ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪಾಶ್ಚ್ಯಾತ್ಯ ಸಂಸ್ಕೃತಿಯಿಂದ ಜಾನಪದ ನಶಿಸಿ ಹೋಗುತ್ತದೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಜಾನಪದ ಯಾವುದೇ ಕಾರಣಕ್ಕೂ ಮರೆಯಾಗದೇ ಕಿವಿಯಿಂದ ಕಿವಿಗಳಿಗೆ, ಬಾಯಿಂದ ಬಾಯಿಗೆ ಪಸರಿಸುವ ಮೂಲಕ ನಮ್ಮ ಹೆಜ್ಜೆ ಹೆಜ್ಜೆಯೊಂದಿಗೆ ಸದಾ ಇರುತ್ತದೆ. ಜಾನಪದದ ಸಂಪತ್ತು, ಸಂಸ್ಕೃತಿ, ಪರಂಪರೆ ಮತ್ತು ಎಲ್ಲಾ ಆಯಾಮಗಳನ್ನು ಎಲ್ಲರಿಗೂ ತಿಳಿಯಪಡಿಸಲು ರಾಜ್ಯಾದ್ಯಂತ ವಿಕಸಿತ ಜಾನಪದ ಎಂಬ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿದರು. ಉಪ್ಪುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಕನ್ನಡ ಜನಪದ ಪರಿಷತ್ತು ಉಪ್ಪುಂದ ಘಟಕದ ಪದಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ಪೂರ್ವಜ ಮಹಿಳೆಯರಿಂದ ಸಂದರ್ಭೋಚಿತವಾಗಿ ಗದ್ಯ, ಪದ್ಯಗಳ ಮೂಲಕ ಆರಂಭಗೊಂಡ ಮೌಕಿಕ ಪರಂಪರೆಯಾಗಿ ಬೆಳೆದು ಬಂದ ಜಾನಪದಕ್ಕೆ ಯಾವುದೇ ಚೌಕಟ್ಟಿಲ್ಲ. ಜನಪದ ಮೂಲೆಗುಂಪಾದರೆ ಅಥವಾ ನಶಿಸಿ ಹೋದರೆ ಇತಿಹಾಸ, ಪರಂಪರೆ ಬರಡಾದಂತೆ. ತೊಟ್ಟಿಲಿನಿಂದ ಚಟ್ಟದ ವರೆಗೆ ಜೀವನದಲ್ಲಿ ಜನಪದ ಹಾಸುಹೊಕ್ಕಾಗಿವೆ. ಜಾನಪದಕ್ಕೆ ಜಾತಿ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಬೈಂದೂರು ಜನತೆಯ ದಶಕಗಳ ಹೋರಾಟ ಫಲವಾಗಿದ್ದು, ಇದರ ಹಿಂದೆ ಹಲವರ ಶ್ರಮವಿದೆ. ಯಾರ ವೈಯಕ್ತಿಕ ಹಿತ್ತಾಸಕ್ತಿ ಇದರಲ್ಲಿಲ್ಲ. ಬೈಂದೂರು ತಾಲೂಕಾಗಿ ಘೋಷಣೆಗೊಂಡಾಗ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳಿರುವುದನ್ನು ಗಮನಿಸಿ ತಾಲೂಕಿಗೊಂದು ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಚರ್ಚೆ ಆರಂಭಗೊಂಡು, ಅಂತಿಮವಾಗಿ ನ್ಯಾಯಾಲಯ ಉದ್ಘಾಟನೆಗೊಂಡಿತ್ತು. ಈಗ ಬೈಂದೂರು ನ್ಯಾಯಾಲಯದಲ್ಲಿ ಮೂರು ಸಾವಿರಕ್ಕಿಂತಲೂ ಹೆಚ್ಚಿನ ವಿವಿಧ ಪ್ರಕರಣಗಳಿದೆ. ಬೈಂದೂರಿಗೆ ಇನ್ನೂ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದ ಅವಶ್ಯಕತೆ ಇದೆ ಎಂದು ಬೈಂರೂರು ತಾಲೂಕು ಬಾರ್ ಅಸೋಸಿಯೇಶನ್ ಹೇಳಿದೆ. ಕುಂದಾಪುರದ ವಕೀಲರಾದ ಕೆ. ಸಿ. ಶೆಟ್ಟಿ ಇವರು ತಮ್ಮ ದೂರಿನಲ್ಲಿ ಹೇಳಿಕೊಂಡಂತೆ ಬೈಂದೂರು ನ್ಯಾಯಾಲಯದ ಸ್ಥಿತಿ ಇರುವುದಿಲ್ಲ. ಬೈಂದೂರಿನಲ್ಲಿ ನ್ಯಾಯಾಲಯ ಪ್ರಾರಂಭಿಸುವ ಮೊದಲು ಕರ್ನಾಟಕದ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಪಂಚಾಯತ್ ಕಟ್ಟಡವನ್ನು ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅನುಕೂಲವಾಗುವಂತೆ ಮಾರ್ಪಡಿಸಿ ಪ್ರಾರಂಭಿಸಲಾಗಿತ್ತು. ಬೈಂದೂರು ನ್ಯಾಯಾಲಯವನ್ನು ನಡೆಸಲು ಯಾವುದೇ ಪ್ರಾಥಮಿಕ ಅವಶ್ಯಕತೆಗಳ ಕೊರತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಅವರ ಸಂಯುಕ್ತಾಶ್ರಯದಲ್ಲಿ ಸರಕಾರಿ ಪ್ರೌಢ ಶಾಲೆ ಅಜ್ಜರಕಾಡು ಉಡುಪಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ರೋಶನಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕರ್ನಾಟಕ ಮಹಿಳಾ ಯಕ್ಷಗಾನ ರಿ. ಬೆಂಗಳೂರು ಸಂಸ್ಥೆಯ ವತಿಯಿಂದ ‘ಯಕ್ಷಗಾನ ಉತ್ಸವ-2024’ ಕಾರ್ಯಕ್ರಮವು ಬೆಂಗಳೂರಿನ ನಯನ ಸಭಾಂಗಣದಲ್ಲಿ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ಯಕ್ಷಗಾನ ವೇಷಭೂಷಣ ಹಾಗೂ ಮುಖವರ್ಣಿಕೆ ಕಮ್ಮಟ ಕಾರ್ಯಕ್ರಮವನ್ನು ತುಳುವರೆಂಕುಲು ಕಾರ್ಯದರ್ಶಿ, ಖ್ಯಾತ ಯಕ್ಷಗಾನ ಪ್ರಸಾಧನ ತಜ್ಞರಾದ ಮಟ್ಟಿ ರಾಮಚಂದ್ರ ರಾವ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ನಂತರ ಸಂಸ್ಥೆಯ ಕಲಾವಿದೆಯರಿಂದ ಯಕ್ಷಗಾನದ ಕಥಾಭಾಗದ ಮೊದಲು ನಡೆಯುವ ರಂಗಕ್ರಿಯೆಯಾದ ಯಕ್ಷಗಾನ ಪೂರ್ವರಂಗ ಪ್ರದರ್ಶನ, ಕುಶಲವ ಕಾಳಗ, ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರಸಂಗ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ನಾವುಡ, ವಿಶ್ವನಾಥ ಶೆಟ್ಟಿ, ವಿನಯ್ ರಾಜೀವ್ ಶೆಟ್ಟಿ, ನರಸಿಂಹ ಆಚಾರ್, ಸಂಪತ್ ಆಚಾರ್ಯ, ಸುಬ್ರಹ್ಮಣ್ಯ ಗಾಣಿಗ ಐರೋಡಿ, ಕಾರ್ತಿಕ್ ಧಾರೇಶ್ವರ್. ಮುಮ್ಮೇಳದಲ್ಲಿ ಕಲಾವಿದೆಯರಾಗಿ ಕೆ. ಗೌರಿ, ಆಶಾ ರಾಘವೇಂದ್ರ, ಅನ್ನಪೂರ್ಣೇಶ್ವರಿ ಕಟೀಲು, ಶ್ವೇತಾ ನವೀನ್, ಲಕ್ಷ್ಮೀ ರಾವ್, ಶಶಿಕಲಾ, ಸುಮಾ ಅನಿಲ್ ಕುಮಾರ್, ಮನಸ್ವಿ, ಚೈತ್ರ ಕೋಟ, ಚೈತ್ರ ಭಟ್, ದೀಕ್ಷಾ ಭಟ್, ಸೌಜನ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2023 – 24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿನಿ ಕ್ಷಮಿತಾ ಜಿ. ದೇವಾಡಿಗ ಅವರಿಗೆ 1995 – 96ನೇ ಸಾಲಿನ ಕಾಲೇಜಿನ ವಿಜ್ಞಾನ ವಿಭಾಗದ ಹಳೆಯ ವಿದ್ಯಾರ್ಥಿಗಳು ನೀಡಿದ 15,000 ರೂಪಾಯಿ ಪ್ರೋತ್ಸಾಹ ಧನವನ್ನು ಕಾಲೇಜಿನಲ್ಲಿ ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳ ಪರವಾಗಿ ಮಣಿಪಾಲದ ನವಿತಾಸ್ ಲೈಫ್ ಸೈನ್ಸ್ನಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಹಳೆ ವಿದ್ಯಾರ್ಥಿ ಡಾ. ರಾಘವೇಂದ್ರ ಶೆಟ್ಟಿ ವಿದ್ಯಾರ್ಥಿಗೆ ಪ್ರೋತ್ಸಾಹಧನವನ್ನು ವಿತರಿಸಿದರು. ನಾವುಂದ ಸರಕಾರಿ ಕಾಲೇಜಿನ ಪ್ರಾಂಶುಪಾಲ ಗಣೇಶ್ ಎಮ್. ಶುಭ ಹಾರೈಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಸಾವಿತ್ರಿ ಎಸ್. ನಿರೂಪಿಸಿ ವಂದಿಸಿದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ಬೈಂದೂರು