Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸ್ಥಳೀಯ ಕೇಬಲ್ ಟಿ.ವಿ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಅನಪೇಕ್ಷಿತ ಸುದ್ದಿಗಳನ್ನು ಪ್ರಸಾರ ಮಾಡಿದ್ದಲ್ಲಿ ಅಂತಹ ಕೇಬಲ್ ಟಿ.ವಿ ಆಪರೇಟರ್ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕೇಬಲ್ ಟಿ.ವಿ ಯಲ್ಲಿ ಪ್ರಸಾರ ವಾಗುವ ಯಾವುದೇ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಭಂಗ ತರುವ ಯಾವುದೇ ಸಮುದಾಯಗಳ ಮಧ್ಯೆ ವೈರತ್ವ ತರುವ, ನೋವು ಉಂಟು ಮಾಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಹಾಗೂ ಜಾಹೀರಾತುಗಳು ಸಂಹಿತೆಗೆ ಅನುಗುಣವಾಗಿಲ್ಲದೇ ಇದ್ದಲ್ಲಿ ಅಥವಾ ಯಾವುದೇ ಆಧಾರವಿಲ್ಲದೇ ವಿವಿಧ ಧರ್ಮ , ಜನಾಂಗ, ಭಾಷೆ ಅಥವಾ ಪ್ರಾದೇಶಿಕ ಗುಂಪುಗಳ ಅಥವಾ ಜಾತಿ ನಡುವೆ ವೈಷ್ಯಮ್ಯದ ಅಥವಾ ವೈರತ್ವದ ಭಾವನೆಗಳನ್ನು ಬೆಳೆಸುವಂತಿದ್ದಲ್ಲಿ ಅವುಗಳನ್ನು ಪ್ರಸಾರ ಮಾಡುವಂತಿಲ್ಲ ಎಂದರು. ಕೇಬಲ್ ಆಪ್‌ರೇಟರ್ಗಳ ಗ್ರಾಹಕರುಗಳು ನಿಗಧಿಪಡಿಸಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಳವಾಡಿಯ ಫ್ರೆಂಡ್ಸ್ ಮಾರಿಕಾಂಬಾ ಕ್ರಿಕೆಟರ್ಸ್ ನೇತೃತ್ವದಲ್ಲಿ ಜ.27 ಹಾಗೂ 28ರಂದು ನಡೆಯಲಿರುವ ಕೆಪಿಎಲ್ – 2024 ಕ್ರಿಕೆಟ್ ಪಂದ್ಯಾಟದ ಪೋಸ್ಟರ್ ಬಿಡುಗಡೆ ಹಾಗೂ ಹರಾಜು ಪ್ರಕ್ರಿಯೆ ಇತ್ತಿಚಿಗೆ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಜರುಗಿತು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕುಮಾರ್ ಶೆಟ್ಟಿ ಕಾರಿಕಟ್ಟೆ ಕೆಪಿಎಲ್ ಪೋಸ್ಟರ್ ಬಿಡುಗಡೆ ಮಾಡಿದರು. ಅನುದೀಪ್ ಹೆಗ್ಡೆ ಕಳವಾಡಿ ಬಿಡ್ಡಿಂಗ್ ಬಾಕ್ಸ್ ತೆರೆದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿ.ಎನ್.ಎಸ್ ಮಾಲೀಕರಾದ ನಾಗೇಂದ್ರ ಮಯ್ಯಾಡಿ ಹಾಗೂ ಫ್ರೆಂಡ್ಸ್ ಮಾರಿಕಾಂಬಾ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ಕಾರ್ಯದರ್ಶಿ ಪೂರ್ಣಚಂದ್ರ ಮತ್ತು ಸಂಸ್ಥೆಯ ಸರ್ವ ಸದಸ್ಯರು ಎಲ್ಲ ತಂಡದ ಮಾಲೀಕರು ಐಕಾನ್ ಆಟಗಾರರು ಉಪಸ್ಥಿತರಿದ್ದರು. ಸಂಸ್ಥೆಯ ನಾಗೇಶ್ ಕಳವಾಡಿ ನಿರೂಪಿಸಿದರು. ಶಿವಕುಮಾರ್ ಹರಾಜು ಪ್ರಕ್ರಿಯೆ ನಡೆಸಿದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಯಂತ್ರ ಜಗತ್ತು ಈಗ ಮನುಷ್ಯನನ್ನು ಜೀವ ಜಗತ್ತನಿಂದ ದೂರ ಸೆಳೆಯುತ್ತಿದೆ ಮತ್ತು ಜೀವ ಜಗತ್ತನ್ನು ನಾಶಮಾಡುತ್ತ್ತಿದೆ ಎಂದು ಕತೆ, ಕಾದಂಬರಿಕಾರ, ವಿಮರ್ಶಕ ಶ್ರೀಧರ ಬಳಗಾರ ಹೇಳಿದರು. ಮರವಂತೆಯ ಸಾಧನಾ ಸಮಾಜ ಸೇವಾ ವೇದಿಕೆ, ಹಳೆ ವಿದ್ಯಾರ್ಥಿ ಸಂಘ, ಆಸರೆ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಐ. ವಸಂತಕುಮಾರಿ ಕಲಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಯೋಗೀಂದ್ರ ಮರವಂತೆ ಅವರ ’ಏರೋ ಪುರಾಣ-ವಿಮಾನ ಲೋಕದ ಅನುಭವ, ಅಚ್ಚರಿ’ ಪ್ರಬಂಧ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು. ಈಗ ವೈದ್ಯರು, ವಿಜ್ಞಾನಿಗಳು ಮನುಷ್ಯನನ್ನು ಯಂತ್ರವೆಂದು ಪರಿಗಣಿಸುತ್ತಿರುವಾಗ ವಿಮಾನ ತಂತ್ರಜ್ಞ ಆಗಿರುವ ಯೋಗೀಂದ್ರ ಈ ಕೃತಿಯಲ್ಲಿ ವಿಮಾನಗಳನ್ನು ಜೀವಿಗಳಾಗಿ ಬಿಂಬಿಸುತ್ತಾರೆ. ಜೀವಿಗಳಿಗಿದ್ದಂತೆ ಅವುಗಳಿಗೆ ಹುಟ್ಟು, ಬಾಲ್ಯ, ಯೌವನ, ವೃದ್ಧಾಪ್ಯ, ಸಾವು ಇದೆ. ಅವುಗಳ ಜೀವಯಾನ ಅವುಗಳದ್ದೇ ಆದ ಸ್ಮಶಾನದಲ್ಲಿ ಅಂತ್ಯಗೊಳ್ಳುತ್ತದೆ ಎನ್ನುವುದನ್ನು ವಿವಿಧ ರೂಪಕಗಳ ಮೂಲಕ ಚಿತ್ರಿಸುತ್ತಾರೆ. ವಿಮಾನಗಳ ತಾಂತ್ರಿಕ ಪರಿಚಯ ನೀಡುವ ಕೃತಿಗಳು ಕನ್ನಡದಲ್ಲಿ ಬಂದಿರಬಹುದು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಜೀವನವೆಂಬುದು ಒಂದು ಸುದೀರ್ಘ ಪ್ರಯಾಣ. ಅದರ ಇಂಚ್ ಇಂಚ್ ಹ್ಯಾಂಗೆ ನೆನಪಿಟ್ಕಂಡ್ರೂ ಇಪ್ಪತ್ತೈದನೇ ವರ್ಷ ಎಷ್ಟು ಗಡ್ಜ್ ಮಾಡ್ಲಕ್ಕು ಎಷ್ಟು ಚಂದ ಮಾಡ್ಲಕ್ ಅಂದೇಳಿ ಹೊಸರು ಶಾಲೆಯವರು ತೋರ್ಸಿರ್ ಎಂದು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು. ಅವರು ಸೋಮವಾರ ಹೊಸೂರು ಶ್ರೀ ಮೂಕಾಂಬಿಕಾ ದೇವಳ ಪ್ರ್ರೌಢಶಾಲೆ ರಜತ ಸಂಭ್ರಮ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಳೆ ವಿದ್ಯಾರ್ಥಿಗಳು ಶಾಲೆಗೆ ಬಸ್, ವಿದ್ಯಾರ್ಥಿಗಳನ್ನು ಕರ್ಕಂಡ್ ಬಪ್ಪುಕೆ ಡ್ರೈವರ್ ಕೊಟ್ರು..