Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ,ಮಾ.5: ಎಸ್.ಎಸ್.ಎಫ್ (ಸುನ್ನಿ ಸ್ಟುಡೆಂಟ್ ಫೆಡರೇಶನ್) ಗಂಗೊಳ್ಳಿ ಶಾಖೆ ವತಿಯಿಂದ ಇಲ್ಲಿನ ಸುಲ್ತಾನ್ ಮೊಹಲ್ಲಾದ ಬಿಷಾರತುಲ್ ಅರೇಬಿಕ್ ಮದ್ರಸದಲ್ಲಿ ’ಉಚಿತ ವೃತ್ತಿ ಮಾರ್ಗದರ್ಶನ, ಪ್ರೇರಣಾ ಶಿಬಿರ ಮತ್ತು ವಿದ್ಯಾರ್ಥಿವೇತನ ಜಾಗೃತಿ ಕಾರ್ಯಕ್ರಮ ಭಾನುವಾರ ಜರುಗಿತು. 8 ರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಈ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪುತ್ತೂರಿನ ಕಮ್ಯೂನಿಟಿ ಸೆಂಟರಿನ ಪ್ರಧಾನ ಕಾರ್ಯದರ್ಶಿ ಮತ್ತು ಶೈಕ್ಷಣಿಕ ಮಾರ್ಗದರ್ಶಕರಾದ ‘ಹನೀಫ್ ಪುತ್ತೂರು’ ಹಾಗೂ ಸೆಂಟರಿನ ನುರಿತ ಕೌನ್ಸಿಲರ್ ರಾದ ಇಮ್ತಿಯಾಝ್ ಪುತ್ತೂರು ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ, ವೃತ್ತಿ ಮಾರ್ಗದರ್ಶನ, ಕೌನ್ಸಿಲಿಂಗ್, ಜಾಗತಿಕ ಅವಕಾಶಗಳು, ಭವಿಷ್ಯದ ಬೆದರಿಕೆ ಮತ್ತು ತಯಾರಿಯ ಕುರಿತಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಆಗುವಂತೆ ವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗಂಗೊಳ್ಳಿ ಜಮತುಲ್ ಮುಸ್ಲಿಮೀನ್ ಕಮಿಟಿಯ ಅಧ್ಯಕ್ಷರಾದ ಪಿ.ಎಮ್. ಹಸೈನಾರ್, ಸುಲ್ತಾನ್ ಮೊಹಲ್ಲಾ ಮಸೀದಿಯ ಇಮಾಮರಾದ ಷರೀಫ್ ಸಹದಿ ಉಸ್ತಾದ್, ಸುನ್ನಿ ಸ್ಟೂಡೆಂಟ್ ಫೆಡರೇಶನ್ ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಅಶಿಮ್ ಗಂಗೊಳ್ಳಿ ಹಾಗೂ ಅಲ್ಪೈನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ನೂತನ ಅಧ್ಯಕ್ಷರಾಗಿ ಜಯಾನಂದ ಹೋಬಳಿದಾರ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರು ಕೆ. ವೆಂಕಟೇಶ್ ಕಿಣಿ, ಕಾರ್ಯದರ್ಶಿ ಪ್ರಕಾಶ್ ಬೈಂದೂರು, ಉಪಾಧ್ಯಕ್ಷರು ಉದಯ್ ಪಡಿಯಾರ್, ಖಜಾಂಚಿ ವಿಜಯ್ ಪೂಜಾರಿ, ಸದಸ್ಯರು ಸಂಜಯ್ ಬೈಂದೂರು, ಶಂಕರ್ ಶೇರುಗಾರ್, ಸುಧಾಕರ್ ಎಚ್. ನಾಗರಾಜ ಶೇಟ್, ಶ್ರೀಕುಮಾರ್ ಬೈಂದೂರು, ಬಾಲಕೃಷ್ಣ ಬೈಂದೂರು ಆಯ್ಕೆಯಾಗಿರುವುದಾಗಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರೋನಾ ಸಮಯದಲ್ಲಿ ರದ್ದಾಗಿದ್ದ ತಿರುವನಂತಪುರ ಮುಂಬಯಿ ಎಕ್ಸಪ್ರೆಸ್ – ನೇತ್ರಾವತಿ ಎಕ್ಸಪ್ರೆಸ್ (16346) ರೈಲಿಗೆ ಕುಂದಾಪುರ ನಿಲ್ದಾಣದಲ್ಲಿ ನಿಲುಗಡೆ ಹಾಗೂ ಬಹುದಿನಗಳ ಬೇಡಿಕೆಯಾದ ಮುಂಬಯಿ ಮಂಗಳೂರು ಮತ್ಯಗಂದ ಎಕ್ಸಪ್ರೆಸ್ ರೈಲು (12619/20) ಬಾರ್ಕೂರಿನಲ್ಲಿ ನಿಲುಗಡೆಗೆ ಆದೇಶವಾಗಿದೆ. ನೇತ್ರಾವತಿ ಎಕ್ಸಪ್ರೆಸ್ ರೈಲು ನಿಲುಗಡೆ ರದ್ದಾಗಿದ್ದರಿಂದ ಕುಂದಾಪುರದಿಂದ ಮುಂಬಯಿ ಮತ್ತು ಗೋವಾಕ್ಕೆ ತೆರಳುವ ಮತ್ತು ಮುಂಬಯಿ ಮತ್ತು ಗೋವಾದಿಂದ ಕುಂದಾಪುರಕ್ಕೆ ಸಂಚರಿಸುವ ಹಲವಾರು ಪ್ರಯಾಣಿಕರಿಗೆ ಅನಾನುಕೂಲತೆಯಾಗಿತ್ತು. ರೈಲು ನಿಲುಗಡೆಗೊಳಿಸಲು ಕ್ರಮ ಜರುಗಿಸಲು ಈ ಹಿಂದೆ ಸಾರ್ವಜನಿಕರು ಮತ್ತು ಕುಂದಾಪುರ ರೈಲ್ವೆ ಹೋರಾಟ ಸಮಿತಿ ಮನವಿ ಮಾಡಿದ್ದರು. ಪ್ರ ಯಾಣಿಕರ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನೇತ್ರಾವತಿ ಎಕ್ಸ್ ಪ್ರೆಸ್ ರೈಲನ್ನು ಕುಂದಾಪುರದಲ್ಲಿ ನಿಲುಗಡೆಗೆ ಕೇಂದ್ರ ರೇಲ್ವೆ ಸಚಿವರು ಆದೇಶಿಸಿದ್ದಾರೆ. ಮಂಗಳೂರಿನಿಂದ ಮುಂಬೈ, ಮುಂಬೈನಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ ಮಂಗಳೂರು ಮತ್ಯಗಂಧ ಎಕ್ಸಪ್ರೆಸ್ (12619/20) ಬಾರ್ಕೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಬಗ್ಗೆ ಬ್ರಹ್ಮಾವರ, ಬಾರ್ಕೂರು ಭಾಗದ ಪ್ರಯಾಣಿಕರಿಂದ ಬೇಡಿಕೆಯಿತ್ತು. ಕರಾವಳಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಂಸ್ಕೃತಿಕ ಪ್ರಸಾರ ಮತ್ತು ಉನ್ನತಿಗಾಗಿ ಇಂಗ್ಲಂಡ್ನಲ್ಲಿ ಕ್ರಿಯಾಶೀಲವಾಗಿರುವ ’ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್’ ಈಚೆಗೆ ಲಂಡನ್ನ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಿದ್ದ ಶಿವರಾತ್ರಿ ಉತ್ಸವದಲ್ಲಿ ’ಸಪ್ತತಾಂಡವ’ ನೃತ್ಯ ಪ್ರದರ್ಶನ ಸಂಪನ್ನವಾಯಿತು. ಭಾರತದ ವಿವಿಧ ರಾಜ್ಯಗಳಿಗೆ ಸೇರಿದ ನೃತ್ಯ ಕಲಾವಿದರಾದ ಶಿವಾನಿ ಭಂಡಾರ್ಕಾರ್, ಆರ್ಯ ಅರುಣ್, ಲಕ್ಷ್ಮೀ ಅವೀನ್, ರಾಗಸುಧಾ ವಿಂಜಮೂರಿ, ಮಂಜು ಸುನಿಲ್, ಡಾ. ಪ್ರೀತಾ ದಶ್ಮ್ಮಹಾಪಾತ್ರ ಭರತನಾಟ್ಯ, ಕಥಕ್, ಒಡಿಸ್ಸಿ, ಕುಚಿಪುಡಿ, ಮೋಹಿನಿಯಾಟ್ಟಮ್ ನೃತ್ಯ ಪ್ರಕಾರಗಳ ಶಿವತಾಂಡವ ಪ್ರದರ್ಶಿಸಿದರೆ, ಕರ್ನಾಟಕದ ಯೋಗೀಂದ್ರ ಮರವಂತೆ ಯಕ್ಷಗಾನ ಶೈಲಿಯ ತಾಂಡವನೃತ್ಯ ಸಾದರಪಡಿಸಿದರು. ರಾಗಸುಧಾ ವಿಂಜಮೂರಿ ’ಶಿವೋಹಮ್’ ಹೆಸರಿನಲ್ಲಿ ಈ ವಿನೂತನ ನೃತ್ಯಸಂಗಮವನ್ನು ಕಲ್ಪಿಸಿ, ನಿರ್ದೇಶಿಸಿದ್ದರು. ನೃತ್ಯಗಳಿಗೆ ಆಯಾ ಭಾಷೆಯಲ್ಲಿ ಶಿವಧ್ಯಾನ ಶ್ಲೋಕ ಮತ್ತು ಗೀತೆಗಳನ್ನು ಬಳಸಲಾಗಿತ್ತು. ಯಕ್ಷಗಾನಕ್ಕೆ ಭಾಗವತ ಪ್ರಸನ್ನ ಭಟ್ ಬಾಳ್ಕಲ್ಲು ಅವರು ಹಾಡಿದ ಯಕ್ಷಗಾನ ಶೈಲಿಯ ಶಿವಸ್ತುತಿಗೆ ರಾಘವೇಂದ್ರ ಹೆಗಡೆ ಯಲ್ಲಾಪುರ ಅವರ ಮದ್ದಲೆ ವಾದನ ಇರುವ ಧ್ವನಿ ಮುದ್ರಣದ ನೆರವು