Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ದೋಹಾ: ಕೊಲ್ಲಿ ರಾಷ್ಟ್ರಗಳಲ್ಲೊಂದು ಪುಟ್ಟ ದೇಶ, ಅದರ ರಾಜಧಾನಿಯ  ಚಿಕ್ಕ ಜಾಗದಲ್ಲೊಂದು ಒಳಾಂಗಣ ಮಳಿಗೆ. ಹೊರಗಿನ ಮಾರುಕಟ್ಟೆ ಪ್ರದೇಶದಲ್ಲಿ 36°c ತಾಪಮಾನ, ಮಳಿಗೆಯ ಒಳಗೆ ಹವಾನಿಯಂತ್ರಿತ ವಾತಾವರಣ, 50ಕ್ಕೂ ಹೆಚ್ಚು ಅಂಗಡಿಗಳು, ಪ್ರತಿದಿನವೂ ಬಂದು ಆನಂದಿಸಿ, ಆಸ್ವಾದಿಸಿ, ಕೊಂಡು ತೆರಳುವ ಸಾವಿರಾರು ಜನರು. ಅಂದಹಾಗೇ ಇದು ನಡೆದಿದ್ದು  ಕತಾರಿನ ದೋಹಾದಲ್ಲಿರುವ  ಸೂಕ್ ವಾಕಿಫ್  ನಲ್ಲಿ ನಡೆದ ಮಾವಿನ ಮೇಳದಲ್ಲಿ. ರಾಜಪುರಿ, ತೂತಪುರಿ, ಬಾದಾಮಿ, ನಾಟಿ, ಸಿಂಧೂರ ಇನ್ನೂ ಅನೇಕ ತಳಿಗಳ ಮಾವಿನ ಹಣ್ಣುಗಳ ಸುವಾಸನೆ ತುಂಬಿದ ಈ ಒಳಾಂಗಣ  ಪ್ರದೇಶದಲ್ಲಿ, ಮಾವಿನ ಹಣ್ಣಿನ ರಸ, ಮಾವಿನಕಾಯಿ ಜೊತೆಗೆ ಉಪ್ಪು ಖಾರ, ಮಾವಿನ ಉಪ್ಪಿನಕಾಯಿ, ಮಾವಿನ ಐಸ್ ಕ್ರೀಮ್, ಮಾವಿನ ಫಲೂದ, ಮಾವಿನ ಲಸ್ಸಿ ಹೀಗೆ ವೈವಿಧ್ಯಮಯ ರುಚಿಕರ ರಸಭರಿತ ಮಾವಿನ ತಿಂಡಿ ಮತ್ತು ಪಾನಿಯಗಳು  ಎಲ್ಲರ  ಇಂದ್ರಿಯಗಳನ್ನು ಆಕರ್ಷಿಸಿತು.ಒಂದೆಡೆ ಸುಪ್ರಸಿದ್ಧ ವಾಣಿಜ್ಯ ಮಳಿಗೆಗಳ ಸಾಲಾಗಿ ಇದ್ದರೆ ಇನ್ನೊಂದೆಡೆ  ಪ್ರಸಿದ್ಧ ಉಪಹಾರ ಕೇಂದ್ರಗಳ ಅಂಗಡಿ ಮುಂಗಟ್ಟುಗಳು  ಇದ್ದವು, ಮತ್ತೊಂದೆಡೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ದುಬೈ:  ದುಬೈನಂತಹ ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ, ಫಾರೆಸ್ಟರ್ ಕ್ರಿಯೇಟರ್ಸ್‌ನ ಸಂಸ್ಥಾಪಕ ಪರಿಸರ ತಜ್ಞ ಡಾ.ಆರ್.ಕೆ.ನಾಯರ್  ಅಭಿಪ್ರಾಯಪಟ್ಟರು. ಒಕ್ಕಲಿಗರ ಸಂಘ ದುಬೈ ಯುಎಇ ವತಿಯಿಂದ ದುಬೈನ ಹಿಲ್ಟನ್ ಹೋಟೆಲ್ ಸಭಾಂಗಣದಲ್ಲಿ ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮಿಯವರ ಆಶಿರ್ವಾದದೊಂದಿಗೆ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ತಾಯ್ನೆಲದ ಪರ ನಮ್ಮ ಜವಾಬ್ದಾರಿಗಳು’ ಎಂಬ ಧ್ಯೇಯೋದ್ದೇಶದೊಂದಿಗೆ ಒಕ್ಕಲಿಗರ ಸಂಘ ದುಬೈ ಯುಎಇ ಹಮ್ಮಿಕೊಂಡಿರುವ ‘ವಿಶ್ವ ಪರಿಸರ ದಿನಾಚರಣೆ’ ನಿಜಕ್ಕೂ ಶ್ಲಾಘನೀಯ. ದುಬೈನಂತಹ ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ, ಒಕ್ಕಲಿಗರ ಸಂಘದ ಮೂಲಕವೇ ನಡೆಯಲಿ, ನನ್ನ ಸಂಪೂರ್ಣ ಮಾರ್ಗದರ್ಶನ, ಸಹಕಾರ ನಿಮ್ಮ ಜೊತೆ ಸದಾ ಇದೆ’ ಎಂದರು. ಕಾರ್ಯಕ್ರಮದ ಆಯೋಜಕರು, ಒಕ್ಕಲಿಗರ ಸಂಘ ದುಬೈ ಯುಎಇ ಅಧ್ಯಕ್ಷ ಕಿರಣ್ ಗೌಡ…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಕುಂದಾಪುರ: ಕಳೆದ 14 ವರ್ಷಗಳಿಂದ ಪಂಚಗಂಗಾವಳಿ ನದಿಯಲ್ಲಿ ಚಿಪ್ಪು ಸಂಗ್ರಹ ಮಾಡುತ್ತಿದ್ದ 