ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪರಿಸರ ಉಳಿದರೆ ನಮ್ಮೆಲ್ಲರ ಉಳಿವು ಸಾಧ್ಯವಿದೆ. ಸಮೃದ್ಧ ಪರಿಸರವೆಂಬುದು ಉತ್ತಮ ಆರೋಗ್ಯಕ್ಕೆ ಪೂರಕ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಬೈಂದೂರು ವತಿಯಿಂದ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ರೋಟರಿ ವನದಲ್ಲಿ ಶುಕ್ರವಾರ ವನಮಹೋತ್ಸವ – 2024 ಕಾರ್ಯಕ್ರಮದಲ್ಲಿ ಗೀಡ ನೆಟ್ಟು ಮಾತನಾಡಿದರು. ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಮೋಹನ್ ರೇವಣ್ಕರ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಹಾಯಕ ಗವರ್ನರ್ ಸೋಮನಾಥ ಆರ್, ಐ. ನಾರಾಯಣ್, ಮಂಜುನಾಥ್ ಮಹಾಲೆ, ಗೋವಿಂದ ಎಂ, ಮಣಿಕಂಠ ದೇವಾಡಿಗ ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯದರ್ಶಿ ಸುನಿಲ್ ಹೆಚ್. ಜಿ. ಕಾರ್ಯಕ್ರಮ ನಿರೂಪಿಸಿದರು. ರೋಟರಿ ವನದಲ್ಲಿ 50 ಗಿಡಗಳನ್ನು ನೆಟ್ಟು ಗಿಡಗಳ ಪೋಷಣೆಗೆ ಪ್ರತಿಜ್ಞೆ ಕೈಗೊಳ್ಳಲಾಯಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಲಯನ್ಸ್ 317ಸಿ, ಪ್ರಾಂತ್ಯ 6ರ 2024-25ನೇ ಸಾಲಿನ ವಲಯಧ್ಯಕ್ಷರಾಗಿ ಗಿರೀಶ್ ಶ್ಯಾನುಭಾಗ್ ಆಯ್ಕೆಯಾಗಿದ್ದಾರೆ. ಗಿರೀಶ್ ಶ್ಯಾನುಭಾಗ್ ಅವರು ಲಯನ್ಸ್ ಕ್ಲಬ್ ಬೈಂದೂರು ಉಪ್ಪುಂದದ 2023-24ರ ಅಧ್ಯಕ್ಷರಾಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಜೆಸಿಐ ಉಪ್ಪುಂದದ ಅಧ್ಯಕ್ಷರಾಗಿ, ವಲಯ ತರಬೇತುದಾರರಾಗಿ, ಸೀನಿಯರ್ ಚೇಂಬರ್ ಇಂಟರನ್ಯಾಶ್‍ನಲ್ ಉಪ್ಪುಂದ ಲೀಜನ್‍ನ ಅಧ್ಯಕ್ಷರಾಗಿ ಪ್ರಸ್ತುತ ರಾಷ್ಟ್ರೀಯ ಸಂಯೋಜಕರಾಗಿ, ಉಪ್ಪುಂದ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರಾಗಿದ್ದ ಶ್ಯಾನುಭಾಗ್ ಅವರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಅಕ್ಷರಸಿರಿ ಪ್ರಶಸ್ತಿ ಪಡೆದಿದ್ದು, ಪ್ರಸ್ತುತ ನಿವೃತ್ತರಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ಬಹು ಕಾರ್ಯಕ ಸಿಬ್ಬಂದಿ (ತಾಂತ್ರಿಕೇತರ) ಎಂ.ಟಿ.ಎಸ್ ಮತ್ತು ಹವಾಲ್ದಾರ್ (ಸಿ.ಬಿ.ಐ.ಸಿ & ಸಿ.ಬಿ.ಎನ್.) ಹುದ್ದೆಗಳ ನೇಮಕಾತಿಗೆ ಆನ್‌ಲೈನ್ www.ssckkr.kar.nic.in ಮತ್ತು https://ssc.gov.in ಪೋರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿಗೆ ಅರ್ಹ ಅಭ್ಯರ್ಥಿಗಳು 2024ರ ಆಗಸ್ಟ್ 01 ರಂತೆ ಎಂ.ಟಿ.