ಮಾಜಿ ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ ಶೆಟ್ಟಿ ಅವರ ಕೈಗಾರಿಕೆಗಳಾದ ಮುಳ್ಳುಗುಡ್ಡೆ ಸೌಪರ್ಣಿಕ ಹೆಂಚಿನ ಕಾರ್ಖಾನೆ, ಸೌಪರ್ಣಿಕ ಡೆಕೋರೇಟಿವ್ ಟೈಲ್ಸ್, ಸೌಪರ್ಣಿಕ ಗೇರುಬೀಜ ಕಾರ್ಖಾನೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಪದವಿಪೂರ್ವ ಹಂತದಲ್ಲಿ ವಾಣಿಜ್ಯೇತರ ವಿಭಾಗಗಳಲ್ಲಿ ತೇರ್ಗಡೆಗೊಂಡು ಪ್ರಸ್ತುತ ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸೇತುಬಂಧ/ ಬ್ರೈಂಡ್ಜ್ ಕೋರ್ಸ್ ತರಗತಿಗಳನ್ನು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳಿಗೆ ಕೈಗಾರಿಕೆ, ಉದ್ಯಮ, ವ್ಯಾಪಾರ ಮುಂತಾದವುಗಳ ಬಗ್ಗೆ ಪ್ರಾತ್ಯಕ್ಷಿತೆಯನ್ನು ನೀಡುವುದು ಮತ್ತು ಪ್ರಾಯೋಗಿಕವಾಗಿ ವಾಣಿಜ್ಯ ವಿಷಯಗಳನ್ನು ಅರ್ಥೈಸುವ ನಿಟ್ಟಿನಲ್ಲಿ ವಾಣಿಜ್ಯ ವಿಭಾಗ ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ಘಟಕದ ಜಂಟಿ ಆಶ್ರಯದಲ್ಲಿ ಕಾರ್ಖಾನೆಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಖಾನೆಯ ಮ್ಯಾನೇಜರಾದ ದಯಾನಂದ ಗಾಣಿಗ, ಅಕೌಂಟೆAಟ್ ಸತೀಶ್ ಅಡಿಗ ಅವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಣದ ಉದ್ದೇಶ ಮನುಷ್ಯನನ್ನು ಸಂಸ್ಕಾರವಂತರನ್ನಾಗಿಸುವುದಾಗಿದೆ. ಪಡೆದ ಶಿಕ್ಷಣದಿಂದ ಉದ್ಯೋಗಗಳಿಸುವುದು ಒಂದು ಗುರಿಯಾದರೆ ಬದುಕಿನ ಉದ್ದೇಶ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವಿಸುವುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಖ್ಯಾತವಾಗ್ಮಿ ನಿವೃತ್ತ ಮುಖ್ಯೋಪಾಧ್ಯಾಯರಾದ ಮುನಿರಾಜ ರೆಂಜಾಳ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜು ಕಲ್ಯಾಣಪುರದಲ್ಲಿ ನಡೆದ ಕ್ರಿಯೇಟಿವ್ ಸ್ಪೂರ್ತಿ ಮಾತು ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿ ಜೀವನದಲ್ಲಿ ಕೆಲಸ ಮುಂದೂಡುವ, ಆಲಸ್ಯ, ಕೆಟ್ಟ ಆಕರ್ಷಣೆ ಗೆ ಒಳಗಾಗುವುದನ್ನು ಬಿಟ್ಟು ಉತ್ತಮ ವಿಚಾರದಲ್ಲಿ ಮನವಿಟ್ಟು ಕಾರ್ಯ ಸಾಧಿಸಬೇಕು ಎಂದು ಹೇಳಿದರು. ತ್ರಿಶಾ ಪ. ಪೂ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಹೆಗಡೆ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಜೋಯೆಲ್ ಮನೋಜ್ ಫೆರ್ನಾಂಡಿಸ್ ಅತಿಥಿಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಿ. ಬೆಂಗಳೂರು ಮತ್ತು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ 30ನೇ ವಿಶ್ವ ಆದಿವಾಸಿ ದಿನಾಚರಣೆ ಮತ್ತು ಆದಿವಾಸಿ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭವು ದಾವಣಗೆರೆಯ ಮಲ್ಲಿಕಾರ್ಜುನ ಕಲ್ಯಾಣ ಮಂದಿರದಲ್ಲಿ ನಡೆಯಿತು. ಆದಿವಾಸಿ ಸಿರಿ ಪ್ರಶಸ್ತಿಯನ್ನು ಕೊರಗ ಸಮುದಾಯದವರಾದ ಡಾ. ಸಬಿತಾ ಗುಂಡ್ಮಿ , ಡಾ. ದಿನಕರ ಕೆಂಜೂರು ಮತ್ತು ಡಾ. ಕಲಾವತಿ ಸೂರಾಲು ಅವರಿಗೆ ಪ್ರದಾನಿಸಲಾಯಿತು. 