Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ, ಶ್ರೀದೇವಿ ಮಹಿಳಾ ಮಂಡಳಿ ಕೋಟೇಶ್ವರ ಇವರ ಆಶ್ರಯದಲ್ಲಿ, ಪುರೋಹಿತ್ ರೋಹಿತಾಕ್ಷ ಆಚಾರ್ಯರ ಪ್ರಧಾನ ಆಚಾರ್ಯತ್ವದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವವು ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅಧ್ಯಾಪಕ ಪಡುವರಿ ನಾಗೇಶ್ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮುದಾಯವರು ಸಾಮಾಜಿಕವಾಗಿ ಎಲ್ಲಾ ವರ್ಗದ ಜನರಲ್ಲಿ ಗುರುತಿಸಿಕೊಳ್ಳಲು ನಾವು ಮಾಡುವ ಪಂಚ ಕಸುಬುಗಳೇ ಕಾರಣ. ಆದರೆ ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಬುದ್ಧತೆಗೆ ಬರುವಲ್ಲಿ ಹಿಂದೆ ಉಳಿಯಲು ನಮ್ಮಲ್ಲಿನ ಶಿಕ್ಷಣ ಹಾಗೂ ಸಂಘಟನೆಯ ಕೊರತೆಯೇ ಮೂಲ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಜೀವನ ಸಂಸ್ಕಾರದ ಜೊತೆಗೆ ಬದುಕುವ ಶಿಕ್ಷಣ ನೀಡಬೇಕಾಗಿದೆ ಎಂದರು. ಪುರೋಹಿತ್ ರೋಹಿತಾಕ್ಷ ಆಚಾರ್ಯ ಶುಭಾಶಂಸನೆಗೈದು, ಭಗವಂತನ ಆರಾಧನೆ ಅಷ್ಟು ಸುಲಭವಲ್ಲ, ಅದಕ್ಕೂ ಯೋಗ ಹಾಗೂ ಋಣಾನುಬಂಧ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುಪಿಎ ಸರಕಾರದ  ಅವಧಿಯಲ್ಲಿ ಬೆಂಗಳೂರು – ಮೈಸೂರು  – ಕಾರವಾರ  ರೈಲುನ್ನು ಪ್ರಾರಂಭಿಸಲಾಗಿತ್ತು. ಬೆಂಗಳೂರು – ಕಾರವಾರ ನೇರ ರೈಲು ಕಾರಣಾಂತರಗಳಿಂದ ರದ್ದಾಗಿ ಬಳಿಕ ಮಂಗಳೂರು ತನಕ ಮಾತ್ರ ಸಂಚರಿಸುತಿತ್ತು. ಈಗ ಅದೇ ರೈಲು ಮುರುಡೇಶ್ವರದ ತನಕ ವಿಸ್ತರಣೆಗೊಂಡಿದೆ. ಈ ರೈಲಿನ ವೇಳಾಪಟ್ಟಿ ಪರಿಷ್ಕರಿಸಿದರೆ ಮತ್ತು ಪ್ರತ್ಯೇಕ ರೈಲು ಆರಂಭಿಸಿದರೆ ಕರಾವಳಿ ಜನತೆಗೆ ಅನೂಕೂಲವಾಗಲಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಬೆಂಗಳೂರು – ಮೈಸೂರು – ಮುರ್ಡೇಶ್ವರ ರೈಲಿನ ವೇಳಾಪಟ್ಟಿ ಪರಿಷ್ಕರಿಸಿದರೆ ಮಾತ್ರ ಕರಾವಳಿ ಜನತೆಗೆ ಅನೂಕೂಲವಾಗಲಿದೆ . ರಾತ್ರಿ 8-15 ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಮದ್ಯಾಹ್ನ 11 -54 ಕ್ಕೆ ಕುಂದಾಪುರಕ್ಕೆ ಬರಲಿದೆ. ಕುಂದಾಪುರದಿಂದ ಮದ್ಯಾಹ್ನ 3 – 10 ಕ್ಕೆ ಹೊರಟು ಬೆಳಿಗ್ಗೆ 7-15 ಕ್ಕೆ ಬೆಂಗಳೂರು ತಲುಪಲಿದೆ. ಈ ವೇಳಾಪಟ್ಟಿ ಬೆಂಗಳೂರಿಗೆ ತೆರಳುವ ಕುಂದಾಪುರ ಮತ್ತು ಕರಾವಳಿಗರಿಗೆ ಅನೂಕೂಲವಾಗಿಲ್ಲ. ರಾತ್ರಿ ಹೊರಟು ಬೆಳಿಗ್ಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಸೆ.17: ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ನಿತ್ಯ ರೈಲು ಮುರ್ಡೇಶ್ವರದವರೆಗೆ ವಿಸ್ತರಣೆಗೊಂಡಿದ್ದು, ಭಾನುವಾರ ಕುಂದಾಪುರಕ್ಕೆ ಆಗಮಿಸಿದ ಈ ರೈಲಿನ್ನು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಕುಂದಾಪುರದ ನಿಲ್ದಾಣದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದ ಮಹಿಳಾ ಚೆಂಡೆ ಬಳಗದ ಚೆಂಡೆ ವಾದನದೊಂದಿಗೆ ರೈಲನ್ನು ಬರಮಾಡಿಕೊಳ್ಳಲಾಯಿತು. ರೈಲಿಗೆ ಹೂವಿನ ಮಾಲೆ ಹಾಕಿ, ಮೈಸೂರು ಸಂಸದ ಪ್ರತಾಪ್ಸಿಂಹ ಅವರಿಗೆ ಕೃತಜ್ಞತೆ ಸಲ್ಲಿಸುವ ಬ್ಯಾನರ್ ಅಳವಡಿಸಲಾಯಿತು. ಈ ವೇಳೆ ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ದಿನವೇ ಈ ನಿತ್ಯದ ರೈಲು ಆರಂಭಗೊಂಡಿದ್ದು, ಇದು ಈ ಭಾಗದ ಎಲ್ಲ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದಕ್ಕೆ ಪ್ರಯತ್ನಿಸಿದ ರೈಲು ಪ್ರಯಾಣಿಕರ ಸಮಿತಿ ಹಾಗೂ ಜನಪ್ರತಿನಿಧಿಗಳಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಕುಂದಾಪುರ ರೈಲು ಪ್ರಯಾಣಿಕರ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ ಈ ರೈಲಿಗೆ ಒಂದು ವರ್ಷದಿಂದ ನಿರಂತರವಾಗಿ ಪ್ರಯತ್ನಿಸಿದ್ದು, ಮೈಸೂರು ಸಂಸದ ಪ್ರತಾಪ್ಸಿಂಹ ಅವರ ಪ್ರಯತ್ನ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೈಹಿಕ,ಮಾನಸಿಕ ಸ್ಥಿರ ಆರೋಗ್ಯಕ್ಕಾಗಿ ಕ್ರೀಡೆಗಳ ಪಾತ್ರ ಪ್ರಮುಖವಾದದ್ದು ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕರು ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ, ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕ/ಬಾಲಕಿಯರ ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಟ್ನಾ ಪೈರೇಟ್ಸ್ ತಂಡದ ಪ್ರೋ ಕಬಡ್ಡಿ ಆಟಗಾರರಾದ ರಂಜಿತ್ ನಾಯ್ಕ್ ಎಲ್ಲಾ ತಂಡಗಳಿಗೆ ಶುಭ ಹಾರೈಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಗಣೇಶ ಮೊಗವೀರ ಅವರು ಮಾತನಾಡುತ್ತಾ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲಾ ವಿಭಾಗದಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ ಕ್ರೀಡಾ ವಿಭಾಗ ಮೂಲಕ 20 ಜನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಟ್ ಬೇಲ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೈಶಾಲಿ, ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಂಜು ಕಾಳಾವರ, ಉಡುಪಿ ಜಿಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಪ್ರಯುಕ್ತ ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘ ವತಿಯಿಂದ ಆಚರಿಸಲಾಯಿತು. ಮೆಸ್ಕಾಂ ಇಂಜಿನಿಯರ್ ಭರತ್ ರಾಜ್ ಶೆಟ್ಟಿ ಜಾಂಬೂರು ಅವರನ್ನು ಸಂಘದ ಕಚೇರಿಯಲ್ಲಿ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಆಚರಿಸಿದರು. ಸನ್ಮಾನ ಸ್ವೀಕರಿಸಿದ ಭರತ್ ರಾಜ್ ಶೆಟ್ಟಿ ರಾಷ್ಟ್ರೀಯ ಅಭಿಯಂತರದ ದಿನಾಚರಣೆಯ ಪ್ರಸ್ತುತತೆಯ ಬಗ್ಗೆ ಮಾತನಾಡಿ, ಇಂದು ತನ್ನನ್ನ ಗುರುತಿಸಿ ಅಭಿನಂದಿಸಿದ ಸಂಘಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು, ಶ್ರೀ ರವಿಶಂಕರ ಹೆಗ್ಡೆ , ಚೇತನ್ ಶೆಟ್ಟಿ ಕೋವಾಡಿ, ಉದಯ್ ಶೆಟ್ಟಿ ಮಚ್ಚಟ್ಟು, ಸುಕುಮಾರ ಶೆಟ್ಟಿ ಹೇರಿಕುದ್ರು, ಮುರಳೀಧರ ಶೆಟ್ಟಿ ಹುಯ್ಯಾರು, ಗುರುಪ್ರಸಾದ್ ಶೆಟ್ಟಿ ಹಾಲಾಡಿ, ರಾಜೀವ ಶೆಟ್ಟಿ ಹೆಂಗವಳ್ಳಿ ಉಪಸ್ಥಿತರಿದ್ದರು. ಸಂದೇಶ ಶೆಟ್ಟಿ ಸರ್ವರನ್ನು ಸ್ವಾಗತಿಸಿ, ಸಂಘದ ಕೋಶಾಧಿಕಾರಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ವಲಯ ಮತ್ತು ಸರಕಾರಿ ಪ್ರೌಢಶಾಲೆ ತಲ್ಲೂರು ಇವರ ಸಹಯೋಗದಲ್ಲಿ ತಲ್ಲೂರಿನಲ್ಲಿ ಜರುಗಿದ ಜಿಲ್ಲಾ ಮಟ್ಟದ 17 ವರ್ಷದ ಒಳಗಿನ ಬಾಲಕರ ತ್ರೋಬಾಲ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಯ ವಿದ್ಯಾರ್ಥಿಗಳಾದ ತರುಣ್ ಕಾರ್ವಿ, ಯೋಗೇಶ್, ಪ್ರೀತೇಶ್, ಮೌನೇಶ್, ಗೌತಮ್, ಧನು?, ಶೈಲೇಶ್, ದಿಶಾನ್, ಕಾರ್ತಿಕ್, ನಿಶಾಂತ್ ಹಾಗೂ ಧರಣೇಶ್ ಶಾಲೆಯ ತಂಡದಲ್ಲಿದ್ದರು. ಗಂಗೊಳ್ಳಿಯ ಸಂತ ಜೋಸೆಫ್ ಶಾಲೆಯ ದೈಹಿಕ ಶಿಕ್ಷಕ ಅಣ್ಣಪ್ಪ ಶೆಟ್ಟಿ ಮಾರ್ಗದರ್ಶನದಲ್ಲಿ, ಕಾರ್ತಿಕ್ ಖಾರ್ವಿ, ಹಿತೇಶ್ ಖಾರ್ವಿ ಮತ್ತು ಪ್ರಜ್ವಲ್ ಪಂಡಿತ್ ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಶಾಲೆಯ ಮುಖ್ಯೋಪಾಧ್ಯಾಯನಿ ಸಿ. ಕ್ರೆಸೆನ್ಸ್, ಶಿಕ್ಷಕರು, ಶಿಕ್ಷಕೇತರರು ಮತ್ತು ಹಳೆ ವಿದ್ಯಾರ್ಥಿಗಳ ವಿಜೇತ ತಂಡದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಹಾಗೂ ಕುಂದಾಪ್ರ ಡಾಟ್ ಕಾಂ ಆಶ್ರಯದಲ್ಲಿ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರಲ್ಲಿ ಸೆ.16 ಹಾಗೂ 17ರ ಸಂಜೆ 6:30ರಿಂದ ಯಕ್ಷೋತ್ಸವ ಕಾರ್ಯಕ್ರಮ ಜರುಗಲಿದೆ. ಕಾಲಮಿತಿ ಯಕ್ಷಗಾನದಲ್ಲಿ ಉಚಿತ ಪ್ರವೇಶವಿದ್ದು, ಸೆ.16ರಂದು ನಾಗಶ್ರೀ ಹಾಗೂ ಸೆ.17ರಂದು ಮಾಗದ ವಧೆ ಪ್ರಸಂಗ ಪ್ರದರ್ಶನ ಜರುಗಲಿದೆ. ಸುಧೀರ್ ಭಟ್ ಗಾನ ಸಾರಥ್ಯದಲ್ಲಿ, ಹಳ್ಳಾಡಿ ದ್ವಿತೇಶ್ ಹಾಸ್ಯದಲ್ಲಿ, ಕಾಂಚನ್, ಶಿಥಲ್, ಯುವರಾಜ್ ಮುಂತಾದ ಕಲಾವಿದರ ಕೂಡುವಿಕೆಯಲ್ಲಿ ಅದ್ದೂರಿ ಯಕ್ಷಗಾನ ಪ್ರದರ್ಶನ ಜರುಗಲಿದೆ ಎಂದು ಮೇಳದ ಸಂಚಾಲಕ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ) ದ.ಕ-ಉಡುಪಿ ಜಿಲ್ಲೆ. ಕುಂದಾಪುರ-ಬೈಂದೂರು ವಲಯವು ಶಿಕ್ಷಕರ ದಿನಾಚರಣೆ ಅಂಗವಾಗಿ ಕುಂದಾಪುರದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ ಸನ್ಮಾನ ಕಾರ್ಯಕ್ರಮವನ್ನು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಉದ್ಘಾಟಿಸಿದರು. ಸಂಸ್ಥೆಯ ನಿಯೋಜಿತ ಅಧ್ಯಕ್ಷರಾದ ದಿವಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸನ್ಮಾನದ ಅಂಗವಾಗಿ ನರೇಂದ್ರ ಎಸ್ ಗಂಗೊಳ್ಳಿ ಅವರ ಬಹುಮುಖಿ ಸೇವಾ ಸಾಧನೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. . ಈ ಸಂದರ್ಭದಲ್ಲಿ ಸಲಹಾ ಸಮಿತಿ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ, ನಿಕಟ ಪೂರ್ವ ಅಧ್ಯಕ್ಷ ರಾಜಾ ಮಠದಬೆಟ್ಟು, ನಿಯೋಜಿತ ಕಾರ್ಯದರ್ಶಿ ದಿನೇಶ್ ರಾಯಪ್ಪನಮಠ ನಿಯೋಜಿತ ಸಲಹಾ ಸಮಿತಿ ಅಧ್ಯಕ್ಷ ದಿನೇಶ್ ಗೋಡೆ, ಉಪಾಧ್ಯಕ್ಷರಾದ ರಾಘವೇಂದ್ರ ಭಟ್ ,ಪ್ರಕಾಶ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಛಾಯಾಕಾರ್ಯದರ್ಶಿ ಅಮೃತ ಬೀಜಾಡಿ ಸನ್ಮಾನ ಪತ್ರ ವಾಚಿಸಿದರು. ನಾಗೇಶ್ ಕೋಟ ಕಾರ್ಯಕ್ರಮವನ್ನು ನಿರೂಪಿಸಿದರು , ಸುರೇಶ್ ಜಮದಗ್ನಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಸೆ.13: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ವಿಶ್ವಕರ್ಮ ಜಯಂತೋತ್ಸವ ಯೋಜನೆಗೆ ಸೆ. 