51 ಅಡಿ ಉದ್ದ 10 ಅಡಿ ಅಗಲದ ಬೃಹತ್ ಹಾಯಿ ದೋಣಿಯನ್ನು ಧರ್ಮಸ್ಥಳದ ವಸ್ತು ಸಂಗ್ರಹಾಲಯ ಮಂಜೂಷಾದಲ್ಲಿ ಇಡುವ ಸಲುವಾಗಿ ರವಿವಾರ ಕೊಂಡೊಯ್ಯಲಾಯಿತು. ಜೈ ಜೈ ಬಾಲಾಜಿ ಹೆಸರಿನ ವೆಂಕಟೇಶ ಖಾರ್ವಿ ಮಾಲಕತ್ವದ ಈ ದೋಣಿ ಒಂದೇ ಮರದ ಹಲಗೆಯಿಂದ ತಯಾರಾಗಿದ್ದು, ಒಮ್ಮೆಗೆ ಒಂದೂ ಮುಕ್ಕಾಲು ಲಾರಿ ಲೋಡು ಚಿಪ್ಪು ಸಂಗ್ರಹ ಮಾಡುವಷ್ಟು ದೊಡ್ಡದಿದೆ. ಹಿಂದೆಲ್ಲ ಪಂಚಗಂಗಾವಳಿಯಲ್ಲಿ ಚಿಪ್ಪು ಸಂಗ್ರಹ ಮಾಡಿಯೇ ಸಂಪಾದನೆ ಮಾಡಿ ವಿದ್ಯಾಭ್ಯಾಸ ಮಾಡಿದವರು, ಸಂಸಾರ ತೂಗಿದವರು ಇದ್ದರು. ಈಗ ಕಡಿಮೆಯಾಗಿದೆ. 20ರಷ್ಟಿದ್ದ ಇಂತಹ ದೊಡ್ಡ ಗಾತ್ರದ ದೋಣಿಗಳ ಸಂಖ್ಯೆ ಒಂದಕ್ಕಿಳಿದಿದೆ. ಇನ್ನೂ 100 ವರ್ಷ ಕಾಲ ಬಾಳಿಕೆ ಬರುವ ದೋಣಿಯನ್ನು ಮುಂದಿನ ಪೀಳಿಗೆಗೆ ಮೀನುಗಾರಿಕೆ, ಚಿಪ್ಪು ಸಂಗ್ರಹ, ಕೊಂಕಣಿ ಖಾರ್ವಿ,ಸಮಾಜದ ಇತಿಹಾಸ ತಿಳಿಸುವ ಸಲುವಾಗಿ ಧರ್ಮಸ್ಥಳಕ್ಕೆ ನೀಡಲಾಗುತ್ತಿದೆ‌ ಎನ್ನುತ್ತಾರೆ ಈ ದೋಣಿಯ ಮಾಲಿಕರು. ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇಶದ ಪ್ರತಿಷ್ಠಿತ  ಐಐಟಿ, ಐಐಎಸ್‍ಟಿ,  ಐಐಎಸ್‍ಸಿ   ನಂತಹ ಸಂಸ್ಥೆಗಳಲ್ಲಿ ಬಿ.ಟೆಕ್ ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಸುಜಿತ್ ಡಿ. ಕೆ,  ಕೆ. ಧ್ರುವ ಭಂಡಾರ್ಕರ್, ಅರ್ಜುನ್ ಇ ನಾಯಕ್, ಕಾರ್ತಿಕ್ ಎ. ಎಸ್, ಶಮಿತ್ ಎನ್ ಉನ್ನತ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಈ ಪೈಕಿ ಸಿದ್ದಾಂತ್ ಆರ್ ನಾಯ್ಕ್ 1565, ಸುಜಿತ್ ಡಿ ಕೆ  3648, ಅರ್ಜುನ್ ಇ ನಾಯಕ್ 3298, ಕೆ ಧ್ರುವ ಬಂಡಾರ್ಕರ್ 4260 ನೇ ಕೆಟಗರಿ ರ‍್ಯಾಂಕ್‌ ಗಳಿಸಿ ವಿಶೇಷ ಸಾಧನೆ ಗೈದಿದ್ದಾರೆ. ಈ ಮೂಲಕ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ. ಸಂಸ್ಥೆಯು ಆರಂಭದ ವರ್ಷಗಳಲ್ಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರು ವಾಸಿಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಮದರ್ ತೆರೇಸಾ ಶೈಕ್ಷಣಿಕ ಟ್ರಸ್ಟ್ ಶಂಕರನಾರಾಯಣ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ 2024-25ನೇ  ಸಾಲಿನ ಪೂರ್ವಪ್ರಾಥಮಿಕ ವಿಭಾಗದ ಪೂರ್ವಭಾವಿ ಸಭೆಯು ರೌಪಿಯ ಸಭಾಂಗಣದಲ್ಲಿ ನಡೆಯಿತು. ಸoಸ್ಥೆಯ ಆಡಳಿತಾಧಿಕಾರಿಗಳಾದ ಶಮಿತಾ ರಾವ್, ರೇನಿಟಾ ಲೋಬೊ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಮತ್ತು ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಕುಸುಮಾ ಶೆಟ್ಟಿ ಜಂಟಿಯಾಗಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಪಾಲಕರಿಗೆ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ದಾಖಲಾತಿ ವಯೋಮಿತಿ ಮತ್ತು ಇತರೇ ಇಲಾಖಾ ನಿಯಮಗಳ ಕುರಿತು ತಿಳಿಸಿದರು. ಪೂರ್ವಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕುಸುಮಾ ಶೆಟ್ಟಿ ಎಲ್.