Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸಮೃದ್ಧ ಯುವಶಕ್ತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ಯುವ ಜನರು ಮಾದಕ ವಸ್ತುಗಳಿಗೆ, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸುಮಾರು 18-24 ವರ್ಷದೊಳಗಿನ ಯುವಕರು ಮದ್ಯಪಾನ ಸೇರಿದಂತೆ ಗಾಂಜಾ, ಅಪೀಮು ಮುಂತಾದ ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ಜೀವನವನ್ನೇ ಬಲಿ ಕೊಡುತ್ತಿದ್ದಾರೆ. ಕ್ಯಾನ್ಸರ್ ಮತ್ತಿತರ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಇಡೀ ಕುಟುಂಬ ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಯುವ ಜನತೆ ದಾರಿ ತಪ್ಪದಂತೆ, ದುಶ್ಚಟಗಳಿಗೆ ಬಲಿಯಾಗದಂತೆ ಸನ್ಮಾರ್ಗದಲ್ಲಿ ಮುನ್ನಡೆಯಲು ಅವರಿಗೆ ಸೂಕ್ತ ಮಾಹಿತಿ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಜರಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ.ವಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸಂಶೋಧನೆಗಳು ಕುತೂಹಲಗಳನ್ನು ತಣಿಸುತ್ತದೆ, ಶಿಕ್ಷಣ ಸಂಶೋಧನೆಗೆ ವೈಜ್ಞಾನಿಕ ಚೌಕಟ್ಟು ಒದಗಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಳ್ವಾಸ್ ಟ್ರೆಡಿ?ನಲ್ ಮೆಡಿಸಿನ್ ಆರ್ಕೈವ್ (ಎಟಿಎಂಎ) ಅಂಡ್ ರಿಸರ್ಚ್ ಸೆಂಟರ್ ಹಾಗೂ ಬೆಂಗಳೂರಿನ ಹಿಮಾಲಯ ವೆಲ್ ನೆಸ್ ಕಂಪೆನಿ ಸಹಯೋಗದಲ್ಲಿ ನಡೆದ ‘ಸಂವೇದ – ೨೦೨೨’ ಸಂಶೋಧನಾ ಕ್ರಮದ ಕುರಿತ ರಾ? ಮಟ್ಟದ ಸೆಮಿನಾರ್ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಹುಟ್ಟಿಕೊಳ್ಳುವುದು ಮಿಥ್ಯದಿಂದ ಆದರೆ ಉಳಿಯುವುದು ಸತ್ಯದಿಂದ. ಸಂಶೋಧನೆಯ ಮೂಲಕ ಸತ್ಯದ ಅನ್ವೇ?ಣೆ ಸಾಧ್ಯ. ವಿದ್ಯಾರ್ಥಿಗಳು ಪೂರ್ಣಾವಧಿ ಸಂಶೋಧನೆ ಕೈಗೊಳ್ಳುವುದರಿಂದ ದೇಶ ಆತ್ಮ ನಿರ್ಭರದೆಡೆಗೆ ಸಾಗುತ್ತದೆ ಎಂದು ಹೇಳಿದರು. ಆಯುರ್ವೇದಕ್ಕೆ ಸಂಶೋಧನೆಯ ಅಗತ್ಯವಿಲ್ಲ ಆದರೆ ಚಿಕಿತ್ಸಾ ಕೌಶಲ್ಯ, ಔ?ಧೀಯ ಗುಣಧರ್ಮಗಳನ್ನು ತಿಳಿದುಕೊಳ್ಳಲು ಸಂಶೋಧನೆ ಅಗತ್ಯ. ಒಂದು ದೇಶದ ಅಭಿವೃದ್ಧಿಯನ್ನು ಅಳೆಯಲು ಅಲ್ಲಿನ ಸಂಶೋಧನಾ ಗುಣಮಟ್ಟ ಹಾಗೂ ಶಕ್ತಿಯನ್ನು ಅರಿತುಕೊಳ್ಳುವುದು ಉತ್ತಮ, ಸಂಶೋಧನೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.29: ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆ ಹಾಗೂ ಗೋವರ್ಧನ ಗಿರಿ ಟ್ರಸ್ಟ್ ಸಹಯೋಗದಲ್ಲಿ ಸಾವಯವ ಸಿರಿ ಯೋಜನೆಯಡಿ ಜಿಲ್ಲಾಮಟ್ಟದಲ್ಲಿ ಸಾವಯವ ಕೃಷಿ ವಿಷಯಕ್ಕೆ ಸಂಬAಧಿಸಿದ 2 ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಹೊಸದಾಗಿ ಸಾವಯವ ಹಾಗೂ ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಂಡಿರುವ ಯುವಕ ರೈತರು, ಮಹಿಳೆಯರು ಹಾಗೂ ಸಾವಯವ ಹಾಗೂ ನೈಸರ್ಗಿಕ ಕೃಷಿಯಲ್ಲಿ ಈ ಹಿಂದೆ ತರಬೇತಿ ಪಡೆಯದೇ ಇರುವ ರೈತರೂ ಸಹ ಪಾಲ್ಗೊಳ್ಳಬಹುದಾಗಿದೆ. ಆಸಕ್ತರು ರೈತ ಸಂಪರ್ಕ ಕೇಂದ್ರದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಆಗಸ್ಟ್ 17 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ಕಾಲೇಜು ಜಂಟಿ ಸಹಯೋಗದಲ್ಲಿ ಇಲ್ಲಿನ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ನಡೆದ ವಿವಿ ಮಟ್ಟದ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಪುರುಷ ಹಾಗೂ ಮಹಿಳೆಯರ ಎರಡೂ ವಿಭಾಗಗಳಲ್ಲಿ ಅತಿಥೇಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಗಳಿಸಿದೆ. ಒಟ್ಟು ಕ್ರೀಡಾಕೂಟದಲ್ಲಿ 19 ನೂತನ ಕೂಟ ದಾಖಲೆ ನಿರ್ಮಾಣಗೊಂಡಿದ್ದು, ಅವುಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳು 13 ಕೂಟ ದಾಖಲೆ ನಿರ್ಮಿಸಿರುವುದು ಗಮನಾರ್ಹ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಸತತ 18ನೇ ಬಾರಿಗೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ:ಪುರುಷರ 55 ಕೆಜಿ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಪ್ರಶಾಂತ (ಸ್ನಾö್ಯಚ್-80ಕೆ.ಜಿ. ಕ್ಲೀನ್&ಜರ್ಕ್-113ಕೆಜಿ ಒಟ್ಟು-193) ಕೆ.ಜಿ ಪ್ರಥಮ ಹಾಗೂ ಸುಶಾಂತ (ಸ್ನಾö್ಯಚ್-85ಕೆ.ಜಿ. ಕ್ಲೀನ್&ಜರ್ಕ್-107 ಕೆಜಿ ಒಟ್ಟು-192 ಕೆ.ಜಿ) ದ್ವಿತೀಯ, 61 ಕೆಜಿ ವಿಭಾಗದಲ್ಲಿ ಅರವಿಂದ್ (ಸ್ನಾö್ಯಚ್-109ಕೆ.ಜಿ. ಕ್ಲೀನ್&ಜರ್ಕ್-135ಕೆಜಿ ಒಟ್ಟು-244 ಕೆ.ಜಿ) ಪ್ರಥಮ ಹಾಗೂ ನಾಗರಾಜ್ (ಸ್ನಾö್ಯಚ್-107ಕೆ.ಜಿ. ಕ್ಲೀನ್&ಜರ್ಕ್-132ಕೆಜಿ ಒಟ್ಟು-239 ಕೆ.