Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಶಿಕ್ಷಣ ಸಂಸ್ಥೆಗಳಲ್ಲಿ ದಿನನಿತ್ಯ ಜರುಗುವ ಚಟುವಟಿಕೆಗಳ ಮಾಹಿತಿಯನ್ನು ಸರಿಯಾಗಿ ಸಂಗ್ರಹಿಸಿ ಇಟ್ಟು, ದತ್ತಾಂಶ ಸಂಗ್ರಹದ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದಾಗ ಆಂತರಿಕ ಗುಣಮಟ್ಟ ಭರವಸೆ ಕೋಶವು ಯಶಸ್ವಿಯಾಗಿ ಕಾರ‍್ಯ ನಿರ್ವಹಿಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಪಕ ಹಾಗೂ ಯೆನಪೋಯ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಕೆ.ಆರ್ ಚಂದ್ರಶೇಖರ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆಂತರಿಕ ಗುಣಮಟ್ಟ ಕಾಯ್ದಿರಿಸುವಲ್ಲಿ ಐಕ್ಯೂಎಸಿಯ ಪಾತ್ರ’ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಶಿಕ್ಷಣ ಸಂಸ್ಥೆಯ ಸರ್ವೋತೋಮುಖ ಬೆಳವಣಿಗೆಯ ಗುರಿಯನ್ನು ಐಕ್ಯೂಎಸಿ ಹೊಂದಿರುತ್ತದೆ. ಆ ಹಿನ್ನಲೆಯಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿರುತ್ತದೆ. ಶಿಕ್ಷಕರು ತಮ್ಮ ಬೆಳವಣಿಗೆಯ ಜತೆಗೆ ಸಂಸ್ಥೆಯ ಶ್ರೇಯಸ್ಸಿನಲ್ಲಿ ಶ್ರಮಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಐಕ್ಯುಎಸಿಯು ಸದಾ ಚಲನಶೀಲವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರತ್ತಾ ಗಮನ ಹರಿಸುವುದು ಅಗತ್ಯ. ಶಿಕ್ಷಕರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.6: ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ನಿರ್ಣಯದಂತೆ ಉಡುಪಿ ಮತ್ತು ಕುಂದಾಪುರ ತಾಲೂಕಿನ ಆಟೋರಿಕ್ಷಾ ಚಾಲಕ ಹಾಗೂ ಮಾಲಕರು ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ವಲಯ ಸ್ಟಿಕ್ಕರ್ಗಳನ್ನು ಅಳವಡಿಸಿಕೊಳ್ಳುವಂತೆ ಈಗಾಗಲೇ ಹಲವು ಬಾರಿ ಸೂಚನೆ ನೀಡಲಾಗಿದ್ದು, ವಲಯ ಸ್ಟಿಕ್ಕರ್ ಅಳವಡಿಸಲು ಬಾಕಿ ಇರುವ ಆಟೋರಿಕ್ಷಾ ಮಾಲಕರು ವಾಹನದ ಮೂಲ ದಾಖಲೆಗಳೊಂದಿಗೆ ಕಚೇರಿಗೆ ಹಾಜರಾಗಿ ಕೂಡಲೇ ವಲಯ ಸ್ಟಿಕ್ಕರ್ಗಳನ್ನು ಅಳವಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ದಂಡ ವಿಧಿಸಿ, ಕಠಿಣ ಕಾನೂನು ಕ್ರಮ ಕೈಗೊಂಡು, ಮಾಹಿತಿಯನ್ನು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಲಾವಣ್ಯ ರಿ. ಬೈಂದೂರು ಸಂಸ್ಥೆಯ 45ನೇ ವಾರ್ಷಿಕೋತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ‘ರಂಗಪಂಚಮಿ ನಾಟಕೋತ್ಸವ’ ಶಾರದಾ ವೇದಿಕೆಯಲ್ಲಿ ಎಪ್ರಿಲ್ 9ರಿಂದ 13 ತನಕ ಜರುಗಲಿದೆ. ಎ.9ರಂದು ಕಾರ್ಯಕ್ರಮವನ್ನು ಯುಥ್ ಫಾರ್ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಮಯ್ಯ ಅವರು ಉದ್ಘಾಟಿಸಲಿದ್ದಾರೆ. 