ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಯುವಜನತೆಗೆ ಮಾದರಿಯಾಗುವ ರೀತಿಯಲ್ಲಿ ಹಿರಿಯ ನಾಗರಿಕರು ಜೀವನ ನಡೆಸುತ್ತಿದ್ದು, ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನುಗೊಳಿಸುವುದು ಪ್ರತಿಯೊಬ್ಬ ಯುವಜನರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು. ಅವರು ಅಂದು ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಹಿರಿಯ ನಾಗರಿಕರ ಸಂಸ್ಥೆಗಳು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ , ವೃದ್ಧಾಶ್ರಮಗಳು ಉಡುಪಿ ಹಾಗೂ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶುಮಂದಿರ ಇದರ ಆಶ್ರಯದಲ್ಲಿ ಶಿಶು ಮಂದಿರದ ಪುಟಾಣಿಗಳಿಂದ 40ನೇ ವರ್ಷದ ಮುದ್ದುರಾದ ಮತ್ತು ಮುದ್ದುಕೃಷ್ಣ ವೇಷಗಳ ಪ್ರದರ್ಶನ ಹಾಗೂ ನೃತ್ಯ ಮತ್ತು ಅಭಿನಯಗಳ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಗಮಿಸಿದ ಕುಂದಾಪುರದ ಸೇವಾ ಸಂಗಮ ಟ್ರಸ್ಟ್ ಇದರ ವಿಶ್ವಸ್ತರಾದ ರಿಷಿರಾಜ್ ಸಾಸ್ತಾನ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರಸ್ತುತ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿಸಿ ಪಾಲಕರು ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಎಳೆವೆಯಲ್ಲಿಯೇ ನೀಡುವ ಉದ್ದೇಶದಿಂದ ಇಂತಹ ಶಿಶುಮಂದಿರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕೆಂದು ಕರೆ ನೀಡಿದರು. ಸಮಾರಂಭದ ಸಭಾಧ್ಯಕ್ಷತೆ ವಹಿಸಿದ್ದ ಸೇವಾ ಸಂಗಮ ಬೈಂದೂರು ಇದರ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಅವರು ಸಹಕರಿಸಿದ ಸರ್ವರಿಗೂ ವಂದಿಸಿ, ಸಂಸ್ಥೆ ಏಳಿಗೆ ಹಾಗೂ ಕಾರ್ಯಚಟುವಟಿಕೆಯಲ್ಲಿ ಸರ್ವ ಪಾಲಕರ ಸಹಕಾರ ಕೋರಿದರು. ವೇದಿಕೆಯಲ್ಲಿ ಸೇವಾ ಸಂಗಮದ ಉಪಾಧ್ಯಕ್ಷರಾದ ರವೀಂದ್ರ ಶಾನುಭಾಗ್ ಮತ್ತು ವ್ಯವಸ್ಥಾಪಕರಾದ ದಿನೇಶ್ ಪಡುವರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳು ಆದ ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಅವರ ಆಶ್ರಯದಲ್ಲಿ ದಿ.ಎ.ವಿ ಹೆಬ್ಬಾರ್ ಹಾಗೂ ದಿ.