ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ ಇಷ್ಟದ ದೇವರ ಪಟ, ಮೂರ್ತಿಯ ಮುಂದೆ ಪ್ರಾರ್ಥನೆ ಸಲ್ಲಿಸೋದು ಸಹಜ. ದೀಪದ ಹಣತೆಯೇ ದೇವಾನುದೇವತೆಗಳ ನವನವೀನ ಅವತಾರಗಳೊಂದಿಗೆ ಸಂಯೋಜಿತಗೊಂಡರೆ? ಅಂಥ ಹಣತೆಯ ಒಳಗೇ ಮಾಡರ್ನ್ ಗತ್ತಿನ ದೇವರ ಚಿತ್ರಗಳು ಕಾಣಿಸಿಕೊಂಡರೆ? ಒಮ್ಮೆ ಹಚ್ಚಿದ ಹಣತೆ ಯಾವುದೇ ಕಾರಣಕ್ಕೂ ನಂದದ ಹಾಗೆ ದೀಪದ ಪ್ರಭೆ ಹರಡಿದರೆ? ಹಾಗಾದರೆ ನೋಡುಗರಿಗೆ ವಿನೂತನ ಬಗೆಯ ದೀಪವನ್ನು ಸಾಕ್ಷೀಕರಿಸಿಕೊಂಡ ಅವಕಾಶ ಲಭ್ಯವಾಗುತ್ತದೆ. ಹೊಸದೊಂದು ಅವತಾರಗಳೊಂದಿಗಿನ ದೇವ-ದೇವತೆಗಳ ಮೂರ್ತಿಗಳ ಮುಂದೆ ಹಣತೆ ಹಚ್ಚಿ ಪ್ರಾರ್ಥನೆ ಸಲ್ಲಿಸುವ ವಿನೂತನ ಬಗೆ ಆವಿಷ್ಕಾರಗೊಳ್ಳುತ್ತದೆ. ಇಂಥದ್ದೊಂದು ಆರಾಧನಾ ಟ್ರೆಂಡ್ನ್ನು ಆರಂಭಿಸುವುದಕ್ಕೆ ಬೇಕಾದ ಒತ್ತಾಸೆ ಮೂಡಿಸಿದೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕಲಾಮೇಳ. ಇದಕ್ಕೆ ಕಾರಣವಾಗಿರೋದು ವಿವಿಧ ರೂಪಗಳ ಮ್ಯಾಜಿಕ್ ದೀಪದ ತರಹೇವಾರಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಭರಾಟೆ. ಇಲ್ಲಿ ಮಾರಾಟಕ್ಕೆ ಲಭ್ಯವಿರುವ ವಿವಿಧ ಬಗೆಯ ಮಣ್ಣಿನ ದೀಪಗಳು ಆರಾಧನೆಯ ಕ್ರಮವನ್ನು ಇನ್ನಷ್ಟು ವಿನೂತನವಾಗಿಸುವ ರೀತಿಯಲ್ಲಿವೆ. ಮನೆಯಲ್ಲೇ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಜನ. ಪ್ರತಿಯೊಬ್ಬರು ಕಾಯುತ್ತಿದದ್ದೂ ಏಕ ವ್ಯಕ್ತಿಗೆ. ಸ್ವಯಂ ಸಂಭಾ?ಣೆಯಲ್ಲಿ ಬ್ಯುಸಿಯಾಗಿದ್ದ ಪ್ರತಿಯೊಬ್ಬರು ಇವರು ವೇದಿಕೆ ಬರುತಿದಂತೆ ತಥ್ ಕ್ಷಣ ಒಟ್ಟಾಗಿ ಹೋ ಹೋ ಎಂದು ದನಿಗೂಡಿಸಿದ್ದು, ವ್ಯಕ್ತಿಗೋ ವ್ಯಕ್ತಿತ್ವಕ್ಕೋ ತಿಳಿಯಲಿಲ್ಲ. ಇದು ಜಾಂಬೂರಿ ನಾಲ್ಕನೇ ದಿನ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ವಿಜಯ ಪ್ರಕಾಶ ಮತ್ತು ಬಳಗ ನೀಡಿದ ಸಂಗೀತ ರಸದೌತಣ ಕಾರ್ಯಕ್ರಮದಲ್ಲಿ ಕಂಡು ಬಂದ ಅಭೂತಪೂರ್ವ ದೃಶ್ಯ. ಕಾರ್ಯಕ್ರಮದ ಪ್ರಾರಂಭದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ರೈತಗೀತೆಯಾದ ಆದ ಉಳುವಾ ಯೋಗಿಯ ನೋಡಲ್ಲಿ ಎಂಬ ಗಾಯನಕ್ಕೆ ದನಿ ಆದರೇ ಇನ್ನೊಂದೆಡೆ ವೇದಿಕೆ ಮುಂಭಾಗದಲ್ಲಿದ ಪುಣಾಣಿಗಳು ಪೂರ್ಣ ಹಾಡು ಮುಗಿಯುವವರೆಗೂ ಹಚ್ಚ ಹಸಿರಿನ ಬಾವುಟ ಹಿಡಿದು ಗೌರವ ಸೂಚಿಸಿದರು. ಇದು ಪ್ರತಿಯೊಬ್ಬ ಭಾರತೀಯನಿಗೂ ರೋಮಾಂಚಕಾರಿ ಕ್ಷಣವಾಗಿದ್ದಂತು ಸತ್ಯ. ಇವೆಲ್ಲವನ್ನು ಖುಷಿಯಿಂದ ಆಸ್ವಾಧಿಸುತ್ತಿದ್ದ ಜನರು ಕಾತುರದಿಂದ ಕಾಯುತ್ತ ಹವಣಿಸುತ್ತಿದಿದ್ದು ಕಂಚಿನ ಕಂಟದ ವಿಜಯ ಪ್ರಕಾಶ್ ಸಂಗೀತಕ್ಕೆ. ವೇದಿಕೆಗೆ ಆಗಮಿಸಿ ನೆರೆದಿದ್ದ ಜನೋಸ್ತಮವನ್ನು ನೋಡುತ್ತಿದಂತೆ ವಿಜಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಸಕ್ತಿಯಿದ್ದರೆ ಯಾವುದೂ ಕಷ್ಟವಲ್ಲ. ಯಾರ ಮಾರ್ಗದರ್ಶನವೂ ಇಲ್ಲದೇ, ಸ್ವತಃ ತಾವೇ ಕರಕುಶಲ ಕಲೆಯನ್ನು ಕಲಿತು, ಅದನ್ನೇ ಉದ್ಯಮವನ್ನಾಗಿ ನಡೆಸಿಕೊಂಡು ಬರುತ್ತಿರುವ ಜೊತೆಗೆ ತಮಗೆ ತಿಳಿದ ವಿದ್ಯೆಯನ್ನು ಆಸಕ್ತರಿಗೂ ಕಲಿಸುವ ಮೂಲಕ ಔದಾರ್ಯ ಮೆರೆಯುತ್ತಲೇ ಬಂದಿದ್ದಾರೆ ಈ ಕಲಾವಿದ. ತಮ್ಮ ವಿಶೇಷ ಪ್ರತಿಭೆಯ ಮೂಲಕ ತಮ್ಮನ್ನು ಗುರುತಿಸಿಕೊಂಡ ದವಲಪ್ಪ ಟಿ. ಸಾತಪುತೆ ಅವರು ಕಸದಿಂದ ರಸ ಪರಿಕಲ್ಪನೆಯಲ್ಲಿ ತಮ್ಮ ಹೊಲದಲ್ಲಿ ಸಿಗುವ ಜೊಂಡು ಹುಲ್ಲುಗಳು, ಜೋಳದ ಒಣ ಸಿಪ್ಪೆಗಳು ಮತ್ತು ಚರ್ಮಗಳನ್ನು ಬಳಸಿಕೊಂಡು ಕ್ರಿಯಾತ್ಮಕವಾಗಿ ಉತ್ಪನ್ನಗಳನ್ನು ತಯಾರಿಸುತ್ತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಈ ಕಲೆಯ ಪರಿಚಯ ಮಾಡಿಕೊಡುತ್ತಿದ್ದಾರೆ. ಆಳ್ವಾಸ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯ ಕಲಾ ಮೇಳದಲ್ಲಿ ಕರಕುಶಲ ಕಲೆಯ ವಿಶೇಷ ಉಚಿತ ತರಬೇತಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಒಣ ಹುಲ್ಲಿನಿಂದ ತರಹೇವಾರಿ ಬಾಸ್ಕೆಟ್ಗಳು, ಟೀಕೋಸ್ಟರ್ಸ್, ಹೋಮ್ ಡೆಕೋರೇಟರ್ಸ್, ಲಾಂಡ್ರೀ ಬಾಸ್ಕೆಟ್, ವೆನೆಟೀ ಬ್ಯಾಗ್ಗಳು ಮತ್ತು ಪರ್ಸ್ಗಳು ತಯಾರಾಗಿವೆ. ಚರ್ಮದಿಂದ ತಯಾರಿಸಿದ ಪರ್ಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಬೃಹದಾಕಾರದ ವೇದಿಕೆ, ಅಲ್ಲಿ ಹಾರ್ಮೋನಿಯಂ ಸ್ವರನಾದ, ತಬಲದ ಬೀಟ್ಸ್ಗೆ ತಲೆತೂಗುವ ಕಲಾಪ್ರೇಮಿಗಳು, ಇನ್ನೊಂದೆಡೆ, ಹಾರ್ಮೋನಿಯಂನಲ್ಲಿ ನುಡಿಸುವ ಸದ್ದನ್ನು ಕೇವಲ ಆಲಿಸಿಕೊಂಡೇ ಭೂಪ ರಾಗದ ‘ಸರೆ ಗಪ’ ಎಂದು ಥಟ್ ಅಂತ ಗುರುತಿಸುವ ಮುಗ್ಧ ಯುವ ಮನಸ್ಸುಗಳು. ಈ ದೃಶ್ಯ ಕಂಡುಬಂದಿದ್ದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ‘ನುಡಿಸಿರಿ’ ವೇದಿಕೆಯಲ್ಲಿ. ಸಾಮಾನ್ಯವಾಗಿ ಅಂಧರಿಗೆ ಸೂಕ್ಷ್ಮವಾಗಿ ಗ್ರಹಿಸುವ ಸಾಮರ್ಥ್ಯ ಇರುತ್ತದೆ. ಕೇವಲ ಆಲಿಸುವಿಕೆಯಿಂದಲೇ ಸಂಗೀತದ ಸಂಪೂರ್ಣ ಮಾಹಿತಿ ಹೇಳುವ ಇಬ್ಬರು ಪ್ರತಿಭಾನ್ವಿತರು ಜಾಂಬೂರಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೂಲತಃ ಬಿಜಾಪುರ ಮತ್ತು ತುಮಕೂರಿನ ವಿಜಯ್ ಕುಮಾರ್ ಮತ್ತು ಪೂರ್ಣಚಂದ್ರ ಹುಟ್ಟಿನಿಂದಲೇ ಅಂಧರು. ದೈಹಿಕ ನ್ಯೂನ್ಯತೆಯನ್ನು ಮೀರಿ ಸಂಗೀತದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಯಾವುದೇ ಸಂಗೀತ ಕಾರ್ಯಕ್ರಮವಿದ್ದರೂ ಬಲು ಉತ್ಸುಕರಾಗಿ ಸಂಗೀತ ಆಲಿಸುವುದಕ್ಕೆ ತೆರಳುತ್ತಾರೆ. ಇವರ ವೈಶಿಷ್ಟ್ಯವೆಂದರೆ ಯಾವುದೇ ಸಂಗೀತ ವಾದನದ ಸ್ವರ ಕೇಳಿದರೂ ಯಥಾವತ್ತಾಗಿ ಇದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಭಾರತ್ ಸೌಟ್ಸ್-ಗೈಡ್ಸ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕಲಾ ಮೇಳದಲ್ಲಿ ಪ್ರದರ್ಶಿಸಲಾದ ಬೃಹತ್ ಗಾಳಿಪಟ ಗಮನಸೆಳೆಯುತ್ತಿದೆ. ಟೀಂ ಮಂಗಳೂರು