ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: 2021-22ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ 90% ಸಹಾಯಧನವನ್ನು 10% ಫಲಾನುಭವಿಗಳಿಗೆ ವಂತಿಗೆಯೊಂದಿಗೆ ಹಾಲು ಕರೆಯುವ ಯಂತ್ರ ಮತ್ತು ರಬ್ಬರ್ ನೆಲದ ಹಾಸುಗಳ ಪರಿಕರಗಳನ್ನು ವಿತರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಫಲಾನುಭವಿಗಳನ್ನು ಆಯ್ಕೆಮಾಡಲು INAPH ಕಿವಿಯೋಲೆ ಹಾಕಿರುವ ಕನಿಷ್ಠ 2 ಮಿಶ್ರತಳಿ ಹಸುಗಳನ್ನು ಹೊಂದಿರುವ, ಪ.ಜಾತಿ/ಪ.ಪಂಗಡದ ಆಸಕ್ತ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ತಮ್ಮ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳಿಂದ ಅರ್ಜಿ ನಮೂನೆ ಪಡೆದು ಆಗಸ್ಟ್ 19 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿಗಳು ಪಶು ಆಸ್ಪತ್ರೆ, ಉಡುಪಿ (0820-2520659), ಕಾಪು (0820-2551175), ಬ್ರಹ್ಮಾವರ (0820-2561101), ಕುಂದಾಪುರ (08254-230776), ಬೈಂದೂರು (08254-251076), ಕಾರ್ಕಳ (08258-230448) ಮತ್ತು ಹೆಬ್ರಿ (08253-251203)ನ್ನು ಸಂಪರ್ಕಿಸುವAತೆ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಉಪನಿರ್ದೇಶಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: 2021-22 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ತರಬೇತಿ ನೀಡಿ ಶಿಷ್ಯವೇತನ ಮಂಜೂರು ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ಪದವೀಧರರು ಅರ್ಜಿ ನಮೂನೆಯನ್ನು ಆಗಸ್ಟ್ 20 ರೊಳಗೆ ನಿಗದಿತ ದಾಖಲೆಗಳೊಂದಿಗೆ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಕಛೇರಿಗಳ ಸಂಕೀರ್ಣ, ರಜತಾದ್ರಿ ಬಿ ಬ್ಲಾಕ್, ಕೊಠಡಿ 304, 2ನೇ ಮಹಡಿ ಮಣಿಪಾಲ ಉಡುಪಿ ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಣಿಪಾಲ ಉಡುಪಿ, ದೂರವಾಣಿ ಸಂಖ್ಯೆ : 0820-2574881, 2573881ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮಹಾತ್ಮ ಗಾಂಧಿ ಮಾರ್ಗದಲ್ಲಿ ನಿರ್ಮಿಸಿರುವ ರಸ್ತೆಯ ವೇಗತಡೆಯನ್ನು ತೆಗೆಯಬೇಕು ಎಂದು ಒಂದು ಬಣ ಒತ್ತಾಯಿಸಿದರೆ, ಉಳಿಸಿಕೊಳ್ಳಬೇಕು ಎಂದು ಇನ್ನೊಂದು ತಂಡ ಆಗ್ರಹಿಸಿತು. ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್ ಈ ವೇಗತಡೆಯ ಅಗತ್ಯದ ಬಗ್ಗೆ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಜಾಯಿಸಿ ನೀಡಿ ಈ ಕುರಿತಾದ ಬಿಸಿಚರ್ಚೆಯನ್ನು ಮೊಟಕುಗೊಳಿಸಿದರು. ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಈ ಚರ್ಚೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಲೀನಾ ಕ್ರಾಸ್ಟಾ, ಚಂದ್ರ ಉಗ್ರಾಣಿಮನೆ, ಜಿ. ರಾಮಕೃಷ್ಣ ಖಾರ್ವಿ, ಗಣೇಶ ಪೂಜಾರಿ, ಮನ್ಸೂರ್ ಇಬ್ರಾಹಿಂ, ಗ್ರೇಶನ್ ಕ್ರಾಸ್ಟಾ, ಕೆ. ವಿಘ್ನೇಶ್ವರ, ಗಣೇಶ ಮಧ್ಯಸ್ಥ, ಶಂಕರ ಪೂಜಾರಿ, ಶೇಷಗಿರಿ ಆಚಾರ್ಯ, ಕೃಷ್ಣ ಮೊಗವೀರ, ಹರೀಶ ಪೂಜಾರಿ, ಮರವಂತೆ ಪ್ರವಾಹ ಬಾಧಿತ ಗ್ರಾಮವಾಗಿರುವುದರಿಂದ ಈಗಿರುವ ಎರಡು ದೋಣಿಗಳು ಸಾಲವು, ಹೆಚ್ಚುವರಿ ದೋಣಿ ಬೇಕು, ಅನ್ನಿಬೆಸೆಂಟ್ ಮಾರ್ಗದಿಂದ ನದಿತೀರಕ್ಕೆ ರಸ್ತೆ ನಿರ್ಮಿಸಬೇಕು, ನಾರಾಯಣ ಗುರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಲೀಂ ಅಲಿ ಎಂದೇ ಖ್ಯಾತರಾಗಿರುವ ಪಕ್ಷಿ ತಜ್ಞ, ಪ್ಲೋರಾ ಎಂಡ್ ಫೌನಾ ಕ್ಲಬ್ನ ಅಧ್ಯಕ್ಷ ಡಾ. ಹೆಚ್. ಎಸ್. ಮಲ್ಲಿ ಅವರ ಪಕ್ಷಿಗಳ ಕುರಿತಾದ ಕೃತಿ ಹಾರ್ಬಿನ್ಜೆರ್ಸ್ ಆಫ್ ಡಿಲೈಟ್ನ್ನು ಕುಂದಾಪುರದ ರೋಟರಿ ಕ್ಲಬ್ ಆಶ್ರಯದಲ್ಲಿ ಅಧ್ಯಕ್ಷರಾದ ಎ. ಶಶಿಧರ ಹೆಗ್ಡೆ ಡಾ. ಹೆಚ್. ಎಸ್. ಮಲ್ಲಿ ಅವರ ಚಿಕಿತ್ಸಾಲಯದಲ್ಲಿ ಬಿಡುಗಡೆಗೊಳಿಸಿದರು. ಪುಸ್ತಕ ಬಿಡುಗಡೆಗೊಳಿಸಿದ ರೋಟರಿ ಕ್ಲಬ್ನ ಅಧ್ಯಕ್ಷರಾದ ಎ. ಶಶಿಧರ ಹೆಗ್ಡೆ ಅವರು ಮಾತನಾಡಿ, ಪ್ರಕೃತಿ ಪರಿಸರ, ಪಕ್ಷಿಗಳ ಕುರಿತು ವಿಶೇಷ ಆಸಕ್ತಿಯನ್ನು ಹೊಂದಿ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ತರವಾದ ಕಾರ್ಯದಲ್ಲಿ ತೊಡಗಿರುವ ಡಾ. ಹೆಚ್.ಎಸ್. ಮಲ್ಲಿಯವರು ಪಕ್ಷಿಗಳ ವಿಶೇಷ ಚಿತ್ರ ಸಹಿತವಾಗಿ ಅನುಭವ, ಅಧ್ಯಯನವನ್ನು ಕೃತಿಯಲ್ಲಿ ಧಾರೆಯೆರೆದು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಲೇಖಕ ಡಾ. ಹೆಚ್. ಎಸ್. ಮಲ್ಲಿ ಮಾತನಾಡಿ, ಪಕ್ಷಿ ವೀಕ್ಷಣೆ ನನ್ನ ನಿತ್ಯದ ಹವ್ಯಾಸವಾಗಿದ್ದು, ಅದರ ಅನುಭವ ಹಾಗೂ ಪಕ್ಷಿಗಳ ಮಾಹಿತಿಯನ್ನು ಗ್ರಾಮೀಣ ಭಾಗದ ಜನರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಪಡುವರಿ ಗ್ರಾಮದ ಹೇನ್ಬೇರುವಿನ ಬಾಲಕ ಅಜಿತ್ ದೇವಾಡಿಗನ (15) ಚಿಕಿತ್ಸೆಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೌರಿ ದೇವಾಡಿಗ ಅವರ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ರೂ. 