ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ಪರಿಸರದಲ್ಲಿ ಬ್ರಾಹ್ಮಣರು ಜಾತಿ ಪರಿಗಣನೆಯಲ್ಲಿ ಅಲ್ಪ ಸಂಖ್ಯಾತರು. ಆರ್ಥಿಕವಾಗಿಯೂ ದುರ್ಬಲರು. ಅವರ ಆರ್ಥಿಕ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ನಾಡ ಕೇಂದ್ರಿತವಾಗಿ ವಿಪ್ರ ಸೇವಾ ಸಹಕಾರಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ. ವಿನಾಯಕ ರಾವ್ ಹೇಳಿದರು. ನಾಡ ಗುಡ್ಡೆಯಂಗಡಿಯ ಬಡಾಕೆರೆ ಮಾರ್ಗದಲ್ಲಿರುವ ಸ್ಪೂರ್ತಿ ಕಾಂಪ್ಲೆಕ್ಸ್ನಲ್ಲಿ ಶುಕ್ರವಾರ ನಡೆದ ಸಂಘದ ಕಾರ್ಯಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕು ವ್ಯಾಪ್ತಿಯ ಈ ಸಂಘಕ್ಕೆ ಎಲ್ಲ ವಿಪ್ರರೂ ಸದಸ್ಯರಾಗಬೇಕು. ಸಾಧ್ಯವಾದವರು ಠೇವಣಿ ನೀಡುವುದರ ಜತೆಗೆ ಅನ್ಯ ಸಮುದಾಯದವರಿಂದಲೂ ಠೇವಣಿ ಸಂಗ್ರಹಿಸುವ ಮೂಲಕ ಸಂಘವನ್ನು ಬಲಪಡಿಸಬೇಕು ಎಂದು ಅವರು ವಿಂತಿಸಿದರು. ನಿವೃತ್ತ ಶಿಕ್ಷಕ ಪಿ. ರಾಮಚಂದ್ರಯ್ಯ ಸಂಘದ ಕಚೇರಿಯನ್ನು ಉದ್ಘಾಟಿಸಿದರು. ನಾಗೇಶ ಹೆಬ್ಬಾರ್ ಪಡುಕೋಣೆ ಷೇರು ಪತ್ರ ವಿತರಿಸಿದರು. ಹೊರ್ಣಿ ಪದ್ಮನಾಭ ಹೆಬ್ಬಾರ್ ಠೇವಳಿ ಪತ್ರ ಬಿಡುಗಡೆಗೊಳಿಸಿದರು. ಮರವಂತೆ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಹೆಬ್ಬಾರ್ ಗುಳ್ಕೋಣ್, ತಾಲೂಕು ಬ್ರಾಹ್ಮಣ ಪರಿಷತ್ತಿನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಯಾವುದೇ ಕ್ಷೇತ್ರದದಲ್ಲಿ ಸಾಧಕರಾದರೂ ಜೀವನದಲ್ಲಿ ಕೃತಜ್ಞತಾ ಭಾವವಿರಬೇಕು, ನಮ್ಮ ಉದ್ದೇಶ ಸ್ಪಷ್ಟವಾಗಿದ್ದಾಗ ಮಾತ್ರ ಬುದ್ಧಿಮತ್ತೆಯಿಂದ ಗುರಿ ತಲುಪಲು ಸಾಧ್ಯ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜ್ಹೀರ್ ಹೇಳಿದರು. ಪುತ್ತಿಗೆಯ ಕೆ. ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ವಿವಿಗಳ ಕಳೆದ ಮೂರು ವರ್ಷಗಳ ಶೈಕ್ಷಣಿಕ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಶಿಕ್ಷಣ ಮೆದುಳನ್ನು ಪಳಗಿಸಬೇಕೇ ವಿನಃ ಮಾಹಿತಿಯನ್ನು ತುಂಬುವ ಮೆದುಳನ್ನಾಗಿಸಬಾರದು. ವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನವನ್ನು ಸಮಬಲದಲ್ಲಿ ನಿಭಾಯಿಸಬೇಕು. ಪ್ರತಿಯೊಬ್ಬರೂ ವಿವಿಧ ಸಮಯದಲ್ಲಿ ಹಲವು ವಿಚಾರಗಳನ್ನು ಕಲಿಯುತ್ತಲೇ ಇರುತ್ತಾರೆ, ಕಲಿಯುವಿಕೆಯು ನಿರಂತರ ಪ್ರಕ್ರಿಯೆ ಆದ್ದರಿಂದ ಪಡೆದ ಜ್ಞಾನದ ಕೆಲವು ಅಂಶಗಳನ್ನಾದರೂ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದರು. ತಮ್ಮ ಜೀವನದ ಆದರ್ಶದ ಕುರಿತು ಮಾತನಾಡಿದ ಅವರು, ದೆಹಲಿಯ ತಮ್ಮ ನಿವಾಸದಿಂದ ಸುಪ್ರೀಂ ಕೋರ್ಟ್ ಗೆ ತೆರಳುವ ಸಂದರ್ಭದಲ್ಲಿ…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಸೇರಿಕೊಂಡು ಒಂದು ಸಂಜೆಯನ್ನು ರಾತ್ರಿಯಾಕಾಶದ ಕೌತುಕಗಳನ್ನು ನೋಡುವ ‘ಚುಕ್ಕಿ ಚಂದ್ರಮ’ ಆಕಾಶ ವೀಕ್ಷಣೆ ಕಾರ್ಯಕ್ರಮ ಹಾಗೂ ಒಂದಿಡೀ ದಿನದ ವಿಜ್ಞಾನ ಕಾರ್ಯಾಗಾರ ಶುಕ್ರವಾರ ಕುಂದಾಪುರದ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಜರುಗಿತು. ಸಮುದಾಯ ಕುಂದಾಪುರ ಅನೇಕ ವರ್ಷಗಳಿಂದ ಸಮುದಾಯದ ಒಡನಾಡಿಗಳೂ, ಬಹುಪರಿಚಿತ ನಾಟಕಕಾರರೂ, ವಿಚಾರ ಚಳುವಳಿಯಲ್ಲಿ ತಮ್ಮಿಡೀ ಕುಟುಂಬವನ್ನು ತೊಡಗಿಸಿದ ದಿ. ಕಾರ್ಕಡ ರಾಮಚಂದ್ರ ಉಡುಪರ ನೆನಪಿನಲ್ಲಿ “ಚುಕ್ಕಿ ಚಂದ್ರಮ” ಆಕಾಶ ವೀಕ್ಷಣೆ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ನಿತ್ಯದ ಸೈನ್ಸ್ ಕ್ಲಾಸು ಹೀಗೇ ಇರಬಾರದೆ?ಆರರಿಂದ ಹತ್ತನೇ ತರಗತಿಯವರೆಗಿನ ಐವತ್ತೈದು ಮಕ್ಕಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಬಂದಿದ್ದರು. ಅಡುಗೆಮನೆಯ ಪರಿಚಿತ ಸಾಮಗ್ರಿಗಳನ್ನೇ ಬಳಸಿಕೊಂಡು ವಿಜ್ಞಾನ ಶಿಕ್ಷಕ ಉದಯ ಗಾಂವಕಾರ ರಸಾಯನ ಶಾಸ್ತ್ರದ ಪ್ರಯೋಗಗಳನ್ನು ಮಾಡಿಸುತ್ತಾ ಹೋದಂತೆ ಮಕ್ಕಳು ಏಕೆ, ಹೇಗೆ ಮುಂತಾದ ಪ್ರಶ್ನೆಗಳನ್ನು ಬೆರಗುಗಣ್ಣಿನಿಂದ ಕೇಳತೊಡಗಿದರು. ಈ ಪ್ರಶ್ನೆಗಳಿಂದ ಹೇಗೋ ತಪ್ಪಿಸಿಕೊಂಡು, ಕೆಲವನ್ನು ಎದುರಾಡಿಕೊಂಡು ಮತ್ತೆ ಕೆಲವನ್ನು ಬಗ್ಗಿಸಿ, ಭಾಗಿಸಿ ಉತ್ತರವಾಗಿಸಿಕೊಂಡವರೆಲ್ಲ ರವಿ ಕಟ್ಕರೆ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆರೋಗ್ಯ ಕ್ಷೇತ್ರದಲ್ಲಿ ಕೊರತೆಗಳ ಪಟ್ಟಿ ದೊಡ್ಡದಿದ್ದು, ಪ್ರಸಕ್ತ ಕಾಲಘಟ್ಟದಲ್ಲಿ ಕೊರತೆಗಳಿಗೆ ಮುಕ್ತಿಕೊಡುವ ಕೆಲಸ ಆಗುತ್ತಿದೆ. ವೈದ್ಯಕೀಯ ಕ್ಷೇತ್ರವಷ್ಟೇ ಅಲ್ಲದೆ ನಾಗರಿಕರಿಗೆ ಆರೋಗ್ಯ ಕಾರ್ಡ್ ನೀಡುವ ಮೂಲಕ ಅಸಹಾಯಕರ ನೆರವಿಗೆ ಬರಲಾಗುತ್ತಿದೆ. ಆಸ್ಪತ್ರೆಯಲ್ಲಿಯೆ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸುವ ಮೂಲಕ ಸ್ವಾವಲಂಬಿಯಾಗುತ್ತಿದೆ. ಕರೋನಾ ನಂತರದ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಆಗಿದೆ ಎಂದು ಕೇಂದ್ರ ಕೃಷಿ ಸಚವೆ ಶೋಭಾ ಕರಂದ್ಲಾಜೆ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಪಂ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ, ವಿವಿಧ ರೋಟರಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸಾರ್ವಜನಿಕ ಆಸ್ಪತ್ರೆ ವಠಾರದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಹಿಂಜರಿಕೆ ಬಿಟ್ಟು ಆರೋಗ್ಯ ಸಮಸ್ಯೆ ಬಗ್ಗೆ ವೈದ್ಯರ ಸಲಹೆ ಪಡೆದು ಎಚ್ಚರಿಕೆ ವಹಿಸಬೇಕು. ಖಾಯಿಲೆ ಬರುವುದಕ್ಕಿಂತ ಮುನ್ನಾ ರೋಗದ ಬಗ್ಗೆ ಕಾಳಿಜಿ ವಹಿಸಬೇಕು. ಆರೋಗ್ಯ ಮೇಳದಲ್ಲಿ ಎಲ್ಲಾ ವಿವಿಧ ಖಾಯಿಲೆ ಪರಿಣತ ವೈದ್ಯರು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.23: ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಬಲಗೊಳ್ಳುವ ಅಗತ್ಯವಿದ್ದು, ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿಕೊಂಡಾಗ ಮಾತ್ರ ಎಲ್ಲಾ ಚುನಾವಣೆಯನ್ನೂ ಸಂಘಟನಾತ್ಮಕವಾಗಿ ಎದುರಿಸಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು. ಅವರು ಹೆಮ್ಮಾಡಿಯ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ ಗಂಗೊಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕ್ಷೇತ್ರವಾರು ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿ ತನ್ನನ್ನು ಕಳೆದ ಚುನಾವಣೆಯಲ್ಲಿ ಗೆಲ್ಲಿಸಲು ಸಹಕರಿಸಿದ ಗ್ರಾ.ಪಂ. ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಪರಿಷತ್ ಸದಸ್ಯರಿಗೆ ಸಿಗುವ ಅನುದಾನವನ್ನು ಅಗತ್ಯವಿರುವ ಗ್ರಾ.ಪಂ.ಗಳಿಗೆ ಅದ್ಯತೆ ನೆಲೆಯಲ್ಲಿ ಹಂಚಿಕೆ ಮಾಡಲಾಗುವುದು. ಎಲ್ಲೆಲ್ಲ ಅಗತ್ಯವಿದೆ ಅನ್ನುವುದನ್ನು ತಿಳಿಸುವ ಕಾರ್ಯವನ್ನು ಸ್ಥಳೀಯ ಜನಪ್ರತಿನಿಧಿಗಳು ಮಾಡಬೇಕಿದೆ ಎಂದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಪಕ್ಷ ಭಾವನಾತ್ಮಕವಾಗಿ ಜನರನ್ನು ಮರುಳು ಮಾಡುತ್ತದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದರಿಂದ ವಿಚಲಿತರಾಗದೇ, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ವಿಧಾನಸಭಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ 2020-21 ನೇ ಸಾಲಿನ ಪರೀಕ್ಷೆಯಲ್ಲಿ ಮಂಗಳೂರಿನ ಬೆಸೆಂಟ್ ವಿಮೆನ್ಸ್ ಕಾಲೇಜಿನ ವಿದ್ಯಾರ್ಥಿನಿ ಗಂಗೊಳ್ಳಿಯ ಮನಿಲ ಮಂಜುನಾಥ್ ಖಾರ್ವಿ ಬಿಎಸ್ಸಿ ಪದವಿ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಗಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಬಯೋಕೆಮಿಸ್ಟ್ರಿ ಪ್ರೊಫೆಸರ್ ಡಾ| ಶಿವಾನಂದ ನಾಯಕ್ ಬಿ. ಅವರು ಮಂಡಿಸಿದ ಟೈಪ್-2 ಡಯಾಬಿಟಿಸ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳು ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಅತ್ಯುನ್ನತ ವಿಜ್ಞಾನ ಡಾಕ್ಟರೇಟ್ (ಡಿ.