ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭರತ ಭೂಮಿಯಲ್ಲಿ ಗುರುವಿಗೆ ವಿಷೇಶವಾದ ಮಾನ್ಯತೆಯಿದೆ. ಭವಿಷ್ಯವನ್ನು ರೂಪಿಸುವ ಸಾಮರ್ಥ್ಯ ಹಾಗೂ ಕಲ್ಲನ್ನು ಕೂಡ ತಿದ್ದಬಹುದಾದ ಯೋಗ್ಯತೆ ಗುರುಗಳದ್ದಾಗಿದೆ. ಗುರುಕುಲ ಪದ್ದತಿ ಮೂಲಕ ಗುರು ಪರಪಂರೆ ಬೆಳೆದು ಬಂಧ ಸಂಸ್ಕಾರ ಈ ನೆಲದಲ್ಲಿದೆ. ಹೀಗಾಗಿ ಗುರು ಭಕ್ತಿ ಮೂಲಕ ಬದುಕು ಪಾವನಗೊಳ್ಳಬೇಕಾದ ಪದ್ದತಿ ನಮ್ಮದು ಎಂದು ಯು. ಬಿ. ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯು. ಬಿ. ಶೆಟ್ಟಿ ಹೇಳಿದರು. ಅವರು ಸೋಮವಾರ ಯು. ಬಿ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಯು. ಬಿ ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆ ಬೈಂದೂರು ಹಾಗೂ ಉಪ್ಪುಂದ ಇದರ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಯಶಶ್ರೀ ಶೆಟ್ಟಿ ಮಾತನಾಡಿ ರಾಧಾಕೃಷ್ಣನ್ರವರ ಆದರ್ಶ ಜಗತ್ತಿಗೆ ಶ್ರೇಯಸ್ಸು ನೀಡಿದೆ. ಸಂಸ್ಕಾರಯುತ ಜೀವನ ರೂಪಿಸಬೇಕಾದರೆ ಒಬ್ಬ ಯೋಗ್ಯ ಹಾಗೂ ಯಶಸ್ವಿ ಗುರು ಮುಖ್ಯ. ಸುಸಂಸ್ಕೃತ ಸಮಾಜದ ನಿರ್ಮಾಣದಲ್ಲಿ ಗುರುಗಳ ಪಾತ್ರ ಬಹುಮುಖ್ಯವಾಗಿದೆ. ಎಂದರು. ಈ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶಿಕ್ಷಕರು ವಿದ್ಯಾರ್ಥಿಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಾರೆ. ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಅಧ್ಯಕ್ಷ ಅರುಣ್ ಕುಮಾರ್ ಹೇಳಿದರು. ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ, ಶ್ರೀ ಗಣೇಶೋತ್ಸವ ಸಮಿತಿ, ಇಂದುಧರ ಯುವಕ ಮಂಡಲ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ ಮತ್ತು ನಾಗರಾಜ ಆಚಾರ್ಯ ಶುಭಾಶಂಸನೆಗೈದರು. ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಸಹಶಿಕ್ಷಕರಾದ ದೇವು, ಲಕ್ಷ್ಮೀ ಖಾರ್ವಿ, ಮಾಲಾಶ್ರೀ ಖಾರ್ವಿ, ರೇಖಾ ಖಾರ್ವಿ, ಭೂದೇವಿ, ರೇಣುಕಾ ನಾಯಕ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂದೇಶ ಜಿ.ಟಿ., ಶಿವ ಜಿ.ಟಿ., ಮಹೇಶ ಜಿ.