Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಡಾಡಿ ಗೋವುಗಳ ಕಳ್ಳತನ ಮಾಡಿದವರ ಮತ್ತು ಅಕ್ರಮ ಕಸಾಯಿಖಾನೆ ನಿರ್ಮಿಸಿಕೊಂಡು ಸಾಮೂಹಿಕವಾಗಿ ಗೋವುಗಳನ್ನು ಹತ್ಯೆ ಮಾಡಿದವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ. ಹಿಂಜಾವೇ ಪ್ರಾಂತ ಕಾರ್ಯಕಾರಿಣಿ ಸದಸ್ಯ ವಾಸುದೇವ ದೇವಾಡಿಗ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರತ್ನಾಕರ ಗಾಣಿಗ, ತಾಲೂಕು ಕಾರ್ಯಕಾರಿಣಿ ಸದಸ್ಯ ಯಶವಂತ ಗಂಗೊಳ್ಳಿ ಹಾಗೂ ಜಿಲ್ಲಾ ಸಹ ಸಂಚಾಲಕ ನವೀನ್ ಗಂಗೊಳ್ಳಿ ನೇತೃತ್ವದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ನಿಯೋಗ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್. ಅವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಗುರುವಾರ ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿತು. ಗಂಗೊಳ್ಳಿಯಲ್ಲಿ ಪದೇ ಪದೇ ಗೋ ಕಳ್ಳತನ ಹಾಗೂ ಗೋ ಹತ್ಯೆಗಳು ನಿರಂತರವಾಗಿ ಎಗ್ಗಿಲ್ಲದೆ ಸಾಗುತ್ತಿದ್ದು, ಇದನ್ನು ತಡೆಗಟ್ಟುವಂತೆ ಹಿಂದು ಜಾಗರಣ ವೇದಿಕೆ ನಿರಂತರವಾಗಿ ಆಗ್ರಹಿಸುತ್ತಿದೆ. ಆದರೆ ಇಲಾಖೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳ ಕನಿಷ್ಠವಾಗಿ ನಡೆದರಿರುವುದು ಖೇದದ ವಿಷಯ. ಎಲ್ಲಾ ಗ್ರಾಮ ಪಂಚಾಯಿತಿಗಲ್ಲಿ ಕನಿಷ್ಠ ಎಂದರೂ ಎರಡು ಗ್ರಾಮ ಪಂಚಾಯಿತಿ ಸಭೆ ನಡೆಸಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಗ್ರಾಮ ಸಭೆಗಳ ನಿಯಮಿತವಾಗಿ ನಡೆಸುವಂತೆ ಸೂಚಿಸಲು ತಾಲೂಕು ಪಂಚಾಯಿತಿ ಕಾರ್ಯನಿರ್ಹಣಾಧಿಕಾರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಸೂಚಿಸಿದರು. ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಮಾಬಂಧಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಸೇರಿ ಒಟ್ಟು 62 ಗ್ರಾಮ ಸಭೆ ನಡೆದಿದೆ ಎಂದು ಲೆಕ್ಕಪತ್ರ ವಿಭಾಗದ ಸಿಬ್ಬಂದಿ ಮಾಹಿತಿ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ ಪ್ರಸನ್ನ ಗ್ರಾಮ ಪಂಚಾಯಿತಿ ಸಮಾನ್ಯ ಸಭೆ ನಡೆಸದಿರುವು ಸರಿಯಲ್ಲ. ಪ್ರತಿ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆ ನಡೆಸುವುದು ಅವರ ಜವಾಬ್ದಾರಿಯಾಗಿದ್ದು, ತಾಲೂಕು ಪಂಚಾಯಿತಿ ಎಲ್ಲಾ ಗ್ರಾಮಗಳಿಗೂ ಗ್ರಾಮ ಸಭೆ ನಡೆಸುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪವಿಭಾಗ ಮಟ್ಟದ ಪರಿಶಿ? ಜಾತಿ ಮತ್ತು ಪಂಗಡದ ದೌರ್ಜನ್ಯ ನಿಯಂತ್ರಣ ಕಾಯ್ದೆ ಜಾಗೃತಿ ಉಸ್ತುವಾರಿ ಸಮಿತಿ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೇಂಜಿಂಗ್ ಜಾಗೃತಿ ಉಸ್ತುವಾರಿ ಸಮಿತಿ ಸಭೆ ಸಹಾಯಕ ಆಯುಕ್ತೆ ರಶ್ಮೀ ಎಸ್.