ಎಸ್ಸಿ) ಪದವಿ ದೊರೆತಿದ್ದು, ಎ.23ರಂದು ನಡೆಯುವ 40ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ. ಡಾ ಶಿವಾನಂದ ನಾಯಕ್ ಬಿ ಇವರು ಮೂಲತಃ ಉಡುಪಿಯವರಾಗಿದ್ದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ 14 ವರ್ಷಗಳ ಕಾಲ ಬಯೋಕೆಮಿಸ್ಪಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ನಂತರ ವೆಸ್ಟ್ ಇಂಡೀಸ್ ವಿಶ್ವವಿದ್ಯಾನಿಲಯದ ಮೆಡಿಕಲ್ ಸೈನ್ಸ್ ವಿಭಾಗದಲ್ಲಿ 16 ವರ್ಷಗಳ ಕಾಲ ಪ್ರೊಫೆಸರ್ ಮತ್ತು ಡೆಪ್ಯುಟಿ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶಿವಮೊಗ್ಗದ ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಪ್ರೊಫೆಸರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಚೆನ್ನೈನ ಚೆನ್ನೈನ ಶ್ರೀ ರಾಮಚಂದ್ರ ವಿಶ್ವವಿದ್ಯಾನಿಲಯದ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬೋಧನಾ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸುಮಾರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಗಾಂಧಿಮೈದಾನ ಪಾರ್ಶ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪುರಭವನವನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಶುಕ್ರವಾರ ನಾಗರಿಕರು ಮೌನ ಪ್ರತಿಭಟನೆ ನಡೆಸಿದರು. ಬೈಂದೂರು ಗಾಂಧಿ ಮೈದಾನ ಸಂರಕ್ಷಣಾ ಸಮಿತಿಯ ಪ್ರಮುಖ, ಸಮಾಜ ಸೇವಕ ಸುಬ್ರಹಣ್ಯ ಬಿಜೂರು ಮನವಿ ನೀಡುವ ವೇಳೆ ಮಾತನಾಡಿ, ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಗಾಂಧಿ ಮೈದಾನ (ಕ್ಯಾಂಪಸ್ ಗ್ರೌಂಡ್) ಸ,ನಂ156/3ಎ3ಎ 8.89 ಎಕ್ರೆ ವಿಸ್ತೀರ್ಣವನ್ನು ಹಾಗೂ 153/3ಬಿ 0.20 ಸೆಂಟ್ಸ್ ವಿಸ್ತೀರ್ಣವನ್ನು ಹೊಂದಿದ್ದು, ಮೈದಾನವು ರಕ್ಷಣಾ ಇಲಾಖೆಗೆ ಸೇರಿದೆ. ಮೈದಾನವನ್ನು ಅವಲಂಭಿಸಿ ಸುತ್ತಲಿನ ಶಾಲಾ ಕಾಲೇಜುಗಳ ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತಾ ಬರಲಾಗುತ್ತಿದೆ. ಚುನಾವಣೆಯ ಸಂದರ್ಭ ಮಸ್ಟರಿಂಗ್, ಡಿ-ಮಸ್ಟರಿಂಗ್ ಕಾರ್ಯಗಳಿಗೆ ಮೈದಾನ ಬಳಕೆಯಾಗುತ್ತಿದೆ. ವಿವಿಧ ಶಿಬಿರ, ಉತ್ಸವ, ರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲು ಮೈದಾನವನ್ನು ಬಳಸಿಕೊಳ್ಳಲಾಗುತ್ತಿದೆ. ವಾಕಿಂಗ್, ವಿವಿಧ ಕ್ರೀಡಾ ತರಬೇತಿಗಳಿಗೂ ಮೈದಾನ ಬಳಕೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮೈದಾನವನ್ನು ತುಂಡರಿಸಿ ವಿವಿಧ ಇಲಾಖೆಗಳಿಗೆ ಮಂಜೂರು ಮಾಡಲಾಗುತ್ತಿದ್ದು, ಇದರು ಸರಿಯಾದ ಕ್ರಮವಲ್ಲ. ಮತ್ತೆ ಇದೇ ಮೈದಾನದಲ್ಲಿ ಪುರಭವನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: 2020-21ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಗಳ ರ್ಯಾಂಕ್ಪಟ್ಟಿ ಪ್ರಕಟಗೊಂಡಿದ್ದು, ಈ ಬಾರಿ ಒಟ್ಟು 26 ರ್ಯಾಂಕ್ಗಳನ್ನು ಗಳಿಸಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ರ್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ಕಳೆದ 12 ವರ್ಷಗಳಿಂದ ಸರಾಸರಿ 25ಕ್ಕಿಂತಲೂ ಅಧಿಕ ರ್ಯಾಂಕ್ಗಳನ್ನು ಪಡೆಯುತ್ತಾ ವಿವಿ ಮಟ್ಟದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಪದವಿ, ಸ್ನಾತಕೋತ್ತರ ಹಾಗೂ ಬಿಪಿಎಡ್ ವಿಭಾಗದಲ್ಲಿ ಒಟ್ಟು 11 ಪ್ರಥಮ ರ್ಯಾಂಕ್, ಪದವಿ ಹಾಗೂ ಬಿಪಿಎಡ್ ವಿಭಾಗದಲ್ಲಿ 4 ದ್ವಿತೀಯ ರ್ಯಾಂಕ್, 5 ತೃತೀಯ ರ್ಯಾಂಕ್, 1 ಚತುರ್ಥ ರ್ಯಾಂಕ್, ಪದವಿ ಹಾಗೂ ಬಿ.ಎಡ್ನಲ್ಲಿ ಎರಡು 6ನೇ ರ್ಯಾಂಕ್, ಪದವಿ ವಿಭಾಗದಲ್ಲಿ ಎರಡು 8ನೇ ರ್ಯಾಂಕ್, ಒಂದು 10ನೇ ರ್ಯಾಂಕ್ ಗಳಿಸಿದೆ. ಪದವಿ ವಿಭಾಗ:ಬಿ.ಎ ವಿಭಾಗದಲ್ಲಿ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ (89.19% ) ಪ್ರಥಮ ರ್ಯಾಂಕ್, ಚುಮ್ತಾಂಗ್ (88.33%) ದ್ವಿತೀಯ ರ್ಯಾಂಕ್, ಫಾತಿಮ ಮುಸ್ಕಾನ್ ಜಿ ಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮದ್ಯದ ನಶೆಯಲ್ಲಿದ್ದ ಚಾಲಕನೋರ್ವ ಮುಳ್ಳಿಕಟ್ಟೆಯಿಂದ ಯದ್ವಾ-ತದ್ವಾ ಗ್ಯಾಸ್ ಟ್ಯಾಂಕರ್ ಚಲಾಯಿಸಿ ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ನಡೆದಿದೆ. ಮಂಗಳೂರಿಗೆ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ಮಧ್ಯಾಹ್ನ ಸುಮಾರಿಗೆ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಉಡುಪಿಗೆ ತೆರಳುತ್ತಿದ್ದ ಸ್ಥಳೀಯರಾದ ಪ್ರದೀಪ್ ಮುಳ್ಳಿಕಟ್ಟೆ, ತನ್ನ ಕಾರಿನಲ್ಲಿ ಟ್ಯಾಂಕರ್ ಒವರ್ ಟೇಕ್ ಮಾಡಿ ನಿಲ್ಲಿಸಲು ಸೂಚಿಸಿದ್ದರೂ ಮದ್ಯದ ನಶೆಯಲ್ಲಿದ್ದ ಟ್ಯಾಂಕರ್ ಚಾಲಕ ಸೀದಾ ಟ್ಯಾಂಕರ್ ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ರಾ.ಹೆ. 66 ರ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆಯುತ್ತಾ ಸಾಗುತ್ತಿದ್ದ ಟ್ಯಾಂಕರನ್ನು ಹೆಮ್ಮಾಡಿ ಸರ್ಕಲ್ ಸಮೀಪ ನಿಲ್ಲಿಸಲು ಯತ್ನಿಸಿದಾಗ ಮತ್ತೆ ಮುಂದೆ ಸಾಗಿದ್ದು, ಬಳಿಕ ತಲ್ಲೂರು ಸರ್ಕಲ್ ಬಳಿ ಬೈಕ್ ಸವಾರರ ನೆರವಿನೊಂದಿಗೆ ಟ್ಯಾಂಕರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣವೇ ಪ್ರದೀಪ್ ಮುಳ್ಳಿಕಟ್ಟೆ ಪೊಲೀಸರಿಗೆ ಕರೆಮಾಡಿದ್ದು, ಕುಂದಾಪುರ ಸಂಚಾರಿ ಠಾಣೆಯ ಉಪನಿರೀಕ್ಷಕಿ ಸುಧಾ ಪ್ರಭು ಸ್ಥಳಕ್ಕೆ ಆಗಮಿಸಿ ಗ್ಯಾಸ್ ಟ್ಯಾಂಕರನ್ನು…
