ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿಜ್ಞಾನ ಎಷ್ಟೇ ಮುಂದುವರಿದರೂ ದೇವರು ಅದರ ಅಂತಸತ್ವವಾಗಿ ಉಳಿಯುತ್ತಾನೆ. ಖ್ಯಾತ ವಿಜ್ಞಾನಿಗಳೆಲ್ಲರೂ ದೇವರ ಅಸ್ತಿತ್ವವನ್ನು ಒಪ್ಪಿಕೊಂಡಿದ್ದಾರೆ. ಆದರೆ ಅಲ್ಪಸ್ವಲ್ಪ ತಿಳಿದವರು ದೇವರ ಅಸ್ತಿತ್ವವನ್ನು ಪ್ರಶ್ನಿಸುತ್ತಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ತೆಂಕಬೆಟ್ಟು ನವೀಕೃತ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ಬ್ರಹ್ಮಕಳಶೋತ್ಸವದ ಎರಡನೇ ದಿನ ಶುಕ್ರವಾರ ದೇವಳಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದು ನಂತರ ಅವರು ಆಶೀರ್ವಚನಗೈದರು. ದೇವರು ಭಕ್ತರಲ್ಲಿ ಭಕ್ತಿ ತುಂಬುವ ಒಂದು ಶಕ್ತಿ. ದೇವಾಲಯಗಳಲ್ಲಿ ಭಯ ಭಕ್ತಿಯಿಂದ ನಾವು ಹೇಗೆ ಇರುತ್ತೇವೆಯೋ, ನಿಜ ಜೀವನದಲ್ಲಿಯೂ ಅದನ್ನು ನಾವು ರೂಢಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮಂಗಳೂರು ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಹಲವರಿ ಮಠದ ಶ್ರೀ ಜಗದೀಶಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕಳೆದ ನಾಲ್ಕು ವರ್ಷಗಳ ಹಿಂದೆ ಕೊಲ್ಲೂರು ವ್ಯವಸಾಯ ಸಂಘದಿಂದ ವಿಭಜನೆಗೊಂಡು ಜಡ್ಕಲ್ನಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ಆರಂಭದ ದಿನಗಳಲ್ಲಿ ಸ್ವಲ್ಪ ಮಟ್ಟಿನ ನಷ್ಟವನ್ನು ಹೊಂದಿದ್ದರೂ ಅದನ್ನು ಭರಿಸಿಕೊಂಡು ಇಂದು ಈ ಮಟ್ಟದ ಸಾಧನೆ ಮಾಡಿದ್ದು ಸಣ್ಣ ವಿಷಯವಲ್ಲ. ಆಡಳಿತ ಮಂಡಳಿಯ ಪ್ರಾಮಾಣಿಕ ಪ್ರಯತ್ನ, ಸಿಬ್ಬಂದಿಗಳ ಅವಿರತ ಶ್ರಮ ಹಾಗೂ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು. ಅವರು ಶುಕ್ರವಾರ ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ’ಸಹಕಾರ ಸಿರಿ’ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ತತ್ವದಡಿ ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸಿ, ಸರ್ಕಾರದ ಯೋಜನೆಗಳನ್ನು ಅರ್ಹ ಸದಸ್ಯ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸಿದ ಕೀರ್ತಿ ಹಾಗೂ ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಮೂಲಕ ತನ್ನ ಗ್ರಾಹಕರಿಗಾಗಿ ಅತ್ಯಂತ ಸುಂದರವಾದ ಹವಾನಿಯಂತ್ರಿತ ಸ್ವಂತ ಕಟ್ಟಡವನ್ನು ನಿರ್ಮಿಸಿದ ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವ್ಯಕ್ತಿಯಲ್ಲಿ ಉತ್ತಮ ಚಿಂತನೆ ಮತ್ತು ಒಳ್ಳೆಯ ವ್ಯಕ್ತಿತ್ವ ಬರಬೇಕಾದರೆ ಶಿಕ್ಷಣ ಮುಖ್ಯ ಅದಕ್ಕಾಗಿ ಸರಕಾರ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಶ್ರಮಿಸಲಾಗುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ರಾಜಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಬೈಂದೂರು ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಸಂಭ್ರಮ-೨೦೨೩ ಸಮಾರಂಭದಲ್ಲಿ ’ಅನ್ನ ಬ್ರಹ್ಮ’ ಸಭಾಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಳೆದ ೫೦ ವರ್ಷದ ಹಿಂದೆ ನಮ್ಮ ಸಂಸ್ಥೆಯ ಸುಪರ್ದಿಗೆ ಪಡೆದುಕೊಂಡು ಈ ಶಾಲೆಯಲ್ಲಿ ಪ್ರಸ್ತುತ ಉಡುಪಿ ಜಿಲ್ಲೆಯ ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ಅತ್ಯಧಿಕ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಎಂದೆನಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಶ್ರಮಿಸಿದ ಶಿಕ್ಷಕರು, ಪಾಲಕರು ಹಾಗೂ ಸಹಕರಿಸಿದ ಸರ್ವರೂ ಅಭಿನಂಧನಾರ್ಹರು ಎಂದು ಶ್ಲಾಘಿಸಿದರು. ಭಾಷೆ ಬರೀ ಸಂವನಕ್ಕೆ ಎಂಬ ಮನೋಭಾವ ಶ್ರೀಮಂತ ವರ್ಗದಲ್ಲಿ ಹೆಚ್ಚುತ್ತಿದೆ. ಭಾಷೆ ಹೆತ್ತವರಂತೆ ನಮ್ಮನ್ನು ಬೆಳೆಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಕಟ್ಟಿಕೊಡುತ್ತದೆ. ಮಾತೃಭಾಷೆಯ ಕೀಳರಿಮೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ಬಸ್ಸಿನಿಂದ ಕೆಳಗೆ ಇಳಿಯುವ ಸಂದರ್ಭ ಆಯತಪ್ಪಿ ಬಸ್ ಚಕ್ರದಡಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಹೆಮ್ಮಾಡಿಯ ಜಂಕ್ಷನ್ ನಲ್ಲಿ ಶನಿವಾರ ನಡೆದಿದೆ. ಕಟ್‌ಬೇಲ್ತೂರು ನಿವಾಸಿ, ಕೋಟೇಶ್ವರ ಕಾಗೇರಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಸುದೀಪ್ (20) ಮೃತ ದುರ್ದೈವಿ. ಸಾಗರದಿಂದ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ಸಿಗೆ ಕಟ್‌ಬೆಲ್ತೂರು ನಿಲ್ದಾಣದಲ್ಲಿ ಹತ್ತಿದ್ದ ಸುದೀಪ್, ಬಸ್ ರಶ್ ಇರುವ ಕಾರಣ ಪುಟ್‌ಬೋರ್ಡ್ ಮೇಲೆಯೇ ನಿಂತು ಪ್ರಯಾಣಿಸಿದ್ದ. ಮುಂದೆ ಹೆಮ್ಮಾಡಿ ನಿಲ್ದಾಣದಲ್ಲಿ ಪ್ರಯಾಣಿಕರು ಇಳಿಯಬೇಕಿದ್ದರಿಂದ, ಬಸ್ ನಿಲ್ಲಿಸುವ ವೇಳೆ ಪುಟ್‌ಬೋರ್ಡ್ ಮೇಲೆ ನಿಂತಿದ್ದ ಸುದೀಪ್ ಕೂಡ ಇಳಿಯಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬಸ್ ಮುಂಬದಿಯ ಬಾಗಿಲಲ್ಲಿ ನಿಂತಿದ್ದ ಆತ ಬಸ್ಸಿನ ಮುಂಬದಿಯ ಚಕ್ರದಡಿಯಲ್ಲಿ ಸಿಲುಕಿಕೊಂಡಿದ್ದ. ಚಾಲಕ ವಿದ್ಯಾರ್ಥಿಯನ್ನು ಉಳಿಸುವ ಪ್ರಯತ್ನ ನಡೆಸಿದರಾದರೂ ಸೊಂಟದ ಮೇಲೆ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡ ಸುದೀಪ್ ಕೊನೆಯುಸಿರೆಳೆದಿದ್ದಾನೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಬೈಂದೂರು ತಾಲೂಕಿನ ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ‘ಸಹಕಾರ ಸಿರಿ’ ಇದರ ಉದ್ಘಾಟನಾ ಸಮಾರಂಭವು ಜನವರಿ 27 ಶುಕ್ರವಾರ ಬೆಳಿಗ್ಗೆ ಗಂಟೆ 10:30ಕ್ಕೆ ಸಂಘದ ವಠಾರ ಬೀಸಿನಪಾರೆಯಲ್ಲಿ ನಡೆಯಲಿದೆ. ನೂತನ ಕಟ್ಟಡ ಉದ್ಘಾಟನೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಮಾಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಪ್ರಧಾನ ಕಛೇರಿಯನ್ನು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಸಭಾಭವನವನ್ನು ವೆ|ಮೂ| ಸೂರ್ಯನಾರಾಯಣ ಭಟ್ ಆಡಳಿತ ಮೊಕ್ತಸರು ಮಹಿಷಮರ್ದಿನಿ ದೇವಸ್ಥಾನ ಸೆಳೋಡು, ಪ್ರೇರಕರ ಕೊಠಡಿಯನ್ನು ರೆ|ಫಾ| ಥೋಮಸ್ ಪಾರೆಕಾಟಿಲ್ ಧರ್ಮಗುರುಗಳು ಸೈಂಟ್ ಜೋರ್ಜ್ ಪೊರೋನ್ ಚರ್ಚ್ ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್. ರಾಜು ಪೂಜಾರಿ ನಿರ್ದೇಶಕ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಎಂ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕು ಸ್ಥಾನಿಕ ಬ್ರಾಹ್ಯಣರ ಸಂಘದ ೨೮ನೇ ವಾರ್ಷಿಕೋತ್ಸವ ಸಮಾರಂಭವು ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಾಹ್ಮಿ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಎಂ. ಸತ್ಯನಾರಾಯಣ ಹೆಬ್ಬಾರ್ ಮರೂರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ ಇದರ ಧರ್ಮದರ್ಶಿ ಸಚ್ಚಿದಾನಂದ ಚಾತ್ರ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬ್ರಾಹ್ಮಣ ಸಂಘಟನೆಯನ್ನು ಬಲಪಡಿಸುವಂತೆ ಕರೆ ನೀಡಿದರು. ಇನ್ನೊರ್ವ ಮುಖ್ಯ ಅತಿಥಿ ಧನಂಜಯ್ ಕುಮಾರ್ ನ್ಯಾಯವಾದಿಗಳು ಬೆಳ್ತಂಗಡಿ ಮಾತನಾಡಿ ಸಂಘ ನಮಗೇಕೆ ಬೇಕು ಎನ್ನುವುದರ ಬಗ್ಗೆ ಸವಿಸ್ತರವಾಗಿ ತಿಳಿಸಿದರು. ಕಾರ್ಯಕ್ರಮವನ್ನು ಸುಬ್ರಾಯ ಹೆಗ್ಗಡೆ ಇಳಿ ಉದ್ಘಾಟಸಿದರು ಶೃಂಗೇರಿ ಶ್ರೀಗಳವರಿಂದ ಶ್ರೀ ಭಾರತೀ ತೀರ್ಥಪುರಾಸ್ಕಾರ್ ಪ್ರಶಸ್ತಿ ಪಡೆದಿರುವ ಸಮಾಜದ ಸತ್ಯ ಶಂಕರ ಬೊಳ್ಳಾವ ಧರ್ಮಾಧಿಕಾರಿಗಳು ಶ್ರೀ ಶೃಂಗೇರಿ ಮಠ ಕೋಟೆಕಾರು ಇವರನ್ನು ಗೌರವಿಸಲಾಯಿತು. ಇದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶ್ವೇಶ್ವರ ರಾಮ್ ಹೊಸ್ಕೋಟೆ ಹಾಗೂ ಪ್ರಭಾವತಿ ಎಸ್ ಜೋಷಿ ಸಿದ್ಧಾಪುರ ಇವರನ್ನು ಸನ್ಮಾನಿಸಲಾಯಿತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮನುಷ್ಯರಲ್ಲಿ ತೃಪ್ತಿ ದೂರವಾಗಿ, ಮಾನವೀಯ ಗುಣವೇ ಮರೆಯಾಗುತ್ತಿದೆ. ಕೇವಲ ಹಣ ಮತ್ತು ಅಧಿಕಾರಕ್ಕೆ ಬೆಲೆ ಕೊಡಲಾಗುತ್ತಿದೆ. ಸ್ವಸ್ಥ ಸಮಾಜ ನಿರ್ಮಾಣವು ಇಂದಿನ ಅಗತ್ಯವಾಗಿದೆ ಎಂದು ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು. ಆಳ್ವಾಸ್ ಗಣರಾಜ್ಯೋತ್ಸವದ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ ಅಮರನಾಥ್ ಶೆಟ್ಟಿ ವೇದಿಕೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ’ನಾಯಕತ್ವ ತರಬೇತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ’ಕಾನೂನಿನ ಶ್ರೇಷ್ಠತೆ ಕಾಪಾಡುವುದು ಕೇವಲ ಕೋರ್ಟ್ಗಳ ಕೆಲಸವಲ್ಲ. ಪ್ರತಿ ನಾಗರಿಕನ ಜವಾಬ್ದಾರಿ’ ಎಂದರು. ನ್ಯಾಯದಾನ ಪ್ರಕ್ರಿಯೆಯು ಬಾಹ್ಯ ಪ್ರಭಾವಿ ಅಂಶಗಳಿಂದ ಮುಕ್ತವಾಗಿರಬೇಕು. ನ್ಯಾಯಾಂಗವು ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಆದರೂ, ಈಚೆಗೆ ಕೆಲವೊಮ್ಮೆ ವಿಫಲ ಹಾಗೂ ವಿಳಂಬವಾಗಿದೆ ಎಂಬ ಭಾವನೆ ಹಲವರಿಗೆ ಕಾಡಿದೆ. ಇತ್ತ ಅಪರಾಧಗಳೂ ಹೆಚ್ಚುತ್ತಿವೆ ಎಂದರು. ಭಾರತೀಯರಿಗೆ ಸಂವಿಧಾನವೇ ಆಧಾರ. ಇದು ದೇಶದ ಧ್ಯೇಯೋದ್ದೇಶ ಹಾಗೂ ನಿಲುವುಗಳನ್ನು ಸ್ಪಷ್ಟವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಮತದಾರರ ದಿನ ಆಚರಣೆಯನ್ನು ಪ್ರತಿಜ್ಞಾ ವಿಧಿ ಭೋಧಿಸುವುದರ ಮೂಲಕ ಆಚರಿಸಲಾಯಿತು. ಪ್ರತಿಜ್ಞಾ ವಿಧಿಯನ್ನು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿಯಾದ ಸಂಗೀತಾ ಶೆಟ್ಟಿ ಬಗ್ವಾಡಿ ಭೋಧಿಸಿ ವಿದ್ಯಾರ್ಥಿಗಳಲ್ಲಿ ಮತಧಾನದ ಪ್ರಾಮುಖ್ಯತೆ ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ.ಬಿ ವಹಿಸಿ ಮತದಾನದ ಹಕ್ಕು ಮತ್ತು ಕರ್ತವ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಪೂರ್ಣಿಮಾ ಎನ್ ಜೋಯಿಸ್, ಗೋಪಾಲ ದೇವಾಡಿಗ, ಜ್ಯೋತಿ ಬಿ ಶೆಟ್ಟಿ, ರಾಮನಾಯ್ಕ ಕೆ.