ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ಇಲಾಖಾ ವತಿಯಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ/ಕೃಷಿ ಪಂಡಿತ ಯೋಜನೆಯಡಿ ಪ್ರತಿ ಹಂತದಲ್ಲಿ 3 ಬಹುಮಾನಗಳನ್ನು ನೀಡಲಾಗುತ್ತಿದೆ. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಅನ್ವಯಿಸುವಂತೆ ಒಂದೇ ಅರ್ಜಿಯನ್ನು ಪಡೆಯಲಾಗುತ್ತಿದ್ದು ಮುಂಗಾರು ಹಂಗಾಮಿನ ಮಳೆಯಾಶ್ರಿತ ಭತ್ತದ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರು ಕೆ-ಕಿಸಾನ್ ಪೋರ್ಟಲ್ನಡಿ RSK Loginಅಥವಾ Citizen Loginಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಗರೀಕ ಕೇಂದ್ರ/ಸ್ವತಃ ಆಸಕ್ತ ರೈತ/ರೈತ ಮಹಿಳೆಯರು ಪ್ರತ್ಯೇಕವಾಗಿ ರೈತರ FID ಅನ್ನು ಬಳಸಿಕೊಂಡು ಆನ್ ಲೈನ್ ಮೂಲಕ ಸೆಪ್ಟೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಟಿವಿ ರಿಚಾರ್ಜ್ ಮಾಡುವ ಹೆಸರಿನಲ್ಲಿ ಸೈಬರ್ ಕಳ್ಳರು ಲಿಂಕ್ ಕಳುಹಿಸಿ, ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ವಿವೇಕಾನಂದ ಕೋಟೆಗಾರ್ (61) ಹಾಗೂ ಅವರ ಪತ್ನಿಯ ಬ್ಯಾಂಕ್ ಖಾತೆಯಲ್ಲಿದ್ದ 1.88 ಲಕ್ಷ ರೂ. ಹಣವನ್ನು ಯಾರೋ ಸೈಬರ್ ವಂಚಕರು ಮೋಸ ಮಾಡಿ ಲಪಟಾಯಿಸಿದ ಘಟನೆ ಬೆಳಕಿಗೆ ಬಂದಿದೆ. ವಿವೇಕಾನಂದ ಅವರು ಸೆ.12 ರ ಬೆಳಗ್ಗೆ ಮೊಬೈಲ್ನಲ್ಲಿ ಟಾಟಾ ಸೈ ವೆಬ್ಸೈಟ್ಗೆ ಹೋಗಿ ಹುಡುಕಿದಾಗ 06009616528 ನಂಬರ್ ಇದ್ದು, ಅದಕ್ಕೆ ಕರೆ ಮಾಡಿದ್ದಾರೆ. ಆಗ ಆ ಆರೋಪಿಯು ಟಾಟಾ ಸೈ ಕರೆನ್ಸಿ ದರ ಕಡಿಮೆಯಿದ್ದು, ರಿಚಾರ್ಜ್ ಮಾಡಿಸಿ ಎಂದು ಹೇಳಿದ್ದ. ಅದರಂತೆ ಇವರು ಪತ್ನಿ ಬಳಿ ರಿಚಾರ್ಜ್ ಮಾಡುವಂತೆ ಹೇಳಿದ್ದು, ಅವರು ಈ ಹಿಂದೆ ರಿಚಾರ್ಜ್ ಮಾಡುತ್ತಿದ್ದ 209 ರೂ. ಹಾಕಿದ್ದಾರೆ. ಆಗ ಆ ಆರೋಪಿಯು ನೀವು ಈಗ ರಿಚಾರ್ಜ್ ಮಾಡಿದ ಹಣ ನನ್ನ ಸಿಸ್ಟಮ್ನಲ್ಲಿ ತೋರಿಸಲು ತಡವಾಗುತ್ತದೆ. ಅದಕ್ಕೆ ನಾನು ಲಿಂಕ್ ಕಳುಹಿಸುತ್ತೇನೆ, ಅದರಲ್ಲಿ ರಿಚಾರ್ಜ್ ಮಾಡಿದರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀ ವಿನಾಯಕ ಯುವಕ ಮಂಡಲ ಸಾಬ್ರಕಟ್ಟೆ-ಯಡ್ತಾಡಿ ಕೊಡ ಮಾಡುವ 2026ನೇ ಸಾಲಿನ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರವನ್ನು ಪದ್ಮಶ್ರೀ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಆಯ್ಕೆ ಮಾಡಲಾಗಿದೆ. ಕಿತ್ತಳೆ ಹಣ್ಣನ್ನು ಮಾರಿ ತನ್ನ ಊರಿನಲ್ಲಿ ಯಾರು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ತನ್ನ ಊರಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಅಕ್ಟೋಬರ್ 18ರಂದು ನಡೆಯುವ ನಮ್ಮೂರ ದಸರಾ-2026( ಭಕ್ತಿ ಬಣ್ಣದ ಮಾರ್ದನಿ) ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಯುವಕ ಮಂಡಲದ ಅಧ್ಯಕ್ಷ ಪ್ರಭಾಕರ ಪೂಜಾರಿ ಕಾರ್ಯದರ್ಶಿ ಸುಧಾಕರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಗ್ರಾಮದಲ್ಲಿ ದೇಗುಲ ಹೇಗೆ ಇರುತ್ತದೆಯೋ ಅದೇ ರೀತಿ ಆ ಊರಿನ ಕೆರೆ ಕೂಡಾ ಅಷ್ಟೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ದಿಸೆಯಲ್ಲಿ ಕೋಟದ ವರುಣತೀರ್ಥ ಕೆರೆ ಊರಿನ ಸೌಂದರ್ಯದ ಮೆರಗನ್ನು ಹೆಚ್ಚಿಸಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ಅವರು ಕೋಟದ ವರುಣತೀರ್ಥಕೆರೆಯಲ್ಲಿ ಕೋಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 51ನೇ ವರ್ಷದ ಉತ್ಸವದಲ್ಲಿ ಹಮ್ಮಿಕೊಂಡ ಈಜು ಸ್ಪರ್ಧೆಯಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿ, ಕೃಷಿಗೆ ಪೂರಕವಾದ ಈ ಕೆರೆ ಸಮಾಜದ ಸದ್ಭಳಕೆಯ ಕೇಂದ್ರವಾಗಲಿ ಎಂದು ಹಾರೈಸಿದರು. ಕಾರ್ಯಕ್ರಮವನ್ನು ಕೋಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇ.ಮೂ.ಸುಬ್ರಹ್ಮಣ್ಯ ಅಡಿಗ ಶುಭಹಾರೈಸಿದರು. ಸಮಿತಿಯ ಅಧ್ಯಕ್ಷ ಆನಂದ್ ದೇವಾಡಿಗ, ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಚಂದ್ರ ಪೂಜಾರಿ, ಕಾರ್ಯಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಉದ್ಯಮಿಗಳಾದ ಸದಾನಂದ ಪೂಜಾರಿ, ಪ್ರವೀಣ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಹೇಗೆ ಸಹಾಯಕವೋ ಹಾಗೆಯೇ ಶಿಕ್ಷಕರ ಸಾಧನೆಗೂ ಪುಷ್ಟಿಯನ್ನು ಒದಗಿಸುತ್ತಿದೆ. ಈ ಶಾಲೆಯ ಹಿಂದಿ ಭಾಷಾ ಶಿಕ್ಷಕರಾದ ಗಣೇಶ್ ದೇವಾಡಿಗ ಅವರಿಗೆ ದೆಹಲಿಯಲ್ಲಿ ನಡೆದ ಪ್ರತಿಷ್ಠಿತ “ರಾಷ್ಟ್ರೀಯ ಶಿಕ್ಷಕರ ಪುರಸ್ಕಾರ-2026” ಲಭಿಸಿದೆ. ದೆಹಲಿ ಸರಕಾರದ ’ಹಿಂದಿ ಅಕಾಡೆಮಿ’ ಮತ್ತು ಪ್ರಸಿದ್ಧ ’ಮಧುಬನ್ ಪಬ್ಲಿಕೇಷನ್ಸ್’ ಜಂಟಿಯಾಗಿ ಹಿಂದಿ ದಿನಾಚರಣೆಯ ಶುಭ ಸಂದರ್ಭದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಶಿಕ್ಷಕರ ಪುರಸ್ಕಾರ ಸಮಾರಂಭದಲ್ಲಿ ಇವರಿಗೆ ಈ ಗೌರವವನ್ನು ಪ್ರದಾನ ಮಾಡಲಾಯಿತು. ಹಿಂದಿ ಭಾಷಾ ಬೋಧನೆಯಲ್ಲಿ ಇವರ ಸುದೀರ್ಘ ಸೇವೆ, ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೇಮ ಮತ್ತು ಆಸಕ್ತಿಯನ್ನು ಮೂಡಿಸುವಲ್ಲಿ ಇವರು ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ಹರ್ಷ ವ್ಯಕ್ತಪಡಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾರ್ಗದರ್ಶಕರು. ಶಿಕ್ಷಕರು ಸಾಧನೆಯ ಹಾದಿಯಲ್ಲಿ ಸಾಗಿದರೆ ವಿದ್ಯಾರ್ಥಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜನರ ಸೇವೆಯನ್ನು ತಮ್ಮ ಸಾರ್ವಜನಿಕ ಜೀವನದ ಪ್ರಮುಖ ಧ್ಯೇಯವನ್ನಾಗಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಶೈಲಿಯಲ್ಲಿ ’ಸೇವಾ ಸಂಕಲ್ಪ’ಎಂಬ ಪರಿಕಲ್ಪನೆ ಪ್ರಮುಖ ಸ್ಥಾನ ಪಡೆದಿದೆ ಎಂದು ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ಹೇಳಿದರು. ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 76ನೇ ಜನ್ಮ ದಿನದ ಪ್ರಯುಕ್ತ ’ಸೇವಾ ಸಂಕಲ್ಪ ಅಭಿಯಾನ’ ಅಂಗವಾಗಿ ಗುಜ್ಜಾಡಿ ಗ್ರಾಮದ ಮಂಕಿಯ ಪುಂಡಲೀಕ ಮಂಕಿ ಅವರ ಮನೆಯಲ್ಲಿ ಗುರುವಾರ ನಡೆದ ’ಆಶೀರ್ವಾದ ದೀಪ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲ್ಯದಲ್ಲಿಯೇ ಜನಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕವೂ ಅವರು ತಮ್ಮನ್ನು ’ಪ್ರಧಾನ ಸೇವಕ’ ಎಂದು ಬಿಂಬಿಸಿಕೊಂಡಿದ್ದು, ಬಡವರು, ರೈತರು, ಮಹಿಳೆಯರು, ಯುವಕರು ಹಾಗೂ ದುರ್ಬಲ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ಸೇವೆ, ಕರ್ತವ್ಯ ಮತ್ತು ರಾಷ್ಟ್ರ ಪ್ರಥಮ ಎಂಬ ಆಶಯಗಳ ಮೂಲಕ ಜನ ಕಲ್ಯಾಣವನ್ನು ಮುಂದುವರಿಸುವ ಸಂಕಲ್ಪ ಮಾಡಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ನ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. 