Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಛಾಯಾತರಂಗಿಣಿ ಸಂಗೀತ ಶಾಲೆ ಕೋಟ ಇವರಿಂದ ಶಾಸ್ತ್ರೀಯ ಸಂಗೀತ ತರಗತಿ ಮತ್ತು ಸುಗಮ ಸಂಗೀತ, ಭಕ್ತಿ ಸಂಗೀತ, ಕರೋಕೆ ಸಂಗೀತ ತರಗತಿಯು ಕೋಟ ಗಾಂಧಿ ಮೈದಾನದ ಸಮೀಪದ ಕೋಟ ಮಹಿಳಾ ಮಂಡಲದಲ್ಲಿ ಪ್ರಾರಂಭಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಕೋಟ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಎ. ಕುಂದರ್ ವಹಿಸಿದ್ದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಕೋಶಾಧಿಕಾರಿ ಸುಶೀಲ ಸೊಮಶೇಖರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುಶೀಲ ಸೋಮಶೇಖರ್ ಅವರು ಪ್ರತಿ ಮನೆಯಲ್ಲಿ ಭಜನೆ, ಸಂಗೀತ ನಿರಂತರವಾಗಿ ನಡೆಯಬೇಕು. ಇದರಿಂದ ಭಗವಂತನ ಕೃಪೆಗೆ ಪ್ರಾಪ್ತಿಯಾಗುವುದಲ್ಲದೆ ಮನಶಾಂತಿ ನೆಮ್ಮದಿ ಪರಸ್ಪರ ಪ್ರೀತಿಯ ಜೀವನವನ್ನು ಹೊಂದಾಬಹುದು ಎಂದರು. ಸಂಗೀತ ಶಿಕ್ಷಕಿ ಭಾಗೇಶ್ವರಿ ಜಿ. ಮಯ್ಯ ಅವರ ಪೋಷಕರಾದ ಜ್ಯೋತಿಷ್ಮತಿ ಉಡುಪ ಅವರು ಶಾಸ್ತ್ರೀಯವಾಗಿ ಭಜನೆ ಕಲಿಸುದಾರ ಮೂಲಕ ವಿದ್ಯುಕ್ತವಾಗಿ ತರಗತಿಗೆ ಚಾಲನೆ ನೀಡಿದರು. ಸಂಸ್ಥೆಯ ಸಂಗೀತ ಶಿಕ್ಷಕಿ ಭಾಗೇಶ್ವರಿ ಜಿ. ಮಯ್ಯ ಪ್ರಸ್ತಾವನೆಗೈದರು. ಸಂಸ್ಥೆಯ ನಿರ್ದೇಶಕ ಜಿ. ಗೋಪಾಲಕೃಷ್ಣ ಮಯ್ಯ ಕಾರ್ಯಕ್ರಮ ನಿರೂಪಿಸಿದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಜನವರಿ ಆವೃತ್ತಿಯಲ್ಲಿ ನಡೆದ ಕಂಪೆನಿ ಸೆಕ್ರಟರೀಸ್ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ (ಸಿಎಸ್‌ಇಇಟಿ) ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 13 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪ್ರೀತಂ ಬಸವರಾಜ್ ಪಟ್ಟಣ ಶೆಟ್ಟಿ (121), ದೀಕ್ಷಿತ್ ಕುಮಾರ್ (120), ಸುಜೀತ್ ರಾಘವೇಂದ್ರ ಎ. (120), ಯಶವಂತ ರೆಡ್ಡಿ ಎಸ್. (111), ರುಜುಲಾ ಕೆ. (110), ದಿಯಾ ಎಸ್. ಶೆಟ್ಟಿ (107), ನಂದನ್ ಗೌಡ ಆರ್. (100), ನಂದಿಕಾ ಶ್ರೀ ಡಿ.ವಿ. (100), ಮನೀಶ್ ಗೌಡ ಆರ್. (100), ಶರಣ್ಯ ಯು. ಶೆಟ್ಟಿ (100), ಬಸವಪ್ರಸಾದ್ ಎಸ್ ಮಳಗಲಿ (100), ಸುಪ್ರಿಯಾ ಎಂ. (100), ಶ್ರೇಯಾ ದಿನೇಶ್ ಕಟಾರಿಯಾ (100) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದೃಷ್ಟಿ ದೋಷ ಮತ್ತು ಶ್ರವಣ ದೋಷ ಇದ್ದವರು ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ದೃಷ್ಟಿ ದೋಷ ಮತ್ತು ಶ್ರವಣ ದೋಷ ಇದ್ದವರಿಗೆ ಸರಕಾರದಿಂದ ವಿವಿಧ ಸೌಲಭ್ಯಗಳಿದ್ದು, ಇದನ್ನು ಪಡೆದುಕೊಂಡು ಕಣ್ಣಿನ ಮತ್ತು ಶ್ರವಣ ದೋಷದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂದು ಉಡುಪಿ ಜಿಲ್ಲಾಸ್ಪತ್ರೆಯ ರೇಡಿಯೊಲೋಜಿಸ್ಟ್ ಸಮೀಕ್ಷಾ ಡಿ. ರಾವ್ ಹೇಳಿದರು. ಅವರು ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ, ಗ್ರಾಮ ಪಂಚಾಯತ್ ಗಂಗೊಳ್ಳಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಜರಗಿದ ಉಚಿತ ನೇತ್ರ ತಪಾಸಣೆ ಮತ್ತು ಶ್ರವಣ ದೋಷ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ, ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ. ಅಜಯ್ ತಿವಾರಿ, ಗಂಗೊಳ್ಳಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉತ್ತರ ಪ್ರದೇಶದ ನೊಯ್ದಾದಲ್ಲಿ ನಡೆದ ಭಾರತೀಯ ಬೇಕರಿ ಉತ್ಪನ್ನಗಳಿಗೆ ಜಾಗತಿಕ ಸ್ಪರ್ಧಾತ್ಮಕತೆ, ರಫ್ತು ಸನ್ನದ್ಧತೆ ಕುರಿತು ಸಂವಾದ ಕಾರ್ಯಕ್ರಮ (ಇಂಡಸ್‌ಫುಡ್ 2026) ದಲ್ಲಿ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಸಂಪನ್ಮೂಲ ವ್ಯಕ್ತಿ, ನ್ಯಾಯವಾದಿ ಶ್ರೀಧರ ಪಿ.ಎಸ್. ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಬೇಕರಿ ಉತ್ಪನ್ನಗಳ ಪ್ರಸ್ತುತ ರಫ್ತು ಸ್ಥಿತಿಗತಿ, ಕೊರತೆ, ನಿರ್ಬಂಧಗಳು, ರಫ್ತು ಹಿನ್ನಡೆಗೆ ಕಾರಣಗಳು, ಬೇಕರಿ ಉತ್ಪನ್ನಗಳ ರಫ್ತು ಅವಕಾಶ ಸದ್ಬಳಕೆಗೆ ಸಿದ್ಧತೆ, ಜಾಗತಿಕ ಸ್ಪರ್ಧಾತ್ಮಕತೆ ಮತ್ತು ನೀತಿಗಳ ಪ್ರೋತ್ಸಾಹ, ಜಾಗತಿಕ ಮಾರುಕಟ್ಟೆಯ ವಾಸ್ತವ ಕುರಿತು ಸಂವಾದ ಬೆಳಕು ಚೆಲ್ಲಿತು. ಬೇಕರಿ ಉತ್ಪನ್ನಗಳ ರಫ್ತು ನಿಟ್ಟಿನಲ್ಲಿ ನೈಜ ಸಮಸ್ಯೆಗಳು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವಕಾಶಗಳ ಬಗ್ಗೆ ಚರ್ಚಿಸಿ ರಫ್ತು ಉತ್ತೇಜನ ನಿಟ್ಟಿನಲ್ಲಿ ದೇಶದ ನಾನಾ ರಾಜ್ಯಗಳ ಪ್ರತಿನಿಧಿಗಳು ಸಲಹೆ ನೀಡಿದರು. ಸಂವಾದ ವಿಶಿಷ್ಟ ಅನುಭವ ನೀಡಿದೆ. ಇಂಡಸ್‌ಫುಡ್ ಪ್ರದರ್ಶನದಲ್ಲಿ 108ದೇಶಗಳ ಉದ್ಯಮಶೀಲರು ಪಾಲ್ಗೊಂಡಿದ್ದರು. ಇಂಡಸ್‌ಫುಡ್ ಜಾಗತಿಕ ಶ್ರೇಷ್ಠತೆಯ ವೇದಿಕೆಯಾಗಿದ್ದು ಐಬಿಎಫ್, ಕೆಬಿಎಸ್ಎ, ಯುಡಿಎಫ್‌ಎಂಎಸ್ಎ ನೀಡಿದ ಅವಕಾಶದಿಂದ ಬೇಕರಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಕಳೆದ ಡಿಸೆಂಬರ್‌ನಲ್ಲಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಾಲೆ ಅಭೂತಪೂರ್ವ ಫಲಿತಾಂಶ ದಾಖಲಿಸಿದೆ.   ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 92 ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಶಾಲೆ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ. 19 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 51 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕೇಶವ್ ಮಲ್ಯ, ಅಹನಾ ಆರ್. ಶೆಟ್ಟಿ, ಅನ್ವಿತ್ ದೀಪಕ್ ತಂಡೇಲ್, ಅನ್ವಿ ಎಸ್. ಪೂಜಾರಿ, ಸೃಷ್ಟಿ ಬಾಲಪ್ಪ ಲಟ್ಟಿ, ಪ್ರತಿಜ್ಞಾ, ಅಭಿಷೇಕ್ ರಾಮಚಲ್, ರಿಷಾನ್ ಕೆ ಎಸ್, ಋತ್ವಿಕ್ ರವಿ ಕೊನ್ನೂರ್, ಸುಪ್ರೀತಾ ರಾಯಪ್ಪ ಇಡುಡ್ಡಿ, ಪ್ರಶಾಂತ್ ಭೀಮಪ್ಪ ಕೊಲ್ಕಾರ್, ಎಂ. ಅನೂಪ್ ಮಲ್ಯ, ಆದ್ಯಾ ವಿ. ಶೆಟ್ಟಿ, ಪ್ರೀತಮ್, ಪವನ್ ಎ, ನಂದೀಶ್ ಮಲ್ಲಿಕಾರ್ಜುನ್ ಕಡಲಿಗೊನ್ನವರ್,  ದರ್ಶನ್ ಚೊಳಪ್ಪ ಸಮಾಜೆ, ಮಾಲಿಯಪ್ಪ ಶಣ್ಮುಖಪ್ಪ ಕಂಬಾರ್,  ವಿಶ್ವ ಶಂಕ್ರಪ್ಪ ಉಂಡಿ ಸೇರಿದಂತೆ ಒಟ್ಟು 19…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತಿಯ 2025-26ನೇ ಸಾಲಿನ ಮಕ್ಕಳ ಮತ್ತು ಮಹಿಳಾ ವಿಶೇಷ ಗ್ರಾಮ ಸಭೆಯು ಇಲ್ಲಿನ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಮಂಗಳವಾರ ನಡೆಯಿತು. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಬಗ್ಗೆ ಕುಂದಾಪುರದ ವಕೀಲೆ ಮಲ್ಲಿಕಾ ಜಯಂತ್ ಕಾನೂನು ಮಾಹಿತಿ ನೀಡಿದರು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿಯ ಮುಖ್ಯ ಶಿಕ್ಷಕಿ ಚಂದ್ರಕಲಾ ಅವರು ಮಕ್ಕಳ ಹಕ್ಕುಗಳ ಕಾನೂನು ಮಾಹಿತಿ ಮತ್ತು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ ಅವರು ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆದ ಸುಶ್ಮಿತಾ, ಶೈಕ್ಷಣಿಕ ಸಾಧಕರಾದ ಮನಾಲಿ, ಸುಮಂತ್ ಖಾರ್ವಿ ಮತ್ತು ಹಿಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಸೈ ನವೀನ್, ಅಂಗನವಾಡಿ ಮೇಲ್ವಿಚಾರಕಿ ರೇಖಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಸೌಜನ್ಯ ಮತ್ತು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ನಾರಾಯಣ ಗುರು ವಸತಿ ಶಾಲೆಗಳಲ್ಲಿ 2026-27 ನೇ ಸಾಲಿಗೆ 6 ನೇ ತರಗತಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಜನವರಿ 25 ಕೊನೆಯ ದಿನವಾಗಿದ್ದು, ಸಮೀಪದ ವಸತಿ ಶಾಲೆಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ರಹ್ಮಾವರದ ಆರೂರು ದೂ.