ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದೆರಡು ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂದಿನ 5 ದಿನಗಳ ಕಾಲ ರೆಡ್ ಹಾಗೂ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಮಳೆಯ ಪ್ರಮಾಣ ಹಾಗೂ ವಿಪತ್ತು ಪರಿಸ್ಥಿತಿಯನ್ನು ಆಧರಿಸಿ, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವಂತೆ ತಹಶಿಲ್ದಾರರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ► ಉಡುಪಿ ಜಿಲ್ಲೆ: ಜುಲೈ 05ರಂದು ಎಲ್ಲಾ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ – https://kundapraa.com/?p=67482 . ಶಿಕ್ಷಣ ಸಂಸ್ಥೆಗಳು ಮಳೆ ವಿಪತ್ತು ಸಂದರ್ಭ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ. ವಿದ್ಯಾರ್ಥಿಗಳು ತೋಡು ಹಳ್ಳ ದಾಟಿ ಬರುವುದಿದ್ದರೆ ಮನೆಯಲ್ಲಿಯೇ ಉಳಿಯಲು ಸೂಚಿಸುವುದು, ಶಿಥಿಲ ಕಟ್ಟಡವನ್ನು ತರಗತಿ ನಡೆಸಲು ಬಳಸದಿರುವುದು, ನೆರೆ ಪೀಡಿತ ಪ್ರದೇಶದಲ್ಲಿ ಸ್ಥಳೀಯ ರಜೆ ಘೋಷಿಸುವುದು ಹಾಗೂ ರಜೆ ಅವಧಿಯನ್ನು ಶನಿವಾರ ಅಥವಾ ಭಾನುವಾರ ಹೆಚ್ಚುವರಿ ತರಗತಿ ನೀಡಿ ಸರಿದೂಗಿಸುವುದು ಮೊದಲಾದ ಸೂಚನೆಯನ್ನು ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ ಆದೇಶದಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜ.04: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇನ್ನೂ 5 ದಿನಗಳ ಕಾಲ ನಿರಂತರ ಮಳೆಯಾಗಲಿದೆ. ಜು.5ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ► ಉಡುಪಿ ಜಿಲ್ಲೆ: ಜುಲೈ 05ರಂದು ಎಲ್ಲಾ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ – https://kundapraa.com/?p=67482 . ಹವಾಮಾನ ಇಲಾಖೆ ಈ ಬಗ್ಗೆ ಮುನ್ಸೂಚನೆ ನೀಡಿದೆ. ಇಂದು ಭಾರಿ ಮಳೆ ಸುರಿಯಲಿದ್ದು, ಜು.5ರಿಂದ 9ರ ತನಕವೂ ಭಾರಿ ಗಾಳಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಈ ವೇಳೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಜು.3ರಂದು ಜಿಲ್ಲೆಯಲ್ಲಿ ಒಟ್ಟು 70ಮಿ.ಮೀ ಮಳೆಯಾಗಿದೆ. ಕುಂದಾಪುರ ತಾಲೂಕಿನಲ್ಲಿ 64 ಮಿ.ಮೀ, ಬೈಂದೂರು ತಾಲೂಕಿನಲ್ಲಿ 91.6 ಮಿ.ಮೀ, ಬ್ರಹ್ಮಾವರದಲ್ಲಿ 61.8, ಹೆಬ್ರಿ 63ಮಿ.