17ರ ವಯೋಮಾನದ ಪ್ರೌಢಶಾಲಾ ವಿಭಾಗದಲ್ಲಿ ಮುತ್ತು ಸಿದ್ದಪ್ಪ ನಾವಿ ಹಾಗೂ ಸಾಹಿತ್ಯ ಅಡಿಗ ಅವರು 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದರೆ, ಸೃಷ್ಟಿ. ಎಚ್. ತೋಳಾರ್ 100 ಮೀಟರ್ ಓಟದಲ್ಲಿ ಹಾಗೂ ಸಂಪ್ರೀತ್ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅದೇ ವಿಭಾಗದಲ್ಲಿ ಆಕಾಶ್ ಪೂಜಾರಿ ಅವರು 100 ಮೀಟರ್ ಓಟ, 200 ಮೀಟರ್ ಓಟ ಹಾಗೂ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ವೈಯಕ್ತಿಕ ಚಾಂಪಿಯನ್ಶಿಪ್ ಮುಡಿಗೇರಿಸಿಕೊಂಡಿದ್ದಾರೆ. ಅವರ ಈ ಸಾಧನೆ ಶಾಲೆಯ ಕ್ರೀಡಾ ಪ್ರತಿಭೆಗೆ ಮತ್ತೊಂದು ಗರಿಮೆ ತಂದಿದೆ. ಇದೇ ವಿಭಾಗದಲ್ಲಿ ಸಮಿತ್ ಶೆಟ್ಟಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, ಸಾಯಿಪ್ರಸಾದ್ ಎಸ್. ಮೊಗವೀರ 800 ಮೀಟರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗೋಕರ್ಣ: ಸೂರ್ಯೋದಯಕ್ಕೂ ಪೂರ್ವದಲ್ಲಿ ಪ್ರತಿದಿನವೂ ನಿಯಮಿತವಾಗಿ ನೀರನ್ನು ಸೇವಿಸುವ ‘ಉಷಃಪಾನ’ ಹಾಗೂ ‘ನಾಸಾಪಾನ’ ಪದ್ಧತಿಗಳನ್ನು ಅಳವಡಿಸಿಕೊಂಡರೆ ಮನುಷ್ಯನು ಮುಪ್ಪು ಹಾಗೂ ರೋಗಗಳಿಲ್ಲದ ನೂರು ವರ್ಷಗಳ ಕಾಲದ ಆರೋಗ್ಯಯುತ ಜೀವನವನ್ನು ನಡೆಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ‘ಉಷಃಪಾನ – ನಾಸಾಪಾನ’ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಸೂರ್ಯೋದಯಕ್ಕೂ ಪೂರ್ವದಲ್ಲಿ ಪ್ರತಿದಿನ ಎಂಟು ಬೊಗಸೆ ನೀರನ್ನು ಸೇವಿಸುವುದನ್ನು ‘ಉಷಃಪಾನ’ ಎಂದು ಕರೆಯಲಾಗಿದ್ದು, ಆಯುರ್ವೇದ ಹಾಗೂ ಯೋಗಶಾಸ್ತ್ರದಲ್ಲಿ ಈ ಕುರಿತಾಗಿ ಉಲ್ಲೇಖಗಳಿದ್ದು, ಪ್ರತಿದಿನ ಇದನ್ನು ಆಚರಿಸುವಂತೆ ಸೂಚಿಸಲಾಗಿದೆ. ಉಷಃಪಾನದಿಂದ ಎಲ್ಲಾ ರೋಗಗಳ ನಿವಾರಣೆಯ ಜೊತೆಗೆ ಮುಪ್ಪನ್ನು ಇದು ನಿವಾರಿಸುತ್ತದೆ ಮತ್ತು ಮನುಷ್ಯನು ಶತಾಯುಷಿಯಾಗುತ್ತಾನೆ ಎಂದು ಇದರ ಉಪಯೋಗವನ್ನು ಹೇಳಿದ್ದು, ಬೆಳಗ್ಗೆ ಎದ್ದು ಶೌಚಕ್ರಿಯೆಯನ್ನು ಮಾಡುವುದಕ್ಕೂ ಮೊದಲೇ ಇದನ್ನು ಆಚರಿಸಬೇಕು ಎಂದರು. ಉಷಃಪಾನವನ್ನು ಒಂದನೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಐಎಂಜೆ ಶಿಕ್ಷಣ ಸಂಸ್ಥೆಗಳು,1ಎಂ1ಬಿ ಹಾಗೂ ರಾಜ್ಯ ಸರ್ಕಾರದ ಮೈಕ್ರೋಸಾಫ್ಟ್ ಮತ್ತು ಮೈಟಿ ಸಹಯೋಗದಲ್ಲಿ, “ಉದ್ಯೋಗ ಎಕ್ಸ್ಪ್ರೆಸ್ 2026” ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಭಾ ಕಾರ್ಯಕ್ರಮವು ಸೆಪ್ಟೆಂಬರ್ 18, 2026ರಂದು ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ (ಎಂಐಟಿ) ಆವರಣದಲ್ಲಿ ಬೆಳಿಗ್ಗೆ 9.30ಗೆ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಸ್ಯಾಮುಯೆಲ್ ಅಗಸ್ಟಸ್ ನಾರ್ಟನ್ ಸ್ಟ್ಯಾನ್ಲಿ , ಆರ್ಕಿಟೆಕ್ಟ್, ಐಬಿಎಂ ಇಂಡಿಯಾ ಕ್ಲೌಡ್ ಲ್ಯಾಬ್ಸ್ ಅವರು ಭಾಗವಹಿಸಲಿದ್ದಾರೆ.