Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಲೆಯ ವಿವಿಧ ಪ್ರಾಕರಗಳ ಕಲಿಕೆಗೆ ಗ್ರಾಮೀಣ ಭಾಗದಲ್ಲಿ ಕಳೆದೆರಡು ದಶಕಗಳಿಂದ ಅವಕಾಶ ಮಾಡಿಕೊಡುತ್ತಿರುವ ಸುರಭಿ ಸಂಸ್ಥೆಯು ಕಾರ್ಯ ಶ್ಲಾಘನಾರ್ಹವಾದುದು ಎಂದು ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್. ಅವರು ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ಸುರಭಿ ಜೈಸಿರಿ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಪಾತ್ರ ಬಹುಮುಖ್ಯವಾಗಿದ್ದು, ಸೂಕ್ತ ಸಮಯದಲ್ಲಿ ಅವರ ಆಸಕ್ತಿಯನ್ನರಿತು ಪ್ರೋತ್ಸಾಹಿಸುವುದು ಬಹುಮುಖ್ಯ ಎಂದರು. ಚಿತ್ರಕಲಾ ಶಿಕ್ಷಕರಾದ ನರಸಿಂಹ ಪೂಜಾರಿ ಉಪ್ಪುಂದ ಅವರನ್ನು ಸನ್ಮಾನಿಸಲಾಯಿತು.ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೆಡಿಪಿ ಸದಸ್ಯರಾದ ರಾಮ ಕೆ. ಸೊಡಿತಾರ್, ಎಲ್ಐಸಿ ಅಭಿವೃದ್ಧಿ ಅಧಿಕಾರಿ ರಾಮ ಮೊಗವೀರ ಉಪಸ್ಥಿತರಿದ್ದರು. ಸಂಗೀತ ವಿದ್ವಾನ್ ಮುದೂರು ಪಿ. ಬಾಲಸುಬ್ರಹ್ಮಣ್ಯಂ, ನೃತ್ಯ ವಿದೂಷಿ ಮಾನಸ ರಾಘವೇಂದ್ರ ಪಾರಂಪಳ್ಳಿ, ಚಿತ್ರಕಲಾ ಶಿಕ್ಷಕ ಗಿರೀಶ್ ಗಾಣಿಗ ತಗ್ಗರ್ಸೆ ಅವರಿಗೆ…

Read More

ಸದಾ ಯುವಕರಾಗಿ ಕಾಣುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇವತ್ತಿನ ಪ್ರಪಂಚದಲ್ಲಿ ಪ್ರತಿ ಕ್ಷಣವೂ ಸುಂದರವಾಗಿ ಕಾಣಬೇಕೆಂದು ಹಂಬಲಿಸುತ್ತಾರೆ. ವಯಸ್ಸಾಗುವಿಕೆಯನ್ನು ಮರೆ ಮಾಚಲು ದುಬಾರಿ ಕ್ರೀಮನ್ನು ಬಳಸಿ ರೋಸಿಹೋಗಿರುತ್ತಾರೆ. ಆದರೆ ಕೆಲವೊಂದು ಆಹಾರ ಪದ್ದತಿಗಳು ನೈಸರ್ಗಿಕವಾಗಿ ನಿಮ್ಮನ್ನು ಸದಾಕಾಲ ಯುವಕರಂತೆ ಕಾಣಲು ಸಹಾಯ ಮಾಡುತ್ತದೆ. ಬಾಳೆಹಣ್ಣು:ವಿಟಮಿನ್ ಎ, ಬಿ, ಸಿ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರ. ಈ ಹಣ್ಣಿನಲ್ಲಿರುವ ವಿಟಮಿನ್ ಬಿ ಮತ್ತು ಪೊಟ್ಯಾಷಿಯಮ್ ಮುಖದ ಮೇಲೆ ವಯಸ್ಸಾಗುವಿಕೆಯ ಪರಿಣಾಮಗಳನ್ನು ತಡೆಯುತ್ತದೆ. ಬಾಳೆಹಣ್ಣಿನಲ್ಲಿ ಕಂಡುಬರುವ ಅಂಶವೆಂದರೆ ಬ್ರೊಮೆಲೇನ್, ಇದು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಯುವಕರಾಗಿರುವಂತೆ ಮಾಡುತ್ತದೆ. ಕುಂಬಳಕಾಯಿ ಬೀಜಗಳು :ಅಸಂಖ್ಯಾತ ಆರೋಗ್ಯ ಪ್ರಯೋಜನಗಳಿಗೆ ಈ ಕುಂಬಳಕಾಯಿ ಬೀಜಗಳು ಹೆಸರುವಾಸಿ. ಈ ಬೀಜಗಳಲ್ಲಿ ಸೈಟೋಸ್ಟೆರಾಲ್ ಎಂಬ ದೊಡ್ಡ ಪ್ರಮಾಣದ ಸಂಯುಕ್ತ ಇರುವುದು ಕಂಡುಬರುತ್ತದೆ, ಇದು ಪುರುಷರ ದೇಹದಲ್ಲಿನ ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಸಮತೋಲನಗೊಳಿಸುತ್ತದೆ. ಕುಂಬಳಕಾಯಿ ಬೀಜಗಳಲ್ಲಿ ಆಂಟಿ-ಆಕ್ಸಿಡೆಂಟ್ಸ್ ಮತ್ತು ಸಾರಭೂತ ಆಮ್ಲಗಳಿವೆ. ಇದು ದೈಹಿಕ ಶಕ್ತಿಯನ್ನು ಹೆಚ್ಚಿಸಲು ಕೆಲಸ.ಮಾಡುತ್ತದೆ. ಇದರಲ್ಲಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಉಡುಪಿ,ಮೇ 7: ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿನ ರೈತರಿಗೆ, ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ವಿವಿಧ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೀವ್ರ ತೊಡಕಾಗಿದ್ದ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಸರ್ಕಾರವು ಪ್ರಸ್ತುತ ಬಗೆಹರಿಸಿದ್ದು, 6.60 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಹೊರತುಪಡಿಸಿ, ಸರ್ಕಾರಿ ಆದೇಶ ಹೊರಡಿಸಿದೆ ಎಂದು ರಾಜ್ಯದ ಅರಣ್ಯ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಹೇಳಿದರು. ಅವರು ಇಂದು ಬ್ರಹ್ಮಾವರದ ನೀಲಾವರದಲ್ಲಿ, ಅರಣ್ಯ ಇಲಾಖೆ ಹಾಗೂ ಶ್ರೀ ಪೇಜಾವರ ಮಠದ ಸಹಯೋಗದಲ್ಲಿ, ಉಡುಪಿ ಶ್ರೀ ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಪಾದರ ಗೌರವಾರ್ಥ ನಿರ್ಮಿಸಲಾಗುವ ಸ್ಮೃತಿವನ ನಿರ್ಮಾಣ ಕಾರ್ಯದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ 1996 ರಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ, ತಜ್ಞರ ಸಮಿತಿಯ ಮೂಲಕ 9,94,881.11 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಿದ್ದು, ಸದ್ರಿ ತಜ್ಞರ ವರದಿಯಲ್ಲಿ ಶಾಸನಬದ್ಧ ಅರಣ್ಯಗಳನ್ನು ಡೀಮ್ಡ್ ಅರಣ್ಯಗಳೆಂದು ತಪ್ಪಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್ ಲೈಟ್‌ಹೌಸ್ ಗಂಗೊಳ್ಳಿ ಇದರ ೩೧ನೇ ವಾರ್ಷಿಕೋತ್ಸವ ಸಮಾರಂಭ ಗಂಗೊಳ್ಳಿ ಲೈಟ್‌ಹೌಸ್ ಸಮೀಪದ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ನಡೆಯಿತು. ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿಯ ಉದ್ಯಮಿ ಪದ್ಮನಾಭ ವಿ.ಕೊತ್ವಾಲ್, ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ತುಳಸಿದಾಸ್ ಮೊಗೇರ, ಉದ್ಯಮಿ ಉಮೇಶ ಎಲ್. ಮೇಸ್ತ ಗುಜ್ಜಾಡಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ ಖಾರ್ವಿ ಶುಭಾಶಂಸನೆಗೈದರು. ಅಂತರಾಷ್ಟ್ರೀಯ ಕ್ರೀಡಾಪಟು ಅರುಣಕಲಾ ಎಸ್. ರಾವ್ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಬಿ.ನಾಗರಾಜ ಖಾರ್ವಿ ಸ್ವಾಗತಿಸಿದರು. ಕಾರ್ಯದರ್ಶಿ ಕೇಶವ ಖಾರ್ವಿ ವರದಿ ವಾಚಿಸಿದರು. ನಾಗರಾಜ ಬಿ. ಎನ್. ಸನ್ಮಾನಿತರನ್ನು ಪರಿಚಯಿಸಿದರು. ವಿಶ್ವನಾಥ ಮೊಗವೀರ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಂದರ ಜಿ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆಲವು ದಿನಗಳಲ್ಲಿ ಶಾಲಾ ಕಾಲೇಜುಗಳು ಆರಂಭವಾಗಲಿದ್ದು, ಗ್ರಾಮೀಣ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಬಿಟ್ಟಿಲ್ಲ. ಕೆಎಸ್‌ಆರ್‌ಟಿಸಿ ನಡೆಸುವುದು ಲಾಭ ನಷ್ಟದ ದೃಷ್ಟಿಯಿಂದಲ್ಲ. ಶಾಲಾ ಕಾಲೇಜ್ ಆರಂಭಕ್ಕೂ ಮುನ್ನಾ ಎಲ್ಲಾ ಗ್ರಾಮೀಣ ಭಾಗಗಳಿಗೆ ಬಸ್ ಹೋಗಬೇಕು. ಗ್ರಾಮೀಣ ಭಾಗಕ್ಕೆ ಬಸ್ ಬಿಡದಿದ್ದರೆ ವಿದ್ಯಾರ್ಥಿಗಳ ಜೊತೆಗೆ ಡಿಪೋ ಮುಂದೆ ಧರಣಿ ಕೂರುವುದಾಗಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಕುಂದಾಪುರ ತಾಲೂಕು ಪಂಚಾಯಿತಿ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಕುಂದಾಪುರ ಹಾಗೂ ಬೈಂದೂರು ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಮಳೆಗಾಲ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಆದಷ್ಟು ಬೇಗೆ ಎಲ್ಲಾ ಕಾಮಗಾರಿ ಮುಗಿಸಬೇಕು. ರಸ್ತೆಗಳ ಅಭಿವೃದ್ಧಿಗಾಗಿ ಬೈಂದೂರು ಕ್ಷೇತ್ರಕ್ಕೆ ಸರ್ಕಾರ 600 ಕೋಟಿ ಕೊಟ್ಟಿದೆ. ಬಿಲೋ ಟೆಂಡರ್ ಹಾಕಿ ಗುತ್ತಿಗೆ ಪಡೆದು ಕಳಪೆಯಾಗಿ ಕಾಮಗಾರಿ ನಿರ್ವಹಿಸಿದರೆ ಅದಕ್ಕೆ ಅಧಿಕಾರಿಗಳು ಹೊಣೆ. ಯಾವ ಕಾಮಗಾರಿ ಕಳಪೆಯಾದರೂ ಸಹಿಸೋದಿಲ್ಲ ಎಂದು ಎಚ್ಚರಿಸಿದ್ದಾರೆ. ವಿಧಾನಸಭಾ ಕ್ಷೇತ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಬೈಂದೂರು: ಬೈಂದೂರಿನ ಅಧಿದೇವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಮನ್ಮಹಾ ರಥೋತ್ಸವ, ರಥಾರೋಹಣ ಗುರುವಾರ ಬೆಳಿಗ್ಗೆ ಜರುಗಿತು. ಚಾರಿತ್ರಿಕ ಹಿನ್ನೆಲೆಯುಳ್ಳ ರಥೋತ್ಸವದಲ್ಲಿ ಊರ ಪರವೂರ ಭಕ್ತಸಮೂಹ ಪಾಲ್ಗೊಂಡು ಪುನೀತರಾದರು. ಕಲಾವೈಭವಗಳಿಂದ ಕಂಗೊಳಿಸುವ ದೇವಾಲಯ ಈ ಭಾರಿ ಮತ್ತಷ್ಟು ಅಲಂಕೃತಗೊಂಡಿದ್ದು, ವಾರ್ಷಿಕ ರಥೋತ್ಸವ ಇನ್ನಷ್ಟು ಮೆರಗನ್ನು ನೀಡಿತು. ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇಡಿ ನಗರವೇ ಸಜ್ಜಾಗಿದೆ. ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಸಂಜೆಯ ವೇಳೆಗೆ ರಥವನ್ನು ರಥಬೀದಿಯಲ್ಲಿ ಏಳೆಯಲಾಗುತ್ತದೆ. ರಥಕ್ಕೆ ಗರ್ನಪಟ್ಟೆ ಕಟ್ಟಿದ ಹನ್ನೊಂದು ದಿನಗಳಿಗೆ ರಥೋತ್ಸವ ನಡೆಯುವುದೆಂಬ ಸೂಚನೆ ದೊರೆಯುತ್ತದೆ. ಒಟ್ಟು ಏಳು ದಿನಗಳ ಕಾಲ ನಡೆಯುವ ಉತ್ಸವವು ಧಾರ್ಮಿಕ ಕಾರ್ಯಗಳಿಂದ ಆರಂಭಗೊಳ್ಳುತ್ತದೆ. ಈ ಮಧ್ಯೆ ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ ನಡೆದ ಬಳಿಕ ರಥೋತ್ಸವ, ಅವಭೃಥೋತ್ಸವ ಕೊನೆಯಲ್ಲಿ ನಗರೋತ್ಸವ ನಡೆಯುತ್ತದೆ. ರಥೋತ್ಸವದ ಪೂರ್ವದಲ್ಲಿ ಮುಸ್ಲಿಂ ಭಾಂದವರನ್ನು ಆಹ್ವಾನಿಸುವ, ರಥೋತ್ಸವದ ಆರಂಭದಲ್ಲಿ ಬೈಂದೂರಿನ ಪೊಲೀಸ್ ಠಾಣಾಧಿಕಾರಿಯನ್ನು ಕರೆತಂದು ಚಾಲನೆ ದೊರಕಿಸುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರಾವಳಿ ಜಿಲ್ಲೆಯ ಮಾರಿಕಾಂಬಾ ದೇಗುಲಗಳಲ್ಲಿನ ಮಾರಿ ಜಾತ್ರೆಯಲ್ಲಿ ಕಂಡುಬರದ ಮನೆ ಮನೆಗೆ ಕೋಣ ಮೆರವಣಿಗೆ ಸಂಪ್ರದಾಯವೊಂದು ನೂರಾರು ವರ್ಷಗಳಿಂದ ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತದೆ. ತಾಲೂಕಿನ ಹಕ್ಲಾಡಿ ಗ್ರಾಮದ ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನ ಜಾತ್ರೆಯ ಪೂರ್ವದಲ್ಲಿ ಮನೆ ಬಾಗಿಲಿಗೆ ಬರುವ ಕೋಣಕ್ಕೆ ಮುತ್ತೈದೆಯರು ಕಾಲು ತೊಳೆದು, ಹಣೆಗೆ ಅರಿಶಿನ ಕುಂಕುಮವಿಟ್ಟು, ನೆತ್ತಿಗೆ ಎಣ್ಣೆ ಹಾಕಿ ಭಕ್ತಿಯಿಂದ ಕಾಲಿಗೆರೆಗೆ ಮಾರಿಕಾಂಬಾ ಕಾಪಾಡಮ್ಮಾ ಎಂದು ಬೇಡಿಕೊಳ್ಳುತ್ತಾರೆ. ಕೋಣ ಮನೆ ಬಾಗಿಲಿಗೆ ಬಂದರೆ ಶುಭ, ಸಂಕಷ್ಟ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿಂದ ನೂರಾರು ವರ್ಷಗಳಿಂದ ಕೋಣನ ಮನೆ ಮೆರವಣಿಗೆ ನಡೆಯುತ್ತಿದೆ. ಕೋಣ ಬರುವ ಮನೆಗಳ ಅಂಗಳ ಶುದ್ದಮಾಡಿ, ತಳಿರು ತೋರಣ ಕಟ್ಟಿ, ರಂಗೋಲಿಯಿಟ್ಟು ಊರವರು ಭವ್ಯ ಸ್ವಾಗತ ನೀಡುತ್ತಾರೆ. ಮನೆ ಬಾಗಿಲಿಗೆ ಬಂದ ಕೋಣದ ಕಾಲು ತೊಳೆದು, ಕಾಲು ಹಾಗೂ ಹಣೆಗೆ ತಿಲಕವಿಟ್ಟು ನೆತ್ತಿಗೆ ಎಣ್ಣೆ ಹಚ್ಚಿ, ತಿನ್ನಲು ಅಕ್ಕಿ ನೀಡಲಾಗುತ್ತದೆ. ಇದರಲ್ಲಿ ವಾಡಿಕೆ ಮನೆಗಳಿದ್ದು, ಆ ಮನೆಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕು ಯುವ ಬಂಟರ ಸಂಘ ದಶಮಾನೋತ್ಸವ ವರ್ಷ ಅಧ್ಯಕ್ಷರಾಗಿ ಉಡುಪಿ ಮಿಲಾಗ್ರಿಸ್ ಕಾಲೇಜ್ ಸಹಾಯಕ ಪ್ರಾಧ್ಯಾಪಕ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಆಯ್ಕೆಯಾಗಿದ್ದಾರೆ. ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ, ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕು ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ, ವಿಶ್ವ ಬಂಟರ ಸಮ್ಮೇಳನ ೨೦೧೯ ರ ಉಡುಪಿ ಜಿಲ್ಲೆಯ ಸಲಹಾ ಸಮಿತಿ ಸದಸ್ಯರಾಗಿ, ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕುಂದಾಪುರ ಶಾಖೆಯ ಸಲಹಾ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿರುತ್ತಾರೆ. ಪ್ರಧಾನ ಕಾರ್ಯದರ್ಶಿಯಾಗಿ ಉದ್ಯಮಿ ನಿತೀಶ್ ಶೆಟ್ಟಿ ಬಸ್ರೂರು, ಕೋಶಾಧಿಕಾರಿಯಾಗಿ ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಆಯ್ಕೆಯಾಗಿರುವ ಬಗ್ಗೆ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೌರವಾಧ್ಯಕ್ಷ ಡಾ. ರಂಜನ್ ಶೆಟ್ಟಿ ಹಾಗೂ ಸಂಘದ ಹಾಲಿ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗದ ಅಂಗವಾಗಿ ಯುವಜನ ಸಭಾ ಹಾಗೂ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಪುತ್ತೂರು ಜಗದೀಶ ಆಚಾರ್ಯ ಮತ್ತು ಅವರ ಬಳಗದ ಸಂಗೀತ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ದೇವಸ್ಥಾನದ ಅಭಿವೃದ್ಧಿಯಲ್ಲಿ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿರುವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಚಿನ್ ನಕ್ಕತ್ತಾಯ, ಉಪಾಧ್ಯಕ್ಷರಾದ ಗಣೇಶ್ ಕುಂದೇಶ್ವರ ಕೋಶಾಧಿಕಾರಿ ಗಣೇಶ ಸಲಹೆಗಾರರಾದ ಹೃದಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿ.ಎಸ್‌ಇ ಸ್ಕೂಲ್ ವಿದ್ಯಾರ್ಥಿ ಶ್ಲಾಘಾ ಸಾಲಿಗ್ರಾಮ ಅವರ ಕಟಕ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಬಾಲನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗದು ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು. ರಾಘವೇಂದ್ರ ಆಚಾರ್ ಮಾಲಾ ದಂಪತಿಗಳ ಪುತ್ರಿಯಾದ ಶ್ಲಾಘಾ, ಪ್ರಸ್ತುತ ವಿಶ್ವ ವಿನಾಯಕ ಸಿ.ಬಿ.ಎಸ್.ಇ. ಸ್ಕೂಲ್‌ನಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕಟಕ, ಗಿರ್ಮಿಟ್ ಮೊದಲಾದ ಸಿನಿಮಾದಲ್ಲಿ ನಟಿಸಿದ್ದಾರೆ.

Read More