Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಶ್ವ ರಾಮಕ್ಷತ್ರಿಯ ಮಹಾಸಂಘದ ನೇತೃತ್ವದಲ್ಲಿ ಬಾಳೆಕುದ್ರು ಶ್ರೀ ಮಠದಲ್ಲಿ ಮೇ.26 ರಂದು ನಡೆಯಲಿರುವ ಮಹಾಮೃತ್ಯುಂಜಯ ಯಾಗ, ಚಂಡಿಕಾಹೋಮ ಹಾಗೂ ಗಣಹೋಮದ ಅಂಗವಾಗಿ ವಿವಿಧೆಡೆಗಳಿಂದ ಬಂದಿದ್ದ ಹೊರೆಕಾಣಿಕೆಯನ್ನು ಶ್ರೀ ಮಠದ ಯಾಗ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಮೆರವಣಿಗೆಗೆ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇಗುಲದ ಸಭಾಂಗಣದಲ್ಲಿ ಅಧ್ಯಕ್ಷರಾದ ಹೆಚ್.ಎಸ್. ಶಶಿಧರ್ ನಾಯ್ಕ್ ಅವರು ಚಾಲನೆ ನೀಡಿದರು. ಈ ಸಂದರ್ಭ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಲೆ ಒಂದು ವಿಶಾಲವಾದ ವಿಷಯ. ಎಲ್ಲಾ ಕಲೆಯ ಮೂಲ ಉದ್ದೇಶ ಆ ಕಲೆಯ ರಸೋತ್ಪಾದನೆ. ಕಲೆಯ ಅಭಿರುಚಿ ಎಲ್ಲರಲ್ಲೂ ಇರಬೇಕು. ಕಲೆ ಹೃದಯ ಸಂಸ್ಕಾರವನ್ನು ನೀಡುತ್ತದೆ, ಸಮಾಜವನ್ನು ಸುಸಂಸ್ಕೃತವನ್ನಾಗಿಸಲು ಮತ್ತು ಜ್ಞಾನ ಸಂಪಾದನೆಗೆ ಸಹಕಾರಿಯಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಬಿಜೂರು ವಿಶ್ವೇಶ್ವರ ಅಡಿಗ ಹೇಳಿದರು. ಲಾವಣ್ಯ ಬೈಂದೂರು ಇದರ ಅಂಗ ಸಂಸ್ಥೆಯಾದ ರಿದಂ ನೃತ್ಯ ಮತ್ತು ಕಲಾ ಶಾಲೆಯ 24ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಹಾಗೂ ಲಾವಣ್ಯ ಹಿರಿಯ ನಿರ್ದೇಶಕ ಬಿ. ಗಣೇಶ್ ಕಾರಂತ್ ಅವರು ಅಧ್ಯಕ್ಷತೆ ವಹಿಸಿದ್ದರು. ವೈಯಕ್ತಿಕ ವಿಚಾರಗಳನ್ನು ಮೀರಿದ ಸಂಬಂಧವೇರ್ಪಡಿಸಿ ನಮ್ಮನ್ನು ಒಂದುಗೂಡಿಸುವ ಶಕ್ತಿ ಕಲೆ ಮತ್ತು ಸಾಹಿತ್ಯಕ್ಕಿದೆ. ತಾಯಿಯಂತಹ ಕರುಣೆ ಮತ್ತು ಮಗುವಿನಂತಹ ನಿಷ್ಕಪಟ ದೃಷ್ಠಿಯಿಂದ ನೋಡಿದರೆ ನಮಗೆ ಜಗತ್ತು ಸುಂದರ ಹಾಗೂ ಸನಿಹವಾಗುತ್ತದೆ. ಜಾತಿ, ಮತ, ಅಂತಸ್ತುಗಳ ನರಕದಿಂದ ಮೇಲೆತ್ತುವ ಸಾಮರ್ಥ್ಯ ಕೂಡ ಕಲೆಗೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆಳ್ವಾಸ್ ಶಿಕ್ಷಣ ಪತಿಷ್ಠಾನದವತಿಯಿಂದ ಆಯೋಜಿಸಲ್ಪಡುತ್ತಿರುವ ಬೃಹತ್ ಉದ್ಯೋಗ ಮೇಳದ14ನೇ ಆವೃತ್ತಿ, ಜೂನ್ 7 ಹಾಗೂ 8ರಂದು ಮೂಡುಬಿದಿರೆಯ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿದೆ. 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಲಿರುವ ಉದ್ಯೋಗಮೇಳದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಉಚಿತ ನೊಂದಣಿ ಇರಲಿದ್ದು, ವಿವಿಧ ಉದ್ಯೋಗ ವಲಯದ ಸಂದರ್ಶನವನ್ನು ಎದುರಿಸಬಹುದಾಗಿದೆ ಎಂದು ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹೇಳಿದರು. ಕುಂದಾಪುರದ ಪ್ರೆಸ್ ಕ್ಲಬ್’ನಲ್ಲಿ ಶುಕ್ರವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶೈಕ್ಷಣಿಕ ಕ್ಷೇತ್ರದ ಉತ್ಕೃಷ್ಟ ಉದಾಹರಣೆಯಾಗಿ, ಇಡೀ ದೇಶದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಳಿಂದ ಹೆಗ್ಗುರುತಾಗಿ ಬೆಳೆಯುತ್ತಿದೆ. `ಆಳ್ವಾಸ್ ಪ್ರಗತಿ’ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 2007ರಿಂದ ನಡೆಸಿಕೊಂಡು ಬರುತ್ತಿರುವ ಬೃಹತ್ ಉದ್ಯೋಗ ಮೇಳವಾಗಿದ್ದು, ಸಂಸ್ಥೆಯ ಸಿಎಸ್‌ಆರ್ ಚಟುವಟಿಕೆಯ ಭಾಗವಾಗಿ ಗ್ರಾಮೀಣ ಭಾಗದ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ವಿಶೇಷ ಔದ್ಯೋಗಿಕ ನೆರವು ನೀಡುವ ಉದ್ದೇಶವನ್ನು ವ್ಯವಸ್ಥಿತವಾಗಿ ಪೂರೈಸುತ್ತಾ ಬಂದಿದೆ. ಸಂಸ್ಥೆಯು ಈವರೆಗೆ 20 ಬೃಹತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಡಳಿತ ಕಚೇರಿಗೆ ಬಂದ ಅನಾರೋಗ್ಯ ಪೀಡಿತ ಹಾಗೂ ವಿದ್ಯಾರ್ಥಿ  ಪ್ರೋತ್ಸಾಹ ಧನ ಅರ್ಜಿಗಳಿಗೆ  ಕೊರ್ಗಿ ವಿಠಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಕೊರ್ಗಿ ವಿಠಲ್ ಶೆಟ್ಟಿ ಅವರು ಸ್ಪಂದಿಸಿ ವೈಯಕ್ತಿಕವಾಗಿ ಸುಮಾರು 50 ಸಾವಿರ ಸಹಾಯಧನವನ್ನು ವಿವಿಧ ಫಲಾನುಭವಿಗಳಿಗೆ ಕುಂಭಾಶಿಯಲ್ಲಿ ಆನೆಗುಡ್ಡೆ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ಸೂರ್ಯನಾರಾಯಣ ಉಪಾಧ್ಯಾಯರ  ಮೂಲಕ ವಿತರಿಸಿದರು. ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ಲೋಕೇಶ್ ಅಡಿಗ, ಕೊರ್ಗಿ ವಿಠಲ್ ಶೆಟ್ಟಿ ಅವರ ಧರ್ಮಪತ್ನಿ ಭವಾನಿ ವಿ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ, ಬಸ್ರೂರು ಹಾಗೂ ವಿಠಲ್ ಶೆಟ್ಟಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬೈಂದೂರಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸುರಭಿ ರಿ. ಬೈಂದೂರು ಸಂಸ್ಥೆಯ ಕುಂದಾಪ್ರ ಕನ್ನಡ ಭಾಷೆಯ ನಾಟಕ ʼಮಕ್ಕಳ ರಾಮಾಯಣʼ ಬೆಂಗಳೂರಿನಲ್ಲಿ ಪ್ರಥಮ ಭಾರಿಗೆ ಜೂನ್ 9 ಹಾಗೂ 10ರಂದು ಪ್ರದರ್ಶನಗೊಳ್ಳಲಿದೆ. ಬಿ.