ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಸಿಎ ಸಿಎಸ್ ಪ್ರೊಫೆಷನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಶಿಕ್ಷಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಂಸ್ಥೆಯ ವಿದ್ಯಾರ್ಥಿಗಳು ಮೇ ಮತ್ತು ಜುಲೈ 2022ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸಿದ ಸಿ ಎಸ್ ಫೌಂಡೇಶನ್ (ಸಿಎಸ್ಇಇಟಿ) ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದುವುದರ ಮೂಲಕ ಉತ್ತಮ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕೃತಿಕ್ ಶೆಟ್ಟಿ (163), ಶ್ರವಣ್ ಕಾಮತ್ (161), ಅಜಯ್ (147), ಮಹೇಶ (138), ದೇವಿಕ ಎನ್ (132), ರೋಹಿತ್ ಆಚಾರ್ಯ (130), ಅಂಜಲಿ (128) ಅಂಕಗಳಿಸುವುದರೊಂದಿಗೆ ಸಿ ಎಸ್ ಫೌಂಡೇಶನ್ (ಸಿಎಸ್ಇಇಟಿ) ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪೂರ್ಣಗೊಳಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಜ್ಯೋತಿ ಎನ್ (205), ವರುಣ್ ಆಚಾರ್ಯ (201) ಸಿ.ಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಯ ಪ್ರಥಮ ಗ್ರೂಪ್ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು ಈಗಾಗಲೇ ಅಖಿಲ ಭಾರತ ಮಟ್ಟದಲ್ಲಿ ಸಿಎ ಸಿಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಬಿಎಸ್ಸಿ ಫ್ಯಾಷನ್ ಡಿಸೈನಿಂಗ್ ವಿಭಾಗದ ವತಿಯಿಂದ ’ನವ್ಯತಾ’ ಫ್ಯಾಷನ್ ವಸ್ತುಗಳ ಪ್ರದರ್ಶನ ಕಾರ್ಯಕ್ರಮ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಫೆವಿಕ್ರಿಲ್ ಸಂಸ್ಥೆಯ ಸಂಗಮೇಶ್ ಮಾತನಾಡಿ, ಬದಲಾಗುತ್ತಿರುವ ಜಗತ್ತಿನ ಪರಿಸ್ಥಿತಿಗೆ ಅನುಗುಣವಾಗಿ ನೂತನ ಆವಿ?ರಗಳು ಹುಟ್ಟಿಕೊಳ್ಳುತ್ತವೆ. ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಅವುಗಳನ್ನು ಅಳವಡಿಸಿಕೊಳ್ಳುವ ಮನೋಭಾವವೂ ಇರಬೇಕು. ಫ್ಯಾ?ನ್ ಕ್ಷೇತ್ರದಲ್ಲಿ ಹೊಸ ರೀತಿಯ ಪ್ರಯೋಗಗಳಿಗೆ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿದ್ದು ಅದರ ಸದುಪಯೋಗಗೊಳಿಸಬೇಕೆಂದರು. ಆಳ್ವಾಸ್ ವಿದ್ಯಾರ್ಥಿಗಳು ಹಿಂದೆ ನಡೆದ ಕಾರ್ಯಾಗಾರದಿಂದ ಕಲಿತು ತಯಾರಿಸಿದ ವಸ್ತ್ರ ವಿನ್ಯಾಸಗಳನ್ನು ಗಮನಿಸಿ, ಫೆವಿಕ್ರಿಲ್ ಸಂಸ್ಥೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಾಗಿ ಘೋಷಿಸಿದರು. ಆಳ್ವಾಸ್ ಶಿಕ್ಷಣ ಪ್ರತಿದಿನದ ಮ್ಯಾನೇಜ್ಮೆಂಟ್ ಟ್ರಸ್ಟಿ, ವಿವೇಕ್ ಆಳ್ವ ಮಾತನಾಡಿ, ಪ್ರಸ್ತುತ ಕ್ಷೇತ್ರವು ಡಿಜಿಟಲ್ ನತ್ತ ಸಾಗುತ್ತಿರುವುದರಿಂದ ಫ್ಯಾ?ನ್ ಡಿಸೈನಿಂಗ್ ಮಾರುಕಟ್ಟೆಯ ವ್ಯಾಪ್ತಿ ವಿಸ್ತರಿಸಿದೆ. ವಿದ್ಯಾರ್ಥಿಗಳು ಒಂದೇ ವಿಷಯಕ್ಕೆ ಸೀಮಿತವಾಗದೇ ಕಲಿಕೆಯ ಜತೆಗೆ ಆದಾಯವನ್ನು ಗಳಿಸುವುದರತ್ತ ಗಮನಹರಿಸಬೇಕು ಎಂದರು. ಕಾರ್ಯಕ್ರಮದಲ್ಲಿ 10 ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ 32 ವಿದ್ಯಾರ್ಥಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಮಹಾಗಣಪತಿ ದೇವಸ್ಥಾನ ಮಟ್ನಕಟ್ಟೆ-ಕೆರ್ಗಾಲು ಇದರ 23ನೇ ವರ್ಷದ ಗಣೇಶ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಶೇಖರ್ ದೇವಾಡಿಗ ಹಿತ್ಲುಮನೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಲಕ್ಷ್ಮಣ್ ದೇವಾಡಿಗ, ಕಾರ್ಯದರ್ಶಿಯಾಗಿ ಮಂಜುನಾಥ ಕಿಣಿ ಹಾಗೂ ಉಳಿದ ಪದಾಧಿಕಾರಿಗಳನ್ನು ಮತ್ತು ಸದಸ್ಯರು ಗಳನ್ನು ಆಯ್ಕೆ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ 2022ನೇ ಸಾಲಿನ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಆಳ್ವಾಸ್ ಶಾಲಾ ವಿದ್ಯಾರ್ಥಿಗಳು ಬಾಲ ಹಾಗೂ ಕಿಶೋರ ವಿಭಾಗಗಳ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ಬಾಲ ವಿಭಾಗ:ಚಿತ್ರಕಲೆಯಲ್ಲಿ ರಿಷಬ್ ಹೆಚ್. ಎಮ್ ಪ್ರಥಮ, ನೃತ್ಯ ಭಜನೆಯಲ್ಲಿ ನಿತ್ಯ ರೀಶ್ ಕಟ್ಟಿ ಮತ್ತು ಬಳಗ ಪ್ರಥಮ, ಸುಶಾನ್ ಡಿ ಪೂಜಾರಿ ಮತ್ತು ಬಳಗ ದ್ವಿತೀಯ, ರಂಗೋಲಿಯಲ್ಲಿ ಸುಶ್ಮಿತಾ ಪ್ರಕಾಶ್ ಚಚಡಿ ಮತ್ತು ಲಕ್ಷೀ ಹನುಮಂತಪ್ಪ ಜೋಗಿ ಪ್ರಥಮ, ಸೃಷ್ಟಿ ಮತ್ತು ಭಕ್ತಿ ಗಿರೀಶ್ ನಾಯ್ಕ್ ದ್ವಿತೀಯ ಬಹುಮಾನ ಪಡೆದಿದ್ದಾರೆ. ಕಿಶೋರ ವಿಭಾಗ:ಭರತನಾಟ್ಯ (ಯುಗಳ)ದಲ್ಲಿ ಸಹನ ಎಸ್ ಅನಗೊಲ್ಕರ್ ಮತ್ತು ಗಾನಶ್ರಿ ಜೈನ್ ದ್ವಿತೀಯ, ನೃತ್ಯ ಭಜನೆಯಲ್ಲಿ ಸಿದ್ಧಲಿಂಗೆಶ್ವರಿ ಎಸ್ ಭುಮ್ಮನ್ನವರ್ ಮತ್ತು ಬಳಗ ಪ್ರಥಮ, ಮನುಜ ನೇಹಿಗ ಮತ್ತು ಬಳಗ ತೃತೀಯ, ರಂಗೋಲಿಯಲ್ಲಿ ವಷ್ಣವಿ ಎಸ್ ಐ ಮತ್ತು sವೇದಾ ಡಿ ವಿ ಪ್ರಥಮ, ಪೂರ್ಣಿಮ ಉದಯ್ ಕುಮಾರ್ ಪಾಟಿಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಡಾ. ನಿಟ್ಟೆ ಶಂಕರ ಅಡ್ಯಂತಾಯ ಮೆಮೊರಿಯಲ್ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್ ಕಾಲೇಜು ಮ್ಯಾನೇಜ್ಮೆಂಟ್ ಫೆಸ್ಟ್ ‘ಎಲ್ ಡೊರಾಡೊ ಎನ್-ನಿಗ್ಮ-2022’ನಲ್ಲಿ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗವು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಹ್ಯೂಮನ್ ರಿಸೋರ್ಸ್ನಲ್ಲಿ ವಿಕ್ರಮ್ ಪ್ರಥಮ, ರಸಪ್ರಶ್ನೆಯಲ್ಲಿ ಮೊಹಮ್ಮದ್ ಆಝೀಬ್ ಹಾಗೂ ಮೊಹಮ್ಮದ್ ಮುಝಾಮಿಲ್ ದ್ವಿತೀಯ, ಸೈಬರ್ ಕ್ವೆಸ್ಟ್ನಲ್ಲಿ ತುಷಾರ್ ಪ್ರಥಮ, ಸಮೂಹ ಗಾಯನದಲ್ಲಿ ಸತ್ಯಜಿತ್ ಹಾಗೂ ತಂಡ ಪ್ರಥಮ, ಗಾಯನದಲ್ಲಿ ಗ್ರೀಷ್ಮಾ ಪ್ರಥಮ, ರೋಡಿಸ್ನಲ್ಲಿ ನಟರಾಜ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಸಾಧಕರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲ ಡಾ. ಕುರಿಯನ್ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಜು.22: ತಾಲೂಕಿನ ಉಪ್ಪುಂದದ ಲಾಡ್ಜಿಗೆ ತೆರಳಿದ್ದ ಅನ್ಯಕೋಮಿನ ಜೋಡಿಗೆ ತಡೆದ ಸಾರ್ವಜನಿಕರು ಥಳಿಸಿ ಬೈಂದೂರು ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಶುಕ್ರವಾರ ನಡದಿದೆ. ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ಗುಜುರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಮೀರ್ ಆಲಿ (45) ಎಂಬಾತ ಎರ್ಟಿಕಾ ಕಾರಿನಲ್ಲಿ ಹಿಂದೂ ಧರ್ಮದ ಸುಮಾರು 28 ವರ್ಷದ ಯುವತಿಯೊಂದಿಗೆ ಉಪ್ಪುಂದದ ಲಾಡ್ಜಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವಿಚಾರ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ತಿಳಿದು ಹೋಟೆಲಿಗೆ ಬಂದಿದ್ದು, ಗಲಾಟೆ ಆರಂಭವಾಗಿದೆ. ಗಲಾಟೆ ನಡೆಯುತ್ತಿರುವುದು ಗಮನಕ್ಕೆ ಬಂದ ಕೂಡಲೇ ಜೋಡಿ ಕೋಣೆಯಿಂದ ಹೊರ ಬಂದು ಕಾರಿನಲ್ಲಿ ಹೊರಡಲು ಯತ್ನಿಸಿದ್ದಾರೆ. ಈ ಸಂದರ್ಭ ಹೊರಗಡೆ ಸೇರಿದ ಗುಂಪು ಥಳಿಸಿದೆ. ಬಳಿಕ ಪೊಲೀಸರಿಗೆ ಸುದ್ಧಿ ಮುಟ್ಟಿ ಪೊಲೀಸರು ಜೋಡಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಯುವತಿ ಅಮೀರ್ ಆಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವಿಚಾರಣೆಯ ತಿಳಿದುಬಂದಿದೆ. ಯುವತಿಯ ಮನೆಯವರಿಗೆ ಪೊಲೀಸರು ಮಾಹಿತಿ ನೀಡಿದ್ದು ಯುವತಿಯ ಮನೆಯವರು ಬೈಂದೂರು ಠಾಣೆಗೆ ಬಂದು ರಾಜಿಯಲ್ಲಿ ಪ್ರಕರಣ ಇತ್ಯರ್ಥಪಡಿಸಿದ್ದಾರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕಲಿಕೆಯ ಜತೆಗೆ ಆರೋಗ್ಯ, ಭೌತಿಕ, ಸಂಸ್ಕೃತಿ ಹಾಗೂ ವ್ಯಕ್ತಿತ್ವದ ವಿಕಸನ ಉಂಟಾದಾಗ ಮಾತ್ರ ಪರಿಪೂರ್ಣ ಶಿಕ್ಷಣವಾಗುತ್ತದೆ. ಬಂಗಾರದ ಪದಕ ದೊರೆಯದಿದ್ದರೂ ಪರವಾಗಿಲ್ಲ, ಬಂಗಾರದಂತ ಗುಣಗಳನ್ನು ಬೆಳೆಸಿಕೊಳಸಿಕೊಂಡು ಬಂಗಾರದ ಮನು?