ಆರ್., ಅಧ್ಯಕ್ಷತೆಯಲ್ಲಿ ಗುರುವಾರ ಕೋರ್ಟ್ ಹಾಲ್‌ನಲ್ಲಿ ಜರುಗಿತು. ಪರಿಶಿ? ಜಾತಿ,ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿ?ಧ ಕಾಯ್ದೆಯಡಿ ಪ್ರಕರಣಗಳ ಕುರಿತು ಚರ್ಚಿಸಿ, ಅನು?ನ ವ್ಯವಸ್ಥಿತವಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಕುಂದಾಪುರ ಎಇಎಸ್ಪಿ ಬೆಳ್ಳಿಯಪ್ಪ ಯು.,ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕೆ.ಜೆ., ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಆರ್., ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಮೆನೇಜರ್ ರಮೇಶ್ ಕುಲಾಲ್ ಸ್ವಾಗತಿಸಿ, ಮಾಹಿತಿ ನೀಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇಶಕ್ಕಾಗಿ ತ್ಯಾಗ ಮಾಡಿದ ಯೋಧ, ಹಾಗೂ ಅನ್ನ ಕೊಟ್ಟು ಜೀವನ ಪರ್ಯಂತೆ ಪೊರೆಯುತ್ತಿದ್ದು ಮಣ್ಣಿಗೆ ಋಣಿಯಾಗಿರಬೇಕು. ದೇಶಕ್ಕೆ ಸ್ವಾತಂತ್ರ್ಯಸಿಕ್ಕಿ ಅಮೃತಮಹೋತ್ಸವ ಕಾಲದಲ್ಲಿ ಅಮೃತ ಕಲಶ ಅಭಿಯಾನದ ಮೂಲಕ ತ್ಯಾಗಿಗಳ ನೆನಪು ಮಾಡಿಕೊಳ್ಳುವ ಜೊತೆ ದೇಶಕ್ಕಾಗಿ ತ್ಯಾಗ ಮಾಡಿದವರ ಸದಾ ನೆನಪಿಟ್ಟುಕೊಳ್ಳುವ ಕೆಲಸ ಮುಂದಿನ ಜನಾಂಗಕ್ಕೆ ನೆನಪಿಸುವ ಕೆಲಸ ಆಗುತ್ತದೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು. ರಾಷ್ಟ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರೂ ಯುವ ಕೇಂದ್ರ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಆಶ್ರಯದಲ್ಲಿ ಇಲ್ಲಿನ ಭಂಡಾರ್‌ಕಾರ‍್ಸ್ ಕಾಲೇಜ್ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡದೆ ನನ್ನ ದೇಶ ನನ್ನ ಮಣ್ಣಿ ಅಮೃತಕಲಶ ಜಾಥಾ ಸಭಾ ಕಾರ್ಯಕ್ರಮ ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಅಮೃತಕಲಶೋತ್ಸವ ಜಾತಾ ಶತಶತಮಾನಗಳ ಕಾಲ ಭಾರತೀಯರಲ್ಲಿ ನೆನಪಾಗಿ ಉಳಿಯಲಿದ ಎಂದರು. ಭಂಡಾರ್‌ಕಾರ‍್ಸ್ ಕಾಲೇಜ್ ಪ್ರಾಂಶುಪಾಲ ಡಾ. ಶುಭಕರಾಚಾರಿ ಮಾತನಾಡಿದರು. ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ತಹಸೀಲ್ದಾರ್ ಶೋಭಾಲಕ್ಷ್ಮೀ ಹೆಚ್.ಎಸ್., ಕಾಲೇಜ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಬಳಗ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ.ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಿ. ಕುಂದಾಪುರ ಇವರ ಸಹಯೋಗದೊಂದಿಗೆ ಕುಂದಾಪುರ ಕಲಾಮಂದಿರದಲ್ಲಿ ನಡೆದ ರಕ್ತದಾನ ಶಿಬಿರ ನಡೆಯಿತು. ಉದ್ಯಮಿ ಆನಂದ ಸಿ ಕುಂದರ್ ರಕ್ತದಾನ ಶಿಬಿರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಂಪತ್ ಶೆಟ್ಟಿ, ಜಯಕರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಸುನೀಲ್ ಶೆಟ್ಟಿ,ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್, ಶರತ್ ಕಾಂಚನ್ , ಸತೀಶ್ ಪೂಜಾರಿ, ಪ್ರಶಾಂತ್ ತಲ್ಲೂರು ಉಪಸ್ಥಿತ್ತರಿದ್ದರು. ರಕ್ತದಾನ ಶಿಬಿರದಲ್ಲಿ ದಾಖಲೆಯ 143 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ಕಾರ್ಕಳದ ಹಿರ್ಗಾನದ ಮೂರೂರಿನಲ್ಲಿ ಬಿ ಎಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಬಿರದ ಸಮಾರೋಪ ಊರಿನ ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಹಾಲಕ್ಮೀ ದೇವಸ್ಥಾನದ ಮುಕ್ತೇಸರರಾದ ಶ್ರೀ ಅಶೋಕ್‌ ನಾಯಕ್‌ ರವರು ಇಂತಹ ಶಿಬಿರಗಳಿಂದ ಊರಿನ ಅಭಿವೃದ್ಧಿಯ ಜೊತೆಗೆ ಸಮಾಜದಲ್ಲಿ ಒಂದು ಧನಾತ್ಮಕ ಬದಲಾವಣೆ ಬರಲು ಸಾಧ್ಯವಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಸಹಕಾರ, ಸಹಬಾಳ್ವೆಯ ಅರಿವು ಉಂಟಾಗುತ್ತದೆ. ಯಾವಾಗಲು ನಾವೆಲ್ಲರೂ ಒಂದು ಎಂಬ ಭಾವದಿಂದ ಸಮಾಜಕ್ಕಾಗಿ ದುಡಿಯ ಬೇಕು ಎಂದು ನುಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಶಿಬಿರದ ಆರಂಭ ಸವಾಲಿನ ಕೆಲಸವಾಗಿದ್ದರು ಊರಿನ ಗಣ್ಯರು, ಮಹನೀಯರ ಮತ್ತು ದಾನಿಗಳಿಂದ ಈ ಕಾರ್ಯ ಯಶಸ್ವಿಯಾಗಲು ಕಾರಣವಾಯಿತೆಂದು ಅಭಿಪ್ರಾಯ ವ್ಯಕ್ತಪಡಿಸಿ ಈ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರನ್ನು ಸ್ಮರಿಸಿದರು. ಬಿ. ಎಂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ಕ್ಲೇರಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾಡದಿರುವ ತಪ್ಪನ್ನು ಒಪ್ಪಿಕೊಳ್ಳುವಂತೆ ಬೆದರಿಕೆಯೊಡ್ಡಿ ಹಲ್ಲೆಗೈದ ಘಟನೆಯೊಂದು ಬ್ರಹ್ಮಾವರ ತಾಲೂಕು ವಂಡಾರು ಗ್ರಾಮದ ಬಿಲ್ಲಾಡಿ ಶ್ರೀಕೃಷ್ಣ ಪ್ರಸಾದ ಗೇರುಬೀಜ ಕಾರ್ಖಾನೆಯಲ್ಲಿ ಬುಧವಾರ ನಡೆದಿದೆ. ಕಾರ್ಖಾನೆಯ ಮಾಲಿಕ ಸಂಪತ್ ಕುಮಾರ್ ಶೆಟ್ಟಿ ಎಂಬಾತ ಅಲ್ಲಿಯೇ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ವಿಜಯ (25) ಎಂಬ ವ್ಯಕ್ತಿಯನ್ನು ಅಮಾನುಷವಾಗಿ ತಳಿಸಿದ್ದು, ಗಾಯಗೊಂಡ ವಿಜಯ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುಂಡ್ಮಿ ಯಕ್ಷಿಮಠದ ನಿವಾಸಿಯಾದ ವಿಜಯ ಪೂಜಾರಿ ಎಂಬುವವರು ಕೆಲ ಸಮಯದಿಂದ ವಂಡಾರುವಿನ ಶ್ರೀ ಕೃಷ್ಣ ಪ್ರಸಾದ ಗೇರು ಬೀಜ ಕಾರ್ಖಾನೆಯಲ್ಲಿ ಟಿಕ್ನೀಶಿಯನ್ ಆಗಿ ಕೆಲಸ ಮಾಡಿಕೊಂಡಿದ್ದರು. ಅ.16ರಂದು ಅಲ್ಲಿನ ಕೆಲಸಗಾರನೋರ್ವ ಗೇರು ಬೀಜಗಳನ್ನು ಕಟ್ಟಿಂಗ್ ಮೆಶೀನ್’ಗೆ ಹಾಕುವಾಗ ದೊಡ್ಡ ಮೆಶೀನ್ಗೆ ಬದಲಾಗಿ ಸಣ್ಣ ಮೆಶೀನ್ಗೆ ಹಾಕಿದ್ದಾನೆ. ಇದರಿಂದ ಹೆದರಿದ ಆ ನೌಕರ ಕಾರ್ಖಾನೆ ಕಡೆಗೆ ಬಂದಿರಲಿಲ್ಲ. ಆದರೆ ಘಟನೆಯಿಂದಾಗಿ ಕೋಪಗೊಂಡಿದ್ದ ಮಾಲಿಕ ಸಂಪತ್ ಶೆಟ್ಟಿ, ಅ.18ರ ಬೆಳಿಗ್ಗೆ ಗೇರು ಬೀಜ ಕಾರ್ಖಾನೆಯ ಒಳಗಡೆ ವಿಜಯ್ ಕೆಲಸ ಮಾಡುತ್ತಿದ್ದ ಜಾಗಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರಿನ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಶಾರದೋತ್ಸವ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. 50ನೇ ವರ್ಷದ ಶಾರದೋತ್ಸವದ ಅಂಗವಾಗಿ ಅಕ್ಟೋಬರ್ 20ರಿಂದ ಮೊದಲ್ಗೊಂಡು 23ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದು ಬೈಂದೂರು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು. ಅವರು ಶ್ರೀ ಸೇನೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅಕ್ಟೋಬರ್ 20ರ ಶುಕ್ರವಾರ ಬೆಳಿಗ್ಗೆ ಶ್ರೀ ಶಾರದಾಂಬೆಯ ವಿಗ್ರಹವನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿದ ತರುವಾಯ, ಅದ್ದೂರಿ ‘ಬೈಂದೂರು ದಸರಾ’ಕ್ಕೆ ಚಾಲನೆ ನೀಡಲಾಗುತ್ತದೆ ಎಂದರು. ಅಂದು ಧಾರ್ಮಿಕ ಕಾರ್ಯಕ್ರಮವಾಗಿ ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ ಪೂಜೆ ಹಾಗೂ ರಾತ್ರಿ ಪೂಜೆಗಳು ನಡೆಯಲಿದೆ. ಶುಕ್ರವಾರ ಮಧ್ಯಾಹ್ನ ಬಾಲಕಿಯರಿಗೆ ಮುದ್ದು ಶಾರದೆ ಸ್ವರ್ಧೆ, ಸಾರ್ವಜನಿಕರಿಗೆ ಭಕ್ತಿಗೀತೆ ಹಾಗೂ ಮಕ್ಕಳಿಗೆ ಭಜನೆ ಹಾಡುವ ಸ್ವರ್ಧೆ ನಡೆಯಲಿದೆ. ಸಂಜೆಯ ಸಾಂಸ್ಕೃತಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೋವುಗಳನ್ನು