ಆರ್. ವೆಂಕಟರಮಣ ಐತಾಳ್ ಅವರ ರಚಿಸಿರುವ ನಾಟಕವನ್ನು, ಗಣೇಶ್ ಮಂದರ್ತಿ ಕುಂದಾಪುರ ಕನ್ನಡಕ್ಕೆ ಅನುವಾದಿಸಿ ನಿರ್ದೇಶನ ಮಾಡಿದ್ದಾರೆ. ಸುರಭಿ ಬೈಂದೂರು ಸಂಸ್ಥೆಯ ಬಾಲ ಕಲಾವಿದರು ನಾಟಕದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಹಲವು ಪ್ರದರ್ಶನಗಳನ್ನು ಕಂಡಿರುವ ಕುಂದಾಪುರ ಕನ್ನಡದ ಈ ನಾಟಕ ರಂಗಾಸಕ್ತರ ಮೆಚ್ಚುಗೆಗೂ ಪಾತ್ರವಾಗಿದೆ. ರಂಗಾಸ್ಥೆ ರಿ. ಬೆಂಗಳೂರು ನೇತೃತ್ವದಲ್ಲಿ ನಾಗರಬಾವಿಯ ಕಲಾಗ್ರಾಮದಲ್ಲಿ ಜೂನ್ 9 ಹಾಗೂ 10ರ ಸಂಜೆ 7:30ಕ್ಕೆ ನಾಟಕ ಪ್ರದರ್ಶನವಿರಲಿದೆ. ಟಿಕೆಟ್ ದರ ರೂ.200 ನಿಗದಿಪಡಿಲಾಗಿದ್ದು, ಬುಕ್ ಮೈ ಶೋ ಮೂಲಕ ಆನ್ಲೈನ್ನಲ್ಲಿ (click here to book show) ಅಥವಾ ಸಂಘಟಕರನ್ನು ಸಂಪರ್ಕಿಸಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8310775855…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಮೇ23: ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿಗಳು ನಷ್ಟವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿಯಲ್ಲಿ ಮಳೆಯಾಗುತ್ತಿದ್ದು, ನಿನ್ನೆ ಹಾಗೂ ಇಂದು ಬೈಂದೂರು ಭಾಗದಲ್ಲಿ 7 ಮೀ.ಮೀಗೂ ಹೆಚ್ಚಿನ ಮಳೆ ಸಂಜೆ ವೇಳೆಗೆ ಸುರಿದಿದೆ. ಭಾರಿ ಮಳೆಗೆ ಕಳವಾಡಿ ಶ್ರೀ ಮಾರಿಕಾಂಬಾ ದೇಗುಲದ ಎದುರು ಹೊಸತಾಗಿ ನಿರ್ಮಿಸಲಾಗಿದ್ದ ರೂ.15ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಊಟದ ಹಾಲ್ ಮೇಲ್ಚಾವಣಿ ಕುಸಿದು ಬಿದ್ದಿದೆ. ಬೈಂದೂರು ಪೊಲೀಸ್ ಠಾಣೆ ಆವರಣದಲ್ಲಿ ಹಳೆ ವೃತ್ತಿನಿರೀಕ್ಷಕರ ಕಛೇರಿ ಮೇಲೆ ಮರ ಉರುಳಿ ಬಿದ್ದಿದೆ. ಬೈಂದೂರು ರಥಬೀದಿಯ ನವೀನ್ ವೈನ್ಸ್ ಹಿಂಭಾಗದ ಮನೆಯ ಶೌಚಗೃಹದ ಮೇಲ್ಛಾವಣಿ ಹಾರಿ ಹೋಗಿದೆ. ಮನೆ ಮಾಡು ಕುಸಿತ, ಮರ ಉರುಳಿಬಿದ್ದಿರುವುದು, ರಸ್ತೆ ಮೇಲೆ ವಿದ್ಯುತ್ ಕಂಬ ಉರುಳಿರುವುದು ಸೇರಿದಂತೆ ವಿವಿಧ 16ರಕ್ಕೂ ಹೆಚ್ಚಿನ ಘಟನೆ ನಡೆದಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಗಾಳಿ ಮಳೆಗೆ ಬೈಂದೂರಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು,…

Read More

ಕುಂದಾಪ್ರ ಡಾಟ್‌ ಕಾಂ ಮಾಹಿತಿಈಗ ಡ್ರೈವಿಂಗ್ ಲೈಸೆನ್ಸ್ (DL) ಪಡೆಯುವುದು ಮೊದಲಿಗಿಂತ ಹೆಚ್ಚು ಸುಲಭವಾಗಲಿದೆ.ಹೊಸ ನಿಯಮದ ಅನುಷ್ಠಾನದ ನಂತರ,ಡಿಎಲ್ ಮಾಡಿಸುವ ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಿಂದ ಮುಕ್ತಿ ದೊರೆಯಲಿದೆ. ಪ್ರಸ್ತುತ,ಡಿಎಲ್ ಮಾಡಲು, ಕಚೇರಿಗಳಿಗೆ ಭೇಟಿ ನೀಡಿ ಸಾಕಷ್ಟು ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗುತ್ತದೆ.