ಜಿ ) ದ್ವಿತೀಯ, 67…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ರಜತ ಮಹೋತ್ಸವದ ಹೊಸ್ತಿಲಲ್ಲಿರುವ ಶಂಕರನಾರಾಯಣ ಕುಳ್ಳಂಜಿಯ ಸಮೃದ್ಧಿ ಯುವಕ ಮಂಡಲ ವತಿಯಿಂದ ಹಸಿರು ಸಮೃದ್ಧಿ ಉಸಿರು ಸಮೃದ್ಧಿ ಅಭಿಯಾನದಡಿ ಔಷಧಿಯ ಗಿಡ ನೆಡುವುದರ ಮೂಲಕ ರಜತಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನದಲ್ಲಿ ಜುಲೈ ತಿಂಗಳಲ್ಲಿ ಯುವಕ ಮಂಡಲ ವ್ಯಾಪ್ತಿಯ ಪ್ರತಿಯೊಂದು ಮನೆಗೆ ತೆರಳಿ ಔಷದೀಯ ಗಿಡ ನೆಟ್ಟು ಆಚರಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವೇದಮೂರ್ತಿ ಸೂರ್ಯನಾರಾಯಣ ಬಾಯಿರಿ ಔಷದೀಯ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದು ಗಿಡ ನೆಟ್ಟು ಹಸಿರು ಸಮೃದ್ಧಿ ಉಸಿರು ಸಮೃದ್ಧಿ ಅಭಿಯಾನಕ್ಕೆ ಶುಭ ಹಾರೈಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ನಾರಾಯಣ ತೆಂಕಿನಗದ್ದೆ ಈ ಒಂದು ಅಭಿಯಾನದಲ್ಲಿ ಔಷದೀಯ ಗಿಡದ ಸಂಪೂರ್ಣ ವೆಚ್ಚ ಭರಿಸುವುದರೊಂದಿಗೆ, ಅವರ ಉಸ್ತುವಾರಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮೃದ್ಧಿ ಯುವಕ ಮಂಡಲದ ಅಧ್ಯಕ್ಷರಾದ ಯೋಗೀಶ ದೇವಾಡಿಗ, ಕಾರ್ಯದರ್ಶಿ ಸಂದೀಪ ಎಳಜೆಡ್ಡು, ಯುವಕ ಮಂಡಲದ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ. ವೈ. ರಾಘವೇಂದ್ರ ಅವರು ಕೇಂದ್ರ ದೂರಸಂಪರ್ಕ ಹಾಗೂ ರೈಲ್ವೆ ಮಂತ್ರಾಲಯದ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತು ಉಡುಪಿ ಜಿಲ್ಲೆಯಲ್ಲಿ ನೆಟ್ವರ್ಕ್ ಸಮಸ್ಯೆ ನಿವಾರಿಸಲು ಹಾಗೂ ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾಣದಲ್ಲಿ ನಿಗದಿತ ರೈಲು ನಿಲುಗಡೆ ಸಂಬಂಧ ಮನವಿ ಸಲ್ಲಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯ 80 ಹಾಗೂ ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 16 ಜನವಸತಿ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು ನೆಟ್ವರ್ಕ್ ಸಂಪರ್ಕ ಸಾಧಿಸಲು ಬಿ.ಎಸ್.ಎನ್.ಎಲ್ ವತಿಯಿಂದ ಟವರ್ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಅವರು ತಿಳಿಸಿದ್ದಾರೆ. ರೈಲ್ವೆ ವಿಭಾಗಕ್ಕೆ ಸಂಬಂಧಪಟ್ಟಂತೆ ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾಣದಲ್ಲಿ ಗರೀಬ್ ರಥ ಹಾಗೂ ದಾದರ್ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಬಗ್ಗೆ ಚರ್ಚಿಸಿ ಸೂಕ್ತ ಕ್ರಮವನ್ನು ಕೂಡಲೇ ಕೈಗೊಳ್ಳಲು ಮಾನ್ಯ ಕೇಂದ್ರ ಮಂತ್ರಿಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಗೀತ ಮತ್ತು ಸಾಹಿತ್ಯ ನಮ್ಮನ್ನು ಮೂರ್ತ ಪ್ರಪಂಚದಿಂದ ಅಮೂರ್ತದೆಡೆಗೆ ಒಯ್ಯುವ ಮಾಧ್ಯಮಗಳು. ಸಂಗೀತ ಹ್ಲದಯವು ನಾದದೊಂದಿಗೆ ನಡೆಸುವ ಸಂವಾದ. ಅದು ನಮಗೆ ಸಂಸ್ಕಾರ ನೀಡುತ್ತದೆ ಎಂದು ಉಡುಪಿ ಎಂ.ಜಿ.ಎಂ ಕಾಲೇಜಿನ ಪ್ರಾಧ್ಯಾಪಕಿ, ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದರು. ಕುಂದಾಪುರದ ಗುರುಪರಂಪರಾ ಸಂಗೀತ ಸಭಾ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಸಭಾಭವನದಲ್ಲಿ ಭಾನುವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾಂತ್ರಿಕವಾಗುತ್ತಿರುವ ಬದುಕಿಗೆ ಸಂಗೀತದಂತಹ ಕಲೆಗಳ ಕಲಿಕೆ ಮತ್ತು ಆಸ್ವಾದನ, ರಸ-ಭಾವ ಅನುಭವದ ಮಾಂತ್ರಿಕ ಸ್ಪರ್ಷ ನೀಡಿ ಬದುಕನ್ನು ಸಂತಸಮಯವಾಗಿ ಮಾಡುತ್ತದೆ ಎಂದು ಅವರು ಹೇಳಿದರು. ವಿಶೇಷ ಅಥಿತಿಯಾಗಿ ಆಗಮಿಸಿದ್ದ ಖ್ಯಾತ ಹಾರ್ಮೋನಿಯಂ ವಾದಕ ಸುಧೀರ್ ನಾಯಕ್ ಮಾತನಾಡಿ ಸಂಗೀತವು ಪರಿಶ್ರಮ ಬೇಡುವ ಕಲೆ. ಅದರ ಕಲಿಕೆಯಲ್ಲಿ ಗುರು-ಶಿಷ್ಯ ಸಂಬಂಧ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಕಲಿಕೆ ಫಲಪ್ರದವಾಗಬೇಕಾದರೆ ಸಂಗೀತದ ನಿರಂತರ ಅಭ್ಯಾಸ ಮತ್ತು ಶ್ರವಣ ನಡೆಯಬೇಕು. ಸಂಗೀತ ವ್ಯಕ್ತಿತ್ವವನ್ನು ಹದಗೊಳಿಸುತ್ತದೆ ಎಂದು ಹೇಳಿದರು. ಭಟ್ ದಂಪತಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದಲ್ಲಿ ಜರುಗಿದ ಉಡುಪಿ ಜಿಲ್ಲಾ ಸಮಸ್ತ ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಮಹಾ ಸಭೆಯಲ್ಲಿ ಸಂಘದ 2022 -24ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೋಟೇಶರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಉಪ ಪ್ರಾಂಶುಪಾಲರಾದ ಚಂದ್ರಶೇಖರ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಅರೆಶಿರೂರು ಮೂಕಾಂಬಿಕಾ ದೇವಳ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ. ಶಿವರಾಮ, ಉಪಾಧ್ಯಕ್ಷರಾಗಿ ಸುಮನಾ ಕಲ್ಯಾ, ರೂಪಾ ಕಿಣಿ ಅಲೆವೂರು, ಮಂಜು ಕಾಳಾವರ, ಜತೆ ಕಾರ್ಯದರ್ಶಿಯಾಗಿ ಕೃಷ್ಣ ಅಡಿಗ ಕುಂದಾಪುರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರುಣಾಕರ ಶೆಟ್ಟಿ ಬಿದ್ಕಲಕಟ್ಟೆ, ಜಯಶೀಲ ಶೆಟ್ಟಿ ಕೋಡಿ, ರಾಘವೇಂದ್ರ ಶೇರೆಗಾರ್ ಗಂಗೊಳ್ಳಿ, ರಮೇಶ ಕುಮಾಲ ಆವರ್ಸೆ, ಮಂಜುನಾಥ ನಾಯ್ಕ್ ಚೇರ್ಕಾಡಿ, ಪ್ರೀತಿ ರೇಖಾ ಹೇರಾಡಿ, ಮಂಜುನಾಥ ಎಸ್. ಹಕ್ಲಾಡಿ, ನಾಗರಾಜ ಭಟ್ ಕೊಲ್ಲೂರು, ಚಂದ್ರ ಶೆಟ್ಟಿ ಹೊಸೂರು, ರೂಪರೇಖಾ ಮಣಿಪುರ, ನಟರಾಜ ಉಪಾಧ್ಯ ಇನ್ನಂಜೆ, ಸಂಧ್ಯಾ ಉಡುಪಿ, ದಿವಾಕರ ಮರಕಾಲ ಹೆಬ್ರಿ, ಉಷಾ ಪಡಿವಾಳ ಹಿರಿಯಂಗಡಿ, ಅಪರ್ಣಾ ಆಚಾರ್ ಹೆಬ್ರಿ, ಪ್ರಕಾಶ್ ರಾವ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್ ಆಲ್ಬಂ ವೀಡಿಯೋ ಮೂಲಕ ಜನಮನ್ನಣೆ ಗಳಿಸಿದ್ದ ಟೀಮ್ ಕಲತ್ವ ಸಿರಿ ಪ್ರೊಡಕ್ಷನ್ಸ್, ಇದೀಗ ಮ್ಯೂಸಿಕಲ್ ಫಿಲಂ ಮೂಲಕ ಕಥೆಯೊಂದನ್ನು ಹೇಳಲು ಸಜ್ಜಾಗಿದೆ. ‘ಸಾಗರಿಕ’ ಎಂಬ ಕನ್ನಡ ಮ್ಯೂಸಿಕಲ್ ಫಿಲ್ಮ್ ಮೂಲಕ ಮತ್ತೆ ರಂಜಿಸಲು ಬಂದಿರುವ ತಂಡ ಈಗಾಗಲೇ ಆಡಿಯೋ ಬಿಡುಗಡೆಗೊಳಿಸಿದ್ದು ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಚೊಚ್ಚಲ ನಿರ್ದೇಶನದ ಹೊಣೆ ಹೊತ್ತಿರುವ ಮನೀಶ್ ಮೊಯ್ಲಿ ಈ ಬಾರಿ ಸಾಹಿತ್ಯ ಹಾಗೂ ನಿರ್ದೇಶನವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೆ. ಪಿ. ಮಿಲನ್ ಈ ಮ್ಯೂಸಿಕಲ್ ಫಿಲಂಗಾಗಿ ಹಾಡಿದ್ದಾರೆ. ರವಿರಾಜ್ ಪೂಜಾರಿ ಹಾಗೂ ರಶ್ಮಿ ಭಟ್ ಇದರಲ್ಲಿ ನಟಿಸಿದ್ದಾರೆ. ಸಚಿನ್ ಶೆಟ್ಟಿ ಮಾರ್ಕೆಟಿಂಗ್ ಅಡ್ಡ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಮ್ಯೂಸಿಕಲ್ ಫಿಲಂಗೆ ಸಚಿನ್ ಶೆಟ್ಟಿ ನಿರ್ಮಾಪಕರಾಗಿದ್ದಾರೆ. ಈ ಮ್ಯೂಸಿಕಲ್ ಫಿಲಂ ಈಗಾಗಲೇ ಬೆಂಗಳೂರಿನ ಸುಚಿತ್ರ ಫಿಲಂ ಅಕಾಡಮಿಯಲ್ಲಿ ಸತತವಾಗಿ 3 ಪ್ರಿಮಿಯರ್ ಶೋ ಪ್ರದರ್ಶನ ಕಂಡು ಜನರ ಮೆಚ್ಚುಗೆಯನ್ನ ಪಡೆದಿದೆ. ಶೀತಲ್ ಎಸ್.ಎಂ ಅವರ ಹಿನ್ನಲೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ತಾಲೂಕು ಆಡಳಿತ, ಸರಕಾರಿ ಪದವಿ ಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಸೋಮವಾರ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಮಾತನಾಡಿ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮತ್ತು ಯುವಕರು ಮುಂದಾಗಬೇಕು. ಕುತೂಹಲಕ್ಕಾಗಿ ಯಾರೊಬ್ಬರೂ ಮಾದಕ ದ್ರವ್ಯ ಬಳಸಬಾರದು. ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಂತೆ ಮಾಡುವುದು ನಾಗರಿಕ ಸಮಾಜದ ಕರ್ತವ್ಯ. ಖಿನ್ನತೆಯಿಂದ ಮಾನಸಿಕ ದುಃಖ ಉಂಟಾಗಿ ವ್ಯಕ್ತಿಯ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಮಾದಕ ವಸ್ತುಗಳಿಂದ ಮನು?ನ ಅಂಗಾಂಗಳಿಗೆ ತಲುಪಿ ಮನ? ಅದಕ್ಕೆ ಮದ್ಯಪಾನಕ್ಕೆ ದಾಸನು ಆಗುತ್ತಾನೆ. ಮದ್ಯಪಾನ, ಮಾದಕ ದ್ರವ್ಯಗಳ ಸೇವನೆಯಂತಹ ದುಶ್ಚಟಗಳು ಖಿನ್ನತೆಗೆ ಕಾರಣವಾಗಬಹುದು ಹೀಗಾಗಿ ಸಮೂಹ ಸನ್ನಡತೆ ಮೈಗೂಡಿಸಿಕೊಳ್ಳಬೇಕು ಎಂದರು. ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್…

Read More