ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.27: ತಾಲೂಕಿನ ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂವತ್ತುಮುಡಿ ಬಳಿಯ ಹೆದ್ದಾರಿಯಲ್ಲಿ ರಿಕ್ಷಾ ಹಾಗೂ ಪಿಕಪ್ ನಡುವಿನ ಅಪಘಾತದಲ್ಲಿ ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹೆಮಾಡಿ ಗ್ರಾ.ಪಂ. ಸದಸ್ಯೆ ಕುಸುಮಾ (48) ಸಾವನ್ನಪ್ಪಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ಸೊಂಟ, ಬೆನ್ನಿಗೆ, ಮೈಕೈಗೆ ಗಂಭೀರ ಗಾಯಗೊಂಡಿದ್ದ ಕುಸುಮಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಫೆ. 26ರಂದು ಸಾವನ್ನಪ್ಪಿದ್ದಾರೆ. ಅವರು ಹೆಮ್ಮಾಡಿ ಗ್ರಾ.ಪಂ.ನ ಎರಡನೇ ವಾರ್ಡ್ ಆಗಿರುವ ಸಂತೋಷ್ನಗರ ಭಾಗದ ಸದಸ್ಯೆಯಾಗಿದ್ದರು. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಫೆ. 25ರ ಸಂಜೆ 4 ಗಂಟೆಯ ಸುಮಾರಿಗೆ ತಾಸಿ ಕಡೆಯಿಂದ ಕುಂದಾಪುರ ಹೆದ್ದಾರಿಯ ಕನ್ನಡಕುದು ಬಳಿ ಆಟೋ ರಿಕ್ಷಾಗೆ ತಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ದರ್ಶನ್ ಚಲಾಯಿಸುತ್ತಿದ್ದ ಪಿಕಪ್ ವಾಹನ ಢಿಕ್ಕಿಯಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ನಾರಾಯಣ, ಪ್ರಯಾಣಿಸುತ್ತಿದ್ದ ಕುಸುಮಾ ಗಂಭೀರವಾಗಿ ಗಾಯಗೊಂಡಿದ್ದರು. ಇವರೊಂದಿಗಿದ್ದ ಪತಿ ಚಂದ್ರಶೇಖರ ಮೆಂಡನ್, ಮಕ್ಕಳಾದ ಚಿರಾಗ್ (17) ಹಾಗೂ ಜಾಹ್ನವಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಫೆ.27: ಇಲ್ಲಿನ ಹೊಸ್ ಬಸ್ ನಿಲ್ದಾಣದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಳವಡಿಸಲು ವಿವಿಧ ಸಂಘ ಸಂಸ್ಥೆಗಳಿಂದ ಒಟ್ಟು ನಾಲ್ಕು ಬ್ಯಾರಿಕೇಡ್’ಗಳನ್ನು ಪೊಲೀಸ್ ಇಲಾಖೆಗೆ ಕೊಡುಗೆಯಾಗಿ ನೀಡಲಾಯಿತು. ತಾಲೂಕಿನ ಬೈಂದೂರು ಅರ್ಬನ್ ಸೌಹಾರ್ದ ಸಹಕಾರಿ ಸಂಘ ನಿ., ಶ್ರೀ ರಾಮ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಜೆಸಿಐ ಬೈಂದೂರು ಸಿಟಿ ಹಾಗೂ ಇಲೆಕ್ಟ್ರಿಕ್ ಕಂಟ್ರಾಕ್ಟರ್ ಸಂಘ ಬೈಂದೂರು ಪ್ರಾಯೋಜಕತ್ವದಲ್ಲಿ 4 ಬ್ಯಾರಿಕೇಡ್ ಗಳನ್ನು ಬೈಂದೂರು ಠಾಣಾಧಿಕಾರಿ ನಿರಂಜನ್ ಗೌಡ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಎಸ್. ರಾಜು ಪೂಜಾರಿ, ಮಣಿಕಂಠ ಎಸ್. ದೇವಾಡಿಗ, ಮಂಜು ಶೇರುಗಾರ್ , ನರೇಂದ್ರ ಶೇಟ್ , ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನವೀನ್ ಕುಮಾರ್, ಸವೀತಾ ದಿನೇಶ್, ಗಣೇಶ್ ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಫೆ.27: ತಾಲೂಕಿನ ಪಡುವರಿಯ ನಿವೃತ್ತ ಶಿಕ್ಷಕ, ಅಕ್ಕಿಯಂಗಡಿ ಮನೆ ಶ್ರೀನಿವಾಸ ಮಾಸ್ಟರ್ (79ವ) ಸೋಮವಾರ ಬೆಳಿಗ್ಗೆ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಚಲ್ಲ ಮಾಸ್ಟರ್ ಎಂದೇ ಪ್ರಸಿದ್ಧರಾಗಿದ್ದ ಶ್ರೀನಿವಾಸ್ ಮಾಸ್ಟರ್ ಅವರು ಬಾಡ ಸರಕಾರಿ ಪ್ರಾಥಮಿಕ ಶಾಲೆ, ಶಿರೂರು ಪ್ರೌಢಶಾಲೆ ಹಾಗೂ ನಿವೃತ್ತಿ ಬಳಿಕ ಬೈಂದೂರು ಮೊರಾರ್ಜಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕವಾಗಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಶ್ರೀನಿವಾಸ ಮಾಸ್ಟರ್ ಅವರು ಒಂದು ಅವಧಿಗೆ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದರು. ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟಿನ ಟ್ರಸ್ಟೀಯಾಗಿ ಸೇವೆ ಸಲ್ಲಿಸಿದ್ದರು. ಶ್ರೀನಿವಾಸ್ ಮಾಸ್ಟರ್ ಅವರು ಪತ್ನಿ ಹಾಗೂ ಮೂವರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಬಂಧುಗಳು, ವಿಧ್ಯಾರ್ಥಿಗಳು ಮಿಡಿದಿದ್ದಾರೆ. ಅವರ ಅಂತಿಮ ವಿಧಿ ವಿಧಾನ ಮಾರ್ಚ್ 1ರ ಬೆಳಿಗ್ಗೆ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ 27: ಕೋಟದ ಮನಸ್ಮಿತ ಫೌಂಡೇಶನ್, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಯುವ ಮೆರಿಡಿಯನ್ ಸಹಭಾಗಿತ್ವದಲ್ಲಿ ನೀಡಲ್ಪಡುವ ಡಾ. ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿ 2023 ಹಾಗೂ ಮನಸ್ಮಿತ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ ಮಾ.24ಕ್ಕೆ ಯುವ ಮೆರಿಡಿಯನ್ ಒಪೆರಾ ಪಾರ್ಕಲ್ಲಿ ಜರಗಲಿದೆ. 2023ನೇ ಸಾಲಿನ ಎಸ್.ಜಾನಕಿ ರಾಷ್ಟ್ರೀಯ ಪ್ರಶಸ್ತಿಗೆ ಭಾರತದ ಖ್ಯಾತ ಗಾಯಕಿ ಪದ್ಮಭೂಷಣ ಕೆ.ಎಸ್.ಚಿತ್ರಾ ಹಾಗೂ ಮನಸ್ಮಿತ ಪುರಸ್ಕಾರಕ್ಕೆ ವೈದ್ಯಕೀಯಲೋಕದ ಸಂತ, ಸಾಹಿತಿ ಡಾ.ಸಿ.ಆರ್. ಚಂದ್ರಶೇಖರ್ ಆಯ್ಕೆಗೊಳಿಸಲಾಗಿದೆ. ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರವು ಒಂದು ಲಕ್ಷ ರೂ ನಗದು ಹಾಗೂ ಪ್ರಶಸ್ತಿಯನ್ನು ಒಳಗೊಂಡಿರುತ್ತದೆ. ಹಾಗೂ ಮನಸ್ಮಿತ ರಾಷ್ಟ್ರೀಯ ಪುರಸ್ಕಾರವು ಇಪ್ಪತ್ತೈದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿಯನ್ನು ಒಳಗೊಂಡಿರುತ್ತದೆ. ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಸತೀಶ್ ಪೂಜಾರಿ ನೇತ್ರತ್ವದಲ್ಲಿ ಕರ್ನಾಟಕದ ಶ್ರೇಷ್ಟ ಗಾಯಕ, ಗಾಯಕಿಯರು ಹಾಗೂ ವಾದ್ಯ ವೃಂದದವರಿಂದ ಅದ್ದೂರಿ ಸಂಗೀತ ಸಂಜೆ ಮಾ.24ಕ್ಕೆ ಯುವ ಮೆರಿಡಿಯನ್ ಒಪೆರಾ ಪಾರ್ಕಲ್ಲಿ ಜರಗಲಿದೆ. ಎಲ್ಲರಿಗೂ ಉಚಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇನ್ನರ್ ವೀಲ್ ಕ್ಲಬ್ ಬೈಂದೂರು ಇವರಿಂದ ರತ್ತುಬಾಯಿ ಜನತಾ ಪ್ರೌಢಶಾಲೆಗೆ ಸ್ಯಾನಿಟರಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು ಜಿಲ್ಲಾಧ್ಯಕ್ಷೆ ಕವಿತಾ ಸ್ಯಾನಿಟರಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಅವರು ಹಸ್ತಾಂತರಿಸಿದರು ದಾನಿಗಳಾದ ಶಾರದ ನಾರಾಯಣ ಮತ್ತು ಜ್ಯೋತಿ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಸ್ಥಾಪಕ ಅಧ್ಯಕ್ಷೆ ಚಂದ್ರಲೇಖ ಶೆಟ್ಟಿ ಹಾಗೂ ಇನ್ನರ್ ವೀಲ್ ಅಧ್ಯಕ್ಷೆ ಭಾನುಮತಿ ಬಿ.ಕೆ ಮತ್ತು ಕಾರ್ಯದರ್ಶಿ ಪಿಂಕಿ ಮೋಬಿ ಉಪಸ್ಥಿತರಿದ್ದರು ಶಾಲಾ ಮುಖ್ಯೋಪಾಧ್ಯಾಯ ಶ್ರೀಆನಂದ ಮದ್ದೋಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಚೈತ್ರಾ ನಿರೂಪಣೆ ಮಾಡಿದರು. ಪ್ರಕಾಶ್ ಮಾಕೋಡಿ ವಂದಿಸಿದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ’ಜಾಗತಿಕವಾಗಿ ಸೌಂದರ್ಯ ಪ್ರಜ್ಞೆ ಹೆಚ್ಚಿದ್ದು, ವಿನ್ಯಾಸ ಕ್ಷೇತ್ರದಲ್ಲೂ ಅವಕಾಶಗಳು ವಿಪುಲವಾಗಿವೆ. ವಿನ್ಯಾಸದ ಸೃಜನಶೀಲತೆ ಹಾಗೂ ತಾಂತ್ರಿಕತೆಯನ್ನು ಕರಗತ ಮಾಡಿಕೊಂಡರೆ ಅವಕಾಶಗಳು ಹೇರಳವಾಗಿವೆ’ ಎಂದು ಹಿರಿಯ ಗ್ರಾಫಿಕ್ ವಿನ್ಯಾಸಗಾರ ತಿಮ್ಮೇಶ್ ಮಲ್ಶೆಟ್ಟಿ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ’ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆ ಗುರುವಾರ ಹಮ್ಮಿಕೊಂಡಿದ್ದ ಪುಟ ವಿನ್ಯಾಸ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ’ನಡೆಯುವವರು ಎಡವುತ್ತಾರೆಯೇ ಹೊರತು ಕುಳಿತವರಲ್ಲ. ಹೀಗಾಗಿ ಏಳುಬೀಳುಗಳ ಬಗ್ಗೆ ಚಿಂತಿಸಬಾರದು. ತಪ್ಪಿನಿಂದಲೇ ನಾವು ತಿಳಿದುಕೊಳ್ಳಲು ಸಾಧ್ಯ. ಹೊಸತನವನ್ನು ಬೆಳೆಸಿಕೊಳ್ಳಲು ಸಾಧ್ಯ ಜೀವನವೇ ಒಂದು ಪ್ರಯೋಗಾಲಯ. ಪ್ರತಿನಿತ್ಯ ಪ್ರಯತ್ನಿಸಿ’ ಎಂದರು. ’ನಮ್ಮ ನಿತ್ಯದ ನಡವಳಿಕೆಯ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಯಾವುದೇ ಕೃತಿಯನ್ನು ನೋಡಲು ಸುಲಭ. ಆದರೆ, ಆ ಕೆಲಸದ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ. ಪರಿಶ್ರಮದಿಂದ ಪರಿಪೂರ್ಣತೆ ಹೊಂದಲು ಸಾಧ್ಯ’ ಎಂದ ಅವರು, ’ಇನ್ಡಿಸೈನ್, ಇಲ್ಲಸ್ಟ್ರೇಟರ್, ಫೋಟೊಶಾಪ್ ಸೇರಿದಂತೆ ವಿನ್ಯಾಸದ ವಿವಿಧ ಸಾಫ್ಟ್ವೇರಗಳ ಬಳಕೆಯ ಪ್ರಾತ್ಯಕ್ಷಿಕೆ ನೀಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಗಲಿದ ಹಿಂದೂಸ್ಥಾನಿ ಗಾಯಕ, ಸಂಗೀತ ಗುರು, ವಿದ್ವಾನ್ ಅನಂತ ಎಂ. ಹೆಬ್ಬಾರ್ ಅವರಿಗೆ ನಾವುಂದ ಮಸ್ಕಿಯ ಶ್ರೀ ದುರ್ಗಾಪರಮೇಶ್ವರಿ ಕಲಾನಿಕೇತನದಲ್ಲಿ ಈಚೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಗೀತ ಗುರು ವಿದ್ವಾನ್ ಶರತ್ ನಾಡ, ಅನಂತ ಹೆಬ್ಬಾರ್ ಖಂಬದಕೋಣೆಯನ್ನು ಕೇಂದ್ರವಾಗಿರಿಸಿಕೊಂಡು ಸಂಗೀತ ಕಲಾ ತರಗತಿಗಳನ್ನು ನಡೆಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಾಸ್ತ್ರೀಯ ಸಂಗೀತವನ್ನು ಪರಿಚಯಿಸಿ, ಅದನ್ನು ಬೆಳೆಸಲು ಶ್ರಮಿಸುತ್ತಿದ್ದರು. ಅವರು ಹಲವು ಶಿಷ್ಯರನ್ನು ರೂಪಿಸಿದ್ದು, ಅವರ ಅಗಲುವಿಕೆಯಿಂದ ಇಲ್ಲಿನ ಸಂಗೀತ ಕ್ಷೇತ್ರ ಬಡವಾಗಿದೆ. ವಿದ್ಯಾರ್ಥಿಗಳ ನೆಚ್ಚಿನ ಗುರು ಇಲ್ಲವಾಗಿದ್ದಾರೆ ಎಂದರು. ಸಮಾಜ ಸೇವಕ ಮಂಜುನಾಥ ಸಾಲಿಯಾನ್, ಸಂಗೀತ ಪ್ರೇಮಿ ನಾಗರಾಜ ದೇವಳಿ, ವಿದ್ಯಾರ್ಥಿಗಳು ಮತ್ತು ಪೋಷಕರು ಅಗಲಿದ ಹೆಬ್ಬಾರರಿಗೆ ಸದ್ಗತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದದ ಸುಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವವು ಇದೇ ಫೆಬ್ರವರಿ 16 ಹಾಗೂ ಫೆಬ್ರವರಿ 27 ರಿಂದ ಮಾರ್ಚ್ 8ನೇ ತಾರೀಖಿನವರೆಗೂ ನಡೆಯಲಿದೆ. ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವ ಸಮಿತಿಯ ಅಧ್ಯಕ್ಚತೆಯನ್ನು ಬಿ.