ಮೀ ಮಳೆಯಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ವಿದ್ಯಾರ್ಥಿನಿ ಪೂರ್ವಿಕಾ, ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸ್ಪರ್ಧೆಗಳ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಪ್ರಭಾತ್ ಕಲಾವಿದರ ತಂಡ ಗೋಪಿನಾಥ್ ನ್ಯಾಸ-2023 ವತಿಯಿಂದ ಆಯೋಜಿಸಲ್ಪಟ್ಟ ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸ್ಪರ್ಧೆಗಳ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪರ್ಯಾಯ ಪಾರಿತೋಷಕವನ್ನು ಗಳಿಸಿರುತ್ತಾರೆ. ಭರತನಾಟ್ಯ ಕಲಾವಿದೆ ಪೂರ್ವಿಕಾ, ಖ್ಯಾತ ಭರತನಾಟ್ಯ ಕಲಾವಿದೆ, ವಿದೂಷಿ ಪ್ರವಿತ ಮತ್ತು ಅಶೋಕ್ ಕುಮಾರ್ ಅವರ ಪುತ್ರಿ. ಪೂರ್ವಿಕಾಳ ಈ ಅಮೋಘ ನೃತ್ಯಸಾಧನೆಯನ್ನು ಕಾಲೇಜಿನ ಸಂಚಾಲಕರಾದ ಬಿ.ಎಮ್. ಸುಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ನವೀನ್ ಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಹಾಗೂ ಭೋಧಕ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. ಇದನ್ನೂ ಓದಿ: ► ಸಂಗೀತದಿಂದ ಸಂಸ್ಕಾರ ಪ್ರಾಪ್ತಿ – ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಡಾ. ಗೋಪಾಲಕೃಷ್ಣ ಭಟ್ – https://kundapraa.com/?p=67464 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾದಕ್ಕೆ ಎಲ್ಲ ಜೀವಿಗಳ ಮೇಲೂ ಧನಾತ್ಮಕ ಪರಿಣಾಮ ಬೀರುವ ಶಕ್ತಿ ಇದೆ. ಭಾರತೀಯ ಶಾಸ್ತ್ರೀಯ ಸಂಗೀತದ ಕಲಿಕೆ ಮತ್ತು ಶ್ರವಣದಿಂದ ಮನುಷ್ಯರಿಗೆ ವಿಶೇಷವಾದ ಅನುಭೂತಿ ಸಿದ್ಧಿಸುವುದರ ಜತೆಗೆ ಅವರ ಹೃದಯ ಸಂಸ್ಕಾರಗೊಳ್ಳುತ್ತದೆ ಎಂದು ಕೊಲ್ಲೂರಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಭಟ್ ಹೇಳಿದರು. ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಕುಂದಾಪುರದ ಗುರುಪರಂಪರಾ ಸಂಗೀತಸಭಾ ಆಶ್ರ್ರಯದಲ್ಲಿ ಭಾನುವಾರ ನಡೆದ ಗುರುಪೂರ್ಣಿಮಾ-ಗುರುಪೂಜೆ ಕಾರ್ಯಕ್ರಮದಲ್ಲಿ. ಅವರು ಗೌರವ ಅತಿಥಿಯಾಗಿದ್ದರು. ಭಾರತೀಯ ಸಂಗೀತ ಪ್ರಕಾರಗಳು ಶಾಸ್ರ್ತಾಧಾರಿತವಾದುವುಗಳು. ಅವುಗಳನ್ನು ವೇದಗಳೊಂದಿಗೆ ಸಮೀಕರಿಸಲಾಗುತ್ತದೆ. ಅವುಗಳ ಅಧ್ಯಯನಕ್ಕೆ ಶಿಸ್ತು, ಸಂಯಮ, ಸಮರ್ಪಣಾಭಾವ ಮತ್ತು ತನ್ಮಯತೆ ಅಗತ್ಯ. ನಮ್ಮ ಮಕ್ಕಳನ್ನು ಶಿಕ್ಷಣದ ಜತೆಗೆ ಯಾವುದಾದರೊಂದು ಸಂಗೀತ ಪ್ರಕಾರದ ಅಧ್ಯಯನದಲ್ಲಿ ತೊಡಗಿಸುವುದರಿಂದ ಅವರ ವ್ಯಕ್ತಿತ್ವ ಬೆಳಗುತ್ತದೆ ಎಂದು ಅವರು ಹೇಳಿದರು. ನೇಹಾ ಹೊಳ್ಳ ಸ್ವಾಗತಿಸಿದರು. ಸಾತ್ಯಕಿ ವಂದಿಸಿದರು. ಸಭ್ಯಾ ನಿರೂಪಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಕೆ. ಗೋವಿಂದ ಅಡಿಗ, ಕೋಟದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಲಂಚ ಸ್ವೀಕರಿಸುತ್ತಿದ್ದ ಲೈನ್ ಮ್ಯಾನ್ ಓರ್ವನನ್ನು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಬೈಂದೂರು ಮೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿರುವ ರಮೇಶ್ ಬಡಿಗೇರ ಆಪಾದಿತನಾಗಿದ್ದು, ರೂ.2000 ಲಂಚ ಸ್ವೀಕರಿಸುವ ಸಂದರ್ಭ ಸಿಕ್ಕಿಬಿದ್ದಿದ್ದಾನೆ. ಮರ ಕಡಿಯುವ ಸಲುವಾಗಿ ವಿದ್ಯುತ್ ಕಂಬದ ಲೈನ್ ನಿಷ್ಕ್ರಿಯಗೊಳಿಸಲು ಕುಸುಮಾ ಎಂಬವರು ಮನವಿ ಮಾಡಿದ್ದರು. ಇದಕ್ಕೆ ಮೆಸ್ಕಾಂ ಸಿಬ್ಬಂದಿ ಲಂಚದ ಬೇಡಿಕೆ ಇರಿಸಿದ್ದ ಎನ್ನಲಾಗಿದೆ. ಈ ಸಂದರ್ಭ ಲಂಚ ಪಡೆಯುತ್ತಿದ್ದಾಗ ಡಿವೈಎಸ್‌ಪಿ ಪ್ರಕಾಶ್, ಇನ್ಸ್‌ಪೆಕ್ಟರ್ ಜಯರಾಮ್ ಗೌಡ ಅವರ ತಂಡ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾನೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ದರ್ಶನಕ್ಕೆ ತೆರಳಿದ್ದ ಮಹಿಳೆಯ ಚಿನ್ನಾಭರಣಗಳಿದ್ದ ಪರ್ಸ್ ಕದ್ದಿದ್ದ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಮೂಲದ ಗಿರೀಶ್ ಬಿ.ಜಿ. (32) ಬಂಧಿತ ಆರೋಪಿ. ಜೂ.4ರಂದು ಸುರತ್ಕಲ್ ನಿವಾಸಿ ಪ್ರವೀಣ್ ಎನ್ನುವರು ಪತ್ನಿಯೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ್ದು, ಈ ವೇಳೆ ಚಿನ್ನಾಭರಣವನ್ನು ತಮ್ಮೊಂದಿಗೆ ಕೊಂಡೊಯ್ದುದ್ದಾರೆ. ಚಿನ್ನಾಭರಣಗಳನ್ನು ಚಿಕ್ಕ ಪರ್ಸ್ ನಲ್ಲಿ ಹಾಕಿ ವ್ಯಾನಟಿ ಬ್ಯಾಗ್ ನಲ್ಲಿಟ್ಟುಕೊಂಡಿದ್ದರು. ದೇವರ ದರ್ಶನ ಮಾಡಿ ಹೊರಗಡೆ ಬಂದಾಗ ವ್ಯಾನಟಿ ಬ್ಯಾಗ್ ಜೀಪ್ ಓಪನ್ ಆಗಿದ್ದು ಚಿನ್ನಾಭರಣಗಳಿದ್ದ ಚಿಕ್ಕ ಪರ್ಸ್ ಕಳವಾಗಿತ್ತ. ಒಟ್ಟು 13 ½ ಪವನ್ ಚಿನ್ನ [4 ಲಕ್ಷದ 75 ಸಾವಿರ ರೂ. ಮೌಲ್ಯ] ಕಳವಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಕೊಲ್ಲೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾಸಗಿ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಗಿರೀಶ್ ಬಿ.