ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ಥೆರೆಸಾ ಪಿಯು ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂರ್ವಿತಾ ವಿಭಾಗೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತ್ರಿಬಲ್ ಜಂಪ್ ಎರಡನೇ ಸ್ಥಾನ ಹಾಗೂ ಹೈ ಜಂಪಿನಲ್ಲಿ ಮೂರನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿಜೇತ ವಿದ್ಯಾರ್ಥಿನಿಗೆ ಮದರ್ ಥೆರೆಸಾ ಪಿಯು ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಳವಾಡಿಯ ಫ್ರೆಂಡ್ಸ್ ಮಾರಿಕಾಂಬಾ ಕ್ರಿಕೆಟರ್ಸ್ ಸಂಸ್ಥೆಯ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಆದೀಶ್ ದೇವಾಡಿಗ ಕಳವಾಡಿ ಹಾಗೂ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಕಳವಾಡಿ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ನಡೆಸಿದ ಎರಡನೇ ಹಂತದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2.50 ಅಂಕಗಳೊಂದಿಗೆ (CGPA) ” ಬಿ” ಮಾನ್ಯತೆ ಪಡೆದಿದೆ. “ನ್ಯಾಕ್ ಮೊದಲ ಹಂತದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಕಾಲೇಜು 2.05 CGPA ಅಂಕಗಳೊಂದಿಗೆ “ಬಿ ಮಾನ್ಯತೆ” ಪಡೆದಿದ್ದು, ಪ್ರಸ್ತುತ ಕಾಲೇಜಿನ ಕಾರ್ಯ ಕ್ರಮ ಚಟುವಟಿಕೆಗಳ ವಿಸ್ತರಣೆಯಿಂದಾಗಿ ಹೆಚ್ಚಿನ ಅಂಕಗಳೊಂದಿಗೆ (2.50 CGPA) “ನ್ಯಾಕ್ ಬಿ” ಮಾನ್ಯತೆ ದೊರೆತಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾಲೇಜು ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಅವರು, ನ್ಯಾಕ್ ‘ಬಿ’ ಮಾನ್ಯತೆ ದೊರೆಯುವಲ್ಲಿ ಸಹಕರಿಸಿದ ಐಕ್ಯೂಎಸಿ ಸಂಚಾಲಕರಾದ ಡಾ. ಅಶ್ವತ್ ದೇವರಾಯ್ ನಾಯ್ಕ್, ಸಹ ಸಂಚಾಲಕರಾದ ವಿನೋದ್ ನೀಲಪ್ಪ ಬಸುಪಟ್ಟದ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಸಂಸದರಾದ ಬಿ. ವೈ. ರಾಘವೇಂದ್ರ, ಹಳೆ ವಿದ್ಯಾರ್ಥಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು. ಚಂಪಾಷಷ್ಠಿ ಅಂಗವಾಗಿ ದೇವಳದಲ್ಲಿ ವಿಶೇಷವಾಗಿ ಅಭಿಷೇಕ, ಪಂಚಮೃತ ಪೂಜೆ, ಮಂಗಳಾರಾತಿ, ಹಣ್ಣುಕಾಯಿ, ಹೂಕಾಯಿ, ಕಲಶ ಸಮರ್ಪಣೆ, ದೇವರ ದರ್ಶನ, ತೀರ್ಥಪ್ರಸಾದ ವಿತರಣೆ, ಋತ್ವಿಜರಿಂದ ವೇದ ಪಾರಾಯಣ, ಕ್ಷೇತ್ರ ಪ್ರದಕ್ಷಿಣೆ ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಕಾಳಾವರ ನಮ್ಮ ಶಕ್ತಿ ಮಹಿಳಾ ಭಜನಾ ಮಂಡಳಿ ಭಜನಾ ಕಾರ್ಯಕ್ರಮ ಮತ್ತು ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಹಸ್ರಾರು ಭಕ್ತರು ಶ್ರೀ ದೇವರ ದರ್ಶನ ಪಡೆದು ಹೂ ಹಣ್ಣು ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆ ಮಾಡಿದರು. ಭಕ್ತರಿಂದ ಉರುಳು ಸೇವೆ ಬೆಳಗ್ಗೆ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್. ಚಂದ್ರಶೇಖರ್ ಹೆಗ್ಡೆ, ವ್ಯವಸ್ಥಾಪನ ಸಮಿತಿ ಸದಸ್ಯರುಗಳು, ಅರ್ಚಕರು, ತಂತ್ರಿಗಳು, ಊರ ಗ್ರಾಮಸ್ಥರು, ಭಕ್ತ ವರ್ಗ, ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸೇವೆ ಎಲ್ಲಕ್ಕಿಂತ ದೊಡ್ಡದು. ಅಪೇಕ್ಷೆಯೊಂದಿಗೆ ಮಾಡುವ ಕಾರ್ಯದಿಂದ ತಾತ್ಕಾಲಿಕವಾಗಿ ತೃಪ್ತಿ ದೊರೆತರೂ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗದು ಎಂದು ಏಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಹೇಳಿದರು. ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಬೈಂದೂರು ವತಿಯಿಂದ ಹಮ್ಮಿಕೊಂಡಿದ್ದ ಸಪ್ತಾಹ ಗೀತಾ ಜಯಂತಿ ಉತ್ಸವ – 2022 ಉದ್ಘಾಟಿಸಿ ಮಾತನಾಡಿ, ಕಲಿಯುಗದಲ್ಲಿ ಕರ್ಮಫಲ ತ್ಯಾಗ ಮಾಡುವುದು ಸುಲಭದ ಮಾತಲ್ಲ. ದೇವರ ಪೂಜಾಕಾರ್ಯದಲ್ಲಿ ಭಕ್ತಿಯಿಂದ ತೊಡಗಿಕೊಳ್ಳುವುದು ಕೂಡ ಕಷ್ಟದ ಕೆಲಸ. ಎಲ್ಲಾ ಅಪೇಕ್ಷೆಯನ್ನೂ ಮೀರಿ ಕರ್ಮಫಲ ತ್ಯಾಗ ಮಾಡುವವರೇ ನಿಜವಾದಿ ಸಂನ್ಯಾಸಿ ಎಂದೆನಿಸಿಕೊಳ್ಳುವರು ಎಂದು ನುಡಿದರು. ಬೈಂದೂರು ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ಸ್ಪರ್ಧಾ ಸಮಿತಿ ಮುಖ್ಯಸ್ಥ ವಿಶ್ವೇಶ್ವರ ಅಡಿಗ, ಬೈಂದೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೊಗಿ೯ ಗ್ರಾಮ ಹೊಸಮಠದ ಕಂಬಳಗದ್ದೆ ಮನೆ ಸ್ವಾತಂತ್ರ್ಯ ಹೋರಾಟಗಾರ ಸಿ. ರಾಜಗೊಪಾಲ ಶೆಟ್ಟಿ ಅವರ ಮನೆಗೆ ನಾಮ ಫಲಕ ಅಳವಡಿಸಲಾಯಿತು. ಸ್ವರಾಜ್ಯ75 ಸಂಘಟನೆಯ ನೇತ್ರತ್ವದಲ್ಲಿ ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಉಸಿರು ಕೋಟ, ಹಸ್ತ ಚಿತ್ತ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಕಾಳಾವರ ವರದರಾಜ ಶೆಟ್ಟಿ ಸರಕಾರಿ ಪ್ರಥಮ ದಜೆ೯ ಕಾಲೇಜು, ಗ್ರಾಮಸ್ಥರ ಸಹಕಾರದಿಂದ ಆಯೋಜಿಸಲಾದ ಹೊಂಬೆಳಕು ಕಾರ್ಯಕ್ರಮದಲ್ಲಿ 20ನೇ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅಳವಡಿಸಲಾಯಿತು. ಕಾಳಾವರ ಎಂ. ವರದರಾಜ್ ಶೆಟ್ಟಿ ಸರಕಾರಿ ಪ್ರಥಮ ದಜೆ೯ ಕಾಲೇಜು ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಮಾಜಿಕ ಕಾಯ೯ಕತೆ೯ಯಾಗಿ ಗುರುತಿಸಿಕೊಂಡಿರುವ ಶಾರದಾ ಡೈಮಂಡ್ ನಾಮ ಫಲಕ ಅನಾವರಣಗೊಳಿಸಿದರು. ಡಾ. ಉದಯ ಕುಮಾರ್ ಶೆಟ್ಟಿ ಅವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರ ಕೊಡುಗೆಯ ಬಗ್ಗೆ ವಿಚಾರ ಹಂಚಿಕೊಂಡರು. ಕಾಯ೯ಕ್ರಮದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಇಂದಿನ ವಿದ್ಯಾರ್ಥಿಗಳು ಅಧ್ಯಯನ ಮಾಡಿ ದೇಶಕ್ಕೆ ಅವರ ಕೊಡುಗೆಯನ್ನು ತಿಳಿಯಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಉಡುಪಿ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಅವರು ಕರೆ ನೀಡಿದರು. ಅವರು ಸಮುದಾಯ ಸಾಂಸ್ಕೃತಿಕ ಸಂಘಟನೆ ರಿ. ಕುಂದಾಪುರ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಉಡುಪಿ ಜಿಲ್ಲೆ ಇವರು ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಅಂಬೇಡ್ಕರ್ ಓದು ಅಭಿಯಾನವನ್ನು ಸಂವಿಧಾನದ ಪ್ರಸ್ತಾವನೆಯನ್ನು ಸಭಿಕರಿಗೆ ಪ್ರತಿಜ್ಞಾ ವಿಧಿಯಾಗಿ ಬೋಧಿಸುವುದರ ಮೂಲಕ ಚಾಲನೆಗೊಳಿಸಿ ಮಾತನಾಡಿದರು. ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಮೂರೂ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಅಂಬೇಡ್ಕರ್ ಅವರ ಸಾರ್ವಜನಿಕ ಜೀವನದ ಒಂದು ಮಹತ್ವದ ಘಟನೆಯ ಕುರಿತು ಯಾವುದೇ ಮಾಧ್ಯಮದಲ್ಲಿ ಪೋಸ್ಟರ್ ರಚನೆ, ಜೈ ಭೀಮ್ ಕ್ವಿಜ್, ಅಂಬೇಡ್ಕರ್ ಅವರ ಜೀವನದ ಕುರಿತಾದ ಯಾವುದೇ ಒಂದು ಮಹತ್ವದ ಘಟನೆಯನ್ನು ಆಧರಿಸಿದ ವೀಡಿಯೋ ಭಾಷಣ, ಸಂವಿಧಾನದ ಪ್ರಸ್ತಾವನೆಯ ಸಂಯೋಜಿತ ಓದು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ತಗ್ಗರ್ಸೆಯ ಶ್ರೀ ತಿರುಮಲ ಯುವ ಕ್ರೀಡಾ ಮತ್ತು ಕಲಾ ಸಂಘ ರಿ. ಇದರ ನೂತನ ಪಧಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತಿಚಿಗೆ ನಡೆಯಿತು. ಸಂಘದ ಗೌರವಾಧ್ಯಕ್ಷರಾಗಿ ರೋಶನ್ ಹುದಾರ್, ಅಧ್ಯಕ್ಷರಾಗಿ ನಾಗಪ್ಪ ಬಿಲ್ಲವ, ಕಾರ್ಯದರ್ಶಿಯಾಗಿ ಚಂದ್ರಶೇಖರ ತಗ್ಗರ್ಸೆ ಆಯ್ಕೆಯಾಗಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ‘ಜನತಾ ಚಿತ್ರಸಿರಿ – 2022’ ವಿದ್ಯಾರ್ಥಿ ಸ್ವ ರಚಿತ ಚಿತ್ರಕಲಾ ಪ್ರದರ್ಶನ ಇತ್ತಿಚಿಗೆ ಜರುಗಿತು. ಮುದೂರು ಭಾರತ ಮಾತಾ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಚಂದ್ರಶೇಖರ್ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಮೆಚ್ಚಿಕೊಂಡು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಒದಗಿಸುತ್ತಿರುವ ಕಾಲೇಜಿನ ಕಾಯಕ ಶ್ಞಾಘನೀಯ ಎನ್ನುತ್ತಾ ಅವಕಾಶಗಳನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜನತಾ ಪ್ರೌಢಶಾಲೆ ಹೆಮ್ಮಾಡಿಯ ಮುಖ್ಯ ಶಿಕ್ಷಕರಾದ ಮಂಜು ಕಾಳಾವರ, ಕಾಲೇಜಿನ ಉಪಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಉದಯ್ ನಾಯ್ಕ್ ರವರು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಸಂಜನಾ ಪ್ರಾರ್ಥಿಸಿ, ಸೃಜನ್ ಸ್ವಾಗತಿಸಿ,ಐಶ್ವರ್ಯ ಹಾಗೂ ಕ್ಷಮಾ ಕಾರ್ಯಕ್ರಮ ನಿರೂಪಿಸಿ, ಸುಶಾನ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ನ.27: ನೆಹರು ಯುವ ಕೇಂದ್ರದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಯುವ ಮಂಡಳಿ ಪ್ರಶಸ್ತಿಗೆ ಯುವಕ-ಯುವತಿ ಮಂಡಳಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ನೋಂದಾವಣೆಯಾಗಿ, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆ ಹೊಂದಿರುವ, 2021 ಏಪ್ರಿಲ್ 1 ರಿಂದ 2022 ಮಾರ್ಚ್ 31 ರ ಒಳಗೆ ಗ್ರಾಮ, ಪಟ್ಟಣ ಮತ್ತು ತಾಲೂಕು ಅಭಿವೃದ್ಧಿಗಾಗಿ ಜನಪರ ಕರ್ಯಕ್ರಮಗಳನ್ನು ನಡೆಸಿರುವ ಜಿಲ್ಲೆಯ ಯುವಕ-ಯುವತಿ ಮಂಡಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಯುವ ಮಂಡಳಗಳು 25,000 ರೂ. ಪ್ರಶಸ್ತಿ ಪತ್ರದ ಜೊತೆಗೆ ರಾಜ್ಯ ಮಟ್ಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲು ಅರ್ಹತೆ ಪಡೆದುಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಜಿಲ್ಲಾಧಿಕಾರಿ ಕಚೇರಿ ಆವರಣ, ರಜತಾದ್ರಿ, ಮಣಿಪಾಲ ದೂ.ಸಂಖ್ಯೆ: 0820-2574992 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