17ರಂದು ಅವರಿಂದ ಚಾಲನೆ ದೊರೆಯಲಿದ್ದು, ಅದೇ ಸಮಯಕ್ಕೆ ದೇಶದಾದ್ಯಂತ ಸುಮಾರು 70 ಪ್ರಮುಖ ಸ್ಥಳದಲ್ಲಿ, ಕೇಂದ್ರದ 70 ಸಚಿವರು ಚಾಲನೆ ನೀಡಲಿದ್ದಾರೆ. ಇದು ಸಮಸ್ತ ವಿಶ್ವಕರ್ಮ ಸಮುದಾಯದವರಿಗೆ ನೀಡಿದ ಗೌರವ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಅಧ್ಯಕ್ಷ ನೇರಂಬಳ್ಳಿ ರಮೇಶ್ ಆಚಾರ್ ಹೇಳಿದರು. ಅವರು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ನಡೆದ ಮಾಧ್ಯಮಗೋಷ್ಠಿ ಉದ್ಧೇಶಿಸಿ ಮಾತನಾಡಿ ವಿಶ್ವಕರ್ಮ ಜಯಂತೋತ್ಸವವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದಿನಲ್ಲಿ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಮಾನ್ಯ ನಿತಿನ್ ಗಡ್ಕರಿಯವರು ನಾಗಪುರದಲ್ಲಿ. ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ತಿರುವನಂತಪುರದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು. ರಾಜ್ಯಾದ್ಯಂತ ವಿಶ್ವಕರ್ಮ ಜಯಂತೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲೆ, ತಾಲೂಕು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಸೆ.12: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಮತ್ತು 5 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳನ್ನು ಪ್ರತ್ಯೇಕವಾಗಿ ಬಂಧಿಸಿ ಬೆಂಗಳೂರಿಗೆ ಕರೆತಂದ ಪೊಲೀಸರು, ಸಿಸಿಬಿ ಕಛೇರಿಯಲ್ಲಿ ಮೊದಲ ಹಂತದ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ್ ನಾಯಕ್, ರಮೇಶ್, ಧನರಾಜ್ ಹಾಗೂ 10ನೇ ಆರೋಪಿ ಪ್ರಜ್ವಲ್ ಎಂಬಾತನನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದನ್ನೂ ಓದಿ:► ಬಿಜೆಪಿ ಎಂಎಲ್ಎ ಟಿಕೆಟ್ ಹೆಸರಲ್ಲಿ ವಂಚನೆ: ಬಿದಿಬದಿ ವ್ಯಾಪಾರಿ, ಮಿಮಿಕ್ರಿ ಆರ್ಟಿಸ್ಟ್ಗೆ ವೇಷ ಹಾಕಿಸಿ 5 ಕೋಟಿ ವಂಚನೆ – https://kundapraa.com/?p=68995 . ನ್ಯಾಯಾಲಯದಲ್ಲಿ ಉಡುಪಿ ಪೊಲೀಸರು ತನಗೆ ತೊಂದರೆ ಕೊಟ್ಟಿದ್ದಾರೆ. ಬಂಧನ ಮಾಡಿರುವ ಬಗ್ಗೆ ಮನೆಯವರಿಗೆ ಮಾಹಿತಿ ನೀಡಲು ಅವಕಾಶ ನೀಡಿಲ್ಲ…

Read More