ಜಿ. ದೇವಸ್ಥಾನಕ್ಕೆ ಬಂದಿದ್ದ ವೇಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಡಿಸ್ಟಿಕ್ 317ಸಿ ರೀಜನ್ 6, ವಲಯ 2ರ 2023-24ನೇ ಸಾಲಿನ ವಲಯಾಧ್ಯಕ್ಷರಾಗಿ ಶಂಕರ ಶೆಟ್ಟಿ ಬವಲಾಡಿ ಆಯ್ಕೆಯಾಗಿದ್ದಾರೆ. ಎಸ್ಸಿಡಿಸಿಸಿ ಬ್ಯಾಂಕ್ ಉಪ್ಪುಂದ ಶಾಖೆಯಲ್ಲಿ ಶಾಖಾ ಪ್ರಬಂಧಕರಾಗಿರುವ ಶಂಕರ ಶೆಟ್ಟಿ ಅವರು ತೆಕ್ಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಜಿಲ್ಲಾ ಕ್ಯಾಬಿನೆಟ್ನ ವಿಷನ್ ಕೇರ್ ಡಿಸ್ಟಿಕ್ ಕೋ-ಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿರುತ್ತಾರೆ.
ಸಾಸ್ತಾನ ಕೋಡಿ, ಹಂಗಾರಕಟ್ಟೆ, ಕಾಪು ಮೂಳೂರು ಕಡಲಕೊರೆತ ಪ್ರದೇಶಕ್ಕೆ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಭೇಟಿ, ಪರಿಶೀಲನೆ. ಶಾಶ್ವತ ಯೋಜನೆ ರೂಪಿಸುವ ಆಶ್ವಾಸನೆ ಹಿಂದೂಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ಸೊರಕೆ, ಮೊಗವೀರ ಸಮುದಾಯದ ಮುಖಂಡ ಜಿ. ಶಂಕರ್, ಇಲಾಖಾ ಅಧಿಕಾರಿಗಳ ಉಪಸ್ಥಿತಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 6 ತಿಂಗಳ ಅವಧಿಯಲ್ಲಿ ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ, ಸ್ವಚ್ಛತಾ ಅಭಿಯಾನ, ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಸನ್ಮಾನ, ಯುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹ, ಶಾಲಾ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಿ ಪ್ರೋತ್ಸಾಹ ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಮೆಚ್ಚುಗೆ ಪಡೆದ ಜೆಸಿಐ ಚಿತ್ತೂರು ಮಾರಣಕಟ್ಟೆ ವಲಯದ ಉತ್ತಮ ಘಟಕ ಪ್ರಶಸ್ತಿಯ ಜೊತೆಗೆ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಘಟಕದ ಅಧ್ಯಕ್ಷರಾದ ಜೆಸಿಐ ಗುರುಪ್ರಸಾದ್ ದೇವಾಡಿಗ ಮಾರಣಕಟ್ಟೆ ಹಾಗೂ ಕಾರ್ಯದರ್ಶಿ ವಿಜಯ ಆಚಾರ್ಯ ಮಾರಣಕಟ್ಟೆ ಪ್ರಶಸ್ತಿ ಪಡೆಯುವಲ್ಲಿ ಶ್ರಮಿಸಿದ ಸ್ಥಾಪಕ ಅಧ್ಯಕ್ಷರು, ಪೂರ್ವಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ನಮ್ಮ ಘಟಕದೊಂದಿಗೆ ಕೈ ಜೋಡಿಸಿದ ಸರ್ವರನ್ನು ಸ್ಮರಿಸಿದರು.
ರಾಜ್ಯದಲ್ಲಿ ವರ್ಗಾವಣೆ ದಂದೆ ಆರಂಭವಾಗಿದೆ. ಬಿಜೆಪಿ ಸರಕಾರದ ಮೇಲೆ ಗೂಬೆ ಕೂರಿಸೋದು ಬೇಡ – ಯಾವುದೇ ತನಿಕೆ ಎದುರಿಸಲು ಸಿದ್ದರಿದ್ದೇವೆ – ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ
