Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಸೆ.25: ಭಂಡಾರ್ಕಾರ್ಸ್ ಕಾಲೇಜು ನೇತೃತ್ವದಲ್ಲಿ ಕುಂದಾಪುರ ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಅಕ್ಟೋಬರ್ 2ರ , ಕಳೆದ ವರ್ಷದಂತೆ ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಹೇಳಿದರು. ಅವರು ಕಾಲೇಜಿನ ಎ.ವಿ. ಹಾಲಿನಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 60ನೇ ವರ್ಷದ ಸಂಭ್ರಮದಲ್ಲಿರುವ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಸುಮಾರು 3000 ವಿದ್ಯಾರ್ಥಿಗಳಿಗೆ ಈ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡಿದೆ. ಮಹಾತ್ಮ ಗಾಂಧಿಯವರ ಜನ್ಮದಿನಾಚರಣೆ ದಿನದಂದು ಬೃಹತ್ ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ ಎಂಬ ಜನ ಜಾಗೃತಿ ಕಾರ್ಯಕ್ರಮವನ್ನು ಕುಂದಾಪುರದ 23 ವಾರ್ಡುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಜನರಲ್ಲಿ ಸ್ವಚ್ಛತೆ ಕುರಿತುಅರಿವು ಮೂಡಿಸಲು ಕುಂದಾಪುರ ಪುರಸಭಾ ವ್ಯಾಪ್ತಿಯ ಸುಮಾರು 15,000ಕ್ಕೂ ಮಿಕ್ಕಿ ಮನೆಗಳನ್ನು ಸಂಪರ್ಕ ಮಾಡಲಾಗುತ್ತದೆ ಎಂದರು. ಕುಂದಾಪುರ ಪುರಸಭೆ ಪುರ ಸ್ವಚ್ಛತೆ ಕುರಿತು ಉತ್ತಮವಾದ ಸೇವೆ ಸಲ್ಲಿಸುತ್ತಿದ್ದು, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ತಗ್ಗರ್ಸೆ ಮೊಗರವೀರ ಗರಡಿ ಸಾರ್ವಜನಿಕ ಶ್ರೀ ಶಾರದೊತ್ಸವ ಸಮಿತಿಯ24 ವರ್ಷದ ಕಾರ್ಯಕಾರಿ ಸಮಿತಿ ರಚನೆಯು ಭಾನುವಾರ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಸಸಿಹಿತ್ಲು ತಗ್ಗರ್ಸೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಗಾಣಿಗ ಹೆಗ್ಗೇರಿ ತಗ್ಗರ್ಸೆ ಆಯ್ಕೆಯಾಗಿದ್ದಾರೆ ಎಂದು ಸಮಿತಿ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪಂಜಾಬ್ ರಾಜ್ಯದ ಲುಧಿಯಾನದ ಶ್ರೀ ಬೈನಿ ಸಾಹಿಬ್ ಗುರುದ್ವಾರ ನಡೆಸುವ ರಾಷ್ಟ್ರೀಯ ಮಟ್ಟದ ಹಿಂದುಸ್ಥಾನಿ ಖಯಾಲ್ ಗಾಯಕಿ ಸಂಗೀತ ಸ್ಪರ್ಧೆಯ ಕಿರಿಯರ ವಿಭಾಗದ ಆನ್ಲೈನ್ ಪ್ರಥಮ ಸುತ್ತಿನಲ್ಲಿ ಯಶಸ್ವಿಯಾದ ಕೇದಾರ್ ಮರವಂತೆ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಈ ಸುತ್ತಿನ ಸ್ಪರ್ಧೆಯು ನವದೆಹಲಿ, ಕೊಲ್ಕತ್ತಾ, ಪುಣೆಯಲ್ಲಿ ನಡೆಯಲಿದ್ದು ಕೇದಾರ್, ನವಂಬರ್ 4 ಮತ್ತು 5ರಂದು ಪುಣೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಆಮಂತ್ರಿತರಾಗಿದ್ದಾರೆ. ಕೇದಾರ್ ಮರವಂತೆ ಗುರು ಬಿ. ರಾಘವೇಂದ್ರ ಉಪಾಧ್ಯಾಯರ ಬಳಿ ಆರಂಭಿಕ ಸಂಗೀತ ಕಲಿಕೆ ನಡೆಸಿದ್ದು, ಆ ಬಳಿಕ ೮ ವರ್ಷಗಳಿಂದ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ ಅವರಿಂದ ಸಂಗೀತ ಅಭ್ಯಾಸ ನಡೆಸುತ್ತಿದ್ದಾರೆ. ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಕೇದಾರ್, ಸಂಗೀತಾಸಕ್ತ ದಂಪತಿ ಜತೀಂದ್ರ ಮರವಂತೆ-ಡಾ. ರೂಪಶ್ರೀ ದಂಪತಿಯ ಪುತ್ರ. ► ಅಂತರ್ ಕಾಲೇಜು ಭಕ್ತಿಗೀತೆ ಸ್ಪರ್ಧೆ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಕೇದಾರ್ ಮರವಂತೆಗೆ ದ್ವಿತೀಯ ಸ್ಥಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದಟ್ಟ ಅಡವಿಯೊಳಗೆ ನಾಪತ್ತೆಯಾಗಿದ್ದ ಯುವಕ 8 ದಿನಗಳ ನಂತರ ಪ್ರತ್ಯಕ್ಷವಾದ ಘಟನೆ ಶನಿವಾರ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನಲ್ಲಿ ನಡೆದಿದೆ. ಇರ್ಕಿಗದ್ದೆ ಶೀನ ನಾಯ್ಕ ಅವರ ಪುತ್ರ ವಿವೇಕಾನಂದ (28) ಸೆ. 16ರ ಮಧ್ಯಾಹ್ನ ಕಂಬಕ್ಕಾಗಿ ಮರವೊಂದನ್ನು ಕಡಿದು ತರಲೆಂದು ಹೋಗಿದ್ದು, ದಾರಿ ತಪ್ಪಿ ಅರಣ್ಯದಲ್ಲಿ ಕಾಣೆಯಾಗಿದ್ದರು. ಶನಿವಾರ ಮನೆಯಿಂದ 4 ಕಿ.ಮೀ. ದೂರದ ಕಬ್ಬಿನಾಲೆಯ ಕಾಡಿನ ಸಮೀಪ ಪತ್ತೆಯಾಗಿದ್ದಾರೆ. ಅವರೊಂದಿಗೆ ತೆರಳಿದ್ದ ನಾಯಿ ಜತೆಗೇ ಇದ್ದು ಸ್ವಾಮಿನಿಷ್ಠೆ ಮೆರೆದಿದೆ. ಸೆ. 16ರ ಮಧ್ಯಾಹ್ನ ವಿವೇಕಾನಂದ ಕಾಡಿಗೆ ಹೋಗಿದ್ದರು. ಜತೆಗೆ 2 ಸಾಕುನಾಯಿಗಳೂ ಹೋಗಿದ್ದವು. ಅದರಲ್ಲೊಂದು ಮರಳಿತ್ತು. ಮನೆಯವರಿಗೆ ಆತ ಕಾಡಿಗೆ ತೆರಳಿದ್ದು ಗೊತ್ತಿರಲಿಲ್ಲ. ಹಳೆಯ ಮಾಳಿಗೆ ಮನೆಯಾಗಿದ್ದರಿಂದ ಮಧ್ಯಾಹ್ನ ಊಟ ಮಾಡಿ ಮಹಡಿಯಲ್ಲಿ ಮಲಗಿರಬಹುದು ಅಂದು ಕೊಂಡಿದ್ದರು. ಸಂಜೆಯಾದಾಗ ಆತ ಕಾಣಿಸದ ಕಾರಣ ಆತಂಕಗೊಂಡ ಮನೆಯವರು ಅಕ್ಕಪಕ್ಕದವರಿಗೆ ಸುದ್ದಿ ತಿಳಿಸಿ ಹುಡುಕಾಟ ಆರಂಭಿಸಿದರು. ರಾತ್ರಿ 12ರ ವರೆಗೂ ಕಾಡಿನಲ್ಲಿ ನೂರಾರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ 2022 -23ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ ಇಲ್ಲಿನ ಜಯಶ್ರೀ ಸಭಾಭವನದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಅವರು ಮಾತನಾಡಿ, ಸಂಘವು ಒಟ್ಟು 2.92 ಪಾಲು ಬಂಡವಾಳ, 66.15 ಕೋಟಿ ಠೇವಣಿ ಹೊಂದಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ 23.52 ಕೋಟಿ ಪಾವತಿಸಬೇಕಾದ ಹೊರಬಾಕಿ ಸಾಲವಿದ್ದರೇ, ಸದಸ್ಯರಿಂದ 76.86 ಕೋಟಿ ಹೊರಬಾಕಿ ಸಾಲ ಹೊಂದಿದೆ. ಈ ಪೈಕಿ ಶೇ.26.61ರಷ್ಟನ್ನು ಕೃಷಿ ಉದ್ದೇಶಕ್ಕೆ ಸಾಲ ನೀಡಲಾಗಿದೆ. ವರದಿ ವರ್ಷದಲ್ಲಿ ಸಂಘವು 1.28 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಟ್ ಘೋಷಿಸಲಾಗಿದೆ ಎಂದರು. ವೈಯಕ್ತಿಕ ಸಾಲ, ಚಿನ್ನಾಭರಣ ಹಾಗೂ ವಾಹನ ಸಾಲ ಬಡ್ಡಿಯನ್ನು ತಗ್ಗಿಸಲಾಗಿದ್ದು, ಈ ಭಾರಿಯಿಂದ ಗೃಹಸಾಲ ನೀಡುವ ಉದ್ದೇಶಿಸಲಾಗಿದೆ. ಶೈಕ್ಷಣಿಕವಾಗಿ ಸಾಧನೆಗೈದ ಸದಸ್ಯರ ಮಕ್ಕಳಿಗೆ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಚಿಕಿತ್ಸೆಗಾಗಿ ನೆರವು ನೀಡಲಾಗುತ್ತಿದೆ ಎಂದರು. ಈ ಸಂದರ್ಭ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸೆಪ್ಟೆಂಬರ್ 24ರ ಭಾನುವಾರ ಆಸರೆ ಮತ್ತು ನವಚೇತನ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ ಬಂಟರ ಯಾನೆ ನಾಡವರ ಸಂಕೀರ್ಣದ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಲಿದ್ದು, ಎಂ ಆರ್ ಜಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ ಉದ್ಘಾಟನೆ ಮಾಡಲಿದ್ದಾರೆ. ಹೇರಂಭ ಆಗ್ರೋ ಇಂಡಸ್ಟ್ರೀಸ್ ಮುಂಬೈನ ಆಡಳಿತ ನಿರ್ದೇಶಕ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ದೀಪ ಪ್ರಜ್ವಲನ ಮಾಡಲಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಭಿನಂದನಾ ನುಡಿಗಳನಾಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಂಟ ಸಮಾಜದ ಹಿರಿಯ ಗಣ್ಯರಿಗೆ ದಶಮ ಸಂಭ್ರಮ ಪ್ರಶಸ್ತಿಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರಿನ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಪ್ರಧಾನ ಮಾಡಲಿದ್ದಾರೆ. Watch Live…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗಿರಿಜಾ ಸರ್ಜಿಕಲ್ಸ್ ಕುಂದಾಪುರದ ಪ್ರಾಯೋಜಕತ್ವದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಮತ್ತು