ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹಾಗೂ ಜನತಾ ಪ್ರೌಢ ಶಾಲೆಯಲ್ಲಿ ಜಂಟಿಯಾಗಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಕಾಲೇಜು ಹಾಗೂ ಪ್ರೌಢಶಾಲೆಯ ಸಿಬ್ಬಂದಿಗಳು ಗಾಂಧೀಜಿ ಹಾಗೂ ಶಾಸ್ತ್ರೀಯವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ ಅವರು ಗಾಂಧೀಜಿ ಹಾಗೂ ಶಾಸ್ತ್ರೀಯವರ ಜೀವನ ಹಾಗೂ ತತ್ವಾದರ್ಶಗಳ ಕುರಿತು ಮಾತನಾಡಿದರು.ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಂಜು ಕಾಳವರ ಸ್ವಾಗತಿಸಿ ವಂದಿಸಿದರು. ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಬೋಧಕ,ಬೋಧಕೇತರ ವೃಂದದವರು,ಪ್ರೌಢಶಾಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಹಾಗೂ ಉಭಯ ಸಂಸ್ಥೆಗಳ ವಿದ್ಯಾರ್ಥಿಗಳು ಜನತಾ ಕ್ರೀಡಾಂಗಣವನ್ನು ಸ್ವಚ್ಚಗೊಳಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹುಬ್ಬಳ್ಳಿಯಲ್ಲಿ ಜರುಗಿದ 14ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ವಿಜೇತಳಾದ ಬ್ರಹ್ಮಾವರ ಲಿಟಲ್ರಾಕ್ ಇಂಡಿಯನ್ ಸ್ಕೂಲ್ನ 6ನೇ ತರಗತಿ ವಿದ್ಯಾರ್ಥಿನಿ ಶಿಖಾ ಬಿಜೂರು ರಾಷ್ಟ್ರ ಮಟ್ಟದ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ. ಕುಂದಾಪುರದ ಇವೊಲ್ಯೂಷನ್ ಅಕಾಡೆಮಿ ಆಫ್ ಮೆಟೀರಿಯಲ್ ಆರ್ಟ್ಸ್ & ಫಿಟ್ನೆಸ್ ಸಂಸ್ಥೆಯಲ್ಲಿ ಗುರು ಗ್ರಷಮೇಶ್ ಕುಂದರ್ ಅವರಲ್ಲಿ ತರಬೇತಿ ಪಡೆಯುತ್ತಿರುವ ಶಿಖಾ ಬಿಜೂರು, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಯೋಜಿಸಿದ ರಾಜ್ಯ ಮಟ್ಟದ ಸ್ವರ್ಧೆಯಲ್ಲಿ 10 ವರ್ಷದೊಳಗಿನ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಳು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಗೈದಿರುವ ಶಿಖಾ, ಶ್ರೀಧರ್ ಬಿಜೂರು ಹಾಗೂ ದೀಪಿಕಾ ಅವರ ಪುತ್ರಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಗರದ ಖಾರ್ವಿಕೇರಿ ನಿವಾಸಿ ರಾಘವೇಂದ್ರ ಶೇರೆಗಾರ್ ಎಂಬುವರಿಗೆ ಅಪರಿಚಿತನೊಬ್ಬ ಚೂರಿ ಇರಿದು ಪರಾರಿಯಾಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಇರಿತಕ್ಕೊಳಗಾದ ರಾಘವೇಂದ್ರ ಗಂಭೀರ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರದ ಚಿಕನ್ ಸಾಲ್ ರಸ್ತೆ ಅಂಚೆ ಕಚೇರಿ ಬಳಿಯ ನ್ಯೂ ಡೆಲ್ಲಿ ಬಜಾರ್ ಅಂಗಡಿಯೆದುರು ಬನ್ಸ್ ರಾಘು ಯಾನೆ ರಾಘವೇಂದ್ರ ತನ್ನ ಹೊಂಡಾ ಸಿಟಿ ಕಾರಿನಲ್ಲಿ ಬಂದಿದ್ದು, ಇದೇ ಸಂದರ್ಭ ವ್ಯಾಗನರ್ ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ತಗಾದೆ ತೆಗೆದು ರಾಘವೇಂದ್ರ ತೊಡೆಗೆ ಚೂರಿ ಹಾಕಿ ಕಾರಿನಲ್ಲಿ ಪರಾರಿಯಾಗಿದ್ದಾನೆ. ಘಟನೆಗೆ ಹಳೆ ದ್ವೇಷವೇ ಕಾರಣವಿರಬಹುದು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ನಂದಕುಮಾರ್, ಎಸ್ಐ ವಿನಯ್ ಕೊರ್ಲಹಳ್ಳಿ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕುಂದಾಪುರ: ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ ಸಾವು – https://kundapraa.com/?p=69346 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಸಿದ್ಧಾಪುರ: ಇಲ್ಲಿನ ಕಡ್ರಿ ಕಾಂಪ್ಲೆಕ್ಸ್ನಲ್ಲಿ ಶ್ರೀ ಬ್ರಾಹ್ಮಿ ಗ್ರಾಮೀಣ ವಿಕಾಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆಗೊಂಡಿತು. ಕಮಲಶಿಲೆ ದೇವಳದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ನೂತನ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿ, ‘ಒಳ್ಳೆಯ ಉದ್ದೇಶಕ್ಕೆ ಸಾಲ ಸೌಲಭ್ಯ ವಿತರಿಸುವ ಮೂಲಕ ಜನರ ಏಳಿಗೆಗೆ ಸಹಕರಿಸುವ ಸಹಕಾರಿ ಸಂಸ್ಥೆಯಾಗಲಿ ಎಂದು ಹೇಳಿದರು. ಲಾಕರ್ ಉದ್ಘಾಟಿಸಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, “ಸಹಕಾರಿ ಸಂಸ್ಥೆಗಳು ಸಮಾಜ ಕಟ್ಟುವ ಸಂಸ್ಥೆಗಳು, ಸಂಸ್ಥೆಯಿಂದ ರೈತಾಪಿ ಕುಟುಂಬಗಳ ಅಭಿವೃದ್ಧಿಗೆ ಸಾಲ ಸೌಲಭ್ಯ ನೀಡುವ ಮೂಲಕ ಗ್ರಾಮೀಣದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದರು. ಕ್ಯಾಂಪೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಪಾಸ್ ಪುಸ್ತಕ ಬಿಡುಗಡೆಗೊಳಿಸಿದರು. ಮಾನಂಜೆ ವಿಎಸ್ಎಸ್ ಅಧ್ಯಕ್ಷ ಶಂಕರನಾರಾಯಣ ಯಡಿಯಾಳ ಸಾಲ ಪತ್ರ ಬಿಡುಗಡೆಗೊಳಿಸಿದರು. ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ಎ. ಕಂಪ್ಯೂಟರ್ ಹಾಗೂ ಸಂಪಿಗೇಡಿ ಸಂಜೀವ ಶೆಟ್ಟಿ ಸ್ವಸಹಾಯ ಗುಂಪು ಉದ್ಘಾಟಿಸಿದರು. ಸಿದ್ದಾಪುರ ಗ್ರಾಪಂ ಅಧ್ಯಕ್ಷೆ ಲತಾ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಮಣಿಪಾಲ್ ಆರೋಗ್ಯಕಾರ್ಡ್ (MAC) ಪ್ರಾರಂಭಿಸಲಾಗಿದ್ದು ನೊಂದಣಿ ಪ್ರಕ್ರಿಯೆ ಆರಂಭವಾಗಿದೆ. ಇದು ಆಸ್ಪತ್ರೆಯ ಎಲ್ಲಾ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ನೀಡುತ್ತದೆ. ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ, ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವ್ಯವಸ್ಥಾಪಕರಾದ ಮೋಹನ್ ಶೆಟ್ಟಿ ಹೇಳಿದರು. ಅವರು ಕುಂದಾಪುರದಲ್ಲಿ ಜರುಗಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಣಿಪಾಲ್ ಆರೋಗ್ಯ ಕಾರ್ಡ್ 2023ರ ಯೋಜನೆಯು “ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ₹ 300 / -, ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ₹ 600/- ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ₹ 750/-. ಇದೊಂದು ಹೆಚ್ಚುವರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಕಟ್ಟಡ ಸಾಮಾಗ್ರಿ ಸಾಗಾಟದ ಲಾರಿಗಳಿಗೆ ಜಿ ಪಿ ಎಸ್ ಅಳವಡಿಕೆಗೆ ಅಕ್ಟೋಬರ್ 7 ರವೆರೆಗೆ ಕಾಲಾವಕಾಶ ನೀಡಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಐದು ಮಂದಿ ಶಾಸಕರು ಮತ್ತು ಪ್ರತಿಭಟನಾ ನಿರತ ಲಾರಿ ಮಾಲಕರ ಪ್ರತಿನಿಧಿಗಳ ಜೊತೆ ಗುರುವಾರ ಸಂಜೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು. ಈ ಸಂಧರ್ಭದಲ್ಲಿ ಉಡುಪಿ ಜಿಲ್ಲೆಯ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಕಳೆದ ಎರಡು ದಿನಗಳಿಂದ ಕಟ್ಟಡ ಸಾಮಗ್ರಿ ಸಾಗಾಟ ಬಂದ್ ಮೂಲಕ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಡಳಿತ ಮತ್ತು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಲಾರಿ ಮಾಲೀಕರ ಸಮಸ್ಯೆ, ಕಟ್ಟಡ ಸಾಮಾಗ್ರಿ ಬಂದ್ ನಿಂದ ಬಡ ಕೂಲಿ ಕಾರ್ಮಿಕರ ಹಾಗೂ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾಕ್ಟರ್ ಕೆ. ವಿದ್ಯಾ ಕುಮಾರಿ, ಶಾಸಕರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯುತ್ ತಂತಿ ತಗುಲಿ ದಂಪತಿಗಳು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಕಟ್ ಬೆಲ್ತೂರು ಗ್ರಾಮದ ಸುಳ್ಸೆ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಘಟನೆಯಲ್ಲಿ ಸುಳ್ಸೆಯರ ಮನೆ ನಿವಾಸಿ ಮಹಾಬಲ ದೇವಾಡಿಗ (55) ಹಾಗೂ ಅವರ ಪತ್ನಿ ಲಕ್ಷ್ಮೀ ದೇವಾಡಿಗ (49) ದಂಪತಿಗಳು ಮೃತಪಟ್ಟಿದ್ದಾರೆ. ಮಹಾಬಲ ದೇವಾಡಿಗ ಅವರು ದಿನಗೂಲಿ ಕಾರ್ಮಿಕರಾಗಿದ್ದು ಸುಳ್ಸೆ ಕರಣಿಕರ ಮನೆಯ ಬಳಿಯ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಹಾಬಲ ದೇವಾಡಿಗ ಅವರು ಸಮಯಕ್ಕೆ ಸರಿಯಾಗಿ ಮನೆಗೆ ಬಾರದ್ದರಿಂದ ಅನುಮಾನಗೊಂಡ ಪತ್ನಿ ಲಕ್ಷ್ಮೀ ದೇವಾಡಿಗ ಅವರು, ಪತಿ ನಿತ್ಯವೂ ಬರುತ್ತಿದ್ದ ಕಾಲುದಾರಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಹಾಬಲ ಅವರಿಗೆ ವಿದ್ಯುತ್ ತಂತಿ ತಗುಲಿ ಬಿದ್ದರುವುದನ್ನು ಗಮನಿಸಿದ ಪತ್ನಿಯು, ಪತಿಯನ್ನು ರಕ್ಷಿಸಲು ಕೂಗಾಡಿದ್ದಾರೆ. ಅಲ್ಲಿಯೇ ಬಿದ್ದಿದ್ದ ಮರದ ತುಂಡನ್ನು ಹಿಡಿದು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಅದು ನೀರು ಬಿದ್ದು ಒದ್ದೆಯಾಗಿದ್ದರಿಂದ ಅವರಿಗೂ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ./ ಕುಂದಾಪ್ರ ಡಾಟ್ ಕಾಂ/ ಸುಳ್ಸೆಯವರಾದ ಮಹಾಬಲ ದೇವಾಡಿಗ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕ್ಷ್ಯುಲ್ಲಕ ಕಾರಣಕ್ಕೆ 20ಕ್ಕೂ ಹೆಚ್ಚು ಜಾನುವಾರುಗಳಿಗೆ ಗುಂಡಿಕ್ಕಿ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ಅಂಗಡಿ ಜೆಡ್ಡು ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವುದಾಗಿ ಬೆಳಕಿಗೆ ಬಂದಿದ್ದು, ಪರಿಣಾಮವಾಗಿ ನಾಲ್ಕು ದನಗಳು ಸತ್ತು 15 ದನಗಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸೆ.23ರಂದು ಸ್ಥಳೀಯ ನಿವಾಸಿ ಗುಲಾಬಿ ಎಂಬುವರಿಗೆ ಸೇರಿದ ದನವೊಂದನ್ನು ಮೇಯಲು ಬಿಟ್ಟಿದ್ದು ಅದು ನರಸಿಂಹ ಎಂಬಾತನ ಗದ್ದೆಗೆ ಹೋಗಿತ್ತು. ಇದರಿಂದ ಆಕ್ರೋಶಿತಗೊಂಡ ನರಸಿಂಹ ತನ್ನ ನಾಡಕೋವಿಯಿಂದ ಗುಂಡಿಕ್ಕಿ ದನವನ್ನು ಸಾಯಿಸಿದ್ದಾನೆ. ಇದನ್ನು ಗಮನಿಸಿ ವಿಚಾರಿಸಲು ಹೋದಾಗ ಆರೋಪಿ ನರಸಿಂಹ ಗುಲಾಬಿ ಹಾಗೂ ಅವರ ಮನೆಯವರಿಗೆ ಕೋವಿಯಲ್ಲಿ ಗುರಿಯಿಟ್ಟು, ಈಗಾಗಲೇ 20ಕ್ಕೂ ಹೆಚ್ಚು ದನಗಳಿಗೆ ಗುಂಡಿಕ್ಕಿದ್ದೇನೆ. ಅದರಲ್ಲಿ ನಾಲ್ಕು ಸತ್ತಿವೆ. ಇನ್ನಳಿದವು ಸಾಯುತ್ತವೆ. ಜಾಗ್ರತೆ ಮಾಡದಿದ್ದಲ್ಲಿ ದನಗಳಿಗಾದ ಗತಿ ನಿಮಗೂ ಬರುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಗುಲಾಬಿ ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರವಾದಿ ಮುಹಮ್ಮದ್ ಪೈಗಂಬರ್ ರವರ 1495 ಜನ್ಮದಿನಾಚರಣೆ ಈದ್ ಮಿಲಾದನ್ನು ಹೆನ್ನಾಬೈಲ್ ಮಸೀದಿ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕುಂದಾಪುರ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಚೋನಾಳಿಯವರು” ಪ್ರವಾದಿ ಮುಹಮ್ಮದರ ಚಿಂತನೆಗಳು ಸಾರ್ವಕಾಲಿಕ ಅನ್ವಯವಾಗುವಂತದ್ದು. ಅವರ ಚರಿತ್ರೆಯನ್ನು ಓದಿದರೆ ಅವರು ಲೋಕದ ಪಾಲಿನ ಅನುಗ್ರಹ ಎಂಬ ದೈವೀಕ ವಾಣಿ ಸತ್ಯವೆನಿಸುತ್ತದೆ. ಹಿಂದೂ ಮುಸ್ಲಿಮರು ಒಂದಾಗಿ ಬದುಕಿದಾಗಲೇ ದೇಶ ತಲುಪಬೇಕಾದ ಎತ್ತರವನ್ನು ತಲುಪುತ್ತದೆ. ವಿಶ್ವದ ಅತ್ಯಂತ ದೊಡ್ಡ ಸಮುದಾಯಗಳು ಎಲ್ಲ ಭಿನ್ನತೆಗಳನ್ನು ಮರೆತು ಒಂದಾಗುವುದು ಅಸಾಧ್ಯವೇನಲ್ಲ. ಆದರೆ ಅದಕ್ಕೆ ಪ್ರಬುದ್ಧ ಚಿಂತಕರ ಸಮೂಹ ಬೇಕಿದೆ. ಪ್ರವಾದಿ ಮುಹಮ್ಮದರು ಸೇರಿದಂತೆ ಎಲ್ಲ ಕಾಲದಲ್ಲೂ ಬಂದ ದೇವದೂತರು, ದಾರ್ಶನಿಕರು, ಋಷಿ ಮುನಿಗಳ ಬದುಕು ಮತ್ತು ಸಂದೇಶಗಳ ಅಧ್ಯಯನ ನಿಷ್ಪಕ್ಷಪಾತವಾಗಿ ನಡೆದರೆ ಸಮಾಜ ಪ್ರಬುದ್ಧವಾಗಿ ಉನ್ನತ ಚಿಂತನೆಯು ಖಂಡಿತ ಮೂಡಿ ಸಾಮಾಜಿಕ ಸೌಹಾರ್ದ ನೆಲೆಯಾಗುತ್ತದೆ. ಸೌಹಾರ್ದದ ತುಡಿತ ಕಾಲದ ಅಗತ್ಯ. ಸೌಹಾರ್ದವಿಲ್ಲದ ಸಮಾಜ ಸರಾಗವಾಗಿ…
