Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೀಪಾವಳಿಯ ಪ್ರಯುಕ್ತ ಗೋಪೂಜಾ ಕಾರ್ಯಕ್ರಮ ಗೋದೂಳಿ ಮುಹೂರ್ತದಲ್ಲಿ ನಡೆಯಿತು. ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಗೋಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೋಗ್ರಾಸ ನೀಡಿದರು. ಈ ಸಂದರ್ಭ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಮಂಜಯ್ಯ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅನಂತ ಅಡಿಗ ಸೌಕೂರು, ಕುಪ್ಪ ಗುಲ್ವಾಡಿ, ರೀತಾ ದೇವಾಡಿಗ ಸೌಕೂರು, ಆಶಾ ಸಂತೋಷ್ ಪೂಜಾರಿ ಮುಕ್ಕೋಡು ನೇರಳಕಟ್ಟೆ, ಜಯರಾಮ ಶೆಟ್ಟಿ ಹಡಾಳಿ, ಅಂಪಾರು, ಕೆ.ಸುಬ್ಬಣ್ಣ ಶೆಟ್ಟಿ ಕೆಂಚನೂರು, ಉಮೇಶ ಮೊಗವೀರ ಕಂಡ್ಲೂರು, ಜಿ.ಶೇಖರ ಪೂಜಾರಿ ಗುಲ್ವಾಡಿ ಹಾಗೂ ರಘುರಾಮ ಶೆಟ್ಟಿ, ದೇವಳದ ಅರ್ಚಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕೇದಾರನಾಥ ಧಾಮದ ಪುನರ್ನಿರ್ಮಿತ ಆದಿಗುರು ಶ್ರೀ ಶಂಕರಾಚಾರ್ಯರ ಪುಣ್ಯ ಸಮಾಧಿಯ ಲೋಕಾರ್ಪಣೆಯ ಕಾರ್ಯಕ್ರಮ ದ ಅಂಗವಾಗಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಗೋಪೂಜೆ ನಡೆಯಿತು. ಈ ಸಂದರ್ಭ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ದೇಶದಲ್ಲಿ ನ್ಯುಮೋನಿಯಾದಿಂದ ಸಂಭವಿಸುವ ಸಾವುಗಳಲ್ಲಿ 5 ವರ್ಷದೊಳಗಿನ ಮಕ್ಕಳ ಪ್ರಮಾಣ 15% ಇದೆ ಎಂದು ವರದಿಗಳಿದ್ದು, ಮಕ್ಕಳನ್ನು ನ್ಯುಮೋನಿಯಾದಿಂದ ರಕ್ಷಿಸಲು ಪೋಷಕರು ತಪ್ಪದೇ ಮಕ್ಕಳಿಗೆ ನ್ಯುಮೊಕೋಕಲ್ ಲಸಿಕೆಯನ್ನು ಕೊಡಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಹೇಳಿದರು. ಅವರು ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ವತಿಯಿಂದ, ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ, ಜಿಲ್ಲೆಯಲ್ಲಿ ನ್ಯುಮೊಕೋಕಲ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ನ್ಯುಮೋನಿಯಾದಿಂದ ರಕ್ಷಣೆ ನೀಡುವ ನ್ಯುಮೊಕೋಕಲ್ ಲಸಿಕೆಯನ್ನು ಪ್ರಸ್ತುತ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಪ್ರಾರಂಭಿಸಲಾಗಿದ್ದು, ಮಕ್ಕಳು ಹುಟ್ಟಿದ ಮೊದಲನೇ ವರ್ಷದಲ್ಲಿ ಗಂಭೀರ ನ್ಯುಮೊಕೋಕಲ್ ಕಾಯಿಲೆ ಉಂಟಾಗುವ ಸಾಧ್ಯತೆಗಳು ಅಧಿಕವಾಗಿದ್ದು, ಈ ಲಸಿಕೆಯನ್ನು 1.5 ತಿಂಗಳು, 3.5 ತಿಂಗಳು ಮತ್ತು 9 ನೇ ತಿಂಗಳಲ್ಲಿ ಒಟ್ಟು 3 ಡೋಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ, ದಿಯಾ ಸಿಸ್ಟಮ್ ಕಂಪೆನಿಯ ವತಿಯಿಂದ ಕ್ಯಾಂಪಸ್ ಆಯ್ಕೆ ನಡೆಯಲಿದೆ. ನವೆಂಬರ್ 9ರಂದು ಬೆಳಿಗ್ಗೆ 10 ಗಂಟೆಯಿಂದ ಆಯ್ಕೆಯು ಆರಂಭಗೊಳ್ಳಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಂಪೆನಿಗೆ ಆಯ್ಕೆ ಮಾಡಲಿದ್ದು, ಯಾವುದೇ ಕಾಲೇಜಿನ ಬಿ.ಎಸ್ಸಿ., ಬಿ.ಸಿ.ಎ., ಬಿ.ಟೆಕ್, ಎಂ.ಸಿ.ಎ., ಎಂ.ಎಸ್ಸಿ. ಪೂರೈಸಿದ ವಿದ್ಯಾರ್ಥಿಗಳು ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಅಷ್ಟಿಟ್ಯೂಡ್ ಪರೀಕ್ಷೆ, ಪ್ರಬಂಧ ರಚನೆ, ಟೈಪಿಂಗ್ ಪರೀಕ್ಷೆ ಹಾಗೂ ಸಂದರ್ಶನವನ್ನು ನಡೆಸಲಾಗುವುದು. ಆಸಕ್ತರು https://docs.google.com/forms ನಲ್ಲಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 9480265511 ನ್ನು ಸಂಪರ್ಕಿಸಬುಹುದಾಗಿದೆಂದು ಕಾಲೇಜಿನ ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಅಕಾಡೆಮಿ ಫಾರ್ ಎಕ್ಸಲೆನ್ಸ್ ವತಿಯಿಂದ ಆಳ್ವಾಸ್ ರಿಮೋಟ್ ಎಜುಕೇಶನ್ ಸಿಸ್ಟಮ್ (ಎ ಆರ್ ಇ ಎಸ್)ಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಡಿಜಿಟಲ್ ಚಾಲನೆ ನೀಡಿದರು. ಜಾಗತಿಕವಾಗಿ ಕಾಡಿದ ಸಾಂಕ್ರಾಮಿಕ ರೋಗವು ಶೈಕ್ಷಣಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಿದೆ. ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಹಾಗೂ ಇತರ ಕೋರ್ಸ್ಗಳಿಗೆ ಸರಿಯಾದ ತರಬೇತಿ ಸಿಗುತ್ತಿಲ್ಲ ಎನ್ನುವ ಕಾರಣದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನುರಿತ ಶಿಕ್ಷಕರು ಆನ್ಲೈನ್ ಮುಖೇನ 8ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಫೌಂಡೇಶನ್ ಕೋರ್ಸ್, ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಕ್ರಾಶ್ ಕೋರ್ಸ್ ಹಾಗೂ ಪ್ರಶ್ನೋತ್ತರ ಮಾಲಿಕೆಯನ್ನು ಆಳ್ವಾಸ್ ರಿಮೋಟ್ ಎಜುಕೇಶನ್ ಸಿಸ್ಟಮ್ ಯೋಜನೆಯಲ್ಲಿ ಒದಗಿಸಲಾಗುತ್ತಿದೆ. ಈ ಯೋಜನೆಯು ಎಲ್ಲಾ ವರ್ಗದ ಜನರಿಗೂ ಸುಲಭವಾಗಿ ತಲುಪುವಂತೆ ಮಿತವಾದ ದರದಲ್ಲಿ ಗುಣಮಟ್ಟದ ಶಿಕ್ಷಣ, ನೇರ ತರಗತಿ, ಚಿತ್ರೀಕರಿಸಿದ ವಿಡಿಯೋ ತರಗತಿ, ಕಲಿಕಾ ಸಾಮಗ್ರಿ, ಪರೀಕ್ಷೆಗಳು, ದಿನನಿತ್ಯ ಅಭ್ಯಾಸ ಪ್ರಶ್ನೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ, ಜಗತ್ತಿನ ವಿವಿಧೆಡೆ ಪ್ರದರ್ಶನಗೊಂಡ ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ನ. 5ರಿಂದ ‘ಹಳ್ಳಿಯೆಡೆಗೆ ಗೊಂಬೆ ನಡಿಗೆ’ ಆಯೋಜಿಸಿದೆ. ಜಿಲ್ಲೆಯ 25 ಹಳ್ಳಿಗಳಲ್ಲಿ ಗೊಂಬೆಯಾಟ ಪ್ರದರ್ಶನ ನೀಡಲಿದೆ ಎಂದು ಮಂಡಳಿಯ ಆರನೆ ತಲೆಮಾರಿನ ಪ್ರವರ್ತಕ ಭಾಸ್ಕರ ಕೊಗ್ಗ ಕಾಮತ್ ತಿಳಿಸಿದ್ದಾರೆ. 