Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಂಚಿಕಾನು ಸ. ಹಿ. ಪ್ರಾ. ಶಾಲೆಗೆ ಮಟ್ನಕಟ್ಟೆ ಧರ್ಮಶ್ರೀ ರಿಲೀಫ್ ಫೌಂಡೇಶನ್ ವತಿಯಿಂದ ಸುಮಾರು 13ಸಾವಿರ ರೂಪಾಯಿ ವೆಚ್ಚದಲ್ಲಿ ಎರಡು ಗ್ರೀನ್ ಬೋರ್ಡ್ ಗಳನ್ನು ಕೊಡುಗೆಯಾಗಿ ನೀಡಿದರು. ಮಹಾಬಲೇಶ್ವರ ಅಯ್ಯಪ್ಪಸ್ವಾಮಿ ಭಕ್ತವೃಂದ ಸುಮಾರು ಒಂದು ಪೋಡಿಯಂ (ಸ್ಪೀಚ್ ಸ್ಟ್ಯಾಂಡ್) ನ್ನು ಕೊಡುಗೆಯಾಗಿ ಶಾಲೆಗೆ ನೀಡಿದರು. ನಂತರ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸಿ, ವಯೋನಿವೃತ್ತಿ ಹೊಂದಿದ ಬಚ್ಚಿ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಪ್ರಭಾಕರ ದೇವಾಡಿಗ, ಉಪಾಧ್ಯಕ್ಷೆ ಲಲಿತಾ ಶೇಟ್, ಸದಸ್ಯರಾದ ರಾಘವೇಂದ್ರ ಆಚಾರ್ಯ, ಪೂಜಾ .ಯು, ಗ್ರಾಮಪಂಚಾಯತ್ ಸದಸ್ಯರಾದ ವೀರೇಂದ್ರ ಶೆಟ್ಟಿ, ಧರ್ಮಶ್ರೀ ರಿಲೀಫ್ ಫೌಂಡೇಶನ್ ನಾ ಕಾರ್ಯದರ್ಶಿ ವಿಶ್ವನಾಥ ಹೊಸ್ಕೋಟೆ ಮತ್ತು ಸದಸ್ಯರು, ಅಯ್ಯಪ್ಪ ಸ್ವಾಮಿ ಭಕ್ತವೃಂದ ಮಹಾಬಲೇಶ್ವರ ಇದರ ಅಧ್ಯಕ್ಷರಾದ ಬಾಬು ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಹಶಿಕ್ಷಕಿ ಗೀತಾ ಮಯ್ಯ ಸ್ವಾಗತಿಸಿ , ಮುಖ್ಯ ಶಿಕ್ಷಕರಾದ ತಿಮ್ಮಪ್ಪ ಗಾಣಿಗ ಪ್ರಾಸ್ತಾವಿಕ ಮಾತನಾಡಿದರು. ಸಹಶಿಕ್ಷಕಿ ಯಶೋಧಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇತ್ತೀಚೆಗೆ ಜರಗಿದ ನಾವುಂದ ಶ್ರೀಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಆಡಳಿತ ಮಂಡಳಿ ಪದಾಧಿಕಾರಿಗಳ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿರುತ್ತದೆ. ಜೂನ್ 24ರಂದು ಕರೆದ ನೂತನ ಆಡಳಿತ ಸಮಿತಿಯ ಸಭೆಯಲ್ಲಿ ಅಧ್ಯಕ್ಷರಾಗಿ ಡಾ. ಎನ್. ಕೆ. ಬಿಲ್ಲವ ಮತ್ತು ಉಪಾಧ್ಯಕ್ಷರಾಗಿ ರಾಜೀವ ಎಂ. ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಮಂಜು ಪೂಜಾರಿ, ಶೇಖರ ಎಂ. ಪೂಜಾರಿ, ಸಾವಿತ್ರಿ ಪೂಜಾರಿ, ಸುರೇಶ ಕೆ. ಪೂಜಾರಿ, ಶುಭದಾ ಎನ್. ಬಿಲ್ಲವ, ಸುಧಾಕರ ಪಿ. ಪೂಜಾರಿ, ರೇವತಿ ನಾಯ್ಕ್, ಈಶ್ವರ ಖಾರ್ವಿ, ಸುಜನ ಆರ್. ಬಿಲ್ಲವ, ವೆಂಕಟೇಶ ಗಾಣಿಗ, ಯೋಗೀಶ ಕಾರಂತ ಅವರು ನಿರ್ದೇಶಕರಾಗಿ ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಛೇರಿಯ ನಿರ್ವಾಚನಾಧಿಕಾರಿ ಕೆ. ಎಸ್. ಜಗದೀಶ್ ಆಯ್ಕೆಯನ್ನು ಘೋಷಿಸಿರುತ್ತಾರೆ. ಮುಖ್ಯಕಾರ್ಯನಿರ್ವಹಣಾಧಿಕಾರಿ ತಿಮ್ಮಪ್ಪ ಪೂಜಾರಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗುಲ್ಬರ್ಗದಲ್ಲಿ ಇತ್ತೀಚಿಗೆ ಜರುಗಿದ ರಾಜ್ಯ ಮಟ್ಟದ 19ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರ ಕಶ್ವಿ ಚೆಸ್ ಸ್ಕೂಲ್‌ನ ಮೂವರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಂದಾಪುರ ಕಶ್ವಿ ಚೆಸ್ ಸ್ಕೂಲ್ ವಿದ್ಯಾರ್ಥಿಗಳಾದ ತೇಜಸ್ ಕೆ. ಬೆಂಗಳೂರು, ನಿಶಾಂತ್ ಡಿ’ಸೋಜಾ ಹಂಗಳೂರು ಮತ್ತು ಮಾನಸ ಕೋಟೇಶ್ವರ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಶ್ವಿ ಚೆಸ್ ಸ್ಕೂಲ್ ಸಂಸ್ಥಾಪಕ ಹಾಗೂ ಚೆಸ್ ತರಬೇತುದಾರರಾದ ನರೇಶ್ ಬಿ. ಕೋಟೇಶ್ವರ ಅವರು ಚೆಸ್ ತರಬೇತಿಯನ್ನು ನೀಡಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಉದ್ಯಮಿ, ಯು.ಬಿ.ಎಸ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಯು. ಬಿ. ಶೆಟ್ಟಿ ಅವರು ಮಂಗಳವಾರ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗರಡಿಯ ಜೀರ್ಣೋದ್ಧಾರದ ಸಂದರ್ಭ ಉದಾರ ದೇಣಿಗೆ ನೀಡಿದ ಯು. ಬಿ. ಶೆಟ್ಟಿ ಅವರನ್ನು ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವೆಂಕಟ ಪೂಜಾರಿ ಗೌರವಿಸಿದರು. ಈ ಸಂದರ್ಭ ವಕೀಲರಾದ ರಂಜಿತ್ ಕುಮಾರ್ ಶೆಟ್ಟಿ, ಗರಡಿ ಅರ್ಚಕ ಕುಟುಂಬದ ಮಂಜುನಾಥ ಪೂಜಾರಿ ಮೇಲ್‌ಹಿತ್ಲು, ವಿವಿಧ ಸಮಿತಿಗಳ ಪ್ರಮುಖರಾದ ಗಣೇಶ್ ಎಲ್. ಪೂಜಾರಿ, ಶಿವರಾಮ ಪೂಜಾರಿ ಯಡ್ತರೆ, ರಘುರಾಮ ಪೂಜಾರಿ ಬಪ್ಪನಬೈಲು, ಪ್ರಕಾಶ ಮಾಕೋಡಿ, ದೊಟ್ಟಯ್ಯ ಪೂಜಾರಿ, ಅರ್ಚಕ ಗಣೇಶ್ ಪೂಜಾರಿ ಮೇಲ್‌ಹಿತ್ಲು, ಚಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಇನ್ನರ್‌ವೀಲ್ ಕ್ಲಬ್ ಬೈಂದೂರು ಇದರ 2022-23ನೇ ಸಾಲಿನ ಅಧ್ಯಕ್ಷೆಯಾಗಿ ಭಾನುಮತಿ ಜಯಾನಂದ ಬಿ.ಕೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪಿಂಕಿ ಮೋಬಿ ಕರ್ವಾಲೋ, ಉಪಾಧ್ಯಕ್ಷರಾಗಿ ಆಶಾ ಕಿಶೋರ್, ಜೊತೆ ಕಾರ್ಯದರ್ಶಿಯಾಗಿ ಉಷಾ ಹೆಗ್ಡೆ, ಕೋಶಾಧಿಕಾರಿಯಾಗಿ ರಾಜೀವಿ ಗೋವಿಂದ, ಬುಲೆಟಿನ್ ಸಂಪಾದಕಿ ಸುಜಾತ ರಾವ್, ಪೂರ್ವಾಧ್ಯಕ್ಷರಾಗಿ ಶಾಂತಿ ಪಿರೇರಾ ಆಯ್ಕೆಗೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಮಾದಕ ವಸ್ತು ವ್ಯಸನ – ವಿರೋಧಿ ದಿನದ ಅಂಗವಾಗಿ ಮಾದಕ ವಸ್ತು- ವ್ಯಸನದ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನಡೆಯಿತು. “ಮಾದಕ ವಸ್ತು ಸೇವನೆಯು ನಮ್ಮ ಸಮಾಜದ ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿದೆ. ಈ ವ್ಯಸನದಿಂದ ಸಂಪೂರ್ಣ ದೂರವಿದ್ದು, ಮಾದಕ ವ್ಯಸನ ಸಂಬಂಧಿತ ಪ್ರಬಲ ಕಾನೂನುಗಳ ಬಗ್ಗೆ ಅರಿವು ಹೊಂದಿರಬೇಕು” ಎಂದು ಕುಂದಾಪುರ ಪೋಲೀಸ್ ಠಾಣಾಧಿಕಾರಿ ಸದಾಶಿವ ಗವರೋಜಿಯವರು ಕರೆ ನೀಡಿದರು. ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಅಂತರ ರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ನವೀನ್ ಕುಮಾರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಮಾದಕ ವ್ಯಸನ ಪಿಡುಗಿನ ಗಂಭೀರ ಪರಿಣಾಮಗಳ ಬಗ್ಗೆ ಜಾಗೃತರಾಗಬೇಕೆಂದು ತಿಳಿಸಿದರು. ಹಿಂದಿ ವಿಭಾಗ ಮುಖ್ಯಸ್ಥೆ ಜಯಶೀಲಾ ಪೈಯವರು ಅತಿಥಿಗಳಿಗೆ ಪುಪ್ಪ ನೀಡಿ ಗೌರವಿಸಿದರು. ಕಾಲೇಜಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಆಧ್ಯಾತ್ಮ ಲೋಕದ ಹಲವು ಅದ್ಬುತ ದೃಷ್ಟಾಂತಗಳು ನಮ್ಮ ನೆಲದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ನಾವೆಷ್ಟು ಸಬಲರು, ಸಾಧಕರು ಎಂದರೂ ಸಹ ಭಗವಂತನ ಲೀಲೆಯ ಮುಂದೆ ನಾವು ಶೂನ್ಯರು ಎಂದು ಯಳಜಿತ್ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು. ಅವರು ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿನಾಡಿ ಭಗವಂತನ ಭಕ್ತಿಯಿಂದ ಮಾತ್ರ ನೆಮ್ಮದಿ ಸಾಧ್ಯ. ದೇವರ ನಾಮಸ್ತುತಿಯಿಂದ ಬದುಕಿಗೆ ಶ್ರೇಯಸ್ಸು ಎಂದರು. ಕಾರ್ಯಕ್ರಮದಲ್ಲಿ ಮಾಜಿ ತಾ. ಪಂ. ಸದಸ್ಯ ಪುಷ್ಪರಾಜ್ ಶೆಟ್ಟಿ, ಮಾಜಿ ಗ್ರಾ.ಪಂ ಸದಸ್ಯ ರಘುರಾಮ ಕೆ. ಪೂಜಾರಿ, ದಾಸನಾಡಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗಯ್ಯ ಶೆಟ್ಟಿ, ತಿಮ್ಮಪ್ಪ ಬಿಲ್ಲವ, ಅರುಣ ಕುಮಾರ್ ಶೆಟ್ಟಿ ನಾಕಟ್ಟೆ,ಗಣಪತಿ ಗಾಣಿಗ, ಪತ್ರಕರ್ತ ಅರುಣ ಕುಮಾರ್ ಶಿರೂರು ಉಪಸ್ಥಿತರಿದ್ದರು. ಮಾಧವ ಬಿಲ್ಲವ ಸ್ವಾಗತಿಸಿದರು. ಸಂಘಟಕ ಸಾಧನ್‌ದಾಸ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಶಂಕರ ಬಿಲ್ಲವ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿ ಕ್ಲಬ್ ಬೈಂದೂರು ಇದರ 2022-23ನೇ ಸಾಲಿನ 40ನೇ ವರ್ಷದ ನೂತನ ಅಧ್ಯಕ್ಷರಾಗಿ ಎಚ್. ಉದಯ ಆಚಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸುಧಾಕರ ಪಿ, ಉಪಾಧ್ಯಕ್ಷರಾಗಿ ನಿತಿನ್ ಶೆಟ್ಟಿ, ಕೋಶಾಧಿಕಾರಿಯಾಗಿ ಯು. ಪ್ರಕಾಶ್ ಭಟ್, ಪೂರ್ವಾಧ್ಯಕ್ಷರಾಗಿ ಡಾ. ಪ್ರವೀಣ್ ಶೆಟ್ಟಿ ಆಯ್ಕೆಯಾಗಿದ್ದಾರೆ ಜುಲೈ 06ರಂದು ಸಂಜೆ 7 ಗಂಟೆಗೆ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಪದಪ್ರದಾನ ಸಮಾರಂಭ ನಡೆಯಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭೂಮಂಡಲದಲ್ಲಿ ಅನೇಕ ಜೀವರಾಶಿಯನ್ನು ಸೃಷ್ಠಿಸಿದ ದೇವರು ಮನುಷ್ಯನನ್ನು ಮಾತ್ರ ಶೇಷ್ಠ ಜೀವಿ ಎಂದು ಪರಿಗಣಿಸಿ ಪ್ರಕೃತಿಯ ರಕ್ಷಣೆ ಜತೆಗೆ ವಿವಿಧ ಜೀವಸಂಕುಲಗಳ ರಕ್ಷಣೆಯ ಜವಾಬ್ದಾರಿ ನೀಡಿದ್ದಾನೆ. ಹಾಗಾಗಿ ಮನುಷ್ಯರು ಸನ್ಮಾರ್ಗದಲ್ಲಿ ಸಾಗುವ ಮೂಲಕ ಸತ್ಕಾರ್ಯಗಳನ್ನು ಮಾಡಿ ಜೀವನದ ಸಾರ್ಥಕತೆಯನ್ನು ಕಾಣಬೇಕು ಎಂದು ಜಿಲ್ಲಾ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಉಪ್ಪುಂದದ ಇಂದಿರಾ ಗಾಣಿಗ ಇವರಿಗೆ ಇಲ್ಲಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ ನೂತನ ಗೃಹದ ಕೀಲಿಕೈಯನ್ನು ಫಲಾನುಭವಿಗೆ ಹಸ್ತಾಂತರಿಸಿ ಮಾತನಾಡಿದರು. ಸತ್ಪಾತ್ರರಿಗೆ ಮಾಡಿದ ದಾನ ಪರಿಪೂರ್ಣ ಎಂದೆನಿಕೊಳ್ಳುತ್ತದೆ. ಅದೇ ರೀತಿ ಟ್ರಸ್ಟಿನ ಅಧ್ಯಕ್ಷ, ಉದ್ಯಮಿ ಗೋವಿಂದ ಬಾಬು ಪೂಜಾರಿ ಇವರು ತನ್ನ ಸಂಪಾದನೆಯ ಒಂದು ಭಾಗವನ್ನು ಈ ಭಾಗದ ಬಡವರ ಅಭ್ಯುದಯಕ್ಕಾಗಿ ವಿನಿಯೋಗಿಸುತ್ತಿರುವುದು ದೇವರಿಗೂ ಪ್ರೀಯವಾದ ಕಾರ್ಯವಾಗಿದೆ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಇವರು ತಮ್ಮ ಸತ್ಕಾರ್ಯಗಳ ಮೂಲಕ ಶ್ರೇಷ್ಠ ಮಾನವರಲ್ಲಿ ಒಬ್ಬರಾಗಿದ್ದಾರೆ ಎಂದರು. ಕೇರಳದ ಶಿವಗಿರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಣದಲ್ಲಿ ಮಾಧ್ಯಮ ಮುಖ್ಯವಲ್ಲ. ನಾನು ಸ್ವತಃ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದು ಕಠಿಣ ಪರಿಶ್ರಮದಿಂದ ಈಗ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು. ಜೀವನದಲ್ಲಿ ಗುರಿ ಹಾಗೂ ಅದಕ್ಕೆ ಪೂರಕವಾದ ಪರಿಶ್ರಮವಿದ್ದರೆ ಯಾವುದು ಅಸಾಧ್ಯವಲ್ಲ ಎಂದು ಉಡುಪಿ ವೆಂಟನ ಫೌಂಡೇಶನ್ ಸದಸ್ಯೆ ಹಾಗೂ ಉಡುಪಿಯ 99ಗೇಮ್ಸ್ ಆನ್ ಲೈನ್ ಪ್ರೈವೇಟ್ ಲಿಮಿಟೆಡ್ ನ ಉಪಾಧ್ಯಕ್ಷೆ ಶಿಲ್ಪಾ ಭಟ್ ಹೇಳಿದರು. ಅವರು ಕುಂಭಾಶಿ ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೆಂಟನ ಫೌಂಡೇಶನ್ ವತಿಯಿಂದ ಸುಮಾರು ರೂಪಾಯಿ 5.5 ಲಕ್ಷದ ವೆಚ್ಚದಲ್ಲಿ ನಿರ್ಮಿಸಲಾದ ಹೆಣ್ಣು ಮಕ್ಕಳ ಶೌಚಾಲಯವನ್ನು ಹಸ್ತಾಂತರಿಸಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಅಂತೆಯೇ ಹೆಣ್ಣು ಮಕ್ಕಳು ವೈಯಕ್ತಿಕ ನೈರ್ಮಲ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಹೆಣ್ಣು ಮಕ್ಕಳಿಗೆ ಅನುಕೂಲವಾಗಲೆಂದು ಈ ಶೌಚಾಲಯವನ್ನು ಫೌಂಡೇಶನ್ ಮೂಲಕ ನಿರ್ಮಿಸಲಾಗಿದೆ. ಇದರ ಮುಂದಿನ ನಿರ್ವಹಣೆ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್ ಆರ್ ಅಧ್ಯಕ್ಷತೆ ವಹಿಸಿದ್ದರು.…

Read More