ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲೆಯ ನಾಡದೋಣಿ ಮೀನುಗಾರ ಸಂಘಟನೆಗಳ ಮನವಿಯ ಮೇರೆಗೆ ಮೀನು ಮರಿ ಸಂತತಿಗಳ ನಾಶಕ್ಕೆ ಕಾರಣವಾಗಿರುವ ನಿಷೇಧಿತ ಬುಲ್ಟ್ರಾಲ್ ಮೀನುಗಾರಿಕೆಯನ್ನು ನಿಯಂತ್ರಿಸುವ ಬಗ್ಗೆ ಜಿಲ್ಲಾಕಾರಿ ಡಾ. ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ಮೀನುಗಾರ ಮುಖಂಡರ ಸಭೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚಿಗೆ ನಡೆಯಿತು. ಸಭೆಯಲ್ಲಿ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠರು, ಕರಾವಳಿ ಕಾವಲು ಪಡೆಯ ಪೋಲಿಸ್ ಅಧಿಕ್ಷಕರು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಉಡುಪಿ ಜಿಲ್ಲೆಯ ವಿವಿಧ ರೀತಿಯ ಟ್ರಾಲ್ಬೋಟ್ ಸಂಘಟನೆಗಳು, ಪರ್ಸಿನ ಬೋಟ್ ಸಂಘಟನೆಗಳು ಹಾಗೂ ನಾಡದೋಣಿ ಮೀನುಗಾರರ ಸಂಘಟನೆಯ ಮುಖಂಡರು ಭಾಗವಹಿಸಿದ್ದರು. ನಿಷೇಧಿತ ಬುಲ್ಟ್ರಾಲ್ ಮತ್ತು ಬೆಳಕು ಮೀನುಗಾರಿಕೆಯಿಂದ ಮೀನುಮರಿ ಸಂತತಿಗಳು ನಾಶವಾಗುವುದರ ಬಗ್ಗೆ ಸಮಗ್ರವಾಗಿ ಚರ್ಚಿಸಿದ ಜಿಲ್ಲಾಧಿಕಾರಿಗಳು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ನಿಷೇಧಿತ ಮೀನುಗಾರಿಕೆಯ ಬಗ್ಗೆ ಇರುವ ಕಾನೂನು ಆದೇಶವವನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ನಿಷೇಧಿತ ಬುಲ್ಟ್ರಾಲ್ ಮತ್ತು ಬೆಳಕು ಮೀನುಗಾರಿಕೆಯ ಬಗ್ಗೆ ಇರುವ ಕಾನೂನನ್ನು ಉಲ್ಲಂಘಿಸಿದ ಯಾಂತ್ರೀಕೃತ ಬೋಟ್ನವರ ವಿರುದ್ಧ ಕಠಿಣ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯಾಭ್ಯಾಸ ಕೇವಲ ಪುಸ್ತಕ ಓದಿಗೆ ಮಾತ್ರ ಸೀಮಿತವಲ್ಲ. ವಿದ್ಯಾಭ್ಯಾಸ ನಮ್ಮ ಜ್ಞಾನ ಹಾಗೂ ಕೌಶಲ್ಯವನ್ನು ಬೆಳೆಸುವಂತಿರಬೇಕು. ಜೀವನದಲ್ಲಿ ಕಲಿಕೆ ಎಂಬುದು ನಿರಂತರ. ಶಿಕ್ಷಣ ಪಡೆದಷ್ಟು ಉತ್ತಮ ಅವಕಾಶಗಳು ನಮಗೆ ದೊರೆತು ನಮ್ಮ ಜೀವನದ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಉದ್ಯೋಗ ಸಿಗಲಿಲ್ಲ ಎಂದು ಕೊರಗದೆ ಸ್ವ ಉದ್ಯೋಗದತ್ತ ಯುವ ಜನಾಂಗ ಮನಸ್ಸು ಮಾಡಬೇಕು. ಪಡೆದುಕೊಂಡ ವಿದ್ಯಾರ್ಥಿವೇತನವನ್ನು ಸದ್ವಿನಿಯೋಗ ಮಾಡಿಕೊಂಡು ಮುಂದಿನ ದಿನಗಳಲ್ಲಿ ವಿದ್ಯಾರ್ಥಿವೇತನ ವಿತರಿಸಿ ಸಂಸ್ಥೆಗಳಿಗೆ ಸಹಕಾರ ನೀಡುವಂತಾಗಬೇಕು ಎಂದು ಕರ್ಣಾಟಕ ಬ್ಯಾಂಕಿನ ಉಡುಪಿ ಶಾಖೆಯ ಸೀನಿಯರ್ ಮ್ಯಾನೇಜರ್ ರವೀಂದ್ರ ಶ್ಯಾನುಭಾಗ್ ಹೇಳಿದರು. ಗಂಗೊಳ್ಳಿಯ ಶ್ರೀ ಸರಸ್ವತಿ ವಿದ್ಯಾನಿಧಿ ವತಿಯಿಂದ ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು. ಶ್ರೀ ಸರಸ್ವತಿ ವಿದ್ಯಾನಿಧಿ ಅಧ್ಯಕ್ಷ ಎಂ. ರವೀಂದ್ರ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸರಸ್ವತಿ ವಿದ್ಯಾನಿಧಿ ಸದಸ್ಯರಾದ ಡಾ. ಕಾಶೀನಾಥ ಪೈ, ಜಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕ್ರುಯಲರ್ ಡಿಸ್ಟ್ರೂಫಿ, ಪಾರ್ಕಿನ್ಸನ್ ಮತ್ತು ಮಲ್ಟಿಪಲ್ ಸ್ಕಿಲ್ರೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತೀ ಮಾಹೆ ರೂ. 1,000/- ಪ್ರೋತ್ಸಾಹಧನ ನೀಡುವ ಸಲುವಾಗಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಸೆರೆಬ್ರಲ್ ಪಾಲ್ಸಿ, ಮಸ್ಕ್ರುಯಲರ್ ಡಿಸ್ಟ್ರೂಫಿ, ಪಾರ್ಕಿನ್ಸನ್ ಮತ್ತು ಮಲ್ಟಿಪಲ್ ಸ್ಕಿಲ್ರೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ವಿಶಿಷ್ಟ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು ಹಾಗೂ ಅಂಗವಿಕಲತೆಯ ಪ್ರಮಾಣ ಶೇ. 75 ಮತ್ತು ಅದಕ್ಕಿಂತ ಹೆಚ್ಚಿರಬೇಕು. ವಯಸ್ಸಿನ ಹಾಗೂ ಆದಾಯ ಮಿತಿ ಇರುವುದಿಲ್ಲ. ಜಿಲ್ಲಾ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಆರೈಕೆದಾರರ ಬ್ಯಾಂಕ್/ಅಂಚೆ ಕಛೇರಿ ಉಳಿತಾಯ ಖಾತೆಗೆ ಪ್ರೋತ್ಸಾಹಧನವನ್ನು ಜಮೆ ಮಾಡಲಾಗುವುದು. ಅರ್ಹ ವಿಕಲಚೇತನ ವ್ಯಕ್ತಿಗಳ ಆರೈಕೆದಾರರು ಅಕ್ಟೋಬರ್ 30 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ತಳ ಅಂತಸ್ತು, ಜಿಲ್ಲಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಗುರುತಿಸುವಲ್ಲಿ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರ ಕೊಡುಗೆ ದೊಡ್ಡದಿದೆ, ಬೈಂದೂರಿನ ಅಭಿವೃದ್ಧಿಗೆ ಮೇಲ್ಪಂಕ್ತಿ ಹಾಕಿ ಅವರನ್ನು ಸಮಾಜ ಸದಾ ಸ್ಮರಿಸಲಿದೆ. ಉಸಿರು ನಿಂತರೂ ಹೆಸರು ಬೈಂದೂರಿನ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯ ಹೇಳಿದರು. ಅವರು ಇಲ್ಲಿನ ಜೆ.ಎನ್.