ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಸೆ.22: ಪರಿಶಿಷ್ಟ ವರ್ಗದ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನಡೆದ ಪದವಿ/ಸ್ನಾತಕೋತ್ತರ, ಪದವಿ/ ಮೆಡಿಕಲ್ ಇಂಜಿನಿಯರಿಂಗ್ ಕೋರ್ಸುಗಳಲ್ಲಿ ಪ್ರಥಮ ಪ್ರಯತ್ನದಲ್ಲಿ, ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ.ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಬಹುಮಾನ ಹಣವನ್ನು ಮಂಜೂರು ಮಾಡುವ ಸಲುವಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ, (ಉಡುಪಿ-0820-258884), ಕುಂದಾಪುರ-08254-234609), (ಕಾರ್ಕಳ-08258-232133) ಅಥವಾ ವೆಬ್ಸೈಟ್ www.tw.kar.nic.in ಅನ್ನು ಸಂಪರ್ಕಿಸುವAತೆ ಸಮಗ್ರ ಗಿರಿಜನ ಅಭಿವೃದ್ದಿ ಯೋಜನಾ ಸಮನ್ವಯಾಧಿಕಾರಿಯ ಪ್ರಕಟಣೆ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಸೆ.22: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ದೈವಾರಾದನೆ, ಜಾನಪದ, ಯಕ್ಷಗಾನ, ಲಲಿತಕಲೆ ಮತ್ತು ಶಿಲ್ಪಕಲೆ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಗಣನೀಯವಾಗಿ ಸೇವೆ ಸಲ್ಲಿಸಿದಂತಹ ಆಸಕ್ತ ಸಾಹಿತಿ-ಕಲಾವಿದರಿಗೆ ಆರ್ಥಿಕ ನೆರವು ನೀಡಲು ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಕನಿಷ್ಟ 58 ವರ್ಷ ವಯೋಮಾನದವರಾಗಿರಬೇಕು, ಅಂಗವಿಕಲರಾಗಿದ್ದಲ್ಲಿ 40 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ವಾರ್ಷಿಕ ಆದಾಯವು 1 ಲಕ್ಷ ರೂ ಮೀರಿರದೆ, 20 ವರ್ಷ ಕಲಾ ಸೇವೆ ಸಲ್ಲಿಸಿರಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2986168 ಅಥವಾ ಇಮೇಲ್ – dkc.udupi@gmail.com ನ್ನು ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಬೈಂದೂರು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಎಲ್.ಪಿ.ಜಿ, ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಬೈಂದೂರು ಯುವ ಕಾಂಗ್ರೆಸ್ ವತಿಯಿಂದ ಬುಧವಾರ ಬೈಂದೂರು ತಹಶೀಲ್ದಾರ್ ಕಛೇರಿ ಎದುರು ವಿನೂತನ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಗ್ಯಾಸ್ ಸಿಲಿಂಡರಿನಲ್ಲಿ ಕಟ್ಟಿಗೆ ಹಾಕಿ ಬೆಂಕಿ ಮಾಡಿ ಚಹಾ ತಯಾರಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು ಮಾತನಾಡಿ ನಿರಂತರವಾಗಿ ಬೆಲೆಏರಿಕೆಯನ್ನು ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಬೇಕಿದೆ. ಈ ಜನವಿರೋಧಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವವರೆಗೂ ನಿರಂತರವಾಗಿ ಪ್ರತಿಭಟಿಸುವುದಾಗಿ ಹೇಳಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ ಇಂಧನ ಸಚಿವರ ಉಸ್ತುವಾರಿ ಜಿಲ್ಲೆಯಾದ ನಮ್ಮ ಜಿಲ್ಲೆಯಲ್ಲೇ ನಿರಂತರ ವಿದ್ಯುತ್ ಕಡಿತವಾಗುತ್ತಿದೆ ಹಾಗೂ ಹಿಂದುತ್ವದ ಆಧಾರದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ನೆನಪಿನಲ್ಲಿ ನಿರ್ಮಿಸಿದ ಥೀಮ್ ಪಾರ್ಕ್ಗೆ ಉಡುಪಿ ಜಿಲ್ಲಾಧಿಕಾರಿಯವರು ಇತ್ತೀಚೆಗೆ ಭೇಟಿ ನೀಡಿ ವೀಕ್ಷಿಸಿದರು. ಕೆರೆಯ ಮಧ್ಯದ ಕಾರಂತರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಂಗ ಮಂದಿರ, ಆರ್ಟ್ ಗ್ಯಾಲರಿ, ಮಿನಿ ಸಭಾಂಗಣ, ಗ್ರಂಥಾಲಯ, ವಿವಿಧ ಕಲಾಕೃತಿ ವೀಕ್ಷಣೆ ಮಾಡಿ ಸುಸಜ್ಜಿತ ವ್ಯವಸ್ಥೆ ಬಗ್ಗೆ ಶ್ಲಾಘಿಸಿದರು. ಥೀಮ್ ಪಾರ್ಕ್ ಅಭಿವೃದ್ಧಿಗೆ ಸಹಕಾರಕನ್ನಡದ ಹೆಸರಾಂತ ಕವಿ ಕಾರಂತರ ಬದುಕು-ಬರವಣಿಗೆ ಮುಂದಿನ ಜನಾಂಗಕ್ಕೆ ತಲುಪಬೇಕಾದ ಅವಶ್ಯಕತೆಯಿದೆ, ಈ ನಿಟ್ಟಿನಲ್ಲಿ ಥೀಮ್ ಪಾರ್ಕ್ನಲ್ಲಿ ವಿವಿಧ ಚಟುವಟಿಕೆ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ವಿಷಯ, ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ಶ್ರೀವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೋಟ ಕಂದಾಯ ನಿರೀಕ್ಷಕ ರಾಜು, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಸೂರ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2021-22 ಸಾಲಿನ ಭಾರತೀಯ ವೈದ್ಯಕೀಯ ಸಂಘ (IMA) ಕುಂದಾಪುರ ಘಟಕದ ಅಧ್ಯಕ್ಷರಾಗಿ ಎಲುಬು ಕೀಲು ಶಸ್ತ್ರ ಚಿಕಿತ್ಸಕ ತಜ್ಞ ಡಾ. ಸಂದೀಪ್ ನಾವಡ ಪಿ. ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಮಾನಸಿಕ ತಜ್ಞ ಡಾ. ರವೀಂದ್ರ ಮುನೋಳಿ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಮಕ್ಕಳ ತಜ್ಞ ಡಾ. ಗಣೇಶ್ ಪ್ರಸಾದ್ ಕಾಮತ್ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ತನ್ನನ್ನು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಅದರಲ್ಲಿ ಏನು ಸಾಧನೆ ಮಾಡಬಹುದು ಎನ್ನುವುದಕ್ಕೆ ನರೇಂದ್ರ ಕುಮಾರ್ ಅವರು ಮಾದರಿ, ಶಿಕ್ಷಕ ವೃತ್ತಿ ಜೊತೆಗೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅದರಲ್ಲಿ ಹೊಸತನದ ಹೆಜ್ಜೆ ಇದ್ದು ಕಾರ್ಯಕ್ರಮದ ಬಹುರೂಪಿ ಪದಕ್ಕೆ ಇವರೇ ನಿದರ್ಶನ ವ್ಯಕ್ತಿ ಎಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡ ಅವರು ಹೇಳಿದರು. ಅವರು ನರೇಂದ್ರ ಕುಮಾರ್ ಕೋಟ ಸಾರ್ವಜನಿಕ ಅಭಿನಂದನಾ ಸಮಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ ಇವರ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಬಹುರೂಪಿ-2021(ಹೊಸತನದ ಕಂಪನ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರಂತ ಥೀಮ್ ಪಾರ್ಕ್ ಚಟುವಟಿಕೆ ಹಿಂದಿನ ಶಕ್ತಿ -ಸಚಿವ ಕೋಟಕಾರಂತ ಥೀಮ್ ಪಾರ್ಕ್ನಲ್ಲಿ ಕಾರಂತರ ನೆನಪು, ಅವರ ಬದುಕಿನ ಚಿತ್ರಣವನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ಸ್ಥಾಪನೆಯಾಗಿ ದಿನನಿತ್ಯ ಎಂಬಂತೆ ಚಟುವಟಿಕೆ ನಡೆಯುತ್ತಿರುವುದಕ್ಕೆ ನರೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸೋಮವಾರ ಕೊಡುಗೆಯಾಗಿ ನೀಡಲಾಯಿತು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಎಂ. ಜಿ. ಹಾಗೂ ಹಿರಿಯ ಸದಸ್ಯ ಎಚ್. ಗಣೇಶ ಕಾಮತ್ ಜಂಟಿಯಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಅಮಿತಾ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ರಾಜೇಶ್ ಎಂ.ಜಿ., ಈ ಮೊದಲಿನಿಂದಲೂ ಪರಿಸರದ, ಸಮಾಜದ ಹಲವು ಬೇಡಿಕೆಗಳಿಗೆ, ಅಗತ್ಯತೆಗಳಿಗೆ ಸ್ಪಂದನೆ ನೀಡಿರುವ ರೋಟರಿ ಸಂಸ್ಥೆ ಇಂದು ಕೂಡ ಆರೋಗ್ಯ ಕೇಂದ್ರದ ಅಗತ್ಯತೆಯನ್ನು ಮನಗಂಡು ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದೇವೆ. ಮುಂದೆಯೂ ಸ್ಪಂದನೆ ನೀಡುವುದಾಗಿ ಹೇಳಿದರು. ಸಹ ಪ್ರಾಯೋಜಕ ಎಚ್. ಗಣೇಶ ಕಾಮತ್ ಅವರನ್ನು ಗೌರವಿಸಲಾಯಿತು. ವಲಯ ಸೇನಾನಿ ಕೆ.ರಾಮನಾಥ್ ನಾಯಕ್, ಕಾರ್ಯದರ್ಶಿ ನಾರಾಯಣ ನಾಯ್ಕ್, ರೋಟರಿ ಸದಸ್ಯರಾದ ಜನಾರ್ಧನ ಪೂಜಾರಿ, ಆಸ್ಪತ್ರೆ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2020-21ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಎಂಜಿನಿಯರಿಂಗ್ ವಿಭಾಗ)ದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಶ್ರೀನಿಧಿ ಉಡುಪ 835 ನೇ ರ್ಯಾಂಕ್, ತಿಲಕ್ ಚಂದ್ರ ಶಾಸ್ತ್ರಿ 956ನೇ ರ್ಯಾಂ ಕ್,ಶ್ರೀವತ್ಸ ಕಾಮತ್ 1071ನೇ ರ್ಯಾಂ ಕ್, ಸಿಂಚನಾ 1391ನೇ ರ್ಯಾಂಕ್, ಅಚಿಂತ್ಯಾ ಉಪಾಧ್ಯಾಯ 1465ನೇ ರ್ಯಾಂ ಕ್, ಕಶಿಶ್ ಕೆ.