25,500 ಹಣ ಸಂಗ್ರಹಿಸಿ, ಗುರುವಾರ ಬಾಲಕನ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಉಪ್ಪುಂದ ಗ್ರಾಮ ಪಂಚಾಯತ್ ಸದಸ್ಯೆ ವೀಣಾ ಪೂಜಾರಿ ಹಾಗೂ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೌರಿ ದೇವಾಡಿಗ ಅವರು ಈ ಮಾನವೀಯ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ನೆರವಿಗೆ ಮನವಿ:ಲಿವರ್ ಕಸಿ ಚಿಕಿತ್ಸೆಗೆ 30ರಿಂದ 35 ಲಕ್ಷ ರೂ ಅಗತ್ಯವಿದ್ದು ಸಾಮಾನ್ಯ ರೈತಾಪಿ ಕುಟುಂಬ ಆಗಿರುದರಿಂದ ಹೆಚ್ಚಿನ ಚಿಕಿತ್ಸೆಗೆ ಹಣ ಭರಿಸಲು ಕಷ್ಟವಾಗಿದೆ. ಅಜಿತ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಅವರ ತಂದೆ ರಾಮಕೃಷ್ಣ ದೇವಾಡಿಗ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದಾಗಿದೆ. ಬ್ಯಾಂಕ್ ಆಫ್ ಬರೋಡ ಉಳಿತಾಯ ಖಾತೆಖಾತೆ ಸಂಖ್ಯೆ: 82000100004112ಐಎಫ್ಎಸ್ಸಿ ಕೋಡ್: BARB0VJBYNDPhone pay or google pay: 8073201943 ಇದನ್ನೂ ಓದಿ:► ಲಿವರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸೋಮೇಶ್ವರ ಬೀಚ್ ಕೇಂದ್ರವಾಗಿರಿಸಿಕೊಂಡು ಸೀಪ್ಲೇನ್, ಸೀ ವಾಕ್ ಹಾಗೂ ಮರೀನಾ ಯೋಜನೆಗೆ 228 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಸಂಬಂಧ ಸಂಸದ ಬಿ. ವೈ. ರಾಘವೇಂದ್ರ ಅವರು ಗುರುವಾರ ಕೇಂದ್ರದ ಬಂದರು ಹಡಗು ಹಾಗೂ ಜಲಸಾರಿಗೆ ಸಚಿವರಾದ ಸರ್ಬಾನಂದ ಸೋನೋವಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಯೋಜನೆ:ಪ್ರವಾಸೋದ್ಯಮ ಹಾಗೂ ಮತ್ಸೋದ್ಯಮ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆ ಸಿದ್ಧಪಡಿಸಲಾಗಿದ್ದು, ಸರಕಾರ ಹಾಗೂ ಸಾಗರಮಾಲಾ ಅಭಿವೃದ್ಧಿ ಕಂಪನಿ ಲಿಮಿಟೆಡ್ (SDCL) ಜಂಟಿಯಾಗಿ ಯೋಜನೆ ಅನುಷ್ಠಾನಗೊಳಿಸಲಿದೆ. ಬೈಂದೂರು ಸೋಮೇಶ್ವರ ಬೀಚ್ ಹಾಗೂ ಒತ್ತಿನಣೆಯನ್ನು ಭಾಗವನ್ನು ಒಳಗೊಂಡು ಮರೀನಾ, ಸೀ ಪ್ಲೇನ್ ಹಾಗೂ ಸೀ ವಾಕ್ ಯೋಜನೆಗೆ ನೀಲನಕ್ಷೆ ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನಾ ವೆಚ್ಚ ಸುಮಾರು ರೂ 228.78 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಸಚಿವಾಲಯವು ಯೋಜನಾ ರಚನೆಯನ್ನು ಸುಗಮಗೊಳಿಸಲು…
ಕುಂದಾಪ್ರ ಡಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರೇಂಜರ್ ಮತ್ತು ರೋವರ್ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನಪ್ರತಿಷ್ಠಿತ ಪುರಸ್ಕಾರವಾಗಿದೆ. ಕಾಲೇಜಿನ ರೇಂಜರ್ ಮತ್ತು ರೋವರ್ನ ವಿದ್ಯಾರ್ಥಿಗಳಾದ ಕಾವ್ಯಾ (ತೃತೀಯ ಬಿಎಸ್ಸಿ (ಎಂಸಿಝಡ್), ಪವಿತ್ರಾ (ತೃತೀಯ ಬಿಎಸ್ಸಿ (ಎಂಸಿಝಡ್),ಸತೀಶ್(ತೃತೀಯ ಬಿಎಸ್ಸಿ (ಎಂಸಿಝಡ್), ಸ್ನೇಹಾ (ದ್ವಿತೀಯ ಬಿಎಸ್ ಸಿ, ಎಂಪಿಸಿ) ಮಹಾಲಕ್ಷ್ಮಿ (ದ್ವಿತೀಯ ಬಿಕಾಂ), ಶಮಿತಾ(ದ್ವಿತೀಯ ಬಿಎಸ್ ಸಿ, ಎಂಪಿಸಿ), ಸಿಂಚನ (ದ್ವಿತೀಯ ಬಿಎಸ್ ಸಿ, ಎಂಪಿಸಿ), ಇವರುಗಳು ರಾಜ್ಯ ಪುರಸ್ಕಾರ ಪಡೆದಿದ್ದಾರೆ. ಇವರಿಗೆ ಕಾಲೇಜಿನ ರೇಂಜರ್ ಲೀಡರ್ ಪ್ರಭಾಶ್ರೀ ಶೆಟ್ಟಿ ಮತ್ತು ರೋವರ್ ವಿಭಾಗದ ರಿತಿನ್ ಅವರು ತರಬೇತಿ ನೀಡಿದ್ದರು. ಅವರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅಭಿನಂದನೆ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಹಾಗಾಗಿ ಈ ಸಮಯದಲ್ಲಿ ನಾವು ಸೇವಿಸುವ ಆಹಾರಗಳ ಬಗ್ಗೆ ಗಮನಹರಿಸಿವುದು ಒಳ್ಳೆಯದು. ಮಳೆಗಾಲದಲ್ಲಿ ಯಾವ ಆಹಾರವನ್ನು ಸೇವಿಸಬೇಕು. ಯಾವುದನ್ನು ಸೇವಿಸಬಾರದೆಂಬ ಅರಿವು ಇದ್ದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಸಮಯದಲ್ಲಿ ಏನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು ನೋಡೋಣ. ಹಸಿರು ತರಕಾರಿಗಳು ಹೆಚ್ಚು ಬೇಡ:ಹಸಿರು ಸೊಪ್ಪುಗಳನ್ನು ವರ್ಷವಿಡೀ ತಿನ್ನಲು ಸಲಹೆ ನೀಡಲಾಗುತ್ತದೆಯಾದರೂ, ಮಳೆಗಾಲದಲ್ಲಿ ಹಾಗೆ ಹೆಚ್ಚು ಸೇವಿಸುವುದು ಒಳ್ಳೆಯದಲ್ಲ. ಈ ಋತುವಿನಲ್ಲಿ ತೇವಾಂಶವು ಹೆಚ್ಚಾಗುತ್ತದೆ ಎಂದು ಆಹಾರ ತಜ್ಞರು ನಂಬುತ್ತಾರೆ, ಇನ್ನು ಮಾನ್ಸೂನ್ ತಿಂಗಳಲ್ಲಿ ಕೀಟಾಣುಗಳು ತರಕಾರಿ ಎಲೆಗಳಲ್ಲಿ ನೆಲೆಸಲು ಮತ್ತು ಸಂತಾನೋತ್ಪತ್ತಿ ಮಾಡಲು ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಾಲಕ್, ಎಲೆಕೋಸು ಮತ್ತು ಹೂಕೋಸು ಮುಂತಾದ ತರಕಾರಿಗಳನ್ನು ತಿನ್ನಬಾರದು. ನೀರನ್ನು ಕುದಿಸಿ, ಕುಡಿಯುವುದು ಒಳ್ಳೆಯದು:ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವ ಅಪಾಯ ಹೆಚ್ಚು. ಇಂತಹ ಕಲುಷಿತ ನೀರು ಹೊಟ್ಟೆಯ ಸೋಂಕುಗಳು, ಕಾಲರ, ಅತಿಸಾರ ಮತ್ತು ಟೈಫಾಯಿಡ್ ನಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಕುದಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳನ್ನು ಈ ಕೂಡಲೆ ಭತಿ೯ ಮಾಡಬೇಕು.