ಆರ್ ಕಲಾಮಂದಿರದಲ್ಲಿ ಭಾನುವಾರ ನಡೆದ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರ ಶೃದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿ, ಲಕ್ಷ್ಮೀನಾರಾಯಣ ಅರು ಚುನಾವಣೆಯಲ್ಲಿ ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಸ್ಥಿತಪ್ರಜ್ಞಾರಾಗಿ ಇಲ್ಲಿನ ಅಭಿವೃದ್ಧಿಗಾಗಿ ಚಿಂತನೆ ನಡೆಸುತ್ತಿದ್ದರು. ನೇರ, ನಿಷ್ಠುರವಾದಿಯಾಗಿದ್ದ ಅವರು ಯಡಿಯೂರಪ್ಪನವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ನನ್ನ ಮೊದಲ ಚುನಾವಣೆಯ ಸಂದರ್ಭದಲ್ಲಿ ಜೊತೆಗೆ ನಿಂತು ಕ್ಷೇತ್ರಾದ್ಯಂತ ತಿರುಗಾಡಿದ ಸಂದರ್ಭ ಮರೆಯಲಾಗದು ಎಂದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ನನ್ನ ಮತ್ತು ಲಕ್ಷ್ಮೀನಾರಾಯಣ ಅವರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ವೈಯುಕ್ತಿಕವಾಗಿ ನಮ್ಮೊಂದಿಗೆ ಉತ್ತಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಿದ್ಧ ಬಟ್ಟೆ ಮಳಿಗೆ ಸತ್ಯನಾಥ ಸ್ಟೋರ್ಸ್ ಅವರ ನೂತನ ಶಾಖೆ ಶ್ರೀ ರಾಮ್ ಟೆಕ್ಸ್ಟೈಲ್ಸ್ ಕೊಕ್ಕರ್ಣೆಯಲ್ಲಿ ಅಕ್ಟೋಬರ್ 09ರ ಬುಧವಾರ ಬೆಳಿಗ್ಗೆ 9ಗಂಟೆಗೆ ಜರುಗಲಿದೆ. ಸೈಬರಕಟ್ಟೆ ಗರಿಕೆಮಠದ ಆಗಮ ಪ್ರವೀಣ, ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ, ಹಾಗೂ ಕೊಕ್ಕರ್ಣೆಯ ಅರ್ಚಕ ಕೆ. ಶಿವರಾಮ ಅಡಿಗ ಅವರು ದೀಪ ಪ್ರಜ್ವಲನೆಯ ಮೂಲಕ ನೂತನ ಮಳಿಗೆ ಉದ್ಘಾಟಿಸಲಿದ್ದಾರೆ.ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪದಲ್ಲಿ ಪ್ರಸಿದ್ದಿ ಪಡೆದಿರುವ ಸತ್ಯನಾಥ ಸ್ಟೋರ್ಸ್ ಕೊಕ್ಕರ್ಣೆಯಲ್ಲಿ ಆರಂಭಿಸುತ್ತಿರುವ ನೂತನ ಶಾಳೆ ಶ್ರೀ ರಾಮ ಟೆಕ್ಸ್ಟೈಲ್ಸ್ನಲ್ಲಿಯೂ ಸೀರೆ, ಟೆಕ್ಸ್ಟೈಲ್ಸ್, ಹ್ಯಾಂಡ್ಲೂಮ್ಸ್ ಹಾಗೂ ರೆಡಿಮೇಡ್ಸ್ ಮಾರಾಟ ಮಾಡಲಿದ್ದು, ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಜಾನಪದ ಪರಿಷತ್ತು ನೂತನವಾಗಿ ಆರಂಭಿಸಲಾಗುತ್ತಿರುವ ದುಬೈ ಘಟಕದ ಅಧ್ಯಕ್ಷರಾಗಿ ಅನಿವಾಸಿ ಭಾರತೀಯ, ಸಂಘಟಕ ಸದನ್ ದಾಸ್ ಶಿರೂರು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಕಜಾಪ ರಾಜ್ಯಾಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸದನ್ ದಾಸ್ ಅವರು ಕಳೆದ ಒಂದೂವರೆ ದಶಕದಿಂದ ದುಬೈನಲ್ಲಿ ನೆಲೆಸಿದ್ದು, ವಿಮಾ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದಾರೆ. ತಮ್ಮ ಉದ್ಯೋಗದ ಜೊತೆಗೆ ಹಲವು ಕನ್ನಡಪರ ಸಂಘಟನೆಗಳನ್ನು ಕಟ್ಟಿ ನಿರಂತರವಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕನ್ನಡಿಗರ ಕನ್ನಡ ಕೂಟ ದುಬೈ, ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್, ಶಿರೂರು ಅಸೋಸಿಯೇಷನ್ ಮೊದಲಾದ ಸಂಘಟನೆಗಳ ಮೂಲಕ ಹತ್ತು ಹಲವು ಕನ್ನಡ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಕರ್ನಾಟಕ ಇತಿಹಾಸ ಅಕಾಡೆಮಿ ಮೂಲಕ ಕರ್ನಾಟಕದ ಐತಿಹಾಸಿಕ ವೈಭವದ ಪರಿಚಯ, ಕರ್ನಾಟಕ ಪ್ರೆಸ್ ಕೌನ್ಸಿಲ್ ದುಬೈ ಘಟಕದ ನೇತೃತ್ವ, ಗಲ್ಫ್ ಕನ್ನಡ ಮೂವಿಸ್ ಮೂಲಕ ಕನ್ನಡ ಸಿನಿಮಾ ಪ್ರಚಾರ – ಹಂಚಿಕೆ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಭಗವದ್ಗೀತಾ ಪಠಣ ಅಭಿಯಾನ ಸೇರಿದಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಾಲಕರ ವಿಭಾಗದಲ್ಲಿ, ಜಿಥಿನ್, ಗೌತಮ್ ಬಾಲಕಿಯರ ವಿಭಾಗದಲ್ಲಿ ರಿತಿಶಾ, ಸಾನ್ವಿ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಸಾರ್ವಜನಿಕ ಉಪಕಾರ ನಿಧಿಯಿಂದ ನೀಡಲಾಗುವ ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ ಸಂಘದ ಗಂಗೊಳ್ಳಿಯ ಪ್ರಧಾನ ಕಚೇರಿಯ ಬೈಲೂರು ಮಂಜುನಾಥ ಶೆಣೈ ಸಭಾ ಭವನದಲ್ಲಿ ಶುಕ್ರವಾರ ಜರಗಿತು. ಸಂಘದ ಅಧ್ಯಕ್ಷ ಜಿ. ವೆಂಕಟೇಶ ಶೆಣೈ, ಉಪಾಧ್ಯಕ್ಷ ಜಿ. ವಿಶ್ವನಾಥ್ ಆಚಾರ್ಯ ಮತ್ತು ನಿಕಟಪೂರ್ವ ಅಧ್ಯಕ್ಷ ಎಚ್. ಗಣೇಶ ಕಾಮತ್ ಅವರು ಕೊಡುಗೆಗಳನ್ನು ವಿತರಿಸಿ ಶುಭ ಹಾರೈಸಿದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಕ್ಷರ ದಾಸೋಹಕ್ಕೆ 1.20 ಲಕ್ಷ ರೂ., ಗಂಗೊಳ್ಳಿ ಸಾರ್ವಜನಿಕ ಶ್ರೀ ಶಾರದೋತ್ಸವ ಸುವರ್ಣ ಮಹೋತ್ಸವಕ್ಕೆ 55,555 ರೂ., ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಲ್ಯಾಪ್ ಟಾಪ್ ಮತ್ತು ಒಂದು ಪ್ರಿಂಟರ್, ಯಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ 50 ಸಾವಿರ ರೂ., ರಾಷ್ಟೀಯ ಸೇವಾ ಯೋಜನೆಗೆ 10 ಸಾವಿರ ರೂ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಒಟ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ’ವೈದ್ಯರು ಮತ್ತು ಎಂಜಿನಿಯರ್ಗಳಿಗೆ ಮಾತ್ರ ಜಗತ್ತಿನಲ್ಲಿ ಬೇಡಿಕೆ ಇರುವುದಲ್ಲ, ಎಲ್ಲ ಕ್ಷೇತ್ರಗಳ ಪರಿಣತರ ಅವಶ್ಯಕತೆ ಇದೆ. ಸೂಕ್ಷ್ಮ ಜೀವವಿಜ್ಞಾನವು ವಿಜ್ಞಾನ ವಿದ್ಯಾರ್ಥಿಗಳಿಗೂ ನವೀನ’ ಎಂದು ಸೈಂಟ್ ಅಲೋಷಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ವೈಶಾಲಿ ರೈ ಹೇಳಿದರು. ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಸೂಕ್ಷ್ಮ ಜೀವವಿಜ್ಞಾನ ವಿಭಾಗವು ಆಯೋಜಿಸಿದ ಪಿಯು ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ’ಮೈಕ್ರೋಸ್ಪಾರ್ಕ್ʼ (ಕಾಣದ ಜಗತ್ತನ್ನು ಅನ್ವೇಷಿಸಿ) ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದ ಹೊಸ ಸಾಧ್ಯತೆ ಮತ್ತು ಆಯಾಮಗಳನ್ನು ಅನ್ವೇಷಿಸಬೇಕು. ನಿಮ್ಮ ಮಾತು ಮತ್ತು ಆಯ್ಕೆಗಳಲ್ಲಿ ಜವಾಬ್ದಾರಿ ಇರಬೇಕು ಎಂದರು. ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ದೀಪ ಕಂಡುಹಿಡಿಯುವ ಪ್ರಯೋಗದಲ್ಲಿ ಸಾವಿರ ಬಾರಿ ವಿಫಲರಾಗಿರಬಹುದು. ಆದರೆ, ಅದು ವೈಫಲ್ಯವಲ್ಲ, ಸಾವಿರ ಸಾಧ್ಯತೆಗಳು ಎಂದು ಅವರು ವಿಶ್ಲೇಷಿಸಿದರು. ಸುಸ್ಥಿರತೆ ಇಂದಿನ ಅಗತ್ಯವಾಗಿದೆ. ಉದ್ಯಮಶೀಲತಾ ಕ್ಷೇತ್ರದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೊಂಬೆಯಾಟದ ಉಳಿವಿಗಾಗಿ ಶ್ರಮಿಸುತ್ತಿರುವ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ನೇತಾರ ಹಾಗೂ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಹೆರಿಟೇಜ್, ಮ್ಯೂಜಿಯಂ ಮತ್ತು ಡಾಕ್ಯೂಮೆಂಟೇಶನ್ ಸೆಂಟರ್ಸ್ ಕಮಿಷನ್ ಆಫ್ ಯುನಿಮಾ ಇಂಟರ್ನ್ಯಾಷನಲ್ ಇವರಿಂದ ಕೊಡಮಾಡುವ “ಯುನಿಮಾ ಹೆರಿಟೇಜ್ ಪ್ರಶಸ್ತಿ 2024”ಕ್ಕೆ (UNIMA Heritage awards) ಭಾಜನರಾಗಿದ್ದಾರೆ. ಕರಾವಳಿ ಜಾನಪದ ರಂಗ ಕಲೆಗಳಲ್ಲಿ ಉಪ್ಪಿನಕುದ್ರು ಯಕ್ಷಗಾನ ಸೂತ್ರದ ಗೊಂಬೆಯಾಟ ಕಲೆ ಅತೀ ವಿಶೇಷ ಹಾಗೂ ವಿಶಿಷ್ಟವಾದದ್ದು. 350 ವರ್ಷದ 6ನೇ ತಲಾಂತರದಲ್ಲಿ ನಡೆಯುತ್ತಿರುವ ಈ ಕಲೆ ಭಾಸ್ಕರ ಕಾಮತ್ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಸರಕಾರದ ಯಾವುದೇ ಧನಸಹಾಯ ನಿರೀಕ್ಷಿಸದೇ ಮುಂದುವರಿಯುತ್ತಿರುವ ಈ ಜಾನಪದ ಕಲೆ ಅನೇಕ ಮಹತ್ತರ ಕಾರ್ಯಗಳನ್ನು ಮಾಡುವ ಮೂಲಕ ಕಲಾಸಕ್ತರ ಗಮನ ಸೆಳೆದಿದೆ. ಉಪ್ಪಿನಕುದ್ರು ಗ್ರಾಮದಲ್ಲಿ “ಗೊಂಬೆಯಾಟ ಅಕಾಡೆಮಿ” ಚಿಂತನೆಯಡಿ ನಿರಂತರ ತನ್ನ ಸೇವೆಯನ್ನು ನೀಡುತ್ತಾ ಬಂದಿರುವ ಸಂಸ್ಥೆಯು ಗೊಂಬೆಯಾಟ ಹೊರತುಪಡಿಸಿ ವಿವಿಧ ಕಲೆಗಳಿಗೂ ವೇದಿಕೆಯಾಗಿದ್ದು ಅದರ…