30ನೇ ವಿಶ್ವ ಆದಿವಾಸಿ ದಿನಾಚರಣೆ ಮತ್ತು ಆದಿವಾಸಿ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದ ವೇದಿಕೆಯಲ್ಲಿ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ಶ್ರೀ ಕಾಗಿನೆಲೆ ಕನಕ ಗುರು ಪೀಠ ರಾಯಚೂರು, ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ್ ಸಿದ್ದಿ, ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ಪಿ. ಹರೀಶ್, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಎಂ. ಮೈತ್ರಿ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಹಾಗೂ ಎಕ್ಸಲೆಂಟ್ ಪ್ರೌಢ ಶಾಲೆ ಸುಣ್ಣಾರಿ ಕುಂದಾಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರೌಢಶಾಲಾ 17ರ ವಯೋಮಾನದ ಬಾಲಕ- ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀನಿಧಿ ಪ್ರಕಾಶ್ ಗೌಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜನಸಮಾನ್ಯರು ತಮ್ಮ ಕೆಲಸಗಳಿಗಾಗಿ ಕಛೇರಿಗೆ ತೆರಳಿದರೆ ಸರಕಾರಿ ನೌಕರರು ದುಡ್ಡಿನ ಮುಖನೋಡಿ ಕೆಲಸ ಮಾಡಿಕೊಡುವ ಸ್ಥಿತಿ ಇದ್ದು, ಉಡುಪಿ ಜಿಲ್ಲೆಯವರು ಸಾರ್ವಜನಿಕವಾಗಿಯೇ ಭ್ರಷ್ಟಾಚಾರವನ್ನು ಒಪ್ಪಿಕೊಂಡುಬಿಟ್ಟಿದ್ದಾರೆ. ಹಣ ನೀಡಿ ವರ್ಗಾವಣೆಯಾಗುವ ಅಧಿಕಾರಿಗಳಿಂದ ಹಾಗೂ ಜವಾಬ್ದಾರಿ ಮರೆತ ಜನಪ್ರತಿನಿಧಿಗಳಿಂದ ಮತ್ತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅನ್ಯಾಯವಾಗುತ್ತಿದೆ ಎಂದು ತಿಳಿದಿದ್ದರೂ ಮೌನವಹಿಸಬೇಕಾದ ಸ್ಥಿತಿಯಲ್ಲಿ ರೈತರಿದ್ದಾರೆ. ನಾವು ಆತ್ಮವಲೋಕನದ ಕಾಲಘಟ್ಟದಲ್ಲಿದ್ದೇವೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು. ಅವರು ಇಲ್ಲಿನ ಆರ್.ಎನ್. ಶೆಟ್ಟಿ ಸಭಾಭವನದ ಮಿನಿ ಹಾಲ್ನಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಪಕ್ಷದ ಜನಪ್ರತಿನಿಧಿಯೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಜನಪ್ರತಿನಿಧಿಗಳು ಜನರ ಪರವಾಗಿ ನಿಲ್ಲಬೇಕು. ಆದರೆ ಅವರು ಜಾತಿ ರಾಜಕಾರಣ, ಹಣ ಹಾಗೂ ಗುತ್ತಿಗೆದಾರರ ಓಲೈಕೆಗೆ ನಿಂತಿದ್ದಾರೆ ಎಂದು ಆರೋಪಿಸಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಇದು ರೈತರ ಸ್ವತ್ತು. ಅದರ ವಸ್ತುಗಳ ಮಾರಾಟ ವಿಚಾರದಲ್ಲಿ 18 ಕೋಟಿ…