5 ದಿನಗಳ ಕಾಲ ವಿವಿಧ ಅತಿಥಿಗಳು ಉಪಸ್ಥಿತರಿರಲಿದ್ದು, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಜರುಗಲಿದೆ. ರಂಗಪಂಚಮಿ ನಾಟಕೋತ್ಸವದಲ್ಲಿ ಎ.9ರಂದು ಹಾವೇರಿ ಶೇಷಗಿರಿ ಕಲಾತಂಡದಿಂದ ಕುವೆಂಪು ಅವರ ರಾಮಾಯಣ ದರ್ಶನಂ ಆಧಾರಿತ, ಎಂ. ಗಣೇಶ್ ಉಡುಪಿ ನಿರ್ದೇಶನದ ನಾಟಕ ‘ವಾಲಿವಧೆ’ ಪ್ರದರ್ಶನಗೊಳ್ಳಲಿದೆ. ಎ.10ರಂದು ಡ್ರಾಮಾಟ್ರಿಕ್ಸ್ ಬೆಂಗಳೂರು ಅಭಿನಯದ ಬೀಚಿ ಸಾಹಿತ್ಯಾಧಾರಿತ, ಎನ್.ಸಿ ಮಹೇಶ್ ರಚಿಸಿ, ರಾಜೇಂದ್ರ ಕಾರಂತ್ ಬೆಂಗಳೂರು ನಿರ್ದೇಶನದ ‘ಬೀಚಿ ಹೌಸ್’ ನಾಟಕ ಪ್ರದರ್ಶನಗೊಳ್ಳಲಿದೆ. ಎ.11ರಂದು ಅಭಿಯಂತರರು ಮೈಸೂರು ಅಭಿಯನಯದ ರಾಜೇಂದ್ರ ಕಾರಂತ್ ನಿರ್ದೇಶನದ ‘ಮಲ್ಲಿಗೆ ತೋಟದಲ್ಲಿ ಮರ್ಡರ್’ ನಾಟಕ, ಎ.12ರಂದು ಸಮುದಾಯ ಧಾರವಾಡ ಅಭಿನಯದ ಡಾ. ಶ್ರೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಕುಂದಾಪುರ ವಕೀಲರ ಸಂಘದ ಚುನಾವಣೆಯಲ್ಲಿ 2022-24ನೇ ಸಾಲಿನ ಅಧ್ಯಕ್ಷರಾಗಿ ಬನ್ನಾಡಿ ಸೋಮನಾಥ್‌ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಈ ಹಿಂದಿನ ಅವಧಿಗಳಲ್ಲಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು ಈಗ ಎರಡನೇ ಅವಧಿಗೆ ಸಂಘದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ವಕೀಲರ ಸಂಘದಲ್ಲಿ 264 ಜನ ಸದಸ್ಯರಿದ್ದು 252 ಮಂದಿ ಮತ ಚಲಾಯಿಸಿದ್ದರು. ಸಂಘದ ಕಾರ್ಯದರ್ಶಿಯಾಗಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷರಾಗಿ ಬೀನಾ ಜೊಸೆಫ್, ಜತೆ ಕಾರ್ಯದರ್ಶಿಯಾ ಗಿರಿತೇಶ್ ಬಿ. ಹಾಗೂ ಕೋಶಾಧಿಕಾರಿಯಾಗಿ ದಿನಕರ್ ಕೆ.ಎಸ್. ಅವಿರೋಧ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 3 ಮಂದಿ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಕೊಡಮಾಡಲ್ಪಡುವ 2020ನೇ ಸಾಲಿನ ಕರ್ನಾಟಕ ಕ್ರೀಡಾರತ್ನಪ್ರಶಸ್ತಿ ದೊರೆತಿದೆ. ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ಕಿರಣ್‌ಕುಮಾರ್, ಕುಸ್ತಿಯಲ್ಲಿ ಲಕ್ಷ್ಮೀರೇಡೇಕರ್ ಹಾಗೂ ಖೋಖೋ ದಲ್ಲಿ ದೀಕ್ಷಾ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟುಗಳು. ಕಿರಣ್‌ಕುಮಾರ್ಪ್ರಸಕ್ತ ಕರ್ನಾಟಕ ರಾಜ್ಯ ಬಾಲ್‌ಬ್ಯಾಡ್ಮಿಂಟನ್ ತಂಡದ ನಾಯಕರಾಗಿರುವ ಕಿರಣ್ ಒಟ್ಟು 16 ಬಾರಿ ರಾಜ್ಯ ತಂಡವನ್ನು ರಾಷ್ಟ್ರೀಯ ಸೀನಿಯರ್ ಹಾಗೂ ಫೆಡರೇಶನ್‌ಕಪ್ ಚಾಂಪಿಯನ್‌ಶಿಪ್‌ಗಳಲ್ಲಿ ಪ್ರತಿನಿಧಿಸಿದ್ದು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಒಟ್ಟು 4 ಬಾರಿಚಿನ್ನ, 4೪ ಬಾರಿ ಬೆಳ್ಳಿ ಹಾಗೂ 8 ಬಾರಿ ಕಂಚಿನ ಪದಕ ಪಡೆದಿರುವರು. ಅಖಿಲ ಭಾರತ ಅಂತರ್ ವಿ.ವಿ ಕೂಟ ಚಾಂಪಿಯನ್ ತಂಡದ ನಾಯಕರಾಗಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದು, 4 ಬಾರಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದಾರೆ. ಲಕ್ಷ್ಮೀರೇಡೇಕರ್ಒಟ್ಟು 5 ಬಾರಿ ರಾಷ್ಟ್ರೀಯ ಸೀನಿಯರ್ ಹಾಗೂ ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ಇವರು ರಾಷ್ಟ್ರೀಯ ಜೂನಿಯರ್ ಕೂಟದಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ. 2…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಲ್ಪೆ ಬಂದರಿನಿಂದ ಭಟ್ಕಳಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಭಟ್ಕಳ ಬಂದರು ಸಮೀಪ ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಬೋಟಿನಲ್ಲಿದ್ದ 7 ಜನ ಮೀನುಗಾರರನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ. ಮಲ್ವೆಯ ತೊಟ್ಟಂ ನಿವಾಸಿ ದೀಕ್ಷಿತ್ ಎಂಬುವರಿಗೆ ಸೇರಿದ ಸಿಹಾನ್ ಫಿಶರಿಸ್ ಎಂಬ ಬೋಟ್ ಸೋಮವಾರ ಬೆಳಿಗ್ಗೆ ಭಟ್ಕಳ ಬಂದರಿನಿಂದ 14 ನಾಟಿಕಲ್ ಮೈಲು ದೂರದಲ್ಲಿ ಕಲ್ಲು ಬಂಡೆಗೆ ತಾಗಿ ಒಳಗೆ ನೀರು ನುಗ್ಗಿ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ರವಿ, ನಾಗಪ್ಪ ಮೊಗೇರ ಮತ್ತು ಸಹಚರರನ್ನು, ಸ್ಥಳೀಯ ಜೈಶ್ರೀರಾಮ್ ಬೋಟಿನ ಮೀನುಗಾರರು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.5: ಜಿಲ್ಲೆಯಲ್ಲಿನ ಗ್ರಾಮೀಣ ರಸ್ತೆ, ಜಿಲ್ಲಾ ರಸ್ತೆ, ಮೀನುಗಾರಿಕಾ ರಸ್ತೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಿಸಿ, ಮೇಲ್ದರ್ಜೆಗೇರಿಸಲು ರೂಪಿಸಿರುವ ನಿಯಮಗಳಿಂದ ರಸ್ತೆ ಪಕ್ಕದಲ್ಲಿನ ಜನ ಸಾಮಾನ್ಯರಿಗೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ತೀವ್ರ ಸಮಸ್ಯೆಗಳಾಗುತ್ತಿದ್ದು, ಕೂಡಲೇ ಈ ನಿಯಮಗಳನ್ನು ಬದಲಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಸೇರಿದಂತೆ ವಿವಿಧ ರಸ್ತೆ ಕಾಮಗಾರಿ ಕೈಗೊಳ್ಳುವ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದರು. ಅವರು ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ನಡೆದ, ಜಿಲ್ಲೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಶಾಸಕರುಗಳಿಂದ ಅವರ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತಿರುವ ರಸ್ತೆ ಅಗಲೀಕರಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಂದ ತೊಂದರೆಗೆ ಒಳಗಾಗುವ ಯೋಜನೆಗಳ ಪಟ್ಟಿಯನ್ನು ಪಡೆದು, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಗಳಲ್ಲಿ ಬದಲಾವಣೆ ತರುವ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚಿಸಿದ ಸಚಿವರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.5: ದೈವಸ್ಥಾನದ ಕಾರ್ಯಕ್ರಮಕ್ಕೆ ಚಪ್ಪರ ಹಾಕುತ್ತಿದ್ದ ವೇಳೆ ಅಡಿಕೆ ಮರದ ಕಂಬ ಕುತ್ತಿಗೆ ಮೇಲೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಕಡೆಪೇಟೆ ನಿವಾಸಿ ರಾಮಚಂದ್ರ ಭಂಡಾರ್ಕರ್ (58) ಮೃತ ದುರ್ದೈವಿ. ಹೊಸಂಗಡಿ ಗ್ರಾಮದ ಅನಗಳ್ಳಿಬೈಲು ಎಂಬಲ್ಲಿನ ದೈವಸ್ಥಾನದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ರಾಮಚಂದ್ರ ಭಂಡಾರ್ಕರ್ ಅವರು ಸ್ಥಳಿಯರೊಂದಿಗೆ ಸೇರಿ ಚಪ್ಪರ ಹಾಕುತ್ತಿದ್ದರು. ಈ ಸಂದರ್ಭ ಅಡಿಕೆ ಮರದ ಕಂಬವು ಮೇಲಿಂದ ಜಾರಿದ್ದು, ಅದನ್ನು ತಡೆಯಲು ಹೋದ ಸಮಯ ಆಯ ತಪ್ಪಿ ಕೆಳಗೆ ಬಿದಿದ್ದಾರೆ. ಇದೇ ಸಮಯದಲ್ಲಿ ಅಡಿಕೆ ಮರದ ಕಂಬವು ರಾಮಚಂದ್ರ ಅವರ ಕುತ್ತಿಗೆ ಮೇಲೆ ಬಿದ್ದು ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಿದ್ಧಾಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದರೂ ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರೆನ್ನಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮಚಂದ್ರ ಭಂಡಾರ್ಕರ್ ಅವರು ಹೊಸಂಗಡಿಯ ಪೇಟೆ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರಾಗಿದ್ದು ರಾಮ್ ಮಾಮ್ ಎಂದು ಪ್ರಸಿದ್ಧರಾಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಾಲ್ತೋಡು