ಎಸ್ ಹುದ್ದೆಗಳಿಗೆ 18 ರಿಂದ 25 ಹಾಗೂ ಹವಾಲ್ದಾರ್ ಹುದ್ದೆಗಳಿಗೆ 18 ರಿಂದ 27 ವರ್ಷಗಳ ನಿರ್ದಿಷ್ಠ ವಯೋಮಿತಿ ಹೊಂದಿರುವುದರೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಆನ್‌ಲೈನ್ ನೊಂದಣಿಗೆ ಜುಲೈ 31 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-25502520 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದೆಹಲಿ ಕರ್ನಾಟಕ ಸಂಘದ ವತಿಯಿಂದ ಅಗಸ್ಟ್ 1ರಂದು ಆಯೋಜಿಸಲಾಗಿರುವ ಕರ್ನಾಟಕದ ನೂತನ ಸಂಸದವರು, ಸಚಿವರು ಹಾಗೂ ರಾಜ್ಯಸಭಾ ಸದಸ್ಯರಿಗೆ ಸನ್ಮಾನ ಅಭಿನಂದನಾ ಕಾರ್ಯಕ್ರಮದ ಬಳಿಕ ಬೈಂದೂರು ಲಾವಣ್ಯ ಸಂಸ್ಥೆಯ ನಾಟಕ ಪ್ರದರ್ಶನಗೊಳ್ಳಲಿದೆ. ಅಗಸ್ಟ್ 1ರ ಗುರುವಾರ ಸಂಜೆ 4:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಲಾವಣ್ಯ ರಿ. ಬೈಂದೂರು ಸಂಸ್ಥೆಯ ಪ್ರಸಿದ್ಧ ನಾಟಕ ́ನಾಯಿ ಕಳೆದಿದೆ ́ ಪ್ರದರ್ಶನಗೊಳ್ಳಲಿದೆ. ನಾಟಕವನ್ನು ರಾಜೇಂದ್ರ ಕಾರಂತ್ ಅವರು ರಚಿಸಿ ನಿರ್ದೇಶಿಸಿದ್ದು, ಲಾವಣ್ಯದ ಕಲಾವಿದರು ಅಭಿನಯಿಸಿದ್ದಾರೆ.
ಬೈಂದೂರು ಚಂದ್ರಶೇಖರ ನಾವಡ | ಕುಂದಾಪ್ರ ಡಾಟ್ ಕಾಂ.ಯುದ್ಧ ಎನ್ನುವ ಶಬ್ಧವೇ ಭಯ ಹುಟ್ಟಿಸುವಂತಹದ್ದು. ಗಡಿಯಿಂದ ಸಾವಿರಾರು ಕಿಮೀ ದೂರವಿರುವ ಕನ್ನಡಿಗರಿಗೆ ಸೈನ್ಯ ಸಂಘರ್ಷದ ನೇರ ಅನುಭವ ಇಲ್ಲವಾದದ್ದರಿಂದ ಯುದ್ಧದ ಭೀಕರ ಪರಿಣಾಮದ ಕಲ್ಪನೆ ಅನೂಹ್ಯ. ಆದರೂ ಮಾಧ್ಯಮಗಳ ಮೂಲಕ ವರ್ತಮಾನದಲ್ಲಿ ಕಾಣುತ್ತಿರುವ ಪ್ಯಾಲೇಸ್ತೀನಿನ ಗಾಜಾದಲ್ಲಿನ ರಕ್ತಪಾತ ನಮ್ಮ ಮನ ಕಲಕುತ್ತದೆ. ಒಂದೆರಡು ವರ್ಷಗಳ ಹಿಂದೆ ಯುದ್ಧಭೀತಿಯಲ್ಲಿ ದೇಶ ಬಿಟ್ಟು ಓಡಲು ವಿಮಾನದ ರೆಕೆ, ಚಕ್ರಕ್ಕೆ ಜೋತು ಬಿದ್ದ ಭಯವಿಹ್ವಲ ಅಫಘಾನೀಯರ ದಾರುಣ ದೃಶ್ಯ ನಮ್ಮ ಕಣ್ಣ ಮುಂದೆ ಬರುತ್ತದೆ. 1971ರ ನಂತರ ಶಾಂತಿ ಸಮೃದ್ಧಿಯಿಂದ ಬದುಕುತ್ತಿದ್ದ ಜಮ್ಮು ಕಾಶ್ಮೀರದ ಜನತೆ 1999ರಲ್ಲಿ ಕಾರ್ಗಿಲ್‌ನಲ್ಲಿ ಅಪರೇಶನ್ ವಿಜಯ ಪ್ರಾರಂಭವಾದಾಗ ಇಂತಹದೇ ನೋವನ್ನು ಎದುರಿಸಿದ್ದರು. 1,999ರ ಫೆಬ್ರವರಿಯಲ್ಲಷ್ಟೇ ಪಂಜಾಬಿನ ಫಿರೋಜ್‌ಪುರ್‌ನಲ್ಲಿದ್ದ 4ನೇಸಿಖ್ ಲೈಟ್ ಇನ್ಫೆಂಟ್ರಿಯಿಂದ ಸ್ಥಾನಾಂತರಣಗೊಂಡು ಜಮ್ಮುವಿನ ಅಖ್ನೂರ್‌ನಲ್ಲಿ ಬೇಸ್ ಹೊಂದಿದ್ದ 19ನೇ ಮಹಾರ್ ರೆಜಿಮೆಂಟಿಗೆ ನಾನು ಜಾಯಿನ್ ಆಗಿದ್ದೆ. ಎಪ್ರಿಲ್ 1999ರ ಹಾಗೆ ನಾನಿದ್ದ 19ನೇ ಮಹಾರ್ ರೆಜಿಮೆಂಟಿಗೆ ಪಲ್ಲನವಾಲಾ ಸೆಕ್ಟರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾ ಧಾರ್ಮಿಕ ಪರಿಷತ್‌ನ ಪ್ರಥಮ ಸಭೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜರುಗಿತು. ಜಿಲ್ಲೆಯ ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ದರ್ಜೆಯ ದೇವಸ್ಥಾನಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ಮತ್ತು ಈ ದೇವಸ್ಥಾನವು ಹಿಂ.