ಕೆ.ಜಿ ಮತ್ತು ಯು. ಕೆ. ಜಿ ತರಗತಿಯ ಶೈಕ್ಷಣಿಕ ವರ್ಷದ ಕ್ರಿಯಾಯೋಜನೆ, ವಾಹನ ಸೌಲಭ್ಯ, ಸಮವಸ್ತ್ರ, ಪಠ್ಯಪುಸ್ತಕ ಮತ್ತು ಇತರೇ ವಿಷಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಅಧ್ಯಕ್ಷಿಯ ಭಾಷಣದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಶಮಿತಾ ರಾವ್ ಮಾತಾನಾಡಿ, ನಾವು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದರಿಂದ ಈ ವರ್ಷ ವಿದ್ಯಾರ್ಥಿಗಳ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಂಬಾ ಟಿವಿ ಸೆಂಟರ್‌ ಹಾಗೂ ಹೋಮ್‌ ಅಪ್ಲಯನ್ಸ್‌ಸ್‌ ಶೋರೂಮ್‌ನ ಒಳಭಾಗದಿಂದ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಸಂಜೆಯ ಬಳಿಕ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ತಲುಕಿರುವ ಶಂಕೆಯಿದ್ದು, ಶೋರೂಮ್ ಒಳಗಿದ್ದ ವಸ್ತುಗಳು ಬಹುಪಾಲು ಸುಟ್ಟು ಹೋಗಿವೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ತಡರಾತ್ರಿಯ ತನಕವೂ ಹರಸಾಹಸಪಟ್ಟಿದ್ದಾರೆ. ಭಾನುವಾರ ರಜೆ ಇದ್ದುದರಿಂದ ಬೆಂಕಿ ಇದ್ದಿರುವುದು ತಡವಾಗಿ ತಿಳಿದುಬಂದಿದೆ. ಅಷ್ಟರಲ್ಲಿ ಶೋರೂಮ್‌ ಒಳಭಾಗದಲ್ಲಿ ಬೆಂಕಿ ಆವರಿಸಿಕೊಂಡಿತ್ತು. ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟ ಸಂಬಂಧಿಸಿದೆ. ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಗೆ ನೈಜ ಕಾರಣ ಹಾಗೂ ನಷ್ಟದ ನಿಖರ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿ ಆವರಣದಲ್ಲಿ ನಡೆದ 2024ನೇ ಸಾಲಿನ 2 ದಿನದ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ 2468 ಆಕಾಂಕ್ಷಿಗಳಿಗೆ ಸ್ಥಳದಲ್ಲೇ ಉದ್ಯೋಗ ಅವಕಾಶ ನೀಡುವುದರೊಂದಿಗೆ ಯಶಸ್ವಿಯಾಗಿ ಸಂಪನ್ನಗೊAಡಿದೆ. ಈ ಬಾರಿಯ ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಒಟ್ಟು 258 ಕಂಪನಿಗಳ ಪೈಕಿ 217 ಕಂಪನಿಗಳು 5953 ಜನರನ್ನು ಶಾರ್ಟ್ಲಿಸ್ಟ್ಗೊಳಿಸಿ ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಉದ್ಯೋಗ ಮೇಳದ ಎರಡನೇ ದಿನ  1542 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಒಟ್ಟು ಎರಡು ದಿನಗಳ ಉದ್ಯೋಗ ಮೇಳದಲ್ಲಿ 14780  ಅಭ್ಯರ್ಥಿಗಳು ಭಾಗವಹಿಸಿದರು. ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೂ ಆಳ್ವಾಸ್ ಪ್ರಗತಿಯಲ್ಲಿ ವಿಶೇಷ ಅವಕಾಶಬೆಂಗಳೂರಿನ ಸರಕಾರಿ ಎಸ್‌ಕೆಎಸ್‌ಜೆ ಟೆಕ್ನಾಲಜಿ ಇನ್ಸಿ÷್ಟಟ್ಯೂಟ್ ಇಂಜಿನಿಯರಿAಗ್ ಕಾಲೇಜಿನ 43 ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇರೆಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ಉಚಿತ ವಾಹನ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ, ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಇಲ್ಲಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಇಜಿ ಇಂಡಿಯಾ, ಇಸಿಯಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ:  ಕುಂದಾಪುರದಲ್ಲಿ ಯೋಗಬಂಧು ಸಂಜೀವಣ್ಣ ಎಂದೇ ಖ್ಯಾತರಾಗದ್ದ ಸಂಜೀವ (61) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಲತಃ ಉಡುಪಿಯ ಹೆರಂಜೆ ನಿವಾಸಿ ಪ್ರಸ್ತುತ ಕುಂದಾಪುರದವರಾದ ಸಂಜೀವ ಅವರು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ವ್ಯವಸ್ಥಾಪಕರಾಗಿದ್ದರು. ಕಳೆದ 37 ವರ್ಷಗಳಿಂದ ಬ್ರಹ್ಮಾವರ ಹಾಗೂ ಕುಂದಾಫುರದಲ್ಲಿ ಉಚಿತ ಯೋಗ ತರಬೇತಿ ನೀಡುತ್ತಿದ್ದರು. ಮಣಿಪಾಲದಲ್ಲಿ ವೈದ್ಯಕೀಯ ದಾಖಲೆಗಳ ತಜ್ಞ ಕೋರ್ಸ್‌ ಮುಗಿಸಿ ಅಲ್ಲಿಯೇ 2 ವರ್ಷ ದುಡಿದಿದ್ದ ಅವರು ಮುಂದೆ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ವೃತ್ತಿ ಆರಂಭಿಸಿದ್ದರು. ಈ ನಡುವೆ ಮುಂಬೈಯಲ್ಲಿ ಕ್ಯಾಂಟೀನ್‌ ಒಂದರಲ್ಲಿ ಕೆಲಸಕ್ಕಿದ್ದರು. ಕೆಲಸದ ವೇಳೆ ಶುರುವಾದ ಬೆನ್ನುನೋವು ಅವರನ್ನು ಹೈರಾಣಾಗಿಸಿತು. ಧರ್ಮಸ್ಥಳದಲ್ಲಿ ಆಗ ತಾನೆ ಆರಂಭವಾಗಿದ್ದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ದಾಖಲಾಗಿ ಅಲ್ಲಿನ ಚಿಕಿತ್ಸೆಯಿಂದ ಬೆನ್ನು ನೋವು ಮಾಯವಾಗಿತ್ತು. ಅನಂತರ 3 ವರ್ಷ ಸಾಧಕರಾಗಿ ದಾಖಲಾಗಿ ಪ್ರಕೃತಿ ಚಿಕಿತ್ಸೆಯ ಪ್ರಯೋಜನ ಪಡೆದು ಆರೋಗ್ಯ ವೃದ್ಧಿಸಿಕೊಂಡರು. ಸಮಾನ ಮನಸ್ಕರನ್ನೂ ಅಲ್ಲಿಗೆ ಕರೆದೊಯ್ಯುತ್ತಿದ್ದರು. 1992ರಲ್ಲಿ ಬ್ರಹ್ಮಾವರದಲ್ಲಿ ಯೋಗ ತರಗತಿ ಆರಂಭಿಸಿದರು. ಶಾಲಾ ಮಕ್ಕಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕೆರೆ ಮತ್ತು ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಇವರ ಸಹಭಾಗಿತ್ವದಲ್ಲಿ ಕಾಲೇಜು ಆವರಣದಲ್ಲಿ ಜೂನ್ 14ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರ ತನಕ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಖಾಸಗಿ ಕಂಪನಿಗಳು ಭಾಗವಹಿಸುತ್ತಿದೆ. ಉದ್ಯೋಗಾಕಾಂಕ್ಷಿಗಳು ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮೊ ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ ಬಿ.ಇಡಿ ಮತ್ತು ಪ್ರಸ್ತುತ ಅಂತಿಮ ವರ್ಷದಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ರೆಸ್ಯೂಮ್ ಹಾಗೂ ಆಧಾರ್ ಕಾರ್ಡ್‍ನೊಂದಿಗೆ ಭಾಗವಹಿಸಬಹುದಾಗಿದೆ. ಸಂದರ್ಶನಕ್ಕೆ ಹಾಜರಾಗುವ ವಿದ್ಯಾರ್ಥಿಗಳು ರೆಸ್ಯೂಮೆ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಅಂಕಪಟ್ಟಿಯ ಮೂಲ ದಾಖಲೆಯೊಂದಿಗೆ ಹಾಜರಾಗುವಂತೆ ಕೋರಲಾಗಿದೆ. ಆನ್‌ಲೈನ್‌ ಮೂಲಕ ಹಾಗೂ ಸ್ಥಳದಲ್ಲಿಯೇ ನೊಂದಣಿ ಮಾಡಲು ಅವಕಾಶವಿದೆ. (ಆನ್‌ಲೈನ್‌ ನೊಂದಣಿಗೆ ಈ ಫಾರ್ಮ್‌ ಭರ್ತಿ ಮಾಡುವುದು https://forms.gle/Mr376Eh6HrnYPV1z7 ) ಈ ಉದ್ಯೋಗ ಮೇಳದ ಪ್ರಯೋಜನವನ್ನು ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆಸ್ಪತ್ರೆಯ ಮಹಿಳಾ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ, ಬೆದರಿಕೆ ಸೇರಿದಂತೆ ವಿವಿಧ ಆರೋಪಗಳನ್ನು ಎದುರಿಸುತ್ತಿರುವ, ಇಲ್ಲಿನ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ. ರಾಬರ್ಟ್ ರೆಬೆಲ್ಲೋಗೆ ಶುಕ್ರವಾರ ರಾತ್ರಿ ಜಾಮೀನು ಮಂಜುರಾಗಿದೆ. ಪ್ರಕರಣ ದಾಖಲಾದ ತಕ್ಷಣ ತಲೆಮರೆಸಿಕೊಂಡಿದ್ದ ವೈದ್ಯ ಮುಂಬಯಿಯ ಐಷಾರಾಮಿ ರೆಸಾರ್ಟ್ ಒಂದರಲ್ಲಿ ಇರುವುದನ್ನು ಪತ್ತೆ ಮಾಡಿದ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದರು. ಆರೋಪಿಯನ್ನು ಕುಂದಾಪುರಕ್ಕೆ ಕರೆತಂದು ಶುಕ್ರವಾರ ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಇದನ್ನೂ ಓದಿ: ► ಪೋಕ್ಸೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳ ಬಂಧನ – https://kundapraa.com/?p=72895 . ಆರೋಪಿಯ ಪರ ವಾದಿಸಿದ ವಕೀಲರು, ದೂರು ನೀಡಿರುವ ವೈದ್ಯೆ ಕೆಲಸದ ವೈಷ್ಯಮ್ಯದಿಂದ ಹೀಗೆ ಮಾಡಿದ್ದಾರೆ. ಆಕೆ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದ ಬಗ್ಗೆ ವೈದ್ಯಾಧಿಕಾರಿಯಾಗಿದ್ದ ಡಾ. ರಾಬರ್ಟ್ ನೋಟಿಸ್ ನೀಡಿದ್ದರು. ಅದೇ ಕಾರಣಕ್ಕೆ ಡಾ. ರಾಬರ್ಟ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರಾಗಿದೆ.

Read More