ಬಿ ಪ್ರಥಮ ದರ್ಜೆ ಸಹಾಯಕರಾದ ದಿನಕರ ಶೆಟ್ಟಿ ಹರ್ಕಾಡಿ, ಹಾಗೂ ಯತೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ನಾಗರಾಜ ಅಡಿಗ ನೀಲಾವರ ನಿರ್ವಹಿಸಿದರು, ಉಪನ್ಯಾಸಕ ವಾಸುದೇವ ಉಡುಪ ಮಸ್ವಾಡಿ ವಂದನಾರ್ಪಣೆಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜ.25: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ 2013-14 ರಿಂದ 2018-19, 2019-20 ಮತ್ತು 2020-21ನೇ (ಜುಲೈ /ಜನವರಿ) ಆವೃತ್ತಿ ಅನುತ್ತೀರ್ಣರಾದ ಹಾಗೂ ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳು, 2021-22 ನೇ (ಜನವರಿ) ಶೈಕ್ಷಣಿಕ ಸಾಲಿನ ಬಿ.ಎ, ಬಿ.ಕಾಂ, ಬಿ.ಲಿಬ್.ಐಸ್ಸಿ, ಡಿಪ್ಲೋಮಾ ಸರ್ಟಿಫಿಕೇಟ್ ಮತ್ತು ಎಂ.ಎ, ಎಂ.ಕಾA, ಎಂ.ಬಿ.ಎ, ಎಂ.ಎಸ್ಸಿ, ಎಂ.ಲಿಬ್.ಐಸ್ಸಿ, ವಿದ್ಯಾರ್ಥಿಗಳಿಗೆ, 2018-19, 2020-21 ನೇ (ಜನವರಿ ಆವೃತ್ತಿ) ಅನುತ್ತೀರ್ಣರಾದ ಹಾಗೂ ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ, 2021-22 ನೇ (ಜನವರಿ ಆವೃತ್ತಿ) ಬಿ.ಎ, ಬಿ.ಕಾಂ, ಬಿ.ಲಿಬ್.ಐಸ್ಸಿ ಮತ್ತು ಎಲ್ಲಾ ಡಿಪ್ಲೋಮಾ ಸರ್ಟಿಫಿಕೇಟ್ ಹಾಗೂ ಎಂ.ಎ, ಎಂ.ಕಾA, ಎಂ.ಬಿ.ಎ, ಎಂ.ಎಸ್ಸಿ, ಎಂ.ಲಿಬ್.ಐಸ್ಸಿ ನ ವಿದ್ಯಾರ್ಥಿಗಳು ಮತ್ತು 2013-14, 2019-20 ನೇ (ಜುಲೈ /ಜನವರಿ) ಆವೃತ್ತಿಯ ಮತ್ತು 2020-21 ಹಾಗೂ 2021-22 ನೇ ಸಾಲಿನಲ್ಲಿ ಅನುತ್ತೀರ್ಣರಾದ, ಪರೀಕ್ಷೆ ತೆಗೆದುಕೊಂಡಿಲ್ಲದ ಹಾಗೂ ಹೊಸದಾಗಿ ಪರೀಕ್ಷೆ ಬರೆಯುವ ಎಲ್ಲಾ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಬಹುದುದಾಗಿದೆ. 2001-02 ರಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜ.25: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಹಾಗೂ ವೃತ್ತಿಪರ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ, ಶೇ. 70 ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3 ಬಿ ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 8 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ https://bcwd.karnataka.gov.in, ದೂ.ಸಂಖ್ಯೆ: 0820-2574881, 2573881 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
