Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತೀಯ ಅಂಚೆ ಇಲಾಖೆ ನೀಡುವ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಯು ಉಡುಪಿ ಅಂಚೆ ವಿಭಾಗದ ಬೈಂದೂರು ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಂದ್ರ ಡಿ. ಅವರಿಗೆ ಸತತ ಎರಡನೇ ಬಾರಿ ಲಭಿಸಿದೆ. ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಜೀವ ವಿಮಾ ವಿಭಾಗದಲ್ಲಿ 2020-21ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಅತಿ ಹೆಚ್ಚಿನ ವಹಿವಾಟು ಮಾಡಿದ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆ ಇತ್ತೀಚೆಗೆ ಅವರನ್ನು ಬೆಂಗಳೂರಿನ ಕರ್ನಾಟಕ ಪೋಸ್ಟಲ್ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರು 13 ವರ್ಷಗಳ ಸೇವಾ ಅವಧಿಯಲ್ಲಿ ಒಂಬತ್ತು ಬಾರಿ ವಿಭಾಗೀಯ ಮಟ್ಟದ, ನಾಲ್ಕು ಬಾರಿ ರಾಜ್ಯ ಮಟ್ಟದ ಮತ್ತು ಇದೇ ವರ್ಷ ಫೆಬ್ರವರಿಯಲ್ಲಿ 2019-20ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನು ಇವರು ಪಡೆದಿದ್ದಾರೆ. ನವದೆಹಲಿಯ ಡಾಕ್ ಭವನದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರೂಪಿಸಲ್ಪಟ್ಟ ಸಮಾರಂಭದಲ್ಲಿ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಎಮ್ಎಸ್ಸಿ ಘಟಕ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗೋದಾಮು ಕಟ್ಟಡದ ಕಾಮಗಾರಿಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್ ಬೀಸಿನಪಾರೆಯಲ್ಲಿ ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ, ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕರಾದ ಶಿವರಾಮ ಪೂಜಾರಿ, ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ದೇವದಾಸ್ ವಿ.ಜೆ. ಜಡ್ಕಲ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅಡಿಗ, ಮುದುರೂ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರು ಹಾಗೂ ಗುತ್ತಿದಾರರಾದ ನಕ್ಷತ್ರ ಬೋವಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕರಮಣ ಶರ್ಮ. ಸಂಘದ ನಿರ್ದೇಶಕರುಗಳಾದ ಸುರೇಂದ್ರ ನಾಯ್ಕ್, ಮನೋಜ್ ಪಿ.ಜೆ, ಜೋಶಿ ಪಿಪಿ. ಜೋಸೆಫ್ ಕೆ.