Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತೌಕ್ತೆ ಚಂಡಮಾರುತದಿಂದಾಗಿ ಕುಂದಾಪುರ & ಬೈಂದೂರು ತಾಲೂಕುಗಳಲ್ಲಿ ಅಪಾರ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಶನಿವಾರ ರಾತ್ರಿಪೂರ್ತಿ ಭಾರಿ ಗಾಳಿ ಮಳೆ ಸುರಿದಿದ್ದರಿಂದ ಹಲವೆಡೆ ಮನೆ ಕೊಟ್ಟಿಗೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ರಸ್ತೆ, ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಯಿತು. ಈ ತನಕ ಕುಂದಾಪುರ ತಾಲೂಕಿನ 44 ಮನೆಗಳಿಗೆ ಭಾಗಶಃ ಹಾನಿಯಾಗಿರುಗ ಬಗ್ಗೆ ವರದಿ ದೊರೆತಿದ್ದು ಸುಮಾರು ರೂ, 17,94,000 ನಷ್ಟುವುಂಟಾಗಿದೆ. ಜಾನುವಾರು ಕೊಟ್ಟಿಗೆ, ಅಂಗಡಿ ಕೋಣೆ ಸೇರಿದಂತೆ ಇತರೆ ಕಟ್ಟಡಗಳಿಗೆ ಹಾನಿಯಾಗಿ ಸುಮಾರು 1,43,000 ರೂ. ನಷ್ಟ ಉಂಟಾಗಿದೆ. ಬೈಂದೂರು ತಾಲೂಕಿನ 3 ಮನೆಗೆಳಿಗೆ ಸಂಪೂರ್ಣ ಹಾನಿ, 39 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಒಟ್ಟು ರೂ. 40,95,000 ನಷ್ಟ ಉಂಟಾಗಿದೆ. ಅಂಗಡಿ ಕೋಣೆ, ಅಂಗನವಾಡಿಯ 5 ಆವರಣ ಗೋಡೆ ಸೇರಿ ಒಟ್ಟು ರೂ. 4,55,000 ನಷ್ಟ ಉಂಟಾಗಿದೆ. ತೋಟಗಾರಿಕಾ ಬೆಳೆಯ ಹಾನಿಯಿಂದಾಗಿ ರೂ. 3,25000 ನಷ್ಟ…

Read More

ಕುಂದಾಪ್ರ ಡಾಟ್ ಕಾಮ ಸುದ್ದಿ. ಕುಂದಾಪುರ,ಮೇ.16: ಆನಗಳ್ಳಿ ದೂಪದಕಟ್ಟೆ ಮನೆ ರಘುರಾಮ ಶೆಟ್ಟಿ (91 ವ) ಭಾನುವಾರ ವಯೋಸಹಜ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಉಪ ತಹಶೀಲ್ದಾರರಾಗಿ ನಿವೃತ್ತಿ ಹೊಂದಿದ ಅವರು ಸರಳ ಸಜ್ಜನ ಪ್ರಾಮಾಣಿಕ ವ್ಯಕ್ತಿತ್ವದಿಂದ ಚಿರಪರಿಚಿತರಾಗಿ ಸಾಮಾಜಿಕ ಹಾಗೂ ಧಾರ್ಮಿಕ ರಂಗದಲ್ಲಿ ತೊಡಗಿಸಿಕೊಂಡಿದ್ದರು. ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಆನಗಳ್ಳಿ ಹಿರಿಯ ನಾಗರಿಕ ಸಂಘದ ಅಧ್ಯಕ್ಷರಾಗಿ, ಆನಗಳ್ಳಿ ಶ್ರೀ ಲಕ್ಷ್ಮೀ ಚನ್ನಕೇಶವ ದೇವಾಲಯದ ಗೌರವಾಧ್ಯಕ್ಷರಾಗಿ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಬಸ್ರೂರು ಇದರ ಉಪಾಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಮೂರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಭಾನುವಾರ 745 