ಗ್ರಾಮ ಶ್ರೀ ಕ್ಷೇತ್ರ ಬೊಳಂಬಳ್ಳಿ ಶ್ರೀ ಪಾರ್ಶ್ವನಾಥ ಸ್ವಾಮಿ, ಆಳುಪ ರಾಜ ಮನೆತನದ ದೇವಿ ಮಹಾಮಾತೆ ಪದ್ಮಾವತಿ ಅಮ್ಮನವರ ದೇವಸ್ಥಾನ ಬಸದಿಯ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ, ನೂತನ ಶಿಲಾಮಯ ಮಾನಸ್ತಂಭ ಪ್ರತಿಷ್ಠಾಪನೆ, ಶ್ರೀ ಪದ್ಮಾವತಿ ಅಮ್ಮನವರ ಬಸದಿಯ ನೂತನ ರಥೋತ್ಸವ ಮಹೋತ್ಸವವು ಎಪ್ರಿಲ್ 6 ರಿಂದ 10ನೇ ತಾರೀಕಿನ ತನಕ ಜರುಗಲಿದೆ. ಮೂಡಬಿದ್ರೆ ಜೈನಮಠ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರ ಹೊಂಬುಜ ಜೈನ ಮಠ ದೇವೇಂದ್ರಕೀರ್ತಿ ಭಟ್ಟಾರಕ ಹಾಗೂ ಸೋಂದೆ ಮಠ ಭಟ್ಟಾಕಳಂಕ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಜರುಗುವ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಗ್ಗಿನಿಂದ ರಾತ್ರಿಯವರೆಗೆ ದೇವಪೂಜಾ ಕಾರ್ಯಗಳು, ಮಹಾಮಾತೆ ಪದ್ಮಾವತಿಯ ಆರಾಧನೆ, ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮಗಳು, ರಾತ್ರಿ 8 ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯಕ್ಷಗಾನ ಜೋಡಾಟ, ನಾಟಕಗಳು, ಮನುಹಂದಾಡಿ ಅವರಿಂದ ಹಾಸ್ಯಸಂಜೆ, ಮಹೇಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಬೃಹದಾಕಾರವಾಗಿ ಬೆಳೆದಿದ್ದು, ಸರಕಾರ ಪರಿಕಲ್ಪನೆಯ ಮೂಲಕವೇ ಲಕ್ಷಾಂತರ ಮಂದಿ ಸ್ವಾವಲಂಬಿಗಳಾಗಿದ್ದಾರೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು. ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 110ನೇ ನೂತನ ಉಪ್ಪುಂದ ಶಾಖೆ ಉದ್ಘಾಟಿಸಿ ಈ ಮಾತನಾಡಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನ ಅತ್ಯುತ್ತಮ ಕಾರ್ಯಸಾಧನೆಗಳ ಮೂಲಕ ಇತರರಿಗೂ ಮಾದರಿಯಾಗಿದೆ ಎಂದರು. ನವೋದಯ ಸ್ವ-ಸಹಾಯ ಸಂಘಗಳ ಸಾಧನಾ ಸಮಾವೇಶ ಉದ್ಘಾಟಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಮಾತನಾಡಿ ರಾಜ್ಯ ಸರಕಾರ ರೈತರ ಅಭಿವೃದ್ಧಿಯ ಜೊತೆಗೆ ರೈತ್ಯೋದ್ಯಮದ ಬಗ್ಗೆ ಹಲವು ಮಹತ್ತರ ಯೋಜನೆಗಳನ್ನು ಜಾರಿಗೆ ತರುವ ಚಿಂತನೆಯಲ್ಲಿದೆ. ನವೋದಯ ಸ್ವ-ಸಹಾಯ ಸಂಘಗಳು ಹಲವರ ಬದುಕಿಗೆ ಬೆಳಕಾಗಿದೆ. ಕೃಷಿಕರ ಮತ್ತು ಮಹಿಳೆಯರಿಗೆ ಸ್ವಾವಲಂಬನೆಯ ಜೀವನ ನೀಡಿದೆ ಎಂದರು. ಹೊಸ ಸ್ವ-ಸಹಾಯ ಗುಂಪುಗಳನ್ನು ಉದ್ಘಾಟಿಸಿದ ಕೃಷಿ ಸಚಿವ ಬಿ. ಸಿ ಪಾಟೀಲ್ ಮಾತನಾಡಿ…

Read More