ಕಳವು ಮಾಡಿ ಗೋಮಾಂಸ ತಯಾರಿಸುತ್ತಿದ್ದ ದಂಧೆಯನ್ನು ಬೇಧಿಸಿದ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕಾವ್ರಾಡಿ ಗ್ರಾಮದ ಕಂಡ್ಲೂರು ಕರಾಣಿ ಅಬು ಮೊಹಮ್ಮದ್ ಎಂಬವರ ಮನೆಯ ಹಿಂಬದಿಯ ಶೆಡ್‌ನಲ್ಲಿ ಝಾಕೀರ್ ಹುಸೇನ್ ಮತ್ತು ಕರಾಣಿ ಶಾಕೀರ್ ಎಂಬ ವ್ಯಕ್ತಿಗಳು ಕಳವು ಮಾಡಿದ ಗೋವುಗಳನ್ನು ತಂದು ಅಕ್ರಮವಾಗಿ ವಧೆ ಮಾಡಿ ಮಾಂಸ ತಯಾರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಬುಧವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿದ್ದ ಇಬ್ಬರು ವ್ಯಕ್ತಿಗಳು ಅಲ್ಲಿದ್ದ ಕಾಲ್ಕಿತ್ತಿದ್ದಾರೆ. ಪರಾರಿಯಾರಿದ್ದ ಮೊದಲ ಆರೋಪಿ ಝಾಕೀರ್ ಹುಸೇನ್ ಎಂಬಾತನನ್ನು ಕೊನೆಗೆ ಬಂಧಿಸಿದ್ದಾರೆ. ದಾಳಿ ನಡೆಸಿದಾಗ ಶೆಡ್ಡಿನಲ್ಲಿದ್ದ ಪ್ಲಾಸ್ಟಿಕ್ ಟಬ್‌ನಲ್ಲಿದ್ದ 152 ಕೆ.ಜಿ ಗೋವಿನ ಮಾಂಸವಿರುವುದು ಕಂಡುಬಂದಿದೆ. ಎಲ್ಲವನ್ನು ಸೀಜ್ ಮಾಡಲಾಗಿದ್ದು ಇನ್ನೋರ್ವ ಆರೋಪಿಯ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪವನ್ ನಾಯಕ್ ಅವರ ನೇತೃತ್ವದಲ್ಲಿ, ಇನ್ವೆಸ್ಟಿಗೇಷನ್ ಪಿಎಸ್ಐ ನೂತನ, ಎ.ಎಸ್.ಐ ವಿಶ್ವನಾಥ ಹಾಗೂ ಸಿಬ್ಬಂದಿಯವರು ದಾಳಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕನ್ನಡ ಕಿರುತೆರೆ, ಸಿನಿಮಾ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ದಿವ್ಯಾ ಉರುಡುಗ ಇದೀಗ ಅರ್ದಂಬರ್ಧ ಪ್ರೇಮಕತೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಟೀಸರ್ ಮತ್ತು ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರುವ “ಅರ್ದಂಬರ್ಧ” ಪ್ರೇಮಕಥೆ ಸಿನಿಮಾತಂಡ ಈಗ ಮೊದಲ ಹಾಡಿನ ಮೂಲಕ ಅಭಿಮಾನಿಗಳ ಜೊತೆಯಾಗಿ ವಿಭಿನ್ನ ರೀತಿಯಲ್ಲಿ ಎಂಟ್ರಿಕೊಟ್ಟಿದ್ದಾರೆ….. ‘ಹುಚ್ಚು ಮನಸೇ..’ ಎನ್ನುವ ಸಾಲಿನಿಂದ ಪ್ರಾರಂಭವಾಗುವ ಈ ಹಾಡು ಅಭಿಮಾನಿಗಳಿಂದ ರಿಲೀಸ್ ಆಗಿದ್ದು ವಿಶೇಷ. ಅರ್ದಂಬರ್ಧ ಪ್ರೇಮಕಥೆ ಈಗಾಗಲೇ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದು ಸದ್ಯ ಹಾಡಿನ ಮೂಲಕ ಅಭಿಮಾನಿಗಳಲ್ಲಿ ಹುಚ್ಚು ಹಿಡಿಸಿದೆ. ಇದೀಗ ರಿಲೀಸ್ ಆಗಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಅರವಿಂದ್ ಕೌಶಿಕ್ ಅವರೇ ಈ ಹಾಡಿಗೆ ಸಾಹಿತ್ಯ ರಚಿಸಿದ್ದು ಗಾಯಕ ವಾಸಕಿ ವೈಭವ್ ಮತ್ತು ಪೃಥ್ವಿ ಭಟ್ ಧ್ವನಿ ಧ್ವನಿಯಲ್ಲಿ ಈ ಹಾಡು…

Read More