ಕುಂದಾಪ್ರ ಡಾಟ್ ಕಾಂ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕೂಸಳ್ಳಿ ಫಾಲ್ಸ್ನಲ್ಲಿ ಶುಕ್ರವಾರ ಸಂಜೆ ಈಜುವ ಸಂದರ್ಭ ಮುಳುಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೃತದೇಹ ಶನಿವಾರ ಪತ್ತೆಯಾಗಿದೆ. ಮೃತ ವಿದ್ಯಾರ್ಥಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.ಐ ಕುಮಾರ ಶೆಟ್ಟಿ ಎಂಬುವರ ಮಗ ಚಿರಾಂತ್ ಶೆಟ್ಟಿ (20) ಎಂದು ತಿಳಿದುಬಂದಿದೆ. ಈತ ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಜೊತೆಗೆ ಏವಿಯೇಷನ್ ಕೋರ್ಸ್ ಕಲಿಯುತ್ತಿದ್ದ. ಶುಕ್ರವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತರಾದ ಕಿರ್ತನ್ ದೇವಾಡಿಗ, ಅಕ್ಷಯ್ ಆಚಾರಿ, ಆಲ್ವಿನ್, ಧರಣ್, ರೆಯಾನ್ ಜೊತೆಗೆ ಗುರುವಾರ ಬೈಂದೂರಿಗೆ ಬಂದಿದ್ದು, ಅಕ್ಷಯ್ ಆಚಾರಿ ಮನೆಯಲ್ಲಿ ಎಲ್ಲರೂ ಉಳಿದುಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೀರ್ತನ್ ದೇವಾಡಿಗನ ಮನೆಯಲ್ಲಿ ಊಟ ಮುಗಿಸಿ 3.30ರ ಸುಮಾರಿಗೆ ಬೈಕಿನಲ್ಲಿ ಕೊಸಳ್ಳಿ ಫಾಲ್ಸ್ಗೆ ಹೋಗಿದ್ದರು. ಚಿರಾಂತ್ ಶೆಟ್ಟಿಗೆ ಮಾತ್ರ ಈಜು ಬರುತ್ತಿದ್ದರಿಂದ ಆತ ಈಜಲು ನೀರಿಗಿಳಿದರೇ, ಉಳಿದವರು ದಡದಲ್ಲಿಯೇ ಕುಳಿತಿದ್ದರು. ನೀರಿಗಿಳಿದ ಚಿರಾಂತ್ ಕೆಳ ಹೊತ್ತಿನಲ್ಲೇ ಮುಳುಗಿ ನಾಪತ್ತೆಯಾಗಿದ್ದಾನೆ. ಘಟನೆ ನಡೆದ ಸ್ಥಳದಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕೂಸಳ್ಳಿ ಫಾಲ್ಸ್ಗೆ ಸ್ನೇಹಿತರೊಂದಿಗೆ ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಈಜುವ ಸಂದರ್ಭ ಮುಳುಗಿ ನಾಪತ್ತೆಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.ಐ ಕುಮಾರ ಶೆಟ್ಟಿ ಎಂಬುವರ ಮಗ ಚಿರಾಂತ್ ಶೆಟ್ಟಿ (20) ಎಂದು ತಿಳಿದುಬಂದಿದೆ. ಈತ ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಜೊತೆಗೆ ಏವಿಯೇಷನ್ ಕೋರ್ಸ್ ಕಲಿಯುತ್ತಿದ್ದ. ಶುಕ್ರವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತರಾದ ಕಿರ್ತನ್ ದೇವಾಡಿಗ, ಅಕ್ಷಯ್ ಆಚಾರಿ, ಆಲ್ವಿನ್, ಧರಣ್, ರೆಯಾನ್ ಜೊತೆಗೆ ಗುರುವಾರ ಬೈಂದೂರಿಗೆ ಬಂದಿದ್ದು, ಅಕ್ಷಯ್ ಆಚಾರಿ ಮನೆಯಲ್ಲಿ ಎಲ್ಲರೂ ಉಳಿದುಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೀರ್ತನ್ ದೇವಾಡಿಗನ ಮನೆಯಲ್ಲಿ ಊಟ ಮುಗಿಸಿ 3.30ರ ಸುಮಾರಿಗೆ ಬೈಕಿನಲ್ಲಿ ಕೊಸಳ್ಳಿ ಫಾಲ್ಸ್ಗೆ ಹೋಗಿದ್ದರು. ಚಿರಾಂತ್ ಶೆಟ್ಟಿಗೆ ಮಾತ್ರ ಈಜು ಬರುತ್ತಿದ್ದರಿಂದ ಆತ ಈಜಲು ನೀರಿಗಿಳಿದರೇ, ಉಳಿದವರು ದಡದಲ್ಲಿಯೇ ಕುಳಿತಿದ್ದರು. ನೀರಿಗಿಳಿದ ಚಿರಾಂತ್ ಕೆಳ ಹೊತ್ತಿನಲ್ಲೇ ಮುಳುಗಿ ನಾಪತ್ತೆಯಾಗಿದ್ದಾರೆ. ಘಟನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮೇ 10ರಂದು ದಿನಾಂಕ ನಿಗದಿಯಾಗಿದ್ದು, ವ್ಯವಸ್ಥಿತ ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮತದಾನದ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಪ್ಯಾರಾ ಮಿಲಿಟರಿ ತುಕಡಿಗಳು, ಸಿ.ಆರ್.ಪಿ.ಎಫ್, ಪೊಲೀಸರು, ಹೋಂ ಗಾರ್ಡ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದೆ. ಜನರಿಗೆ ನಿರ್ಭೀತ ಚುನಾವಣೆಯ ಸಂದೇಶ ಸಾರುವ ಸಲುವಾಗಿ ಚುನಾವಣೆಯ ಭದ್ರತೆಗಾಗಿ ನಿಯೋಜನೆಗೊಂಡಿರುವ ಪ್ಯಾರಾ ಮಿಲಿಟರಿ ತುಕಡಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಕುಂದಾಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಂಡ್ಲೂರು ಹಾಗೂ ಬೈಂದೂರು ಠಾಣಾ ವ್ಯಾಪ್ತಿಯ ಬೈಂದೂರು ಮತ್ತು ಶಿರೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರ ಪಥ ಸಂಚಲನ ನಡೆಸಿದರು. ಕಂಡ್ಲೂರು ಭಾಗದಲ್ಲಿ ನಡೆದ ಪಥ ಸಂಚಲನದ ವೇಳೆ ಕುಂದಾಪುರ ಗ್ರಾಮಾಂತರ ಪೊಲೀಸ್ ವೃತ್ತನಿರೀಕ್ಷಕ ಮಹಾಬಲೇಶ್ವರ ನಾಯ್ಕ್, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗ್ರಾಮಾಂತರ ಠಾಣೆ ಪಿಎಸ್ಐ ಪವನ್ ನಾಯಕ್, ಕ್ರೈಂ ಪಿಎಸ್ಐ ನೂತನ, ಶಂಕರನಾರಾಯಣ ಪಿಎಸ್ಐ ಭರತ್, ಸುದರ್ಶನ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಏಪ್ರಿಲ್ 11 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 33/11 ಕೆ.ವಿ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿAದ ತಲ್ಲೂರು ಉಪಕೇಂದ್ರದಿAದ ಹೊರಡುವ 11 ಕೆ.ವಿ ಹೆಮ್ಮಾಡಿ, ಗುಲ್ವಾಡಿ, ವಂಡ್ಸೆ, ನೇರಳಕಟ್ಟೆ, ಬಾಂಡ್ಯ, ಕೆಂಚನೂರು, ದೇವಲ್ಕುಂದ ಮತ್ತು ಸಬ್ಲಾಡಿ ಹಾಗೂ 33/11 ಕೆ.ವಿ ಗಂಗೊಳ್ಳಿ ಉಪಕೇಂದ್ರದಿAದ ಹೊರಡುವ 11 ಕೆ.ವಿ ಮುಳ್ಳಿಕಟ್ಟೆ, ತ್ರಾಸಿ, ಗಂಗೊಳ್ಳಿ ಫೀಡರುಗಳ ವಂಡ್ಸೆ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ, ಉಪ್ಪಿನಕುದ್ರು, ತಲ್ಲೂರು, ಇಡೂರು-ಕುಂಜ್ಞಾಡಿ, ಮುದೂರು, ಹೊಸೂರು, ಕರ್ಕುಂಜೆ, ಕಾವ್ರಾಡಿ, ಅಂಪಾರು, ಬೆಳ್ಲಾಲ, ಕೆರಾಡಿ, ಆಜ್ರಿ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಕಟ್ಬೆಲ್ತೂರು ಮತ್ತು ದೇವಲ್ಕುಂದ, ಮುಳ್ಳಿಕಟ್ಟೆ, ಗಂಗೊಳ್ಳಿ, ಹೊಸಾಡು, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 33/11 ಕೆ.ವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಏ.07: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಕಂಟೈನರ್, ಬೈಕ್ ಹಾಗೂ ನೀರಿನ ಟ್ಯಾಂಕರ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರರು ಇಬ್ಬರು ಸೇರಿದಂತೆ ನಾಲ್ಕು ಜನರು ಗಂಭೀರ ಗಾಯಗೊಂಡ ಘಟನೆ ತಲ್ಲೂರು ಸಮೀಪದ ಜಾಲಾಡಿ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರರಾದ ಬೀಜಾಡಿ ನಿವಾಸಿ ಸಂಜೀವ ಮೊಗವೀರ ಹಾಗೂ ಅವರ ಪತ್ನಿ ರತ್ನಾ ಗಂಭೀರ ಗಾಯಗೊಂಡರೆ, ಲಾರಿಯಲ್ಲಿದ್ದ ಅನಾಜ್ ಹಾಗೂ ಶಾಜೀ ಗಾಯಗೊಂಡು ಆಸ್ಪತ್ರೆ ಸೇರಿದವರು. ಮಹಾರಾಷ್ಟ್ರದಿಂದ ಕರ್ಟನ್ ಬಾಕ್ಸ್ ಗಳನ್ನು ತುಂಬಿಸಿದ್ದ ಕಂಟೈನರ್ ಲಾರಿ ಕೇರಳ ಕಡೆಗೆ ತೆರಳುತ್ತಿತ್ತು. ಜಾಲಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಐ.ಆರ್.ಬಿ. ಕಂಪೆನಿಯ ನೀರಿನ ಟ್ಯಾಂಕರ್ ರಸ್ತೆ ನಡುವಿನ ಗಿಡಗಳಿಗೆ ನೀರು ಹಾಕುತ್ತಿತ್ತು. ಕಂಟೈನರ್ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದೇ ವೇಳೆ ಅದೇ ದಿಕ್ಕಿನಲ್ಲಿ ಸಂಜೀವ ಮೊಗವೀರ ವೀಗೋ ಬೈಕಿನಲ್ಲಿ ಪತ್ನಿ ರತ್ನಾ ಅವರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದವರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಡುಪಿ ಲೋಕಾಯುಕ್ತ ವಿಭಾಗದ ವತಿಯಿಂದ ಜಿಲ್ಲಾ ಲೋಕಾಯುಕ್ತ ವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ನಿರೀಕ್ಷಕರು ಮತ್ತು ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು ಏಪ್ರಿಲ್ 12 ರಂದು ಬೈಂದೂರು ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರ ವರೆಗೆ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕ ಅಹವಾಲು ಕಾರ್ಯಕ್ರಮ ನಡೆಸಲಿದ್ದಾರೆ. ಉಳಿದ ದಿನಗಳಲ್ಲಿಯೂ ಸಹ ಸಾರ್ವಜನಿಕರು ಅಹವಾಲುಗಳಿದ್ದಲ್ಲಿ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 0820-2958881 ಹಾಗೂ ದೂ.ಸಂಖ್ಯೆ: 0820-2536661 ಅಥವಾ ಅರ್ಜಿದಾರರು ನಮೂನೆ 1 ಮತ್ತು 2 ರಲ್ಲಿ ಭರ್ತಿ ಮಾಡಿ, ಅಫಿಡವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿಗೆ ಅಥವಾ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್ ಅಂಬೇಡ್ಕರ್ ವೀಥಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ ಹಾಗೂ ನೌಕರರ ವಿರುದ್ಧವೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುವಶಕ್ತಿಯಲ್ಲಿ ಚೈತನ್ಯ ಶಕ್ತಿ ತುಂಬುವ ಸಮಗ್ರ ಶಿಕ್ಷಣವನ್ನು ನೀಡಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕರೆ ನೀಡಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ 60ರ ಸಂಭ್ರಮದಲ್ಲಿ “ನಾಟಕೋತ್ಸವ”ವನ್ನು ಉದ್ಘಾಟಿಸಿ ಮಾತನಾಡಿದರು. ಭಾವಿ ಭವಿಷ್ಯವನ್ನು ಕಟ್ಟಿಕೊಡುವ ಯುವಜನತೆಯಲ್ಲಿ ಒಳ್ಳೆಯ ಮನಸ್ಥಿತಿ ಕಟ್ಟುವ ಕೆಲಸವಾಗಬೇಕು. ನಾವು ಜಾಗೃತರಾಗಬೇಕು. ಜಾತಿ,ಮಾತು,ಪಂಥ ಮೀರಿದ ಊರನ್ನು ಕಟ್ಟಬೇಕು. ಸಂಸ್ಕಾರದ ಸಂಸ್ಕೃತಿ ಕಟ್ಟುವುದು ಅವಿಭಾಜ್ಯ ಅಂಗವಾಗಬೇಕು ಅಲ್ಲದೆ ನಮ್ಮಲ್ಲಿ ಸದ್ವಿಚಾರದ ಸೌಂದರ್ಯ ಪ್ರಜ್ಞೆ ಇರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯ ಕೆ. ಶಾಂತಾರಾಮ್ ಪ್ರಭು ವಹಿಸಿದ್ದರು. ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ್ ಕಾಮತ್, ರಾಜೇಂದ್ರ ತೋಳಾರ್, ಸದಾನಂದ ಚಾತ್ರ, ಡಾ.ರಂಜಿತ್ ಕುಮಾರ್ ಶೆಟ್ಟಿ, ಅಭಿನಂದನ್ ಶೆಟ್ಟಿ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ದೇವಳದ ಆಡಳಿತ ಧರ್ಮದರ್ಶಿ ದೇವರಾಯ ಮಂಜುನಾಥ ಶೇರೆಗಾರ ಮತ್ತು ಅನಿತಾ ದೇವರಾಯ ಮಂಜುನಾಥ ಶೇರೆಗಾರ ಜ್ಯೋತಿ ಬೆಳಗಿಸಿ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವಕ್ಕೆ ಚಾಲನೆ ನೀಡಿದರು. ಶೃಂಗೇರಿ ಶ್ರೀ ಶಾರದಾಪೀಠಶ್ವರರ ಮಾರ್ಗದರ್ಶನದೊಂದಿಗೆ ವೇದಮೂರ್ತಿ ಕೆ.ಎಸ್.ಲಕ್ಷ್ಮೀ ನಾರಾಯಣ ಸೋಮಯಾಜಿ ಕಮ್ಮರಡಿ ಮತ್ತು ವೈದಿಕರ ನೇತೃತ್ವದಲ್ಲಿ ಹಾಗೂ ದೇವಳದ ಅರ್ಚಕ ವೃಂದದ ಸಹಕಾರದೊಂದಿಗೆ ವರ್ಧಂತ್ಯುತ್ಸವದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ಯಾಗಮಂಟಪ ಪ್ರವೇಶ, ಪುಣ್ಯಾಹ್ನ, ದೇವಾನಾಂದೀ, ಋತ್ವಿಗರಣೆ, ಪಂಚಗವ್ಯ ಹೋಮ, ಮಹಾಗಣಪತಿ ಹೋಮ, ಕೂಷ್ಮಾಂಡ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ವೇದಪಾರಾಯಣ ಪ್ರಾರಂಭ, ದೇವಿ ಭಾಗವತ ಪುರಾಣ ಪ್ರಾರಂಭ, ಮಹಾಮಂಗಳಾರತಿ, ಅನ್ನಸಂತರ್ಪಣೆಯೊಂದಿಗೆ ಸಂಜೆ ಉದಕ ಶಾಂತಿ ಪಠಣ, ವಾಸ್ತೋಹೋಮ, ಅಘೋರಾಸ್ತ್ರ ಹೋಮ, ಸುದರ್ಶನ ಜಪ, ಹೋಮ, ಸಪ್ತಶುದ್ಧಿ, ಗೋಪೂಜೆ, ಶ್ರೀ ಮಹಾಗಣಪತಿ ಮತ್ತು ಶ್ರೀನಿವಾಸ ದೇವರಿಗೆ ೪೮ ಕಲಶ ಸ್ಥಾಪನೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮನುವಿಕಾಸ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸತಾರದ ಸೇವಾ ಸಾಮಾಜಿಕ ವಿಕಾಸ ಸಂಸ್ಥೆಯಿಂದ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಯುವಕ – ಯುವತಿಯರಿಗೆ ಉಚಿತ ಹೋಟೆಲ್ ಮ್ಯಾನೇಜ್ಮೆಂಟ್ ತರಬೇತಿ ನೀಡಲಾಗುತ್ತಿದೆ. ಕನಿಷ್ಠ 8ನೇ ತರಗತಿ ಉತ್ತೀರ್ಣರಾದ 18 ರಿಂದ 35ರ ವಯೋಮಾನದವರು 2 ತಿಂಗಳ ಅವಧಿಯ ಈ ಕೋರ್ಸಿಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಈ ಉಚಿತ ಹೋಟೆಲ್ ಮ್ಯಾನೇಜ್ಮೆಂಟ್ ಸರ್ಟಿಫಿಕೇಟ್ ತರಬೇತಿಯಲ್ಲಿ ನುರಿತ ತರಬೇತುದಾರರಿಂದ ತರಬೇತಿ, ಉಚಿತ ಸಮವಸ್ತ್ರ, ಉಚಿತ ಬಸ್ ಪಾಸ್ ಸೌಲಭ್ಯವಿರಲಿದೆ. ಅಲ್ಲದೇ ತರಬೇತಿ ಮುಗಿದ ಬಳಿಕ ಹೋಟೆಲ್ ಇಂಡಸ್ಟ್ರೀ, ಕಾರ್ಪೋರೇಟ್ ಕಛೇರಿ, ಏರ್ಪೋರ್ಟ್ ಕ್ಯಾಂಟಿನ್’ಗಳಲ್ಲಿ ಉದ್ಯೋಗಕಾಶ ದೊರಕಿಸಿಕೊಡಲಾಗುತ್ತದೆ. ಕೆಫೆ, ಕ್ಯಾಂಟಿನ್ ಉದ್ಯಮ ಆರಂಭಿಸುವವರಿಗೆ ಬ್ಯಾಂಕುಗಳಿಂದ ಲೋನ್ ಪಡೆಯಲು ನೆರವು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಪ್ಪುಂದ ಅಂಬಾಗಿಲುವಿನ ಲಕ್ಷ್ಮೀ ಆನೆಗಣಪತಿ ಕಾಂಪ್ಲೆಕ್ಸ್ ಮೊದಲ ಮಹಡಿಯಲ್ಲಿ ಸೇವಾ ಸಾಮಾಜಿಕ ವಿಕಾಸ ಸಂಸ್ಥೆಯ ಕಛೇರಿ ಇದ್ದು, ಆಸಕ್ತ ಅಭ್ಯರ್ಥಿಗಳು ಆಧಾರ್ ಕಾರ್ಡ್, ಅಂಕಪಟ್ಟಿ ಹಾಗೂ 2 ಪೋಟೋದೊಂದಿಗೆ ಪ್ರೋಗ್ರಾಂ ಕೋ-ಆರ್ಡಿನೇಟರ್ ಸ್ವಪ್ನಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ ಶಿಬಿರದಲ್ಲಿ ಸಾಧ್ಯವಾಗುತ್ತದೆ ಎಂದು ರಂಗಕರ್ಮಿ ಡಾ. ಸದಾನಂದ ಬೈಂದೂರು ಹೇಳಿದರು. ಅವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು ಮತ್ತು ಜೆಸಿಐ ಬೈಂದೂರು ಸಿಟಿ ಇವರ ಆಶ್ರಯದಲ್ಲಿ ಸೆಂಟರ್ ಫಾರ್ ಅಪ್ಲೈಡ್ ಥಿಯೇಟರ್ ಸೈನ್ಸ್ ಮೈಸೂರು ಮತ್ತು ಚಿತ್ರದುರ್ಗ ಇವರ ತರಬೇತಿ ಸಂಪನ್ಮೂಲ ಸಹಕಾರದಲ್ಲಿ ಕಲೆಯೊಂದಿಗೆ ಕಲಿಕೆ ವಿಶೇಷ ಶಿಬಿರದ ಕಲೆ ಕಲಿಕೆ ಸಂವಾದದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ಯನ್ನು ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ನರೇಂದ್ರ ಶೇಟ್ ವಹಿಸಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ರಂಗಕರ್ಮಿ ನಾ ಶ್ರೀನಿವಾಸ್ , ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯೆ ರಾಧಾ ಕೊಡಗು, ಬೈಂದೂರು ಸಿಟಿ ಜೆಸಿಐನ ಸ್ಥಾಪಕ ಅಧ್ಯಕ್ಷರಾದ ಮಣಿಕಂಠ, ಚಿತ್ರ ಕಲಾವಿದ ಮದನ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಪದವೀಧರ ಮುಖ್ಯೋಪಾಧ್ಯಾಯರಾದ ಶ್ರೀ ಜನಾರ್ಧನ ದೇವಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು ನಾಗರತ್ನ ಸ್ವಾಗತಿಸಿದರು. ಕಲಾವತಿ ಧನ್ಯವಾದ ಸಲ್ಲಿಸಿದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ಸಂಯೋಜಿಸಿದ್ದರು