ಅವಿನಾಶ್ ಹೆಬ್ಬಾರ್ ಸಂಸ್ಮರಣೆ ಅಂಗವಾಗಿ ಸೀತಾರ್ ವಾದನ ಹಾಗೂ ಗಾಯನ ಕಾರ್ಯಕ್ರಮ ಕುಂದಾಪುರ ಪಾರಿಜಾತ ಹೋಟೆಲ್ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ವಿದ್ವಾನ್ ಭಾರ್ಗವ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಖ್ಯಾತ ವಿದ್ವಾನ್ ಭಾರ್ಗವ ಹೆಗಡೆ ಅವರಿಂದ ಸೀತಾರ್ ವಾದನ ಕಾರ್ಯಕ್ರಮ ನಡೆಯಿತು. ವಿಘ್ನೇಶ್ ಕಾಮತ್ ಕೋಟೇಶ್ವರ ತಬಲಾದಲ್ಲಿ ಸಹಕರಿಸಿದರು. ನಿಹಾರಿಕಾ ದೇರಾಜೆ ಅವರಿಂದ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಭಾರವಿ ದೇರಾಜೆ, ಹಾರ್ಮೋನಿಯಂನಲ್ಲಿ ಶಶಿಕಿರಣ್ ಮಣಿಪಾಲ ಮತ್ತು ವಿವೇಕ ಪೈ ಸಹಕರಿಸಿದರು. ಮುಖ್ಯ ಅತಿಥಿಯಾಗಿ ಸಂಗೀತ ಭಾರತಿ ಸಂಸ್ಥೆಯ ವಿಶ್ವಸ್ಥರಾದ ಎ.ಎಸ್.ಎನ್.ಹೆಬ್ಬಾರ್, ಡಾ| ಎಚ್.ಆರ್.ಹೆಬ್ಬಾರ್, ಕೆ.ಸೀತಾರಾಮ ನಕ್ಕತ್ತಾಯ, ರೇಖಾ ಕಾರಂತ, ಸುಪ್ರಸನ್ನ ಬಿ.ನಕ್ಕತ್ತಾಯ ಉಪಸ್ಥತರಿದ್ದರು. ಸಂಗೀತ ಭಾರತಿ ಸಂಸ್ಥೆಯ ಅಧ್ಯಕ್ಷ ಕೆ.ಶ್ರೀಧರ ಕಾಮತ್ ಅತಿಥಿಗಳನ್ನು ಗೌರವಿಸಿದರು. ಡಾ| ಆದರ್ಶ ಹೆಬ್ಬಾರ್ ಕಲಾವಿದರಿಗೆ ಸ್ಮರಣಿಕೆ ನೀಡಿದರು. ಯು.ಎಸ್.ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ನಾರಾಯಣ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಿರಿಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ ಅಪೂರ್ಣ ಗ್ರಾಮ ಸಭೆ ನಡೆಸಲಾಗಿದ್ದು ಎರಡರಿಂದ ಮೂರು ಅಜಿಂಡಗಳಿಗೆ ಮಾನ್ಯತೆ ನೀಡಿಲ್ಲ, 2023-24ನೇ ಸಾಲಿನ ಜಮಾ ಖರ್ಚುಗಳನ್ನು ಓದಿ ಹೇಳಿಲ್ಲ, ಮುಂದಿನ ಸಾಲಿನಲ್ಲಿ ಮಾಡುವ ಕ್ರೀಯಾಯೋಜನೆಗಳ ಕಾಮಗಾರಿಗಳ ಪಟ್ಟಿ ಸಭೆಗೆ ತಿಳಿಸಿಲ್ಲ ಹಾಗೂ ಮಂಜೂರಾತಿ ಪಡೆದಿಲ್ಲ, ವಾರ್ಡು ಸಭೆಯ ನಡವಳಿ ಬಗ್ಗೆ ವಿಷಯ ತಿಳಿಸಿಲ್ಲ, ಈ ಎಲ್ಲಾ ಲೋಪಗಳನ್ನು ಮರೆಮಾಚಿಸುವ ಸಲುವಾಗಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಮಾದರಿ ಗ್ರಾಮಸಭೆ ಎಂದು ಬಿಂಬಿಸಿ ಪ್ರಜ್ಞಾವಂತ ಗ್ರಾಮಸ್ಥರ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ ಎಂದು ಕಿರಿಮಂಜೇಶ್ವರ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸುಬ್ಬಣ್ಣ ಶೆಟ್ಟಿ ಆರೋಪಿಸಿದ್ದಾರೆ. ಅವರು ಬೈಂದೂರು ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಾಗೂರು ಮಹಾಲಸಾ ಕಲ್ಬರಲ್ ಹಾಲ್ನಲ್ಲಿ ನಡೆದ ಗ್ರಾಮಸಭೆಯಲ್ಲಿ ಮೂಲ ಆಶಯಗಳಿಗೆ ವಿರುದ್ಧವಾಗಿ ಅಧ್ಯಕ್ಷರು, ಪಿಡಿಓ, ನೋಡಲ್ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಗ್ರಾಮಸ್ಥರಿಗೆ ಮತನಾಡಲೂ ಅವಕಾಶ ಕೊಡದೇ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಕಾಟಾಚಾರಕ್ಕಾಗಿ ತರಾತುರಿಯಲ್ಲಿ ಗ್ರಾಮಸಭೆಯನ್ನು ಮುಗಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕುಂದಾಪುರ ಇವರು ಆಯೋಜಿಸಿದ ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಬುಲ್ ಬುಲ್ಸ್ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ನಿಂದ ಸ್ವಂತ ಉದ್ಯೋಗ ಕಲ್ಪಿಸುವ ನೆಲೆಯಲ್ಲಿ ನ್ಯೂ ಮೆಡಿಕಲ್ ಸೆಂಟರ್ನ ಡಾ. ರಂಜನ್ ಶೆಟ್ಟಿ ಸಹಕಾರದೊಂದಿಗೆ ಹೇರಿಕುದ್ರು ನಿವಾಸಿ ಚಂದ್ರಶೇಖರ ಶೆಟ್ಟಿ ಅವರಿಗೆ ಹುಲ್ಲು ಕಟ್ಟಿಂಗ್ ಯಂತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ಶೇಖರ್ ಶೆಟ್ಟಿ ಕಾರ್ಯದರ್ಶಿ ಉದಯ್ ಶೆಟ್ಟಿ, ಕ್ಲಬ್ನ ಸದಸ್ಯರಾದ ರವಿರಾಜ್ ಶೆಟ್ಟಿ, ಸುನಿಲ್ ಶೆಟ್ಟಿ ಹೇರಿಕುದ್ರು, ಸ್ಥಳೀಯರಾದ ಮಹಾಬಲ ಪೂಜಾರಿ, ಸಂಜೀವ್ ಪೂಜಾರಿ, ಲಕ್ಷ್ಮಣ್ ಶೆಟ್ಟಿ, ದಿನಕರ್ ಶೆಟ್ಟಿ, ಮಹೇಂದ್ರ, ಪ್ರಫುಲ್, ಪ್ರಸನ್ನ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಟ್ರಸ್ಟ್ ಫಾರ್ ರೂರಲ್ ಅಪ್ಲಿಫ್ಟ ಮೆಂಟ್ ಸ್ಟ್ರಾಟಜೀಸ್ ಬೆಂಗಳೂರು ವತಿಯಿಂದ ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯನ್ನು ಎಲ್. ಕೆ. ಜಿ. ಇಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ಕ್ನ ವಿದ್ಯಾರ್ಥಿನಿ ಅಮೂಲ್ಯ ತೃತೀಯ ಸ್ಥಾನಗಳಿಸಿದ್ದಾಳೆ. ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ/ ಬೋಧಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: “ಸ್ಥಿರತೆ ಹಾಗೂ ಹೊಣೆಗಾರಿಕೆಯಿಂದ ಲೆಕ್ಕ ಪರಿಶೋಧಕರಾಗಿ” ಎಂದು ಘೋಷಿಸುತ್ತಾ, ಕುಂದಾಪುರ ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ. ಎ ಮತ್ತು ಸಿ. ಎಸ್ ತರಗತಿಗಳನ್ನು ಮಂಗಳವಾರದಂದು ಗಣಪತಿ ಸ್ತುತಿ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಎಲ್ಲಾ ಗೌರವಾನ್ವಿತ ಅತಿಥಿ ಮಹಾಶಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಲೆಕ್ಕ ಪರಿಶೋಧಕರು ಹಾಗೂ ಸಿ. ಎಸ್ ತಜ್ಞರಾದ ಪ್ರದೀಪ್ ಜೋಗಿ ಚೇರ್ಮ್ನ್ ಆಫ್ ಐ. ಸಿ .