Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ನಾಲ್ಕನೇ ವರ್ಷದ “ಆಸಾಡಿ ಒಡ್ರ್”ಸಾಧಕ ಪುರಸ್ಕಾರಕ್ಕೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಮಣೂರು ಭಾರತಿ ವಿಷ್ಣುಮೂರ್ತಿ ಮಯ್ಯ ಆಯ್ಕೆಗೊಳಿಸಲಾಗಿದೆ. ಅಗಸ್ಟ್ 10ರ ಭಾನುವಾರ ಬೆಳಿಗ್ಗೆ 9 ರಿಂದ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯಲಿರುವ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಹಮ್ಮಿಕೊಳ್ಳಲಿರುವ “ಆಸಾಡಿ ಒಡ್ರ್”ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಿದೆ. ವಿಶೇಷ ಆಹ್ವಾನಿತರಾಗಿ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಕುಂದಗನ್ನಡ ರವಿ ಬಸ್ರೂರು ಹಾಗೂ ಕುಂದಗನ್ನಡದ ಲೇಖಕಿ ಪೂರ್ಣಿಮಾ ಕಮಲಶಿಲೆ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗ್ರಾಮೀಣ ತಿನಿಸುಗಳು, ಪರಿಕರ ಪ್ರದರ್ಶನ, ಸ್ಪರ್ಧೆ, ಅನಾಥಾಶ್ರಮಕ್ಕೆ ನೆರವು, ಸ್ನೇಹಕೂಟ ಮಣೂರು ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಗೆಳೆಯರ ಬಳಗ ಹಂದಟ್ಟು ಹಾಗೂ ಹಂದಟ್ಟು ಮಹಿಳಾ ಬಳಗ ಕೋಟ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ ಎಂದು ಪಂಚವರ್ಣ ಮಹಿಳಾ ಮಂಡಲದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ “ಪತ್ರಕರ್ತರಿಗೆ ಕನ್ನಡ ಸಾಹಿತ್ಯ” ಎಂಬ ಹೆಸರಿನಲ್ಲಿ 3 ದಿನಗಳ ಅಧ್ಯಯನ ಶಿಬಿರವನ್ನು ಆಗಸ್ಟ್ 3ನೇ ವಾರ ಅಥವಾ ಕೊನೆಯ ವಾರದಲ್ಲಿ ನಡೆಸಲು ಉದ್ದೇಶಿಸಿದ್ದು, 20 ರಿಂದ 40 ವರ್ಷ ದೊಳಗಿನ, ಈಗಾಗಲೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವವರು, ಪತ್ರಿಕೋದ್ಯಮ ಪದವಿ ಪಡೆದವರು ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್ https://sahithyaacademy.karnataka.gov.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಆರ್. ಎನ್.‌ಶೆಟ್ಟಿ‌ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌ಸಿಐ ಕುಂದಾಪುರ ಲೀಜನ್ ನ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಸಾರ್ವಜನಿಕ ಭಾಷಣ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಎಸ್‌ಎನ್‌ಆರ್‌ ಎಸ್‌ಎನ್‌ಆರ್‌ ಎಮ್. ಆರ್. ಜಯೇಶ ಅವರು ದೀಪ ಬೆಳಗಿಸುವುದರ ಮೂಲಕಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾರ್ವಜನಿಕ ಭಾಷಣ ಕಲೆಯ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿಸಿದರು. ಎಸ್‌ಸಿಐ ನ ರಾಷ್ಟ್ರೀಯ ಸಂಯೋಜಕರಾದ ಎಸ್‌ಎನ್‌ಆರ್‌ ಗಿರೀಶ್ ಶಾನಭಾಗ್ ಅವರು ಸ್ಪರ್ಧಾ ಸರಣಿಗೆ ಶುಭ ಹಾರೈಸಿದರು. ಎಸ್‌ಸಿಐ ನ Area-G ಇದರ ರಾಷ್ಟ್ರೀಯ ಉಪಾಧ್ಯಕ್ಷ ಎಸ್‌ಎನ್‌ಆರ್‌ ಎಸ್‌ಎನ್‌ಆರ್‌ ಸಿದ್ಧಗಂಗಯ್ಯ, ಎಸ್‌ಸಿಐ ಕೋಟಾ ಲೀಜನ್ ನ ಅಧ್ಯಕ್ಷ ಎಸ್‌ಎನ್‌ಆರ್‌ ಕೇಶವ ಆಚಾರ್, ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಓರಿಯಂಟೇಶನ್ ಮತ್ತು ಯುತ್ ಎಫೇರ್ಸ್ ನ ರಾಷ್ಟ್ರೀಯ ನಿರ್ದೇಶಕರಾದ ಎಸ್‌ಎನ್‌ಆರ್‌. ಪಿಪಿಎಫ್‌. ಹುಸೇನ್ ಹೈಕಾಡಿ ಅವರು ಶುಭ ಹಾರೈಸಿದರು. ವಿದ್ಯಾರ್ಥಿನಿ ಶರಧಿ ಪ್ರಾರ್ಥಿಸಿದರು. ಕಾಲೇಜು‌ ಮಟ್ಟದಲ್ಲಿ ನಡೆದ…

Read More

ಕುಂದಾಪ್ರ ಡಾಟ್‌ ಕಾಂ ಸುದಿ.ಮೂಡುಬಿದಿರೆ:  ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 15.09 ಫಲಿತಾಂಶ ಬಂದಿದ್ದರೆ, ಆಳ್ವಾಸ್‌ನ ಒಟ್ಟು 43 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 44.79 ಫಲಿತಾಂಶ ದಾಖಲಿಸಿದ್ದಾರೆ. ಆಳ್ವಾಸ್‌ನ ವಿದ್ಯಾರ್ಥಿಗಳಾದ ಗೋಡ್ವಿಲ್ (309), ಜೆ. ಬಸವರಾಜ್ (289), ಅವನಿ ಉಮೇಶ್ ರಾವ್ (283), ನಂದಿಶ್ ಕೆ. ಎ. (274), ಹರ್ಷವರ್ಧನ್ (273), ಸನ್ನಿಧಿ (271), ಅಪರ್ಣ ಸುಧಿ (265),  ಚಿರಂತನ (263), ಅಂಕಿತಾ ರಾವ್(258), ಪ್ರಜ್ನಾ ಎನ್ (253), ನವದೀಪ್ ರೆಡ್ಡಿ (249), ವಿಸ್ಮಯ್ ಭಟ್(244) ಅನಿರುಧ್ದ್(241), ನಂದೀಶ್ ಎಸ್. (238), ಪ್ರಣಯ್ (237), ಜೈಶ್ನವ್ (236), ರೋಹಿತ್ ಪೂಜಾರಿ (234), ಶ್ರವಣ್ (228), ವೈಷ್ಣವಿ ಪ್ರಸಾದ್ (228), ಅಸ್ನಾ (225), ನಕ್ಷತ್ರಾ ಸಿ. (224), ರಿಯೋನಾ (224), ಸಾಕ್ಷಿ ಆರ್ (224), ಕ್ರಷ್ಣ ವರ್ಮ (221), ಸಮೀಕ್ಷಾ ಕೋಟ್ಯಾನ್ (218), ವೃಂದಾ (218), ಮಿಝ್ಬಾ ಶೇಖ್ (217), ವಚನ್ ರವಿಕುಮಾರ್ (217), ಅಂಬಿಕಾ ಕೆ ಎಸ್. (214),…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ & ಸೈನ್ಸ್ ಕಾಲೇಜ್ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪುರ 89.6 ಎಫ್ಎಂ ನಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರೊಂದಿಗೆ ನಡೆಸಿದ ಫೋನ್ ಇನ್ ಕಾರ್ಯಕ್ರಮ “ನಿಮ್ಮ ಪ್ರಶ್ನೆಗಳಿಗೆ ನಮ್ಮ ಧ್ವನಿ”  ಈ ಕಾರ್ಯಕ್ರಮದಲ್ಲಿ ರಸ್ತೆ ದುರಸ್ತಿ,ಕಾಲುಸಂಕ, ಸಮರ್ಪಕ ಸಾರಿಗೆ ಸಂಪರ್ಕ, ಶಿಕ್ಷಣ ಇತ್ಯಾದಿ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿದ್ದಾರೆ. ಈ ರೇಡಿಯೋ ಕಾರ್ಯಕ್ರಮದ ಮುದ್ರಿತ ಪ್ರಸಾರ ಜುಲೈ 10ರ ಗುರುವಾರ ಸಂಜೆ 5:00 ಗಂಟೆಗೆ ಬಿತ್ತರಗೊಳ್ಳಲಿದೆ. ಈ ಕಾರ್ಯಕ್ರಮವನ್ನು ರೇಡಿಯೋ ಕುಂದಾಪುರ ಆಪ್ (Radio