ರಾಗರಬೇಕು ಎಂದು ಖ್ಯಾತ ವಾಗ್ಮಿ ಹಾಗೂ ಅಂಕಣಕಾರ ಡಾ. ಕೆ.ಪಿ ಪುತ್ತೂರಾಯ ಹೇಳಿದರು. ವಿದ್ಯಾಗಿರಿಯ ನುಡಿಸಿರಿ ಸಭಾಂಗಣದಲ್ಲಿ, ಆಳ್ವಾಸ್ ಪದವಿ ಪೂರ್ವ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣವೆಂದರೆ ಕೇವಲ ಮಾಹಿತಿ ಸಂಗ್ರಹಕ್ಕಾಗಿ ಪದವಿ ಪಡೆಯುವುದು ಮಾತ್ರವಲ್ಲ, ಓರ್ವ ವಿದ್ಯಾರ್ಥಿಯಲ್ಲಿ ಸರ್ವತೋಮುಖ ಬೆಳವಣಿಗೆಯ ಕೌಶಲ್ಯಗಳನ್ನು ಬೆಳೆಸುವುದು. ಪದವಿಯಿಂದ ಉದ್ಯೋಗ ಭದ್ರತೆ ಸಾಧ್ಯ ಇದರ ಜತೆಗೆ ಪರಿಪೂರ್ಣ ಜೀವನವನ್ನು ನಡೆಸುವುದನ್ನೂ ಕಲಿಯುವುದು ಅಗತ್ಯ. ಓದುವಾಗ ವಿ?ಯದ ಮೇಲೆ ಪ್ರೀತಿ ಇದ್ದಾಗ, ಹೆಚ್ಚಿನ ಕಾಲ ನೆನಪು ಉಳಿಯುತ್ತದೆ ಹಾಗಾಗಿ ನಾವು ಓದುವ ವಿ?ಯದ ಮೇಲೆ ಪ್ರೀತಿ ಇರಬೇಕು ಮತ್ತು ಓದಿದ್ದನ್ನು ಇನ್ನೊಬ್ಬರಿಗೆ ಹೇಳುವುದು ಒಳ್ಳೆಯ ಉಪಾಯ ಎಂದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ರೋಟರಿ ಜಿಲ್ಲೆ 31 82ರ ಜಿಲ್ಲಾ ಗವರ್ನರ್ ರೊಟೇರಿಯನ್ ಡಾ. ಜಯಗೌರಿ ಹಾದಿಗಲ್ ರವರ ಮಹತ್ವಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮ ಮಹಿಳಾ ಸಬಲೀಕರಣದ ಭಾಗವಾಗಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಆಯ್ದ ಮಹಿಳೆಯರಿಗೆ ಸ್ವ ಉದ್ಯೋಗ ಮಾಡುವಲ್ಲಿ ತರಬೇತುಗೊಳಿಸಲು ಆಯೋಜಿತವಾದ ಮೂರು ತಿಂಗಳ ಕಾಲಾವಧಿಯ ಉಚಿತ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ ಗಂಗೊಳ್ಳಿಯಲ್ಲಿ ನೆರವೇರಿತು. ವಲಯ ಒಂದರ ಅಸಿಸ್ಟೆಂಟ್ ಗವರ್ನರ್ ಡಾ. ಉಮೇಶ್ ಪುತ್ರನ್ ಶಿಬಿರವನ್ನು ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್ ಕೆ ಅಧ್ಯಕ್ಷತೆ ವಹಿಸಿದ್ದರು. ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ಮನ್ ಉಮೇಶ್ ಎಲ್ ಮೇಸ್ತ ಮತ್ತು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರತ್ನಾಕರ ಖಾರ್ವಿ ಶುಭ ಹಾರೈಸಿದರು. ರೋಟರಿ ಕ್ಲಬ್’ನ ಸದಸ್ಯರು ಮತ್ತು ಎಲ್ಲಾ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಚಂದ್ರಕಲಾ ತಾಂಡೇಲ ಕಾರ್ಯಕ್ರಮವನ್ನು ನಿರ್ವಹಿಸಿದರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ 73ನೇ ಸರಣಿ ಕಾರ್ಯಕ್ರಮ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಸಾಂಗವಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ, ಯಕ್ಷಗಾನ ಕಲಾವಿದರಾದ ಸುಜಯೇಂದ್ರ ಹಂದೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಮೇರಿಕಾದಲ್ಲಿ ಇಂಜಿನಿಯರ್ ಆಗಿರುವ ನಾಗರಾಜ ಪಾದೂರು, ಯಕ್ಷಗಾನ ತಾಳಮದ್ದಲೆ ಪ್ರಾಯೋಜಕರು ಹಾಗೂ ತೆಕ್ಕಟ್ಟೆಯ ಗಣೇಶ್ ಕ್ಲಾತ್ ಸ್ಟೋರ್ಸ್ ಮಾಲಕರಾದ ಅನಂತ ನಾಯಕ್, ಪಾವನಾ ಐತಾಳ್ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ಉಪಸ್ಥಿತರಿದ್ದರು. ಅಕಾಡೆಮಿಯ ವತಿಯಿಂದ ಅನಂತ ನಾಯಕ್ ಹಾಗೂ ಪಾವನಾ ಐತಾಳ್ ರವರನ್ನು ಸನ್ಮಾನಿಸಲಾಯಿತು. ಪಾವನಾ ಐತಾಳ್ ರ ಭಾಗವತಿಕೆ ಹಾಗೂ ನಿರ್ದೇಶನದಲ್ಲಿ ಯಕ್ಷಗಾನ ಕಲಾ ರಂಗ, ನೀರಸಾಲೆ, ಕೋಟೇಶ್ವರ ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಲೆ ಜಾಂಬವತಿ ಕಲ್ಯಾಣ ನೆರೆದ ಪ್ರೇಕ್ಷಕರನ್ನು ರಂಜಿಸಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ರವರು ಕಾರ್ಯಕ್ರಮ ನಿರೂಪಿಸಿದರು. ಉದಯ ಭಂಡಾರ್ಕಾರ್ ಹಟ್ಟಿಯಂಗಡಿ ಇವರು ವಂದನಾರ್ಪಣೆಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿಎ ಸಿಎಸ್ ಪ್ರೊಫೆಷನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಶಿಕ್ಷಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಂಸ್ಥೆಯ ವಿದ್ಯಾರ್ಥಿಗಳು ಮೇ 2022ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಇಂಟರ್ಮೀಡಿಯಟ್ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದುವುದರ ಮೂಲಕ ಉತ್ತಮ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕಿರಣ್ ಕಾಮತ್ (273), ಸುಪ್ರೀತಾ (246), ಜಸ್ವಿಟಾ ಡಿಸೋಜಾ (235), ಅಭಿಷೇಕ್ ಶೆಟ್ಟಿ (219), ಮನೋಜ್ ಶೆಟ್ಟಿ (209), ಅಶ್ವಿನ್ ಸಿ ಶೆಟ್ಟಿ (205), ಸ್ನೇಹ ದೇವಾಡಿಗ (203), ಬಿ ಪ್ರತಿಮಾ (200), ಮಂದಾರ (200), ಶಮಂತ್ ಕೊಠಾರಿ (200) ಅಂಕಗಳಿಸುವುದರೊಂದಿಗೆ ಇಂಟರ್ಮಿಡಿಯೆಟ್ ಪ್ರಥಮ ಗ್ರೂಪ್ ಮೊದಲ ಪ್ರಯತ್ನದಲ್ಲೇ ಪೂರ್ಣಗೊಳಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಅಂಕಿತ ವಿ ಶೆಟ್ಟಿ(200), ಸಿಂಚನ ಶೆಟ್ಟಿ (200) ಸಿಎ ಇಂಟರ್ಮೀಡಿಯಟ್ನ ದ್ವಿತೀಯ ಗ್ರೂಪ್ ಉತ್ತೀರ್ಣ ಹೊಂದುವುದರ ಮೂಲಕ ಸಿಎ ಅಂತಿಮ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ಅನುಭವಿ ಬೋಧಕ…