ವಿವಿಧ ಇಲಾಖೆಗಳಲ್ಲಿ ನೇಮಕ ಗೊಂಡಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು,ಹೊರ ಗುತ್ತಿಗೆ ಪದ್ಧತಿಯನ್ನೇ ರದ್ದು ಪಡಿಸಲು ಒತ್ತಾಯಿಸುವ ಹೋರಾಟಕ್ಕೆ ಮುಂದಾಗಬೇಕು ಎಂದು ಡಿವೈಎಫ್ಐ ರಾಜ್ಯ ಮಾಜಿ ಕಾಯ೯ದಶಿ೯ ಮಹಾಂತೇಶ್ ಕರೆ ನೀಡಿದರು. ಬೈಂದೂರು ಸಿಐಟಿಯು ಕಚೇರಿಯಲ್ಲಿ ಇತ್ತೀಚೆಗೆ ಜರಗಿದ ‘ಉದ್ಯೋಗದ ಹಕ್ಕಿಗಾಗಿ’ ಬೈಂದೂರು ತಾಲೂಕು ಯುವಜನ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಡಿವೈಎಫ್ಐ ಜಿಲ್ಲಾ ಮಾಜಿ ಅಧ್ಯಕ್ಷ ವೆಂಕಟೇಶ್ ಕೋಣಿ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ ಸಾಮಾಜಿಕ ಪಿಡುಗು ಹಾಗೂ ಸ್ಥಳೀಯ ಜ್ವಲಂತ ಸಮಸ್ಯೆಗಳನ್ನು ಕೈಗೆತ್ತಿ ಪರಿಹರಿಸಲು ಯುವಜನರು ಜಾತಿ,ಮತ,ಧಮ೯ ಪ್ರಾದೇಶಿಕತೆ ಭೇದ ಮರೆತು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು. ಭಾರತ ಪ್ರಜಾಸತ್ತಾತ್ಮಕ ಯುವಜನ ಪೆಢರೇಶನ್ (ಡಿವೈಎಫ್ಐ) ಬೈಂದೂರು ತಾಲೂಕು ಸಮಿತಿಗೆ ಅಧ್ಯಕ್ಷರಾಗಿ ವಿಜಯ. ಬಿ. ಕಿರಿಮಂಜೇಶ್ವರ, ಹರೀಶ್ ಬೈಂದೂರು, ಉಪಾಧ್ಯಕ್ಷರಾಗಿ ಚಾಕೊ ಥೋಮಸ್, ಪ್ರದಾನ ಕಾರ್ಯದರ್ಶಿಯಾಗಿ ಜೊಕಿಮ್ ಗ್ರಾಸ್ ಯಡ್ತರೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿಬಿಎಸ್ಸಿ ಪಠ್ಯಕ್ರಮದ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ತ್ರಾಸಿಯ ಡಾನ್ಬಾಸ್ಕೊ ಶಾಲೆಯ ಎಲ್ಲಾ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ 100 ಫಲಿತಾಂಶ ಬಂದಿದೆ. ಐದು ವರ್ಷಗಳಿಂದ ಸತತ ಈ ದಾಖಲೆಯಾಗಿದೆ. 29ರಲ್ಲಿ 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 11 ಪ್ರಥಮ ಶ್ರೇಣಿ ಹಾಗೂ ಉಳಿದ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿ. ನಿತ್ಯಶ್ರೀ ಶೇ 94.2 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ ಶೇ 91.2 ಪಡೆದ ಪ್ರಾಂಜಲ್ ಮ್ಯಾಥ್ಯೂ ಲೋಬೊ ದ್ವಿತೀಯ ಸ್ಥಾನಿಯಾಗಿದ್ದಾರೆ. ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲ ಫಾ. ಮ್ಯಾಕ್ಸಿಮ್ ಡಿಸೋಜ, ಕೋವಿಡ್ ಕಾರಣದಿಂದ ಬೋರ್ಡ್ ಪರೀಕ್ಷೆಯನ್ನು ರದ್ದುಮಾಡಿ, ಶಾಲಾ ಪರೀಕ್ಷೆಗಳ ಅಂಕ ಪರಿಗಣಿಸಿ ಫಲಿತಾಂಶ ಘೋಷಿಸಲಾಗಿತ್ತು. ಬೋರ್ಡ್ ಪರೀಕ್ಷೆ ನಡೆದಿದ್ದರೆ ವಿದ್ಯಾರ್ಥಿಗಳ ಸಾಧನೆಯ ಮಟ್ಟ ಇನ್ನೂ ಹೆಚ್ಚಿರುತ್ತಿತ್ತು ಎಂದು ಹೇಳಿದರು. ದಶಮಾನೋತ್ಸವದ ಸಂಭ್ರಮದಲ್ಲಿರುವ ಶಾಲೆ ಈ ವರ್ಷದಿಂದ ಸೀನಿಯರ್ ಸೆಕೆಂಡರಿ ಶಾಲೆಯಾಗಿ ಮೇಲ್ದರ್ಜೆಗೇರಿದ್ದು, 11ನೇ ತರಗತಿಯ ವಿಜ್ಞಾನ ಮತ್ತು ವಾಣಿಜ್ಞ್ಯ ಶಾಸ್ತ್ರ…