ಮಂಥನ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ನಿರೂಪಕ ಅವಿನಾಶ್ ಕಾಮತ್ ಸಂಯೋಜಿತ ‘ಕೂತು ಮಾತಾಡುವ’ ಕಾರ್ಯಕ್ರಮ ಇತ್ತಿಚಿಗೆ ಗಿರಿಜಾ ಸರ್ಜಿಕಲ್ಸ್ ಆವರಣದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಕುಂದಾಪುರದವರೇ ಆದ ಕಾರ್ಕಳದಲ್ಲಿ ಉಚಿತ ಅನಾಥಾಶ್ರಮ ನಡಿಸುತಿರುವ ಬಡವರ, ನಿರ್ಗತಿಕರ, ಅನಾಥರ ಪಾಲಿನ ತಾಯಿ ಆಯಿಷಾ ಬಾನು ಅವರನ್ನು ಎಲ್ಲಾ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಿ ಸಣ್ಣ ಮಟ್ಟದ ಆರ್ಥಿಕ ಸಹಾಯ ವನ್ನೂ ನೀಡಲಾಯಿತು. ಕೂತು ಮಾತಾಡುವ ಸರಣಿ ಕಾರ್ಯಕ್ರಮವನ್ನು ನ್ಯಾಯವಾದಿ ಎ.ಎಸ್. ಎನ್. ಹೆಬ್ಬಾರ್ ಉದ್ಘಾಟಿಸಿದರು. ಗಿರಿಜಾ ಗ್ರೂಪ್ ಆಪ್ ಕಾನ್ಸರ್ನ್ಸ್ ನ ರವೀಂದ್ರ ಶೆಟ್ಟಿ , ಸುರೇಖಾ ರವೀಂದ್ರ ಶೆಟ್ಟಿ , ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಮತ್ತು ಮಂಥನ ಸಂಸ್ಥೆ ಕುಂದಾಪುರದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಮತ್ತು ಕೂತು ಮಾತಾಡುವ ಕಾರ್ಯಕ್ರಮದ ರೂವಾರಿ ಅವಿನಾಶ್ ಕಾಮತ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಡಾ.ಬಿ.ಆರ್.ಅಂಬೇಡ್ಕರ್ ಮಹಿಳಾ ಸಂಘ ಬೈಂದೂರು ವತಿಯಿಂದ ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಜರುಗಿದ ಅಕ್ಷರ ಬೆಳಕು ಕಾರ್ಯಕ್ರಮದಲ್ಲಿ ದಲಿತ ಸಮುದಾಯದ ನಾಲ್ವುರು ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಸ್ವೀಕಾರ ಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಿ.ಶೈನ್ ಕೊಚಿಂಗ್ ಸೆಂಟರ್ ನಿರ್ದೇಶಿಕ ಹರೀಶ್ ಕುಮಾರ್ ಶೆಟ್ಟಿ, ದಲಿತ ಸಂಘಟನೆಯ ಮುಖಂಡರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ, ಸಂಘಟನೆಯ ಪದಾಧಿಕಾರಿಗಳಾದ ವಿನಯ, ಗೀತಾ ಸುರೇಶ್ ಕುಮಾರ್, ಸುರೇಶ್ ಕುಮಾರ್, ದ.ಸಂ.ಸ ಬೈಂದೂರು ತಾಲೂಕಿನ ಪದಾಧಿಕಾರಿಗಳಾದ ಭಾಸ್ಕರ್, ಶಿವರಾಜ, ಗೋವಿಂದ. ಬೈಂದೂರು ಡಾ.ಬಿ.ಆರ್. ಅಂಬೇಡ್ಕರ್ ಸಂಘದ ರಂಗ. ಎಸ್, ದಯಾನಂದ.