ಟಿ., ನಾಗಿಣಿ, ಸುಶೀಲಾ, ಸುಮಿತ್ರಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ನೆಹರು ಯುವ ಕೇಂದ್ರ ಉಡುಪಿ ಹಾಗೂ ನವಶಕ್ತಿ ಮಹಿಳಾ ವೇದಿಕೆ ರಿ. ಕೊಲ್ಲೂರು ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರ ಸನ್ಮಾನ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಲಗೇರಿ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಸಲಗೇರಿ ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರಾ ಶೆಟ್ಟಿ ಮತ್ತು ಸಹ ಶಿಕ್ಷಕಿ ರಂಜಿತ ಅವರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಹಾಗೂ ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ ಭಿಡೆ ಮುಗ್ದ ಮನದಲ್ಲಿ ಅಕ್ಷರವ ಬಿತ್ತಿ,ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ, ಸುಂದರ ನಾಡ ಕಟ್ಟುವ ಶಿಲ್ಪಿಗಳು ಶಿಕ್ಷಕರು,ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೋ ಮಕ್ಕಳ ಬೌದ್ಧಿಕ ಜ್ಞಾನವನ್ನು ವೃದ್ಧಿಸುವಲ್ಲಿ ಶಿಕ್ಷಕನ ಪಾತ್ರವೂ ಅಷ್ಟೇ ಮುಖ್ಯ ಎಂದರು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಮುಖ್ಯ ಶಿಕ್ಷಕಿ ಸುಮಿತ್ರಾ ಶೆಟ್ಟಿ ನವಶಕ್ತಿ ಮಹಿಳಾ ವೇದಿಕೆ ಯವರು ನಮ್ಮನ್ನು ಗುರುತಿಸಿ ಸನ್ಮಾನಿಸಿದ್ದು ನಮಗೆ ತುಂಬಾ ಸಂತೋಷವಾಗಿದೆ, ನವಶಕ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಶ್ರೀಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಇದರ ವಾರ್ಷಿಕ ಸಾಮಾನ್ಯ ಸಭೆಯು ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ ಸಭಾಂಗಣದಲ್ಲಿ ಜರಗಿತು. ಸಂಸ್ಥೆಯ ಉಪಾಧ್ಯಕ್ಷರಾದ ಶೇಖರ ಪೂಜಾರಿಂ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿಯ ಸಿಇಒ ಕುಮಾರಿ ಪೂಜಾ ಟಿ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರಗಳನ್ನು ಮಂಡಿಸಿದರು. ಕೋವಿಡ್ 16ರ ವೀಕೆಂಡ್ ಕರ್ಪ್ಯೂ ಇರುವ ಕಾರಣ ಸಭೆಯಲ್ಲಿ ವರ್ಚುವಲ್ ಮೀಟಿಂಗ್ ಅಳವಡಿಸಲಾಯಿತು. ಸಹಕಾರಿಯ ಅಧ್ಯಕ್ಷರಾದ ಡಾ. ಎನ್ ಕೆ ಬಿಲ್ಲವ ಮಾತನಾಡಿ, ಕರೋನಾ ಸಂಕಷ್ಟದ ನಡುವೆಯೂ ಸಹಕಾರಿ ಸಂಸ್ಥೆ ಉತ್ತಮ ಪ್ರಗತಿ ಸಾಧಿಸಿ ಸದಸ್ಯರಿಗೆ ಶೇಕಡ 10 ಪಾಲು ಮುನಾಫೆ ಘೋಷಿಸಲಾಗಿದೆ ಎಂದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಡುಪಿ ಜಿಲ್ಲೆಯ ಸಂಯೋಜಕರಾದ ವಿಜಯ ಬಿ.ಎಸ್ ಉಪಸ್ಥಿತರಿದ್ದು, ಸಹಕಾರಿಯ ದ್ಯೇಯೋದ್ದೇಶಗಳನ್ನು ಸಭೆಗೆ ತಿಳಿಸಿದರು. ಕಾನೂನು ರಿತ್ಯಾ ಲಾಭಾಂಶದಲ್ಲಿ ಸಲ್ಲಿಸಬೇಕಾಗಿರುವ ಶಿಕ್ಷಣ ನಿಧಿಯ ಚೆಕ್ ಅನ್ನು ಕುಮಾರಿ ಪೂಜಾ ಹಸ್ತಾಂತರಿಸಿದರು. ಎಸ್‌ಎಸ್‌ಎಲ್‌ಸಿ…