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 5 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 316, ಕುಂದಾಪುರ, ಬೈಂದೂರು ತಾಲೂಕಿನ 307, ಕಾರ್ಕಳ, ಹೆಬ್ರಿ ತಾಲೂಕಿನ 113 ಮಂದಿಗೆ ಹಾಗೂ ಹೊರ ಜಿಲ್ಲೆಯ 9 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 745 ಪ್ರಕರಣಗಳಲ್ಲಿ 25 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 720 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಕುಂದಾಪುರದ 92 ವರ್ಷದ ವೃದ್ಧೆ, 91 ವರ್ಷದ ವೃದ್ಧೆ, 75 ವರ್ಷದ ವೃದ್ಧ, 45 ವರ್ಷದ ಮಹಿಳೆ, ಉಡುಪಿಯ 88 ವರ್ಷದ ವೃದ್ಧೆ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 1197 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 6805 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 2418 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದನ್ನೂ ಓದಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತೌತೆ ಚಂಡಮಾರುತದಿಂದ ಬಾಧಿತವಾದ ಬೈಂದೂರು ಕ್ಷೇತ್ರದ ಪ್ರದೇಶಗಳಿಗೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ನಿವಾಸಿಗಳೊಡನೆ, ಆಗಿರುವ ಹಾನಿ ಕುರಿತು ಮಾಹಿತಿ ಪಡೆದರು. ಸ್ಥಳದಿಂದಲೇ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ತೀವ್ರ ಹಾನಿ ಸಂಭವಿಸಿದ ಪ್ರದೇಶಗಳಲ್ಲಿ ತಕ್ಷಣ ಪರಿಹಾರಾತ್ಮಕ ಕಾಮಗಾರಿ ನಡೆಸಿ ಅವುಗಳನ್ನು ಹಿಂದಿನ ಸ್ಥಿತಿಗೆ ತರಬೇಕು. ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ತೀವ್ರವಾಗಿ ಜರ್ಝರಿತವಾಗಿರುವ ಮರವಂತೆ ಮೀನುಗಾರಿಕಾ ಹೊರಬಂದರು ಪ್ರದೇಶವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಂಗೊಳ್ಳಿಯಿಂದ ಶಿರೂರು ವರೆಗಿನ ಕಡಲತೀರ ಚಂಡಮಾರುತದಿಂದ ಘಾಸಿಗೊಂಡಿದೆ. ಮರವಂತೆಯಲ್ಲಿ ಬಂದರಿನ ಉತ್ತರ ದಿಕ್ಕಿನ ತೀರ ಕೊಚ್ಚಿಹೋಗಿದೆ. ನೂರಾರು ತೆಂಗಿನ ಮರಗಳು ಉರುಳಿ ಸಮುದ್ರ ಸೇರಿವೆ. 