Kundapura) ಮತ್ತು ರೇಡಿಯೋ ಗಾರ್ಡನ್ (Radio Garden) ಮೂಲಕ ಕೇಳಬಹುದು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟ ವತಿಯಿಂದ ಉಪ್ಪುಂದ ಮಡಿಕಲ್ ಸಮುದ್ರ ತೀರದಲ್ಲಿ ಪುರೋಹಿತ ರಾಘವೇಂದ್ರ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆ ನೆರವೇರಿಸಲಾಯಿತು. ಮೀನುಗಾರಿಕಾ ಋತುವು ಸಂಪದ್ಭರಿತವಾಗಿರುವುದರೊಂದಿಗೆ ಮೀನುಗಾರಿಕೆ ಸಂದರ್ಭ ಯಾವುದೇ ಪ್ರಕೃತಿ ವಿಕೋಪ, ಮೀನುಗಾರಿಕೆ ಸಮಯದಲ್ಲಿ ಅವಘಡಗಳು ಸಂಭವಿಸದಂತೆ ಅನುಗ್ರಹ ಕೋರಿ ಕುಲ ದೇವರಾದ ಶೃಂಗೇರಿ ಶಾರದಾಂಬೆ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿ, ಮರುದಿನ ಗ್ರಾಮದ ದೇವರುಗಳಿಗೆ ಪೂಜೆ ಸಲ್ಲಿಸಿ ತಂದ ಪ್ರಸಾದ ಹಾಗೂ ಹಾಲು ಹಣ್ಣು ಫಲ ಪುಷ್ಪಗಳನ್ನು ಈ ದಿನ ಸಮುದ್ರ ರಾಜನಿಗೆ ಅರ್ಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ಅಧ್ಯಕ್ಷ ಎಚ್. ಸುರೇಶ್ ಖಾರ್ವಿ, ರಾಣಿಬಲೆ ಮೀನುಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ಖಾರ್ವಿ, ಕೋಶಾಧಿಕಾರಿ ಬಿ. ನಾಗೇಶ ಖಾರ್ವಿ, ಜತೆ ಕಾರ್ಯದರ್ಶಿ ಸೋಮಶೇಖರ ಖಾರ್ವಿ, ಕಾರ್ಯಕಾರಿ ಸದಸ್ಯರಾದ ಎ. ಶ್ರೀನಿವಾಸ ಖಾರ್ವಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿಎಮ್‌ಎ ಫೌಂಡೇಶನ್ ಪರೀಕ್ಷೆಯಲ್ಲಿ ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಿಂಚನಾ ಹಾಗೂ ಅರ್ಚನಾ ಅವರು ಉತ್ಕೃಷ್ಟ್ಟ ಸಾಧನೆಗೈದಿದ್ದಾರೆ. ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ವೀ-ರೀಚ್ ಸಂಸ್ಥೆಯ ಪಠ್ಯ-ಪ್ರವಚನ, ಮಧ್ಯಂತರ ಮಾದರಿ ಪರೀಕ್ಷೆ, ಹಾಗೂ ನುರಿತ ತರಬೇತುದಾರರಿಂದ ತರಬೇತಿ, ಸಲಹೆ ಮತ್ತು ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಈ  ಸಾಧನೆಗೈದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ‘ನ್ಯಾಷನಲ್ ಇ ಸ್ಕಾಲರ್‌ಶಿಪ್’ ಯೋಜನೆಯಡಿ ವಿದ್ಯಾರ್ಥಿವೇತನ ಸೌಲಭ್ಯ ಪಡೆಯಲು ವೆಬ್‌ಸೈಟ್: www.disabilityaffairs.gov.in ಅಥವಾ www.scholarships.gov.in ನಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಿ-ಮೆಟ್ರಿಕ್ (9ನೇ ಮತ್ತು 10ನೇ ತರಗತಿ) ವಿದ್ಯಾರ್ಥಿಗಳು ಆಗಸ್ಟ್ 31, ಪೋಸ್ಟ್ ಮೆಟ್ರಿಕ್ (ಪ್ರಥಮ ಪಿ.ಯು.ಸಿ.