ದಶಕಗಳಿಂದ ತಮ್ಮ ಉನ್ನತ ಸಂಸ್ಕಾರ, ಸಜ್ಜನಿಕೆ, ಸ್ನೇಹಶೀಲತ್ವದ ಮೂಲಕ ಸಮಾಜದ ಸರ್ವ ವರ್ಗದವರ ಪಾಲಿನ ಪ್ರೀತಿಗೆ ಪಾತ್ರರಾದವರು ಬರೆಗುಂಡಿ ಶ್ರೀನಿವಾಸ ಚಾತ್ರರು ನಮ್ಮನ್ನು ಅಗಲಿದರೂ ಅವರ ನೆನಪು ಅಮರವಾಗಿದೆ. ವ್ಯಕ್ತಿತ್ವಗಳು ರಾಜಕೀಯ ಮತ್ತು ಧರ್ಮದ ಸಂಕುಚಿತತೆಗೆ ಒಳಗಾಗಿ, ಸೀಮಿತ ಸೀಮೆಗಳ ಒಳಗೆ ಬಂಧಿಯಾಗಿ, ಆಕರ್ಷಣೆ- ಪ್ರಭಾವ- ವ್ಯಾಪ್ತಿಗಳನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಸಮಾಜದಲ್ಲಿ ಪ್ರತ್ಯೇಕ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಸುದೀರ್ಘ ಕಾಲದಿಂದ ಸ್ಥಾಪಿಸಿಕೊಂಡು ಬಂದಿದ್ದರು. ಸಾಮಾಜಿಕ- ಧಾರ್ಮಿಕ ನಾಯಕತ್ವಗಳ ಕಾಲಕಾಲದ ನಿರ್ಣಾಯಕ ಭೂಮಿಕೆಗಳನ್ನು ಸೊಗಸಾಗಿ ಮತ್ತು ಸುಸೂತ್ರವಾಗಿ ನಿಭಾಯಿಸಿದ ಹಿರಿಮೆ ಇವರದ್ದು. ಸದಾ ತಮಗಿಂತ ಕಿರಿಯರಿಗೆ ಆದರ, ಆಶ್ರಯ, ಅವಕಾಶಗಳನ್ನು ನೀಡುತ್ತಾ, ಶ್ರೇಯಸ್ಸನ್ನು ಹಾರೈಸುತ್ತಾ, ಹಿರಿತನದ ಸಿರಿ-ಸಿಹಿಗಳನ್ನು ಸಮನಾಗಿ ಸರ್ವರಿಗೂ ಹಂಚಿದವರು. ದೀರ್ಘಕಾಲದಿಂದ ಕೆಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅಗತ್ಯದ ಕಾಯಕ-ಕರ್ಮಗಳು ಯಥಾವತ್ತಾಗಿ ನೇರವೇರುವಂತೆ ನೋಡಿಕೊಂಡು, ಬದುಕಿನ ಕೊನೆಯವರೆಗೂ ಅಪಾರ ಬದ್ಧತೆಯನ್ನು ಮೆರೆದು ಮಾದರಿಯಾಗಿದ್ದಾರೆ. ಬದುಕಿನ ಸಂಧ್ಯಾಕಾಲದಲ್ಲೂ ಸದಾ ಚಟುವಟಿಕೆಯಿಂದಿದ್ದು ಯಾವ ಹಂತದಲ್ಲೂ ಜೀವನೋತ್ಸಾಹವನ್ನು ಕಳೆದುಕೊಂಡವರಲ್ಲ. ಸರಳತೆ, ಸಜ್ಜನಿಕೆ, ಸುಪಥಗಳಿಂದ ಕೂಡಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನಲ್ಲಿ ಗೋ ಶಾಲೆ ನಿರ್ಮಾಣಕ್ಕಾಗಿ ಐವತ್ತು ಎಕರೆ ಜಾಗವನ್ನು ಮೀಸಲಿರಿಸಿ ಮಂಜೂರು ಮಾಡಬೇಕೆಂದು ವಿಶ್ವಹಿಂದೂ ಪರಿಷತ್ – ಭಜರಂಗದಳ ಬೈಂದೂರು ಪ್ರಖಂಡದ ವತಿಯಿಂದ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜೂರು ಮಾತನಾಡಿ, ಬೈಂದೂರು ತಾಲೂಕಿನಲ್ಲಿ ಈವರೆಗೆ ಗೋಶಾಲೆ ಮಂಜೂರಾಗಿಲ್ಲ. ಗೋ ಮಾಳ ಉಳ್ಳವರ ಪಾಲಾಗುತ್ತಿದ್ದು ಸರಿಯಾಗಿ ಬಳಕೆಯಾಗುತ್ತಿಲ್ಲ. ತಾಲೂಕಿನಲ್ಲಿ ಬೀಡಾಡಿ ಗೋವುಗಳ ಸಂಖ್ಯೆ ಹೆಚ್ಚುತ್ತಿದ್ದು ಜಾನುವಾರುಗಳಿಗೆ ಶಾಶ್ವತ ನೆಲೆ ಇಲ್ಲದಂತಾಗಿದೆ. ಜಾನುವಾರುಗಳು