ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಂಗ್ರೆಸ್ ಯಾವತ್ತೂ ಜಾತಿ ಧರ್ಮಗಳ ಆಧಾರದಲ್ಲಿ ಚುನಾವಣೆ ಎದುರಿಸಿಲ್ಲ. ಬದಲಾಗಿ ಜನರ ಭಾವನೆಗಳನ್ನು ಅರಿತುಕೊಂಡು ಅವರ ಹೊಟ್ಟೆ ಹಸಿವನ್ನು ನೀಗಿಸುವಲ್ಲಿ ಪ್ರಯತ್ನಿಸುತ್ತದೆ. ಹಾಗಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಶೇ.91ರಷ್ಟು ಜನರನ್ನು ಗ್ಯಾರೆಂಟಿಗಳ ಮೂಲಕ ತಲುಪಿರುವ ಹೆಮ್ಮೆ ಇದೆ. ಲೋಕಸಭಾ ಚುನಾವಣೆಯಲ್ಲಿಯೂ ರಾಜ್ಯದ ಕಾಂಗ್ರೆಸ್ ಸರಕಾರದ ಸಾಧನೆಗಳ ಮೂಲಕವೇ ಮತ ಯಾಚಿಸುತ್ತೇವೆ ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಕುಂದಾಪುರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿ, ರಾಜಕಾರಣಿಗಳು ಜಾತಿ ಧರ್ಮಗಳ ಆಧಾರದಲ್ಲಿ ಹಾಗೂ ಭಾವನಾತ್ಮಕವಾಗಿ ಚುನಾವಣೆ ಎದುರಿಸುತ್ತಾರೆ. ನಾವು ಅಭಿವೃದ್ಧಿಯ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಐದೂ ಗ್ಯಾರೆಂಟಿಗಳನ್ನೂ ಪೂರೈಸುವ ಮೂಲಕ ರಾಜಕಾರಣದಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡಿದೆ ಎಂದರು. ಶಿವಮೊಗ್ಗ ಸಂಸದರ ಸಾಧನೆ ಶೂನ್ಯ:ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅವರ ಸಾಧನೆಗಳು ಬ್ಯಾನರುಗಳಿಗಷ್ಟೇ ಸೀಮಿತವಾಗಿದೆ. ಅದನ್ನು ಮೀರಿ ಏನೂ ಸಾಧನೆ ಮಾಡಿಲ್ಲ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಮುಖ್ಯವಾಗಿ ಉಪಕಾರ ಮಾಡುವ ಸಮಾಜವೇ ವಿನಹ: ಅಪಕಾರ ಮಾಡುವ ಸಮಾಜವಲ್ಲ. ಜನರ ಒಳಿತನ್ನೇ ಬಯಸುತ್ತದೆ ವಿನಹ: ಕೆಟ್ಟ ಚಿಂತನೆ ಮಾಡುದಿಲ್ಲ ಎಂಬುದನ್ನು ನಾರಾಯಣ ಮಲ್ಯರು ಮೂರ್ತಿ ಪ್ರತಿಷ್ಠಾಪನೆ ಮೂಲಕ ತೋರಿಸಿಕೊಟ್ಟಿದ್ದಾರೆ. ಪಂಚ ನದಿಗಳ ಸಂಗಮವಾಗುವ ಪವಿತ್ರವಾದ ಗಂಗೊಳ್ಳಿಯು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪರಂಪರೆಗೆ ಎರಡು ಯತಿಗಳನ್ನು ನೀಡಿದ ಶ್ರೇಷ್ಠ ಕ್ಷೇತ್ರವಾಗಿದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು. ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವದ ನಿಮಿತ್ತ ಮೊಕ್ಕಾಂಗೆ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪ್ರಾರಂಭಗೊಂಡು ಮುಂದಿನ ವರ್ಷ 550 ಪೂರ್ಣಗೊಳ್ಳುತ್ತಿದೆ. ಇದರ ಉದ್ದೇಶಕ್ಕಾಗಿ ಮತ್ತು ಮಠದ ಮೂಲ ಶ್ರೀ ರಾಮ ದೇವರ ಪ್ರೀತ್ಯರ್ಥ 550 ದಿನಗಳ 550 ಕೋಟಿ ರಾಮತಾರಕ ಮಂತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದಿನದಿಂದ ದಿನಕ್ಕೆ ದೈಹಿಕ, ಮಾನಸಿಕ, ಸಾಮಾಜಿಕವಾಗಿ ದುರ್ಬಲರಾಗುತ್ತಿರುವ ನಾವು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದು ನಮಗೆ ಉತ್ತಮವಾದ ಕಾರ್ಯ ಸಾಮರ್ಥ್ಯ, ಕರ್ತವ್ಯ ನಿಷ್ಠೆ ಹಾಗೂ ಸೇವಾ ಮನೋಭಾವನೆಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ಹೊಸದೊಂದು ವರ್ಷವನ್ನು ನಿರ್ಮಾಣ ಮಾಡಲು ನೆರವಾಗುವುದು ಎಂದು ಯಳಜಿತ್ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು. ಉಪ್ಪುಂದ ದೇವಕಿ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಸ್ವರಚಿತ ’ಸಂಸ್ಕಾರಗಳ ದಿವ್ಯತೆ, ಜೀವನದ ಭವ್ಯತೆ ಕೃತಿಯನ್ನು ಲೋಕಾರ್ಪಣೆಗೊಳಿಸಿ ಉಪನ್ಯಾಸ ನೀಡಿದರು. ಸನಾತನ ಸಂಸ್ಕೃತಿಯು ಮಾನವನ ಸಾಂಸ್ಕೃತಿಕ ಆಧ್ಯಾತ್ಮಿಕ ವ್ಯವಹಾರಿಕ ಉನ್ನತಿಗೆ ಸಹಾಯಕಾರಿಯಾದ ನಮ್ಮದೇ ಜ್ಞಾನ ಸಂಪತ್ತು. ಇದು ಸರ್ವಜನ ಹಿತವನ್ನು ಬಯಸುವ ವಿಪುಲವಾದ ಜ್ಞಾನರಾಶಿ. ಪ್ರಸ್ತುತ ಇಂದಿನ ಶಿಕ್ಷಣದ ಮೂಲಕ ಅಥವಾ ಮಾಧ್ಯಮಗಳ ಮೂಲಕ ಮಕ್ಕಳಿಗೆ ಅವಶ್ಯಕತೆ ಪ್ರಮಾಣದಲ್ಲಿ ತಲುಪುತ್ತಿಲ್ಲ ಎಂಬುದು ಸರ್ವವಿಧಿತ. ಆದ್ದರಿಂದ ನಾವು ಇಂತಹ ಅನರ್ಘ್ಯ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಕೊಡುವ ಪ್ರಾಯೋಗಿಕ ಮಾರ್ಗವನ್ನು ಕಂಡುಹಿಡಿಯದಿದ್ದರೆ ಇದು ಕ್ರಮೇಣ…
ಯಡಿಯೂರಪ್ಪನವರ ಲಂಚದ ಹಣದಲ್ಲಿ ಗೆದ್ದು ಬಂದ ರಾಘವೇಂದ್ರ ಅವರ ಕೊಡುಗೆ ಏನಿದೆ? ಸಚಿವ ಮಧು ಬಂಗಾರಪ್ಪ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕಲೋಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಸಭೆ ಸಮಾರಂಭ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ನಡೆಸಲು ಸುವಿಧಾ ತಂತ್ರಾಂಶದ ಮೂಲಕ ಅನುಮತಿ ಪಡೆಯಬೇಕೆಂದ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ .ಕೆ ರವರು ತಿಳಿಸಿದರು . ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಹಾಗೂ ಪ್ರಿಂಟರ್ ಮತ್ತು ಪಬ್ಲಿಷರ್ಸ್ ಗಳ ಮಾಲೀಕರರೂಂದಿಗೆ ಸಭೆ ನಡೆಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿ ನಡೆಸಲು, ಸಂಚಾರಿ ವಾಹನ, ಧ್ವನಿವರ್ಧಕ, ಹೆಲಿಕಾಪ್ಟರ್ ಹಾಗೂ ಹೆಲಿಪ್ಯಾಡ್ ಅನುಮತಿ ಸೇರಿದಂತೆ ಇನ್ನಿತರೆ ಕಾರ್ಯ ಚಟುವಟಿಕೆಗಳಿಗೆ ಸುವಿಧಾ ತಂತ್ರಾಂಶ ಮೂಲಕವೇ ಅನುಮತಿ ಪಡೆಯಬೇಕೆಂದರು. ಲೋಕಸಭೆ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯಂತೆ ಅಧಿಸೂಚನೆ ಹೊರಡಿಸಲಾಗುವುದು. ಲೋಕಸಭೆ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ಘೋಷಿಸಿದ್ದು , ಆಯೋಗ ಜಾರಿಗೊಳಿಸಿರುವ ನೀತಿ ಸಂಹಿತೆಗಳನ್ನು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸ ಬೇಕೆಂದರು. ಮಾದರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಕೆಡಿಪಿ ಸದಸ್ಯ, ಹೇರಿಕುದ್ರುವಿನ ಗಂಗಾಧರ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅತ್ಯಂತ ಆರೋಗ್ಯಪೂರ್ಣರಾಗಿದ್ದ ಅವರು ಮಾರ್ಚ್ 13ರಂದು ಬೆಳಿಗ್ಗೆ 6 ಗಂಟೆಗೆ ಹಠಾತ್ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ತತ್ ಕ್ಷಣವೇ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಲಾಗಿತ್ತು. ಆದರೆ ಅವರಿಗೆ ಬ್ರೈನ್ ಹ್ಯಾಮರೇಜ್ ಆಗಿರುವುದು ಸ್ಪಷ್ಟಗೊಂಡ ಹಿನ್ನಲೆಯಲ್ಲಿ ಆ ನಂತರದಲ್ಲಿ ಉಡುಪಿಯ ದೊಡ್ಡ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ದಿವಂಗತ ಆಸ್ಕರ್ ಫರ್ನಾಂಡೀಸ್, ವಿನಯ್ ಕುಮಾರ್ ಸೊರಕೆ, ಜಯಪ್ರಕಾಶ ಹೆಗ್ಡೆ ಮುಂತಾದ ನಾಯಕರುಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅವರು ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರ ಅನುಯಾಯಿಯಾಗಿದ್ದರು. ಗ್ರಾಮಪಂಚಾಯಿತಿ ಮಟ್ಟದಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಬಲಿಷ್ಠವಾಗಿ ಕಟ್ಟಿದ್ದ ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಮಟ್ಟದಲ್ಲಿ ಉತ್ತಮವಾದ ಗೌರವವನ್ನು ಪಡೆದಿದ್ದಾರೆ. ಆ ನಿಟ್ಟಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಗವಂತನಿಗೆ ಯಾರಲ್ಲಿ ಏನಿಲ್ಲ, ಏನು ಕೊಡಬೇಕು ಎನ್ನೋದು ಗೊತ್ತಿರುತ್ತದೆ. ಭಗವಂತನಲ್ಲಿ ಬೇಡುವುದಾದರೆ ಜ್ಞಾನಕೇಳು. ಆಧ್ಯಾತ್ಮ ದಾರಿಯಲ್ಲಿ ಸಾಗಿದರೆ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ. ಚಿಕ್ಕವಯಸ್ಸಲ್ಲಿ ಮಕ್ಕಳಿಗೆ ಆಧ್ಯಾತ್ಮ ದಾರಿಯಲ್ಲಿ ಸಾಗುವಂತೆ ನೋಡಿಕೊಂಡರೆ ಮುಂದೆ ಸಮಾಜಕ್ಕೆ ಉತ್ತಮ ಕೊಡುಗೆ ಆಗುತ್ತಾರೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠ ಕಿರಿಯ ಯತಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಹಟ್ಟಿಯಂಗಡಿ ದಿ.ರಾಮಚಂದ್ರ ಭಟ್ ಸಂಕಲ್ಪದಂತೆ ಅವರ ಮಕ್ಕಳು ಹಾಗೂ ಭಕ್ತರ ಸಹಕಾರದಲ್ಲಿ ನಿರ್ಮಿಸಿದ ಹಟ್ಟಿಯಂಗಡಿ ನೂತನ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಲೋಕಾರ್ಪಣೆ, ಶಿಖರ ಸ್ಥಾಪನೆ ನೆರವೇರಿಸಿ ಮಾತನಾಡಿದರು. ಮನುಷ್ಯರ ಸ್ವಭಾವ ಒಂದೇತರನಾಗಿರದೆ ಶ್ರದ್ದೆ ಹೊರಟುಹೋಗುತ್ತದೆ. ಭಗವಂತನಲ್ಲಿ ಸ್ಥಿರವಾದ ಭಕ್ತಿ ಬೇಡು. ಜ್ಞಾನ ಕೊಡುವವನು ಭಗವಂತನಾಗಿದ್ದರಿಂದ ವಿದ್ಯೆ ಕರುಣಿಸುವಂತೆ ಬೇಡು. ಐಶ್ವರ್ಯ, ವಿದ್ಯೆ, ಧನಕನಕ ಎಲ್ಲವನ್ನೂ ಕೊಟ್ಟ ದೇವರ ದರ್ಶನ ಮಾಡುವುದಕ್ಕೆ ಬರುವ ಭಕ್ತರಿದ್ದು, ಭಗವಂತನಿಗೆ ಎಲ್ಲಾ ಗೊತ್ತಿದ್ದು, ಕೊಡುವುದನ್ನು ಕೊಟ್ಟೇಕೊಡುತ್ತಾನೆ. ದೇವಸ್ಥಾನ ದೇವರ ದರ್ಶನ ಮಾಡುವುದು ಎಲ್ಲವನ್ನೂ ಕೊಟ್ಟ ಭಗವಂತಿಬಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NTA) ವತಿಯಿಂದ ನಡೆಸಲ್ಪಟ್ಟ ಜೆ.ಇ.ಇ. ಮೈನ್ಸ್ ಬಿ. ಆರ್ಕ್ (B.Arch) ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ರಾಷ್ಟ್ರ ಮಟ್ಟದ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ -2024 ರ ಪ್ರಥಮ ಹಂತದ ಪರೀಕ್ಷೆಯಲ್ಲಿ ದುರ್ಗಾಶ್ರೀ ಎಂ 99.1312779 ಪರ್ಸಂಟೈಲ್, ಆದಿತ್ಯ ಅಲಗೌಡ ಪಾಟೀಲ್ 98.5573008, ಪವನ್ ಕೆ. ಎಸ್ 96.1256545 ಪರ್ಸಂಟೈಲ್ ಗಳಿಸಿದ್ದಾರೆ. ಅದರಂತೆಯೇ ಜೆ.ಇ.ಇ ಮೈನ್ಸ್ ಬಿ ಪ್ಲಾನಿಂಗ್ ನಲ್ಲಿ ಸಾನ್ವಿಕುಮಾರ್ 92.7239106, ಸಚೇತ್ ದಯಾನಂದ ಬಿ. ಎಸ್ 85.7935359 ಪರ್ಸಂಟೈಲ್ ಪಡೆದಿದ್ದಾರೆ. ಎಂಟು ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸಂಟೈಲ್, ಹನ್ನೊಂದು ವಿದ್ಯಾರ್ಥಿಗಳು 85 ಕ್ಕಿಂತ ಹೆಚ್ಚು ಪರ್ಸಂಟೈಲ್ , ಹದಿನೇಳು ವಿದ್ಯಾರ್ಥಿಗಳು 80 ಕ್ಕಿಂತ ಹೆಚ್ಚು ಪರ್ಸಂಟೈಲ್ ಗಳಿಸಿದ್ದಾರೆ. ಜನವರಿ ತಿಂಗಳಿನಲ್ಲಿ ನಡೆದ ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿಯೂ ಕ್ರಿಯೇಟಿವ್ ನ 26 ವಿದ್ಯಾರ್ಥಿಗಳು 97 ಕ್ಕಿಂತ ಹೆಚ್ಚು ಪರ್ಸಂಟೈಲ್ ಗಳಿಸಿರುವುದನ್ನು ಗಮನಿಸಬಹುದಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಂಡಿದೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ಬಿಜೆಪಿ ಯುವ ನಾಯಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮಣೆ ಹಾಕಲಾಗಿದ್ದು, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಕೊಕ್ ನೀಡಲಾಗಿದೆ. ಇತರೇ ಕ್ಷೇತ್ರಗಳು:ಮೈಸೂರು-ಯದುವೀರ್ ಒಡೆಯರ್ಹಾವೇರಿ-ಬಸವರಾಜ ಬೊಮ್ಮಾಯಿಬೆಂಗಳೂರು ಉತ್ತರ-ಶೋಭಾ ಕರಂದ್ಲಾಜೆಬೆಂಗಳೂರು ಕೇಂದ್ರ-ಪಿಸಿ ಮೋಹನ್ಬೆಂಗಳೂರು ದಕ್ಷಿಣ-ತೇಜಸ್ವಿ ಸೂರ್ಯಬೆಂಗಳೂರು ಗ್ರಾಮಾಂತರ-ಮಂಜುನಾಥ್ಚಿಕ್ಕೋಡಿ- ಅಣ್ಣಾ ಸಾಹೇಬ್ ಜೊಲ್ಲೆಬಾಗಲಕೋಟೆ- ಪಿ.ಸಿ, ಗದ್ದಿಗೌಡರವಿಜಯಪುರ- ರಮೇಶ್ ಜಿಗಜಿಣಿಗಿಕಲಬುರಗಿ- ಉಮೇಶ ಜಾಧವ್ಬೀದರ್- ಭಗವಂತ ಖೂಬಾ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಮಾ.13 : ಬೆಲೆಏರಿಕೆಯಿಂದ ಕಷ್ಟದಲ್ಲಿರುವ ಜನರಿಗೆ ಆರ್ಥಿಕ ಬಲ ನೀಡಲು ಗ್ಯಾರಂಟಿಗಳನ್ನು ನೀಡುವ ಮೂಲಕ ಬಡವರ ಪರ ಕೆಲಸ ಮಾಡುವುದು ಕಾಂಗ್ರೆಸ್ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಉಡುಪಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಅಭಿವೃದ್ಧಿ ಕಾಮಾಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 2023 ರ ಜೂನ್ 11 ಕ್ಕೆ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲೆಯಲ್ಲಿ 87 ಲಕ್ಷ ಮಹಿಳೆಯರು 33 ಕೋಟಿ ರೂ.ಗಳ ವೆಚ್ಚದಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ . ಗೃಹಜ್ಯೋತಿ ಯೋಜನೆಯಡಿ 311652 ಜನ ಲಾಭ ಪಡೆಯುತ್ತಿದ್ದು, ಇದಕ್ಕಾಗಿ 114 ಕೋಟಿ ರೂ. ವ್ಯಯಿಸಲಾಗುತ್ತಿದೆ. ಅನ್ನಭಾಗ್ಯ 766000 ಜನರಿಗೆ ಉಚಿತ ಅಕ್ಕಿ ನೀಡಲಾಗುತ್ತಿದೆ. ರಾಜ್ಯದ ಬಡವರಿಗೆ ಅಕ್ಕಿ ನೀಡಲು ನಿರಾಕರಿಸಿದ ಬಿಜೆಪಿಯ ಕೇಂದ್ರ ಸರ್ಕಾರ ಎಂದಿಗೂ ಸಮಾಜಿಕ ನ್ಯಾಯದ ಪರವಾಗಿ ಇಲ್ಲ. ಕಾಂಗ್ರೆಸ್ ಪಕ್ಷ ಮಾತ್ರ ಬಡವರ ಪರ ಕೆಲಸ ಮಾಡುತ್ತಿದೆ.…
