Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಕುಂದಾಪುರ ಪುರಸಭಾ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಕುಂದಾಪುರ ಒಳಚರಂಡಿಯ ಅವ್ಯವಸ್ಥೆ, ರಾಷ್ಟ್ರೀಯ ಹೆದ್ದಾರಿ ನಿರ್ಲಕ್ಷ್ಯ, ಬೀದಿ ನಾಯಿ ಕಾಟ ತಪ್ಪಿಸಲು ಸಂತಾನ ಹರಣ ಚಿಕಿತ್ಸೆ ಹಾಗೂ ಪುರಸಭೆ ಸುವರ್ಣ ಮಹೋತ್ಸವ ಆಚರಿಸುವ ಬಗ್ಗೆ ಪ್ರಮುಖ ಚರ್ಚೆಯಾದವು. ಪುರಸಭೆಯ ಹಿರಿಯ ಸದಸ್ಯ ಮೋಹನದಾಸ ಶೆಣೈ ಮಾತನಾಡಿ ಸಮಗ್ರ ಒಳಚರಂಡಿ ಯೋಜನೆ, ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಗಾಗಿ ಅಗೆಯಲಾದ ರಸ್ತೆಗಳು ಪ್ರಸ್ತುತ ಯಾವ ಸ್ಥಿತಿಗೆ ತಲುಪಿವೆ ಎಂಬುದನ್ನು ಖಾತ್ರಿ ಪಡಿಸಲು ಪುರಸಭೆ ಅಧಿಕಾರಿಗಳು ಕಛೇರಿ ಬಿಟ್ಟು ಒಮ್ಮೆ ನಗರ ಸುತ್ತಾಡಿ ಬನ್ನಿ. ಜನರು ಅನುಭವಿಸುತ್ತಿರುವ ಗೋಳು ಏನೆಂದು ಆಗ ಅರ್ಥವಾಗುತ್ತದೆ. ಪ್ರತಿಯೊಂದು ರಸ್ತೆಗಳು ಹದಗೆಟ್ಟಿವೆ. ವಿಪರೀತ ಮಳೆಯ ಕಾರಣಕ್ಕೆ ಹದಗೆಟ್ಟಿವೆ ಎಂಬುದರಲ್ಲಿ ಅರ್ಥವಿಲ್ಲ. ಮಳೆಗೆ ಮೊದಲೆ ಕೆಟ್ಟು ಹೋಗಿತ್ತು. ಈಗ ಮತ್ತಷ್ಟು ಹದಗೆಟ್ಟು ಹೋಗಿದೆ ಎಂದು ಹೇಳಿದರು. ಪುರಸಭೆ ಅಧ್ಯಕ್ಷೆ ವೀಣಾ ಬಿ. ಮೆಂಡನ್ ಪ್ರತಿಕ್ರಿಯಿಸಿ ಈಗಾಗಲೇ ವಾರ್ಡ್ ಸದಸ್ಯರ ಕೋರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರತ್ತೂಬಾಯಿ ಜನತಾ ಪ್ರೌಢಶಾಲೆ ಬೈಂದೂರು ಆಶ್ರಯದಲ್ಲಿ ನಡೆದ ಬೈಂದೂರು ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಕೊಲ್ಲೂರು ಬಾಲಕಿಯರ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು ಬಿದ್ಕಲ್ಕಟ್ಟೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು , ಬೋಧಕ, ಬೋಧಕೇತರ ವೃಂದದವರು ಮತ್ತು ಹಳೆ ವಿದ್ಯಾರ್ಥಿಗಳು ಮತ್ತು ಊರವರು ಅಭಿನಂದನೆ ಸಲ್ಲಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ವಿವಿವಿ ಮಂಡಳಿ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಈ ವೇಳೆ ಉಡುಪಿ ಅರಣ್ಯ ಸಂಚಾರಿದಳದ ಎಸಿಎಫ್ ಶ್ರೀಧರ ಪಿ., ಉದ್ಯಮಿಗಳಾದ ವೆಂಟರಮಣ ಬಿಜೂರು, ಕೃಷ್ಣಯ್ಯ ಮದ್ದೋಡಿ, ಕ್ಷೇತ್ರ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಚಂದ್ರಶೇಖರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಸೂತ್ರಧಾರ ಹಾಗೂ ಅರ್ಥಧರಿ, ಹಿರಿಯ ಗೊಂಬೆಯಾಟ ಕಲಾವಿದ ಹೆಮ್ಮಾಡಿ ಹೇಮಾಪುರ ನಿವಾಸಿ ನಾರಾಯಣ ಬಿಲ್ಲವ (63) ಅನಾರೋಗ್ಯದಿಂದ ಸೋಮವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಾರಾಯಣ ಬಿಲ್ಲವ ಅವರು ಕಳೆದ 43 ವರ್ಷದಿಂದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಖಾಯಂ ಕಲಾವಿದರಾಗಿದ್ದು, ಹತ್ತು ಹಲವು ವಿದೇಶದಲ್ಲಿ ನಡೆದ ಗೊಂಬೆಯಾಟ ಪ್ರದರ್ಶನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅರ್ಥ ಹೇಳುತ್ತಿದ್ದರು. ಕನ್ನಡ, ಕೊಂಕಣಿ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಹಿಡಿತ ಹೊಂದಿದ್ದ ಅವರು ಗೊಂಬೆಯಾಟದ ಸೂತ್ರಧಾರಿ ಹಾಗೂ ಅರ್ಥದಾರಿಯಾಗಿ ಜನ ಮಾನಸದಲ್ಲಿ ನೆಲೆಯೂರಿದ್ದರು. ಉಪ್ಪಿನಕುದ್ರು ಗೊಂಬೆಯಾಟದ ಸಂಸ್ಥಾಪಕ ಕೊಗ್ಗ ದೇವಣ್ಣ ಕಾಮತ್ ಅವರ ಒಡನಾಡಿಯಾಗಿದ್ದು, ಅವರೊಟ್ಟಿಗೂ ತಿರುಗಾಟ ಮಾಡಿದ್ದ ಅವರು, ಮುಂದೆ ಕೊಗ್ಗ ಕಾಮತ್ ಅವರ ಪುತ್ರ ಭಾಸ್ಕರ ಕೊಗ್ಗ ಕಾಮತ್ ಜೊತೆ ಕಲಾವಿದರಾಗಿ ಮುಂದುವರಿದಿದ್ದರು. ಓದಿದ್ದು ಸ್ವಲ್ಪವಾದರೂ ಇಂಗ್ಲಿಷ್, ಹಿಂದಿ ಭಾಷೆಯ ಅವರ ಹಿಡಿತ ನಿಜಕ್ಕೂ ಅಬ್ದುತ ವಾಗಿತ್ತು. ಕೊಂಕಣಿ ಭಾಷೆ ನಿರ್ಗಳವಾಗಿ ಹರಿದು ಬರುತ್ತಿತ್ತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರತಿಭೆಗಳಿಗೆ ಸರಿಯಾದ ಸಮಯದಲ್ಲಿ ಪ್ರೋತ್ಸಾಹ ದೊರೆತಾಗ ಅವರು ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಶಿಕ್ಷಣ ಇಲಾಖೆಯ ಮೂಲಕ ನಡೆಯುವ ಸ್ವರ್ಧೆಯಲ್ಲಿ ಭಾಗವಹಿಸುವ ಎಷ್ಟೋ ವಿದ್ಯಾರ್ಥಿಗಳು ಮುಂದೆ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿದ ಉದಾಹರಣೆಗಳಿವೆ ಎಂದು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಹೇಳಿದರು. ಅವರು ಸೋಮವಾರ ರತ್ತೂಬಾಯಿ ಜನತಾ ಪ್ರೌಢಶಾಲೆಯ ಸಹಯೋಗದೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆಯೋಜಿಸಿದ ಪ್ರೌಢಶಾಲಾ ಬಾಲಕ – ಬಾಲಕಿಯರ ಕಬಡ್ಡಿ 2022 ಪಂದ್ಯಾಟ ಉದ್ಘಾಟಿಸಿ ಕ್ರಿಡಾಪಟುಗಳಿಗೆ ಶುಭಹಾರೈಸಿದರು. ಶ್ರೀ ವಿ.ವಿ.ವಿ. ಮಂಡಳಿ ಉಪಾಧ್ಯಕ್ಷರಾದ ಎಸ್. ರಾಜು ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಡಯಟ್ ಪ್ರಾಂಶುಪಾಲರಾದ ಗೋವಿಂದ ಮಡಿವಾಳ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಬೈಂದೂರು ಸೈಂಟ್ ಥಾಮಸ್ ಶಾಲೆಯ ಪ್ರಾಂಶುಪಾಲರಾದ ಜಾನ್ ನೆಲಿವಿಲ್ಲಾ, ಶ್ರೀ ವಿ.ವಿ.ವಿ. ಮಂಡಳಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಾಕ್ಟ್ ಕ್ಲಬ್ ಕೋಟೇಶ್ವರ ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಕೋಟೇಶ್ವರ ರೋಟರಿ ಭವನದಲ್ಲಿ ಜರುಗಿತು. ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷರಾದ ಸುಧೀರ್ ಶೆಟ್ಟಿ ನೂಜಿ ಪದಪ್ರದಾನ ಮಾಡಿದರು. ನೂತನ ಅಧ್ಯಕ್ಷರಾಗಿ ರಾಕೇಶ್ ಶೆಟ್ಟಿ ವಕ್ವಾಡಿ ಹಾಗೂ ಕಾರ್ಯದರ್ಶಿಯಾಗಿ ಭರತ್ ರಾಜ್ ಕೋಟೇಶ್ವರ ಆಯ್ಕೆಯಾದರು. ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ಪ್ರಭಾಕರ್ ಕುಂಭಾಶಿ ಹಾಗೂ ಆಲೂರು ಶಾಲಾ ಶಿಕ್ಷಕಿ ನಾಗರತ್ನ ಹೇರ್ಳೆ, ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಮಹಾಲಾಸಾ ಕಿಣಿ, ರೋಟರಿ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ, ರೋಟರಾಕ್ಟ್ ಚೇರ್ಮನ್ ಅರುಣ್ ದೇವಾಡಿಗ, ರೋಟರಿ ಚಂದ್ರ ಪೂಜಾರಿ, ರೋಟರಿ ರವೀಂದ್ರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ನಿಶಾ ಜೋಗಿ ಕಾಳಾವರ ಅವರನ್ನು ಸನ್ಮಾನಿಸಲಾಯಿತು. ಶ್ರೀಕಾಂತ್ ಆಚಾರ್ಯ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕ್ಲಬ್ ಬೈಂದೂರು ಪ್ರಾಯೋಜಿತ ರೋಟರ‍್ಯಾಕ್ಟ್ ಕ್ಲ್‌ಬ್ ಉದ್ಘಾಟನಾ ಸಮಾರಂಭ ಇತ್ತಿಚಿಗೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ರೋಟರ‍್ಯಾಕ್ಟ್ ಜಿಲ್ಲಾಧ್ಯಕ್ಷ ಜೈವಿಠ್ಠಲ್ ಕೆ.