ಎಮ್ ವಿನೋದ್ ಜೋರ್ಜ್ ನಾರಾಯಣ ಶೆಟ್ಟಿ. ಮಹಾಬಲ ಪೂಜಾರಿ. ಗುರುರಾಜ್ ಪೂಜಾರಿ. ಮುತ್ತ. ರೊಸಮ್ಮ, ಸವಿತಾ ಶೆಟ್ಟಿ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಿಪಿಐ(ಎಂ) ಪಕ್ಷದ ಅಖಿಲ ಭಾರತ ಮಹಾ ಅಧಿವೇಶನ ಕೇರಳ ರಾಜ್ಯದ ಕಣ್ಣೂರು ನಗರದಲ್ಲಿ ಜರಗಲಿರುವುದರ ಪೂವ೯ಭಾವಿಯಾಗಿ ದೇಶದ ಎಲ್ಲಾ ರಾಜ್ಯ, ಜಿಲ್ಲೆ, ತಾಲೂಕು/ವಲಯ ಹಾಗೂ ಪ್ರಾಥಮಿಕ ಶಾಖಾ ಸಮ್ಮೇಳನಗಳು ನಡೆಯುವ ಹಂತವಾಗಿ ಬೈಂದೂರು ವಲಯ ವ್ಯಾಪ್ತಿಯ ಸಿಪಿಐ(ಎಂ) ಪಕ್ಷದ ಅಕ್ಷರ ದಾಸೋಹ ನೌಕರರ ಶಾಖಾ ಸಮ್ಮೇಳನವು ಸಿಪಿಐ(ಎಂ) ಕಚೇರಿಯಲ್ಲಿ ನಡೆಯಿತು. ಸಿಪಿಐ(ಎಂ) ಉಡುಪಿ ಜಿಲ್ಲಾ ಕಾಯ೯ದಶಿ೯ಮಂಡಳಿ ಸದಸ್ಯ ವೆಂಕಟೇಶ್ ಕೋಣಿ ಸಮ್ಮೆಳನ ಉದ್ಘಾಟಿಸಿ ಮಾತನಾಡಿ, ದುಡಿಯುವ ವಗ೯ವಾದ ರೈತ,ಕಾಮಿ೯ಕರ ಪಕ್ಷಪಾತಿ ಸಿಪಿಐ(ಎಂ) ಪಕ್ಷವನ್ನು ತಳಮಟ್ಟ ದಿಂದ ಕಟ್ಟಲು ಶೋಷಿತ ವಗ೯ದ ದುಡಿಯುವ ಜನರ ಬಲಿಷ್ಟ ಹೋರಾಟ, ಚಳುವಳಿಯನ್ನು ಸಂಘಟಿಸಲು ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು. ಪಕ್ಷದ ಬೈಂದೂರು ವಲಯ ಕಾಯ೯ದಶಿ೯ ಸುರೇಶ್ ಕಲ್ಲಾಗರ್ ಮಾತನಾಡಿ ಗುಲ್ವಾಡಿಯಲ್ಲಿ ಜರಗುವ ಸಿಪಿಐ(ಎಂ) ಪಕ್ಷದ ಬೈಂದೂರು ವಲಯದ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಶಾರದಾ ಶಿರೂರು ಶ್ರದ್ಧಾಂಜಲಿ ಠರಾವು ಮಂಡಿಸಿದರು ಶಾಖಾ ಕಾಯ೯ದಶಿ೯ ಸಿಂಗಾರಿ ನಾವುಂದ ವರದಿ ಮಂಡಿಸಿದರು. ಹಿರಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಲ್ಲಿ ಮೀನುಗಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ದಿಪಡಿಸಲು 7.5 ಕೋಟಿ ರೂ ಅನುದಾನ ನೀಡುವ ನೂತನ ಯೋಜನೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ವಾರ್ತಾ ಮತ್ತು ಪ್ರಚಾರ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆಯ ರಾಜ್ಯ ಸಚಿವ ಡಾ. ಎಲ್. ಮುರುಗನ್ ಹೇಳಿದರು. ಅವರು ಮಲ್ಪೆ ಬಂದರಿಗೆ ಭೇಟಿ ನೀಡಿ, ಮೀನುಗಾರರರೊಂದಿಗೆ ನಡೆದ ಸಂವಾದ ನಡೆಸಿ, ಮಾತನಾಡಿದರು. ಕೇಂದ್ರ ಸರ್ಕಾರದ ಮೂಲಕ ,ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ , ಮೀನುಗಾರರಿಗೆ ಅಗತ್ಯ ಮೂಲಭೂತ ಸೌಕರ್ಯ, ಮೀನುಗಾರಿಕಾ ಚಟುವಟಿಕೆ ಮತ್ತು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ದಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೈಗೊಳ್ಳಲು 7.5 ಕೋಟಿ ರೂ ಗಳನ್ನು ನೀಡಲಾಗುವುದು, ಮೀನುಗಾರರ ಗ್ರಾಮಗಳನ್ನು ಗುರುತಿಸುವ ಕಾರ್ಯ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು. ಕರ್ನಾಟಕದಲ್ಲಿ ಮೀನುಗಾರಿಕಾ ಚಟುವಟಿಕೆಗಳ ಅಭಿವೃಧ್ದಿಗಾಗಿ ಕೇಂದ್ರ ಸರ್ಕಾರದಿಂದ ಮುಂದಿನ 5 ವರ್ಷದಲ್ಲಿ 725 ಕೋಟಿ ರೂಗಳ ಹೊಡಿಕೆ ಮಾಡಲಾಗುವುದು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ 2020-21ನೇ ಸಾಲಿನಲ್ಲಿ 20.23 ಲಕ್ಷ ರೂ. ಲಾಭಗಳಿಸಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ. ಗ್ರಾಹಕರ ಸಹಕಾರದಿಂದ ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಸಂಘದ ಪ್ರಧಾನ ಕಛೇರಿಯಲ್ಲಿ ಭಾನುವಾರ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2020-21ನೇ ಸಾಲಿನಲ್ಲಿ ರೂ. 24.26 ಕೋಟಿ ಠೇವಣಿ ಹೊಂದಿದ್ದು 21.73 ಕೋಟಿ ಸಾಲ ನೀಡಿದೆ. ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ ಹಿಂದೆ ಗ್ರಾಹಕರ ಸಹಕಾರ ಹಾಗೂ ನೌಕರರ ಶ್ರಮವಿದೆ ಎಂದರು. ಸೌಹಾರ್ದ ಸಹಕಾರಿಯ ವ್ಯಾಪ್ತಿಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕೋವಿಡ್…

Read More

ಕುಂದಾಪ್ರ ಡಾಟ್ ಕಾಂ ವರದಿಕುಂದಾಪುರ: ಪಂಜರ ಮೀನು ಕೃಷಿಯಲ್ಲಿನ ನಷ್ಟದಿಂದ ಸಾವರಿಸಿಕೊಳ್ಳುವ ಹೊತ್ತಿಗೆ ಮತ್ತೆ ಪಂಚರ ಮೀನುಗಳು ಸಾಯುತ್ತಿರುವುದು ಕಂಡುಬಂದಿದೆ. ಕಳೆದ ಮೂರು ದಿನದಿಂದ ಅಲ್ಲೊಂದು ಇಲ್ಲೊಂದು ಪಂಜರ ಮೀನು ಸಾಯುತ್ತಿದ್ದು ಭಾನುವಾರ ಸಾವುಗಳ ಸಂಖ್ಯೆ ದಿಢೀರಾಗಿ ಹೆಚ್ಚಿಗಿದ್ದು ಕೃಷಿಕರನ್ನು ಆತಂಕಕ್ಕೆ ನೂಕಿದೆ. ಕಳೆದ ಬಾರಿ ಬೈಂದೂರು ಹಾಗೂ ಕುಂದಾಪುರ ಪರಿಸರದಲ್ಲಿ ಮೀನುಗಳ ಸಾವಾಗಿದ್ದು ಈ ಬಾರಿ ಕುಂದಾಪುರದ ಪಂಚಗಂಗಾವಳಿ ಹೊಳೆಯಲ್ಲಿ ಪಂಜರ ಮೀನುಗಳ ಸಾವು ಹೆಚ್ಚಾಗಿ ಕಂಡುಬಂದಿದೆ. ಪಂಜಗಂಗಾವಳಿ ಸಂಗಮ ಪರಿಸರದಿಂದ ಬೊಬ್ಬುಕುದ್ರು ತನಕ ನೂರಾರು ಪಂಜರದಲ್ಲಿ ಮೀನು ಸಾಕಣೆ ಮಾಡಿದ್ದು ಬರೋಬ್ಬರಿ ಒಂದು ಕೆಜಿ ತನಕ ತೂಕ ಬಂದ ಮೀನು ಸಾಯುತ್ತಿವೆ. ಹತ್ತಾರು ಕುಟುಂಬಗಳು ಪಂಜ ಮೀನು ಸಾಕಣಿಕೆಯಿಂದ ಬದುಕು ಕಟ್ಟಿಕೊಂಡಿದ್ದು, ಅಚಾನಕ್ ಸಾವುನಿಂದ ಕಂಗೆಟ್ಟಿದ್ದಾರೆ. ನಿಗೂಢವಾಗಿ ಸತ್ತ ಮೀನುಗಳ ಹೊಂಡ ತೆಗೆದು ಹೂಳುತ್ತಿದ್ದಾರೆ. ಕಲುಷಿತ ನೀರು ಮೀನು ಸಾವಿಗೆ ಕಾರಣ?ಪಂಜರದ ಮೀನು ಸಾವಿಗೆ ಕುಲಷಿತ ನೀರೇ ಕಾರಣ ಎಂದು ಕೃಷಿಕರು ಆರೋಪಿಸಿದ್ದಾರೆ. ಹೋಟೆಲ್, ಆಸ್ಪತ್ರೆ ಸಮುಚ್ಚಯದ ನೀರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾಸರಗೋಡು,ಅ.16: ಎಡನೀರು ಮಠದಲ್ಲಿ ಪತ್ರಕರ್ತ ಲಕ್ಷ್ಮೀ ಮಚ್ಚಿನ ಬರೆದ, ಐದು ದಶಕಗಳ ಯಕ್ಷಗಾನ ತಿರುಗಾಟದ ಅನುಭವ ಇರುವ ಯಕ್ಷಗಾನದ ಹಿರಿಯ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ಕಲಾಪಯಣದ ಪುಸ್ತಕ “ರಂಗಾಂತರಂಗ”ವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಅನಾವರಣಗೊಳಿಸಿದರು. ತಮ್ಮ ಪೂರ್ವಾಶ್ರಮದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯರ ಬಳಿ ಕೆಲ ಸಮಯ ಚೆಂಡೆ ಮದ್ದಳೆ ಕಲಿತ ಸಂದರ್ಭವನ್ನು ನೆನಪಿಸಿ, ವಿಜಯದಶಮಿಯ ಈ ಪರ್ವ ಕಾಲದಲ್ಲಿ ಪುಸ್ತಕ ಬಿಡುಗಡೆಗೊಂಡದ್ದು ಸುಯೋಗವೆಂದರು. ಲಕ್ಷ್ಮೀಶ ಅಮ್ಮಣ್ಣಾಯರ ಮಠದ ಜತೆಗಿನ ದೀರ್ಘ ಕಾಲಿಕ ಒಡನಾಟವನ್ನು ನೆನಪಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ, ಲಕ್ಷ್ಮೀಶ ಅಮ್ಮಣ್ಣಾಯರ ಕಲಾಮೌಲ್ಯ ಮತ್ತು ಶಿಸ್ತು ಇವನ್ನು ಉಲ್ಲೇಖಿಸಿ ತಾನು ಹೃದಯತುಂಬಿ ಮುನ್ನುಡಿ ಬರೆದ ಪುಸ್ತಕಗಳಲ್ಲಿ ಇದೂ ಒಂದು ಎಂದರು. ವಿಶ್ವ ರಂಗಭೂಮಿಯ ದೃಷ್ಟಿಯಿಂದ ಯಕ್ಷಗಾನ ಕಲಾವಿದರ ಕುರಿತಾದ ಪುಸ್ತಕಗಳು ಇನ್ನಷ್ಟು ಬರಬೇಕು ಎಂದರು. ಸಮಾರಂಭದಲ್ಲಿ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯ, ಗೀತಾ ಅಮ್ಮಣ್ಣಾಯ, ಭಾಗವತ ದಿನೇಶ ಅಮ್ಮಣ್ಣಾಯ, ಅರ್ಥಧಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಆಶ್ರಮದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪ್ರತಿನಿತ್ಯ ಆಶ್ರಮದ ವಿದ್ಯಾರ್ಥಿಗಳಿಂದ ನಿತ್ಯೋಪಾಸನ ಮಂತ್ರಗಳೊಂದಿಗೆ ಗಣಪತ್ಯಧರ್ಮಶೀರ್ಷ, ದೇವಿಯ ವಿವಿಧ ಸ್ತುತಿಗಳು, ಲಲಿತ ಸಹಸ್ರನಾಮ, ಸಪ್ತಶತಿ ಪರಾಯಣ, ಉಪನಿಷತ್ ಪಠಣ, ದೇವಿ ಪಾರಾಯಣ, ಭಗವದ್ಗೀತೆ, ವಿಷ್ಣು ಸಹಸ್ರನಾಮ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲಿಸ್ ಇತ್ಯಾದಿ ಸ್ತೋತ್ರಗಳ ಪಠಣ ನಡೆಯಿತು. ದುರ್ಗಾಷ್ಟಮಿಯಂದು ವಿಶೇಷವಾಗಿ ಕುಮಾರಿ ದುರ್ಗಾ ಪೂಜೆ ನಡೆಯಿತು. ಮಾತೆಯರಾದ ಯಶೋಧಾ ಅಡಿಗ ವಂಡ್ಸೆ ಹಾಗೂ ನಾಗಶ್ರೀ ಮಧ್ಯಸ್ಥ ಕೋಟ ಕುಮಾರಿ ದುರ್ಗಾ ಪೂಜೆ ನೆರವೇರಿಸಿದರು. ಮಹಾನವಮಿಯಂದು ವಿದ್ಯಾರ್ಥಿಗಳಿಂದ ಚಂಡಿಕಾ ಪಾರಾಯಣದ ದೇವಿ ಸ್ತುತಿಗಳ ಸಾಮೂಹಿಕ ಪಠಣ, ವಿಜಯದಶಮಿಯಂದು ವಿದ್ಯಾ ಪ್ರಧಾನ, ದೆವಿ ಮಹಾತ್ಮೆಯ ಕಥನ ಪಠಣ ಜರುಗಿದವು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಜಡ್ಕಲ್ ಬೀಸಿನಪಾರೆಯ ಮೂಕಾಂಬಿಕಾ ಪ್ರೌಢಶಾಲೆಯುಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಅಭಿಯಾನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಮ್ಮ ಬಳಿ ಆಗೋದನ್ನ ನಾವೇ ಪರಿಹರಿಸುತ್ತೇವೆ, ಸಾಧ್ಯವಾಗದಿದ್ದರೆ ಸರಕಾರಕ್ಕೆ ಬರೆಯುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಗ್ರಾಮದಲ್ಲಿ ಅಧಿಕಾರಿಗಳು ಹಾಗೂ ಅಹವಾಲುದಾರರಿಗೆ ಮನವಿ, ಸ್ಪಷ್ಟನೆಯ ಬಳಿಕ ಪ್ರತಿಕ್ರಿಯಿಸಿದ ಅವರು ವಿಕಲಚೇತನರ ಬಸ್‌ಪಾಸ್ ರಾಜ್ಯ ಹಾಗೂ ಖಾಸಗಿ ಬಸ್‌ಗಳಿಗೂ ವಿಸ್ತರಣೆ, ಅಂಗನವಾಡಿ ತೆರೆಯಲು ಅವಕಾಶವಿದ್ದರೆ ಸರಕಾರದ ಗಮನಕ್ಕೆ, ಜಡ್ಕಲ್ ಗ್ರಾಮದಲ್ಲಿ ಸ್ಮಶಾನಕ್ಕೆ ಸರಕಾರಿ ಜಾಗ ಗುರುತಿಸಿದ್ದು ಗಡಿ ಗುರುತು ಮಾಡಲು ತಹಶಿಲ್ದಾರರಿಗೆ ಸೂಚನೆ, ನ್ಯಾಯಾಲದಲ್ಲಿರುವ ಜಾಗದ ವ್ಯಾಜ್ಯಗಳಿಗೆ ಅಭಿಯಾನದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದರು. ವಿಕಲಚೇತನ ರಾಜು ಪೂಜಾರಿ ಅವರ ಬಸ್ ಪಾಸ್ ಕಿ.ಮೀ ವ್ಯಾಪ್ತಿ ವಿಸ್ತರಣೆ ಹಾಗೂ ಖಾಸಗಿ ಬಸ್ಸಿನಲ್ಲಿ ಕೂಡ ವಿಕಲಚೇತನರಿಗೆ ಬಸ್ ಪಾಸ್ ನೀಡಬೇಕು ಹಾಗೂ ಎಪಿಎಲ್ ಕಾರ್ಡುದಾರರಿಗೂ ಪಿಂಚಣಿ ದೊರೆಯಬೇಕು ಎಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಕೆಎಸ್‌ಆರ್‌ಟಿಸಿ ಪಾಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ರಾಮಕ್ಷತ್ರಿಯ ಯುವಕ ಸಮಾಜದಿಂದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ 35ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭದಲ್ಲಿ ಶುಕ್ರವಾರ ಶಾರದಾ ಪುರಮೆರವಣಿಗೆ ಶಾರದಾ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಪುರಮೆರವಣಿಗೆಯಲ್ಲಿ ಚಂಡೆ ವಾದನ ಹಾಗೂ ಇನ್ನಿತರ ಕಲಾತಂಡಗಳು ಪುರಮೆರವಣಿಗೆಗೆ ಮೆರಗು ನೀಡಿದ್ದವು. ಈ ವೇಳೆ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಪಟ್ವಾಲ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ದಡ್ಡು, ಗೌರವ ಅಧ್ಯಕ್ಷ ಗುರುರಾಜ ಹೋಬಳಿದಾರ್, ಕಾರ್ಯದರ್ಶಿ ರಾಘವೇಂದ್ರ ಎನ್. ತಗ್ಗರ್ಸೆ ಭಾಗವಹಿಸಿದ್ದರು.

Read More