ಗೌರವಾನ್ವಿತ ಅತಿಥಿಗಳಾಗಿ ಅಭಿರಾಮ್ ನಟರಾಜನ್ , ಕಾರ್ಯಕ್ರಮ ನಿರ್ದೇಶಕರು, ಗ್ರಾಸ್ರೂಟ್ ಇನಿಶಿಯೇಟಿವ್ಸ್, 1ಎಂ1ಬಿ ಅವರು ಆಗಮಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಜೆ ಶಿಕ್ಷಣ ಸಂಸ್ಥೆಗಳ ಗೌರವಾನ್ವಿತ ಅಧ್ಯಕ್ಷರಾದ ಸಿದ್ಧಾರ್ಥ ಜೆ. ಶೆಟ್ಟಿ ಅವರು ವಹಿಸಲಿದ್ದಾರೆ.ಐಎಂಜೆ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಅವರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಉದ್ಯೋಗ ಮೇಳಕ್ಕೆ ಈಗಾಗಲೇ 1,500ಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ.ಪ್ರಮುಖವಾಗಿ ನುವಿನ್ ಗ್ಲೋಬಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಬೈಂದೂರು ಸಿಟಿ ವತಿಯಿಂದ ಜೆಸಿ ಸಪ್ತಾಹದ ಅಂಗವಾಗಿ, ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ನಿಸ್ವಾರ್ಥ ಸಾಧಕರನ್ನು ಗುರುತಿಸಿ ಗೌರವಿಸುವ ‘ಸೈಲೆಂಟ್ ಸ್ಟಾರ್ ಅವಾರ್ಡ್’ ಪ್ರದಾನ ಕಾರ್ಯಕ್ರಮವು ಸಪ್ತಾಹದ 7ನೇ ದಿನದಂದು ಬೈಂದೂರಿನ ಶಾರದಾ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ಜೆಎಫ್ಎಂ. ಚೈತ್ರಾ ಸತೀಶ್ ವಹಿಸಿದ್ದರು. ಸಮಾಜದಲ್ಲಿ ಯಾವುದೇ ಪ್ರಚಾರದ ಹಂಬಲವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇಬ್ಬರು ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಂಜೀವ ದೇವಾಡಿಗ, ಕಳವಾಡಿ: ಸಾವಿರಾರು ಅನಾಥ, ಕಾಯಿಲೆಯಿಂದ ಬಳಲುತ್ತಿರುವ ಹಾಗೂ ಅಪಘಾತಕ್ಕೀಡಾದ ಮೂಕ ಜೀವಿಗಳಾದ ಗೋವುಗಳನ್ನು ರಕ್ಷಿಸಿ, ಸ್ವಂತ ಮಕ್ಕಳಂತೆ ಪ್ರೀತಿಯಿಂದ ಪೋಷಿಸುತ್ತಿರುವ ಇವರ ಅಪೂರ್ವ ಗೋಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಶ್ರೀನಿವಾಸ್ ದೇವಾಡಿಗ, ಬೈಂದೂರು: ವೃತ್ತಿಯಲ್ಲಿ ಬಳೆ ವ್ಯಾಪಾರಸ್ಥರಾಗಿದ್ದು, ಸ್ವಯಂಪ್ರೇರಿತರಾಗಿ ಸುಮಾರು 35ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ತುರ್ತು ಸಂದರ್ಭಗಳಲ್ಲಿ ಅದೆಷ್ಟೋ ಜೀವಗಳನ್ನು ಉಳಿಸಿದ ಇವರ ಜೀವಪರ ಕಳಕಳಿ ಹಾಗೂ ಸಮಾಜಮುಖಿ ಸೇವೆಯನ್ನು…