ಸಿ.2029ನೇ ರ್ಯಾಂ ಕ್, ಗೌರವ್ 2095ನೇ ರ್ಯಾಂ ಕ್ ಪಡೆದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿಮೂಡುಬಿದಿರೆ: ಮೆಕ್ಯಾನಿಕಲ್ ಮತ್ತು ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಹಾಗೂ ಬೆಂಗಳೂರಿನ ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ. ನಡುವೆ ನೂತನ ಒಡಂಬಡಿಕೆಗೆ ಸಹಿ ಹಾಕಲಾಯಿತು. ಪ್ರಸ್ತುತ ಉದ್ಯಮ ಕ್ಷೇತ್ರದಲ್ಲಿನ ನುರಿತ ತಾಂತ್ರಿಕ ಮತ್ತು ವ್ಯವಸ್ಥಾಪಕ ಸಿಬ್ಬಂದಿಗಳ ತೀವ್ರ ಕೊರತೆಯನ್ನು ನೀಗಿಸುವಲ್ಲಿ ಈ ಒಡಂಬಡಿಕೆಯು ಸಹಕಾರಿಯಾಗಿದೆ. ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ.ನ ಸಿಇಒ ಸ್ಟಾವ್ರೋಸ್ ಕೆಲ್ಡಿಯಾರೆಸ್, ಸೌತ್ ಈಸ್ಟ್ ಏಷ್ಯಾ ರೀಜನ್ ಸೇಲ್ಸ್ ಹೆಡ್ ಲೋಕೆಶ್ ಎಸ್. ಬೊಮ್ಮಾನಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡಿಸ್ ಒಡಂಬಡಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಕಂಪ್ಯೂಟರ್ ಯೈಡೆಡ್ ಇಂಜಿನಿಯರಿಂಗ್ ಸಿಸ್ಟಮ್ಸ್ ಕ್ಷೇತ್ರದಲ್ಲಿ ತರಬೇತಿಯನ್ನು ಒದಗಿಸುವ ಪ್ರಮುಖ ಕಂಪೆನಿಗಳಲ್ಲಿ ಒಂದಾದ ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ. ನೊಂದಿಗಿನ ಒಡಂಬಡಿಕೆಯು ಔದ್ಯೋಗಿಕ ಕ್ಷೇತ್ರದ ನಿರೀಕ್ಷೆ (ಪ್ರಾಕ್ಟಿಕಲ್) ಹಾಗೂ ಶೈಕ್ಷಣಿಕ ಕೊಡುಗೆಗಳ (ಥಿಯರಿ) ನಡುವಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೈಬ್ರಕಟ್ಟೆ ರೋಟರಿ ಪ್ರಾಯೋಜಕತ್ವದಲ್ಲಿ ಅಂಗ ಸಂಸ್ಥೆ ಸೈಬ್ರಕಟ್ಟೆ ವಿಭಾಗದ ರೋಟರಿ ಸಮುದಾಯ ದಳ ಅಧ್ಯಕ್ಷ ಪ್ರಶಾಂತ್ ಪೂಜಾರಿಯವರಿಗೆ ರೋಟರಿ ಜಿಲ್ಲೆ ೩೧೮೨ ನ ರೋಟರಿ ಸಮುದಾಯ ದಳದ ಉಪಸಭಾಪತಿ ಅವರು ಪದಪ್ರಧಾನ ನೆರವೇರಿಸಿದರು ಕಾರ್ಯದರ್ಶಿಯಾಗಿ ರಾಘವೇಂದ್ರ ಸಿ ಶೆಟ್ಟಿ ಆಯ್ಕೆಯಾದರು ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್ ರೋಟರಿ ವಲಯ ೩ರ ಸಹಾಯಕ ಗವರ್ನರ್ ಕೆ ಪದ್ಮನಾಭ ಕಾಂಚನ್ ವಲಯ ಸೇನಾನಿ ವಿಜಯಕುಮಾರ ಶೆಟ್ಟಿ ಆರ್. ಸಿ.ಸಿ ವಲಯ ಸಂಯೋಜಕ ಶಂಕರ್ ಸುವರ್ಣ ಪಂಚಾಯತ್ ಸದಸ್ಯ ಅಮೃತ್ ಪೂಜಾರಿ ರೋಟರಿ ಸದಸ್ಯರು ಭಾಗಿಯಾಗಿದ್ದರು. ವರದರಾಜ ಶೆಟ್ಟಿ ನಿರೂಪಿಸಿ ಅಣ್ಣಯ್ಯ ಧನ್ಯವಾದ ಸಮರ್ಪಿಸಿದರು
