ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜೂ.16: ಪ್ರಸಕ್ತ ಸಾಲಿನಲ್ಲಿ ಕ.ರಾ.ರ.ಸಾ.ನಿ ರಿಯಾಯಿತಿ ದರದ ವಿದ್ಯಾರ್ಥಿ ಬಸ್ಪಾಸ್ ಸೌಲಭ್ಯ ಪಡೆಯಲು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿಗಳು ಕರ್ನಾಟಕ-ಒನ್, ಗ್ರಾಮ ಒನ್ ಕೇಂದ್ರಗಳಲ್ಲಿಯೂ ಸಹ ರೂ.3೦ ಸೇವಾ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರವು ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿದ್ದು, ನೆರೆರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು, ವಿದ್ಯಾರ್ಥಿ ರಿಯಾಯಿತಿ ಬಸ್ಸ್ ಪಾಸುಗಳನ್ನು ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್ https://ksrtc.karnataka.gov.in/studentpass ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕ.ರಾ.ರ.ಸಾ.ಸಂ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮತ್ಸ್ಯ ಸಂಪತ್ತು ವೃದ್ದಿ ಮತ್ತು ಮೀನುಗಾರರ ಶ್ರೇಯಸ್ಸಿಗಾಗಿ ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದಲ್ಲಿ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು ಇವರು ದುರ್ಗಾಹೋಮ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಶಂಕರ ಖಾರ್ವಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರ ಖಾರ್ವಿ ಲೈಟ್ಹೌಸ್, ಮೋಹನ್ ಖಾರ್ವಿ, ರಾಜೇಶ್ ಸಾರಂಗ, ಸರೋಜಿನಿ, ಜ್ಯೋತಿ ಖಾರ್ವಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 2023 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಜಾಗೃತಿ ಕೆ ಪಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 17 ನೇ ರ್ಯಾಂಕ್, ಪಶುವೈದ್ಯಕೀಯದಲ್ಲಿ 107ನೇ ರ್ಯಾಂಕ್, ಬಿ. ಎನ್ ವೈ ಎಸ್ ನಲ್ಲಿ 53 ನೇ ರ್ಯಾಂಕ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ 112 ನೇ ರ್ಯಾಂಕ್ ಪಡೆದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಅಭಯ್ ಎಸ್ ಎಸ್ 99 ನೇ ರ್ಯಾಂಕ್, ಆದಿತ್ಯ ಹೊಳ್ಳ 201 ನೇ ರ್ಯಾಂಕ್, ಪ್ರಣವ್ ಪಿ ಸಂಜಿ 294 ನೇ ರ್ಯಾಂಕ್, ಕಾರ್ತಿಕ್ ಕೃಷ್ಣಮೂರ್ತಿ ಹೆಗಡೆ 492 ನೇ ರ್ಯಾಂಕ್, ಉದ್ಭವ್ ಎಂ ಆರ್ 843 ನೇ ರ್ಯಾಂಕ್, ಸಾತ್ವಿಕ್ ಎಸ್ ಶೆಟ್ಟಿ 920 ನೇ ರ್ಯಾಂಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜೂ.15: ದೇಶವನ್ನ ಆರ್ಥಿಕವಾಗಿ ಮತ್ತು ಎಲ್ಲಾ ರಂಗದಲ್ಲಿ ವಿಶ್ವದಲ್ಲೇ ಸದೃಢ ರಾಷ್ಟçವನ್ನಾಗಿರುವ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಇಂದು ನಗರದ ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೂರ್ಣಪ್ರಜ್ಞ ಕಾಲೇಜು, ನೆಹರು ಯುವ ಕೇಂದ್ರ ಉಡುಪಿ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಹಾಗೂ ಎನ್.ಎಸ್.ಎಸ್ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಯುವ ಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರ ಸದ್ಬಳಕೆ ಆಗಬೇಕು, ಯುವ ಜನತೆ ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದರೂ ಸಹ ಆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತಾಗಬೇಕು, ತಮ್ಮ ಅಭಿವೃಧ್ದಿಯ ಜೊತೆಗೆ ದೇಶದ ಅಭಿವೃಧ್ದಿಗೂ ಕೈ ಜೋಡಿಸಬೇಕು. ಮುಂದಿನ 25 ವರ್ಷಗಳಲ್ಲಿ ದೇಶದ ಸರ್ವತೋಮುಖ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ನೀಟ್ ಪ್ರವೇಶ ಪರೀಕ್ಷೆಯ ಉತ್ತಮ ಸಾಧನೆ ಪಡೆದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಅಮರ್ ಪುರಾಣಿಕ್ 544/720, ಐಶ್ವರ್ಯ ಖಾರ್ವಿ 482/720,ತನಿಷಾ 459/720 ಅಂಕಗಳನ್ನು ಪಡೆದು ಅರ್ಹತೆಯನ್ನು ಪಡೆದಿದ್ದಾರೆ. ಕಾಲೇಜು ಪ್ರಾರಂಭದ ಪ್ರಥಮ ವರ್ಷದಲ್ಲಿಯೇ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಪ್ರಾರಂಭವಾದ ದ್ವಿತೀಯ ವರ್ಷದಲ್ಲೇ, ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ. ಆಲ್ ಇಂಡಿಯಾ ರ್ಯಾಂಕಿಂಗ್ನಲ್ಲಿ ಜಾಗೃತಿ ಕೆ.ಪಿ. 661 (99.7820068 ಪರ್ಸಂಟೈಲ್) ಅಂಕಗಳೊಂದಿಗೆ ಕೆಟೆಗರಿಯಲ್ಲಿ 23 ನೇ ರ್ಯಾಂಕ್, ಉದ್ಭವ್ ಎಂ.ಆರ್. 625 (99.1979284 ಪರ್ಸಂಟೈಲ್) ಅಂಕಗಳೊಂದಿಗೆ ಕೆಟೆಗರಿಯಲ್ಲಿ 72 ನೇ ರ್ಯಾಂಕ್ ಗಳಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ತನುಶ್ರೀ ಕೆ ಎನ್ 625(99.1979284 ಪರ್ಸಂಟೈಲ್) , ಶ್ರೇಯಸ್ ಎಸ್ ಚಿಕಾಲೇ 612 (98.8963973 ಪರ್ಸಂಟೈಲ್) , ಸಾತ್ವಿಕ್ ಎಸ್ ಶೆಟ್ಟಿ 609 (98.8114369 ಪರ್ಸಂಟೈಲ್) , ಚಂದನ ಹೆಚ್ ಎಂ 605 (98.7007725 ಪರ್ಸಂಟೈಲ್) , ಸಾಕ್ಷಿತ್ ಶೆಟ್ಟಿ 604 (98.6782079 ಪರ್ಸಂಟೈಲ್), ಸ್ವೀಕೃತಿ ಶೆಟ್ಟಿ 596 (98.4507475 ಪರ್ಸಂಟೈಲ್) , ಗೌರಿ ಸಿ ಸಂಕೊಲ್ 595 (98.4116519 ಪರ್ಸಂಟೈಲ್), ಮನೋಜ ಪಾಲನ್ಕರ್ 592 (98.3273783 ಪರ್ಸಂಟೈಲ್) ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಗಳಿಸಿದ ಕುಂದಾಪುರದ ಹರ್ಷಿತಳನ್ನು ದಾವಣೆಗೆರೆ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಕನ್ನಡ ಕೌಸ್ತುಭ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜುಲೈ 30 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಂಭ್ರಮದ ಸಮಾರಂಭದಲ್ಲಿ ಹರ್ಷಿತಳನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ತಿಳಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಗಳಿಸಿದವರಿಗೆ ಕಲಾ ಕುಂಚ ಗೌರವಿಸುತ್ತದೆ. ಕು. ಹರ್ಷಿತ ಇವರು ದಿ. ಲೋಕೇಶ್ ರಾವ್ ಹಾಗೂ ಕುಂದಾಪುರದ ಸಿನಿಯರ್ ಸಿವಿಲ್ ಜಡ್ಜ್ನ ಶೀಘ್ರ ಲಿಪಿಗಾರರಾದ ಸುನಂದಾ ಶೆಟ್ಟಿಗಾರ ದಂಪತಿಯ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಲೇಜು ವಿದ್ಯಾರ್ಥಿಗಳು ಹರೆಯವು ಅಲ್ಲದ ವಯಸ್ಕರು ಅಲ್ಲದ ವಯಸ್ಸಿನಲ್ಲಿ ಬರುವಂತಹ ಸಮಸ್ಯೆ ಮತ್ತು ಸೋಲುಗಳನ್ನು ಎದುರಿಸಲು ತಮಗೆ ತಾವೇ ತಯಾರಾಗಬೇಕು. ಅವಕಾಶಗಳು ಎಲ್ಲರಿಗೂ ಇದ್ದೆ ಇದೆ ಎಂಬುದರಲ್ಲಿ ನಂಬಿಕೆ ಇಡಬೇಕು ಎಂದು ಉಡುಪಿಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿ ಕರೆ ನೀಡಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವಯಸ್ಸಿನಲ್ಲಿ ಆತ್ಮವಿಶ್ವಾಸದ ಕೊರತೆ, ಕೀಳರಿಮೆ, ನಕಾರಾತ್ಮಕ ನೆಲೆಯ ಮೌಲ್ಯಮಾಪನ, ಸಾಮಾಜಿಕ ಆತಂಕ ಇವೆಲ್ಲ ಸಮಸ್ಯೆಗಳು ಕಾಡುತ್ತವೆ. ಅದರಿಂದ ಹೊರಬರಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಆದರೆ ನಿಮ್ಮ ಬದುಕು ಚೆನ್ನಾಗಿ ಇರಬೇಕಾದರೆ ಈ ಸಮಸ್ಯೆ ಗಳಿಂದ ಹೊರಗೆ ಬರಲೇಬೇಕು. ಹೊರಗೆ ಬರಲು ದಾರಿಗಳು ಸಹ ನಮ್ಮೊಳಗೆ ಅಡಗಿರುತ್ತದೆ. ನಿಮ್ಮ ಸಮಸ್ಯೆಗಳ ಕುರಿತು ಸ್ನೇಹಿತರು, ಗುರುಗಳು ಅಥವಾ ಯಾರಾದರೂ ಆತ್ಮೀಯರಲ್ಲಿ ಹಂಚಿಕೊಳ್ಳಿ. ಅಲ್ಲದಿದ್ದರೆ ಮನೋವೈದ್ಯರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ, ಎಲ್ಲವುಗಳಿಗಿಂತ ಆತ್ಮ ಜಾಗೃತಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೇಸಿಐ ಜೋಡುಮಾರ್ಗ ನೇತ್ರಾವತಿ ಆತಿಥ್ಯದಲ್ಲಿ ಭಾನುವಾರ ನಡೆದ ಜೇಸಿಐ ವಲಯ 15ರ ಮಧ್ಯಂತರ ಸಮ್ಮೇಳನ ನಿಲುಮೆ 2023 ರಲ್ಲಿ ಜೇಸಿಐ ಬೈಂದೂರು ಸಿಟಿ ಅತ್ಯುತ್ತಮ ಘಟಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅತ್ಯುತ್ತಮ ಘಟಕ ಅಧ್ಯಕ್ಷ ರನ್ನರ್ ಪ್ರಶಸ್ತಿ, ಓಟ್ ಸ್ಯಾಂಡಿಂಗ್ ಜೇಸಿಐ ಬೈಂದೂರು ಸಿಟಿ ರನ್ನರ್ ಪ್ರಶಸ್ತಿ, ಗೋಲ್ಡನ್ ಲೋ ಪುರಸ್ಕಾರ, ಯುವ ದಿನಾಚರಣೆ ಸಂಭ್ರಮಾಚರಣೆ ಮನ್ನಣೆ, ಪರ್ಮನೆಂಟ್ ಪ್ರಾಜೆಕ್ಟ್ ಕಾರ್ಯಕ್ರಮಕ್ಕಾಗಿ ಮನ್ನಣೆ, ಯುಗಾದಿ ಸಂಭ್ರಮ ಆಚರಣೆ ಮನ್ನಣೆ, ಗಣರಾಜ್ಯೋತ್ಸವ ಸಂಭ್ರಮ ಮನ್ನಣೆ, ರಜತ ಪುರಸ್ಕಾರ ಪ್ರಶಸ್ತಿ, ಚಿತ್ರ ಪ್ರದರ್ಶನ ಪ್ರಶಸ್ತಿ ಇನ್ನೀತರ ಹವಲು ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ. ವಲಯಾಧ್ಯಕ್ಷ ಜೇಸಿ ಪುರುಪೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷ ಅಭಿಲಾಷ್ ಬಿ.ಎ ಪ್ರಶಸ್ತಿಗಳನ್ನು ವಿತರಿಸಿದ್ದರು. ಜೇಸಿಐ ಬೈಂದೂರು ಸಿಟಿ ಅಧ್ಯಕ್ಷ ಕೆ. ನರೇಂದ್ರ ಶೇಟ್, ಸ್ಥಾಪಕಾಧ್ಯಕ್ಷ ಮಣಿಕಂಠ ಎಸ್ ದೇವಾಡಿಗ, ಜೇಸಿರೆಟ್ ಅಧ್ಯಕ್ಷೆ ಗುಲಾಬಿ ಮರವಂತೆ, ಜ್ಯೂನಿಯರ್ ಜೇಸಿ ಅಧ್ಯಕ್ಷ ಹರ್ಷಿತ್ ಎನ್ ಶೇಟ್, ಸ್ಥಾಪಕ ಸದಸ್ಯ ರಾಘವೇಂದ್ರ ಹೊಳ್ಳ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕತಾರ್: ಇತ್ತೀಚಿಗೆ ಡಿ.ಪಿ.ಎಸ್ ಸಭಾಂಗಣ ಏರ್ಪಡಿಸಲಾಗಿದ್ದ “ಬಿಲ್ಲವೋತ್ಸವ-2023” ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಸನ್ಮಾನಿಸಲಾಯಿತು. ಕತಾರ್ ದೇಶದಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುತ್ತ, ಕರ್ನಾಟಕ ಸಂಘ ಕತಾರ್ ಸದಸ್ಯತ್ವವನ್ನು ದಾಖಲೆಯ ಸಂಖೆಗೆ ಹೆಚ್ಚಿಸಿದ ಹೆಮ್ಮೆಗೆ, ಕನ್ನಡ ಚಲನಚಿತ್ರಗಳನ್ನು ಕತಾರ್ ನಲ್ಲಿ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿಕೊಡುವುದಕ್ಕೆ, ಪರಿಸರ ಪರ ಜಾಗೃತಿಗೆ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಸುಪ್ರಸಿದ್ದಗೊಳಿಸಿರುವರು, ಕರೋನ ಮಹಾಮರಿಯ ತಾಂದವದ ಕಾಲದಲ್ಲಿ ‘ಒಂದೇ ಭಾರತ್’ ವಿಶೇಷ ವಿಮಾನ ಸೇವೆಯಲ್ಲಿ ಅವಶ್ಯಕತೆಯಿರುವ ಭಾರತೀಯರನ್ನು ಕತಾರಿನಿಂದ ಮಾತೃ ಭೂಮಿಗೆ ಹಿಂದಿರುಗಲು ಸಹಾಯ ಮಾಡಿರುವುದಕ್ಕೆ ಒಂದು ಕಿರುಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕತಾರ್ ಬಿಲ್ಲವಾಸ್ ಸಂಘದ ಅಧ್ಯಕ್ಷರಾದ ರಘುನಾಥ ಅಂಚನ್, ಉಪಾಧ್ಯಕ್ಷರಾದ ಅಮಿತ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾದ ಸೀಮಾ ಪೂಜಾರಿ, ಬಹರೈನ್ ಬಿಲ್ಲವಾಸ್ ಸಂಘದ ಪ್ರಧಾನ ಕಾರ್ಯದರ್ಶಿ ರೂಪೇಶ್ ಶಾಲಿಯನ್, ಬಹರೈನ್ ಬಿಲ್ಲವಾಸ್ ಸಂಘದ ಪೂರ್ವಾಧ್ಯಕ್ಷರಾದ ಅಜಿತ್ ಬಂಗೇರಾ , ಚಲನಚಿತ್ರ ನಟ ಪೃಥ್ವಿ ಅಂಬಾರ್…
