Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಅಧಿದೇವತೆ ಶ್ರೀ ಕುಂದೇಶ್ವರನ ಸನ್ನಿಧಿಯ ದೀಪೋತ್ಸವವು ಮಂಗಳವಾರ ಸಂಭ್ರಮದಿಂದ ಜರುಗಿತು. ಭಾನುವಾರದಿಂದ ದೇವಳದಲ್ಲಿ ಪುಣ್ಯಾಹ ವಾಚನ, ದೇವನಾಂದಿ, ದ್ವಾದಶ ನಾರಿಕೇಳ ಮಹಾ ಗಣಪತಿ ಹೋಮ, ಸಂಪೂರ್ಣ ನವಗ್ರಹ ಹೋಮ, ದುರ್ಗಾ ಹೋಮ ಸಹಿತ ಲೋಕಕಲ್ಯಾಣಾರ್ಥವಾಗಿ ಸದ್ಯೋಜಾತಾದಿ ಅಧಿವಾಸ ಯಾಗ, ಪೂರ್ಣಾಹುತಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಬಳಿಕ ಸಂಜೆ ಸಾಲಿಗ್ರಾಮ ಮಕ್ಕಳ ಮಹಿಳಾ ಕೋಟ ಇವರಿಂದ ವೀರಶ ಸೇನಾ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಕುಂದಾಪುರ ತಾಲೂಕಿನ ಭಜನಾ ಮಂಡಳಿಗಳ ಒಕ್ಕೂಟದಿಂದ ದೇವರ ನಾಮ ಸಂಕೀರ್ತನೆ ಮತ್ತು ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ಕುಂದೇಶ್ವರ ದೇವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಪುಷ್ಪಕ ರಥದಲ್ಲಿ ಶ್ರೀದೇವರ ಪುರ ಮೆರವಣಿಗೆ, ಕಟ್ಟೆ ಪೂಜೆ, ಕೆರೆದೀಪ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು. ದೇವರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಜತ ಸಂಭ್ರಮದಲ್ಲಿರುವ ಶಂಕರನಾರಾಯಣದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ‘ರೌಪ್ಯೋತ್ಸವ’ ಲಾಂಛನವನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ರೌ ರೌಪ್ಯೋತ್ಸವ ಮುನ್ನುಡಿ ಎನ್ನುವಂತೆ ‘ಪ್ರೀತಿ ಎಲ್ಲವನ್ನು ಗೆಲ್ಲುತ್ತದೆ ‘ ಎಂಬ ಸಂಸ್ಥೆಯ ಸಂದೇಶದೊಂದಿಗೆ ಪ್ರೀತಿಯ ಸಂಕೇತದ ಕೆಂಪು ಬಲೂನ್ ಗಳನ್ನು ರೌಪ್ಯದ ಲಾಂಛನದೊಂದಿಗೆ ಆಕಾಶದ ಎತ್ತರಕ್ಕೆ ಹಾರಿಸಿಬಿಡುವ ಮೂಲಕ ರೌಪ್ಯದ ಲೋಗೋವನ್ನು ಆಡಳಿತ ನಿರ್ದೇಶಕರು ಬಿಡುಗಡೆಗೊಳಿಸಿದರು. ರೌಪ್ಯದ ಲಾಂಛನ ಬಿಡುಗಡೆಗೊಳಿಸಿದ ಸಂಸ್ಥೆಯ ಆಡಳಿತ ನಿರ್ದೇಶಕರು ಮಾತನಾಡಿ, ರೌಪ್ಯ ಎನ್ನುವುದು ಬೆಳ್ಳಿಯ ಸಂಸ್ಕೃತ ಪದವಾಗಿದೆ. ಲಾಂಛನದಲ್ಲಿರುವ ಕುದುರೆಯು ಅವಿರತವಾದ ಓಟವನ್ನು ಹಾಗೂ ಅದರಲ್ಲಿನ ಸೂರ್ಯಕಿರಣಗಳು 25 ಸಂವತ್ಸರಗಳನ್ನು ಸೂಚಿಸುತ್ತವೆ ಎಂದರು. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಶಿಕ್ಷಣವನ್ನು ಅರಸಿ ತುಂಬಾ ದೂರ ಹೋಗಬೇಕಾದ ಸನ್ನಿವೇಶದಲ್ಲಿ ಶಂಕರನಾರಾಯಣದ ಸುತ್ತಮುತ್ತ ಗ್ರಾಮಗಳ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟ ಶಿಕ್ಷಣ ನೀಡಿದ್ದರ ಕುರಿತು ಸಾರ್ಥಕತೆ ಕಂಡುಕೊಂಡ ಕುರಿತು ಸಂತಸ ವ್ಯಕ್ತಪಡಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕ ಶಿಕ್ಷಕೇತರ ಬಂಧುಗಳು ಸ್ನೇಹ ಮತ್ತು ಶಾಂತಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ರಕ್ತದಾನ ಮಾನವಕುಲಕ್ಕೆ ಸಹಾಯ ಮಾಡುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಿರುವುದರಿಂದ ರಕ್ತದಾನ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು. ರಕ್ತದಾನವು ಆರೋಗ್ಯ ರಕ್ಷಣೆಯ ಪ್ರಮುಖ ಭಾಗವಾಗಿದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳ ನಿರ್ವಹಣೆಯಲ್ಲಿ ರಕ್ತದ ಅವಶ್ಯಕತೆ ಇದೆ. ಅಲ್ಲದೇ ರಕ್ತ ವರ್ಗಾವಣೆಯ ಕ್ಷೇತ್ರದಲ್ಲಿ ವಿಜ್ಞಾನವು ಹೆಚ್ಚಿನ ಪ್ರಗತಿ ಸಾಧಿಸಿದ್ದು, ಇದರಿಂದಾಗಿ ಅನೇಕ ಜೀವಗಳನ್ನು ಉಳಿಸಲಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್. ರಾಜು ಪೂಜಾರಿ ಹೇಳಿದರು. ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಭಾರತೀಯ ರೆಡ್ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದಲ್ಲಿ ಭಾನುವಾರ ಸಂಘದ ಆವರಣದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ವ್ಯವಸಾಯಕ್ಕೆ ಪೂರಕವಾಗಿ ಸೇವಾ ಮನೋಭಾವನೆಯಿಂದ ರೈತರ ಹಿತಕ್ಕಾಗಿರುವ ಸಹಕಾರಿ ಸಂಸ್ಥೆ ಗ್ರಾಮೀಣ ಭಾಗದ ಜನರಿಗೆ ರಕ್ತದಾನದ ಮಹತ್ವ, ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸುವಂತ ಕಾರ್ಯ ಮಡುತ್ತಿರುವುದು ಶ್ಲಾಘನೀಯ ಎಂದರು. ಭಾರತೀಯ ರೆಡ್ಕ್ರಾಸ್ ಸೊಸೈಟಿ ಅಧ್ಯಕ್ಷ ಜಯಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ರೌಪ್ಯೋತ್ಸವದ ಅಂಗವಾಗಿ ಆಕೃತಿ ಶೀರ್ಷಿಕೆಯಡಿಯಲ್ಲಿ 09-12-23 ಶನಿವಾರದಂದು ಪೋಷಕರಿಗಾಗಿ ರಂಗೋಲಿ, ಚಿತ್ರಕಲೆ, ಕೋಲೇಜ್ ರಚನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಉದ್ಘಾಟನೆ ಗೈದು ಮಾತನಾಡಿದ ಶ್ರೀಯುತ ರಾಘವೇಂದ್ರ ಚಾತ್ರಮಕ್ಕಿ ಆಕೃತಿ ಎಂಬ ಪರಿಕಲ್ಪನೆಯನ್ನು ತಮ್ಮ ಚಿತ್ರಕಲಾ ಭಾಷೆಯಲ್ಲಿ ವಿಶ್ಲೇಷಿಸುತ್ತಾ ಬಿಂದು, ರೇಖೆಗಳಿಂದ ಸಂಪೂರ್ಣ ಆಕೃತಿ ರಚನೆಯಾಗುತ್ತದೊ ಹಾಗೆ 1998ರಲ್ಲಿ ಬಿಂದುವಿನಿಂದ ಆರಂಭವಾದ ಶಿಕ್ಷಣ ಸಂಸ್ಥೆ ಇಂದು 25 ಸಂವತ್ಸರಗಳನ್ನು ಪೂರೈಸಿ ಒಂದು ಪರಿಪೂರ್ಣ ಆಕೃತಿಯನ್ನು ಪಡೆದುಕೊಂಡಿದೆ ಎಂಬುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು . ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ತೀರ್ಪುಗಾರರಾಗಿ ಸರಕಾರಿ ಪ್ರೌಢಶಾಲೆ ಸಿದ್ದಾಪುರದ ಚಿತ್ರಕಲಾ ಶಿಕ್ಷಕರಾದ ರಾಘವೇಂದ್ರ ಚಾತ್ರಮಕ್ಕಿ, ಸರಕಾರಿ ಪ್ರೌಢಶಾಲೆ ವಡೇರ ಹೋಬಳಿ ಯ ಚಿತ್ರಕಲಾ ಶಿಕ್ಷಕರಾದ ವೇಣುಗೋಪಾಲ್ ಶೆಟ್ಟಿ ಹಾಗೂ ಚಿತ್ತಾರ ಸಂಸ್ಥೆಯ ಸಂಚಾಲಕರಾದ ರಾಜೇಂದ್ರ ಹಳ್ಳಿಹೊಳೆ ಆಗಮಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳು ಕಲಾ ಕುಂಚದ ಮೂಲಕ ದೀಪವನ್ನು ಪ್ರಜ್ವಲಿಸುವಂತೆ ಮಾಡಿ ವಿನೂತನ ಮಾದರಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಸ್ಯಾಂಡಲ್‌ವುಡ್ ನಲ್ಲಿ ಕರಾವಳಿ ಭಾಗದ ಸಂಸ್ಕೃತಿ ಸಾರುವ ಮತ್ತೊಂದು ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ‘ಕರಾವಳಿ’ ಹೆಸರಿನಲ್ಲೇ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಸದ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ವಿಶೇಷ ಎಂದರೆ ಕರಾವಳಿ ಭಾಗದ ಬಗ್ಗೆಯೇ ಇರುವ ಈ ಸಿನಿಮಾದ ಟೀಸರ್ ಅನ್ನು ಮಂಗಳೂರಿನಲ್ಲಿ ಅದ್ದೂರಿಯಾಗಿ ಲಾಂಚ್ ಮಾಡಲಾಯಿತು. ಅಂದಹಾಗೆ ‘ಕರಾವಳಿ’ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ. ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಜಗತ್ತಿಗೆ ಎಂಟ್ರಿ ಕೊಡುವ ಎರಡು ಹೊಸ ಜೀವಗಳನ್ನು ನೋಡಬಹುದು. ತಾಯಿ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯದ ಜೊತೆಗೆಯೇ ಎಮ್ಮೆ ಕೂಡ ತನ್ನ ಮಗುವಿಗೆ ಜನ್ಮ ನೀಡುತ್ತಿದೆ. ಈ ಟೀಸರ್ ನೋಡ್ತಿದ್ರೆ ಮನುಷ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಚಲನಶೀಲ ಸಮಾಜದ ಮುಖ್ಯ ಜೀವಾಳ ಉಪದ್ರವಿತನ. ಲೇಖಕ, ಚಿತ್ರಕಾರ ಎಲ್ಲಿಯವರೆಗೆ ಉಪ್ರದವಿಯಾಗಿರುತ್ತಾನೋ ಅಲ್ಲಿಯವರೆಗೆ ಸಮಾಜ ಚೆನ್ನಾಗಿರುತ್ತೆ. ನಿರುಪದ್ರವಿಯಾಗಿ, ವ್ಯವಸ್ಥೆ ಜತೆ ರಾಜಿ ಮಾಡಿಕೊಂಡಾಗ ಸಮಾಜ ಅಸ್ತವ್ಯಸ್ತವಾಗಿರುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥೆಗಾರ, ಕವಿ, ಲೇಖಕ ಡಾ. ಕುಂ. ವೀರಭದ್ರಪ್ಪ (ಕುಂವೀ) ಹೇಳಿದರು. ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ಬಳಗ ನೇತೃತ್ವದಲ್ಲಿ 4 ದಿನಗಳ ಕಾಲ ಆಯೋಜನೆಗೊಂಡ 10ನೇ ವರ್ಷದ ಕಾರ್ಟೂನ್ ಹಬ್ಬವನ್ನು ಅವರು ಉದ್ಘಾಟಿಸಿ, ಮಾತನಾಡಿ, ಮನಸ್ಸನ್ನು ಕಲಕುವಂತಹ, ಹೊಸ – ಹೊಸ ಆಲೋಚನಾ ಕ್ರಮಗಳನ್ನು ಸೃಷ್ಟಿಸುವ, ಚಿಂತನಾ ಕ್ರಮಗಳನ್ನು ಬದಲಿಸುವ ಶಕ್ತಿ ವ್ಯಂಗ್ಯಚಿತ್ರಗಳಿಗಿದೆ. ಮಕ್ಕಳಲ್ಲಿ ಇಂತಹ ಕಲೆಯನ್ನು ಬೆಳೆಸಬೇಕು. ಪ್ರತಿ ಶಾಲೆಗಳಲ್ಲಿ ಚಿತ್ರಕಲಾ, ಸಂಗೀತ, ನಾಟಕ ಶಿಕ್ಷಕರಿರಬೇಕು. ಆಟದ ಮೈದಾನ ಇರಬೇಕು. ಆಗ ಮಕ್ಕಳಲ್ಲಿ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ಸಾಧ್ಯ. ಆ ಕೆಲಸವನ್ನು ಸರಕಾರ ಮಾಡಬೇಕು. ಇಲ್ಲದಿದ್ದರೆ ಭಾರತೀಯ ರೂಪಾಯಿ ಎಣಿಸುವ ಬದಲು, ಡಾಲರ್, ಪೌಂಡ್ಗಳನ್ನು ಎಣಿಸುವ ಪ್ರವೃತ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿರಿಯ ರಂಗಭೂಮಿ ಕಲಾವಿದ, ರೂಪಕಲಾ ಕುಂದಾಪುರ ಸಂಸ್ಥೆಯ ಮೂರುಮುತ್ತು ಖ್ಯಾತಿಯ ನಟ ಅಶೋಕ್ ಶ್ಯಾನುಭಾಗ್ (54ವರ್ಷ) ಅಲ್ಪಕಾಲದ ಅಸೌಖ್ಯದಿಂದಾಗಿ ನಿಧನರಾಗಿದ್ದಾರೆ. ಕುಂದಾಪುರದ ಪಟ್ಟಣ್ ಶೇಟ್, ಹುಲಿಮನೆ ದಿ. ನಾರಾಯಣ ಶ್ಯಾನುಭೋಗ್ ಹಾಗೂ ದಿ. ಕಸ್ತೂರಿ ಶ್ಯಾನುಭಾಗ್ ಅವರ ಪುತ್ರ ಅಶೋಕ್ ಶ್ಯಾನುಭೋಗ್ ಅವರು 1979ರಲ್ಲಿ ರೂಪಕಲಾ ಸಂಸ್ಥೆಯಲ್ಲಿ ಬಾಲ ಕಲಾವಿದರಾಗಿ ಸತ್ಯ ಹರಿಶ್ಚಂದ್ರ, ಟಿಪ್ಪು ಸುಲ್ತಾನ್ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದವರು. ಓದಿನ ಬಳಿಕ ನಿರಂತರವಾಗಿ ರಂಗಭೂಮಿ, ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಸ್ವ ಉದ್ಯೋಗ ಮಾಡಿಕೊಂಡಿದ್ದ ಅಶೋಕ್ ಅವರು ನಾಟಕವನ್ನೇ ಬದುಕಿನ ಭಾಗವಾಗಿಸಿಕೊಂಡಿದ್ದರು. ರೂಪಕಲಾ ಸಂಸ್ಥೆಯ ದಿ. ಬಾಲಕೃಷ್ಣ ಪೈ (ಕುಳ್ಳಪ್ಪು) ಅವರ ನೆಚ್ಚಿನ ಶಿಷ್ಯರಾಗಿದ್ದ ಅವರು ಕುಳ್ಳಪ್ಪು ಅವರ 53 ನಾಟಕಗಳಲ್ಲಿ ಹಾಗೂ ಸತೀಶ್ ಪೈ ಅವರ 11 ನಾಟಕ ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೂಪಕಲಾ ಸಂಸ್ಥೆಯ ನಾಟಕಗಳು ಕನ್ನಡ ಮತ್ತು ಕೊಂಕಣಿಯಲ್ಲಿ ಏಳು ಸಾವಿರಕ್ಕೂ ಮಿಕ್ಕಿ ಪ್ರದಶ೯ನ ಕಂಡಿದ್ದವು. ಮೃತರು ಪತ್ನಿ ಉಪನ್ಯಾಸಕಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಕ್ಷರ ಪಟ್ವಾಲ್ ಇವರಿಗೆ ಸಾಹಿತ್ಯ, ರಂಗಭೂಮಿ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೋಟ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ವತಿಯಿಂದ ನೀಡಲಾಗುವ ಕಾರಂತ ಬಾಲ ಪುರಸ್ಕಾರ ದೊರೆತಿದೆ. ಈ ಮೊದಲು ಕಾಸರಗೋಡುವಿನ ಕನ್ನಡ ಭವನ ಮತ್ತು ಗ್ರಂಥಾಲಯದಿಂದ ನೀಡಲಾಗುವ ಅಂತರಾಜ್ಯ ಯುವ ಪ್ರತಿಭಾ ಪ್ರಶಸ್ತಿ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಭಾಗಲಕೋಟೆಯ ಘಟಕದಿಂದ ರಾಜ್ಯ ಮಟ್ಟದ ಮಕ್ಕಳ ಪ್ರತಿಭಾ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಅಕ್ಷರಾ ಪಟವಾಲ್ ಪಡೆದುಕೊಂಡಿದ್ದಾರೆ. ಅಕ್ಷರ ಪಟವಾಲ್ ಬೈಂದೂರು ಪಡುವರಿಯ ಕೆಎಸ್ಆರ್ಟಿಸಿ ನೌಕರ ದಿನಕರ ಪಟವಾಲ್ ಮತ್ತು ಶಿಕ್ಷಕಿ ಸೀತಾ ಪಿ ಇವರ ಪುತ್ರಿ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಹಿತಿ, ನಾಟಕಗಾರ, ಯಕ್ಷಗಾನ ಪ್ರಸಂಗಕರ್ತ, ಕವಿ, ವಾಚಕಾಭಿನಯ, ಪರಿಣತ, ವಾಗ್ಮಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರನ್ನು ಕುಂದಪ್ರಭ ಸಂಸ್ಥೆಯ ಕೋ.ಮ.ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ 07-01-2024ರಂದು ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತ, ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿ ಇದಾಗಿದೆ. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಬಿಎಸ್ಎನ್ಎಲ್ ಉದ್ಯೋಗಿ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಯಕ್ಷಗಾನ, ನಾಟಕ, ಸಾಹಿತ್ಯ, ಸಂಗೀತ, ನೃತ್ಯದಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ. ಡಾ| ಎಸ್. ಎಲ್. ಭೈರಪ್ಪನವರ ಮಂದ್ರ ಕಾದಂಬರಿ ನಾಟಕಕ್ಕೆ ರೂಪಾಂತರಗೊಳಿಸಿದವರು. ಈ ನಾಟಕ ಬಹಳ ಪ್ರಸಿದ್ಧವಾಯಿತು. ಹಲವಾರು ಶ್ರೇಷ್ಠ ಕೃತಿಗಳನ್ನು ಕನ್ನಡ ರೂಪ, ನಾಟಕ ರೂಪಕ್ಕಿಳಿಸಿದವರು. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗ ಪ್ರಶಸ್ತಿ, ನೂಪುರ ಭ್ರಮರಿ ಸಂಸ್ಥೆಯ ವಿಮರ್ಶಾ ವಾಙ್ಮಯಿ ಪ್ರಶಸ್ತಿ, ಬೆಂಗಳೂರು ಗಾಯನ ಸಮಾಜದ ಶ್ರೀ ಕಲಾ ಜ್ಯೋತಿ ಪ್ರಶಸ್ತಿ ಲಭಿಸಿದೆ. ಕನ್ನಡ…

Read More