಾಣಿಸಿಕೊಂಡಿದೆ. ಕಳೆದ ಭಾರಿ ಕಡಲಕೊರೆತದಿಂದಾಗಿ ಕಾಂಕ್ರೀಟ್ ಮಾಡಲಾಗಿದ್ದ ಫಿಶರಿಸ್ ರಸ್ತೆ ಸಂಪೂರ್ಣ ಕೊಚ್ಚಿಹೊಗಿದ್ದಲ್ಲದೇ ಸಮುದ್ರ ಬದಿಯ ಮನೆಯ ಗೋಡೆಯಲ್ಲಿಯೂ ಬಿರುಕು ಕಾಣಿಸಿಕೊಂಡಿತ್ತು. ಸ್ವತಃ ಮುಖ್ಯಮಂತ್ರಿ, ಕಂದಾಯ ಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತಾತ್ಕಾಲಿಕ ಪರಿಹಾರ ಒದಗಿಸಿದ್ದರು. ಈ ಭಾರಿಯ ಕಡಲಕೊರೆತದ ಹೊಡೆತಕ್ಕೆ ರಸ್ತೆ ಮತ್ತೆ ಕೊಚ್ಚಿ ಹೋಗುವ ಸಾಧ್ಯತೆ ಎದುರಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಗುರುರಾಜ ಗಂಟಿಹೊಳೆ ಅವರು, ಕಡಲತಡಿಯ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ನಾನು, ಇಲಾಖೆ ಇದೆ. ತುರ್ತು ಸಂದರ್ಭದ ಎಲ್ಲಾ ಅಗತ್ಯ ಕ್ರಮವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಭರವಸೆ ನೀಡಿದರು.