ಯಿಂದ ಸ್ನಾತಕೋತ್ತರ ಪದವಿಯವರೆಗೆ) ಹಾಗೂ ಟಾಪ್ ಕ್ಲಾಸ್‌ಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ಅರ್ಹ ವಿಕಲಚೇತನ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಸಲ್ಲಿಸಿದ ಅರ್ಜಿಯ ಒಂದು ಪ್ರತಿಯನ್ನು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಉಡುಪಿ ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ತಳ ಅಂತಸ್ತು, ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820-2574810, 2574811 ಅನ್ನು ಸಂಪರ್ಕಿಸಬಹುದಾಗಿದೆ ಎಂದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಡುಪಿ ಜಿಲ್ಲೆ ಇವರ ವತಿಯಿಂದ ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧೀನ ಕಚೇರಿಗಳ ಮೂಲಕ ಪ್ರಸಕ್ತ ಸಾಲಿನಲ್ಲಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಕೂಲವಾಗುವಂತೆ ಜಿಲ್ಲೆಯ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಪ್ರತಿ ಬೀದಿನಾಟಕ ತಂಡದಲ್ಲಿ 8 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಠ ವರ್ಗಕ್ಕೆ ಸೇರಿದ ಕಲಾವಿದರನ್ನು ಒಳಗೊಂಡಿರಬೇಕು. ಪ್ರತಿ ಜಾನಪದ ಸಂಗೀತ ಕಲಾ ತಂಡದಲ್ಲಿ 3 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಒಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಠ ವರ್ಗಕ್ಕೆ ಸೇರಿದ ಕಲಾವಿದರು ಇರುವುದು ಕಡ್ಡಾಯವಾಗಿದ್ದು, ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಕಲಾವಿದರುಗಳನ್ನು ಆಯ್ಕೆ ಮಾಡುವಾಗ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸವಿತಾ ಸಮಾಜದ ಸಾಮಾಜಿಕ ಕಾರ್ಯಗಳು ಜನಸಾಮಾನ್ಯರನ್ನು ಅತಿ ಹತ್ತಿರದಲ್ಲಿ ತಲುಪುತ್ತಿದೆ. ಇದೀಗ ಸಮಾಜ ಅನಾಥಾಶ್ರಮಗಳ ನೆರವಿಗೆ ಧಾವಿಸಿರುವುದು ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜ ರಾಜ್ಯ ಪ್ರತಿನಿಧಿ ಗೋವಿಂದ ಭಂಡಾರಿ ಬನ್ನಂಜೆ ಹೇಳಿದರು. ಅವರು ಮಂಗಳವಾರ ಕೋಟ ವಲಯ ಸವಿತಾ ಸಮಾಜ ಕೋಟ ಇವರ ಸಾರಥ್ಯದಲ್ಲಿ ಹೊಸಬದುಕು ಆಶ್ರಮ ತೋಡ್ಕಟ್ಟು-ಸಾಲಿಗ್ರಾಮ ಇಲ್ಲಿನ ಆಶ್ರಮ ನಿವಾಸಿಗಳ ಸವಿತಾ ಸೇವಾ ಸಿಂಚನ -2025 ಸಂಘಟನೆಯ ಜೊತೆಗೆ ಬಾಂಧವ್ಯದ ಸಿಂಚನ ಎನ್ನುವ ಶೀರ್ಷಿಕೆಯಡಿ ನಡೆದ ಕ್ಷೌರ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಮ್ಮ ವೃತ್ತಿ ಕಾಯಕದ ಮೂಲಕ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡ ಕೋಟ ವಲಯ ಸವಿತ ಸಮಾಜದ ಕಾರ್ಯ ಅತ್ಯಂತ ಪ್ರಶಂಸನೀಯವಾದದ್ದು. ಇಂಥಹ ಒಗ್ಗಟ್ಟು ನಮ್ಮ ಸಮಾಜದ ಉನ್ನತ್ತಿಗೆ ಪ್ರೇರಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ರಾಜು ಸಿ. ಭಂಡಾರಿ ಕಿನ್ನಿಮೂಲ್ಕಿ ಆಶ್ರಮದ ನಿವಾಸಿಗಳಿಗೆ ಕ್ಷೌರಿಕ ಕಾರ್ಯದ ಮೂಲಕ ಉದ್ಘಾಟಿಸಿ ಶುಭ…

Read More