ಈ ಪ್ರಕ್ರಿಯೆಯಲ್ಲಿ ಹಲವಾರು ಬಾರಿ ತಪ್ಪುಗಳಾಗುವುದೂ ಇದೆ. ಡಿಎಲ್ ಪ್ರಕ್ರಿಯೆ ಹೆಚ್ಚು ಸುಲಭವಾಗಲಿದೆ :ಡಿಎಲ್ ಮಾಡಿಸುವಾಗ ಎದುರಾಗುವ ಸಮಸ್ಯೆಗಳನ್ನು ಹೋಗಲಾಡಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ.ಹೊಸ ನಿಯಮಗಳ ಅನುಷ್ಠಾನದ ನಂತರ,ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯು ಹೆಚ್ಚು ಸುಲಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.ಜೂನ್ 1 ರಿಂದ ಡಿಎಲ್ ನಿಯಮಗಳಲ್ಲಿ ಏನು ಬದಲಾವಣೆ ಮತ್ತು ಇಲಾಖೆಯಿಂದ ಯಾವ ಬದಲಾವಣೆಗಳನ್ನು ಮಾಡಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ. ಖಾಸಗಿ ಡ್ರೈವಿಂಗ್ ಸ್ಕೂಲ್‌ʼನಲ್ಲಿಯೂ ಚಾಲನಾ ಪರೀಕ್ಷೆ ನೀಡಬಹುದು:ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ. ಜೂನ್ 1 ರಿಂದ ಜಾರಿಗೆ ಬರಲಿರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಜ್ಯೂನಿಯರ್ ಕಾಲೇಜಿನ ಎಸ್.ಎಸ್.ಎಲ್.ಸಿ ಉತ್ತಿರ್ಣ ವಿದ್ಯಾರ್ಥಿ ನಿತಿನ್ ಆಚಾರ್ ಆತ್ಮಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಶಾಲೆಯ ವಿರುದ್ದ ಪೋಷಕರು ತಿರುಗಿ ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಕೆ ನಡೆಸಿ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಮಂಗಳವಾರ ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ ಬೈಂದೂರು ಆರಕ್ಷಕ ಠಾಣೆಗೆ ಮುತ್ತಿಗೆ ಹಾಕಿದ ಕುಟುಂಬಸ್ಥರು ನ್ಯಾಯ ದೊರಕುವ ತನಕವೂ ಶವ ಸಂಸ್ಕಾರ ಮಾಡುವುದಿಲ್ಲವೆಂದು ಎಂದು ಪಟ್ಟು ಹಿಡಿದ ಘಟನೆ ನಡೆಯಿತು. ಸ್ಥಳಕ್ಕಾಗಮಿಸಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಈ ವೇಳೆ ಪ್ರತಿಕ್ರಿಯಿಸಿ, ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ವಿದ್ಯಾರ್ಥಿಯಾಗಿರುವ ಕಾರಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ನೀಡಲಾಗುವುದು. ತಪ್ಪಿದಸ್ಥರ ವಿರುದ್ದ ಸ್ಪಷ್ಟತೆ ದೊರೆತಲ್ಲಿ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದರು. ಪೊಲೀಸ್ ಠಾಣೆಯ ಬಳಿ ನೆರೆದಿದ್ದ ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಗಳು ಕುಟುಂಬಿಕರಿಗೆ ಮನವರಿಕೆ ಮಾಡಿದ ಬಳಿಕ ವಿದ್ಯಾರ್ಥಿಯ ಶವವನ್ನು ಮರಣೋತ್ತರ ಪರೀಕ್ಷೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶಾಲೆಯಲ್ಲಿ ವರ್ಗಾವಣೆ ಪ್ರಮಾಣಪತ್ರ ನೀಡಲು ವಿಳಂಬ ಮಾಡಿದರೆಂಬ ಕಾರಣಕ್ಕೆ ಎಸ್.ಎಸ್.ಎಲ್.ಸಿ ಉತ್ತೀರ್ಣ ವಿದ್ಯಾರ್ಥಿಯೋರ್ವ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ. ಶಿರೂರು ಮೇಲ್ಪಂಕ್ತಿಯ ನಿತಿನ್ ಆಚಾರಿ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಬೈಂದೂರು ಸರಕಾರಿ ಪ್ರೌಢಶಾಲೆ ಹೈಸ್ಕೂಲ್ ಎಸ್.ಎಸ್.ಎಲ್.ಸಿ ಪೂರೈಸಿದ್ದು, ಸೋಮವಾರ ಕಾಲೇಜಿಗೆ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ತೆರಳಿದ್ದ. ಎಸ್.ಎಸ್.ಎಲ್.ಸಿ ತರಗತಿ ಮುಗಿಯುವ ಕೊನೆಯ ದಿನ ಕೆಲವು ವಿದ್ಯಾರ್ಥಿಗಳು ಶಾಲೆಯ ಹೊರಗಿನ ಸಿಸಿ ಕ್ಯಾಮರಾ ಹಾಗೂ ಗೇಟ್ ಬೀಗವನ್ನು ಮುರಿದಿರುವ ಬಗ್ಗೆ ಉಪಪ್ರಾಂಶುಪಾಲರು ನಿತಿನ್ ಬಳಿ ವಿಚಾರಿಸಿದ್ದು, ಪಾಲಕರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ. ಅವರ ಮಾತಿಗೆ ಒಪ್ಪಿ ಶಾಲೆಯಿಂದ ಮನೆಗೆ ತೆರಳಿದ್ದ ವಿದ್ಯಾರ್ಥಿ, ಈ ವಿಚಾರ ಮನೆಯವರಿಗೆ ತಿಳಿದರೆ ತೊಂದರೆಯಾಗಬಹುದು ಎಂದು ಹೆದರಿ ಮಧ್ಯಾಹ್ನದ ಬಳಿಕ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಪೊಲೀಸರು ಘಟನೆಯ ಮಾಹಿತಿ ಪಡೆದು ತನಿಕೆ ಕೈಗೆತ್ತಿಕೊಂಡಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವಿಶ್ವ ರಾಮಕ್ಷತ್ರಿಯ ಮಹಾಸಂಘದ ನೇತೃತ್ವದಲ್ಲಿ ರಾಮಕ್ಷತ್ರಿಯ ಸಮಾಜದ ಶ್ರೇಯೋಭಿವೃದ್ಧಿಗಾಗಿ ಮೇ.26ರಂದು ಬಾಳೆಕುದ್ರು ಶ್ರೀಮಠದಲ್ಲಿ ಮಹಾಮೃತ್ಯುಂಜಯ ಹೋಮ, ಚಂಡಿಕಾ ಹೋಮ, 108 ಕಾಯಿ ಗಣಹೋಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ಗಂಟೆ 7-00ಕ್ಕೆ ಪ್ರಾರ್ಥನೆ, 11.30ಕ್ಕೆ ಪೂರ್ಣಾಹುತಿ, ಬಳಿಕ ಮುಕ್ಕಾ ಶ್ರೀನಿವಾಸ ಯುನಿವರ್ಸಿಟಿಯ ಸಂಶೋಧನಾ ಮಾರ್ಗದರ್ಶಕ ಡಾ. ಸೋಂದಾ ಭಾಸ್ಕರ ಭಟ್, ಕಟೀಲು ಅವರಿಂದ ಪ್ರವಚನ ಹಾಗೂ ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯಲಿದೆ.ಮಧ್ಯಾಹ್ನ ಅನ್ನಪ್ರಸಾದ ವಿತರಣೆ ಇರಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್, ಆರ್. ಶಶಿಧರ ನಾಯ್ಕ್, ಕಾರ್ಯಧ್ಯಕ್ಷ ಕೆ. ನಾಗರಾಜ ಅವರು ತಿಳಿಸಿದ್ದಾರೆ.

Read More