ಪಡೆಯಲಾಗಿತ್ತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಧಾರ್ಮಿಕ ಕ್ಷೇತ್ರಗಳಲ್ಲಿರುವುದು ಕೇವಲ ಎರಡು ಪಕ್ಷಗಳು. ಒಂದು ಕೃಷ್ಣಪಕ್ಷ ಅಂದರೆ ಕರ್ಮ, ಇನ್ನೊಂದು ಶುಕ್ಲಪಕ್ಷ ಅಂದರೆ ಜ್ಞಾನ. ನಮ್ಮಲ್ಲಿರುವ ರಾಗದ್ವೇಷ, ಮನೆಯ ಸಮಸ್ಯೆಗಳ ಚರ್ಚೆ ದೇವಳದ ಚೌಕಟ್ಟಿನಲ್ಲಿ ಸಲ್ಲುವುದಿಲ್ಲ. ಹೀಗಾಗಿ ಅಚ್ಚ ಭಾರತೀಯರಾಗಿ ಆತ್ಮ, ದೇಹಶುದ್ದರಾಗಿ ಯೋಗ-ಭಾಗ್ಯಕ್ಕಾಗಿ ಧಾರ್ಮಿಕ ಪರಂಪರೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ಪರಮೋನ್ನತಿಗಾಗಿ ಪ್ರಾರ್ಥಿಸಬೇಕು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು. ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೆ ಅನೇಕ ವರ್ಷಗಳಿಂದ ನಮ್ಮ ಧರ್ಮ ಸಂಸ್ಕೃತಿ ಮೇಲೆ ಆಕ್ರಮಣಗಳು ನಡೆದಿದ್ದರೂ ನಮ್ಮ ಸಂಸ್ಕೃತಿಯನ್ನು ಬೇಧಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಅಂತಹ ಅದ್ಭುತವಾದ ಶಕ್ತಿ ನಮ್ಮ ಸಂಸ್ಕೃತಿ, ಧರ್ಮಕ್ಕೆ ಇದೆ. ಮುಂದಿನ ದಿನಗಳಲ್ಲಿ ನಮ್ಮ ಈ ಪವಿತ್ರವಾದ ಸಂಸ್ಕೃತಿ, ಸಂಸ್ಕಾರಯುಕ್ತ ಜೀವನ ಮೌಲ್ಯಗಳು ಉಳಿಯಬೇಕಾದರೆ ಮನೆ ಮನಗಳು ಧರ್ಮಕ್ಷೇತ್ರವಾಗಬೇಕು. ಉತ್ತಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರಮಾ.02: ಅಡಿಕೆ ಕೊಯ್ಯಲು ತೆರಳಿದ್ದ ವ್ಯಕ್ತಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ನಾಡ ಸಮೀಪದ ಕೋಣ್ಕಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಕೋಣ್ಕಿ ಅಂಗಡಿಬೆಟ್ಟು ನಿವಾಸಿ ಭುಜಂಗ ಶೆಟ್ಟಿ (58) ಮೃತಪಟ್ಟಿದ್ದಾರೆ. ತಮ್ಮ ತೋಟದ ಅಡಿಕೆ ಕೊಯ್ಯಲು ಭುಜಂಗ ಶೆಟ್ಟಿ ಅವರು ತೆರಳಿದ್ದರು. ಅಡಿಕೆ ಕೊಯ್ಯುತ್ತಿದ್ದ ವೇಳೆ ತೋಟದಲ್ಲಿ ಹಾದುಹೊಗಿದ್ದ ವಿದ್ಯುತ್ ತಂತಿಗೆ ಕೊಕ್ಕೆ ತಾಕಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಗೊಳ್ಳಿ ಪೊಲೀಸ್ ಪಿಸ್ಐ ವಿನಯ ಕೊರ್ಲಪಾಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಪೊಲೀಸ್ ಹೆಡ್ ಕಾನ್ಸಟೇಬಲ್ ಕೇಶವ, ಚಾಲಕ ದಿನೇಶ್ ದಿನೇಶ್ ಬೈಂದೂರು, ಅಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಹಾಗೂ ಸ್ಥಳೀಯರು ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕೊಂಡೊಯ್ಯಲು ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೊಡ್ಲಾಡಿ ಮಾರ್ಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಬೆಳಕು ತಂಡ ಬಣ್ಣ ಬಳಿದು ಹೊಸ ನೋಟ ಬೀರುವಂತೆ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರಿನ ಬೆಳಕು ಸಂಸ್ಥೆಯ 25 ಜನರ ತಂಡ ಎರಡು ದಿನಗಳ ಕಾಲ ಶಾಲೆಯಲ್ಲಿ ಬಿಡುಬಿಟ್ಟು ಶಾಲಾ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಶಾಲೆಗೆ ನವರೂಪ ನೀಡಿದ್ದಾರೆ. ತಂಡದ ಕಲಾವಿದರು ಭಾರತ, ಕರ್ನಾಟಕ, ಉಡುಪಿ ಜಿಲ್ಲೆಯ ಭೂಪಟ, ವರ್ಣಮಾಲೆ, ಭೂಗೋಳ, ಮಾನವನ ದೇಹದ ಅಂಗಾಗಗಳು ಸೇರಿದಂತೆ ಹಲವು ಚಿತ್ರಕಲೆಗಳನ್ನು ಗೋಡೆಯ ಮೇಲೆ ಅಂದವಾಗಿ ಬಿಡಿಸಿದ್ದಾರೆ. ಅಂದಾಜು 1 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಸುಣ್ಣ ಬಣ್ಣ ಹಾಗೂ ಪರಿಕರಗಳನ್ನು ಬೆಳಕು ತಂಡ ಶಾಲೆಗೆ ದೇಣಿಗೆಯಾಗಿ ನೀಡಿದೆ. ಬೆಳಕು ತಂಡ 10ಕ್ಕೂ ಅಧಿಕ ಸರಕಾರಿ ಶಾಲೆ ನವೀಕರಣ, ಅನಾಥಾಶ್ರಮ ಗೋಶಾಲೆ ಇತ್ಯಾದಿ ಸಮಾಜಮುಖಿ ಕಾರ್ಯಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ತೊಡಗಿಕೊಂಡಿದೆ ಎನ್ನುತ್ತಾರೆ ಮಂಡ್ಯ ಅಪ್ಸರ ಆರ್ಟ್ಸ್ ವಿನಯ್ ಎರಡನೇ ದಿನದ ಕೊನೆಯಲ್ಲಿ ನಡೆದ ಸಭಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ದೇವಳದ ತಂತ್ರಿ ಕೊಲ್ಲೂರು ಮಂಜುನಾಥ ಅಡಿಗ ನೇತೃತ್ವದಲ್ಲಿ ಪ್ರಧಾನ ಅರ್ಚಕ ಪ್ರಕಾಶ ಉಡುಪ ಹಾಗೂ ಋತ್ವಿಜರಿಂದ ಬೆಳಿಗ್ಗೆ ೯-೦೨ಕ್ಕೆ ಸಲ್ಲುವ ಮೀನ ಲಗ್ನದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವರ ಪುನರ್ಪ್ರತಿಷ್ಠೆ, ಶ್ರೀಈಶ್ವರ ದೇವರ ಪುನರ್ಪ್ರತಿಷ್ಟೆ, ಅಷ್ಟಬಂಧ ಲೇಪನ, ಕಲಶ ಪ್ರತಿಷ್ಠೆ, ಜೀವನ್ಯಾಸಗಳು, ಪ್ರಾಣ ಪ್ರತಿಷ್ಠಾಪನೆ, ತತ್ವಹವನ, ಪೂರ್ಣ ಕಲಾಹವನ, ನಿರೀಕ್ಷಾ ಪೂಜೆ ವಿಜೃಂಭಣೆಯಿಂದ ನೆರವೇರಿತು. ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿಯ ಸದಸ್ಯರ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಗಾನಮಾಲಾ ಧ್ವನಿಸುರುಳಿಯನ್ನು ಶ್ರೀರಾಘವೇಶ್ವರ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಶ್ರೀಗಳು, ಯಾವುದೇ ಧಾರ್ಮಿಕ ಪುಣ್ಯ ಕಾರ್ಯಗಳಲ್ಲಿ ಭಾಗ್ಯ ಇದ್ದವರು ಮಾತ್ರ ಭಾಗಿಯಾಗುತ್ತಾರೆ. ಎಲ್ಲರಿಗೂ ಈ ಸದಾವಕಾಶ ಸಿಗುವುದಿಲ್ಲ. ಇದಕ್ಕೆ ನಾವು ಕೂಡ ಹೊರತಾಗಿಲ್ಲ. ನಾವು ಈ ಸನ್ನಿಧಾನಕ್ಕೆ ಭೇಟಿನೀಡುವುದು ಪೂರ್ವ ನಿಗದಿತ ಕಾರ್ಯಕ್ರಮವಾಗಿರಲಿಲ್ಲಾ. ಆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಂಗಳೂರು ನಾಗರಬಾವಿ ಸಮೀಪ ಮಾಳಗಾಳದ ಮಧು ಸ್ವೀಟ್ಸ್ & ಕಾಂಡಿಮೆಂಟ್‌‌ಗೆ ಪ್ರಕಾಶ ಎನ್ನುವ ವ್ಯಕ್ತಿ ಬಂದು ಹಣವನ್ನು ಕೇಳಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಸಂಜೆ ಕಾಂಡಿಮೆಂಟ್ಸ್ ಮಾಲೀಕರಾದ ರಘುನಾಥ ಅವರಿಗೆ ಹಾಗೂ ಬುಧವಾರ ಬೆಳಿಗ್ಗೆ ಅವರ ಸಹೋದರ ದಯಾನಂದ ಶೆಟ್ಟಿ ಅವರಿಗೆ ಬೆದರಿಕೆ ಹಾಕಿ ಅಂಗಡಿಯ ಗಾಜು ಪುಡಿಗೈದಿರುವುದು ಹಾಗೂ ಮನೆಯ ಬಳಿ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಘುನಾಥ ಶೆಟ್ಟಿ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಂಟ್ಸ್ ಸೇವಾದಳದ ಪ್ರಮುಖರು ಕರಾವಳಿಯ ಉದ್ಯಮಿಗಳು ಅಂಗಡಿ ಬಳಿ ಜಮಾಯಿಸಿ ಘಟನೆಯನ್ನು ಖಂಡಿಸಿದರು. ಬಳಿಕ ಪೊಲೀಸ್ ಠಾಣೆಗೆ ಭೇಟಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮಧ್ಯಾಹ್ನದ ವೇಳೆಗೆ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಲ್ಲದ ರೌಡಿಗಳ ದಾಂದಲೆ: ಕ್ಯಾಂಡಿಮೆಂಟ್ಸ್ ಗಾಜು ಪುಡಿಗೈದು ಬೆದರಿಕೆ – https://kundapraa.com/?p=65178 . ಬೆಂಗಳೂರಿನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಮಾ.01: ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬುಕ್ ಬ್ರಹ್ಮ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯ ಜೊತೆಗೆ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ ಪುರಸ್ಕಾರ ನೀಡಲು ನಿರ್ಧರಿಸಿದೆ. 2022ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಈ ಒಂದು ಲಕ್ಷದಲ್ಲಿ 75 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 25 ಸಾವಿರ ಪ್ರಕಾಶಕರಿಗೆ ವಿತರಿಸಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಈ ಪೈಕಿ 3 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 2 ಸಾವಿರ ರೂಪಾಯಿಗಳನ್ನು ಪ್ರಕಾಶಕರಿಗೂ ನೀಡಲಾಗುತ್ತದೆ. ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಕಥೆಗೆ 50 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ದ್ವೀತಿಯ ಸ್ಥಾನ ಪಡೆಯುವ ಕಥೆಗೆ 25 ಸಾವಿರ ರೂಪಾಯಿ, ತೃತೀಯ ಸ್ಥಾನಕ್ಕೆ 15 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ಉಳಿದಂತೆ ಐದು ಕಥೆಗಳಿಗೆ…

Read More