Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಫಂಗಕ್ಷನಲ್ ಇಂಗ್ಲೀಷ್ ಸರ್ಟಿಫಿಕೇಟ್ ಕೋರ್ಸಿನ ವಿದ್ಯಾರ್ಥಿಗಳು ವಿಸ್ತರಣಾ ಚಟುವಟಿಕೆಯ ಅಂಗವಾಗಿ ತಲ್ಲೂರಿನ ನಾರಾಯಣ ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ವಿವಿಧ ವಿನೋದಾವಳಿ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ಸಹಾಯಹಸ್ತ ನೀಡಿದರು. ಈ ಸಂದರ್ಭದಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ದೀಪಿಕಾ ಜಿ., ಉಪನ್ಯಾಸಕರಾದ ಸ್ಟಾಲಿನ್ ಡಿಸೋಜಾ, ರವೀನಾ ಸಿ. ಪೂಜಾರಿ, ಸ್ವಾತಿ ರಾವ್, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಮ್ಯಾನೆಜಿಂಗ್ ಟ್ರಸ್ಟಿ ಸುರೇಶ್ ಟಿ., ಟ್ರಸ್ಟಿ ಮನೋರಮಾ ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕಲಾಶ್ರೀ ಶಿಕ್ಷಣಪ್ರೇಮಿ ಬಳಗ ಗಂಗೊಳ್ಳಿ ಮತ್ತು ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ಬುಧವಾರ ನಡೆಯಿತು. ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವೆಯಲ್ಲಿ ಅನುಪಮ ಸೇವೆ ಸಲ್ಲಿಸಿದ ಸಹಶಿಕ್ಷಕಿ, ಗಾಯಕಿ ಅಕ್ಷತಾ ವಿನಯ್, ಸಹಶಿಕ್ಷಕಿ ಭೂದೇವಿ, ಕಳೆದ 30 ವರ್ಷಗಳಿಂದ ಶ್ರೀ ಇಂದುಧರ ದೇವಸ್ಥಾನದಲ್ಲಿ ಸ್ವಚ್ಛತಾ ಸೇವೆ ಮಾಡುತ್ತಿರುವ ಸರೋಜ ಜಿ.ಟಿ. ಮತ್ತು ಮೇಲ್ಗಂಗೊಳ್ಳಿ ಅಂಗನವಾಡಿ ಕೇಂದ್ರದ ಸಹಾಯಕಿ ಮೂಕಾಂಬು ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ರೇಖಾ ಖಾರ್ವಿ, ಸೀಮಾ ಖಾರ್ವಿ, ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ, ಕಮಲಾ, ಶೇಷಮ್ಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಒಕ್ಕೂಟದ ಅಧ್ಯಕ್ಷೆ ಸುಮಿತ್ರಾ ಜಿ. ಮೊದಲಾದವರು ಉಪಸ್ಥಿತರಿದ್ದರು. ಸುಮಿತ್ರಾ ಜಿ. ಸ್ವಾಗತಿಸಿದರು. ರೇಖಾ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು. ಕಮಲಾ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಕುಂದಾಪುರ ದಕ್ಷಿಣ ವತಿಯಿಂದ ಕೋಣಿಯ ಮಾನಸ ಜ್ಯೋತಿ ವಿಶೇಷ ಶಾಲೆಗೆ ಸೋಲಾರ್ ವಿದ್ಯುಚ್ಛಕ್ತಿ ಉಪಕರಣಗಳ ಕೊಡುಗೆಯಾಗಿ ನೀಡಲಾಯಿತು. ಮಾನಸ ಜ್ಯೋತಿ ಶಾಲಾ ವಠಾರದಲ್ಲಿ ನಡೆದ ಸಭೆಯಲ್ಲಿ ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ ಮಲ್ಯ ಯೋಜನೆಯ ರೂ.1,25,000 ನೆರವನ್ನು ಮಾನಸ ಜ್ಯೋತಿ ಟ್ರಸ್ಟ್ ಅಧ್ಯಕ್ಷ ಡಾ| ಬಿ.ವಿ.ಉಡುಪರಿಗೆ ಹಸ್ತಾಂತರಿಸಿದರು. ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದ ಡಾ| ಬಿ.ವಿ. ಉಡುಪ, ದಾನಿಗಳು ನೀಡುತ್ತಿರುವ ನೆರವು, ಶಾಲೆಯ ನಿರ್ವಾಹಕರ ನಿಸ್ವಾರ್ಥ ಸೇವೆ ಹಾಗೂ ವಿಶೇಷ ಶಾಲೆ ಮಾನವೀಯತೆಯ ದೃಷ್ಠಿಯಿಂದ ನಡೆಯುತ್ತಿರಲು ಕಾರಣವಾಗಿದೆ” ಎಂದರು. ಅಗತ್ಯವಾಗಿದ್ದ ಸೋಲಾರ್ ಶಕ್ತಿ ಯೋಜನೆ ಕಾರ್ಯಗತಗೊಳಿಸಿದ ರೋಟರಿ ಕುಂದಾಪುರ ದಕ್ಷಿಣಕ್ಕೆ ಅವರು ಅಭಿನಂದನೆ ಸಲ್ಲಿಸಿದರು. ಸೆಲ್ಕೋ ಸೋಲಾರ್ ಕಂಪೆನಿ ಪರವಾಗಿ ಮಂಜುನಾಥ ಅವರನ್ನು ಗೌರವಿಸಲಾಯಿತು. ಯೋಜನೆ ಅನುಷ್ಠಾನಕ್ಕೆ ಸಹಕರಿಸಿದ ವಾಸುದೇವ ಕಾರಂತ, ರೋಟರಿ ದಕ್ಷಿಣದ ನಿಕಟಪೂರ್ವ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಮಾಹಿತಿ ನೀಡಿದರು. ರೋಟರಿ ಡಿಡಿಎಫ್ ಯೋಜನೆ ಮೂಲಕ ನೀಡಲಾದ ಈ ಕಾರ್ಯದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಜೆಯ ಹಿನ್ನೆಲೆ ಕುಟುಂಬ ಸದಸ್ಯರೊಂದಿಗೆ ತಾಲೂಕಿನ ಹೆಂಗವಳ್ಳಿಯ ರೆಸಾರ್ಟ್ಗೆ ಹೋಗಿದ್ದ ಬಾಲಕ ಈಜು ಕೊಳದಲ್ಲಿ ಇಳಿದಾಗ ಮುಳುಗಿ ಪ್ರಾಣ ಕಳೆದುಕೊಂಡ ಘಟನೆ ಏಪ್ರಿಲ್ 11 ರಂದು ಮಧ್ಯಾಹ್ನ ನಡೆದಿದೆ. ಹೂಡೆಯ ಆರಿಝ್ ಉಮ್ಮರ್ ಸೌಕುರ್(10) ಮೃತ ಬಾಲಕ. ಹೂಡೆಯ ಇಬಾದುಲ್ಲ ಅವರು ಕುಟುಂಬ ಸಮೇತರಾಗಿ ರೆಸಾರ್ಟ್ ಗೆ ಹೋಗಿದ್ದು, ಆರಿಝ್ ಮಕ್ಕಳೊಂದಿಗೆ ಆಟ ಆಡುತ್ತ ನೀರಿನಲ್ಲಿ ಬಿದ್ದಿದ್ದಾನೆ. ಈಜು ಕೊಳ ಮತ್ತು ಸುತ್ತಮುತ್ತಲೂ ಹತ್ತಾರು ಜನರಿದ್ದರೂ ಎಲ್ಲರೂ ಸಂಭ್ರಮಿಸುತ್ತಿದ್ದ ಕಾರಣ ಆತನನ್ನು ರಕ್ಷಿಸುವುದು ಸಾಧ್ಯವಾಗಿಲ್ಲ ಎನ್ನಲಾಗಿದೆ. ಒಂದಷ್ಟು ಸಮಯದ ಬಳಿಕ ಬಾಲಕ ಮುಳುಗಿದ್ದು ಗಮನಕ್ಕೆ ಬಂದಿದ್ದು ಆತನನ್ನು ಸ್ಥಳದಲ್ಲಿದ್ದವರು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ, ಹಾಲಾಡಿಯ ಆಸ್ಪತ್ರೆಗೆ ಬಂದು ಪರಿಶೀಲಿಸಿದಾಗ ವೈದ್ಯರು ಆರಿಝ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಾಲಕನ ಸಾವಿಗೆ ರೆಸಾರ್ಟ್ ಅವರ ನಿರ್ಲಕ್ಷ್ಯ ಹಾಗೂ ಅಜಾಗರೂಕತೆ, ಲೈಫ್ ಜಾಕೆಟ್ ಮತ್ತು ಲೈಫ್ ಗಾರ್ಡ್ ಹಾಗೂ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂದು ಆರೋಪ ಕೇಳಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್ ಪದವಿ ಪೂರ್ವ ಕಾಲೇಜು 682 ವಿದ್ಯಾರ್ಥಿಗಳು 