ಪಿ. ಹಾಗೂ ಮಹಿಳಾ ಸಂಘದ ಮಹಿಳಾ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ಚಂದ್ರ ಕೆ ದೇವಾಡಿಗ ಸ್ವಾಗತಿಸಿದರು. ಶಿಕ್ಷಕಿ ಚೈತ್ರಾ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿ. ಬೈಂದೂರು ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಗುರುವಾರ ಸಹಕಾರಿಯ ಕಛೇರಿ ಆವರಣದಲ್ಲಿ ನಡೆಯಿತು. ಸಹಕಾರಿ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದು, ರೂ. 10.73 ಕೋಟಿ ಠೇವಣಿ ಸಂಗ್ರಹಿಸಿ, ರೂ. 6.34 ಕೋಟಿ ಸಾಲ ನೀಡಿದೆ. ರೂ.11.03 ಕೋಟಿಗೂ ಅಧಿಕ ದುಡಿಯುವ ಬಂಡವಾಳ ಹೊಂದಿದ್ದು, ರೂ. 81 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದೆ. ಆರ್ಥಿಕ ವರ್ಷದಲ್ಲಿ ರೂ. 19.99 ಲಕ್ಷ ಲಾಭಾಂಶ ಗಳಿಸಿದ್ದು, ಸದಸ್ಯರಿಗೆ ಶೇ. 11% ಡಿವಿಡೆಂಡ್ ಘೋಷಿಸಲಾಗಿದೆ. ಕ್ರಮಬದ್ಧವಾಗಿ ಹಾಗೂ ವಿಶ್ವಾಸದಿಂದ ಸೇವೆಯನ್ನು ನೀಡುವ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ಅಪಘಾತ ವಿಮೆ, ಶೈಕ್ಷಣಿಕ ನಿಧಿ, ಸ್ವಸಹಾಯ ಗುಂಪುಗಳ ರಚನೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ ಅಂಗವಾಗಿ ಶೆಫಿನ್ಸ್ ಸಂಸ್ಥೆಯಿಂದ ಅತಿಥಿ ಹಾಗೂ ಗೌರವ ಶಿಕ್ಷಕರ ತರಬೇತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯೆಡಾಡಿ-ಮತ್ಯಾಡಿಯಲ್ಲಿ ಹಮ್ಮಿಕೊಳ್ಳಲಾಯಿತು. ತರಬೇತಿಗೆ ಕುಂದಾಪುರ ತಾಲೂಕಿನ 8 ಶಾಲೆಯ 20 ಶಿಕ್ಷಕರು ಭಾಗವಹಿಸಿದ್ದು, ಅವರ ನಡುವೆ ಶೆಫಿನ್ಸ್ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿಗಾಗಿ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು. ಎಲ್ಲಾ ಅತಿಥಿ/ ಗೌರವ ಶಿಕ್ಷಕರೂ ತಾವು ಪಾಠ ಮಾಡುವ ವಿಷಯದಲ್ಲಿ ಬಹಳ ಅದ್ಭುತವಾಗಿ ಬಹಳಷ್ಟು ಟೀಚಿಂಗ್ ಎಯ್ಡ್ ಜೊತೆಗೆ ಭಾಗವಹಿಸಿ, ತಮ್ಮ ಅಧ್ಯಾಪನದಲ್ಲಿನ ಕ್ರಿಯಾಶೀಲತೆಯನ್ನು ಪ್ರದರ್ಶಿಸಿದರು. ಮೂರು ಸುತ್ತಿನ ಈ ಸ್ಪರ್ದೆಯ ಅಂತಿಮ ಸುತ್ತಿನಲ್ಲಿ ಬಿದ್ಕಲ್ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನಾಗರತ್ನ ಹಾಗೂ ಜಪ್ತಿ ರಾಮಚಂದ್ರ ಅನುದಾನಿತ ಶಾಲೆಯ ಉದಯ್ ಕೊಠಾರಿ ಮತ್ತು ವಿಜಯ್ ಕಣದಲ್ಲಿದ್ದರು. ಕೊನೆಯ ಸುತ್ತಿನಲ್ಲಿ ರಾಮಚಂದ್ರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಜಪ್ತಿಯ ಗೌರವ ಶಿಕ್ಷಕರಾದ ಉದಯ ಕೊಠಾರಿ ಉಳಿದೆಲ್ಲ ಶಿಕ್ಷಕರ ಮೆಚ್ಚುಗೆ…

Read More