ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ‘ಮಿನಿ ವಿಧಾನಸೌಧ’ ಮಾರ್ಚ್ 15ರಂದು ಉದ್ಘಾಟನೆಗೆ ಸಜ್ಜಾಗಿದೆ. ಮಾ.15ರ ಬೆಳಿಗ್ಗೆ 10-30ಕ್ಕೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ನೂತನ ಕಟ್ಟಡವನ್ನು ಉದ್ಘಾಟನೆಗೊಳಿಲಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರುಗಳಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್ ಕುಮಾರ್, ಆರ್. ಅಶೋಕ್, ವಿ. ಸೋಮಣ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ. ಬೈಂದೂರಿಗೆ ಮುಕುಟಪ್ರಾಯ:ಅಭಿವೃದ್ಧಿಯ ಪಥದಲ್ಲಿರುವ ಬೈಂದೂರು ತಾಲೂಕಿಗೆ ಮುಕುಟಪ್ರಾಯದಂತೆ ಬೈಂದೂರು ಮಿನಿ ವಿಧಾನಸೌಧ ಕಂಗೊಳಿಸುತ್ತಿದೆ. ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರ ಅವಧಿಯಲ್ಲಿ ತಾಲೂಕು ಘೋಷಣೆಯಾಗಿ ಮಿನಿ ವಿಧಾನಸೌಧದ ನಿರ್ಮಿಸುವ ಪ್ರಕ್ರಿಯೆ ಆರಂಭಗೊಂಡರೇ, ಹಾಲಿ ಸಂಸದರಾದ ಬಿ. ವೈ. ರಾಘವೇಂದ್ರ ಹಾಗೂ ಶಾಸಕರಾದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀರ್ವಾದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನದಲ್ಲಿ ಮಾ.೧೩ರಂದು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಜರುಗಲಿರುವ ಏಕಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಶನಿವಾರ ಹಸಿರು ಹೊರೆಕಾಣಿಕೆ ಪುರ ಮೆರವಣಿಗೆ ನಡೆಯಿತು. ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಹೊರಟ ಹಸಿರು ಹೊರೆಕಾಣಿಕೆ ಪುರ ಮೆರವಣಿಗೆಗೆ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಿರಿಯ ಸದಸ್ಯ ಸುರೇಶ್ ಬೆಟ್ಟಿನ್ ಚಾಲನೆ ನೀಡಿ ಶುಭ ಹಾರೈಸಿದರು. ಸೇವಾಕರ್ತರಾದ ರಾಮಚಂದ್ರ ಮತ್ತು ಕುಟುಂಬಿಕರು, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಸದಸ್ಯರಾದ ವಾದಿರಾಜ್ ಹೆಬ್ಬಾರ್, ಚಂದ್ರ ಬಿ.ಎನ್, ಪುರಮೆರವಣಿಗೆ ಸಂಚಾಲಕ ರಾಮನಾಯ್ಕ್, ನಾಗಮಂಡಲೋತ್ಸವದ ವಿವಿಧ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ತಟ್ಟಿರಾಯ, ಕೀಲು ಕುದುರೆ, ಪಂಚವಾದ್ಯಗಳು, ಚಂಡೆವಾದನ, ಬ್ಯಾಂಡ್, ಭಜನೆ, ನಾಮಸಂಕೀರ್ತನೆ ಸೇರಿದಂತೆ ಕಳಸ ಹಿಡಿದ ಮಹಿಳೆಯರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಬೈಂದೂರು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯೋಜನೆಯಲ್ಲಿ ಶೈಕ್ಷಣಿಕ ಕಾರ್ಯಗಾರ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವು ಶುಕ್ರವಾರ ಸಾಧನಾ ಸಭಾಭವನ ಮರವಂತೆಯಲ್ಲಿ ಜರುಗಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಉದ್ದೇಶ, ಶಿಕ್ಷಣದಲ್ಲಿ ದೈಹಿಕ ಶಿಕ್ಷಣದ ಪ್ರಾಮುಖ್ಯತೆ, ಏನೇ ಅಡೆ ತಡೆ ಇದ್ದರೂ ಕ್ರೀಡಾ ಪ್ರತಿಭೆಗಳನ್ನು ಹೊರತರುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರದ ಕುರಿತು ಮನಮುಟ್ಟುವಂತೆ ತಿಳಿಸಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪ್ರೋತ್ಸಾಹ ನುಡಿಗಳನ್ನಾಡಿದರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. 2022-23ನೇ ಸಾಲಿನಲ್ಲಿ ಕ್ರೀಡೆಯಲ್ಲಿ ವಿಭಾಗ, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆಗೈದ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಸಾಧನಾ ಸಂಸ್ಥೆಯ ಸ್ಥಾಪಕರು ಹಾಗೂ ನಿವೃತ್ತ ಉಪನ್ಯಾಸಕರಾಗಿರುವ ಎಸ್ ಜನಾರ್ದನ ಅವರು ವಿದ್ಯಾರ್ಥಿಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್ 2022ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಎಂಟು ರ್ಯಾಂಕ್ಗಳು ದೊರಕಿವೆ. ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಬೈಂದೂರು ತಾಲೂಕಿನ ಯಡ್ತೆರೆ ಗ್ರಾಮದ ಗೋವಿಂದ ಪೂಜಾರಿ ಅವರ ಪುತ್ರಿ ದೀಕ್ಷಾ ಅವರಿಗೆ ನಾಲ್ಕನೇ ರ್ಯಾಂಕ್ ಮತ್ತು ಬೈಂದೂರು ತಾಲೂಕಿನ ಕೊಡೇರಿ ಗ್ರಾಮದ ಕೃಷ್ಣ ಪೂಜಾರಿ ಅವರ ಅವರ ಪುತ್ರಿ ರಮಿತಾ ಅವರಿಗೆ ಆರನೇ ರ್ಯಾಂಕ್ ಕುಂದಾಪುರದ ಕಂದಾವರ ಗ್ರಾಮದ ನಾಗಭೂಷಣ ಅವರ ಪುತ್ರಿ ಸ್ಪೂರ್ತಿ ಅವರಿಗೆ ಎಂಟನೇ ರ್ಯಾಂಕ್, ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ರವೀಂದ್ರ ಶೆಟ್ಟಿ ಅವರ ಪುತ್ರ ರಕ್ಷಿತ್ ಕುಮಾರ್ ಶೆಟ್ಟಿ ಅವರಿಗೆ ಒಂಬತ್ತನೇ ರ್ಯಾಂಕ್ ದೊರೆತಿದೆ. ಬಿ.ಎಸ್.ಸಿ ಪದವಿ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗುರುದತ್ತ ಪೈ ಅವರ ಪುತ್ರ ಸನತ್ ಗುರುದತ್ತ ಪೈ ಅವರಿಗೆ ಏಳನೇ ರ್ಯಾಂಕ್ ದೊರೆತಿದೆ. ಬಿ ಕಾಂ ಪರೀಕ್ಷೆಯಲ್ಲಿ ಕುಂದಾಪುರದ ತಾಲೂಕಿನ ಕೋಟೇಶ್ವರ ಗ್ರಾಮದ ಪ್ರಸನ್ನ ಹೆಬ್ಬಾರ್ ಇವರ…
ಈ ಚುನಾವಣೆಯಲ್ಲಿ ಬೈಂದೂರು ಬಿಜೆಪಿ ಟಿಕೆಟ್ ದೊರೆಯುವ ಭರವಸೆ ಇದೆ – ಕೆ ಬಾಬು ಶೆಟ್ಟಿ – ಬೈಂದೂರು ಬಿಜೆಪಿ ಮುಖಂಡ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಉಪ್ಪುಂದ ಲೇಡಿ ಜೆಸಿ ವಿಭಾಗದ ವತಿಯಿಂದ ಬೈಂದೂರು ಸಿಟಿ ಜೆಸಿ ಸದಸ್ಯರ ಭಾಗವಹಿಸುವಿಕೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಸನ್ಮಾನ ತರಬೇತಿ ಸಂವಾದ ಹಾಗೂ ಸ್ಪರ್ಧಾ ಕಾರ್ಯಕ್ರಮ ಉಪ್ಪಂದದ ರೈತ ಸೇರಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಂಬದಕೊಣೆ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಉಪ್ಪುಂದ ಇದರ ಅಧ್ಯಕ್ಷರಾದ ಎಸ್ ಪ್ರಕಾಶ್ಚಂದ್ರ ಶೆಟ್ಟಿ ಅವರು ಸೃಷ್ಟಿಯಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯ ಮೇಲೆ ಅವಲಂಬಿತನಾಗಿರುತ್ತಾನೆ ಪ್ರತಿಯೊಬ್ಬ ಮಹಿಳೆಯು ಕೂಡ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದಾಗ ಈ ದೇಶ ಇನ್ನಷ್ಟು ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಬಹು ಅಂಗ ವಿಕಲ ಇಬ್ಬರು ಗಂಡು ಮಕ್ಕಳನ್ನ 45 ವರ್ಷಗಳಿಂದ ಬಹಳ ಜಾಗರೂಕತೆಯಿಂದ ಸಾಕುತ್ತಿರುವ ಮಹಾತಾಯಿ ಗಿರಿಜಾ ಅವರನ್ನು, ಉದ್ಯಮ ಕ್ಷೇತ್ರದಲ್ಲಿ ತನ್ನನ್ನ ತೊಡಗಿಸಿಕೊಂಡ ಲೀಲಾ ಅವರನನ್ನು ಹಾಗೂ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶಿನಿ ಅವರನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜಿಗೆ ಪ್ರಥಮ ರ್ಯಾಂಕ್ ಲಭಿಸಿದೆ. ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ವಿದ್ಯಾರ್ಥಿನಿ ಗೀತಾಂಜಲಿ ಬಿಎಸ್ಸಿ.ಹೆಚ್.ಎಸ್(ಹೋಟೆಲ್ ಮ್ಯಾನೇಜ್ಮೆಂಟ್) 2019-2022 ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ 91% ಅಂಕಗಳೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಕಾಲೇಜಿಗೆ ಕೀರ್ತಿಯನ್ನು ತಂದ ವಿದ್ಯಾರ್ಥಿನಿ ಶೈಕ್ಷಣಿಕ ಸಾಧನೆ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ಡಾ. ಸೀಮಾ ಜಿ. ಭಟ್, ಕಾಲೇಜಿನ ಸಂಸ್ಥಾಪಕರಾದ ಸುಬ್ರಮಣ್ಯ, ನಿರ್ದೇಶಿಕಿ ಮಮತಾ ಹಾಗೂ ಉಪನ್ಯಾಸಕ ವೃಂದದವರು ಶುಭ ಹಾರೈಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮಾ 10: ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಅರೆಬೈಲು ಸತೀಶ ದೇವಾಡಿಗ ಅವರ ಮನೆಯ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಲು ಯತ್ನಿಸಿದ ಘಟನೆ ಮಾ.8 ರಂದು ರಾತ್ರಿ ಸಂಭವಿಸಿದ ಹಿನ್ನೆಲೆಯಲ್ಲಿ ನಡೆಸಲಾದ ಆಪರೇಷನ್ ಚೀತಾ ಇಂದು ಮಾರ್ಚ್ 10ರಂದು ಯಶಸ್ವಿಯಾಗಿದೆ. ಆ ಮೂಲಕ ಏಳನೇ ಚಿರತೆಯ ಬಂಧನವಾಗಿದೆ. ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಾಗೂ ಜನವಸತಿಯಿರುವ ಪ್ರದೇಶದ ಸನಿಹದಲ್ಲೇ ಇರುವ ತೋಪಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಿರತೆ ಕಾಟ ನಿರಂತರವಾಗಿದ್ದು, ಭಾನುವಾರ ಆರನೇ ಚಿರತೆಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಈ ಭಾಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಚಿರತೆ ಕಾಟವಿದ್ದು ಸಾರ್ವಜನಿಕರು ಆತಂಕಿತ ರಾಗಿದ್ದಾರೆ. ಅರಣ್ಯ ಇಲಾಖೆ ಸೆಪ್ಟಂಬರ್ 8ರಂದು ಈ ಜಾಗದಲ್ಲಿ ಬೋನ್ ಇರಿಸಿದ್ದು, ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್…
