Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.11: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವ ರಾಮನವಮಿ ದಿನದಂದು ವಿಜೃಂಭಣೆಯಿಂದ ಜರುಗಿತು. ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಮಹಾಪೂಜೆ ಇತ್ಯಾದಿ ಧಾರ್ಮಿಕ ವಿಧಿಗಳು ನಡೆದವು. ಕುಂದಾಪುರ ತೇರು ಎಂದೇ ಪ್ರಸಿದ್ಧವಾಗಿರುವ ಜಿಎಸ್ಬಿ ಸಮುದಾಯದ ಪೇಟೆ ಶ್ರೀ ವೆಂಕಟರಮಣ ರಥೋತ್ಸವವನ್ನು ನೋಡಲು ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ರಥಾರೂಡ ಶ್ರೀ ವೆಂಕಟರಮಣ ದೇವರ ರಥವನ್ನು ಸ್ಪರ್ಷಿಸುವ ವಿಶಿಷ್ಟ ಪ್ರಕ್ರಿಯೆ ರಥ ಬಳುವಳಿಯಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ರಥಕ್ಕೆ ಸ್ಪರ್ಷಿಸಿ ಆಶಿರ್ವಾದ ಪಡೆದರು. ದೇವಳದ ಆಡಳಿತ ಮೊಕ್ತೇಸರ ಕೆ. ಮೋಹನದಾಸ ಶೆಣೈ, ಜತೆ ಮೊಕ್ತೇಸರರಾದ ಕೆ. ವಿವೇಕ್ ಪೈ, ಎಂ. ಸುಬ್ರಾಯ ಪೈ ಸೇರಿದಂತೆ ಸಮಿತಿಯ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಮನವಮಿಯ ಅಂಗವಾಗಿ ತಾಲೂಕಿನ ಏಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ಭಾನುವಾರ ಬೆಳಿಗ್ಗೆಯಿಂದ ಶ್ರೀ ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸ್, ವಿಷ್ಣುಸಹಸ್ರನಾಮ ಪಠಣ, ರಾಮಭಜನೆ ಬಳಿಕ ಪೂಜೆಯೊಂದಿಗೆ ಪ್ರಸಾದ ವಿತರಣೆ ನಡೆಯಿತು. ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆದವು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಂತ್ರಜ್ಞಾನ ಎಷ್ಟೇ ಬೆಳೆದರೂ ಪರ್ಯಾಯ ವಿಶ್ವವನ್ನೂ, ಜೀವಂತಿಕೆಯ ಅನುಭೂತಿಯನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಕಲೆಯ ಆಸ್ವಾದನೆಗೆ ಬೇಕಿರುವ ರಸಾನುಭವ ಹಾಗೂ ಬ್ರಹ್ಮಾನುಭವ ನೇರವಾಗಿ ಪಾಲ್ಗೊಳ್ಳುವಿಕೆಯಿಂದ ಪಡೆಯಲು ಸಾಧ್ಯವಿದೆ ಎಂದು ಯುಥ್ ಫಾರ್ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಮಯ್ಯ ಹೇಳಿದರು. ಅವರು ಶನಿವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಲಾವಣ್ಯ ರಿ. ಬೈಂದೂರು 45ನೇ ವಾರ್ಷಿಕೋತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾದ ರಂಗಪಂಚಮಿ -2022 ನಾಟಕೋತ್ಸವವನ್ನು ಉದ್ಫಾಟಿಸಿ ಮಾತನಾಡಿ ನಾಲ್ಕು ದಶಕಗಳನ್ನು ಕಂಡ ಲಾವಣ್ಯ, ತಲೆಮಾರುಗಳ ಅನುಭವವನ್ನು ಕಟ್ಟಿಕೊಂಡು ಗಟ್ಟಿಯಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಲಾವಣ್ಯದ ಅಧ್ಯಕ್ಷರಾದ ಎಚ್. ಉದಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಶುಭಶಂಸನೆಗೈದರು. ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ, ಉಡುಪಿ ಅರಣ್ಯ ಸಂಚಾರಿದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಅತಿಥಿಗಳಾಗಿದ್ದರು. ಹಿರಿಯ ನಾಗರಿಕ ಪ್ರಶಸ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.10: ಪಾಪ ಕ್ರತ್ಯಗಳಿಂದ ಕೆಟ್ಟು ಹೋಗಿದ್ದ ಲೋಕದ ಕಲ್ಯಾಣಕ್ಕಾಗಿಯೇ ಯೇಸು ಹುಟ್ಟಿದ್ದು, ದೇವರ ಯೋಜನೆಯಂತೆ ತನ್ನ ಜೀವ ಬಲಿದಾನ ಮಾಡಿ ಜಗತ್ತನ್ನು ಪಾಪ ವಿಮೋಚನೆ ಮಾಡುವುದೇ ಆತನ ಗುರಿಯಾಗಿತ್ತು. ಯೇಸುವಿನ ಮರಣದ ನಂತರ ಅಸಂಖ್ಯಾತ ಜನರು ಯೇಸುವಿಗೆ ನಂಬತೊಡಗಿದರು ಎಂದು ತ್ರಾಸಿ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಧರ್ಮಗುರು ವಂ|ಮ್ಯಾಕ್ಷಿಮ್ ಡಿಸೋಜಾ ಸಂದೇಶ ನೀಡಿದರು. ಅವರು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದ (ಫಾಮ್ ಸಂಡೆ) ಬಲಿದಾನ ಅರ್ಪಿಸಿ ಪ್ರವಚನ ನೀಡಿದರು. ಅದಕ್ಕೂ ಮೊದಲು ಅವರು ಗರಿಗಳನ್ನು ಆಶಿರ್ವಾದಿಸುವ ಸಂಸ್ಕಾರ ನೇರವೇರಿಸಿದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಗರಿಗಳ ಭಾನುವಾರದ ಸಂಸ್ಕಾರದಲ್ಲಿ ಭಾಗವಹಿಸಿ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಸಂಸ್ಕಾರದಲ್ಲಿ ಭಾಗವಹಿಸಿದರು. ಬೈಂದೂರಿನ ಹೋಲಿಕ್ರಾಸ್ ಚರ್ಚ್‌ನಲ್ಲಿಯೂ ಗರಿಗಳ ಭಾನುವಾರ’ವನ್ನು ಇರ್ಗಜಿಯ ಧರ್ಮಗುರು . ಪಾ. ವಿನ್ಸೆಂಟ್ ಕುವೆಲ್ಲೊ ರವರ ನೇತ್ರತ್ವದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರಾಗಿ ಹಿರಿಯ ರಂಗಕರ್ಮಿ ಜೀವನರಾಂ ಸುಳ್ಯ ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರಿಂದ ಅಧಿಕಾರ ಸ್ವೀಕರಿಸಿದರು. ಜೀವನರಾಂ ಅವರು ಹಲವು ಬಾರಿ ರಾಷ್ಟ್ರೀಯ ಮಟ್ಟದ ನಾಟಕಗಳಲ್ಲಿ ಪ್ರಶಸ್ತಿ ಪಡೆದಿದ್ದು, ಅವರ ನಿರ್ದೇಶನದ ಮಹಾಮಾಯಿ, ಪಂಜರ ಶಾಲೆ, ಧೂತವಾಕ್ಯ ಹಾಗೂ ಇನ್ನಿತರ ಹಲವು ನಾಟಕಗಳು ಜನಪ್ರಿಯವಾಗಿದೆ. ಮೂಲತ: ಯಕ್ಷಗಾನ ಕುಟುಂಬದಿಂದ ಬಂದ ಜೀವನ್ರಾಂ ನಾಟಕಗಳಲ್ಲಿ ಯಕ್ಷಗಾನ, ಜಾದೂ, ಜಾನಪದವನ್ನು ಅಳವಡಿಸಿದ ಜನಪ್ರಿಯ ನಿರ್ದೇಶಕರಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿಮೂಡುಬಿದಿರೆ: 2021ನೇ ಶೈಕ್ಷಣಿಕ ವರ್ಷಕ್ಕಾಗಿ ನಡೆದ ರಾಷ್ಟ್ರಮಟ್ಟದ ನೀಟ್‍ಪರೀಕ್ಷೆ ಆಧಾರಿತ ಎಂ.ಬಿ.ಬಿಎಸ್(ಒಃಃS) ವೈದ್ಯಕೀಯ ಶಿಕ್ಷಣದ ಸೀಟ್‍ಗಳು ಹಂಚಿಕೆಯಾಗಿದ್ದು 377 ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಆಳ್ವಾಸ್ ಪದವಿಪೂರ್ವ ಕಾಲೇಜು ರಾಜ್ಯದಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಈ ವರ್ಷ ನೀಡಿದ ಗೌರವಕ್ಕೆ ಪಾತ್ರವಾಗಿದೆ. ಒಂದು ವರ್ಷದಲ್ಲಿ ಒಂದು ಕಾಲೇಜಿನಿಂದ ಪ್ರವೇಶ ಪಡೆದ ಅತೀ ಹೆಚ್ಚು ವಿದ್ಯಾರ್ಥಿಗಳ ದಾಖಲೆ ಆಳ್ವಾಸ್ ಪದವಿಪೂರ್ವ ಕಾಲೇಜಿಗೆ ಸಂದಿದೆ. ದೇಶದ ಪ್ರತಿಷ್ಠಿತ ಎಐಐಎಂಎಸ್ (AIIMS) ದೆಹಲಿಗೆ ಇಬ್ಬರು ವಿದ್ಯಾರ್ಥಿಗಳು (ಹರ್ಷಿತಾ ಗಂಗಾಧರಪ್ಪ ನೆಗಲೂರು ಮತ್ತು ಶೈಕ್ಷಾ ನಾಯಕ ಬಿ ಪಿ), ಎಐಐಎಂಎಸ್ (AIIMS) ರಾಯಬರೇಲಿಗೆ ಒಬ್ಬ ವಿದ್ಯಾರ್ಥಿ (ರಕ್ಷಿತ್ ಪರೀಕ್) ಆಯ್ಕೆಯಾಗಿದ್ದು, ಪುಣೆಯಲ್ಲಿರುವ ಆರ್ಮ್‍ಡ್¥sóÉÇರ್ಸಸ್ ಮೆಡಿಕಲ್ ಕಾಲೇಜ್‍ಗೆ ಒಬ್ಬ ವಿದ್ಯಾರ್ಥಿ (ಶಿವರಾಜ್ ಎಮ್ ಉಮ್ಮಜಪ್ಪನ್ವರ್)-ಹೀಗೆ ಒಟ್ಟು ನಾಲ್ಕು ವಿದ್ಯಾರ್ಥಿಗಳು ಆಯ್ಕೆಯಾಗಿ ರಾಷ್ಟ್ರದ ಗಮನ ಸೆಳೆದಿದ್ದಾರೆ. ಇದರೊಂದಿಗೆ ರಾಜ್ಯದ ವಿವಿಧ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 213 ವಿದ್ಯಾರ್ಥಿಗಳು, ಖಾಸಗಿ ವೈದ್ಯಕೀಯ ಕಾಲೇಜುಗಳ ಸರಕಾರಿ ಕೋಟದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.8: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಏ.14ರಿಂದ 16ರ ತನಕ ಕುಂದಾಪುರದಲ್ಲಿ ‘ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ’ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ಕುಂದಾಪುರ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು ಏ.14ರಂದು ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಅಪರಾಹ್ನದ ಬಳಿಕ ಅಂಬೇಡ್ಕರ್ ಭಾವನಮನದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರಕಲಿದೆ. ಏ.15ರಂದು ಬೆಳಗ್ಗೆ ಧ್ವಜಾರೋಹಣ, ಮೆರವಣಿಗೆಯೊಂದಿಗೆ ಸಮ್ಮೇಳನದ ಉದ್ಘಾಟನೆ ನೆರವೇರಲಿದ್ದು ಹಿರಿಯ ಸಾಹಿತಿ, ಸಂಶೋಧಕ ಪ್ರೋ. ಎ.ವಿ. ನಾವಡ ಅವರು ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ ಸಮ್ಮೇಳನ ಉದ್ಘಾಟಿಸುವರು. ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಕವಿಗೋಷ್ಠಿ ಜರುಗಲಿದೆ. ಸಾಧಕರಿಗೆ ಗೌರವ, ಪುಸ್ತಕ ಬಿಡುಗಡೆ ಸೇರಿದಂತೆ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯಲಿದೆ. ಕುಂದಗನ್ನಡ ಭಾಷೆ, ಸಂಸ್ಕೃತಿಯ ವೈಶಿಷ್ಟತೆ ಸಮ್ಮೇಳನದ ಮೂಲಕ ಸಾರಲಾಗುತ್ತದೆ. ಡಾ.ಬಾಲಕೃಷ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ಕುಟುಂಬ ವೈದ್ಯರ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಸ್ಥಾಪಕ ಕಾರ್ಯದರ್ಶಿ, ಮಾಜಿ ಅಧ್ಯಕ್ಷರೂ ಆಗಿದ್ದ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು 20ನೇ ವರ್ಷದ ನೂತನ ಅಧ್ಯಕ್ಷರನ್ನಾಗಿ, ಡಾ ವಿವೇಕಾನಂದ ಭಟ್ ಅವರನ್ನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಡಾ ಜಿ ಕೆ ಭಟ್ ಸಂಕಬಿತ್ತಿಲು ಅವರನ್ನ ಕೋಶಾಧಿಕಾರಿ ಯನ್ನಾಗಿ ಅವಿರೋಧವಾಗಿ ಆರಿಸಿ, ಎಲ್ಲಾ ಮಾಜಿ ಅಧ್ಯಕ್ಷರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು. ನಂತರ ನಡೆದ ವೈದ್ಯಕೀಯ ಕಾರ್ಯಾಗಾರದಲ್ಲಿ ನಗರದ ಖ್ಯಾತ ವೈದ್ಯ ಡಾ. ಅಶ್ವಿನಿ ಪೊಳನಾಯ ಅವರು ರೇಡಿಯೋಲಜಿ ವಿಭಾಗದಲ್ಲಿಯ ಅತ್ಯಾದುನಿಕ ಚಿಕಿತ್ಸ ವಿಧಾನಗಳ ಬಗ್ಗೆ ಮಾಹಿತಿ ಕೊಟ್ಟರು. ಅಗಲಿದ ನಾಯಕ ಮಾಜಿ ಅಧ್ಯಕ್ಷರು ಆದ ಡಾ. ಮೂಲ್ಕಿ ಅಚ್ಚುತ ಕುಡ್ವಾ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಅಗಲಿದ ಸ್ಥಾಪಕ ಅಧ್ಯಕ್ಷರು ಆಗಿದ್ದ ಡಾ. ಮೋಹನ್ ದಾಸ್ ಭಂಡಾರಿ ಅವರ ಹೆಸರಲ್ಲಿ ಪ್ರತೀ ವರ್ಷ ಆಗಸ್ಟ್ ತಿಂಗಳಲ್ಲಿ ಸ್ಥಾಪಕರ ದಿನಾಚರಣೆ ಮತ್ತು ದತ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.8: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಪಂಗಡದವರಿಗೆ ಬೆಂಗಳೂರು ದಾಸನಪುರ ಹೋಬಳಿಯ ವಡ್ಡರಹಳ್ಳಿ ಬೆಂ.ಮ.ಸಾ.ಸಂ. ತರಬೇತಿ ಕೇಂದ್ರದಲ್ಲಿ 30 ದಿನಗಳ ವಸತಿ ಸೌಲಭ್ಯದೊಂದಿಗೆ ಉಚಿತ ಲಘು ಹಾಗೂ ಭಾರಿ ವಾಹನ ಚಾಲನಾ ತರಬೇತಿ ಜೊತೆಗೆ ಚಾಲನಾ ಪರವಾನಗಿ ನೀಡುವ ಸಲುವಾಗಿ ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಲಘು ವಾಹನ ತರಬೇತಿಗೆ ಕನಿಷ್ಠ 18 ವರ್ಷ, ಭಾರಿ ವಾಹನ ತರಬೇತಿಗೆ ಕನಿಷ್ಠ 20 ವರ್ಷ ಮೇಲ್ಪಟ್ಟ ಹಾಗೂ ಲಘು ವಾಹನ ಚಾಲನಾ ಅನುಜ್ಞಾಪತ್ರ ಹೊಂದಿರುವ ಅರ್ಹ ಫಲಾನುಭವಿಗಳು ಏಪ್ರಿಲ್ 20 ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್ https://kmvstdcl.karnataka.gov.in/ ಅಥವಾ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಬಿ ಬ್ಲಾಕ್, ರಜತಾದ್ರಿ ಮಣಿಪಾಲ ಕಚೇರಿಯನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.8: ಕೃಷಿ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ – 4 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಹಾರ ತಂತ್ರಜ್ಞಾನ, ಆಹಾರ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಹಾಗೂ ಪದವಿ ಹೊಂದಿರುವ, ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ತಂತ್ರಜ್ಞಾನ ಉನ್ನತೀಕರಣ, ಹೊಸ ಉತ್ಪನ್ನ ಅಭಿವೃದ್ಧಿ, ಗುಣಮಟ್ಟ ಖಾತ್ರಿ, ಆಹಾರ ಭದ್ರತಾ ನಿರ್ವಹಣೆಗಾಗಿ ಸಲಹಾ ಸೇವೆಗಳನ್ನು ಒದಗಿಸಿದ ಕುರಿತು 3 ರಿಂದ 5 ವರ್ಷಗಳ ಅನುಭವ ಹೊಂದಿರುವ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆ, ಬ್ಯಾಂಕಿಂಗ್, ಡಿಪಿಆರ್ ಸಿದ್ಧಪಡಿಸುವಿಕೆ ಹಾಗೂ ತರಬೇತಿಯಲ್ಲಿ ಅನುಭವವುಳ್ಳ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳು ಏಪ್ರಿಲ್ 25 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಜಿಲ್ಲಾ ಆಡಳಿತ ಕಛೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ಕಛೇರಿಯನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು…

Read More