ಎಸ್. ಪದಗ್ರಹಣ ನೆರವೇರಿಸಿ ಶುಭಹಾರೈಸಿದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಎಚ್. ಉದಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಅರಣ್ಯ ಸಂಚಾರಿದಳದ ಎಸಿಎಫ್ ಶ್ರೀಧರ ಪಿ., ಉಪಾಧ್ಯಕ್ಷ ಚಂದ್ರ ಪೂಜಾರಿ, ವಲಯ ಸೇನಾನಿ ಡಾ. ಪ್ರವೀಣ ಶೆಟ್ಟಿ, ರೋಟರ‍್ಯಾಕ್ಟ್ ಝೋನಲ್ ಕೋ-ಆರ್ಡಿನೇಟರ್ ಜಾನ್ಸ್‌ನ್ ಡಿ. ಅಲ್ಮೆಡಾ, ಎನ್‌ಇಸಿಎಫ್ ಬೈಂದೂರು ಅಧ್ಯಕ್ಷ ಪ್ರಸಾದ ಪಿ ಮೊದಲಾದವರು ಉಪಸ್ಥಿತರಿದ್ದರು. ರೋಟರ‍್ಯಾಕ್ಟ್ ನೂತನ ಅಧ್ಯಕ್ಷರಾಗಿ ಬಿಕಾಂ ವಿದ್ಯಾರ್ಥಿ ರಾಮಕೃಷ್ಣ, ಕಾರ್ಯದರ್ಶಿಯಾಗಿ ಬಿಎ ವಿದ್ಯಾರ್ಥಿ ಕಿಶೋರ್ ಹಾಗೂ ಖಜಾಂಚಿಯಾಗಿ ಬಿಬಿಎ ವಿದ್ಯಾರ್ಥಿ ನಾಗೇಂದ್ರ ಪದವಿ ಸ್ವೀಕರಿಸಿದರು. ಈ ವೇಳೆ ಮಂಗಳೂರು ವಿಭಾಗ ಎನ್.ಇ.ಸಿ.ಎಫ್‌ನ ಹರಿಶ್ ರಾಜ್ ಅವರನ್ನು ಸನ್ಮಾನಿಸಲಾಯಿತು. ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಘು ನಾಯ್ಕ್ ಸ್ವಾಗತಿಸಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಅ.28: ರೋಟರಿ ಕ್ಲಬ್ ರಿ. ಬೈಂದೂರು ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಎನ್.ಇ.ಸಿ.ಎಫ್ ಬೈಂದೂರು ಸಹಯೋಗದಿಂದಿಗೆ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ‘ಸ್ವಾತಂತ್ರ್ಯ ಅಮೃತ ಮಹೋತ್ಸವ ವನ’ ಇತ್ತಿಚಿಗೆ ಉದ್ಘಾಟನೆಗೊಂಡಿತು. ಉಡುಪಿ ಅರಣ್ಯ ಸಂಚಾರಿದಳದ ಎಸಿಎಫ್ ಶ್ರೀಧರ ಪಿ. ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವ ವನ ಉದ್ಘಾಟಿಸಿ ಮಾತನಾಡಿ, ಪ್ರಾಕೃತಿಕ ಅವಘಡಗಳು ಹೆಚ್ಚಲು ಅರಣ್ಯ ನಾಶ ಪ್ರಮುಖ ಕಾರಣವಾಗಿದೆ. ಮುಂದಿನ ಪೀಳಿಗೆ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕಿದ್ದರೆ, ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಪಾಲನೆ ಮಾಡುವ ಅಗತ್ಯವಿದೆ ಎಂದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಎಚ್. ಉದಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ರೋಟರ‍್ಯಾಕ್ಟ್ ಜಿಲ್ಲಾಧ್ಯಕ್ಷ ಜೈವಿಠ್ಠಲ್ ಕೆ.ಎಸ್., ಉಪಾಧ್ಯಕ್ಷ ಚಂದ್ರ ಪೂಜಾರಿ, ವಲಯ ಸೇನಾನಿ ಡಾ. ಪ್ರವೀಣ ಶೆಟ್ಟಿ, ರೋಟರ‍್ಯಾಕ್ಟ್ ಝೋನಲ್ ಕೋ-ಆರ್ಡಿನೇಟರ್ ಜಾನ್ಸ್‌ನ್ ಡಿ. ಅಲ್ಮೆಡಾ, ಬೈಂದೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಭಾನುಮತಿ ಬಿ.ಕೆ., ಬೈಂದೂರು ರೋಟರಿಯ ಐ. ನಾರಾಯಣ,…

Read More

ಬೈಂದೂರು ತಹಶೀಲ್ದಾರರ ಕಛೇರಿಯಲ್ಲಿ ದಾಖಲೆ ತಿದ್ದುತ್ತಿರುವ ಆರೋಪ ಹಿನ್ನೆಲೆ – ಬಿಜೆಪಿ ಕಾಂಗ್ರೆಸ್ ಟಾಕ್ ವಾರ್. ತಮ್ಮದೇ ಸರಕಾರವಿದ್ದರೂ ಬಿಜೆಪಿ ಮಂಡಲ ಅಧ್ಯಕ್ಷರು ಆರೋಪ ಮಾಡುತ್ತಿರುವುದು ನಾಚಿಕೆಗೇಡು ಎಂದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಜನತಾ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಪ್ರಾಯೋಜಿತ ಇಂಟರಾಕ್ಟ್ ಕ್ಲಬ್ 2022-23ನೇ ಸಾಲಿನ ಪದಪ್ರದಾನ ಸಮಾರಂಭ ಇತ್ತೀಚಿಗೆ ಜರುಗಿತು. ಮುಖ್ಯ ಅತಿಥಿಗಳಾಗಿ ಖ್ಯಾತ ದಂತ ವೈದ್ಯರಾದ ರೊ. ಡಾ. ರಾಜಾರಾಮ್ ಶೆಟ್ಟಿ ಜೀವನಶೈಲಿ ಮತ್ತು ಶಿಕ್ಷಣದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ರೋಟರಿ ಕುಂದಾಪುರದ ಅಧ್ಯಕ್ಷರಾದ ವೆಂಕಟೇಶ್ ನಾವುಂದ ಇಂಟರಾಕ್ಟ್ ಅಧ್ಯಕ್ಷೆ ಕು. ಕೃತಿಕಾ ಮತ್ತು ತಂಡದವರಿಗೆ ಪದ ಪ್ರದಾನ ಮಾಡಿ ರೋಟರಿ ಬಗ್ಗೆ ಮಾಹಿತಿ ನೀಡಿ ಶುಭಾಶಯ ಕೋರಿದರು. ಕಾರ್ಯದರ್ಶಿ ರೊ. ನಾಗರಾಜ್ ಶೆಟ್ಟಿ ಇಂಟರಾಕ್ಟ್ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಮಂಜು ಕಾಳವರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಶಿಕ್ಷಕ ಜಗದೀಶ್ ಶೆಟ್ಟಿ ನಿರೂಪಣೆ ಮಾಡಿದರು. ಇಂಟ್ರಾಕ್ಟ್ ಕಾರ್ಯದರ್ಶಿ ಪ್ರೀತಮ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೀನುಗಾರಿಕೆ ಮುಗಿಸಿಕೊಂಡು ಹಿಂದಿರುಗುತ್ತಿದ್ದ ದೋಣಿಗೆ ತೆರೆಯೊಂದು ಅಪ್ಪಳಿಸಿ ಕಲ್ಲಿಗೆ ಬಡಿದ ಪರಿಣಾಮ ದೋಣಿಗೆ ಹಾನಿಯಾದ ಘಟನೆ ಅ.22ರಂದು ನಡೆದಿದೆ. ಕಿರಿಮಂಜೇಶ್ವರ ಗ್ರಾಮದ ಕೊಡೇರಿ ನಿವಾಸಿ ಪ್ರತಿಮಾ ಎಂಬುವವರಿಗೆ ಸೇರಿದ ದೋಣಿಯಲ್ಲಿ ಮೂವರು ಮೀನುಗಾರರು ಮೀನುಗಾರಿಕೆ ಮುಗಿಸಿಕೊಂಡು ಹಿಂದಿರುತ್ತಿದ್ದರು. ಕೊಡೇರಿ ಬಂದರು ಸಮೀಪಿಸುತ್ತಿದ್ದಂತೆ ನೀರಿನ ಸೆಳೆದ ಹೆಚ್ಚಾಗಿ ದೊಡ್ಡದಾದ ತೆರೆಯೊಂದು ದೋಣಿಗೆ ಬಡಿದ ಪರಿಣಾಮ, ದೋಣಿಯು ಬ್ರೇಕ್ ವಾಟರ್ ಕಲ್ಲಿಗೆ ಬಡಿದು ಹಾನಿಯಾಗಿದೆ. ಘಟನೆಯಲ್ಲಿ ದೋಣಿಯ ಇಂಜಿನ್ ಮತ್ತು ಬಲೆ ನೀರು ಪಾಲಾಗಿದ್ದು, ಒಟ್ಟು ರೂ.3,00,000 ದಷ್ಟು ನಷ್ಟ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More