ಸಂಖ್ಯೆ: 9482625925, ಕಾಪು ತಾಲೂಕಿನ ಕಳತ್ತೂರು ದೂ.ಸಂಖ್ಯೆ: 9535225409, ಪಟ್ಲ ಹಿರೇಬೆಟ್ಟು ದೂ.ಸಂಖ್ಯೆ: 8970292710, ಹೆರಂಜಾಲು ದೂ.ಸಂಖ್ಯೆ: 8073860074, ಕಾರ್ಕಳ ಮಿಯ್ಯಾರು ದೂ.ಸಂಖ್ಯೆ: 9739790298 ಹಾಗೂ ಯಡ್ಯಾಡಿ-ಮತ್ಯಾಡಿ ದೂ.ಸಂಖ್ಯೆ: 9901519126, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಶಂಕರನಾರಾಯಣ ದೂ.ಸಂಖ್ಯೆ: 6363120177 ಹಾಗೂ ಅಜೆಕಾರು ದೂ.ಸಂಖ್ಯೆ: 7204909862, ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ ದೂ.ಸಂಖ್ಯೆ: 9482487266 ಹಾಗೂ ನಾರಾಯಣ ಗುರು ವಸತಿ ಶಾಲೆ ವಡ್ಡರ್ಸೆ ದೂ.ಸಂಖ್ಯೆ: 8867415291 ಅನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಸಿಎಸ್‌ಐ ಬೋರ್ಡ್‌ನಿಂದ ನಡೆಸಲ್ಪಡುವ ದೇಶದ ಅತಿ ಕ್ಲಿಷ್ಟಕರ ಪರೀಕ್ಷೆಗಳಲ್ಲಿ ಒಂದಾದ ಸಿಎಸ್‌ಇಇಟಿ ಜನವರಿ ಆವೃತ್ತಿಯ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿಕೊಂಡಿದ್ದಾರೆ. ದೇಶದಲ್ಲಿ ಕಂಪನಿ ಸೆಕ್ರೆಟರಿ ಪರೀಕ್ಷೆಯ ಅರ್ಹತೆಗಾಗಿ ನಡೆಯುವ ಸಿಎಸ್‌ಇಇಟಿ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ 60 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ತೇರ್ಗಡೆಗೊಂಡು ಮುಂದಿನ ಸಿಎಸ್‌ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. 200ಕ್ಕೆ ಅತಿ ಹೆಚ್ಚು 169 ಅಂಕವನ್ನು ಪಡೆದ ಸಾಯಿ ಪ್ರಸಾದ್ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ, ಕಿಶನ್ ಎನ್. 157, ಮಂಗಿಲಾಲ್ 157 ಅಂಕವನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ. ಜತಿನ್ ಹರೀಶ್ 144, ಸ್ಪೂರ್ತಿ ಯು.ಎ. 143, ಭೂಮಿಕಾ ಸುಬ್ರಾಯ ಹೆಗ್ಡೆ 137, ಚಿನ್ಮಯ್ ಆರ್. 134, ವರುಣ್ ಚಂದ್ರಶೇಖರ್ 130 ಅಂಕಗಳನ್ನು ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ 120 ಕ್ಕಿಂತ ಅಧಿಕ ಅಂಕಗಳನ್ನು 15 ವಿದ್ಯಾರ್ಥಿಗಳು, 110ಕ್ಕಿಂತ ಅಧಿಕ ಅಂಕಗಳನ್ನು 21 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲೆಯ ವಿವಿಧ ಪ್ರಕಾರಗಳನ್ನು ಕಲಿಸುತ್ತಾ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತಿರುವ ಸುರಭಿ ಸಂಸ್ಥೆ ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿಸುವ ಕಾರ್ಯದಲ್ಲಿ ತೊಡಗಿದೆ. ಕಲೆ ಉಳಿಯಬೇಕಾದರೆ ಅದರ ಬಗ್ಗೆ ಅರಿವು ಅಗತ್ಯ. ನಮ್ಮ ಆಸಕ್ತಿಗಳೇ ಸಾಂಸ್ಕೃತಿಕ ಸಿರಿವಂತಿಗೆಗೆ ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ಸುರಭಿಯ ರಜತ ವರ್ಷದ ಪ್ರಯುಕ್ತ ಶ್ರೀ ಶಾರದಾ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ನಾಟಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಶಿಕ್ಷಣವು ವ್ಯಕ್ತಿಯಲ್ಲಿ ಸಂಸ್ಕಾರ ಹಾಗೂ ಸ್ವಾಭಿಮಾನವನ್ನು ಬೆಳೆಸುತ್ತದೆ. ಶಿಕ್ಷಣದ ಜತೆಗೆ ಕಲಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆತ ಮತ್ತಷ್ಟು ಕ್ರಿಯಾಶೀಲನಾಗುತ್ತಾನೆ ಎಂದರು. ಉದ್ಯಮಿ ಡಾ. ಗೋವಿಂದಬಾಬು ಪೂಜಾರಿ ಶುಭಾಶಂಸನೆ ಮಾಡಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಗೋವಿಂದ ಎಂ. ಆಶಯ ನುಡಿಗಳನ್ನಾಡಿದರು. ಉದ್ಯಮಿ ರಾಜು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ:  ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಇವರು ನಡೆಸುವ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ (ಅರ್ಹತಾ ಪರೀಕ್ಷೆ CSEET)ಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪರೀಕ್ಷೆ ಬರೆದ 43 ವಿದ್ಯಾರ್ಥಿಗಳಲ್ಲಿ  39 ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಪಡೆಯುದರ ಮೂಲಕ  CS ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಗೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಸಹನಾ(168), ಅಮೂಲ್ಯ ಆರ್ ಶೆಟ್ಟಿ (166), ಧನುಷ್ ಆರ್ ಹೆಬ್ಬಾರ್( 164) ಪ್ರಥಮ್ ಜಿ ಕಾಂಚನ್(159), ಶಮ್ಯ(156) ಶಿವಮ್(155), ಶಯನ್(154), ಶ್ರೀಶಾ ಆರ್ ಶೆಟ್ಟಿ (154), ದ್ರಶ್ಯ ಜಿ ದೇವಾಡಿಗ(153), ಸಂಕೇತ್ ಎಸ್ ಬಿಲ್ಲವ (153), ಆದಿತ್ಯ ಆರ್ ಶೆಟ್ಟಿ (151), ಪ್ರಜ್ವಲ್(148), ಶಮಿತ್ ಬಿ ಪೂಜಾರಿ(145), ಪ್ರೀಥನ್ (142),ಸಂಜಯ್(142), ಶ್ರೀಶಾ ಕೆ.ಎಸ್ (136), ವೈಭವ್(134), ಮೋಹಿತ್(133), ಸ್ಪಂದನ (130),ನಿಶ್ಚಿತ್ (130), ಪೂಜಾರಿ ತನ್ವಿ ಲವ (126), ಶ್ರೇಷ್ಠ ಆರ್ ನಾಯಕ್(125), ಪಲ್ಲವಿ ಆರ್ ಪೂಜಾರಿ (123), ಪ್ರಥಮ್ ಮಯ್ಯ(122), ಹಿರಣ್ಮಯಿ(120), ಸತ್ಯನಾರಾಯಣ (118), ಸಾನಿಕ(116),…

Read More