95% ಶೇಕಡಾಕ್ಕಿಂತ ಅಧಿಕ ಅಂಕವನ್ನು ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಟಾಪ್ ಟೆನ್ರ್ಯಾಂಕ್ನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಒಟ್ಟು 45 ವಿದ್ಯಾರ್ಥಿಗಳು ಸ್ಥಾನವನ್ನು ಪಡೆಯುವ ಮೂಲಕ ಆಳ್ವಾಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ಸಾಧನೆ ಮೆರೆಯುವಂತೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ನೂತನ ಆರ್ ಗೌಡ, 600ರಲ್ಲಿ 595 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತರುಣ್ ಕುಮಾರ್ ಪಾಟೀಲ್ 594 ಅಂಕ ಪಡೆದು 4ನೇ ಸ್ಥಾನ ಪಡೆದಿದ್ದಾರೆ. ಆಕಾಶ್ ಪಿಎಸ್, ಅನಿರುದ್ಧ ಪಿ ಮೆನನ್, ಸುಮಿತ್ , ಸುದೀಂದ್ರ 5ನೇ ರ್ಯಾಂಕ್ ಗಳಿಸಿದರೆ, ಸಹನಾ ಕೆ, ಶಿವಷೇಶ 6ನೇ ರ್ಯಾಂಕ್, ವಾಣಿ ಕೆ, ಮೇಧಾ ವಿ, ಜೀವಿಕಾ ಎಸ್, ಹರೀಶ್ ಉದಯ್, ಭೂಮಿ, ಷಾನ್ ಪಿಂಟೋ, ಅಶೋಕ್ ಸುತಾರ್, ಮಂಜುನಾಥ್ ಡಿ.7ನೇ ರ್ಯಾಂಕ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು 2024ರ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90.79 ಫಲಿತಾಂಶ ದಾಖಲಿಸಿದೆ. ఒట్టు 695 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 631 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 123 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 388 ಪ್ರಥಮ ಶ್ರೇಣಿ ಹಾಗೂ 99 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕಲಾ ವಿಭಾಗದಲ್ಲಿ ಲಿಖಿತಾ ನಾಗ್ ಆರ್ (576), ರಾಘವೇಂದ್ರ ವಿಠಲ ಪರಸನ್ನವರ್ (560), ನರಸಪ್ಪ (553), ವಾಣಿಜ್ಯ ವಿಭಾಗದಲ್ಲಿ ಅಪೂರ್ವ ಅಶೋಕ ದೇವಾಡಿಗ (582), ರೋಹಿತ್ (577), ಸುಶ್ಮಿತಾ (576) ಹಾಗೂ ವಿಜ್ಞಾನ ವಿಭಾಗದಲ್ಲಿ ಪುದೀಪ ಮೊಗವೀರ ಮತ್ತು ಸಾನಿಕಾ (569), ಶಮಿತಾ (564), ಪ್ರಿಯಾಂಕ (554) ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಶೇ.94.26 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 122 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 429 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 57 