350 ವರ್ಷಗಳ ಪರಂಪರೆಯ ಗೊಂಬೆಯಾಟವನ್ನು ಈಗ ಮುನ್ನಡೆಸುತ್ತಿರುವ ಅವರು ಗೊಂಬೆಯಾಟ ಉಳಿವಿಗಾಗಿ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ರಚಿಸಿಕೊಂಡಿದ್ದಾರೆ. ಈ ವರ್ಷ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಅವರ ಜನ್ಮ ಶತಮಾನೋತ್ಸವ ಮತ್ತು ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಅಭಿಯಾನ ನಡೆಸಲಾಗುತ್ತಿದೆ ಎಂದಿದ್ದಾರೆ. ನ.5ರ ಸಂಜೆ 6ಗಂಟೆಗೆ ಬೈಂದೂರು ತಾಲ್ಲೂಕಿನ ಬಡಾಕೆರೆ ಲಕ್ಷ್ಮೀಜನಾರ್ದನ ಸಭಾಭವನದಲ್ಲಿ ಅಭಿಯಾನ ಉದ್ಘಾಟನೆಗೊಳ್ಳುವುದು. ಆ ಬಳಿಕ ಮುಂದಿನ ಸ್ಥಳಗಳಲ್ಲಿ ಇದೇ ಸಮಯಕ್ಕೆ ಪ್ರದರ್ಶನಗಳು ನಡೆಯಲಿವೆ. ನ.6ರಂದು ರಂಗನಾಥ ಸಭಾಭವನ, ಸಿದ್ಧಾಪುರ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಪ್ರತಿಯೊಂದು ಸಂಪ್ರದಾಯಗಳ ಆಚರಣೆಯ ಹಿಂದೆ ವೈಜ್ಞಾನಿಕ ಹಿನ್ನೆಲೆ ಇರುತ್ತದೆ. ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನ ಪ್ರಯತ್ನವನ್ನು ನಾವು ಮಾಡಬೇಕಿದೆ. ಗೂಡುದೀಪ ಸ್ಪರ್ಧೆಯಂತಹ ಕಾರ್ಯಕ್ರಮಗಳು ನಮ್ಮಲ್ಲಿನ ಕಲೆಯನ್ನು ಉದ್ದೀಪನಗೊಳಿಸಲು ನೆರವಾಗುತ್ತವೆ ಎಂದು ಖ್ಯಾತ ಸ್ಯಾಕ್ಸೋಫೋನ್ ವಾದಕ ಉಮಾನಾಥ್ ದೇವಾಡಿಗ ಹೇಳಿದರು. ಅವರು ಗಂಗೊಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ದೀಪಾವಳಿಯ ಅಂಗವಾಗಿ ಆಯೋಜಿಸಿದ್ದ ಗೂಡುದೀಪ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಮಾತನಾಡಿ, ಇಂತಹ ಸ್ಪರ್ಧೆಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯವಾಗುತ್ತದೆ. ಹೆಚ್ಚು ಹೆಚ್ಚು ಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದರು. ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಯುವಕ ಮಂಡಲದ ಗೌರವಾಧ್ಯಕ್ಷರಾದ ಭಾಸ್ಕರ್ ಎಚ್. ಜಿ ಸ್ವಾಗತಿಸಿದರು. ಉಪಾಧ್ಯಕ್ಷ ಕಿರಣ್ ವಂದಿಸಿದರು. ಗೂಡುದೀಪ ಸ್ಪರ್ಧೆಯಲ್ಲಿ ನಾಗಲಕ್ಷ್ಮಿ, ನವೀನ್ ಹಾಗು ನಟರಾಜ ಕ್ರಮವಾಗಿ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರೈತರು ಬೆಳೆದ ಭತ್ತಕ್ಕೆ ಕನಿಷ್ಠ ರೂ.2500/ ಖರೀದಿ ಬೆಲೆಯನ್ನು ನ.5ರೊಳಗೆ ಸರಕಾರ ಘೋಷಿಸಬೇಕು. ಘೋಷಿಸದೇ ಇದ್ದಲ್ಲಿ ನ.6ರಂದು ರೈತರು ಪ್ರತಿಭಟನೆ ಕೈಗೊಳ್ಳಾಗುತ್ತದೆ ಎಂದು ಬ್ರಹ್ಮಾವರ ರೈತ ಹೋರಾಟ ಸಮಿತಿ ಎಚ್ಚರಿಸಿದೆ. ಅವರು ಇಲ್ಲಿನ ಮದರ್ ಪ್ಯಾಲೇಸ್‌ನಲ್ಲಿ ನಡೆದ ರೈತ ಹೋರಾಟ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ರೈತ ಹೋರಾಟ ಸಮಿತಿ ಈ ಹಿಂದೆಯೇ ಸರಕಾರವನ್ನು ಮಾದ್ಯಮಗಳ ಮೂಲಕ ಎಚ್ಚರಿಸಿದರೂ ರೈತರ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಕೇರಳದಲ್ಲಿ ಭತ್ತದ ಕ್ವಿಂಟಾಲ್‌ಗೆ ರೂ. 2740೦ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕೇವಲ ರೂ. 1700 ನೀಡುತ್ತಿದ್ದಾರೆ. ಇಲ್ಲಿ ತಾನು ಬೆಳೆದ ಭತ್ತಕ್ಕೆ ರೈತ ಬೆಲೆ ನಿಗದಿಪಡಿಸುತ್ತಿಲ್ಲ. ಬದಲಾಗಿ ರೈಸ್‌ಮಿಲ್ ಮಾಲಕರೇ ಬೆಲೆ ನಿಗದಿಪಡಿಸುತ್ತಿದ್ದಾರೆ. ರೈತ ತಾನು ಬೆಳೆದ ಭತ್ತವನ್ನು ಕೆಜಿಯೊಂದಕ್ಕೆ 17ರೂಗೆ ನೀಡಿ ಅಕ್ಕಿಯನ್ನು ರೂ.32ಕ್ಕೆ ಖರೀದಿಸುತ್ತಿದ್ದಾನೆ. ಎಲ್ಲೆಡೆ ಕಟಾವು ಮುಗಿಯುತ್ತಾ ಬಂದಿದೆ. ರೈತ ರೈಸ್‌ಮಿಲ್ಲಿಗೆ ಭತ್ತ ತಲುಪಿಸುವ ಮೊದಲೇ ಸರಕಾರ ಬೆಲೆ ನಿಗದಿಪಡಿಸಬೇಕಿತ್ತು. ಬೆಲೆ ನಿಗದಿ ಮಾಡದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೀಪಾವಳಿ ಅಂಗವಾಗಿ ಆಯುಧ ಪೂಜೆ ನಡೆಯಿತು. ಈ ಸಂದರ್ಭ ಪೊಲೀಸ್ ಉಪನಿರೀಕ್ಷಕ ಸುಬ್ಬಣ್ಣ ಬಿ. ಹಾಗೂ ಸಿಬ್ಬಂದಿ ವರ್ಗ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮದಿಂದ ಪಾಲ್ಗೊಂಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಾಕ್ಟ್ ಡಿಸ್ಟ್ರಿಕ್ಟ್ ಕೌನ್ಸಿಲ್ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನ ದಾಮೋದರ ಕಿಣಿ ಮೆಮೋರಿಯಲ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ರೋಟರಾಕ್ಟ್ ಇಂಡೋರ್ ಸ್ಫೋರ್ಟ್ಸ್ ಮೀಟ್ ನಲ್ಲಿ ಭಾಗವಹಿಸಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ರನ್ನರ್ ಅಪ್ ಸ್ಥಾನವನ್ನು ಪಡೆಯಿತು. ಅರ್ಲಿ ಬರ್ಡ್, ಅತಿ ಹೆಚ್ಚು ಸದಸ್ಯರ ಭಾಗವಹಿಸುವಿಕೆ ಸೇರಿದಂತೆ ಶ್ರೀನಿಧಿ ಮತ್ತು ವೈಷ್ಣವಿ ಹುಡುಗಿಯರ ಶಟಲ್ ಬ್ಯಾಡ್ಮಿಂಟನ್ನಲ್ಲಿ, ಪ್ರಥಮ ಸ್ಥಾನ ಪಡೆದರೆ, ಕೇರಂ ನಲ್ಲಿ ಶ್ರೇಯ ಗಾಣಿಗ ಮತ್ತು ರಂಜಿತ ಬಿಲ್ಲವ, ಚೆಸ್ ನಲ್ಲಿ ಅಗ್ನಿಶ್, ಕೇರಂ ಡಬಲ್ಸ್ ನಲ್ಲಿ ಅಗ್ನಿಶ್ ಮತ್ತು ಮನಿಶ್ ರನ್ನರ್ ಅಪ್ ಸ್ಥಾನವನ್ನು ಪಡೆದರು. ಒಟ್ಟಾರೆ ಕ್ರೀಡಾ ನಿರ್ವಹಣೆಯಲ್ಲಿ ರೋಟರಾಕ್ಟ್ ಗಂಗೊಳ್ಳಿ ತಂಡವು ರನ್ನರ್-ಅಪ್ ಸ್ಥಾನವನ್ನು ಪಡೆಯಿತು.

Read More