ವಿಪರೀತ ತಲೆನೋವು ಅನುಭವಿಸಿ ಸುಸ್ತಾಗಿ ನಗರದ ದೊಡ್ಡ ಆಸ್ಪತ್ರೆಗೆ ಹೋಗಿದ್ದೆ. ವೈದ್ಯರ ಸಲಹೆಯಂತೆ ನೇಸಲ್ ಎಂಡೋಸ್ಕೋಪಿ ಮಾಡಿಸಿಕೊಂಡು ರಿಪೋರ್ಟ್ ಗೆ ಕಾಯುತ್ತಾ ಕುಳಿತೆ.ನನ್ನ ಪಕ್ಕದಲ್ಲಿದ್ದ ಖಾಲಿ ಕುರ್ಚಿಯಲ್ಲಿ ಒಬ್ಬ ಗಂಡಸು ಬಂದು ಮುದುರಿಕೊಂಡು ಕುಳಿತರು. ಮಾಸ್ಕ್ ಹಾಕಿದ್ದರು. ಒಮ್ಮೆ ಅವರತ್ತ ನೋಡಿದೆ. ಗಂಟಲಲ್ಲಿ ದೊಡ್ಡ ಗಾತ್ರದ ಗಾಯ. ಅಯ್ಯೋ ಪಾಪ ಏನಾಗಿದೆಯೋ ಎನಿಸಿತು. ಮತ್ತೆ ಅವರು ನೋಡಲೇ ಇಲ್ಲ. ನಾನು ಪದೇ ಪದೇ ಅವರನ್ನೇ ನೋಡಡಿದರೆ ಅವರ ಮನಸ್ಸಿಗೆ ನೋವಾಗಬಹುದೆಂದು ಭಾವಿಸಿ ಸುಮ್ಮನೆ ಕಣ್ಣು ಮುಚ್ಚಿ ಕುಳಿತೆ. ಸ್ವಲ್ಪ ಹೊತ್ತಿನಲ್ಲೆ ಆ ಗಂಡಸನ್ನು ವೈದ್ಯರ ಕೋಣೆಗೆ ಕರೆದರು. ಅವರಿಗೆ ಏನಾಗಿರಬಹುದೆಂಬ ಕುತೂಹಲ. ಅದಕ್ಕೆ ಸರಿಯಾಗಿ ವೈದ್ಯರ ಕೋಣೆ ಸಹ ನಾನು ಕುಳಿತ ಜಾಗದ ಎದುರಿಗಿತ್ತು.ಬನ್ನಿ ಹೇಗಿದ್ದೀರಾ ಎಂದು ಪ್ರೀತಿಯಿಂದ ವೈದ್ಯರು ವಿಚಾರಿಸಿದರು. ಆ ಪ್ರೀತಿಗೆ ತಾನು ಅರ್ಹನಲ್ಲವೆಂಬಂತೆ ಆ ವ್ಯಕ್ತಿ ಮಾಸ್ಕ್ ತೆಗೆದು ಚಿಕ್ಕ ನಗು ಬೀರಿದರು. ಕೈಯಲ್ಲಿದ್ದ ಚೀಲದಿಂದ ರಿಪೋರ್ಟ್ ತೆಗೆದು ವೈದ್ಯರ ಕೈಗಿತ್ತರು. ಡಿಪಾರ್ಟೆಂಟ್ ಆಫ್ ಓಂಕಾಲಜಿ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹೆಣ್ಣುಮಕ್ಕಳನ್ನು ಸಬಲರನ್ನಾಗಿಸುವ ಜತೆಗೆ ಪೋಷಕರನ್ನು ಜಾಗೃತಗೊಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಕುಟುಂಬದ ಕೇಂದ್ರ ಬಿಂದುವಾಗಿರುವ ಮಹಿಳೆಗೆ ಸ್ಥಾನ-ಮಾನ, ಗೌರವದ ಜತೆಗೆ ಪೂಜ್ಯ ಭಾವನೆಯಿಂದ ಕಾಣುವ ಸಂಸ್ಕೃತಿ ನಮ್ಮ ನಮ್ಮದು. ಇಂತಹ ಪರಂಪರೆ ವಿಶ್ವದ ಯಾವುದೇ ರಾಷ್ಟ್ರಗಳಲ್ಲಿಲ್ಲ ಎಂದು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಗೀತಾಂಜಲಿ ಸುವರ್ಣ ಹೇಳಿದರು. ರಾಜ್ಯ ಟೈಲರ್ಸ್ ಅಸೋಸಿಯೇಶನ್, ಕೆಎಸ್ಟಿಎ ಬೈಂದೂರು ಕ್ಷೇತ್ರ ಸಮಿತಿ ಮತ್ತು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಉಪ್ಪುಂದ ದೇವಕಿ ಸಭಾಭವನದಲ್ಲಿ ಗುರುವಾರ ಮಹಿಳಾ ದಿನಾಚರಣೆ ಹಾಗೂ ಟೈಲರ್ಸ್ ಡೇ ಪ್ರಯುಕ್ತ ಹನ್ನೆರಡು ಅಶಕ್ತ ಟೈಲರ್ಗಳಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ಕೊಡಮಾಡಿದ ಹೊಲಿಗೆಯಂತ್ರಗಳನ್ನು ವಿತರಿಸಿ ಮಾತನಾಡಿದರು. ಒಬ್ಬರಿಂದಾಗದ ಕೆಲಸ ಸಂಘಟನೆ ಮೂಲಕ ಮಾಡಬಹುದು. ಹೀಗಾಗಿ ವಲಯದ ಎಲ್ಲಾ ಸದಸ್ಯರ ಸಹಭಾಗಿತ್ವ ಹಾಗೂ ಜಾತಿ ಭೇಧ ಮರೆತು ಎಲ್ಲರೂ ಒಂದಾಗಿ ಬೆರೆತು ನಮ್ಮೊಳಗಿನ ಬಾಂಧವ್ಯ ಗಟ್ಟಿಗೊಳಿಸುವ ಸದುದ್ದೇಶದಿಂದ ಮುನ್ನೆಡಬೇಕು. ಸರ್ಕಾರಗಳು ಮಹಿಳೆಯರಿಗೆ ಉನ್ನತವಾದ ಸೌಕರ್ಯಗಳನ್ನು ನೀಡುವುದರ ಮೂಲಕ…