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಮರ್ಸ್ ವಿಭಾಗದಲ್ಲಿ ವೈಷ್ಣವಿ 579, ಸುಮಂತ 576, ಸಮರ್ಥ 573 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ ವಿಶ್ವಜಿತ್ ಕಿಣಿ 579, ಅಂಜನ್ ಪೂಜಾರಿ 576, ಸುನನ್ಯ 575, ಕಲಾ ವಿಭಾಗದಲ್ಲಿ ಅಂಕಿತ ಈರಪ್ಪ ಗೌಡರ್ 530, ಸುಜಾತ 492, ಸಂಜನಾ 488 ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪೋಷಕರ ಮತ್ತು ವಿದ್ಯಾರ್ಥಿಗಳ ಅಭಿರುಚಿ ವಿಭಿನ್ನವಾದರೂ ಸಹ ಪ್ರಸ್ತುತ ಪೋಷಕರ ಅಭಿರುಚಿಗಿಂತ ವಿದ್ಯಾರ್ಥಿಗಳ ಅಭಿರುಚಿಗೆ ಪ್ರೋತ್ಸಾಹ ದೊರೆಯಬೇಕು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಮಕ್ಕಳ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸಬೇಕು. ಶಾಲೆಗಳ ಅಭಿವೃದ್ಧಿ ಊರಿನ ಪ್ರಗತಿಯ ಸಂಕೇತವಾಗಿದೆ ಎಂದು ಘಟಪ್ರಭಾ ಉದ್ಯಮಿ ಎಚ್. ಜಯಶೀಲ ಎನ್. ಶೆಟ್ಟಿ ಹೇಳಿದರು. ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತಮ್ಮ ಹೆತ್ತವರಾದ ದಿ. ಗುಲಾಬಿ ನಾರಾಯಣ ಶೆಟ್ಟಿ ಸ್ಮರಣಾರ್ಥ ಹೇರಂಜಾಲು, ಮೆಟ್ಟಿನಹೊಳೆ, ಕಾಲ್ತೋಡು ಸರ್ಕಾರಿ ಶಾಲೆಗಳಿಗೆ ತಲಾ ಎಂಟು ಲಕ್ಷದ ವೆಚ್ಚದ ಶಾಲಾ ವಾಹನ ಹಸ್ತಾಂತರಿಸಿ ಮಾತನಾಡಿದರು. ಹುಟ್ಟೂರಿನಲ್ಲಿ ಒಂದು ಶಾಶ್ವತ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪ್ರತಿಯೊಂದು ಮಗುವೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದೆಂಬ ನೆಲೆಯಲ್ಲಿ ದೂರದಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನವನ್ನು ಒದಗಿಸಲಾಗಿದೆ. ಗಳಿಕೆಯ ಒಂದಿಷ್ಟು ಭಾಗ ಇಂತಹ ಅವಕಾಶಗಳಿಗೆ ಬಳಸಿದಾಗ ನಮ್ಮ ಋಣ ಸಂದಾಯವಾಗುವುದು. ಈ ಸತ್ಕಾರ್ಯದಿಂದ ಹೃದಯ ತುಂಬಿದೆ ಎಂದ ಅವರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮನೆ, ಮಠ, ದೇಗುಲ, ಆಚಾರ-ವಿಚಾರ, ಸಂಬಂಧ ಎಂಬಿತ್ಯಾದಿಗಳು ಬೇರೆ ಯಾವುದೇ ರಾಷ್ಟ್ರಗಳಲ್ಲಿಲ್ಲ. ಇನ್ನೊಬ್ಬರಿಗಾಗಿ ಬದುಕುವ ಪರೋಪಕಾರದ ಜೀವನ ನಮ್ಮ ಸಂಸ್ಕಾರ. ಪ್ರತಿಯೊಂದರಲ್ಲಿಯೂ ತಾಯ್ತನ ಕಾಣುವುದು ನಮ್ಮ ದೇಶದ ವಿಶೇಷತೆಯಾಗಿದೆ ಎಂದು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮನಾಭ ಮೆರ್ಟ ಹೇಳಿದರು. ಗುಡೇ ಮಹಾಲಿಂಗೇಶ್ವರ ಗೆಳೆಯರ ಬಳಗದ ದಶಮ ಸಂಭ್ರಮ ಸಮ್ಮಿಲನ-2024 ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಯೊಬ್ಬರ ಪ್ರತಿಭೆ, ಸಾಮರ್ಥ್ಯ ತೋರ್ಪಡಿಸಲು ವೇದಿಕೆ ಅಗತ್ಯವಾಗಿದ್ದು. ಸಂಘ ಸಂಸ್ಥೆಗಳ ಮೂಲಕ ಈ ವೇದಿಕೆ ಲಭ್ಯವಾಗುತ್ತದೆ. ಗೆಳೆಯರ ಬಳಗವು ಹಲವು ಮಂದಿಯ ಸಾಧನೆಗೆ ವೇದಿಕೆ ಕಲ್ಪಿಸಿದ ಹೆಗ್ಗಳಿಕೆ ಹೊಂದಿದೆ. ಯುವಕರು ದೇಶದ ಅಮೂಲ್ಯ ಸಂಪತ್ತು, ಸುಸಂಸ್ಕೃತ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಯುವ ಜನತೆ ಮನಸು ಮಾಡಬೇಕು. ಸ್ವ-ಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿ ಕಡೆಗೆ ಸದಾ ಚಿಂತನಾಶೀಲರಾಗಬೇಕು ಎಂದರು. ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಚ್. ಜಯಶೀಲ ಎನ್. ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಜೀವರಕ್ಷಕ ಈಶ್ವರ ಮಲ್ಪೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೆಳೆಯರ ಸ್ವಾವಲಂಬನ (ರಿ.) ಕುಂದಾಪುರ-ಮುಂಬೈ ಇವರ ಆಶ್ರಯದಲ್ಲಿ ಕುಂದಾಪುರದ ರಾಮ ಮಂದಿರ ಮಾರ್ಗದಲ್ಲಿ ಉಚಿತ ಹೊಲಿಗೆ ಕೇಂದ್ರದ ಉದ್ಘಾಟನೆಯು ಇತ್ತಿಚಿಗೆ ಜರುಗಿತು. ಪ್ರಸಿದ್ಧ ವಸ್ತ್ರ ವಿನ್ಯಾಸಕಿ ಪ್ರಮೀಳಾ ಅವರು ಉದ್ಘಾಟಿಸಿ ಮಾತನಾಡಿ ಕುಂದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಮಹಿಳೆಯರು ಇದರ ಸದುಪಯೋಗ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಹೊಲಿಗೆ ಶಿಬಿರಕ್ಕೆ ಶುಭ ಹಾರೈಸಿದರು. ಕೇಂದ್ರದ ಅಧ್ಯಕ್ಷರಾದ ವೆಂಕಟೇಶ ಪೈ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಗೆಳೆಯರ ಸ್ವಾವಲಂಬನವು ಕಳೆದ 12 ವರ್ಷಗಳಿಂದ ಕುಂದಾಪುರ-ಮುಂಬೈಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಟ್ಟೆ ಚೀಲ ಹೊಲಿಯುವುದರೊಂದಿಗೆ ಪ್ಲಾಸ್ಟಿಕ್ ತ್ಯಜಿಸಿ, ಬಟ್ಟೆ ಚೀಲ ಬಳಸಿ, ಪರಿಸರ ರಕ್ಷಿಸಿ ಎಂಬ ತತ್ವದೊಂದಿಗೆ ಸಮಾಜ ಸೇವೆಗೈಯುತ್ತಿದೆ. ೨೦೦ಕ್ಕೂ ಮಿಕ್ಕಿ ಪುರುಷ, ಮಹಿಳೆಯರು ಕೇಂದ್ರದಲ್ಲಿ ಚೀಲ ಹೊಲಿಯುತ್ತಿದ್ದಾರೆ. ಈಗ ಕುಂದಾಪುರದಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಾಥಮಿಕ ಹೊಲಿಗೆ, ಇಲೆಕ್ಟ್ರಿಕ್ ಮೋಟರ್ ಅಳವಡಿಸಿ ಹೊಲಿಗೆ, ಆಲ್ಟ್ರೇಷನ್, ಫಿಟ್ಟಿಂಗ್, ಬಟ್ಟೆ ಚೀಲಗಳ ಹೊಲಿಗೆ, ಹೊಲಿಗೆ ಯಂತ್ರದ ಸಣ್ಣ ಪುಟ್ಟ ರಿಪೇರಿ ಇತ್ಯಾದಿಗಳನ್ನು ಕಲಿಸಲಾಗುವುದು ಎಂದರು.…

Read More