26 ಮೀನುಗಾರಿಕಾ ಶೆಡ್‌ಗಳಿಗೆ ಹಾನಿಯಾಗಿದೆ. ರಸ್ತೆ ಸಂಪರ್ಕ ಕಡಿದಿದೆ. ಹತ್ತು ಮೀನುಗಾರರ ಮನೆಗಳು ಕುಸಿಯುವ ಭೀತಿ ಎದುರಿಸುತ್ತಿವೆ. ಗಂಗೊಳ್ಳಿ, ಹೊಸಾಡಿನ ಕಂಚುಗೋಡು, ಉಪ್ಪುಂದದ ಮಡಿಕಲ್, ಅಳ್ವೆಕೋಡಿ, ತಾರಾಪತಿ, ದುರ್ಮಿಗಳಲ್ಲೂ ಮನೆಗಳಿಗೆ, ಶೆಡ್‌ಗಳಿಗೆ ಹಾನಿಯಾಗಿ ಆಸ್ತಿಪಾಸ್ತಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಮೀನುಗಾರಿಕಾ ಹೊರಬಂದರಿನ ಸಮೀಪದ 500 ಮೀಟರು ಉದ್ದದ ತೀರದಲ್ಲಿ ಋತುಭೇದವಿಲ್ಲದೆ ಕಡಲ್ಕೊರೆತ ಸಂಭವಿಸುತ್ತಿದೆ. ಈಗ ಬಂದ ಚಂಡಮಾರುತದಿಂದ ಸಮುದ್ರ ಉಕ್ಕೇರಿ ಇಲ್ಲಿನ ಜೀವನಾಡಿಯಾಗಿರುವ ಕರಾವಳಿ ಮಾರ್ಗದ ಸುಮಾರು 25 ಮೀಟರು ಭಾಗ ಸಂಪೂರ್ಣ ಕುಸಿದು, ಸಂಪರ್ಕ ಕಡಿತವಾಗಿದೆ. ಈ ಪ್ರದೇಶದಲ್ಲಿ, ಮಾರಸ್ವಾಮಿಯಲ್ಲಿ ಹೆದ್ದಾರಿ ರಕ್ಷಣೆಗೆ ಕೈಗೊಂಡ ’ಸುಸ್ಥಿರ ಕಡಲತೀರ ಸಂರಕ್ಷಣಾ ಯೋಜನೆ’ ಮಾದರಿಯನ್ನು ಅನುಷ್ಠಾನಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕಡಲ್ಕೊರೆತ ಮತ್ತು ಚಂಡಮಾರುತದಿಂದ ತೀವ್ರ ಹಾನಿಗೊಂಡ ಮರವಂತೆ ಮೀನುಗಾರರ ವಸತಿ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿದ್ದಾಗ ಅವರು ಈ ಆಶ್ವಾಸನೆ ನೀಡಿದರು. ಸುಸ್ಥಿರ ಯೋಜನೆ ಕಾರ್ಯಗತವಾಗುವ ವರೆಗೆ, ಈ ಪ್ರದೇಶದಲ್ಲಿ ಇನ್ನಷ್ಟು ಹಾನಿಯಾಗುವುದನ್ನು ತಡೆಯಲು ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮಕ್ಕೆ ಮುಖ್ಯ ಮಂತ್ರಿಗಳನ್ನು ವಿನಂತಿಸಲಾಗುವುದು. ಸಮುದ್ರ ಕಬಳಿಸಿರುವ ಜಮೀನು ಹಾಗೂ ಮರಗಳಿಗೆ ಪರಿಹಾರ ದೊರಕಿಸಲಾಗುವುದು ಎಂದು ಅವರು ಹೇಳಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಯಡ್ತರೆ ಸಂಕದಬಾಗಿಲು ಎಂಬಲ್ಲಿ ಸುಮಾರು 7 ಅಡಿ ಉದ್ದದ ಹೆಬ್ಬಾವು 8 ಕೋಳಿ ನುಂಗಿ ಆತಂಕ ಮೂಡಿಸಿತ್ತು. ಮನೆ ಹಿತ್ತಲಿನಲ್ಲಿದ್ದ ಕೋಳಿ ಗೂಡಿನಲ್ಲಿ ಭಾನುವಾರ ಬೆಳಗ್ಗೆ ಹೆಬ್ಬಾವು ಪತ್ತೆಯಾಗಿದ್ದು, ಅಲ್ಲಿಯೇ ಇದ್ದ 8 ಕೋಳಿಗಳನ್ನು ನುಂಗಿತ್ತು. ಉಳಿದ ಕೋಳಿಗಳು ಸತ್ತು ಬಿದ್ದಿದ್ದವು. ಹೆಬ್ಬಾವು ಕೋಳಿ ಗೂಡಿನಲ್ಲಿ ಇರುವುದು ಗೊತ್ತಾಗುತ್ತಿದ್ದಂತೆ ಮನೆಯ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬೈಂದೂರು ಉಪ ವಲಯ ಅರಣ್ಯಾಧಿಕಾರಿಗಳಾದ ಬಂಗಾರಪ್ಪ ಜಿ. ಆಚಾರಿ ಹಾಗೂ ರವಿರಾಜ್ ಬಿ, ಸ್ಥಳಕ್ಕಾಗಮಿಸಿ ಹೆಬ್ಬಾವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ತಗೆದುಕೊಂಡು ಹೋಗಿ ಬಿಟ್ಟಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳೆದೊಂದು ದಿನದಿಂದ ತೌಕ್ತೇ ಚಂಡಮಾರುತದ ಪರಿಣಾಮ ಉಂಟಾಗಿರುವ ಭಾರಿ ಗಾಳಿ ಮಳೆಯಿಂದಾಗಿ ಬೈಂದೂರು ರೈಲ್ವೆ ನಿಲ್ದಾಣದ ಸಮೀಪದ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್‌ನ ಹೊರಭಾಗಕ್ಕೆ ಹಾನಿಯುಂಟಾಗಿದೆ. ಶನಿವಾರ ರಾತ್ರಿ ಬೀಸಿದ ಗಾಳಿಗೆ ಹೋಟೆಲ್ ಎದುರಿಸಿ ಎಸಿಬಿ ಶೀಟ್‌ಗಳು, ಕಿಟಿಕಿ, ಮೇಲ್ಬಾಗದ ಶೀಟ್, ಫ್ಯಾನ್ ಸೇರಿದಂತೆ ಕೆಲವು ವಸ್ತುಗಳು ಛಿದ್ರಗೊಂಡಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿರಬಹುದೆಂದು ಮಾಲಕರಾದ ಜಯಾನಂದ ಹೋಬಳಿದಾರ್ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಶನಿವಾರ 1146 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 6 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 636, ಕುಂದಾಪುರ, ಬೈಂದೂರು ತಾಲೂಕಿನ 246, ಕಾರ್ಕಳ, ಹೆಬ್ರಿ ತಾಲೂಕಿನ 255 ಮಂದಿಗೆ ಹಾಗೂ ಹೊರ ಜಿಲ್ಲೆಯ 9 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 1146 ಪ್ರಕರಣಗಳಲ್ಲಿ 235 ಸಿಂಟಮಿಕ್ ಹಾಗೂ 911 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 21 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 1125 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 75 ವರ್ಷದ ವೃದ್ಧ, 63 ವರ್ಷದ ವೃದ್ಧ, 46 ವರ್ಷದ ಮಹಿಳೆ, 65 ವರ್ಷದ ವೃದ್ಧ, 35 ವರ್ಷದ ಮಹಿಳೆ, 35 ವರ್ಷದ ಪುರುಷ, 87 ವರ್ಷದ ವೃದ್ಧೆ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 1496 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅರಬ್ಬೀ ಸಮುದ್ರದಲ್ಲಿ ಉಂಟಾದ ತೌಕ್ತೇ ಚಂಡಮಾರುತದಿಂದಾಗಿ ಉಡುಪಿ ಜಿಲ್ಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿರುವ ಪರಿಣಾಮ ಸಮುದ್ರ ತೀರದಲ್ಲಿ ಕಡಲ್ಕೋರೆತ, ನದಿ ತಟದಲ್ಲಿ ನೆರೆಯ ಹಾವಳಿ ಹೆಚ್ಚಿದೆ. ಶನಿವಾರ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ 3 ಮನೆಗಳಿಗೆ, 5 ತಾತ್ಕಾಲಿಕ ಶೆಡ್, ಬ್ರಹ್ಮಾವರ ತಾಲೂಕಿನಲ್ಲಿ 4 ಮನೆಗಳಿಗೆ ಹಾಗೂ ಉಡುಪಿ ತಾಲೂಕಿನಲ್ಲಿ 1 ಮನೆಗೆ ಭಾಗಶಃ ಹಾನಿಯಾಗಿದೆ. ಕಾಪು ತಾಲೂಕಿನಲ್ಲಿ ವಿದ್ಯುತ್ ತಂತಿ ಗಾಳಿಗೆ ಬಿದ್ದು ವಿದ್ಯುತ್ ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮರಗಳು ಧರೆಗೆ ಊರುಳಿರುವುದರಿಂದ ಅಲ್ಲಲ್ಲಿ ರಸ್ತೆ ಬಂದ್ ಆಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ► ತೌಕ್ತೇ ಚಂಡಮಾರುತದ ಅಬ್ಬರ: ಹೆಚ್ಚಿದ ಕಡಲ್ಕೋರೆತ, ನದಿ ತೀರದ ಪ್ರದೇಶದಲ್ಲಿ ನೆರೆ – https://kundapraa.com/?p=48195 . ಪುನರ್ವಸತಿ: ಬೈಂದೂರು ತಾಲೂಕಿನಲ್ಲಿ ಕಡಲ ತೀರದ 4 ಕುಟುಂಬಗಳನ್ನು ಉಪ್ಪುಂದ ಜೂನಿಯರ್ ಕಾಲೇಜಿನ ಪುನರ್ವಸತಿ ಕೇಂದ್ರಕ್ಕೆ, ನೆರೆ ಹಾವಳಿ ಹೆಚ್ಚಿರುವ ಪ್ರದೇಶದ ಕುಟುಂಬದವರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಕುಂದಾಪುರ ತಾಲೂಕಿನ 7…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ’ತೌಕ್ತೇ ಚಂಡಮಾರುತದ ಪರಿಣಾಮ ಶನಿವಾರ ಬಿರುಸಿನ ಗಾಳಿ ಮಳೆ ಮತ್ತು ಪ್ರಬಲ ಕಡಲ್ಕೊರೆತ ಮುಂದುವರೆದಿದೆ. ಚಂಡಮಾರುತ ಪ್ರಭಾವ ಈ ಭಾಗದ ಕರಾವಳಿ ತೀರದುದ್ದಕ್ಕೂ ತಟ್ಟಿದೆ. ಕಡಲ ಅಲೆಗಳ ರುದ್ರನರ್ತನ ಮನೆ, ಮೀನುಗಾರಿಕಾ ದೋಣಿಗಳಿಗೆ ಅಪಾರ ಹಾನಿ ಉಂಟು ಮಾಡಿದೆ. ಹೊಸಾಡು ಗ್ರಾಮದ ಕಂಚುಗೋಡು ಪರಿಸರದಲ್ಲಿ ಕಡಲ್ಕೊರೆತದ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಕಂಚುಗೋಡು ಶ್ರೀ ರಾಮ ಮಂದಿರದ ಸಮೀಪದ ನಿವಾಸಿ ಕೊಲ್ಲೂರು ಸಂಜೀವ ಖಾರ್ವಿ ಮನೆಯ ವಠಾರದಲ್ಲಿದ್ದ ಸುಮಾರು 15ಕ್ಕೂ ಮಿಕ್ಕಿ ತೆಂಗಿನ ಮರಗಳು ಉರುಳಿ ಬಿದ್ದು ಸಮುದ್ರ ಪಾಲಾಗಿದ್ದು, ಇವರ ವಾಸ್ತವ್ಯದ ಮನೆ ಸಮುದ್ರ ಪಾಲಾಗುವ ಸಾಧ್ಯತೆ ಇದೆ. ಇದೇ ಪರಿಸರದಲ್ಲಿ ಕಡಲ ತೀರದ ಸನಿಹದಲ್ಲಿರುವ ಸುಮಾರು 10 ಕ್ಕೂ ಮಿಕ್ಕಿ ಮೀನುಗಾರರ ಮನೆಗಳು ಕಡಲ್ಕೊರೆತದ ಭೀತಿ ಎದುರಿಸುತ್ತಿದೆ. ತೀರದಲ್ಲಿ ನಿಲ್ಲಿಸಿದ್ದ ಎರಡು ದೋಣಿಗಳಿಗೂ ಹಾನಿಯಾಗಿದೆ. ► ತೌಕ್ತೇ ಚಂಡಮಾರುತದ ಅಬ್ಬರ: ಹೆಚ್ಚಿದ ಕಡಲ್ಕೋರೆತ, ನದಿ ತೀರದ ಪ್ರದೇಶದಲ್ಲಿ ನೆರೆ -…

Read More