ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನಿನಾದ ಸಂಸ್ಥೆಯ ವತಿಯಿಂದ ಗುಜ್ಜಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಬಳಿಯ ಗೋಮಂದಿರದಲ್ಲಿ ಗೋಪೂಜೆ ಕಾರ್ಯಕ್ರಮ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿತು. ನಿನಾದ ಸಂಸ್ಥೆಯ ಅಧ್ಯಕ್ಷ ಎಂ. ಮುಕುಂದ ಪೈ, ಎನ್.ಗಜಾನನ ನಾಯಕ್, ಜಿ.ರೋಹಿದಾಸ ನಾಯಕ್, ಕೆ.ಕೃಷ್ಣ ಭಟ್, ರಾಮನಾಥ ಚಿತ್ತಾಲ್, ಗಣಪತಿ ನಾಯಕ್, ಜಿ.ಗಂಗಾಧರ ಪೈ, ನಿನಾದ ಸಂಸ್ಥೆಯ ಸದಸ್ಯರು, ಪದಾಧಿಕಾರಿಳು, ಗೋಮಂದಿರ ವಿಶೇಷ ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಶಂಕರನಾರಾಯಣದ ಜೇಸಿರೆಟ್ ವಿಭಾಗ ಹಾಗೂ ಕರ್ನಾಟಕ ಬ್ಯಾಂಕ್ ಕುಳ್ಳುoಜೆ ಶಾಖೆ ಶಂಕರನಾರಾಯಣ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ‘ನಮ್ಮ ಮನೆಯ ಮುದ್ದು ಕಂದ’ ಭಾವಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಸಮೃದ್ಧಿ ಯುವಕ ಮಂಡಲದ ವಠಾರದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜೇಸಿರೆಟ್ ಮತ್ತು ಮಹಿಳಾ ಜೇಸಿಸ್ ವಿಭಾಗ ಜೇಸಿಐ ವಲಯ 15ರ ವಲಯ ನಿರ್ದೇಶಕ ಜೆ ಎಫ್ ಎಸ್ ಜ್ಯೋತಿ ರಮಾನಾಥ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜೇಸಿರೆಟ್ ವಿಭಾಗ ಕೈಗೊಂಡ ಉತ್ತಮ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು. ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಮಂಜುನಾಥ್ ಕಾಮತ್ ಹಾಲಾಡಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಜೇಸಿರೆಟ್ ವಿಭಾಗ ಅತ್ಯುತ್ತಮ ಕಾರ್ಯಕ್ರಮ ಕೈಗೊಂಡಿದ್ದು ಇಂತಹ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ನಡೆಯಲಿ ಎಂದರು ಹಾಗು ಇಂತಹ ಕಾರ್ಯಕ್ರಮಕ್ಕೆ ಸಹಕಾರದ ಭರವಸೆಯನ್ನು ನೀಡಿದರು. ಜೇಸಿರೆಟ್ ಅಧ್ಯಕ್ಷೆ ಪಲ್ಲವಿ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ನಡೆದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ, ಮಕ್ಕಳ ಹಕ್ಕುಗಳ ಗ್ರಾಮ ಸಭೆ ಹಾಗೂ ಓದುವ ಬೆಳಕು ಕಾರ್ಯಕ್ರಮಕ್ಕೆ ಚಾಲನೆ ನಿಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ, ಮಕ್ಕಳು ದೇಶದ ಸಂಪತ್ತು. ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು, ಕೊರೊನಾ ನಿರ್ಬಂಧದ ಕಾರಣ ಮಕ್ಕಳು ಶಿಕ್ಷಣ ಮತ್ತು ಓದಿನಿಂದ ವಿಮುಖರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಗ್ರಾಮ ಪಂಚಾಯತಿ ಮತ್ತು ಗ್ರಂಥಾಲಯದ ಮೂಲಕ ಓದುವ ಬೆಳಕು ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಅಧೀನ 6ರಿಂದ 18 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಗ್ರಂಥಾಲಯದ ಸದಸ್ಯತ್ವ ನೀಡಿ, ಓದಲು ಪುಸ್ತಕಗಳನ್ನು ನೀಡಲಾಗುತ್ತದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಭಾವ ಚಿತ್ರಕ್ಕೆ ಹೂಮಾಲೆ ಹಾಕುವ ಮೂಲಕ ಮಕ್ಕಳ ದಿನ ಆಚರಿಸಲಾಯಿತು. ಜಿಲ್ಲಾ ಕನ್ನಡ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ‘ಜಿಲ್ಲೆಯಲ್ಲಿ ಕೋವಿಡ್-19 ಪ್ರಸರಣ ಕ್ಷೀಣಿಸುತ್ತಿದೆಯಾದರೂ ಅದರ ಅಪಾಯ ದೂರಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಡಿಸೆಂಬರ್ 1ರಂದು ನಡೆಯುವ ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆ ನಿರ್ವಹಣೆ ಕುರಿತು ಚರ್ಚಿಸಲು ಶುಕ್ರವಾರ ದೇವಸ್ಥಾನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲ್ಲಿನ ಜಾತ್ರೆಯಲ್ಲಿ ಅಸಂಖ್ಯ ಜನ ಸೇರುತ್ತಾರೆ. ಈ ಬಾರಿ ಅದಕ್ಕೆ ಅವಕಾಶ ಕೊಡುವಂತಿಲ್ಲ. ರಥೋತ್ಸವವನ್ನು ದೇವಸ್ಥಾನದ ಪರಂಪರಾಗತ ಪದ್ಧತಿಗೆ ಚ್ಯುತಿ ಬಾರದಂತೆ ಧಾರ್ಮಿಕ ವಿಧಿ ಮತ್ತು ಉತ್ಸವಗಳನ್ನು ನಡೆಸಬೇಕಾಗಿದೆ. ಜಾತ್ರೆಯ ಅಂಗಡಿಗಳಿಗೆ ಅವಕಾಶವಿಲ್ಲ. ರಥೋತ್ಸವದ ಭಾಗವಾಗಿ ನಡೆಯುವ ಕಟ್ಟೆ ಉತ್ಸವಗಳಲ್ಲಿ 25ಕ್ಕಿಂತ ಹೆಚ್ಚು ಜನರು, ರಥೋತ್ಸವದಂದು ಬೆಳಿಗ್ಗಿನ ರಥಾರೋಹಣ ಮತ್ತು ಸಂಜೆಯ ರಥಾವರೋಹಣಗಳಲ್ಲಿ 100ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಕೊರೊನಾ ಸೋಂಕು ಸಂಪೂರ್ಣ ತೊಲಗುವವರೆಗೂ ಇಂತಹ ನಿರ್ಬಂಧ ಅನಿವಾರ್ಯ. ಎಲ್ಲರ ಆರೋಗ್ಯದ ದೃಷ್ಟಿಯಿಂದ ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮೊದಲ ಕಂಬಳ ಬೈಂದೂರು ತಾಲೂರು ಕೊಡೇರಿ ಗ್ರಾಮದ ಪಟೇಲರ ಮನೆ ಕಂಬಳಗದ್ದೆಯಲ್ಲಿ ಜರುಗಿತು. ಏಕಲವ್ಯ ಕಂಬಳ ಸಮಿತಿಯು ಬೈಂದೂರು ತಾಲೂಕು ಕಂಬಳ ಸಮಿತಿ ಸಹಕಾರದೊಂದಿಗೆ ಶನಿವಾರ ವೈಭವದ ಕಂಬಳೋತ್ಸವ ಆಯೋಜಿಸಿತ್ತು. ೫೦ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಿದ್ದರು. ಕಳೆದ ಹಲವಾರು ವರ್ಷಗಳಿಂದ ಪಟೇಲರ ಮನೆಯವರು ಈ ಕಂಬಳೋತ್ಸವನ್ನು ನಡೆಸಿಕೊಂಡು ಬಂದಿದ್ದು, ಕಾರಣಾಂತರಗಳಿಂದ ಈ ಆಚರಣೆ ನಿಂತುಹೋಗಿತ್ತು. ಇದನ್ನು ಮನಗಂಡ ಈ ಭಾಗದ ಕೆಲವು ಯುವಕರು ಸೇರಿಕೊಂಡು ಏಕಲವ್ಯ ಸಮಿತಿ ರಚಿಸಿಕೊಂಡು ಕಂಬಳವನ್ನು ಮುನ್ನೆಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರಾಗಿ ಆಯ್ಕೆಯಾದ ಸಸಿಹಿತ್ಲು ವೆಂಕಟ ಪೂಜಾರಿ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಾಪ್ಕಾಮ್ಸ್ನ ನಿರ್ದೇಶಕ ಚೆನ್ನಕೇಶವ ಕಾರಂತ್ ಇವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ತಾಲೂಕು ಕಂಬಳ ಸಮಿತಿ ಉಪಾಧ್ಯಕ್ಷ ಪರಮೇಶ್ವರ ಭಟ್, ಶಿಕ್ಷಕ ಸತ್ಯನಾ ಕೊಡೇರಿ, ಪಟೇಲರ ಮನೆಯ ಸದಸ್ಯರು ಇದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ (ಟಿಎಪಿಸಿಎಂಎಸ್) ನಿರ್ದೇಶಕರಾಗಿ ಸಹಕಾರಿ ಧುರೀಣ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ 4ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳೆದ 25 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಎಸ್. ರಾಜು ಪೂಜಾರಿಯವರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿ, ದಕ್ಷಿಣ ಕನ್ನಡ ಕೃಷಿ ಅಭಿವೃದ್ದಿ ಸಹಕಾರ ಸಂಘದ (ಸ್ಕ್ಯಾಡ್ಸ್) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಲಯ ಎಸ್ಎಸ್ಎಫ್, ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಕುಂದಾಪುರ ಘಟಕ ಮತ್ತು ಉಡುಪಿ ಜಿಲ್ಲಾ ಬ್ಲಡ್ ಸೈಬೊ ಆಶ್ರಯದಲ್ಲಿ ನಾವುಂದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಶಾದಿ ಮಹಲ್ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದ ಉದ್ಘಾಟನೆ ನಡೆಯಿತು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಮಾತನಾಡಿ, ರಕ್ತದಾನ ಮಾಡುವವರು ತಮ್ಮ ಧರ್ಮ, ಜಾತಿ, ಬಂಧುವರ್ಗಕ್ಕೆ ಸೇರಿರುವ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ರಕ್ತದಾನ ಮಾಡುವುದಿಲ್ಲ. ಅವರ ಉದ್ದೇಶ ರಕ್ತದ ಅಗತ್ಯ ಇರುವವರು. ಹಾಗಾಗಿ ರಕ್ತದಾನಿಗಳು ನಿಜವಾದ ಮಾನವತಾವಾದಿಗಳು ಎಂದು ಹೇಳಿದರು. ನಾವುಂದ ಜಮಾತ್ನ ಅಧ್ಯಕ್ಷ ಹಾಜಿ ತೌಫೀಕ್ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಶಬ್ಬೀರ್ ಸಖಾಫಿ ಶಿಬಿರವನ್ನು ಉದ್ಘಾಟಿಸಿ, ಕೊರೊನಾ ಸೋಂಕು ಹರಡಿರುವ ಕಾರಣ ರಕ್ತನಿಧಿಗಳಲ್ಲಿ ರಕ್ತದ ಕೊರತೆ ಕಂಡುಬರುತ್ತಿದೆ. ಎಸ್ಎಸ್ಎಫ್ ಸದಸ್ಯರು ಈ ಕೊರತೆ ನೀಗಲು ಮತ್ತೆಮತ್ತೆ ರಕ್ತದಾನ ಮಾಡಬೇಕು ಎಂದರು. ರೆಡ್ ಕ್ರಾಸ್ನ ವೈದ್ಯ ಪ್ರತಿನಿಧಿ ಡಾ. ಶರಣ್, ಅರ್ಹ ಜನರು ನಿಯತಕಾಲಿಕವಾಗಿ ರಕ್ತದಾನ ಮಾಡುವುದರಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಕ್ಕಳ ಸ್ನೇಹಿ ಪಂಚಾಯತ್ ಕಾರ್ಯಕ್ರಮದ ಭಾಗವಾಗಿ ನವೆಂಬರ್ 14 ರ ಮಕ್ಕಳ ದಿನದಿಂದ ಓದುವ ಬೆಳಕು ಅಭಿಯಾನವನ್ನು ಹಮ್ಮಿಕೊಂಡಿದೆ. ಮಕ್ಕಳಿಗೆ ಉಚಿತ ಸದಸ್ಯತ್ವ ನೀಡಿ ಪುಸ್ತಕಗಳನ್ನು ನೀಡಲಾಗುತ್ತಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿಯ ರವಿ ಕಟ್ಕೆರೆ ಮಕ್ಕಳೊಂದಿಗೆ ಕೋಟೇಶ್ವರ ಪಂಚಾಯತ್ ಗೆ ಭೇಟಿ ನೀಡಿದರು. ಅಭಿವೃದ್ಧಿ ಅಧಿಕಾರಿಯವರಾದ ತೇಜಪ್ಪ ಕುಲಾಲ ಮಕ್ಕಳಿಗೆ ಪುಸ್ತಕ ನೀಡಿ ಓದುವ ಬೆಳಕು ಅಭಿಯಾನ ಆರಂಭಿಸಿದರು. ಗ್ರಂಥಪಾಲಕಿ ಶಾರದಾ ಎಲ್ಲ ಮಕ್ಕಳಿಗೂ ಉಚಿತ ಸದಸ್ಯತ್ವ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಲೂರಿನ ಚಿತ್ರಕೂಟ ಆಯುರ್ವೇದ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಬೈಂದೂರು ತಾಲೂಕಿನಾದ್ಯಂತ ‘ಶಿಶು ಪೋಷಕ್’ ಶಿಶುವಿನ ಆಹಾರವನ್ನು ಆಶಾ ಕಾರ್ಯಕರ್ತರ ಮೂಲಕ ಮನೆ ಮನೆಗೆ ತಲುಪಿಸಲಾಯಿತು. ಚಿತ್ರಕೂಟದ ಮುಖ್ಯಸ್ಥ ಡಾ ರಾಜೇಶ್ ಬಾಯಾರಿಯವರ ನೇತೃತ್ವದಲ್ಲಿ ಮರವಂತೆ, ಬೈಂದೂರು, ನಾಡ, ಆಲೂರು, ಚಿತ್ತೂರು, ಮಾರಣಕಟ್ಟೆಯ ಆಸುಪಾಸಿನ ಮಕ್ಕಳಿಗೆ ಶಿಶುವಿನ ಮಾನಸಿಕ ಹಾಗು ಬೌದ್ಧಿಕ ಬೆಳವಣಿಗೆಗೆ ಪೂರಕವಾಗುವಂತ ಶಿಶು ಆಹಾರವಾದ ಶಿಶುಪೋಷಕ್ ಆಹಾರವನ್ನು ವಿತರಿಸಲಾಯಿತು. ಏನಿದು ಶಿಶು ಪೋಷಕ್? ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿರುವ ಈ ಉತ್ಪನ್ನವು ಮಕ್ಕಳ ಆರೋಗ್ಯದಾಯಕ ಬೆಳವಣಿಗೆಗೆ ಸಹಕಾರಿಯಾಗಿದೆ. ಶಿಶು ಪೋಷಕ್ ಉತ್ಪನ್ನವು ಉತ್ತಮ ಗುಣಮಟ್ಟದ ಆಯ್ದ ಧಾನ್ಯಗಳಿಂದ ಸ್ವಚ್ಛ ಹಾಗು ಆರೋಗ್ಯಕರ ಪ್ರದೇಶಗಳಲ್ಲಿ ತಯಾರಿಸಲಾಗುತ್ತಿದೆ. ಶಿಶು ಪೋಷಕ್ 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡುವ ಅಹಾರವಾಗಿದ್ದು ಇದರಲ್ಲಿ ಯಾವುದೇ ರಾಸಾಯನಿಕ, ಸಂರಕ್ಷಕಗಳನ್ನು ಒಳಗೊಂಡಿಲ್ಲ. ಇದರಲ್ಲಿ ಬಳಸುವ ಏಕದಳ, ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು ಸರಿಯಾದ ಪ್ರಮಾಣದಲ್ಲಿ ಒಳಗೊಂಡಿರುವುದು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಟ್ಟು ಪ್ರಮಾಣೀಕರಿಸಲಾಗಿದ್ದು ಯಾವುದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ಜಿಲ್ಲೆಯ ಮಕ್ಕಳ ರಕ್ಷಣಾ ಘಟಕ, ಉಡುಪಿ ಜಿಲ್ಲೆಯಲ್ಲಿ ಖಾಲಿ ಇರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ನವೆಂಬರ್ 27 ರ ಒಳಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ, ಮಣಿಪಾಲ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ. ಸಂ: 0820-2574964 ನ್ನು ಸಂಪರ್ಕಿಸುವಂತೆ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