‌ ಲೈಬ್ರರಿ ಮಾಡಿ ಕೊಡ್ತಿದಾರೆ. ಅಡುಗೆ ಚಪ್ಪರ, ಸೈಕಲ್ ಸ್ಟ್ಯಾಂಡ್ ಮಾಡಿ ಕೊಡ್ತ್ರು. ಇಷ್ಟೆಲ್ಲಾ ಆದಮೇಲೆ ನಮ್ಮ ಶಾಲೆ ಅಂದ್ರೆ ದೇವಸ್ಥಾನ ಇದ್ಹಾಂಗೆ ಅಂತ ಸ್ವಾಗತ ಗೋಪುರ ಮಾಡಿಕೊಟ್ಟಿರ್. ಶಾಲೆಗೆ ಸ್ವಾಗತ ಗೋಪುರ ಮಾಡಿ ಇದು ನಮ್ ದೇವಸ್ಥಾನ ಬಪ್ಪೂಕಿದ್ರೆ ಕೈಮುಕ್ಕಂಡ್ ಬನ್ನಿ ಅಂತ ಗೋಪುರ ಕಟ್ಟಿಕೊಟ್ಟಿರ್. ಕನ್ನಡ ಶಾಲೆ ಹೇಗಿರಬೇಕು ಎನ್ನೋದಕ್ಕೆ ಹಳೆ ವಿದ್ಯಾರ್ಥಿಗಳ, ಅಭಿಮಾನಿಗಳ ಕೊಡುಗೆ ಹೇಗಿರಬೇಕು ಎನ್ನೋದು ಹೊಸೂರು ಶಾಲೆ ಸಾಕ್ಷಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನೇಮಕಗೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಶ್ರೀನಿವಾಸ ಪೂಜಾರಿ ಅವರನ್ನು ನೇಮಕ ಮಾಡಿದ್ದಾರೆ. ವಿಧಾನಪರಿಷತ್ ವಿಪಕ್ಷ ಉಪ ನಾಯಕನಾಗಿ ಸುನೀಲ್ ವಲ್ಯಾಪುರೆ ಅವರನ್ನು ನೇಮಕ ಮಾಡಿದರೆ, ವಿಧಾನಸಭೆಯ ವಿಪಕ್ಷ ಉಪ ನಾಯಕನಾಗಿ ಅರವಿಂದ ಬೆಲ್ಲದ್ ನೇಮಕವಾಗಿದ್ದಾರೆ. ಇನ್ನು ವಿಧಾನಸಭೆಯ ಮುಖ್ಯ ಸಚೇತಕರಾಗಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ನೇಮಕವಾದರೆ, ವಿಧಾನಪರಿಷತ್​ನ ಮುಖ್ಯ ಸಚೇತಕರಾಗಿ ಎನ್.ರವಿಕುಮಾರ್ ಅವರನ್ನು ನೇಮಿಸಲಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಹಲವು ತಿಂಗಳುಗಳ ಬಳಿಕ ಬಿಜೆಪಿ ಮೇಲ್ಮನೆ ವಿಪಕ್ಷ ಸ್ಥಾನ ಹಾಗೂ ಇನ್ನಿತರ ಹುದ್ದೆಗಳನ್ನು ನೇಮಕ ಮಾಡಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿಯ ಶ್ರೀ ಕೃಷ್ಣ ಪರ್ಯಾಯೋತ್ಸವವನ್ನು ವೈಭವಪೋಷಿತವಾಗಿ ನಡೆಸಲು ನಿರ್ಧರಿಸಲಾಗಿದ್ದು, ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ತಮ್ಮ ಪ್ರಿಯ ಶಿಷ್ಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದಂಗಳವರೊಂದಿಗೆ ಜ.18 ರಂದು ಸರ್ವಜ್ಞ ಪೀಠವನ್ನೇರಿ ಶ್ರೀ ಕೃಷ್ಣ ಪೂಜಾ ದೀಕ್ಷೆ ಕೈಗೊಳ್ಳಲಿದ್ದಾರೆ. ಉಡುಪಿ ಪರ್ಯಾಯೋತ್ಸವಕ್ಕೆ ಪ್ರತಿ ಬಾರಿಯಂತೆ ಈ ಬಾರಿಯೂ ಹೊರೆ ಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನಾ ಸಭೆ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಪರ್ಯಾಯ ಮಹೋತ್ಸವ ಸಮಿತಿ ಪರವಾಗಿ ಮಠದ ದಿವಾನರಾದ ನಾಗರಾಜ ಆಚಾರ್ಯ, ಸ್ವಾಗತ ಸಮಿತಿ ಉಪಾಧ್ಯಕ್ಷರಾದ ರವೀಂದ್ರ ಆಚಾರ್ಯ, ಜತೆ ಕಾರ್ಯದರ್ಶಿ ರಘುಪತಿ ರಾವ್ ಉಪಸ್ಥಿತರಿದ್ದು, ಪರ್ಯಾಯ ಮಹೋತ್ಸವಕ್ಕೆ ಆಹ್ವಾನ ನೀಡಿದರು. ಹೊರೆ ಕಾಣಿಕೆ ಸಂಚಾಲಕರಾದ ಬೈಕಾಡಿ ಸುಪ್ರಸಾದ ಶೆಟ್ಟಿ ಮಾತನಾಡಿ, ಶ್ರೀ ಪುತ್ತಿಗೆ ಮಠಾಧೀಶರ ಪರ್ಯಾಯೋತ್ಸವದಲ್ಲಿ ಹೊರೆ ಕಾಣಿಕೆ ಅರ್ಪಣೆ ಶ್ರೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ನೋಡುಗರಾಗುವುದರ ಜೊತೆಗೆ ತಾವು ಕ್ರಿಯಾಶೀಲವಾಗಿ ಮಾಡುವಂತವರಾಗಬೇಕು. ಆ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಜ್ಞಾನ ಸಿಗಲು ಸಾಧ್ಯ. ಎಲ್ಲಾ ವಿಭಾಗಗಳಲ್ಲಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ, ವ್ಯಕ್ತಿತ್ವ ವಿಕಸನ ಸಾಧ್ಯ. ಇದು ತರಗತಿ ಕೋಣೆಯ ಪಠ್ಯ ಶಿಕ್ಷಣಕ್ಕಿಂತ ಇಂತಹ ಸಾಹಿತ್ಯ ಸ್ಪರ್ಧೆಯಂತಹ ಪಠ್ಯಪೂರಕ ಚಟುವಟಿಕೆಗಳಿಂದ ಸಾಧ್ಯ ಎಂದು ಇಂಡಿಯನ್ ರೆಡ್ಕ್ರಾಸ್ ಸಂಸ್ಥೆ ಉಡುಪಿ ಘಟಕದ ಗೌರವ ಕಾರ್ಯದರ್ಶಿಗಳಾದ ಡಾ| ಗಣನಾಥ ಶೆಟ್ಟಿ ಎಕ್ಕಾರ್ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೆಶನಾಲಯದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್-ಕಾಲೇಜು ಸಾಹಿತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಅಂಕಣಕಾರ ಯೋಗೇಂದ್ರ ಮರವಂತೆ ಮಾತನಾಡಿ, ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಲು ಭಾಷೆಯ ಬಳಕೆ ಅಗತ್ಯ ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ| ಗಣೇಶ್ ಸಂಜೀವ್ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ|…

Read More