ದಾ.ದ ಇಲಾಖೆಗೆ ಸೇರಿದೆ ಎಂಬ ಸ್ಪಷ್ಟ ಉಲ್ಲೇಖ ಮಾಡುವುದು, ಪ್ರವರ್ಗ ಬಿ ಯ 4 ದೇವಾಲಯಗಳು ಮತ್ತು ಪ್ರವರ್ಗ ಸಿ ಯ 38 ಸೇರಿದಂತೆ ಒಟ್ಟು 42 ದೇವಾಲಯಗಳಿಗೆ ನೂತನ ವ್ಯವಸ್ಥಾಪನಾ ಸಮಿತಿ ರಚಿಸಲು ಅನುಮೋದನೆ ಪಡೆಯಲಾಯಿತು.ಈ ಬಾರಿ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿಗಳನ್ನು ಸ್ವೀಕರಿಸಿ ಆಯ್ಕೆ ಪ್ರಕ್ರಿಯೆ ನಡೆಸುವ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಕುಮಾರ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯರಾದ ವೆಂಕಟೇಶ ಅಡಿಗ ಉಳ್ತೂರು, ರಾಜೇಶ ನಡ್ಯತಿಲ್ಲಾಯ, ಶಶಿಧರ ಶೆಟ್ಟಿ, ನಾಗಪ್ಪ ಕೊಠಾರಿ, ಶ್ರೀನಿವಾಸ ಹೆಬ್ಬಾರ್, ಪದ್ಮನಾಭ ಬಂಗೇರ, ಸದಾನಂದ ಹೇರೂರು, ಆಶಾ ಚಂದ್ರಶೇಖರ್ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರಾವಳಿ ಕೊಂಚ ತಣ್ಣಗಾಗಿದ್ದ ಮಳೆಯ ಪ್ರಭಾವ ಮತ್ತೆ ಮರುಕಳಿಸಿದ್ದು, ಗುರುವಾರ ಮುಂಜಾನೆ ಗಾಳಿ ಸಹಿತ ಭಾರಿ ಮಳೆಯಾಗಿದೆ. ಗಾಳಿ ಮಳೆಗೆ ಮನೆ, ಕೃಷಿ, ತೋಟಹಾಗೂ ಆಸ್ತಿಪಾಸ್ತಿಗಳು ಅಪಾರ ಹಾನಿಯಾಗಿದೆ. ಕುಂದಾಪುರ, ಬೈಂದೂರು, ಹೆಬ್ರಿ ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ಗಾಳಿಮಳೆಗೆ ಜನಜೀವನ ತಲ್ಲಣಿಸಿದೆ. ಜುಲೈ 25ರಿಂದ 27ರ ತನಕ ಸಮುದ್ರದಲ್ಲಿ ಭಾರಿ ಗಾಳಿಯ ಜೊತೆಗೆ ಮಳೆಯೂ ಇರಲಿದೆ. ಮೀನುಗಾರಿಕೆಗೆ ತೆರಳದಂತೆ ಎಚ್ಚರಿಸಲಾಗಿದೆ. ಗಾಳಿ ಹಾಗೂ ಮರ ಬಿದ್ದು, ಹಲವು ಮನೆಗಳಿಗೆ ಹಾನಿಯಾಗಿದ್ದು, ರೂ.30ಲಕ್ಷಕ್ಕೂ ಅಧಿಕ ನಷ್ಟ ಅಂದಾಜಿಸಲಾಗಿದೆ. ಕೃಷಿ ತೋಟಗಳಿಗೆ ರೂ.4 ಲಕ್ಷಕ್ಕೂ ಅಧಿಕ ಹಾನಿಯನ್ನು ಅಂದಾಜಿಸಲಾಗಿದೆ. ಅಲ್ಲಲ್ಲಿ ಮೆಸ್ಕಾಂ ಕಂಬಗಳು ನೆಲಕ್ಕುರುಳಿದ ಪರಿಣಾಮ ಹಲವೆಡೆ ವಿದ್ಯುತ್ ಸಂಪರ್ಕ ವ್ಯತ್ಯಗೊಂಡಿದೆ. ಅಧಿಕ ಮಳೆಯ ಹಿನ್ನೆಲೆಯಲ್ಲಿ ಗುರುವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯ ಜೊತೆ ಜೊತೆಗೆ ಮಕ್ಕಳನ್ನು ಸಂಸ್ಕಾರದ ಮೌಲ್ಯಗಳೊಂದಿಗೆ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೆತ್ತವರು ಮತ್ತು ಶಿಕ್ಷಕರ ಜವಾಬ್ದಾರಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಂದಾಪುರದ ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ. ಉಮೇಶ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ಮೂರನೇ ವಾರ್ಷಿಕ ಮಹಾ ಸಭೆ , ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರದ ಅಂಗವಾಗಿ ಕಳೆದ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಕ್ರಮವಾಗಿ ಎಂಟು ಒಂಬತ್ತು ಹತ್ತನೇ ಸ್ಥಾನವನ್ನು ಗಳಿಸಿದ ಹರ್ಷಿತಾ ಎಸ್. ಪೂಜಾರಿ, ನೇಹಾ ಎಸ್ ಕೊಡೇರಿ ಮತ್ತು ಇಂಚರ ಆರ್. ದೇವಾಡಿಗ ಹಾಗೂ ಉತ್ತಮ ಸಾಧನೆ ಮಾಡಿದ ಸನ್ನಿಧಿ ಹೊಳ್ಳ, ದೀಕ್ಷಾ ಪೂಜಾರಿ, ಎಸ್ ಎಸ್ ಎಲ್ ಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ‘ಸಪ್ತಸ್ವರ’ ವೇದಿಕೆಯಲ್ಲಿ “ಕಾನೂನು ಅರಿವು” ಮಾಹಿತಿ ಕಾರ್ಯಕ್ರಮ ಮಂಗಳವಾರದಂದು ಜರುಗಿತು. ಮಾಹಿತಿ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸುಬ್ರಹ್ಮಣ್ಯ ಎಚ್, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ಇವರು ‘ ಶಿಕ್ಷಣ ಪಡೆದಾಗ ಜ್ಞಾನ ಮೂಡುತ್ತದೆ. ಆಗ ಸಮಾಜದಲ್ಲಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಲು ಸಾಧ್ಯ’ ಎಂದರು. ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಸಂತೋಷ್ ಅವರು ಮಾತನಾಡಿ ‘ ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯವಾಗಿದೆ ‘ ಎಂದರು. ಸಭಾಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಅವರು ‘ ಜೀವಿಸಲು ಗಾಳಿ, ನೀರು, ಆಹಾರ ಎಷ್ಟು ಅಗತ್ಯವೋ ಸಮಾಜದಲ್ಲಿ ಬದುಕಬೇಕಾದರೆ ಕಾನೂನಿನ ಅರಿವು ಅಷ್ಟೇ ಅವಶ್ಯಕವಾಗಿದೆ ‘ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ರವೀಂದ್ರ ಹಾಗೂ ಘನಶ್ಯಾಮ್ ಇನ್ನಿತರರು ಉಪಸ್ಥಿತರಿದ್ದರು. ‘ಕಾನೂನು ಅರಿವು’ ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸಕ ವರ್ಗದವರು, ವಸತಿ ನಿಲಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಶಯದೇವಿಸುತೆ ಮರವಂತೆ (ಜ್ಯೋತಿ ಜೀವನ್ ಸ್ವರೂಪ್) ಅವರನ್ನು ನೇಮಕ ಮಾಡಲಾಗಿದೆ. ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಡಾ. ಎನ್. ಬಾಲಾಜಿ ಅವರು ನೇಮಕ ಮಾಡಿದ್ದಾರೆ. ಅವರು ಆಧ್ಯಾತ್ಮಿಕ ಚಿಂತಕರಾಗಿ, ಸಂಗೀತ-ಸಾಹಿತ್ಯ ಕಲಾ ಲೋಕದಲ್ಲಿ, ಯಕ್ಷಗಾನ ಕ್ಷೇತ್ರದಲ್ಲಿ, ವಿವಿಧ ಪತ್ರಿಕೋದ್ಯಮ ಹಾಗೂ ಹಲವಾರು ಮಾಧ್ಯಮ ವಾಹಿನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಕಲಾಪ್ರತಿಭೆಗೆ ಹಲವು ಪ್ರಶಸ್ತಿಗಳು ಸಂದಿವೆ.