ಚಿತ್ರಕಲಾವಿದ ದಿನೇಶ್ ಹೊಳ್ಳ ಅವರ ವಿನ್ಯಾಸ ಹಾಗೂ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡ 54 ಅಡಿ ಉದ್ದ 16 ಅಡಿ ಅಗಲದ ವಿಶೇಷ ಗಾಳಿಪಟ ಇದಾಗಿದೆ. ಗಾಳಿಪಟವು ಬೃಹತ್ ಗಾತ್ರವಷ್ಟೇ ಅಲ್ಲದೇ ಅದರ ಪ್ರತಿ ಅಂಚಿನಲ್ಲೂ ತುಳುನಾಡಿನ ಸಂಸ್ಕೃತಿಯನ್ನು ಚಿತ್ರಿಸಲಾಗಿದೆ. ಭೂತಾರಾಧನೆ, ಕಂಬಳ, ಪೀಲಿವೇ?, ನಾಗರಾಧನೆ, ಕರಾವಳಿ ಕಿನಾರೆ, ಮೀನುಗಾರಿಕೆ ಹೀಗೆ ತುಳುನಾಡಿನ ನೂರಾರು ಸಂಸ್ಕೃತಿಯನ್ನು ಚಿತ್ರಿಸಿ ಒದರನಂತರ ಇನ್ನೊಂದನ್ನು ಪೋಣಿಸಲಾಗಿದೆ. ಬಣ್ಣಗಳ ಆಯ್ಕೆ ಅಭೂತಪೂರ್ವವಾಗಿ ಒದಕ್ಕೊಂದು ಅಚ್ಚುಕಟ್ಟಾಗಿ ಹೊಂದಾಣಿಕೆ ಮಾಡಲಾಗಿದೆ. ಟೀಂ ಮಂಗಳೂರು ಈ ಹಿಂದೆ ೩೬ ಅಡಿ ಎತ್ತರದ ಗಾಳಿಪಟವನ್ನು ನಿರ್ಮಿಸಿ ದಾಖಲೆ ನಿರ್ಮಿಸಿದ್ದರು. ಈಗ 50 ಅಡಿ ಗಾಳಿ ಪಟ ನಿರ್ಮಿಸಿ ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ. ಈ ಗಾಳಿಪಟವನ್ನು ಕೊಡೆ ತಯಾರಿಸಲು ಬಳಸುವ ನೈಲಾನ್ ಬಟ್ಟೆಯಿಂದ ನಿರ್ಮಿಸಲಾಗಿದ್ದು, ಕೆಲವು ವ?ಗಳ ಕಾಲ ಇದನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸ್ಕೌಟಿಂಗ್ ಯುವಕರಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಶಕ್ತಿ, ಸೃಜನಶೀಲತೆ ಮತ್ತು ಮೌಲ್ಯಗಳ ಅಗಾಧ ಮೂಲವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ಡಾ. ವಿನಯ್ ಆಳ್ವ ಹೇಳಿದರು. ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಯುವ ವೇದಿಕೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಯುವ ವೇದಿಕೆಯ ಮೂಲಕ, ಯುವಜನರು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ರೋವರ್ಸ್ ಮತ್ತು ರೇಂಜರ್ಗಳು ಸಾಂಸ್ಕೃತಿಕ ಪರಂಪರೆ ಮತ್ತು ಸ್ಕೌಟ್ ಮೂವ್ಮೆಂಟ್ನ ತಿಳುವಳಿಕೆಯನ್ನು