ಎಲ್ಲೆಂದರಲ್ಲಿ ಓಡಾಡುವುದರಿಂದ ಅಪಘಾತಗಳು ಹೆಚ್ಚುತ್ತಿದೆ, ಬೆಳೆ ಹಾನಿಯಾಗಿ ಕೃಷಿಕರಿಗೆ ನಷ್ಟವಾಗುತ್ತಿದೆ. ರಾತ್ರಿ ಸಮಯದಲ್ಲಿ ಬೀಡಾಡಿ ಗೋವುಗಳನ್ನು ಕದ್ದು ಸಾಗಿಸುತ್ತಿದ್ದು ಗೋವುಗಳ ವಿನಾಶವಾಗುತ್ತಿದೆ. ರಕ್ಷಿಸಲ್ಪಟ್ಟ ಜಾನುವಾರುಗಳು, ಬೀಡಾಡಿ ಜಾನುವಾರುಗಳನ್ನು ದೂರದ ನೀಲಾವರ ಗೋಶಾಲೆಗೆ ಸಾಗಿಸಲು ಸಾಗಾಟ ವೆಚ್ಚ ಹೆಚ್ಚುತ್ತಿದೆ. ಹಾಗಾಗಿ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಮೂಲಕ ನಿರ್ವಹಣೆ ಮಾಡಲು ಗೋ ಶಾಲೆ ನಿರ್ಮಾಣಕ್ಕಾಗಿ ಐವತ್ತು ಎಕರೆ ಜಮೀನು ಮಂಜೂರಾತಿಗೆ ಕೋರಿದ್ದು, ಅದನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ಉಪ್ಪುಂದ ಜೆಸಿಐನ ಸರ್ವ ಸದಸ್ಯರು ತಮಗೆ ವಿದ್ಯೆ ನೀಡಿದ ಗುರುಗಳಾದ .ಐ. ನಾರಾಯಣ್ ಮಾಸ್ಟರ್ ಹಾಗೂ ಶಾರದಾ ದಂಪತಿಗಳ ಮನೆಗೆ ಭೇಟಿ ನೀಡಿ ಗೌರವಿಸಿದರು. ಈ ಸಂದರ್ಭ ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮದಾಸ್ ಅಧ್ಯಕ್ಷತೆಯನ್ನು ವಹಿಸಿದ್ದರು, ಪೂರ್ವಾಧ್ಯಕ್ಷ ಜೇಸಿ ಸೆನೆಟರ್ ಪ್ರಕಾಶ್ ಭಟ್, ಪುರಂದರ್ ಖಾರ್ವಿ, ಉದಯ್ ಡಿ.ಆರ್, ಕಾರ್ಯಕ್ರಮದ ನಿರ್ದೇಶಕರಾದ ನರಸಿಂಹ ದೇವಾಡಿಗ, ಜಗದೀಶ್ ದೇವಾಡಿಗ, ಸದಸ್ಯರಾದ ಸೌಮ್ಯಾ, ಸಂಗೀತಾ ಪುರಂದರ್, ಸುಪರ್ಣಾ, ಗಣೇಶ್ ಗಾಣಿಗ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಶಿವಾನಂದ್, ಗೌರೀಶ್, ಗುರುರಾಜ ಹೆಬ್ಬಾರ್, ಪಾಂಡುರಂಗ ದೇವಾಡಿಗ, ವಿಜಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಲಯಾಧಿಕಾರಿ ಸುಬ್ರಹ್ಮಣ್ಯ ಜಿ. ಕಾರ್ಯಕ್ರಮ ನಿರೂಪಿಸಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ವಂದನಾರ್ಪಣೆಗೈದರು. ರಾಮಕೃಷ್ಣ ಖಾರ್ವಿ, ವಾಣಿ ವಾಚಿಸಿದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಗ್ರಾಮೀಣ ಭಾಗದ ಜನರು ವಿದ್ಯುತ್ ಪಡೆದುಕೊಳ್ಳಲು ಪಂಚಾಯತಿ ನಿರಪೇಕ್ಷಣಾ ಪತ್ರ (ಎನ್‌ಓಸಿ) ಪಡೆದುಕೊಳ್ಳಬೇಕಾಗಿದ್ದು ಇದರಿಂದ ಜನಸಾಮಾನ್ಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯುತ್ ಇಲಾಖೆಯ ಈ ಸುತ್ತೋಲೆಯನ್ನು ಒಂದು ವಾರದೊಳಗೆ ವಾಪಾಸು ಪಡೆಯುವ ನಿರ್ಧಾರಕ್ಕೆ ಬರಲಾಗಿದ್ದು, ರಾಜ್ಯದಲ್ಲಿ ಎರಡೂವರೆ ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಬೈಂದೂರು ಸೇನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಬೈಂದೂರು ಬಿಜೆಪಿ ಕಛೇರಿಗೆ ತೆರಳಿ ಭಾರತಾಂಭೆಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ದ.ಕ-ಉಡುಪಿ ಜಿಲ್ಲೆಯಲ್ಲಿನ ಸಿಂಗಲ್ ಫೇಸ್, ಲೋ ಓಲ್ಟೆಜ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ತ್ವರಿತವಾಗಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಗೋಳಿಹೊಳೆ ಸಬ್ ಸ್ಟೇಷನ್‌ಗೆ ಅರಣ್ಯ ಇಲಾಖೆಯ ತೊಡಕು ಇದ್ದು ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದರು. ರಾಜ್ಯದ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಲು ಬೊಮ್ಮಾಯಿ ಸರಕಾರ ಬದ್ಧವಾಗಿದೆ ಎಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು ಸೋಮವಾರ ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಜಿಲ್ಲಾಧ್ಯಕ್ಷ ಸುರೇಶ್ ಕುಯಿಲಾಡಿ, ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್, ದೇವಸ್ಥಾನದ ಆಡಳಿತಾಧಿಕಾರಿ ಮಂಜು ಬಿಲ್ಲವ, ಜಿಪಂ ಮಾಜಿ ಸದಸ್ಯ ಸುರೇಶ್ ಬಟವಾಡಿ ಹಾಗೂ ಇನ್ನಿತರರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಇತ್ತೀಚೆಗೆ ಬಹಳಷ್ಟು ಜನಪ್ರಿಯತೆ ಪಡೆದಿರುವ ‘ಮನಿಕೆ ಮಾಗೆ ಹಿತೆ’ ಎಂಬ ಶ್ರೀಲಂಕನ್ ಹಾಡೊಂದರ ಕವರ್ ವರ್ಷನ್ ಅನ್ನು ಆಳ್ವಾಸ್ ಪದವಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಅಸೀಮ ದೋಳ ಅವರು ಹಾಡುವ ಮೂಲಕ ಯೂಟ್ಯೂಬ್ ನಲ್ಲಿ ಹೆಚ್ಚಿನ ವೀಕ್ಷಣೆ ಪಡೆದಿದ್ದಾರೆ. ಇತ್ತೀಚೆಗೆ ಯೋಹಾನಿ ಹಾಗೂ ಸತೀಶನ್ ಎಂಬುವವರು ಇದೇ ಹಾಡಿನ ಕವರ್ ವರ್ಷನ್ ಹಾಡಿ 80 ಮಿಲಿಯನ್ಗೂ ಅಧಿಕ ವೀಕ್ಷಕರನ್ನು ಸೆಳೆದಿದ್ದರು. ಇದೀಗ ಅಸೀಮ ಅವರಿಂದ ಪ್ರೇರೇಪಿತರಾಗಿ ಈ ಹಾಡನ್ನು ಹಾಡಿದ್ದಾರೆ. ಅಸೀಮ ಅವರ ಶ್ರೀಲಂಕಾದ ಸ್ನೇಹಿತೆಯರಾದ ತತ್ ಸರಣಿ ಮೆಂಡಿಸ್ ಹಾಗೂ ನಿಪುಣಿ ತಾರುಕ ಅವರ ಸಹಕಾರದೊಂದಿಗೆ ಹಾಡಿನ ಸಾಹಿತ್ಯವನ್ನು ಕಲಿತಿದ್ದಾರೆ. ಕವರ್ ಹಾಡಿನ ನಿರ್ದೇಶನವನ್ನು ಪ್ರಿಯಾಂಕ ಪೂಜಾರ್ ಅವರು ಮಾಡಿದ್ದು, ಗುಣೇಶ್ ಭಾರತೀಯ ಹಾಗೂ ಗ್ರೇಶಲ್ ಕಳಿಯಾಂಡ ಅವರು ಹಾಡಿನ ರೆಕಾರ್ಡಿಂಗ್ ಮತ್ತು ಚಿತ್ರೀಕರಣ ಮಾಡಿದ್ದಾರೆ. ಯೂಟ್ಯೂಬ್ ಅಪ್ಲೋಡ್ ಆದ ಎರಡೇ ದಿನದಲ್ಲಿ 12 ಸಾವಿರ ವೀಕ್ಷಣೆ ಪಡೆದ ಹಾಡಿನ ಈ ಸಾಧನೆಯನ್ನು…