ಎ. ಐ, ಉಡುಪಿ ಇವರು ಸಿ. ಎ/ಸಿ. ಎಸ್ ತರಗತಿಗಳ ಪುನಶ್ಚೇತನ ಕಾರ್ಯಕ್ರದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಲೆಕ್ಕ ಪರಿಶೋಧನೆಯ ಬಗ್ಗೆ ಮಾಹಿತಿಯ ಜೊತೆಗೆ ಲೆಕ್ಕ ಪರಿಶೋಧನಾ ಕ್ಷೇತ್ರದಲ್ಲಿರುವ ವಿಪಲ ಅವಕಾಶಗಳು ಮತ್ತು ಪೂರ್ವ ತಯಾರಿಯ ಕುರಿತು ಅರಿವು ಮೂಡಿಸುವ ಬಗ್ಗೆ ಮಾತನಾಡುತ್ತಾ, ನಿರಂತರ ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಮುಂದುವರೆದಲ್ಲಿ ಸಿ. ಎ ಪರೀಕ್ಷೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2024-25ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ “ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ 15 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರೌಢ ಶಾಲಾ ಶಿಕ್ಷಕ ವಿಭಾಗದಲ್ಲಿ ಬೈಂದೂರು ವಲಯದಿಂದ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾದ ಮಂಜುನಾಥ ಶೆಟ್ಟಿ, ಕುಂದಾಪುರ ವಲಯದಿಂದ ಬಿದ್ಕಲ್ಕಟ್ಟೆ ಕೆ. ಪಿ. ಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಕರುಣಾಕರ ಶೆಟ್ಟಿ, ಬ್ರಹ್ಮಾವರ ವಲಯದಿಂದ ಕೋಡಿಕನ್ಯಾನ ಸೋಮಬಂಗೇರ ಸರಕಾರಿ ಪ್ರೌಢಶಾಲೆ ಸಹ ಶಿಕ್ಷಕಿಯಾದ ಜ್ಯೋತಿ ಕೃಷ್ಣ ಪೂಜಾರಿ, ಉಡುಪಿ ವಲಯದಿಂದ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜು ಸಹ ಶಿಕ್ಷಕಿಯಾದ ಮಾಲತಿ ವಕ್ವಾಡಿ ಹಾಗೂ ಕಾರ್ಕಳ ಶಿವಪುರ ಚಿತ್ರಕಲಾ ಶಿಕ್ಷಕರಾದ ಕಮಲ್ ಅಹ್ಮದ್ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ► ಕುಂದಾಪುರ: ರಾಮಕೃಷ್ಣ ಬಿ. ಜಿ. ಅವರಿಗೆ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿ – https://kundapraa.com/?p=76098 ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಬೈಂದೂರು ವಲಯದಿಂದ ಹೆರಂಜಾಲು ಸರಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ರಾಜಾಧ್ಯಕ್ಷರಾದ ದಿವಗಂತ ಪುಂಡಲಿಕ ಹಾಲಂಬಿಯವರ ನೆನಪಿಗಾಗಿ ಅವರ ಧರ್ಮಪತ್ನಿ ಸರೋಜ ಹಾಲಂಬಿ ಅವರು ಸ್ಥಾಪಿಸಿದ ಪುಂಡಲಿಕ ಹಾಲಂಬಿ ಯಕ್ಷ ಪುರಸ್ಕಾರಕ್ಕೆ ಹಿರಿಯ ಯಕ್ಷಗಾನ ಕಲಾವಿದರಾದ ಐರೋಡಿ ಗೋವಿಂದಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರ 25,000 ನಗದು ಹಾಗೂ ಫಲಕ ಒಳಗೊಂಡಿರುತ್ತದೆ. ಸೆ. 15ರ ಸಂಜೆ 4.30ಕ್ಕೆ ಗುಂಡ್ಮಿ ಯಕ್ಷ ಕಲಾರಂಗದಲ್ಲಿ ವಿತರಿಸಲಾಗುವುದೆಂದು ಕ.ಸಾ.ಪ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹಾಗೂ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
