ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಕರಾವಳಿಯಲ್ಲಿ ಮದುವೆ ಜವಳಿಗೆ ಪ್ರಸಿದ್ಧವಾದ ಸತ್ಯನಾಥ ಸ್ಟೋರ್ಸ್‌ನಲ್ಲಿ ಗ್ರಾಹಕರ ಬಹು ನಿರೀಕ್ಷೆಯ ಮಾನ್ಸೂನ್ ಸೇಲ್ ಜೂನ್ 10ರಿಂದ ಆರಂಭಗೊಳ್ಳಲಿದೆ ಮಹಿಳೆಯರ ರೇಷ್ಮೆ ಸೀರೆ, ಫ್ಯಾನ್ಸಿ ಸೀರೆ, ಕುರ್ತಿಸ್ , ಚೂಡಿದಾರ್, ಗೌನ್, ಡ್ರೆಸ್ ಮೆಟೀರಿಯಲ್, ಪುರುಷರ ಬ್ರಾಂಡೆಡ್ ಶರ್ಟ್, ಪ್ಯಾಂಟ್, ಟಿ ಶರ್ಟ್ ಹಾಗೂ ಮಕ್ಕಳ ಎಲ್ಲಾ ಬಗೆಯ ಮನ ಸೂರೆಗೊಳ್ಳುವ ಬಟ್ಟೆಗೆ ವಿಶೇಷ ಕೊಡುಗೆಯಾಗಿ 50% ತನಕ ರಿಯಾಯತಿ ನೀಡಲಾಗುತ್ತದೆ. ಎಲ್ಲಾ ವರ್ಗದ ಗ್ರಾಹಕರಿಗಾಗಿ ಬಟ್ಟೆಗಳ ವಿಫುಲ ಸಂಗ್ರಹ ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರು ಈ ಮಾನ್ಸೂನ್ ಸೇಲ್ ನ ವಿಶೇಷ ದರ ಕಡಿತದ ಪ್ರಯೋಜನ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕು ಸರ್ಕಾರಿ ಆಸ್ಪತ್ರೆ ಕಟ್ಟಡ ಶಿಥಿಲ. ಹೊಸ ಕಟ್ಟಡದ ಅವಶ್ಯಕತೆ ಇದೆ. ವೈದ್ಯರ ಕೊರತೆ. ಸಿಬ್ಬಂದಿ ಕೊರತೆ ಇದೆ. ಹಳೆಯ ವಾಹನ ಮೂಲೆ ಸೇರಿದೆ. ಬೇರೆ ವಾಹನ ಕೊಟ್ಟರೆ ಮತ್ತಷ್ಟು ಸೇವೆಗೆ ಅನಕೂಲವಾಗುತ್ತದೆ. ಲ್ಯಾಬ್ ಟೆಕ್ನಿಶಿಯನ್ ನಿಂದ ಹಿಡಿದು ಆಶಾ ಕಾರ್ಯಕರ್ತೆಯರ ತನಕ ಕೊರತೆ. ಐಸಿಯು ವಾರ್ಡ್ ಸಮಸ್ಯೆ ಇದೆ ಎಂದು ಒಪ್ಪಿಕೊಂಡ ವೈದ್ಯಾಧಿಕಾರಿ. ಇದು ಕುಂದಾಪುರ ತಾಲೂಕು ಪಂಚಾಯಿತಿ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆ ಸ್ಥಿತಿಗತಿಗಳ ಬಗ್ಗೆ ನಡೆದ ಸಭೆಯಲ್ಲಿ ವೈದ್ಯರು ಕೊರತೆಗಳ ಪಟ್ಟಿ ಬಿಚ್ಚಿಟ್ಟಿದ್ದು ಹೀಗೆ. ಕೋಟ ಆಸ್ಪತ್ರೆ ನಾಲ್ಕು ಉಪಕೇಂದ್ರ ಹೊಂದಿದ್ದು, 2 ಪೋಸ್ಟ್ ಖಾಲಿ, ಬಸ್ರೂರು ಆರೋಗ್ಯ ಕೇಂದ್ರ ಪಂಚಾಯಿತಿ ಮೂಲಕ ನೀರಿನ ಸಮಸ್ಯೆ ನೀಗಿಕೊಂಡರೂ ಕಟ್ಟಡ ಹಳತು, ಕೆದೂರು ಪರ್ಮನೆಂಟ್ ಪೋಸ್ಟ್ ಖಾಲಿಯಿದ್ದು, ಮಂದಾರ್ತಿ ಆಸ್ಪತ್ರೆ ಜಾಗದ ದಾಖಲೆ ಜೊತೆ ನೀರಿನ ಸಮಸ್ಯೆ ಇದೆ. ಸೈಬ್ರಕಟ್ಟೆಯಲ್ಲಿ ನೀರಿನ ಸಮಸ್ಯೆ ಹುದ್ದೆಗಳು ಖಾಲಿ, ಗುಡ್ಡಗಾಡ ಪ್ರದೇಶದ ಆರೋಗ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಡಿನ ವಿಸ್ತರಣೆ ಜೊತೆಗೆ ಕಾಂಡ್ಲಾ ವನಗಳನ್ನು ಹೆಚ್ಚಿಸಬೇಕಿದೆ. ದೇಶದಲ್ಲಿ 20ಶೇಕಡಾ ಭಾಗ ನಮ್ಮಲ್ಲಿ ಅರಣ್ಯ ಪ್ರದೇಶವಿದ್ದು ಕಾಡ್ಗಿಚ್ಚು ಮೊದಲಾದ ಸಮಸ್ಯೆಗಳಿಂದ ನಾಶವಾಗುತ್ತಿದ್ದು ಇದನ್ನು ತಡೆಯಲು ಸರ್ಕಾರ, ಇಲಾಖೆ, ಸಂಘಸಂಸ್ಥೆಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಜನರಿಗೆ ಅನುಕೂಲವಾಗುವಂತೆ ಸಿ.ಆರ್.ಝಡ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರ ಮುಂದಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅರಣ್ಯ ಇಲಾಖೆ ಮಂಗಳೂರು ವೃತ್ತ, ಕುಂದಾಪುರ ವಿಭಾಗದಿಂದ ‘ವಿಶ್ವ ಪರಿಸರ ದಿನಾಚರಣೆ-2023’ದ ಅಂಗವಾಗಿ ಜೂ.5 ಸೋಮವಾರ ಕುಂದಾಪುರ-ಕೋಡಿ ಸೇತುವೆ ಬಳಿಯ ಶ್ರೀ ನಾಗ ಜಟ್ಟಿಗೇಶ್ವರ ದೇವಸ್ಥಾನದ ಎದುರು ಹಮ್ಮಿಕೊಂಡ ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾಂಡ್ಲಾ ಗಿಡಗಳು ಸುನಾಮಿಯಂತಹ ಪರಿಸರದ ವ್ಯತ್ಯಯಗಳನನ್ನು ತಡೆಯುತ್ತದೆ. ಕಾಂಡ್ಲಾ ವನದ ಹಸಿರು ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಪಕ್ಷಿ ಸಂಕುಲಕ್ಕೂ ಆಶ್ರಯ ನೀಡುವುದಲ್ಲದೆ ಜಲಚರಗಳಿಗೆ ಆವಾಸ ಸ್ಥಾನವಾಗಿದೆ. ವಿಶ್ವ ಪರಿಸರ ದಿನದ ಅಂಗವಾಗಿ ದೇಶದಲ್ಲಿ ಪರಿಸರ…
ಕುಂದಾಪುರ ವಲಯ ಅರಣ್ಯ ಇಲಾಖೆ ಆಯೋಜಿಸಿದ್ದ ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ. 5: ಕುಂದಾಪುರ ಕಡೆಗೆ ತೆರಳುತ್ತಿದ್ದ ಕಾರೊಂದು ಡಿವೈಡರ್ ಏರಿ ಪಲ್ಟಿಯಾಗಿ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿಯಾದ ಘಟನೆ ಹೆಮ್ಮಾಡಿ ಸಮೀಪದ ಜಾಲಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಕರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಸಿಗಂದೂರಿನಿಂದ ಬ್ರಹ್ಮಾವರಕ್ಕೆ ತೆರಳುತ್ತಿದ್ದ ಮಹೇಂದ್ರ ಕ್ವಾಂಟೋ ವಾಹನ ಜಾಲಾಡಿ ಎಂಬಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಾಷ್ಷಟ್ರೀಯ ಹೆದ್ದಾರಿಯ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಪಕ್ಕದ ರಸ್ತೆಗೆ ಮಗುಚಿ ಬಿದ್ದಿದೆ. ಇದೇ ಸಂದರ್ಭ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ರೆಡಿಗೋ ಕಾರಿಗೆ ಡಿಕ್ಕಿಯಾಗಿದ್ದು, ಆ ಕಾರೂ ಭಾಗಶಃ ಹಾನಿಗೊಳಗಾಗಿದೆ. ಪಲ್ಟಿಯಾಗಿರುವ ಮಹೀಂದ್ರ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ರಸ್ತೆಯ ಇಕ್ಕೆಲ ತಗ್ಗು ಪ್ರದೇಶವಾದ್ದರಿಂದ ಕಾರು ಕೆಳಕ್ಕುರುಳಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಎರಡು ಕಾರುಗಳು ಮುಂಭಾಗ ಸಂಪೂರ್ಣ ಜಜ್ಜಿ ಹೋಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಖಾಸಗಿ ವಸತಿ ಶಾಲೆಯೊಂದರಲ್ಲಿ ಸೋಮವಾರ ಮುಂಜಾನೆ ವಿದ್ಯಾರ್ಥಿನಿಯೊಬ್ಬಳು ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಬೆಂಗಳೂರು ಮೂಲದ 9ನೇ ತರಗತಿ ವಿದ್ಯಾರ್ಥಿನಿ ತನ್ವಿ ಮೃತ ದುರ್ದೈವಿ. ಬೆಂಗಳೂರು ನಿವಾಸಿಯಾದ ತನ್ವಿಯನ್ನು ಆಕೆಯ ಪೋಷಕರು ಎಪ್ರಿಲ್ ತಿಂಗಳಿನಲ್ಲಿ ಕುಂದಾಪುರದ ಖಾಸಗಿ ಶಾಲೆಯಲ್ಲಿ 9ನೇ ತರಗತಿಗೆ ಸೇರಿಸಿದ್ದರು. ವಸತಿ ಸಹಿತ ಶಾಲೆಯಾಗಿರುವುದರಿಂದ ಕಳೆದ ಎಪ್ರಿಲ್ನಿಂದ ಆಕೆ ಇಲ್ಲಿಯೇ ಇದ್ದಳು. ಪ್ರತಿದಿನ ಎಲ್ಲರಂತೆ ಚರುಕಾಗಿದ್ದ ತನ್ವಿ ಯೋಗಾಸನದ ಸಮವಸ್ತ್ರದಲ್ಲಿದ್ದವಳು ಸೋಮವಾರ ಬೆಳಿಗ್ಗೆ ಸುಮಾರು 5.45ಕ್ಕೆ ಶಾಲೆಯ ಎರಡನೇ ಮಹಡಿಯ ಕಿಟಕಿಯಿಂದ ಶಾಲಾ ಮೈದಾನಕ್ಕೆ ಬಿದ್ದಿದ್ದಾಳೆ. ಪರಿಣಾಮ ಆಕೆಯ ತಲೆ ನೆಲಕ್ಕೆ ಬಡಿದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯು ಬಾಲಕಿಯ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಂಡ್ಸೆ ಅಂಚೆ ಕಛೇರಿಯಲ್ಲಿ ಕಳೆದ 42 ವರ್ಷಗಳಿಂದ ಗ್ರಾಮೀಣ ಅಂಚೆ ಸೇವಕರಾಗಿ ಕಾರ್ಯನಿರ್ವಹಿಸಿ ವಯೋ ನಿವೃತ್ತರಾದ ಆನಂದ ನಾಯ್ಕ್ ನ್ಯಾಗಳಮನೆ ವಂಡ್ಸೆ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ವಂಡ್ಸೆ ಅಂಚೆ ಕಛೇರಿ ಹಾಗೂ ಶಾಖಾ ಕಛೇರಿ ಸಿಬ್ಬಂದಿಗಳ ವತಿಯಿಂದ ನಡೆಯಿತು. ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಂಡ್ಸೆ ಉಪ ಅಂಚೆ ಕಛೇರಿಯ ಅಂಚೆ ಪಾಲಕರಾದ ಸುರೇಖಾ ಜೆ.ಶೆಟ್ಟಿ, ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಜಿ. ಶ್ರೀಧರ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ವಾತ್ಸಲ್ಯ ಕಾಂಪ್ಲೆಕ್ಸ್ ವಂಡ್ಸೆ ಇದರ ಮಾಲಕರಾದ ಆನಂದ ಶೆಟ್ಟಿ ಸಬ್ಲಾಡಿ, ವೈದ್ಯರಾದ ಡಾ.ಗೋಪಾಲಕೃಷ್ಣ ಐತಾಳ್ ಉಪಸ್ಥಿತರಿದ್ದರು. ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಆನಂದ ನಾಯ್ಕ ಅವರ ಸೇವೆಯ ಕುರಿತು ಅತಿಥಿಗಳು ಮೆಚ್ಚುಗೆಯ ಮಾತುಗಳನ್ನಾಡಿದರು. ಸಭಿಕರ ಪರವಾಗಿ ಶಿವರಾಮ ಹೊಳ್ಳ, ಪೋಸ್ಟ್ ಮ್ಯಾನ್ ರಾಜು ದೇವಾಡಿಗ, ಶೈಲಶ್ರೀ ಅನಿಸಿಕೆ ಹಂಚಿಕೊಂಡರು. ಸನ್ಮಾನ, ಗೌರವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು.ಜು.2: ರಾಜ್ಯ ಸರಕಾರ ನೀಡಿರುವ ಆಶ್ವಾಸನೆಯಂತೆ ಗ್ಯಾರಂಟಿ ಯೋಜನೆ ಜಾರಿಗೆ ಸಂಬಂಧಿಸಿ ಸಚಿವ ಸಂಪುಟ ಸಭೆ ಇಂದು ನಡೆದಿದ್ದು, ಸಂಪುಟ ತೀರ್ಮಾನಗಳ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವೇಳೆ ಮಾತನಾಡಿ, ಜನ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ನಾವು ಬಸವಣ್ಣನ ನಾಡಿನವರು. ಕೊಟ್ಟ ಮಾತಿಗೆ ಬದ್ಧ. 5 ಗ್ಯಾರಂಟಿಗಳನ್ನು ನೀಡುವ ಸಂಬಂಧ ತೀರ್ಮಾನ ಮಾಡಿದ್ದೇವೆ ಎಂದರು. ಗೃಹಜ್ಯೋತಿ:200 ಯೂನಿಟ್ ಉಚಿತ ವಿದ್ಯುತ್. ಈ ಯೋಜನೆಯ ದುರ್ಬಳಕೆ ತಡೆಯಲು ಫಲಾನುಭವಿಗಳು ಹಿಂದಿನ ಒಂದು ವರ್ಷದ ಅವಧಿಯಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿಯನ್ನು ಗಣನೆಗೆ ತೆಗೆದುಕೊಂಡು, ಅದರ ಜೊತೆಗೆ 10% ವಿದ್ಯುತನ್ನು ಹೆಚ್ಚುವರಿಯಾಗಿ ಉಚಿತವಾಗಿ ನೀಡಲಾಗುವುದು. ಜುಲೈ 1ರ ವರೆಗೆ ಬಳಕೆ ಮಾಡಿರುವ ವಿದ್ಯುತ್ ಬಿಲ್ ಅನ್ನು ಬಳಕೆದಾರರು ಕಟ್ಟಬೇಕಿದ್ದು, ಆಗಸ್ಟ್ ನಿಂದ ಎಲ್ಲರೂ ಯೋಜನೆಯ ಲಾಭ ಪಡೆಯಬಹುದಾಗಿದೆ. ಬಾಡಿಗೆದಾರರಿಗೂ ಅನ್ವಯವಾಗಲಿದೆ. ಶಕ್ತಿ:ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ಗುರುವಾರ ಭೇಟಿ ನೀಡಿ ಕಾಲೇಜಿನ ಎಲ್ಲಾ ಸೌಲಭ್ಯಗಳನ್ನು ಖುದ್ದು ಪರಿಶೀಲಿಸಿದರು. ಬಳಿಕ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಕಾಲೇಜಿನ ಅಭಿವೃದ್ಧಿಗಾಗಿ ಚಿಂತಿಸುವ ʼಪರಿವರ್ತನʼ ಎಂಬ ತಂಡವನ್ನು ಸಿದ್ಧಗೊಳಿಸಿಕೊಂಡು ಕಾರ್ಯಯೋಜನೆಯನ್ನು ರೂಪಿಸುವಂತೆ ಹಾಗೂ ಈ ಯೋಜನೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಕಾಲೇಜಿನ ಬಗ್ಗೆ ಕಾಳಜಿಯಳ್ಳ ಜನರನ್ನು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು, ಕಾಲೇಜಿನ ನಿಕಟಪೂರ್ವ ಕಾರ್ಯಾಧ್ಯಕ್ಷರಾದ ದೀಪಕಕುಮಾರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರಕಾರಿ ಶಾಲೆಗಳ ಪ್ರಗತಿ ಹಾಗೂ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಕಲ್ಪಿಸುವ ಶಕ್ತಿ ಸರಕಾರಿ ಶಾಲಾ ಶಿಕ್ಷಕರಿಗಿದೆ. ಸಮಾಜಕ್ಕೆ ಕನ್ನಡ ಮಾಧ್ಯಮ ಶಾಲೆಗಳು ಸಶಕ್ತವಾಗಿದೆ ಹಾಗೂ ಅದರ ಉಳಿವು ಸಾಧ್ಯವಿದೆ ಎಂಬ ವಿಶ್ವಾಸ ಮೂಡಿಸಬೇಕಾದ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಬೈಂದೂರು ವಿಧಾನಸಬಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು. ಅವರು ಗುರುವಾರ ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಬೈಂದೂರು ತಾಲೂಕು ಸರಕಾರಿ ಹಾಗೂ ಅನುದಾನಿತ ಶಾಲಾ ಮುಖ್ಯೋಪಧ್ಯಾಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪೋಷಕರಲ್ಲಿ ಹಿಂದಿನಂತೆ ಆಂಗ್ಲ ಮಾಧ್ಯಮದ ವ್ಯಾಮೋಹವಿಲ್ಲ. ಆದರೆ ಸೌಲಭ್ಯಗಳ ಬಗ್ಗೆ ಅವರು ವಿಶೇಷ ಮುತುವರ್ಜಿ ವಹಿಸುತ್ತಾರೆ. ಸರಕಾರಿ ಶಾಲೆಗಲ್ಲಿ ಮೂಲಭೂತ ಸೌಕರ್ಯ, ಗುಣಮಟ್ಟದ ಶಿಕ್ಷಣ ದೊರೆಯುವಂತಾದರೆ ಸರಕಾರಿ ಶಾಲೆಗಳಲ್ಲಿಯೂ ಮಕ್ಕಳು ದಾಖಲಾತಿ ಸಹಜವಾಗಿ ಏರುತ್ತದೆ. ವಿದ್ಯಾರ್ಥಿಗೆ ತಕ್ಕುದಾಗಿ ಶಿಕ್ಷಕರ ಅನುಪಾತ, ಮೂಲಭೂತ ಸೌಕರ್ಯಗಳನ್ನು ಹೊಂದಿವುದು ಬಹುಮುಖ್ಯವಾಗಿದೆ ಎಂದರು. ಕನ್ನಡ ಶಾಲೆಗಳ ಉಳಿವಿಗೆ ಯೋಜನೆ:ಪ್ರಜಾಪ್ರಭತ್ವದಲ್ಲಿ…