ಎಸ್. ಸುರೇಶ್ ಶೆಟ್ಟಿ ವಹಿಸಿದ್ದು ಈಗಾಗಲೇ ಹಲವು ಸಮಿತಿಗಳ ರಚಿಸಿ ಪೂರ್ವಸಿದ್ಧತಾ ಕಾರ್ಯ ಆರಂಭಿಸಲಾಗಿದೆ. ಈ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀಮನ್ಮಹಾ ರಥೋತ್ಸವದ ಶುಭಕಾರ್ಯಕ್ಕಾಗಿ ಉದ್ಯಮಿ ಯು.ಬಿ. ಶೆಟ್ಟಿಯವರು ಐದು ಲಕ್ಷದ ಐದು ರೂಪಾಯಿಗಳನ್ನು ಸೇವೆಯ ರೂಪದಲ್ಲಿ ದೇಗುಲಕ್ಕೆ ನೀಡಿದ್ದು, ಇನ್ನೂ ಹೆಚ್ಚಿನ ದಾನಿಗಳು ತನು ಮನ ಧನ ಸಹಿತ ದೇವಿಯ ಸೇವೆಗೆ ಮುಂದಾಗಿದ್ದಾರೆ ಉತ್ಸವಗಳ ವಿವರ:ಫೆಬ್ರವರಿ 16ರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆ ಮೂಲಕ ಶುಭ ಕಾರ್ಯದ ಶುಭಾರಂಭ ಆಗಲಿದೆ. ನಂತರದ ಪುಣ್ಯಾಹ, 12 ಕಾಯಿ ಗಣಪತಿ ಹೋಮ, ದುರ್ಗಾ ಹವನ, ಪ್ರಾಯಶ್ಚಿತ್ತ ಕಲಾವೃದ್ಧಿ ಹೋಮ, ಕಲಶಾಭಿಷೇಕ, ವಿಶೇಷ ಪಂಚಾಮೃತ,…
ಕುಂದಾಪ್ರ ಡಾಟ್ ಕಾಂ ವರದಿ.ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಮಂಜುನಾಥ ಭಂಡಾರಿ ಅವರು ದಿನಾಂಕ 14-02-2023ರಂದು ಕುಂದಾಪುರ ಕನ್ನಡ / ಕುಂದಗನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಹಕ್ಕೊತ್ತಾಯನವನ್ನು ಮಂಡಿಸಿದ್ದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸುನಿಲ್ ಕುಮಾರ್ ಅವರು ನೀಡಿರುವ ಉತ್ತರ ವಿಷಾದನೀಯ ಭಾಷಾವಿಭಿನ್ನತೆಯನ್ನು ಹೊಂದಿರುವ ಕನ್ನಡಕ್ಕೆ ಪ್ರತ್ಯೇಕ ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪಿಸುವುದು ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಸಂಶೋಧಕರಾದ ಡಾ. ಗಾಯತ್ರೀ ನಾವಡ ಹಾಗೂ ಪ್ರೋ. ಎ.ವಿ. ನಾವಡ ಅವರು ಕುಂದಗನ್ನಡ ಅಕಾಡೆಮಿ ಸ್ಥಾಪನೆಯಾಗುವುದು ಭಾಷಾ ಬೆಳವಣಿಗೆ ದೃಷ್ಠಿಯಿಂದ ಸೂಕ್ತವಾದುದು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಅದರ ಪೂರ್ಣಪಾಠ ಹೀಗಿದೆ. ಕನ್ನಡ ನಾಡು ಕೇವಲ ಒಂದು ಕನ್ನಡ ಭಾಷಾ ನೆಲವಲ್ಲ. ಇದು ಬಹುರೂಪಿ ಕನ್ನಡಗಳ ನೆಲೆ. ಕವಿರಾಜಮಾರ್ಗಕಾರ ಹೇಳಿದಂತೆ ಕನ್ನಡಂಗಳ್ ತಾಣ. ಇದು ಕನ್ನಡ ಸಂಸ್ಕೃತಿಯ ಅಸ್ಮಿತೆ ಮತ್ತು ಸಮೃದ್ಧತೆ. ಭಾಷಾ ಬಹುರೂಪತೆಯೇ ಕನ್ನಡದ ಅಂತಃ ಚೈತನ್ಯ, ಸಮೃದ್ಧತೆ. ಭಾಷಾ…
ಕುಂದಾಪುರದಲ್ಲಿ ಎಆರ್ಟಿಓ ಕಛೇರಿ ಮಾಡಿ. ವಾಹನ ನೊಂದಣಿ, ಟೆಸ್ಟ್ ನೀಡಲು ೭೦ಕೀ.ಮೀ ಸಂಚರಿಸಬೇಕಾದ ಅನಿವಾರ್ಯತೆ ಇದೆ – ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ
