Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಪ್ರಾರಂಭವಾದ ದ್ವಿತೀಯ ವರ್ಷದಲ್ಲೇ, ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ. ಆಲ್‌ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ ಜಾಗೃತಿ ಕೆ.ಪಿ. 661 (99.7820068 ಪರ್ಸಂಟೈಲ್) ಅಂಕಗಳೊಂದಿಗೆ ಕೆಟೆಗರಿಯಲ್ಲಿ 23 ನೇ ರ‍್ಯಾಂಕ್‌, ಉದ್ಭವ್‌ ಎಂ.ಆರ್‌. 625 (99.1979284 ಪರ್ಸಂಟೈಲ್) ಅಂಕಗಳೊಂದಿಗೆ ಕೆಟೆಗರಿಯಲ್ಲಿ 72 ನೇ ರ‍್ಯಾಂಕ್‌ ಗಳಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ತನುಶ್ರೀ ಕೆ ಎನ್‌ 625(99.1979284 ಪರ್ಸಂಟೈಲ್) , ಶ್ರೇಯಸ್‌ ಎಸ್‌ ಚಿಕಾಲೇ 612 (98.8963973 ಪರ್ಸಂಟೈಲ್) , ಸಾತ್ವಿಕ್‌ ಎಸ್‌ ಶೆಟ್ಟಿ 609 (98.8114369 ಪರ್ಸಂಟೈಲ್) , ಚಂದನ ಹೆಚ್‌ ಎಂ 605 (98.7007725 ಪರ್ಸಂಟೈಲ್) , ಸಾಕ್ಷಿತ್‌ ಶೆಟ್ಟಿ 604 (98.6782079 ಪರ್ಸಂಟೈಲ್), ಸ್ವೀಕೃತಿ ಶೆಟ್ಟಿ 596 (98.4507475 ಪರ್ಸಂಟೈಲ್) , ಗೌರಿ ಸಿ ಸಂಕೊಲ್‌ 595 (98.4116519 ಪರ್ಸಂಟೈಲ್), ಮನೋಜ ಪಾಲನ್ಕರ್ 592 (98.3273783 ಪರ್ಸಂಟೈಲ್) ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಗಳಿಸಿದ ಕುಂದಾಪುರದ ಹರ್ಷಿತಳನ್ನು ದಾವಣೆಗೆರೆ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಕನ್ನಡ ಕೌಸ್ತುಭ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜುಲೈ 30 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಂಭ್ರಮದ ಸಮಾರಂಭದಲ್ಲಿ ಹರ್ಷಿತಳನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ತಿಳಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಗಳಿಸಿದವರಿಗೆ ಕಲಾ ಕುಂಚ ಗೌರವಿಸುತ್ತದೆ. ಕು. ಹರ್ಷಿತ ಇವರು ದಿ. ಲೋಕೇಶ್ ರಾವ್ ಹಾಗೂ ಕುಂದಾಪುರದ ಸಿನಿಯರ್ ಸಿವಿಲ್ ಜಡ್ಜ್ನ ಶೀಘ್ರ ಲಿಪಿಗಾರರಾದ ಸುನಂದಾ ಶೆಟ್ಟಿಗಾರ ದಂಪತಿಯ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಲೇಜು ವಿದ್ಯಾರ್ಥಿಗಳು ಹರೆಯವು ಅಲ್ಲದ ವಯಸ್ಕರು ಅಲ್ಲದ ವಯಸ್ಸಿನಲ್ಲಿ ಬರುವಂತಹ ಸಮಸ್ಯೆ ಮತ್ತು ಸೋಲುಗಳನ್ನು ಎದುರಿಸಲು ತಮಗೆ ತಾವೇ ತಯಾರಾಗಬೇಕು. ಅವಕಾಶಗಳು ಎಲ್ಲರಿಗೂ ಇದ್ದೆ ಇದೆ ಎಂಬುದರಲ್ಲಿ ನಂಬಿಕೆ ಇಡಬೇಕು ಎಂದು ಉಡುಪಿಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿ ಕರೆ ನೀಡಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವಯಸ್ಸಿನಲ್ಲಿ ಆತ್ಮವಿಶ್ವಾಸದ ಕೊರತೆ, ಕೀಳರಿಮೆ, ನಕಾರಾತ್ಮಕ ನೆಲೆಯ ಮೌಲ್ಯಮಾಪನ, ಸಾಮಾಜಿಕ ಆತಂಕ ಇವೆಲ್ಲ ಸಮಸ್ಯೆಗಳು ಕಾಡುತ್ತವೆ. ಅದರಿಂದ ಹೊರಬರಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಆದರೆ ನಿಮ್ಮ ಬದುಕು ಚೆನ್ನಾಗಿ ಇರಬೇಕಾದರೆ ಈ ಸಮಸ್ಯೆ ಗಳಿಂದ ಹೊರಗೆ ಬರಲೇಬೇಕು. ಹೊರಗೆ ಬರಲು ದಾರಿಗಳು ಸಹ ನಮ್ಮೊಳಗೆ ಅಡಗಿರುತ್ತದೆ. ನಿಮ್ಮ ಸಮಸ್ಯೆಗಳ ಕುರಿತು ಸ್ನೇಹಿತರು, ಗುರುಗಳು ಅಥವಾ ಯಾರಾದರೂ ಆತ್ಮೀಯರಲ್ಲಿ ಹಂಚಿಕೊಳ್ಳಿ. ಅಲ್ಲದಿದ್ದರೆ ಮನೋವೈದ್ಯರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ, ಎಲ್ಲವುಗಳಿಗಿಂತ ಆತ್ಮ ಜಾಗೃತಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೇಸಿಐ ಜೋಡುಮಾರ್ಗ ನೇತ್ರಾವತಿ ಆತಿಥ್ಯದಲ್ಲಿ ಭಾನುವಾರ ನಡೆದ ಜೇಸಿಐ ವಲಯ 15ರ ಮಧ್ಯಂತರ ಸಮ್ಮೇಳನ ನಿಲುಮೆ 2023 ರಲ್ಲಿ ಜೇಸಿಐ ಬೈಂದೂರು ಸಿಟಿ ಅತ್ಯುತ್ತಮ ಘಟಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅತ್ಯುತ್ತಮ ಘಟಕ ಅಧ್ಯಕ್ಷ ರನ್ನರ್ ಪ್ರಶಸ್ತಿ, ಓಟ್ ಸ್ಯಾಂಡಿಂಗ್ ಜೇಸಿಐ ಬೈಂದೂರು ಸಿಟಿ ರನ್ನರ್ ಪ್ರಶಸ್ತಿ, ಗೋಲ್ಡನ್ ಲೋ ಪುರಸ್ಕಾರ, ಯುವ ದಿನಾಚರಣೆ ಸಂಭ್ರಮಾಚರಣೆ ಮನ್ನಣೆ, ಪರ್ಮನೆಂಟ್ ಪ್ರಾಜೆಕ್ಟ್ ಕಾರ್ಯಕ್ರಮಕ್ಕಾಗಿ ಮನ್ನಣೆ, ಯುಗಾದಿ ಸಂಭ್ರಮ ಆಚರಣೆ ಮನ್ನಣೆ, ಗಣರಾಜ್ಯೋತ್ಸವ ಸಂಭ್ರಮ ಮನ್ನಣೆ, ರಜತ ಪುರಸ್ಕಾರ ಪ್ರಶಸ್ತಿ, ಚಿತ್ರ ಪ್ರದರ್ಶನ ಪ್ರಶಸ್ತಿ ಇನ್ನೀತರ ಹವಲು ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ. ವಲಯಾಧ್ಯಕ್ಷ ಜೇಸಿ ಪುರುಪೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷ ಅಭಿಲಾಷ್ ಬಿ.ಎ ಪ್ರಶಸ್ತಿಗಳನ್ನು ವಿತರಿಸಿದ್ದರು. ಜೇಸಿಐ ಬೈಂದೂರು ಸಿಟಿ ಅಧ್ಯಕ್ಷ ಕೆ. ನರೇಂದ್ರ ಶೇಟ್, ಸ್ಥಾಪಕಾಧ್ಯಕ್ಷ ಮಣಿಕಂಠ ಎಸ್ ದೇವಾಡಿಗ, ಜೇಸಿರೆಟ್ ಅಧ್ಯಕ್ಷೆ ಗುಲಾಬಿ ಮರವಂತೆ, ಜ್ಯೂನಿಯರ್ ಜೇಸಿ ಅಧ್ಯಕ್ಷ ಹರ್ಷಿತ್ ಎನ್ ಶೇಟ್, ಸ್ಥಾಪಕ ಸದಸ್ಯ ರಾಘವೇಂದ್ರ ಹೊಳ್ಳ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕತಾರ್: ಇತ್ತೀಚಿಗೆ ಡಿ.ಪಿ.ಎಸ್ ಸಭಾಂಗಣ ಏರ್ಪಡಿಸಲಾಗಿದ್ದ “ಬಿಲ್ಲವೋತ್ಸವ-2023” ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಸನ್ಮಾನಿಸಲಾಯಿತು. ಕತಾರ್ ದೇಶದಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುತ್ತ, ಕರ್ನಾಟಕ ಸಂಘ ಕತಾರ್ ಸದಸ್ಯತ್ವವನ್ನು ದಾಖಲೆಯ ಸಂಖೆಗೆ ಹೆಚ್ಚಿಸಿದ ಹೆಮ್ಮೆಗೆ, ಕನ್ನಡ ಚಲನಚಿತ್ರಗಳನ್ನು ಕತಾರ್ ನಲ್ಲಿ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿಕೊಡುವುದಕ್ಕೆ, ಪರಿಸರ ಪರ ಜಾಗೃತಿಗೆ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಸುಪ್ರಸಿದ್ದಗೊಳಿಸಿರುವರು, ಕರೋನ ಮಹಾಮರಿಯ ತಾಂದವದ ಕಾಲದಲ್ಲಿ ‘ಒಂದೇ ಭಾರತ್’ ವಿಶೇಷ ವಿಮಾನ ಸೇವೆಯಲ್ಲಿ ಅವಶ್ಯಕತೆಯಿರುವ ಭಾರತೀಯರನ್ನು ಕತಾರಿನಿಂದ ಮಾತೃ ಭೂಮಿಗೆ ಹಿಂದಿರುಗಲು ಸಹಾಯ ಮಾಡಿರುವುದಕ್ಕೆ ಒಂದು ಕಿರುಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕತಾರ್ ಬಿಲ್ಲವಾಸ್ ಸಂಘದ ಅಧ್ಯಕ್ಷರಾದ ರಘುನಾಥ ಅಂಚನ್, ಉಪಾಧ್ಯಕ್ಷರಾದ ಅಮಿತ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾದ ಸೀಮಾ ಪೂಜಾರಿ, ಬಹರೈನ್ ಬಿಲ್ಲವಾಸ್ ಸಂಘದ ಪ್ರಧಾನ ಕಾರ್ಯದರ್ಶಿ ರೂಪೇಶ್ ಶಾಲಿಯನ್, ಬಹರೈನ್ ಬಿಲ್ಲವಾಸ್ ಸಂಘದ ಪೂರ್ವಾಧ್ಯಕ್ಷರಾದ ಅಜಿತ್ ಬಂಗೇರಾ , ಚಲನಚಿತ್ರ ನಟ ಪೃಥ್ವಿ ಅಂಬಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ 8ನೇ ತರಗತಿಯಿಂದ ಪದವಿ ತನಕ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದಾರ್ಥಿಗಳಿಗೆ ವಿದ್ಯಾನಿಧಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ಜರುಗಿತು. ಉಡುಪಿ ಜಿಲ್ಲಾ ಶ್ರೀಮದ್ಭಗವದ್ದೀತಾ ಜಯಂತಿ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್ ವಿದ್ಯಾನಿಧಿ ವಿತರಿಸಿ ಮಾತನಾಡಿ ಕೆಲವು ವರ್ಷಗಳ ಹಿಂದೆ ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದ ಗ್ರಾಮದಲ್ಲಿ ಶ್ರೀ ರಾಮಕೃಷ್ಣ ಕುಟೀರದ ಮೂಲಕ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ವ್ಯಾಸಂಗವನ್ನೂ ಪೂರೈಸಿರುವುದು ಗಮನಾರ್ಹ ಸಾಧನೆ. ಸ್ವಾಮಿ ಸತ್ಯಸ್ವರೂಪಾನಂದರ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಿದೆ. ವಿದ್ಯಾರ್ಥಿ ವೇತನ ಪಡೆದು ಉತ್ತಮ ಶಿಕ್ಷಣ ಉದ್ಯೋಗ ಪಡೆದುಕೊಳ್ಳುವುದರ ಜತೆಗೆ ಇತರರಿಗೂ ಸಹಕಾರ ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಳೆದ 22 ವರ್ಷಗಳಿಂದಲೂ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಜಿಲ್ಲೆಯ ಮೂವರು ಶಾಸಕರು ಉಡುಪಿಯ ಸರಕಾರಿ ಅತಿಥಿ ಗೃಹದಲ್ಲಿ ಭೇಟಿ ಮಾಡಿ, ಜಿಲ್ಲೆಯ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರು ಒಟ್ಟಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಬೆಂಗಳೂರಿನಲ್ಲಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನ ಬೆಂಗಳೂರಿನಲ್ಲಿ ಭೇಟಿ ಮಾಡಿ ಶುಭಕೋರಿದರು. ಈ ವೇಳೆ ಅವರು ಬೈಂದೂರು ತಾಲೂಕಿನಲ್ಲಿ ಕಡಲ ಕೊರೆತದಿಂದ ಉಂಟಾದ ಪ್ರದೇಶಗಳಲ್ಲಿ ಹಾನಿಯ ಬಗ್ಗೆ ಚರ್ಚಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ಕೂಡಲೇ ಸೂಕ್ತ ಕ್ರಮಕೈಕೊಳ್ಳುವಂತೆ ಹಾಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆ ಸಿ ಐ ಉಪ್ಪುಂದದ ವತಿಯಿಂದ ಶೂನ್ಯ ಶಿಕ್ಷಕರನ್ನು ಹೊಂದಿರುವಂತಹ ಅತಿ ಹಿಂದುಳಿದ ಪ್ರದೇಶದಲ್ಲಿರುವ ಹಳ್ಳಿಬೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ರಿಷಾ ಡಯಾಗ್ನೋಸ್ಟಿಕ್ ಸೆಂಟರ್ ಮಾಲಕರಾದ ರಮೇಶ್ ಜೋಗಿ ಅವರು ಪುಸ್ತಕ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿ ತೀರಾ ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತ ಇಂತಹ ಶಾಲೆಗೆ 50 ಕಿಲೋಮೀಟರ್ ದೂರದಿಂದ ಆಗಮಿಸಿ ಪುಸ್ತಕ ನೀಡುತ್ತಿರುವಂತಹದ್ದು ನಮಗೆ ತೃಪ್ತಿ ತಂದಿದೆ. ಯಾರಿಗೆ ತೀರ ಅಗತ್ಯವಿದೆ ಅಂತಹವರಿಗೆ ಕೊಡಬೇಕು ಅನ್ನುವ ಜೆ ಸಿ ಐ ಉಪ್ಪುಂದದ ತತ್ವವನ್ನು ಇಲ್ಲಿ ಪಾಲಿಸಿದ್ದೀವಿ ಎಂದು ಹೇಳಿದರು ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದದ ಅಧ್ಯಕ್ಷರಾದಂತಹ ಜೆಸಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು ಜೆ ಸಿ ಐ ಉಪ್ಪುಂದದ ಪೂರ್ವಾಧ್ಯಕ್ಷರಾದಂತಹ ಜೆಸಿ ಪ್ರಕಾಶ್ ಭಟ್, ಜೆ ಸಿ ಶ್ರೀಗಣೇಶ್ ಗಾಣಿಗ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜೂ.11: ಶಕ್ತಿ ಯೋಜನೆ ಮಹಿಳೆಯರ ಸ್ವಾವಲಂಬನೆಗೆ ಹೆಚ್ಚು ಅನುಕೂಲವಾಗಲಿದ್ದು, ವಿದ್ಯಾರ್ಥಿನಿಯರು ಸಹಿತವಾಗಿ ಮಹಿಳೆಯರು ಇದರ ಅನುಕೂಲ ಪಡೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಅವರು ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಆರಂಭಿಸಿರುವ ರಾಜ್ಯ ಸರಕಾರದ ಶಕ್ತಿ ಯೋಜನೆಗೆ ಉಡುಪಿಯ ಕೆಎಸ್ಆರ್ಟಿಸಿ ಡಾ. ವಿ.ಎಸ್. ಆಚಾರ್ಯ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದರು. ಇನ್ನು ರಾಜ್ಯದಲ್ಲಿ 20,000 ಕ್ಕೂ ಅಧಿಕ ಸರ್ಕಾರಿ ಬಸ್ ಗಳಿದ್ದು ಅವುಗಳಲ್ಲಿ 18609 ಬಸ್ ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ದೊರೆಯಲಿದ್ದು, ರಾಜ್ಯದ ಒಟ್ಟು ಸರ್ಕಾರಿ ಬಸ್ಗಳಲ್ಲಿನ ಶೇ.95 ಬಸ್ ಗಳಲ್ಲಿ ಪ್ರತಿ ದಿನ 41.8 ಲಕ್ಷ ಮಹಿಳೆಯರು ತಮ್ಮ ಪ್ರತಿದಿನದ ದೈನಂದಿನ ದುಡಿಮೆ ಮತ್ತಿತರ ಕಾರ್ಯಗಳಿಗೆ ಬಸ್ಗಳಲ್ಲಿ ಸಂಚರಿಸಲಿದ್ದು, ಈ ಉಚಿತ ಪ್ರಯಾಣವು ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬಿ ಜೀವನಕ್ಕೆ ನೆರವಾಗಲಿದೆ. ಈ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕ 4051 ಕೋಟಿ…

Read More