ಪ್ರೋತ್ಸಾಹಿಸಲು ಇಂಟರ್ನ್ಯಾಷನಲ್ ಕಲ್ಚರಲ್ ಯೂತ್ ಫೋರಮ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸೌಟ್ಸ್-ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂದಿಯಾ, ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಯುವ ವೇದಿಕೆಯು ಯುವಜನರಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಐಕಮತ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿವಿಧ ದೇಶಗಳು, ಸಂಪ್ರದಾಯಗಳು ಮತ್ತು ಜೀವನ ವಿಧಾನಗಳ ವಿಭಿನ್ನ ಆಲೋಚನೆಗಳು ಮತ್ತು ಮೌಲ್ಯಗಳನ್ನು…
ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಂಸ್ಕೃತಿಯ ಜಂಬೂರಿಯ ಕಲಾ ಪ್ರದರ್ಶನದಲ್ಲಿ ಗೊಂಡೋ ಆರ್ಟ್ ಪ್ರಕಾರದ ಪರಿಸರಸ್ನೇಹಿ ಚಿತ್ರಗಳು ಗಮನ ಸೆಳೆಯುತ್ತಿವೆ. ಆದಿವಾಸಿ ಕೌಟುಂಬಿಕ ಹಿನ್ನೆಲೆಯ ಕಲಾವಿದರು ಪ್ರಕೃತಿಯನ್ನು ಆರಾಧಿಸುತ್ತಾರೆ. ಪ್ರಕೃತಿಯೇ ಇವರಿಗೆ ದೇವರು. ಪ್ರಕೃತಿಯನ್ನು ಭಕ್ತಿಭಾವದಿಂದ ನೋಡುವ ಇವರ ದೃಷ್ಟಿಕೋನ ಆಧರಿಸಿ ರೂಪಿತವಾಗುವ ಚಿತ್ರಕಲಾ ಕೌಶಲ್ಯವೇ ಗೊಂಡೋ ಆರ್ಟ್. ಈ ಪ್ರಕಾರದ ಕಲಾತ್ಮಕ ಚಿತ್ರಗಳು ಕಲಾಪ್ರದರ್ಶನದಲ್ಲಿ ಆಕರ್ಷಿಸುತ್ತಿವೆ. ಗೊಂಡೋ ಆರ್ಟ್ ಮೂಲತಃ ಮಧ್ಯಪ್ರದೇಶದ ಆದಿವಾಸಿಗಳ ಪರಂಪರೆಯ ಭಾಗವಾಗಿ ಬೆಳೆದು ಬಂದ ಕಲೆ. ಪ್ರಕೃತಿ ಆಧಾರಿತ ಚಿತ್ರಗಳಾದ ಸೂರ್ಯ, ಚಂದ್ರ, ಮೈದುಂಬಿ ಹರಿಯುವ ಜಲಪಾತ, ಗಿರಿ ಶಿಖರಗಳ ಸೌಂದರ್ಯ, ಪ್ರಾಣಿ-ಪಕ್ಷಿ, ಹುಳ ಹುಪ್ಪಟೆಗಳ ಸೂಕ್ಷ್ಮ ಕಲಾಚಿತ್ರವನ್ನು ನೈಸರ್ಗಿಕ ಬಣ್ಣಗಳಿಂದಲೆ ಬಿಡಿಸಿರುವುದು ಬಹಳ ವಿಶೇ?ವಾಗಿದೆ. ಅಪರೂಪದಲ್ಲಿ ಅಪರೂಪವಾದ ಈ ಕಲೆಯನ್ನು ಬುಡಕಟ್ಟು ಜನಾಂಗದ ಪ್ರತಿನಿಧಿಗಳು ವಿಶೇಷ ಉತ್ಸವಗಳಲ್ಲಿ ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದ್ದಾರೆ. ಪ್ರಕೃತಿಯನ್ನೆ ಆರಾಧ್ಯ ದೈವವಾಗಿ ನಂಬಿಕೊಂಡಿರುವ ಇವರು ತಮ್ಮ ಕಲೆಯಲ್ಲೂ ಅದನ್ನೇ ಪ್ರತಿಬಿಂಬಿಸಿ, ಪರಿಸರ ಪರವಾದ…
ರಕ್ಷಾ ಕೋಟ್ಯಾನ್ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಕಸವಾಗಿ ಹೋಗಬೇಕಿದ್ದ ವಸ್ತುಗಳಿಲ್ಲಿ ಸುಂದರ ಕಲಾಕೃತಿಗಳಾಗಿವೆ. ಕೃಷಿ ತ್ಯಾಜ್ಯಗಳಿಗೆ ಹೊಸ ರೂಪ ಕೊಟ್ಟು ಸಿದ್ಧಪಡಿಸಿದ ಕೃಷಿ ಕ್ರಾಫ್ಟ್ಗಳು ಕಲಾಸಕ್ತರ ಗಮನ ಸೆಳೆಯುತ್ತಿದೆ. ಜಾಂಬೂರಿಯಲ್ಲಿ ಮೂಡಬಿದಿರೆಯ ಯಶೋಧಾ ಪ್ರಭಾಕರ್ ಅವರು ತಯಾರಿಸಿರುವ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿವೆ. ಗೃಹಿಣಿ ಯಶೋಧಾ ಪ್ರಭಾಕರ್ ಅವರು ತಮ್ಮ ತೋಟದ ಅಡಿಕೆ ಸಿಪ್ಪೆ, ತೆಂಗಿನ ಗರಿ ಹಾಗೂ ಕಡ್ಡಿಗಳು, ಅಡಿಕೆ ಹಾಳೆಗಳನ್ನು ಬಳಸಿಕೊಂಡು ಸುಂದರವಾದ ಹೂವಿನ ವಿನ್ಯಾಸವನ್ನು ತಯಾರಿಸಿ ತಮ್ಮ ಕಲಾಕೃತಿಯ ಮೂಲಕ ಗಮನ ಸೆಳೆದಿದ್ದಾರೆ. ಕೃಷಿ ಕ್ರಾಫ್ಟ್ ಮಳಿಗೆಯಲ್ಲಿರುವ ಹೂವಿನ ವಿನ್ಯಾಸಗಳು, ವಾಲ್ ಹ್ಯಾಂಗಿಗ್ಸ್ಗಳು, ಕುಂಬಳಕಯಿ ಬೀಜ, ಸೌತೆಕಾಯಿ ಬೀಜಗಳನ್ನು ಒಣಗಿಸಿ ತಯಾರಿಸಿದ ಹೂವುಗಳು, ಅಡಿಕೆ ಹೂವಿನ (ಹಿಂಗಾರ) ಹಾಳೆಗಳು ಹಾಗೂ ಅಡಿಕೆ ತೊಟ್ಟಿನಿಂದ ತಯಾರಾದ ವಿಭಿನ್ನ ಬಗೆಯ ಮಾಲೆಗಳು, ಎಳೆ ತೆಂಗಿನ ಕಾಯಿಯ ಸಿಪ್ಪೆಯಿಂದ ಮೂಡಿಬಂದ ವಾಲ್ ಹ್ಯಾಂಗಿಗ್ಸ್, ಕೋಕೋ ಗಿಡದ ರೆಂಬೆಗಳಿಗೆ ಸಾಥ್ ನೀಡಿದ ಅಡಿಕೆ ಸಿಪ್ಪೆಯ ವಿನ್ಯಾಸಗಳಿಗೆ ಮನಸೋಲದವರಿಲ್ಲ. ಇವುಗಳಿಗೆ ಮರಳುಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಮಕ್ಕಳ ಸಂಬಂಧಿತ ಕಾರ್ಯಕ್ರಮಗಳು ಮಕ್ಕಳ ಭೌತಿಕ ವಿಕಸನಕ್ಕೆ ಸಹಕಾರಿಯಾಗಿದ್ದು ಕಾರಂತರ ಆಸಕ್ತಿಯಂತೆ ಮಕ್ಕಳಿಗಾಗಿ ವಿವಿಧ ವಿನೂತನ ಕಾರ್ಯಕ್ರಮಗಳ ಆಯೋಜನೆ, ಪುರಸ್ಕಾರಗಳು ಮಕ್ಕಳಲ್ಲಿನ ಹೊಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸುತ್ತದೆ ಈ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಥೀಮ್ ಪಾರ್ಕ್ ವೇದಿಕೆಯಾಗಿ ರೂಪುಗೊಳ್ಳುತ್ತಿರುವುದು ಸಂತಸದ ವಿಷಯ ಎಂದು ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರು ಹೇಳಿದರು. ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ ಕೋಟ ಇವರ ಆಶ್ರಯದಲ್ಲಿ ನಡೆದ ಕಾರಂತರ ಇಪ್ಪತ್ತೈದನೇ ಪುಣ್ಯ ಸ್ಮರಣೆ ಅಂಗವಾಗಿ ಮಕ್ಕಳ ಸಾಂಸ್ಕೃತಿಕ -ಸಾಹಿತ್ಯಿಕ ರಸಗವಳ ಅನೂಹ್ಯ-೨೦೨೨ (ನಾವೀನ್ಯದ ಗೌಜಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ, ರೈತಸಿರಿ ಹಾಗೂ ರೈತ ಸೇವಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಾಗೂರು ಶ್ರೀಕೃಷ್ಣಲಲಿತಾ ಕಲಾಮಂದಿರದಲ್ಲಿ ರೈತರ ದಿನಾಚರಣೆಯ ಅಂಗವಾಗಿ ಆಯೋಜಿಸಿದ 11ನೇ ವರ್ಷದ ರೈತರ ದಿನಾಚರಣೆ ಕಾರ್ಯಕ್ರಮ ಮತ್ತು ಕೃಷಿ ಪರಿಕರಗಳ ವಸ್ತುಪ್ರದರ್ಶನ ಉದ್ಘಾಟನೆಗೊಂಡಿತು. ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ರೈತರಿಗೂ ಸಹಕಾರಿ ಸಂಘಗಳಿಗೂ ನಿಟಕಟವಾದ ಸಂಬಂಧವಿದೆ. ವ್ಯವಸಾಯ ಎಂಬ ಸೇವೆಗೆ ಸಹಕಾರ ನೀಡುವಂತಹ ಸದುದ್ದೇಶದಿಂದ ಆರಂಭಿಸಲಾದ ಸಹಕಾರಿ ಸಂಸ್ಥೆಗಳು ಅವಿಭಜಿತ ದಕ ಜಿಲ್ಲೆಯಲ್ಲಿ ಅತ್ಯಂತ ಉನ್ನತ ಮಟ್ಟಕ್ಕೇರಿದೆ. ರೈತರಿಗೆ ಕೃಷಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು. ರೈತರ ದಿನಾಚರಣೆ ರೈತರು ಆಚರಿಕೊಳ್ಳುವ ಕಾರ್ಯಕ್ರಮವಲ್ಲ. ಬದಲಾಗಿ ಜವಾಬ್ದಾರಿಯುತ ಜನಪ್ರತಿನಿಧಿಗಳು ಮಾಡಬೇಕಾದ ಕಾರ್ಯವಾಗಿದೆ. ಆದರೆ ಇಂದಿನ ಕಾಲಘಟ್ಟದಲ್ಲಿ ಯಾರು ತಮ್ಮತನವನ್ನು ಎಲ್ಲಿ ಗುರುತಿಸಿಕೊಳ್ಳಬೇಕಿತ್ತೋ ಅಲ್ಲಿ ಗುರುತಿಸಿಕೊಳ್ಳದೇ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ವಿಷಾದನೀಯ. ರೈತರ ಹೆಸರಿನಲ್ಲಿ ಪ್ರಮಾಣ…
